Video: 6ನೇ ತರಗತಿಯಿಂದ AI ಶಿಕ್ಷಣ, ಬೆಂಗಳೂರಿನಲ್ಲಿ ಸರ್ಕಾರಿ AI ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಮಹತ್ವದ ಘೋಷಣೆ – Kannada News | DK Shivakumars Independence Day Address: Focus on Youth Empowerment, AI, and Employment in Karnataka

ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ, ನವಭಾರತದ ನಿರ್ಮಾಣದ ದೂರದೃಷ್ಟಿಯೊಂದಿಗೆ ಕರ್ನಾಟಕದ ಯುವಜನತೆಯ ಶೈಕ್ಷಣಿಕ ಹಾಗೂ ತಾಂತ್ರಿಕ ಭವಿಷ್ಯ ರೂಪಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ತರಲು ಪರಿಣಿತ ಅಧಿಕಾರಿ ಸಮಿತಿಯನ್ನು ರಚಿಸಲಾಗಿದೆ. ಇದು ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿದ್ದು, ರಾಜ್ಯಕ್ಕೆ ಮಾದರಿಯಾಗುವ ಪರೀಕ್ಷಾ ಕ್ರಮ ಜಾರಿಗೊಳಿಸಲಿದೆ. ತಂತ್ರಜ್ಞಾನ ಆಧಾರಿತ ಹೊಸ ಯುಗಕ್ಕೆ ಸಿದ್ಧರಾಗಲು “ಎಐ ಅಕ್ಷರ ಅಭಿಯಾನ” ಮತ್ತು “ಕೋಡಿಂಗ್ ಗುರುಕುಲ” ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆರನೇ ತರಗತಿಯಿಂದಲೇ ಎಐ ಶಿಕ್ಷಣ ಪರಿಚಯಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ ದೇಶದ ಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗ್ಗೆ 4 ತುಳಸಿ ಎಲೆ ತಿಂದರೆ ಏನಾಗುತ್ತೆ? ಆರೋಗ್ಯಕ್ಕೆ ನಿಜಕ್ಕೂ ಇಷ್ಟೊಂದು ಪ್ರಯೋಜನಗಳಿವೆಯೇ? – Kannada News | Tulsi Leaves in the Morning: What Science and Ayurveda Say About Their Benefits

ಭಾರತೀಯರ ಮನೆಗಳಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಧಾರ್ಮಿಕ ಮಹತ್ವದ ಜೊತೆಗೆ ತುಳಸಿಯನ್ನು ಹಲವು ವರ್ಷಗಳಿಂದ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಲ್ಲಿಯೂ ಬಳಸಲಾಗುತ್ತಿದೆ. ತುಳಸಿ ಎಲೆಗಳಲ್ಲಿ ವಿವಿಧ ಸಸ್ಯ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳಿರುವುದರಿಂದ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹಾಗೂ ಒತ್ತಡ ಕಡಿಮೆ ಮಾಡಿಕೊಳ್ಳಲು ಇದು ಸಹಾಯಕವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4 ತುಳಸಿ ಎಲೆ ತಿಂದರೆ ಎಲ್ಲಾ ಕಾಯಿಲೆಗಳು ದೂರವಾಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇದರಿಂದ ಕೆಲವು ಆರೋಗ್ಯ ಪ್ರಯೋಜನಗಳು ಸಿಗುವುದರಿಂದ ಇದನ್ನು ಉಪಯೋಗ ಮಾಡಬಹುದು.

ತುಳಸಿಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

ಸಾಮಾನ್ಯವಾಗಿ ತುಳಸಿ ಎಲೆಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಯೂಜೆನಾಲ್ (Eugenol) ಸೇರಿದಂತೆ ಹಲವು ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಇವುಗಳಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಆದರೆ ತುಳಸಿಯನ್ನು ಯಾವುದೇ ಕಾಯಿಲೆಗೆ ವೈದ್ಯಕೀಯ ಚಿಕಿತ್ಸೆಯ ಪರ್ಯಾಯವಾಗಿ ಬಳಸಬಾರದು.

ಜೀರ್ಣಕ್ರಿಯೆಗೆ ಸಹಾಯವಾಗುತ್ತದೆಯೇ?

ಸಾಂಪ್ರದಾಯಿಕವಾಗಿ ತುಳಸಿಯನ್ನು ಜೀರ್ಣಕ್ರಿಯೆಗೆ ಬಳಸಲಾಗುತ್ತದೆ. ಕೆಲವರಿಗೆ ಇದು ಹೊಟ್ಟೆಯ ಅಸ್ವಸ್ಥತೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಾಯಕವಾಗಬಹುದು. ಆದರೆ ಮಲಬದ್ಧತೆ ಅಥವಾ ಅಜೀರ್ಣವನ್ನು ತುಳಸಿ ಮಾತ್ರದಿಂದಲೇ ಗುಣಪಡಿಸಬಹುದು ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ.

ಕೆಮ್ಮು, ಶೀತ ಮತ್ತು ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆಯೇ?

ತುಳಸಿಯನ್ನು ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಕೆಮ್ಮು ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ. ತುಳಸಿಯ ಕೆಲವು ಸಸ್ಯ ಸಂಯುಕ್ತಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳನ್ನು ಹೊಂದಿರಬಹುದು. ಆದರೆ ಆಸ್ತಮಾ, ತೀವ್ರ ಕೆಮ್ಮು ಅಥವಾ ಸೋಂಕಿಗೆ ತುಳಸಿ ಕಷಾಯವನ್ನು ವೈದ್ಯಕೀಯ ಚಿಕಿತ್ಸೆಯ ಬದಲಿಗೆ ಬಳಸಬಾರದು.

ರೋಗನಿರೋಧಕ ಶಕ್ತಿಗೆ ತುಳಸಿ?

ತುಳಸಿಯಲ್ಲಿರುವ ಸಸ್ಯ ಸಂಯುಕ್ತಗಳು ದೇಹದ ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಬಹುದು ಎಂಬ ಅಧ್ಯಯನಗಳಿವೆ. ಇದರಿಂದ ತುಳಸಿ ಆರೋಗ್ಯಕರ ಆಹಾರದ ಒಂದು ಭಾಗವಾಗಬಹುದು.

ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತದೆಯೇ?

ತುಳಸಿಯನ್ನು ಸಾಂಪ್ರದಾಯಿಕವಾಗಿ ಒತ್ತಡ ನಿರ್ವಹಣೆಗೆ ಬಳಸಲಾಗುತ್ತದೆ. ಕೆಲವು ಸಂಶೋಧನೆಗಳು ತುಳಸಿಯ ಕೆಲವು ರೂಪಗಳು ಒತ್ತಡ ಮತ್ತು ಆತಂಕದ ಲಕ್ಷಣಗಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಬಹುದು ಎಂದು ಸೂಚಿಸಿವೆ. ಆದರೂ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದಕ್ಕಿಂತ ಆಹಾರದ ಭಾಗವಾಗಿ ಮಿತವಾಗಿ ಬಳಸುವುದು ಸೂಕ್ತ.

ದಿನಕ್ಕೆ 4 ಎಲೆ ತಿನ್ನಬಹುದೇ?

ಆರೋಗ್ಯವಂತ ವ್ಯಕ್ತಿಯೊಬ್ಬರು ಆಹಾರದ ಭಾಗವಾಗಿ ಸ್ವಲ್ಪ ಪ್ರಮಾಣದಲ್ಲಿ ತಾಜಾ ತುಳಸಿ ಎಲೆಗಳನ್ನು ಸೇವಿಸುವುದು ಸಾಮಾನ್ಯವಾಗಿ ಸಮಸ್ಯೆಯಾಗುವುದಿಲ್ಲ. ಆದರೆ ಎಲ್ಲರೂ ಪ್ರತಿದಿನ ನಿರ್ದಿಷ್ಟವಾಗಿ 4 ಎಲೆ ತಿನ್ನಲೇಬೇಕು ಎಂಬ ವೈದ್ಯಕೀಯ ನಿಯಮವಿಲ್ಲ. ವಿಶೇಷವಾಗಿ ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವವರು, ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಅಥವಾ ನಿಯಮಿತವಾಗಿ ಔಷಧಿ ಸೇವಿಸುವವರು ತುಳಸಿಯನ್ನು ಔಷಧೀಯ ಪ್ರಮಾಣದಲ್ಲಿ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ತುಳಸಿ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ “4 ಎಲೆ ತಿಂದರೆ ಯಾವುದೇ ರೋಗ ಬರುವುದಿಲ್ಲ” ಎಂಬ ರೀತಿಯ ಹೇಳಿಕೆಗಳನ್ನು ನಂಬಬೇಡಿ. ನಿರಂತರ ಜ್ವರ, ಉಸಿರಾಟದ ತೊಂದರೆ, ತೀವ್ರ ಕೆಮ್ಮು, ಹೊಟ್ಟೆಯ ಸಮಸ್ಯೆ ಅಥವಾ ಬೇರೆ ಆರೋಗ್ಯ ಸಮಸ್ಯೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಬೆದರಿಕೆ ಹಾಕೋದು ನನ್ನತ್ರ ನಡೆಯಲ್ಲ”: ಸುಪ್ರೀಂ ಆದೇಶದಂತೆ ಬಿಲ್ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ – Kannada News | New Public Space Permission Bill: Kharge Clarifies, No Ban on RSS/BJP – Based on SC

ಬೆಂಗಳೂರು, ಆ.15: ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಳಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯಗೊಳಿಸುವ ಮಸೂದೆ (Bill) ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಟಿವಿ9ಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆರ್‌ಎಸ್‌ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ಸರ್ಕಾರಿ ಜಾಗದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅಥವಾ ರಸ್ತೆಗಳನ್ನು ಬಳಸಬೇಕಾದರೂ ಅನುಮತಿ ಪಡೆಯುವುದು ಕಡ್ಡಾಯ. ನಾವು ಸಹ ರಸ್ತೆ ಬಳಸುವಾಗ ಅನುಮತಿ ಪಡೆಯುತ್ತೇವೆ. ಸಾರ್ವಜನಿಕ ಸ್ಥಳಗಳ ದುರುಪಯೋಗ ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ಈ ಮಸೂದೆಯನ್ನು ತರಲಾಗುತ್ತಿದೆ.” ಎಂದು ಗೃಹಸಚಿವ ಹೇಳಿದ್ದಾರೆ.

“ಬಿಲ್‌ನಲ್ಲಿ ಎಲ್ಲಿಯೂ ನಿಷೇಧ (Ban) ಎಂಬ ಪದ ಬಳಸಿಲ್ಲ. ಯಾವುದೇ ಸಂಘ-ಸಂಸ್ಥೆಗಳ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಬೇಕಾದರೂ ಅನುಮತಿ ಬೇಕು. ಹೀಗಿರುವಾಗ ಆರ್‌ಎಸ್‌ಎಸ್ ಅಥವಾ ಬಿಜೆಪಿಯನ್ನು ನಿಷೇಧಿಸಿದ್ದೇವೆ ಎಂದು ಯಾರು ಹೇಳಿದರು? ಬಿಲ್ ಅನ್ನು ಯಾರಾದರೂ ಸರಿಯಾಗಿ ಓದಿದ್ದಾರಾ? ಯಾರಾದರೂ ಧ್ವಜ ಹಿಡಿಯುವುದರಿಂದ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಯಾವುದೇ ವಸ್ತುವಿನಿಂದ ಸಮಾಜದಲ್ಲಿ ಪ್ರಚೋದನೆ ಸೃಷ್ಟಿಸಿದರೆ ಅಥವಾ ಪ್ರಚೋದನಕಾರಿ ಎಂದು ದೂರು ಬಂದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಂದನೆ ಅಥವಾ ಪ್ರಚೋದನೆ ಇಲ್ಲದಿದ್ದ ಮೇಲೆ ಅವರಿಗೆ ಏಕೆ ಭಯ?” ಎಂದು ಹೇಳಿದರು.

ಇದನ್ನೂ ಓದಿ: ಆರ್​ಎಸ್​​ಎಸ್ ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು

“ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ನಾಶವಾಗುತ್ತೀರಿ’ ಎಂದಿರುವ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ನನ್ನನ್ನು ನಾಶ ಮಾಡಬೇಕು ಎಂದಿದ್ದರೆ ಮಾಡಿ. ಆರ್‌ಎಸ್‌ಎಸ್‌ನ ರಹಸ್ಯವೇನು? ಕಾನೂನಾತ್ಮಕವಾಗಿ ಮಾತನಾಡಿದರೆ ನಾಶ ಮಾಡುತ್ತೀರಾ? ಆರ್‌ಎಸ್‌ಎಸ್ ಕಾನೂನಿಗಿಂತ ಮೀರಿದೆಯಾ? ಬೆದರಿಕೆ ಹಾಕಿ ಹೆದರಿಸುವುದು ನನ್ನ ಹತ್ತಿರ ನಡೆಯುವುದಿಲ್ಲ. ಕೊಲೆ ಮಾಡುತ್ತೀರಾ ಅಷ್ಟೇ ತಾನೇ?” ಎಂದು ಖಾರವಾಗಿ ಪ್ರಶ್ನಿಸಿದರು. ವಿಧೇಯಕದಲ್ಲಿ ಏನಾದರೂ ಲೋಪಗಳಿದ್ದರೆ ಸದನದಲ್ಲಿ ಬಂದು ಚರ್ಚಿಸಿ. ಸರಿಯಿಲ್ಲ ಎಂದರೆ ತಿದ್ದುಪಡಿ ಮಾಡಿಕೊಳ್ಳುತ್ತೇವೆ. ರಾಜ್ಯಪಾಲರು ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ.” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Independence day 2026: ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು? – Kannada News | Independence Day 2026: CM Dk Shivakumar Highlights Development Initiatives

ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿ ಯೋಜನೆಗಳು ಮತ್ತು ಸರ್ಕಾರದ ಪ್ರಗತಿಯ ಕುರಿತು ಪ್ರಮುಖ ಭಾಷಣ ಮಾಡಿದ್ದಾರೆ. ಕೃಷಿ, ಸಾಮಾಜಿಕ ಕಲ್ಯಾಣ, ಆರೋಗ್ಯ, ಜಲ ಭದ್ರತೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ರಾಜ್ಯ ಸರ್ಕಾರವು ಕೈಗೊಂಡಿರುವ ಹತ್ತು ಹಲವು ಉಪಕ್ರಮಗಳನ್ನು ಅವರು ವಿವರಿಸಿದ್ದಾರೆ.

ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ, 44,631 ಕೋಟಿ ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. 119 ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಬುಡಕಟ್ಟು ಜನಾಂಗದ ಮಕ್ಕಳಿಗೆ ಶಿಕ್ಷಣದ ಅವಕಾಶ ಒದಗಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಹೆಜ್ಜೆ ಇಡಲಾಗಿದ್ದು, ಮಾತೃ ಮರಣ ಪ್ರಮಾಣ ಶೇಕಡಾ 69ರಷ್ಟು ಇಳಿಕೆಯಾಗಿದೆ. ಜಲ ಭದ್ರತೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, 16,000 ಕೋಟಿ ರೂಪಾಯಿ ಮೊತ್ತದ 112 ಪ್ರಮುಖ ಜಲಾಶಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ 1663 ಕಿಲೋಮೀಟರ್ ರಾಜ್ಯ ಹೆದ್ದಾರಿಗಳು ಮತ್ತು 3000 ಕಿಲೋಮೀಟರ್ ಜಿಲ್ಲಾ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಸಾಗಿಸಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟನೆಯಲ್ಲಿ ಸಕ್ಸಸ್ ಕಂಡರೂ ಬೇಸರದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್: ಯಾಕೆ ಗೊತ್ತಾ? – Kannada News | Lokesh Kanagaraj Thrilled with DC Success But Upset Over Tamil Nadu Response

ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮ ನಟನೆಯ ಚೊಚ್ಚಲ ಸಿನಿಮಾ ‘ಡಿ ಸಿ’ (DC) ಯಶಸ್ಸಿನ ಅಲೆಯಲ್ಲಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಅನಿರೀಕ್ಷಿತ ಗೆಲುವು ಸಾಧಿಸುತ್ತಿದ್ದು, ಲೋಕೇಶ್ ಅವರ ನಟನೆಯನ್ನು ಪ್ರೇಕ್ಷಕರು ಹಾಗೂ ಚಿತ್ರರಂಗದ ಪ್ರಮುಖರು ಕೊಂಡಾಡುತ್ತಿದ್ದಾರೆ. ಈ ಮೊದಲು ನಿರ್ದೇಶಕರಾಗಿ ಮೆಚ್ಚುಗೆ ಪಡೆದಿದ್ದ ಅವರು, ಈಗ ನಟನೆಯಲ್ಲೂ ಭೇಷ್ ಎಂದಿದ್ದಾರೆ. ಆದರೂ ಸಿನಿಮಾ ಬಗ್ಗೆ ಅವರಿಗೆ ಬೇಸರ ಇದೆ.

‘ಡಿಸಿ’ ಸಿನಿಮಾಗೆ ತೆಲುಗು ರಾಜ್ಯಗಳಲ್ಲಿ ಈ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಲುಗು ಅವತರಣಿಕೆಯ ಕಲೆಕ್ಷನ್ ಶೀಘ್ರದಲ್ಲೇ ತಮಿಳುನಾಡಿನ ಗಳಿಕೆಯನ್ನೇ ಹಿಂದಿಕ್ಕುವ ಸಾಧ್ಯತೆಯಿದೆ ಎಂದು ಟ್ರೇಡ್ ಪಂಡಿತರು ವಿಶ್ಲೇಷಿಸಿದ್ದಾರೆ.

ಸಿನಿಮಾಗೆ ಸಿಗುತ್ತಿರುವ ಈ ದೊಡ್ಡ ಯಶಸ್ಸು ಲೋಕೇಶ್ ಅವರಿಗೆ ತೀವ್ರ ಸಂತಸ ತಂದಿದೆಯಾದರೂ, ಮತ್ತೊಂದೆಡೆ ಅವರಿಗೆ ಸಣ್ಣದೊಂದು ಬೇಸರವೂ ಇದೆ ಎನ್ನಲಾಗಿದೆ. ತಮ್ಮ ತೃಪ್ತಿಕರ ನಟನೆಯ ಹೊರತಾಗಿಯೂ ತಮಿಳುನಾಡಿನಲ್ಲಿ ಸಿನಿಮಾಗೆ ಇನ್ನಷ್ಟು ಭರ್ಜರಿ ಹಾಗೂ ಬೃಹತ್ ಮಟ್ಟದ ಪ್ರತಿಕ್ರಿಯೆ ಸಿಗಬಹುದು ಎಂದು ಅವರು ನಿರೀಕ್ಷಿಸಿದ್ದರು. ಆದರೆ ಅಲ್ಲಿ ಅಂದುಕೊಂಡ ಮಟ್ಟದ ರೆಸ್ಪಾನ್ಸ್ ಸಿಗದೇ ಇರುವುದು ಅವರಿಗೆ ಕೊಂಚ ನಿರಾಸೆ ತಂದಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಹೀರೋ ಆಗಿ ಗೆದ್ದ ನಿರ್ದೇಶಕ ಲೋಕೇಶ್ ಕನಗರಾಜ್; ಮೊದಲ ದಿನ ಭರ್ಜರಿ ಗಳಿಕೆ

ಇನ್ನು ಈ ಚಿತ್ರದಲ್ಲಿ ನಟಿ ವಾಮಿಕಾ ಗಬ್ಬಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರೆ, ಅನಿರುದ್ಧ್ ರವಿಚಂದರ್ ಅವರ ಎನರ್ಜಿಟಿಕ್ ಸಂಗೀತ ಸಿನಿಮಾದ ಹೈಲೈಟ್‌ಗಳಲ್ಲಿ ಒಂದಾಗಿ ಮೂಡಿಬಂದಿದೆ. ಲೋಕೇಶ್ ಅವರು ಸದ್ಯ ನಿರ್ದೇಶನದಲ್ಲಿ ಬ್ಯುಸಿ ಆಗಲಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಅವರು ಸೀಕ್ವೆಲ್ ಮಾಡಬೇಕಿದೆ. ಆ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಈ ಬಗ್ಗೆ ಶೀಘ್ರವೇ ಅಪ್​ಡೇಟ್ ಸಿಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಭಾಗಿ – Kannada News | Minister Zameer Ahmed Khan Attends 80th Independence Day Flag Hoisting at Bengalurus Idgah Maidan

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಭಾಗವಹಿಸಿದ್ದು, ಜೊತೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಅವರೂ ಉಪಸ್ಥಿತರಿದ್ದರು. ಎ.ಸಿ. ವಿಶ್ವನಾಥ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಶುಭ ಸಂದರ್ಭದಲ್ಲಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಸ್ವಾಗತಿಸಲಾಯಿತು. 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಲಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್ – Kannada News | Tukali Santhosh Mimics Dynamic Star Devaraj Iconic Varma Role in Kwatle Kitchen 2 Grand Finale

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಈ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ಕಾಮಿಡಿ ಕಿಂಗ್ ತುಕಾಲಿ ಸಂತೋಷ್ ತಮ್ಮ ಅದ್ಭುತ ಮಿಮಿಕ್ರಿ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಇಡೀ ವೇದಿಕೆಯನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ದಿಗ್ಗಜ ನಟ ‘ಡೈನಾಮಿಕ್ ಸ್ಟಾರ್’ ದೇವರಾಜ್ ಅವರ ಐಕಾನಿಕ್ ‘ವರ್ಮ ರಾಜ ರಾಜ ವರ್ಮ’ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್, ವೇದಿಕೆಯಲ್ಲಿದ್ದ ಸ್ಪರ್ಧಿಗಳು ಮತ್ತು ಜಡ್ಜಸ್‌ಗೆ ಸಖತ್ ಕಾಮಿಡಿ ಕೌಂಟರ್‌ಗಳನ್ನು ನೀಡಿದರು. ಕೈಯಲ್ಲಿ ಗುಲಾಬಿ ಹೂವು ಹಿಡಿದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಂಭಾಷಣೆ ಹೇಳುತ್ತಾ, ಕಾರ್ಯಕ್ರಮದಲ್ಲಿದ್ದ ಸೂರಜ್, ರಕ್ಷಿತಾ ಹಾಗೂ ವರ್ಮ ಅವರಿಗೆ ತಮಾಷೆಯಾಗಿ ರೇಗಿಸಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದ್ದಾರೆ. ಈ ತಮಾಷೆಯ ಸನ್ನಿವೇಶಕ್ಕೆ ಜಡ್ಜ್ ಸ್ಥಾನದಲ್ಲಿದ್ದ ಸೆಟ್‌ನಲ್ಲಿದ್ದ ಎಲ್ಲರೂ ಫುಲ್ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಧಾನಸೌಧದ ಮುಂದೆ ಫ್ರೀಡಂ ಹಬ್ಬ: ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಸಂಚಾರಿಸಬೇಡಿ – Kannada News | Bengaluru Prepares for 80th Independence Day Freedom Habba at Vidhana Soudha with Road Restrictions.

ಬೆಂಗಳೂರು, ಆ.15: 2026ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂದೆ ಫ್ರೀಡಂ ಹಬ್ಬವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಈ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. 80ನೇ ಸ್ವಾತಂತ್ರ್ಯೋತ್ಸವದ ಈ ವಿಶೇಷ ಆಚರಣೆಗಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ, ವಾಹನ ಸವಾರರಿಗೆ ತೊಂದರೆಯಾಗದಂತೆ ವಿಧಾನಸೌಧದ ಸುತ್ತಮುತ್ತಲ ಸಂಚಾರ ಮಾರ್ಗಗಳನ್ನು ಮಾರ್ಪಾಡು ಮಾಡಲಾಗಿದೆ. ವಿಧಾನಸೌಧದ ಮುಂಭಾಗದ ಎರಡು ಬದಿ ರಸ್ತೆಗಳಲ್ಲಿ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಅಂಬೇಡ್ಕರ್ ರಸ್ತೆ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಗಳ ಆಗಮನವಿರುವ ಕಾರಣ, ಅಂಬೇಡ್ಕರ್ ರಸ್ತೆಯಲ್ಲಿ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರು ಕಾರ್ಯಕ್ರಮದ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದ್ದಾರೆ. ವಿಧಾನಸೌಧದ ಮುಂದೆ 180ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಅಳವಡಿಸಲಾಗಿದ್ದು, ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ಆಹಾರ ಶೈಲಿಗಳನ್ನು ಪ್ರದರ್ಶಿಸುವ ಉದ್ದೇಶವಿದೆ. ಈ ಹಬ್ಬಕ್ಕೆ QR ಕೋಡ್ ಮೂಲಕ ಮಾತ್ರ ಪ್ರವೇಶವಿರುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Independence Day 2026: ವಿಧಾನಸೌಧದ ಮುಂಭಾಗ ಇಂದು ಸಂಜೆ ಸಂಗೀತ ರಸಸಂಜೆ, ಫ್ರೀಡಂ ಪರೇಡ್! – Kannada News | Vidhana Soudha Freedom Habba: Freedom Parade and Musical Night in Bengaluru

ಬೆಂಗಳೂರು, ಆಗಸ್ಟ್ 15: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ಇಂದು ಅದ್ಧೂರಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ನಡೆಯಲಿರುವ ಈ ಉತ್ಸವವು ಒಟ್ಟು 3 ಪ್ರಮುಖ ಭಾಗಗಳಲ್ಲಿ ಜರುಗಲಿದೆ.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಿಂದ ಚಾಲನೆ

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಸ್ವಾತಂತ್ರ್ಯ ಉತ್ಸವಕ್ಕೆ ರಂಗು ತುಂಬಲಿದ್ದಾರೆ.

ಅಂಬೇಡ್ಕರ್ ರಸ್ತೆಯಲ್ಲಿ ಕಣ್ಣು ಕೋರೈಸುವ ಫ್ರೀಡಂ ಪರೇಡ್

ಮಧ್ಯಾಹ್ನ 3 ರಿಂದ 5.30 ರವರೆಗೆ ವಿಧಾನಸೌಧ ಮತ್ತು ಹೈಕೋರ್ಟ್ ಮಧ್ಯದ ಅಂಬೇಡ್ಕರ್ ರಸ್ತೆಯಲ್ಲಿ ‘ಫ್ರೀಡಂ ಪರೇಡ್’ ನಡೆಯಲಿದೆ. ವಿಧಾನಸೌಧದ ಮುಂಭಾಗದ ಐಪಿಒ ಸರ್ಕಲ್ (ಗೋಪಾಲಗೌಡ ಸರ್ಕಲ್) ನಿಂದ ಆರಂಭವಾಗುವ ಈ ಪರೇಡ್ ತಿಮ್ಮಯ್ಯ ವೃತ್ತದವರೆಗೆ ಸಾಗಲಿದೆ. ಈ ಪರೇಡ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 15 ತಂಡಗಳು ಹಾಗೂ ವಿವಿಧ ರಾಜ್ಯಗಳ 10 ಪ್ರಮುಖ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಲಿವೆ.

ಎಂ.ಡಿ.ಪಲ್ಲವಿ, ರಘು ದೀಕ್ಷಿತ್ ತಂಡದಿಂದ ಸಂಗೀತ ರಸಸಂಜೆ

ಸಂಜೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮುಂದಿನ ಬೃಹತ್ ವೇದಿಕೆಯಲ್ಲಿ ಅದ್ಧೂರಿ ‘ಸಂಗೀತ ರಸಸಂಜೆ’ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ಗಾಯಕರಾದ ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರು ಗಾಯನದ ಮೂಲಕ ಜನರನ್ನು ರಂಜಿಸಲಿದ್ದಾರೆ.

ನೋಂದಾಯಿತರಿಗೆ ಮಾತ್ರ ಪ್ರವೇಶ – 3 ಸಾವಿರ ಪೊಲೀಸರ ಭದ್ರತೆ

ಈ ಬಾರಿಯ ‘ಫ್ರೀಡಂ ಹಬ್ಬ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ (Register) ಮಾಡಿಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಜನರು ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಭದ್ರತೆಗಾಗಿ ಡಿಸಿಪಿ, ಎಸಿಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ ಸುಮಾರು 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಧನ ಹಾಗೂ ಮೂಲಸೌಕರ್ಯ ವಲಯದಲ್ಲಿ ದಾಖಲೆ ಪ್ರಗತಿ: ಕೆಂಪುಕೋಟೆಯಲ್ಲಿ ದೇಶದ ಸಾಧನೆ ಹಂಚಿಕೊಂಡ ಪ್ರಧಾನಿ ಮೋದಿ – Kannada News | From Red Fort: PM Modi Highlights Indias Decade of Development and Resilience

ದೆಹಲಿ, ಆ.15: ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಭಾರತವು ಇಂಧನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಕಳೆದ ಒಂದು ದಶಕದಲ್ಲಿ ಸಾಧಿಸಿದ ಮಹತ್ವದ ಪ್ರಗತಿಯನ್ನು ಎತ್ತಿ ತೋರಿಸಿದರು. 2014ಕ್ಕಿಂತ ಮೊದಲು ಕೇವಲ 70 ನಗರಗಳಲ್ಲಿದ್ದ ಪೈಪ್ ಗ್ಯಾಸ್ ವ್ಯವಸ್ಥೆಯನ್ನು 700 ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಅಲ್ಲದೆ, ಪೈಪ್ ಗ್ಯಾಸ್ ತಲುಪುವ ಮನೆಗಳ ಸಂಖ್ಯೆ 20-22 ಲಕ್ಷದಿಂದ 1.75 ಕೋಟಿಗೆ ಏರಿದೆ ಎಂದರು. ಸೌರಶಕ್ತಿ ಸಾಮರ್ಥ್ಯವು 2 ಗಿಗಾವ್ಯಾಟ್‌ನಿಂದ 160 ಗಿಗಾವ್ಯಾಟ್‌ಗೆ ಏರಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚು ಮನೆಗಳು ಸೌರಶಕ್ತಿ ಅಳವಡಿಸಿದ್ದು, ಇದರಿಂದ ಸಾವಿರಾರು ಮನೆಗಳ ವಿದ್ಯುತ್ ಬಿಲ್ ಶೂನ್ಯವಾಗಿದೆ. ರೈಲ್ವೆ ವಿದ್ಯುದೀಕರಣದ ಕುರಿತು ಮಾತನಾಡಿದ ಅವರು, 90 ವರ್ಷಗಳಲ್ಲಿ ಕೇವಲ 30% ರಷ್ಟು ರೈಲ್ವೆ ವಿದ್ಯುದೀಕರಣಗೊಂಡಿದ್ದರೆ, ಕಳೆದ 10 ವರ್ಷಗಳಲ್ಲಿ 70% ರಷ್ಟು ಪೂರ್ಣಗೊಳಿಸಿ ಸಂಪೂರ್ಣ ವಿದ್ಯುದೀಕರಣ ಸಾಧಿಸಲಾಗಿದೆ ಎಂದರು. ಅಲ್ಲದೆ, ಭಾರತವು ತನ್ನ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಪ್ರಾರಂಭಿಸುವ ಮೂಲಕ ಇಂಧನದ ಹೊಸ ಕ್ಷೇತ್ರವನ್ನು ಪ್ರವೇಶಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಕೋವಿಡ್, ಯುದ್ಧದಂತಹ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಪ್ರಗತಿಯ ಹಾದಿ ಅಬಾಧಿತವಾಗಿದೆ ಎಂದು ಅವರು ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version