ನಿಮ್ಮ ಬಿಲ್‌ನಲ್ಲಿ ‘M.D. Penalty’ ಬರುತ್ತಿದೆಯೇ? ದಂಡದಿಂದ ತಪ್ಪಿಸಿಕೊಳ್ಳಲು ಈ ಸರಳ ಸೂತ್ರ ಅನುಸರಿಸಿ!
ಬೆಂಗಳೂರು, ಏ.9: ನಿಮ್ಮ ವಿದ್ಯುತ್ ಬಿಲ್‌ನಲ್ಲಿ ‘M.D. Penalty’ (Maximum Demand Penalty) ಏಕೆ ಬರುತ್ತದೆ ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ ಮಹಿಳೆಯೊಬ್ಬರು ವಿಡಿಯೋ ಮಾಡಿದ್ದಾರೆ, ಇದನ್ನು @Karnataka Portfolio ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘M.D. Penalty’ ಎಂದರೆ ವಿದ್ಯುತ್ನ ಗರಿಷ್ಠ ಬೇಡಿಕೆ ದಂಡ. ಇದನ್ನು ಯಾಕೆ ವಿಧಿಸಲಾಗುತ್ತದೆ ಎಂಬ ಬಗ್ಗೆ ವಿವರವಾಗಿ ಹೇಳಿದ್ದಾರೆ. ನೀವು ನಿಮ್ಮ ಮನೆಗೆ ಅಥವಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವಾಗ ಇಂತಿಷ್ಟೇ ಕಿಲೋವ್ಯಾಟ್ (kw) ವಿದ್ಯುತ್ ಬಳಸುತ್ತೇವೆ ಎಂದು…