ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ – Kannada News | Second Post Mortem in Rishal D’Souza Suicide Case Over Assault Allegations
ಉತ್ತರ ಕನ್ನಡ, ಜನವರಿ 20: JDS ನಾಯಕಿಯ ಪುತ್ರನ ಕಿರುಕುಳದಿಂದ ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮಗಳಿಗೆ ಕಿರುಕುಳ ಮಾತ್ರ ನೀಡಿಲ್ಲ, ಆಕೆಯ ಮೇಲೆ ಅತ್ಯಾಚಾರ ಕೂಡ ನಡೆಸಲಾಗಿದೆ. ವಿಷಯವನ್ನು ಮನೆಯಲ್ಲಿ ಹೇಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಜೊತೆಗೆ ಮತ್ತೊಮ್ಮೆ ಪೋಸ್ಟ್ಮಾರ್ಟಮ್ ಮಾಡಲು ಆಗ್ರಹಿಸಿದ್ದರು. ಹೀಗಾಗಿ ಯುವತಿ ಶವ ಹೊರತೆಗೆದು ಮಗದೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾರವಾರ ತಾಲೂಕಿನ ಕದ್ರಾ ಗ್ರಾಮದ ಸೇಂಟ್…