ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್! – Kannada News | Bengaluru Nurse Privacy Breach: Man Arrested for Secretly Filming Nurses

ನರ್ಸ್‌ಗಳ ಖಾಸಗಿ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್!

ಬೆಂಗಳೂರು, ಡಿಸೆಂಬರ್ 26: ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಪ್ರಕರಣವೊಂದು ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ (Bengaluru) ಆಸ್ಪತ್ರೆಯೊಂದರಲ್ಲಿ ಸೈಕೋ ಸಿಬ್ಬಂದಿಯೊಬ್ಬ ಮಹಿಳಾ ನರ್ಸ್​ಗಳ ಖಾಸಗಿ ವೀಡಿಯೋ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ಈ ಕೃತ್ಯವು ವೈದ್ಯರ ಗಮನಕ್ಕೆ ಬಂದ ನಂತರ ಪೊಲೀಸರಲ್ಲಿ ದೂರು ನೀಡಲಾಗಿದ್ದು, ಕಾಮುಕನನ್ನು ಬಂಧಿಸಲಾಗಿದೆ.

ನರ್ಸ್​ಗಳು ಬಟ್ಟೆ ಬದಲಿಸುವ ವೀಡಿಯೋ ಮಾಡುತ್ತಿದ್ದ!

ನಗರದ ನಾಗರಬಾವಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ತನ್ನ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ ತೆಗೆದು ಸಿಕ್ಕಿಹಾಕಿಕೊಂಡಿದ್ದಾನೆ. ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಈತ ಲೇಡಿ ನರ್ಸ್‌ಗಳು ಬಟ್ಟೆ ಬದಲಿಸುವ ಸಂದರ್ಭದಲ್ಲಿ ಫೋಟೋ ಮತ್ತು ವೀಡಿಯೋ ಚಿತ್ರಿಸಿ ವಿಕೃತಿ ಮೆರೆದಿದ್ದ. ಕಾಮುಕನ ಈ ಕೃತ್ಯವನ್ನು ಗಮನಿಸಿದ್ದ ನರ್ಸ್​ವೊಬ್ಬರು ತಕ್ಷಣವೇ ಈ ವಿಷಯವನ್ನು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಕೂಡಲೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಚೇತನ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಮುಕನನ್ನು ಬಂಧಿಸಿದ ಪೊಲೀಸರು

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿ ಸುವೆಂದು ಮೊಹಂತ ಕಳೆದ ಒಂದು ವರ್ಷದಿಂದ ಅದೇ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅದಲ್ಲದೇ ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ ಮತ್ತು ವೀಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿ ಸುವೆಂದು ಮೊಹಂತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:06 am, Fri, 26 December 25

Source link

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ – Kannada News | Vrushabha Movie: Bigg Boss 12 Raghu’s Shocking Villain Transformation

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಘು ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಈ ಮೊದಲು ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಗೆಲುವು ಕಂಡಿದ್ದರು. ಆ ಬಳಿಕ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ರಘು ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರ ನಟನೆಯ ಸಿನಿಮಾ ಅಬ್ಬರದಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಸಿನಿಮಾ? ಅದುವೇ ‘ವೃಷಭ’.

ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನ ಇದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಘು ಕೂಡ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಕೆಲವು ಹೊತ್ತು ಅವರು ಕಾಣ ಸಿಗುತ್ತಾರೆ. ಅವರದ್ದು ವಿಲನ್ ಪಾತ್ರ.

‘ವೃಷಭ’ ಸಿನಿಮಾ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ಒಂದು ರಾಜರ ಕಾಲ, ಮತ್ತೊಂದು 2025. ರಾಜರ ಕಾಲಘಟ್ಟದಲ್ಲಿ ರಘು ಕಾಣಿಸಿಕೊಳ್ಳುತ್ತಾರೆ. ರಾಜ ವಿಯಯೇಂದ್ರ ವೃಷಭ (ಮೋಹನ್​ಲಲ್) ಆಸ್ಥಾನದಲ್ಲಿ ಸ್ಫಟಿಕ ಲಿಂಗ ಇರುತ್ತದೆ. ಇದನ್ನು ಕದಿಯಲು ಒಂದು ಗ್ಯಾಂಗ್ ಬರುತ್ತದೆ. ಈ ಗ್ಯಾಂಗ್​​ನ ಲೀಡರ್ ಆಗಿ ರಘು ನಟಿಸಿದ್ದಾರೆ.

ರಘು ಅವರು ಈ ಸಿನಿಮಾಗಾಗಿ ಸಂಪೂರ್ಣವಾಗಿ ಗಡ್ಡ ಬೋಳಿಸಿದ್ದು, ಮುಖ ಹಾಗೂ ಕಣ್ಣನ್ನು ಭಯಾನಕವಾಗಿ ಮಾಡಲಾಗಿದೆ. ಈ ಚಿತ್ರ ಡಿಸೆಂಬರ್ 25ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲ ಭಾಷೆ ಮಲಯಾಳಂ ಆಗಿದ್ದು, ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿದೆ.

ಇದನ್ನೂ ಓದಿ: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ

ರಘು ಅವರು ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ವಿಲನ್ ಪಾತ್ರ ಮಾಡಿದ್ದರು. ಈ ವೇಳೆ ರಘು ಅವರನ್ನು ಗುರುತಿಸಲು ಸಾಧ್ಯವೇ ಆಗಿರಲಿಲ್ಲ. ಆ ರೀತಿಯಲ್ಲಿ ಮೇಕಪ್ ಇತ್ತು. ಈಗ ‘ವೃಷಭ’ ಚಿತ್ರಕ್ಕೂ ಅವರು ಅದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಕ್ಷದ ನಿರ್ದೇಶನ ಪಾಲಿಸುವುದು ಕಾರ್ಯಕರ್ತರ ಕರ್ತವ್ಯ: ಡಿಕೆಶಿಗೆ ಟಾಂಗ್ ಕೊಟ್ರಾ ಯತೀಂದ್ರ ಸಿದ್ದರಾಮಯ್ಯ? – Kannada News | Power Is Not Permanent, Party Discipline Comes First: Yathindra Siddaramaiah’s Sharp Remark Amid Congress Row

ಬೆಂಗಳೂರು, ಡಿಸೆಂಬರ್ 26: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಅಧಿಕಾರ ಶಾಶ್ವತವಲ್ಲ. ಪಕ್ಷ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸಬೇಕಾದದ್ದು ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್​ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ನಾವೆಲ್ಲರೂ ಕೂಡ ಸಾಮಾನ್ಯ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಾಗಲಿ, ಪಕ್ಷವನ್ನು ಕಟ್ಟುವುದು ಮತ್ತು ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಈ ಹೇಳಿಕೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ‘ಸಾಮಾನ್ಯ ಕಾರ್ಯಕರ್ತ’ ಮತ್ತು ‘ಸುಮ್ನೆ ಭಾಷಣ ಮಾಡಿ ಹೋಗಿಲ್ಲ, ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ’ ಎಂಬ ಹೇಳಿಕೆಗೆ ತಿರುಗೇಟು ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಅವರ ನಿವಾಸದ ಹೊರಗಡೆ ಮಾತನಾಡಿದ್ದ ಡಿಕೆಶಿ, ‘ನಾನು ಈ ಪಕ್ಷವನ್ನು ಕಟ್ಟಿದ್ದೇನೆ, ಬಾವುಟ ಕಟ್ಟಿದ್ದೇನೆ, ಕಸವೂ ಗುಡಿಸಿದ್ದೇನೆ. ಕೇವಲ ಬಂದು ಭಾಷಣ ಮಾಡಿ ಹೋಗಿಲ್ಲ’ ಎಂದು ಹೇಳಿದ್ದರು. ಆ ಮೂಲಕ ಅಸಮಾಧಾನ ಹೊರಹಾಕಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರು ವರ್ಷಗಳಲ್ಲಿ ಮೂರು ಮದುವೆಯಾಗಿ ಜೈಲುಪಾಲಾದ ವ್ಯಕ್ತಿ – Kannada News | Gopalganj: Man Weds 3 Women in 3 Years, Faces Bigamy and Abuse Charges

ಗೋಪಾಲ್​ಗಂಜ್, ಡಿಸೆಂಬರ್ 26: ವ್ಯಕ್ತಿಯೊಬ್ಬ ಮೂರು ವರ್ಷಗಳಲ್ಲಿ ಮೂರು ಮದುವೆ(Marriage)ಯಾಗಿ ಈಗ ಜೈಲುಪಾಲಾಗಿರುವ ಘಟನೆ ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದಿದೆ. ಗೋಪಾಲ್‌ಗಂಜ್ ಜಿಲ್ಲೆಯ ಪಿಂಟು ಬರ್ನ್‌ವಾಲ್ ಎಂಬ ವ್ಯಕ್ತಿಯನ್ನು ಮೂರು ವರ್ಷಗಳ ಅವಧಿಯಲ್ಲಿ ತನ್ನ ಹಿಂದಿನ ಯಾವುದೇ ಪತ್ನಿಯರಿಗೆ ವಿಚ್ಛೇದನ ನೀಡದೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆತನ ಮೊದಲ ಮತ್ತು ಎರಡನೇ ಪತ್ನಿ ಆತನ ಮೇಲೆ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸಿದ ನಂತರ ಆತನನ್ನು ಬಂಧಿಸಲಾಗಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಂಟು ಬರ್ನ್ವಾಲ್, ವರದಕ್ಷಿಣೆ, ಹಿಂಸೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತನ್ನ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು ಎಂದು ಅವರು ಹೇಳಿಕೊಂಡಿದ್ದಾರೆ. ವರದಕ್ಷಿಣೆ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಹೇಳಿದ್ದೆಲ್ಲವೂ ಸುಳ್ಳು, ನಾವು ಅವರಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ ಎಂದು ಪಿಂಟು ಹೇಳಿದ್ದಾರೆ.

ತಾನು ಮೂವರು ಮಹಿಳೆಯರನ್ನು ಮದುವೆಯಾಗಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ, ಅವರ ಮನೆಯ ಪರಿಸ್ಥಿತಿಯಿಂದ ಹಿಂದಿನ ವಿವಾಹಗಳನ್ನು ಮುಂದುವರಿಸಲು ಸಾಧ್ಯವಾಗಿಲ್ಲ ನನ್ನ ತಾಯಿಗೆ 60 ವರ್ಷ. ಅವರಿಬ್ಬರೂ ಎರಡು ದಿನಗಳವರೆಗೆ ಅಡುಗೆಯನ್ನೂ ಮಾಡಿರಲಿಲ್ಲ ಎಂದು ಪಿಂಟು ಹೇಳಿದ್ದಾರೆ.

ಮತ್ತಷ್ಟು ಓದಿ: ಇನ್​ಸ್ಟಾಗ್ರಾಂ ಪ್ರೇಯಸಿ ಜೊತೆ ಮದುವೆ ಫಿಕ್ಸ್; ಮಂಟಪಕ್ಕೆ ಬಂದ ವರನಿಗೆ ಶಾಕ್ ನೀಡಿದ ವಧು!

ಇಬ್ಬರೂ ಪತ್ನಿಯರ ಲಿಖಿತ ದೂರುಗಳ ನಂತರ, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗುತ್ತಿದೆ. ಖುಷ್ಬೂ ಅವರೊಂದಿಗಿನ ತನ್ನ ಮೊದಲ ಮದುವೆಯ ಬಗ್ಗೆ ಮಾತನಾಡುತ್ತಾ, ಪಿಂಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮೊದಲನೆಯವಳು, ಖುಷ್ಬೂ, ಆಕೆ ನನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಊರಿನವರಿಗೆ ತಿಳಿದಿದೆ, ಆಕೆಯ ದಾಳಿಯಲ್ಲಿ ಅಂದು ನಾನು ಮತ್ತು ನನ್ನ ತಾಯಿ ಇಬ್ಬರೂ ಸಾಯಬೇಕಿತ್ತು ಎಂದು ಅವರು ಹೇಳಿದ್ದಾರೆ.

10 ವರ್ಷ ವಯಸ್ಸಿನ ಅಂತರವಿತ್ತು ಮತ್ತು ಯಾವುದೇ ದೈಹಿಕ ಸಂಬಂಧವಿಲ್ಲ ಎಂದು ಹೇಳಿದ ಅವರು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅತ್ಯಾಚಾರ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದ್ದಾರೆ.

ನನ್ನ ತಾಯಿ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಹೃದಯ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ನನಗೆ ಅಡುಗೆ ಮಾಡಲು ಸಹ ಬರುತ್ತಿರಲಿಲ್ಲ.

ಮದುವೆಯ ನಂತರ ಪದೇ ಪದೇ ಚಿತ್ರಹಿಂಸೆ ನೀಡಲಾಗಿದೆ ಎಂದು ಖುಷ್ಬೂ ಆರೋಪಿಸಿದ್ದಾರೆ.ನಾನು ಪಿಂಟು ಜೊತೆ ಅವನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದೆ. ಅವನು ನನಗೆ ಚಿತ್ರಹಿಂಸೆ ನೀಡಿ, ಹೊಡೆದಿದ್ದಾರೆ ಮತ್ತು ಒಂದು ದಿನ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು ಎಂದು ಅವರು ಹೇಳಿದ್ದಾರೆ. ಕೂಡಲೇ ಆಕೆ ತನ್ನ ತವರು ಮನೆಗೆ ಬಂದಿದ್ದಳು, ಅಂದಿನಿಂದ ಯಾವ ಸಂಪರ್ಕವೂ ಇರಲಿಲ್ಲ.

ಏಪ್ರಿಲ್ 18, 2024 ರಂದು, ಪಿಂಟು ತನಗೆ ವಿಚ್ಛೇದನ ನೀಡದೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಮೊದಲನೇ ಹೆಂಡತಿ ಹೇಳಿದ್ದಾಳೆ. ಎರಡನೇ ಹೆಂಡತಿಗೆ 10 ತಿಂಗಳ ಮಗುವಿದೆ, ಮತ್ತು ಮೂರನೇ ಹೆಂಡತಿಗೆ ಒಂದು ತಿಂಗಳ ಮಗುವಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ! – Kannada News | Gadag Poultry Farm Reality Check: Unhygienic Conditions Raise Health Concerns

ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್​​ನಲ್ಲಿ ತಿಳಿದುಬಂದಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತಲೂ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ ಜೀವದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಈ ಫಾರಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಫಾರಂ ಮಾಲೀಕರ ವಿರುದ್ಧ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹಿತೆ ಬಳಿ ಪ್ರೇಮ ನಿವೇದನೆ, ಮದುವೆಯಾಲ್ಲ ಎಂದಿದ್ದಕ್ಕೆ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ – Kannada News | Woman Injured in Gurugram Club After Rejecting Marriage Proposal

ಗುರುಗ್ರಾಮ ಡಿಸೆಂಬರ್ 26: ವಿವಾಹಿತೆ ಬಳಿ ವ್ಯಕ್ತಿಯೊಬ್ಬ ಪ್ರೇಮ ನಿವೇದನೆ ಮಾಡಿದ್ದ, ಮದುವೆ(Marriage)ಯಾಗಲ್ಲ ಎಂದಿದ್ದಕ್ಕೆ 25 ವರ್ಷದ ಮಹಿಳೆ ಮೇಲೆ ಗುಂಡು ಹಾರಿಸಿರುವ ಘಟನೆ ಗುರುಗ್ರಾಮದ ಕ್ಲಬ್​ ಒಂದರಲ್ಲಿ ನಡೆದಿದೆ. ಈ ಘಟನೆ ಡಿಸೆಂಬರ್ 20 ರ ಮುಂಜಾನೆ ಎಂಜಿ ರಸ್ತೆಯಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ಮಹಿಳೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಪತಿ ದೂರು ನೀಡಿದ್ದು, ಅವರ ಪತ್ನಿ ಕಲ್ಪನಾ (25) ಗುರುಗ್ರಾಮದ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ದೆಹಲಿಯ ಸಂಗಮ್ ವಿಹಾರ್ ನಿವಾಸಿ ತುಷಾರ್ ತನ್ನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.

ಡಿಸೆಂಬರ್ 19 ರಂದು ತನ್ನ ಪತ್ನಿ ಕೆಲಸಕ್ಕೆ ಹೋಗಿದ್ದಳು ಮತ್ತು ರಾತ್ರಿ 1 ಗಂಟೆ ಸುಮಾರಿಗೆ ತನಗೆ ಗುಂಡು ಹಾರಿಸಲಾಗಿದೆ ಎಂದು ಹೇಳಲು ಕರೆ ಮಾಡಿದ್ದಾಗಿ ಪತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ತುಷಾರ್ ನಮ್ಮ ಮನೆಗೆ ಬಂದು ನಮ್ಮೊಂದಿಗೆ ಜಗಳವಾಡಿ ಹೊರಟುಹೋಗಿದ್ದ ಎಂದು ದೂರುದಾರರು ಹೇಳಿದರು.

ದೂರಿನ ಆಧಾರದ ಮೇಲೆ, ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆಯ ಸಮಯದಲ್ಲಿ, ಅಪರಾಧ ವಿಭಾಗದ ತಂಡವು ಉತ್ತರ ಪ್ರದೇಶದ ಬರೌತ್‌ನಿಂದ ಸಂಗಮ್ ವಿಹಾರ್ ನಿವಾಸಿಗಳಾದ ತುಷಾರ್ ಅಲಿಯಾಸ್ ಜಾಂಟಿ (25) ಮತ್ತು ಆತನ ಸ್ನೇಹಿತ ಶುಭಂ ಅಲಿಯಾಸ್ ಜಾನಿ (24) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ವಿಚಾರಣೆಯ ಸಮಯದಲ್ಲಿ, ತುಷಾರ್ ಸುಮಾರು ಆರು ತಿಂಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾಗಿ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾನೆ, ಆದರೆ ಅವಳು ಪದೇ ಪದೇ ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 19 ರ ರಾತ್ರಿ, ತುಷಾರ್, ಶುಭಂ ಜೊತೆಗೆ ಕ್ಲಬ್‌ಗೆ ಹೋಗಿ, ಮತ್ತೊಮ್ಮೆ ಆಕೆಗೆ ಪ್ರಪೋಸ್ ಮಾಡಿ, ನಿರಾಕರಿಸಿದಾಗ ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಕ್ಕಳಿಗೂ ಮಾಳು ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ – Kannada News | Malu New Hairstyle Copied by his Children Fun Is More On Bigg Boss Kannada

ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಚಾಲೆಂಜ್ ವೇಳೆ ಮಾಳುಗೆ ಭಿನ್ನ ಹೇರ್​​ಸ್ಟೈಲ್ ಮಾಡಲಾಗಿದೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಇಡಲಾಗಿದೆ. ಈಗ ಮಾಳು ಮಕ್ಕಳಿಗೂ ಅದೇ ರೀತಿಯ ಹೇರ್​​ಸ್ಟೈಲ್ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

God Tattoos: ಮೈ ಮೇಲೆ ದೇವರ ಟ್ಯಾಟೂ ಹಾಕಿಸಿದ್ದೀರಾ? ಶಾಸ್ತ್ರಗಳು ಹೇಳುವುದೇನು? – Kannada News | The Spiritual Implications of God Tattoos: A Devotional Perspective

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ದೇವರ ಟ್ಯಾಟೂಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ. ದೇಹದ ಮೇಲೆ ಹೆಸರುಗಳು, ಚಿತ್ರಗಳು, ಹಾಗೂ ಮುಖ್ಯವಾಗಿ ದೇವತಾ ವಿಗ್ರಹಗಳು, ಚಿಹ್ನೆಗಳನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಆದರೆ ಇಂತಹ ದೈವಿಕ ಟ್ಯಾಟೂಗಳು ಶುಭವೇ ಅಥವಾ ಅಶುಭವೇ, ಅವುಗಳನ್ನು ಹಾಕಿಸಿಕೊಂಡರೆ ಏನು ಪ್ರಯೋಜನ ಅಥವಾ ಪರಿಣಾಮಗಳು ಎಂಬ ಪ್ರಶ್ನೆಗಳು ಮೂಡುತ್ತವೆ.

ದೇವರ ಟ್ಯಾಟೂ ಹಾಕಿಸಿಕೊಳ್ಳುವುದು ನವ ವಿಧ ಭಕ್ತಿಗಳಲ್ಲಿ ಒಂದಾದ ಭಕ್ತಿಯ ಸಂಕೇತವೆಂದು ಪರಿಗಣಿಸಬಹುದು. ದೇಹದಲ್ಲಿ ಭಗವಂತನ ಚಿಹ್ನೆಗಳನ್ನು ಅಂಟಿಸಿಕೊಳ್ಳುವುದು, ಮನಸ್ಸಿಗೆ ಆ ಭಗವಂತನ ಸಾನಿಧ್ಯವನ್ನು ತಲುಪಿಸುವ ಒಂದು ಮಾರ್ಗವಾಗಿದೆ. ವಿನಾಯಕ, ಸುಬ್ರಹ್ಮಣ್ಯ, ದೇವಿ, ಅಯ್ಯಪ್ಪ ಸ್ವಾಮಿ, ವೆಂಕಟೇಶ್ವರ, ಸ್ವಸ್ತಿಕ್, ಚಕ್ರ, ಓಂಕಾರ ಮುಂತಾದ ಹಲವು ದೇವತಾ ಚಿಹ್ನೆಗಳನ್ನು ಜನರು ತಮ್ಮ ದೇಹದ ಮೇಲೆ ಹಾಕಿಸಿಕೊಳ್ಳುತ್ತಾರೆ. ಇಂತಹ ಟ್ಯಾಟೂಗಳನ್ನು ಹಾಕಿಸಿಕೊಳ್ಳುವಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಯದ್ಭಾವಂ ತದ್ಭವತಿ ಎಂಬಂತೆ, ನಮ್ಮ ಭಾವನೆಗಳೇ ಫಲವನ್ನು ನಿರ್ಧರಿಸುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

ಆದರೆ, ಶಾಸ್ತ್ರಗಳು ಮತ್ತು ಪುರಾಣಗಳ ಪ್ರಕಾರ, ಈ ದೇಹವು ಮಲ-ಮೂತ್ರಗಳಿಂದ ಕೂಡಿದ ದೇಹ ಎಂದು ದಾಸವರೇಣ್ಯರು ಮತ್ತು ಕಾಲಜ್ಞಾನದ ಕರ್ತೃಗಳು ಹೇಳಿದ್ದಾರೆ. ಆದರೂ, ದೇಹದಲ್ಲಿ ಮನಸ್ಸು ನೆಲೆಸಿದೆ. ದೇಹದಿಂದ ಭಗವಂತನನ್ನು ಆವಾಹನೆ ಮಾಡಿಕೊಳ್ಳುವುದು ಈ ಟ್ಯಾಟೂ ಹಾಕಿಸಿಕೊಳ್ಳುವಿಕೆಯ ಸಂಕೇತವಾಗಿದೆ. ದೇಹಕ್ಕೆ ಭಗವಂತನನ್ನು ಅಂಟಿಸಿಕೊಂಡಾಗ, ಮನಸ್ಸಿಗೆ ಭಗವಂತ ಬರುವುದು ಕೂಡ ಭಕ್ತಿಯ ಸಂಕೇತವಾಗಿದೆ.

ದೇಹದ ಮೇಲೆ ದೇವರ ಚಿಹ್ನೆಗಳನ್ನು ಹಾಕಿಸಿಕೊಂಡಾಗ, ನಮ್ಮ ದೇಹವನ್ನು ಮತ್ತು ಮನಸ್ಸನ್ನು ಆ ದೈವಿಕ ಸ್ವರೂಪಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಬೇಕು. ಇದನ್ನು ಶಾಸ್ತ್ರಗಳಲ್ಲಿ ದೀಕ್ಷೆ ಎಂದು ಕರೆಯಲಾಗುತ್ತದೆ. ರಾಮಕೃಷ್ಣ ಮಠ ಅಥವಾ ವೀರಶೈವ ಮಠಗಳಲ್ಲಿ ಮಂತ್ರ ದೀಕ್ಷೆ ನೀಡಿದಂತೆ, ದೈವಿಕ ಟ್ಯಾಟೂ ಕೂಡ ಒಂದು ರೀತಿಯ ದೀಕ್ಷೆಗೆ ಸಮಾನ. ಈ ದೀಕ್ಷೆಯನ್ನು ತೆಗೆದುಕೊಂಡ ಮೇಲೆ ಆ ಭಗವಂತನ ಸ್ವರೂಪಕ್ಕೆ ತಕ್ಕಂತೆ ನಾವು ನಡೆಯಬೇಕು. ಈ ನಡವಳಿಕೆಗೆ ಬದ್ಧರಾಗಿದ್ದರೆ ಯಾವುದೇ ಆತಂಕವಿಲ್ಲ. ಆದರೆ, ಟ್ಯಾಟೂ ಹಾಕಿಸಿಕೊಂಡು ಆ ನಿಯಮಗಳನ್ನು ಅನುಸರಿಸದೆ ಇದ್ದರೆ, ಅದು ಜನ್ಮಜನ್ಮಾಂತರಕ್ಕೂ ಕಷ್ಟವನ್ನು ತರಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಇದಲ್ಲದೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಕೆಲವು ದುಶ್ಚಟಗಳು, ದುರ್ಬುದ್ಧಿಗಳನ್ನು, ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ ಸಂಕಲ್ಪವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭಕರ. ಭಗವಂತ ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತ. ಈ ದೇಹ ಪಂಚಭೂತಗಳಲ್ಲಿ ಮೂರು ಭೂತಗಳಿಂದ ಕೂಡಿರುವ ಮತ್ತು ಮಲ-ಮೂತ್ರಗಳಿಂದ ಕೂಡಿದ ದೇಹವಾದರೂ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಂಡರೆ, ಸ್ನಾನ ಮಾಡಿದಾಗ ಟ್ಯಾಟೂಗೂ ಅಭಿಷೇಕ ಮಾಡಿದಂತಾಗುತ್ತದೆ. ತೃಪ್ತ ಮನಸ್ಸಿನಿಂದ ಹಾಕಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

ಆದರೆ, ಕೇವಲ ತೋರ್ಪಡಿಕೆಗಾಗಿ ಟ್ಯಾಟೂ ಹಾಕಿಸಿಕೊಂಡಾಗ, ಯೌವನದಲ್ಲಿ ಅಥವಾ ದೇಹ ಚೆನ್ನಾಗಿದ್ದಾಗ ಅದು ಶುಭವೆಂದು ಕಾಣಿಸಬಹುದು. ಆದರೆ ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಬಂದಾಗ, ಅದರ ಪ್ರಭಾವ ಕಡಿಮೆಯಾಗಿ ಅಶುಭ ಸಂಕೇತಗಳು ಕಾಣಿಸಬಹುದು. ಆದ್ದರಿಂದ, ಯಾವುದೇ ಕ್ಷಣಿಕ ಖುಷಿಗೆ ಅಥವಾ ಪ್ರದರ್ಶನಕ್ಕಾಗಿ ದೇವರ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Train Fare Hike: ಇಂದಿನಿಂದ ರೈಲು ಪ್ರಯಾಣ ದುಬಾರಿ, ಹೊಸ ಟಿಕೆಟ್ ದರಗಳ ಕುರಿತು ಇಲ್ಲಿದೆ ಮಾಹಿತಿ – Kannada News | New Train Fares Kick In: What Passengers Need to Know

ನವದೆಹಲಿ, ಡಿಸೆಂಬರ್ 26: ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಈ ಮೂಲಕ ರೈಲು(Train) ಪ್ರಯಾಣ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತಾಗಿದ್ದು ರೈಲು ಪ್ರಯಾಣ ದುಬಾರಿಯಾಗಲಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ.

ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಇದು ಡಿಸೆಂಬರ್ 26 ರಿಂದ ಜಾರಿಗೆ ಬರಲಿದೆ ಎಂಬುದನ್ನು ಗಮನಿಸಬೇಕು. ಈ ವರ್ಷ ರೈಲು ದರದಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಹಿಂದಿನ ಹೆಚ್ಚಳ ಜುಲೈನಲ್ಲಿ ಆಗಿತ್ತು.

215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ, ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಒಂದು ಪೈಸೆ, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎಸಿ ಅಲ್ಲದ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಎರಡು ಪೈಸೆ ಮತ್ತು ಎಲ್ಲಾ ರೈಲುಗಳ ಎಸಿ ವರ್ಗದ ದರವನ್ನು ಹೆಚ್ಚಿಸಲಾಗಿದೆ. ಮುಂದಿನ ಪ್ರಯಾಣಕ್ಕಾಗಿ ಡಿಸೆಂಬರ್ 26 ರ ಮೊದಲು ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ.

ಮತ್ತಷ್ಟು ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

215 ಕಿಲೋಮೀಟರ್ ದೂರದವರೆಗಿನ ಸಾಮಾನ್ಯ ದರ್ಜೆಯ ಟಿಕೆಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 215 ಕಿಮೀಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಮೀಗೆ 1 ಪೈಸೆ ವೆಚ್ಚವಾಗುತ್ತದೆ. ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿಗೆ, ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ. ಹವಾನಿಯಂತ್ರಿತ ಕೋಚ್‌ಗಳಲ್ಲಿ ಪ್ರಯಾಣದ ವೆಚ್ಚವನ್ನು ಸಹ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಿಸಲಾಗಿದೆ.

ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೊರಯಾಗುವುದು ಖಚಿತವಾಗಿದೆ.

ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ಹಮ್ಸಾಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲುಗಳ ದರ ಬದಲಾಗಲಿದೆ.

ಕಳೆದ ದಶಕದಲ್ಲಿ ರೈಲ್ವೆ ತನ್ನ ಜಾಲ ಮತ್ತು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ ಮತ್ತು ತನ್ನ ಮಾನವಶಕ್ತಿಯನ್ನು ಹೆಚ್ಚಿಸುತ್ತಿದೆ ಈ ಹಿನ್ನೆಯಲ್ಲಿ ಇತ್ತೀಚಿನ ಪ್ರಯಾಣ ದರ ಹೆಚ್ಚಳ ಮಾಡಿದ್ದು ರೈಲ್ವೆಯ ಆದಾಯವನ್ನು ವಾರ್ಷಿಕವಾಗಿ 600 ಕೋಟಿ ರೂ.ಗಳಷ್ಟು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕ್ರಿಸ್ಮಸ್ ದಿನವೇ ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ – Kannada News | US Conducts Targeted Strikes Against ISIS Positions in Nigeria

ನೈಜೀರಿಯಾ, ಡಿಸೆಂಬರ್ 26: ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸುವಂತೆ ಐಸಿಸ್​ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಕ್ರಿಸ್​ಮಸ್ ಹಬ್ಬದ ದಿನವೇ ಐಸಿಸ್ ನೆಲೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ಐಸಿಸ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ, ನರಕದಂಥಾ ಶಿಕ್ಷೆ ಇಲ್ಲೇ ಕಾಣುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆಗೆ ದೇವರ ಆಶೀರ್ವಾದ ಸದಾ ಇರಲಿ, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಕ್ರಿಶ್ಚಿಯನ್ನರ ಮೇಲಿನ ದಾಳಿ ಮುಂದುವರೆದರೆ, ಉಗ್ರರು ಇನ್ನೂ ಕೆಟ್ಟ ಸಾವನ್ನು ಕಾಣುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version