ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು – Kannada News | Oncologists Warn of Rising Cancer Cases Among Young Women, Urge Not to Ignore Symptoms
ಬೆಂಗಳೂರು, ಫೆಬ್ರವರಿ 04: ಕ್ಯಾನ್ಸರ್‌ನ ಪ್ರವೃತ್ತಿಗಳಲ್ಲಿ ಕಳವಳಕಾರಿ ಬದಲಾವಣೆ ಕಂಡುಬರುತ್ತಿದ್ದು, ಕಡಿಮೆ ವಯಸ್ಸಿನ ಮಹಿಳೆಯರಲ್ಲಿಯೇ ಹೆಚ್ಚಾಗಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಂಕಾಲಜಿಸ್ಟ್‌ಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೋಗ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಮಹಿಳೆಯರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂಬ ಮನವಿಯನ್ನೂ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನ್ ಕೆ.ಆರ್. ಮಾಡಿದ್ದಾರೆ. ಸ್ಥೂಲತೆ, ಇನ್ಸುಲಿನ್ ಪ್ರತಿರೋಧ, ಮಧುಮೇಹ, ನಿರಂತರ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ತಂಬಾಕು ಸೇವನೆ ಹಾಗೂ…