ಬಿಹಾರದಲ್ಲಿ ವೃತ್ತಿಪರ ಸ್ನೇಕ್ ಕ್ಯಾಚರ್ ಒಬ್ಬರು ಹಾವನ್ನು ರಕ್ಷಿಸಿದ ನಂತರ ಅದರೊಂದಿಗೆ ಕ್ಯಾಮೆರಾ ಮುಂದೆ ಸಾಹಸ ಪ್ರದರ್ಶಿಸಲು ಹೋಗಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವಸತಿ ಪ್ರದೇಶದಲ್ಲಿ ಸಿಕ್ಕ ವಿಷಪೂರಿತ ಹಾವನ್ನು ಹಿಡಿದ ವ್ಯಕ್ತಿ, ಅದನ್ನು ಸುರಕ್ಷಿತವಾಗಿ ಡಬ್ಬಿಗೆ ಹಾಕುವ ಬದಲು ಅದರೊಂದಿಗೆ ಆಟವಾಡಲು ಶುರು ಮಾಡಿದ್ದರಿಂದ ಹಾವು ಏಕಾಏಕಿ ಕಚ್ಚಿದೆ; ವಿಷದ ತೀವ್ರತೆಯಿಂದಾಗಿ ಕೇವಲ ಮೂರೇ ನಿಮಿಷಗಳಲ್ಲಿ ಆತ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಎಷ್ಟೇ ಅನುಭವವಿದ್ದರೂ ವನ್ಯಜೀವಿಗಳ ವಿಷಯದಲ್ಲಿ ಅಸಡ್ಡೆ ಅಥವಾ ಅತಿಯಾದ ಆತ್ಮವಿಶ್ವಾಸ ತೋರುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.