ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ: 5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ – Kannada News | Kaiga Nuclear Project Expansion: Indigenous Tech Boosts Karnataka’s Energy Security

ಬೆಂಗಳೂರು, ಮಾರ್ಚ್​​ 2: ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದ ಮೇಕ್​​ ಇನ್​ ಇಂಡಿಯಾ ಯೋಜನೆ ಈಗ ಅಣುಶಕ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಈ ಘಟಕಗಳಲ್ಲಿ ಸ್ಥಾಪನೆಯಾಗುವ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿವೆ ಎನ್ನುವುದು ವಿಶೇಷ. ಈ ಬಗ್ಗೆ ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ , 700…

Read More

ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು – Kannada News | Tourist Vehicle Falls Into Gorge in Raigad, Multiple Fatalities Reported

ರಾಯಗಢ, ಮೇ 25: ಮಹಾರಾಷ್ಟ್ರದ ರಾಯಗಢದ ಮಹಾಬಲೇಶ್ವರ-ಪೋಲಾದ್​ಪುರ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಕಾರು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 8 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿದ ನಂತರ ಮಾರ್ಗದಲ್ಲಿ ಅಂಬೆನಾಲಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಈ ಕಂದಕವು ಸುಮಾರು 1,000 ಅಡಿ ಆಳದಲ್ಲಿದೆ ಎಂದು ಅಂದಾಜಿಸಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಪೋಲಾದ್‌ಪುರ ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ…

Read More

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಖಂಡನೆ – Kannada News | Brazilian President Lula Condemns Terror Attacks In Kashmir Watch Video

ನವದೆಹಲಿ, ಫೆಬ್ರವರಿ 21: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ನವದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಬ್ರೆಜಿಲ್ ಅಧ್ಯಕ್ಷ ಲುಲಾ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳನ್ನು ಬಲವಾಗಿ ಖಂಡಿಸಿದ್ದಾರೆ. “ಭಯೋತ್ಪಾದನೆ ಯಾವುದೇ ರಾಷ್ಟ್ರೀಯತೆ ಅಥವಾ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಅವರು ಹೇಳಿದ್ದಾರೆ. ಭಾರತ-ಬ್ರೆಜಿಲ್ ಒಗ್ಗಟ್ಟನ್ನು ಬಲಪಡಿಸಿದ ಅವರು, ಭಯೋತ್ಪಾದನೆಯ ವಿರುದ್ಧದ ಜಾಗತಿಕ ಪ್ರಯತ್ನಗಳು ನಿರ್ದಿಷ್ಟ ಸಮುದಾಯಗಳು ಅಥವಾ ರಾಷ್ಟ್ರಗಳೊಂದಿಗೆ ಹಿಂಸಾಚಾರವನ್ನು…

Read More

Video: ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ – Kannada News | Narendra Modi Offers Prayers at Kashi Vishwanath Temple

ವಾರಣಾಸಿ,ಏಪ್ರಿಲ್ 29: ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಶಿಯ ಜನತೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ವಿಶ್ವನಾಥನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಬುಧವಾರ ಪವಿತ್ರ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿಯವರನ್ನು ಶಂಖನಾದ ಮತ್ತು ಸಾಂಪ್ರದಾಯಿಕ ಡ್ರಮ್‌ಗಳ ಮೊಳಗಿನೊಂದಿಗೆ ಬರಮಾಡಿಕೊಳ್ಳಲಾಯಿತು. ಲಾಹುರಾಬಿರ್ ಕ್ರಾಸಿಂಗ್ ಸೇರಿದಂತೆ ನಗರದಾದ್ಯಂತ ಕಿಕ್ಕಿರಿದು ಸೇರಿದ್ದ ಭಕ್ತರು ‘ಹರ ಹರ ಮಹಾದೇವ್’ ಘೋಷಣೆಗಳೊಂದಿಗೆ ಪುಷ್ಪವೃಷ್ಟಿ ಮಾಡಿದರು. ಈ ಭೇಟಿಯ ವೇಳೆ ಪ್ರಧಾನಿಯವರು ಕಾಶಿಯ…

Read More

ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಸಾಕಷ್ಟು ವರ್ಷಗಳ ಹಿಂದೆ ಮುಳುಗಿದ್ದ ದೇಗುಲದ ಅವಶೇಷ ಗೋಚರ – Kannada News

ಮೈಸೂರು, ಜೂನ್ 12: ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಈಗ ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಳ್ಳುತ್ತಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ…

Read More

ಇಂಧನ ಉಳಿಸಲು ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ಮುಂಬೈ, ಮೇ 14: ಪ್ರಧಾನಿ ನರೇಂದ್ರ ಮೋದಿ (PM Modi) ಇಂಧನ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡಿದ ನಂತರ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಕಾರು ಹಾಗೂ ಬೆಂಗಾವಲು ವಾಹನವನ್ನು ಬಿಟ್ಟು ಬೈಕ್​ನಲ್ಲೇ ಇಂದು ವಿಧಾನ ಭವನಕ್ಕೆ ಆಗಮಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಸಮಾರಂಭಕ್ಕೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್​ನಲ್ಲಿ ಸಿಎಂ ಫಡ್ನವೀಸ್​ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

Read More

ಕರ್ನಾಟಕ ಲೋಕಾಯುಕ್ತದ 40 ವರ್ಷಗಳ ಸಾರ್ಥಕ ಪಯಣ: ಸಾಧನೆಯ ಹಾದಿ ಮೆಲುಕು ಹಾಕಿದ ನ್ಯಾಯಮೂರ್ತಿಗಳು – Kannada News | Karnataka Lokayukta: 40 Years of Anti Corruption Service and Good Governance

ಕರ್ನಾಟಕ ಲೋಕಾಯುಕ್ತ Image Credit source: lokayukta.karnataka.gov.in ಬೆಂಗಳೂರು, ಏಪ್ರಿಲ್​ 18: ಕರ್ನಾಟಕ ಲೋಕಾಯುಕ್ತ (Karnataka Lokayukta) ಸಂಸ್ಥೆಯು ತನ್ನ ಅರ್ಥಪೂರ್ಣ ಹಾಗೂ ಅವಿರತ ಸೇವೆಯ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾಲ್ಕು ದಶಕಗಳ ಕಾರ್ಯಸೇವೆ ಮೆಲುಕು ಹಾಕುವ ಮೂಲಕ ವಿವಿಧ ಗೋಷ್ಠಿ ಹಾಗೂ ವಿಚಾರ ಸಂಕೀರ್ಣಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಿಷ್ಟು  ಕರ್ನಾಟಕ ಲೋಕಾಯುಕ್ತದ 4 ದಶಕಗಳ…

Read More

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು – Kannada News

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆImage Credit source: Tv9 Kannada ತುಮಕೂರು, ಜೂನ್​​ 11: ಹೇಮಾವತಿ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್​​ಗೆ ಹರಿಸುವ ನಿರ್ಧಾರ ತುಮಕೂರು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಭಾರಿ ಹೈಡ್ರಾಮಾ ಬಳಿಕ ಯೋಜನೆಗೆ ಬ್ರೇಕ್ ಬಿದಿತ್ತು. ಆದರೆ ಹತ್ತು ತಿಂಗಳ ಬಳಿಕ ಈ ಯೋಜನೆಗೆ ಸರ್ಕಾರ ಮರು ಜೀವ ನೀಡಲು ಮುಂದಾಗಿರೋದು ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧಕ್ಕೆ ನಾಂದಿ ಹಾಡಿದೆ. ಹೀಗಾಗಿ ಮತ್ತೆ ವಿರೋಧ ಕಿಡಿ ಹೊತ್ತಿಕೊಳ್ಳುವ…

Read More

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ – Kannada News | Hampi Festival 2026: Ancient Glory with Modern Drone Tech

ವಿಜಯನಗರ, ಫೆ.12: ವಿಶ್ವವಿಖ್ಯಾತ ಹಂಪಿ ಉತ್ಸವ 2026 (Hampi Utsav 2026) ಕ್ಕೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 13 ರಿಂದ 15 ರವರೆಗೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಲಿದೆ. ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇನ್ನು ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು ಇರಲಿದೆ. ಮೈಸೂರು ದಸರಾದಲ್ಲಿ ಜನಮನ ಗೆದ್ದಿದ್ದ ಮಾದರಿಯಲ್ಲೇ, ಈ ಬಾರಿ ಆಕಾಶದಲ್ಲಿ 1,000 ಡ್ರೋನ್‌ಗಳು ಚಿತ್ತಾರ ಬಿಡಿಸಲಿವೆ. ಗಾಯತ್ರಿ ಪೀಠದ ವೇದಿಕೆಯ…

Read More

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್ – Kannada News | Shivarajkumar condemns fans bad comments on Vijayalakshmi Darshan

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ದೂರು ನೀಡಿದ್ದಾರೆ. ಈ ಮೊದಲು ನಟಿ ರಮ್ಯಾಗೆ ಇದೇ ರೀತಿ ಕೆಟ್ಟ ಕಮೆಂಟ್ ಬಂದಿತ್ತು. ಈ ಎಲ್ಲ ಘಟನೆಗಳ ಬಗ್ಗೆ ನಟ ಶಿವರಾಜ್​ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫ್ಯಾನ್ಸ್ ವಾರ್ ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಎಲ್ಲ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ಒಬ್ಬರಿಂದ ಇನ್ನೊಬ್ಬರಿಗೆ ಆ ಕಿಡಿ…

Read More