ದಿ ಹಂಡ್ರೆಡ್​ನಲ್ಲಿ ಸಹೋದರರ ಸವಾಲ್: ಕೊನೆಗೂ ಗೆದ್ದಿದ್ದು ಯಾರು ಗೊತ್ತಾ? – Kannada News | Craig Smashes Twin Brother Jamie For Dramatic Match Winning Six

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ರೋಮಾಂಚಕ ಸಹೋದರರ ಪೈಪೋಟಿಗೆ ‘ದಿ ಹಂಡ್ರೆಡ್’ ಟೂರ್ನಿ ಸಾಕ್ಷಿಯಾಗಿದೆ. ಪಂದ್ಯದ ಕೊನೆಯ ಹಂತದಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ, ತನ್ನದೇ ಅವಳಿ ಸೋದರ ಜೇಮಿ ಓವರ್ಟನ್ ಬೌಲಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಕ್ರೇಗ್ ಓವರ್ಟನ್, ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ.

ಸಹೋದರರ ಸವಾಲ್:

ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಟ್ರೆಂಟ್ ರಾಕೆಟ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್​ ಕಲೆಹಾಕಿತು.

160 ರನ್‌ಗಳ ಗುರಿ ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಕೊನೆಯ 5 ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕ್ರೀಸ್‌ನಲ್ಲಿದ್ದದ್ದು ಟ್ರೆಂಟ್ ರಾಕೆಟ್ಸ್‌ನ ಕ್ರೇಗ್ ಓವರ್ಟನ್. ಲಂಡನ್ ಸ್ಪಿರಿಟ್ ಪರ ಕೊನೆಯ ಓವರ್ ಎಸೆಯಲು ಬಂದದ್ದು ಅವರದ್ದೇ ಸಹೋದರ ಜೇಮಿ ಓವರ್ಟನ್. ಇಡೀ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿದು ನೋಡುವಂತಹ ವಾತಾವರಣ ನಿರ್ಮಾಣವಾಗಿತ್ತು.

      • ಮೊದಲ ಎಸೆತ (ಸಿಕ್ಸರ್): ಜೇಮಿ ಎಸೆದ ಶಾರ್ಟ್ ಪಿಚ್ ಚೆಂಡನ್ನು ಕ್ರೇಗ್ ಮನಮೋಹಕವಾಗಿ ಫೈನ್ ಲೆಗ್ ಮೇಲೆ ಸಿಕ್ಸರ್‌ಗೆ ಅಟ್ಟಿದರು. ಈ ಒಂದೇ ಹೊಡೆತ ಪಂದ್ಯವನ್ನು ಟ್ರೆಂಟ್ ರಾಕೆಟ್ಸ್ ಕಡೆಗೆ ತಿರುಗಿಸಿತು.
      • ಎರಡನೇ ಎಸೆತ (2 ರನ್): ಜೇಮಿ ಎಸೆದ ಎರಡನೇ ಎಸೆತದಲ್ಲಿ 2 ರನ್​ ಕಲೆಹಾಕುವಲ್ಲಿ ಕ್ರೇಗ್ ಯಶಸ್ವಿಯಾದರು.
      • ಮೂರನೇ ಎಸೆತ (2 ರನ್ – ಗೆಲುವು): ಮತ್ತೊಮ್ಮೆ ಇನ್‌ಫೀಲ್ಡ್ ದಾಟಿಸಿ ಬೌಂಡರಿ ಗೆರೆಯತ್ತ ಚೆಂಡು ತಳ್ಳಿ, ಇನ್ನೆರಡು ರನ್ ಕದಿಯುವ ಮೂಲಕ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಕ್ರೇಗ್ ರಾಕೆಟ್ಸ್ ತಂಡಕ್ಕೆ ಗೆಲುವು ತಂದಿತ್ತರು.

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಬೆನ್ ಡಕೆಟ್ , ಫಿನ್ ಅಲೆನ್ , ಟಾಮ್ ಬ್ಯಾಂಟನ್ , ಟಿಮ್ ಡೇವಿಡ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ),  ಮಿಚೆಲ್ ಸ್ಯಾಂಟ್ನರ್ , ಲೂಯಿಸ್ ಗ್ರೆಗೊರಿ , ಕ್ರೇಗ್ ಓವರ್ಟನ್ , ಕ್ಯಾಲ್ವಿನ್ ಹ್ಯಾರಿಸನ್ , ಮ್ಯಾಟ್ ಹೆನ್ರಿ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: ಅವಕಾಶ​ ಕೈ ತಪ್ಪಿದಾಗ ಬೇಸರವಾಗುತ್ತೆ… ಕಂಬ್ಯಾಕ್​ಗೆ ಅಭಿಷೇಕ್ ಶರ್ಮಾ ಪಣ!

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11:  ಲುವಾನ್-ಡ್ರೆ ಪ್ರಿಟೋರಿಯಸ್ , ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್ , ಜೇಮ್ಸ್ ಕೋಲ್ಸ್ , ಜೇಮ್ಸ್ ರೆವ್ , ಜೇಮೀ ಓವರ್ಟನ್ , ಡೇವಿಡ್ ವಿಲ್ಲಿ , ಆಂಡ್ರ್ಯೂ ಟೈ , ಆ್ಯಡಂ ಮಿಲ್ನ್​, ಆ್ಯಡಂ ಝಂಪಾ.

ಕಳೆದ ವರ್ಷದ ರಿವೆಂಜ್ ತೀರಿಸಿಕೊಂಡೆ!

ಪಂದ್ಯ ಮುಗಿದ ಬಳಿಕ ಬಿಸಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕ್ರೇಗ್ ಓವರ್ಟನ್, “ಕಳೆದ ವರ್ಷದ ಪಂದ್ಯದಲ್ಲಿ ಜೇಮಿ ನನ್ನನ್ನು ಔಟ್ ಮಾಡಿದ್ದ. ಹಾಗಾಗಿ ಈ ಬಾರಿ ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ಳಬೇಕಿತ್ತು, ಆ ಕೆಲಸ ಮಾಡಿದ್ದೇನೆ!” ಎಂದು ನಗುತ್ತಾ ಹೇಳಿದರು.

Source link

ಕರ್ನಾಟಕದಲ್ಲಿ ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿ?: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್​​ ಕೊಟ್ರು ಸ್ಪಷ್ಟನೆ – Kannada News | BK Hariprasad on Karnataka Cabinet Expansion: Delhi Visit for Personal Reasons, Denies DyCM Speculation

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಮತ್ತಷ್ಟು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ ಊಹಾಪೋಹವಾಗಿದ್ದು, ಶೀಘ್ರವೇ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್​​ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ ತಿಳಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ತಾವು ಪ್ರವಾಸದಲ್ಲಿರಲಿದ್ದು, ದೆಹಲಿಗೆ ತೆರಳುತ್ತಿರುವುದು ಕೂಡ ಖಾಸಗಿ ವಿಚಾರಕ್ಕೆ. ಕ್ಯಾಬಿನೆಟ್​​ ಸಂಬಂಧ ಮುಂದಿನ ಬೆಳವಣಿಗೆಗಳ ಬಳಿಕ ಮಾಹಿತಿ ನೀಡುತ್ತೇನೆ ಎಂದವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಿಜಯ್​​ಗೆ ತ್ರಿಷಾ ಮಧ್ಯರಾತ್ರಿ ಸಿಗ್ತಾರೆ, ಮುಂದೆ ಡಿಸಿಎಂ ಆದರೂ ಅಚ್ಚರಿ ಇಲ್ಲ; ಮಾಜಿ ಸಚಿವನ ಟೀಕೆ – Kannada News | If Trisha Becomes Deputy CM Won’t Be Surprising AIADMK Leader RB Udhayakumar

ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ತ್ರಿಷಾ ಹೆಸರು ಸದಾ ಚರ್ಚೆಯಲ್ಲಿ ಇದೆ. ವಿಜಯ್ ಹಾಗೂ ತ್ರಿಷಾ ಅವರ ಆಪ್ತತೆ ಚರ್ಚೆಗೆ ಮೂಲ ಕಾರಣ. ಇಬ್ಬರೂ ವಿವಾಹ ಆಗಬಹುದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಅದೇ ರೀತಿ ತ್ರಿಷಾ ಅವರನ್ನು ವಿಜಯ್ ರಾಜಕೀಯಕ್ಕೆ ಕರೆತರಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ. ಈ ಮಧ್ಯೆ ಎಐಎಡಿಎಂಕೆ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಷಾ ಸಂಬಂಧವನ್ನು ಉಲ್ಲೇಖಿಸಿ ಅತ್ಯಂತ ಕಟುವಾಗಿ ವ್ಯಂಗ್ಯವಾಡಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಉದಯಕುಮಾರ್, ‘ಮುಖ್ಯಮಂತ್ರಿ ವಿಜಯ್ ಅವರನ್ನು ಮಧ್ಯರಾತ್ರಿ ಭೇಟಿ ಮಾಡಲು ಮತ್ತು ಅವರ ಜೊತೆ ಕೇಕ್ ಕತ್ತರಿಸಲು ನಟಿ ತ್ರಿಷಾ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಪರಿಸ್ಥಿತಿ ಹೀಗಿರುವಾಗ, ಶೀಘ್ರದಲ್ಲೇ ವಿಜಯ್ ಅವರು ವ ಅವರನ್ನು ತಮಿಳುನಾಡಿನ ಉಪಮುಖ್ಯಮಂತ್ರಿ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಲೇವಡಿ ಮಾಡಿದ್ದಾರೆ. ಮಾಜಿ ಸಚಿವರ ಈ ಹೇಳಿಕೆ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದೆ.

ವಿಜಯ್ ಸಿನಿಮಾ ರಿಲೀಸ್‌ಗೆ ಅಪ್ರಕಟಿತ ರಜೆ

ಇದೇ ವೇಳೆ ಮುಖ್ಯಮಂತ್ರಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಪ್ರಕಟಿತ ರಜೆ ಘೋಷಿಸಿದ್ದನ್ನು ಉದಯಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ‘ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರವರೆಗೆ ಇಡೀ ಆಡಳಿತ ಯಂತ್ರವೇ ತಮ್ಮ ಕೆಲಸವನ್ನು ಬದಿಗಿಟ್ಟು ಸಿನಿಮಾ ನೋಡಲು ಹೋಗಿದೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ವದಂತಿಗಳಿಗೆ ಸಿಕ್ಕ ಹೊಸ ರೆಕ್ಕೆ

ವಿಜಯ್ ಅವರ ಪತ್ನಿ ಸಂಗೀತಾ ಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿಯ ವಿರುದ್ಧ ಪರಸ್ತ್ರೀ ಸಂಬಂಧದ ಆರೋಪ ಮಾಡಿದಾಗಿನಿಂದಲೇ ವಿಜಯ್ ಮತ್ತು ತ್ರಿಷಾ ಸಂಬಂಧದ ಚರ್ಚೆ ಜೋರಾಯಿತು.

2004ರ ಸೂಪರ್ ಹಿಟ್ ‘ಗಿಲ್ಲಿ’ ಚಿತ್ರದಿಂದ ಹಿಡಿದು ಇತ್ತೀಚಿನ ‘ಲಿಯೋ’ ಚಿತ್ರದವರೆಗೆ ವಿಜಯ್ ಹಾಗೂ ತ್ರಿಷಾ ಜೋಡಿ ತಮಿಳು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ರಾಜಕೀಯ ವೇದಿಕೆಯಲ್ಲೂ ಇವರ ಹೆಸರು ಮುಂಚೂಣಿಗೆ ಬಂದಿರುವುದು ತಮಿಳುನಾಡಿನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:05 pm, Mon, 27 July 26

Source link

ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್, ಜಿಂದಾಬಾದ್ ಜಯಘೋಷದೊಂದಿಗೆ ಎನ್​ಡಿಎ ಸಂಸದರ ಸ್ವಾಗತ – Kannada News | Dharmendra Pradhan Receives Warm Welcome From NDA MPs on Return to Lok Sabha

ನವದೆಹಲಿ, ಜುಲೈ 27: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಒಡಿಶಾದ ಸಂಸದ ಧರ್ಮೇಂದ್ರ ಪ್ರಧಾನ್ ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಲೋಕಸಭೆಗೆ ಆಗಮಿಸಿದ್ದರು. ಅವರು ಸದನದೊಳಗೆ ಪ್ರವೇಶಿಸುತ್ತಿದ್ದಂತೆ ಲೋಕಸಭೆಯಲ್ಲಿ ಕುತೂಹಲಕಾರಿ ವಾತಾವರಣ ನಿರ್ಮಾಣವಾಯಿತು. ಧರ್ಮೇಂದ್ರ ಪ್ರಧಾನ್ ಅವರನ್ನು ಕಂಡ ತಕ್ಷಣವೇ ಬಿಜೆಪಿ ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಧರ್ಮೇಂದ್ರ ಪ್ರಧಾನ್ ಜಿಂದಾಬಾದ್ ಎಂದು ಜೈಕಾರ ಕೂಗುವ ಮೂಲಕ ಅವರನ್ನು ಬರಮಾಡಿಕೊಂಡರು.

ಸಚಿವ ಸ್ಥಾನ ತ್ಯಜಿಸಿದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪಕ್ಷದ ತತ್ವಕ್ಕಾಗಿ ನೈತಿಕ ಹೊಣೆ ಹೊತ್ತು ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಬಿಜೆಪಿ ಮತ್ತು ಮೈತ್ರಿಕೂಟದ ನಾಯಕರು ಪ್ರಧಾನ್ ಅವರ ನಿರ್ಧಾರವನ್ನು ಶ್ಲಾಘಿಸಿದರು.
ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಸತತ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಧರ್ಮೇಂದ್ರ ಪ್ರಧಾನ್ ಅವರು ಜುಲೈ 25 ರಂದು ತಮ್ಮ ಶಿಕ್ಷಣ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರು. ದೇಶದ ಯುವಶಕ್ತಿ ಗೊಂದಲಕ್ಕೆ ಸಿಲುಕಬಾರದು ಹಾಗೂ ಪ್ರತಿಭಟನೆಯನ್ನು ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಬೆಂಗಳೂರು ಬಿ-ಖಾತಾ ಆಸ್ತಿ ಮಾಲೀಕರಿಗೆ ಜ್ಯಾಕ್‌ಪಾಟ್: ‘ಎ-ಖಾತಾ’ ಪರಿವರ್ತನಾ ಶುಲ್ಕ ಭಾರಿ ಕಡಿತ – Kannada News | A Khata for B Khata Properties: BBMP’s 100 Day Drive and 2% Fee Cut in Bangalore

ಬೆಂಗಳೂರು, ಜು.27: ರಾಜಧಾನಿ ಬೆಂಗಳೂರಿನ ಬಿ-ಖಾತಾ (B-Khata) ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ/ಗ್ರೇಟರ್ ಬೆಂಗಳೂರು ಪ್ರಾಧಿಕಾರ (BBMP/GBA) ‘ಭೂ ಗ್ಯಾರಂಟಿ’ ಯೋಜನೆಯಡಿ ಭಾರಿ ಸೌಲಭ್ಯ ಕಲ್ಪಿಸಿದೆ. ನಗರದ ಲಕ್ಷಾಂತರ ಬಿ-ಖಾತಾ ಆಸ್ತಿಗಳನ್ನು ಅಧಿಕೃತ ‘ಎ-ಖಾತಾ’ಗೆ (A-Khata) ಬದಲಾಯಿಸಿಕೊಳ್ಳಲು 100 ದಿನಗಳ ವಿಶೇಷ ರಿಯಾಯಿತಿ ಅಭಿಯಾನವನ್ನು ಜಾರಿಗೆ ತರಲಾಗಿದೆ. ಈ ಮೊದಲು ನಿಗದಿಯಾಗಿದ್ದ ಶೇ. 5 ರಷ್ಟು ಪರಿವರ್ತನಾ ಶುಲ್ಕವನ್ನು ಇದೀಗ ಶೇ. 2 ಕ್ಕೆ ಕಡಿತಗೊಳಿಸಲಾಗಿದೆ (ಗೈಡೆನ್ಸ್ ಮೌಲ್ಯದ ಆಧಾರದ ಮೇಲೆ).

ಈ ಬಂಪರ್ ಕೊಡುಗೆಯಿಂದಾಗಿ ಆಸ್ತಿ ಮಾಲೀಕರಿಗೆ ನಿಗದಿತ ಶುಲ್ಕದಲ್ಲಿ ಶೇ. 60 ರಷ್ಟು ನೇರ ವೆಚ್ಚ ಉಳಿತಾಯವಾಗಲಿದೆ. ಈ ರಿಯಾಯಿತಿ ದರವು 23-08-2026 ರವರೆಗೆ ಮಾತ್ರ ಲಭ್ಯವಿರಲಿದೆ. ಆಗಸ್ಟ್ 24 ರಿಂದ ಮತ್ತೆ ಹಳೆಯ ಶೇ. 5 ರಷ್ಟು ಶುಲ್ಕವೇ ಅನ್ವಯವಾಗಲಿದೆ.

ಬ್ಯಾಂಕ್‌ಗಳಿಂದ ಸುಲಭವಾಗಿ ಗೃಹ ಸಾಲ ಸೌಲಭ್ಯ ದೊರೆಯುತ್ತದೆ. ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಪಡೆಯಬಹುದು. ಆಸ್ತಿಗೆ ಸಂಪೂರ್ಣ ಕಾನೂನು ಮಾನ್ಯತೆ ಸಿಗಲಿದ್ದು, ಮರುಮಾರಾಟ ಪ್ರಕ್ರಿಯೆ ಸುಲಭವಾಗುತ್ತದೆ. ಅರ್ಹ ಆಸ್ತಿ ಮಾಲೀಕರು ಅಧಿಕೃತ BBMP-GBA ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಕೊಡುಗೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಆಸ್ತಿಯ ಗೈಡೆನ್ಸ್ ಮೌಲ್ಯದ ಮೇಲೆ ಶುಲ್ಕ ಲೆಕ್ಕಾಚಾರ ಮಾಡಲಾಗುತ್ತಿದ್ದು, ಈ ವಿಶೇಷ ಅವಧಿಯಲ್ಲಿ ಮಾಲೀಕರು ಭಾರಿ ನಗದು ಉಳಿತಾಯ ಮಾಡಬಹುದಾಗಿದೆ. ಈ ಮೊದಲು 2.5 ಲಕ್ಷ ರೂ. ಶುಲ್ಕ ಪಾವತಿಸಬೇಕಿತ್ತು. ಈಗ ಕೇವಲ 1 ಲಕ್ಷ ರೂ. ಪಾವತಿಸಿದರೆ ಸಾಕಾಗುತ್ತದೆ (1.50 ಲಕ್ಷ ರೂ. ಉಳಿತಾಯ). ಈ ಮೊದಲು 5 ಲಕ್ಷ ರೂ. ಶುಲ್ಕವಿತ್ತು. ಈಗ ಕೇವಲ 2 ಲಕ್ಷ ರೂ. ಪಾವತಿಸಿದರೆ ಸಾಕಾಗುತ್ತದೆ (3 ಲಕ್ಷ ರೂ. ನೇರ ಉಳಿತಾಯ). ಈ ಮೊದಲು 7.5 ಲಕ್ಷ ರೂ. ಶುಲ್ಕ ಪಾವತಿಸಬೇಕಿತ್ತು. ಈಗ ಕೇವಲ 3 ಲಕ್ಷ ರೂ. ಪಾವತಿಸಿದರೆ ಸಾಕಾಗುತ್ತದೆ (4.50 ಲಕ್ಷ ರೂ. ನೇರ ಉಳಿತಾಯ).

ಬಿ-ಖಾತಾ ಆಸ್ತಿಗಳಿಗೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಕಷ್ಟಕರವಾಗಿತ್ತು. ಎ-ಖಾತಾ ಸಿಗುತ್ತಿದ್ದಂತೆ ಸುಲಭವಾಗಿ ಹೋಮ್ ಲೋನ್ ಲಭ್ಯವಾಗುತ್ತದೆ. ಕಟ್ಟಡ ನಿರ್ಮಾಣ ಅಥವಾ ನವೀಕರಣಕ್ಕಾಗಿ BBMP-GBA ಯಿಂದ ಅಧಿಕೃತ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಬಹುದು. ಆಸ್ತಿಗೆ ಕಾನೂನುಬದ್ಧ ಮಾನ್ಯತೆ ದೊರೆತು, ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ತೊಡಕುಗಳು ನಿವಾರಣೆಯಾಗುತ್ತವೆ. ಬಿ-ಖಾತಾ ಆಸ್ತಿಗಳಿಗಿಂತ ಎ-ಖಾತಾ ಆಸ್ತಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಮೌಲ್ಯ ದೊರೆಯುತ್ತದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026’ ಮಂಡನೆ, ಕರ್ನಾಟಕ ಸಂಪುಟ ವಿಸ್ತರಣೆ

ಅರ್ಜಿಗೆ ಅಗತ್ಯವಿರುವ ದಾಖಲೆಗಳು

ಅಧಿಕೃತ ನೋಂದಾಯಿತ ಆಸ್ತಿ ಪತ್ರ

ಚಾಲ್ತಿಯಲ್ಲಿರುವ ಬಿ-ಖಾತಾ ಪ್ರಮಾಣಪತ್ರ ಮತ್ತು ಖಾತಾ ಉದ್ಧರಣ

ಜಮೀನು ಪರಿವರ್ತನಾ ಆದೇಶ

ಇತ್ತೀಚಿನ ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳು

ಆಸ್ತಿ ಮಾಲೀಕರ ಆಧಾರ್ ಕಾರ್ಡ್

ಋಣಭಾರ ರಾಹಿತ್ಯ ಪ್ರಮಾಣಪತ್ರ

ವಿದ್ಯುತ್ ಬಿಲ್ ಅಥವಾ ಜಾಗದ ಸ್ಕೆಚ್/ಫೋಟೋ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

1.ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ:ಅಧಿಕೃತ BBMP-GBA e-Aasthi/Khata ಪೋರ್ಟಲ್‌ಗೆ ಭೇಟಿ ನೀಡಿ, ನಿಮ್ಮ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.

2.ಆಸ್ತಿಯ ಮಾಹಿತಿ ನಮೂದಿಸಿ: ನಿಮ್ಮ ಆಸ್ತಿಯ EP ID / PID ಸಂಖ್ಯೆ ಹಾಗೂ ವಿಳಾಸದ ವಿವರಗಳನ್ನು ನಮೂದಿಸಿ, ಮಾಲೀಕತ್ವದ ವಿವರಗಳನ್ನು ಪರಿಶೀಲಿಸಿ.

3.ದಾಖಲೆಗಳನ್ನು ಅಪ್‌ಲೋಡ್ ಮಾಡಿ: ನೋಂದಾಯಿತ ಸೇಲ್ ಡೀಡ್, ಆಸ್ತಿ ತೆರಿಗೆ ರಸೀದಿಗಳು ಹಾಗೂ ಡಿ-ಸಿ ಕನ್ವರ್ಷನ್ ಪ್ರತಿಗಳನ್ನು (ಅಗತ್ಯವಿದ್ದರೆ) ಸ್ಪಷ್ಟವಾಗಿ ಅಪ್‌ಲೋಡ್ ಮಾಡಿ.

4.ಆಧಾರ್ e-KYC ಪೂರ್ಣಗೊಳಿಸಿ: ಆಸ್ತಿಯ ಎಲ್ಲಾ ಮಾಲೀಕರ ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

5.ಅರ್ಜಿ ಸಲ್ಲಿಸಿ ಹಾಗೂ ಪರಿಶೀಲನೆ: ಅರ್ಜಿ ಶುಲ್ಕ ಪಾವತಿಸಿ ಸಬ್ಮಿಟ್ ಮಾಡಿ. BBMP ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆ ಪೂರ್ಣಗೊಳಿಸಿದ ನಂತರ 2% ರಿಯಾತಿಯ ಪರಿವರ್ತನಾ ಶುಲ್ಕದ ಚಲನ್ ಬಿಡುಗಡೆಯಾಗುತ್ತದೆ. ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲೇ ಡಿಜಿಟಲ್ ಎ-ಖಾತಾ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಮಶಾನದ ಜಾಗದ ಮೇಲೂ ಕಣ್ಣು: ಹೆತ್ತವರ ಸಮಾಧಿಯನ್ನೂ ಬಿಡದೆ ಧ್ವಂಸಗೊಳಿಸಿ ವಿಕೃತಿ – Kannada News | 50 Graves Levelled With Tractors in Davanagere Over 10 Crore Burial Ground Dispute

ಹೆತ್ತವರ ಸಮಾಧಿಯನ್ನೂ ಬಿಡದೆ ಧ್ವಂಸಗೊಳಿಸಿ ವಿಕೃತಿImage Credit source: Tv9 Kannada

ದಾವಣಗೆರೆ, ಜುಲೈ 27: ಆಸ್ತಿ ಆಸೆಗೆ ಬಿದ್ದು ತಮ್ಮದೇ ಹೆತ್ತ ತಂದೆ-ತಾಯಿ ಮತ್ತು ಸಹೋದರನ ಸಮಾಧಿಗಳನ್ನೂ ಸೇರಿ ಸ್ಮಶಾನವನ್ನೇ ಸಂಪೂರ್ಣ ನೆಲಸಮ ಮಾಡಿ ವಿಕೃತಿ ಮೆರೆದಿರುವ ಘಟನೆ ದಾವಣಗೆರೆ ತಾಲೂಕಿನ ಆವರಗೆರೆಯಲ್ಲಿ ನಡೆದಿದೆ. 75 ವರ್ಷಗಳಿಂದ ಮಡಿವಾಳ ಸಮಾಜದವರು ಅಂತ್ಯಕ್ರಿಯೆ ಮಾಡಿಕೊಂಡು ಬಂದಿದ್ದ ಸರ್ವೆ ನಂಬರ್ 85ರಲ್ಲಿರುವ 18 ಗುಂಟೆ ಜಮೀನಲ್ಲಿದ್ದ 50ಕ್ಕೂ ಹೆಚ್ಚು ಸಮಾಧಿಗಳನ್ನು ಟ್ರ್ಯಾಕ್ಟರ್ ಬಳಸಿ ಧ್ವಂಸಗೊಳಿಸಿರೋದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 24ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋರ್ಟ್​​ ಆದೇಶ ಉಲ್ಲಂಘನೆ ಆರೋಪ

ಹಿಂದೆ ಸಣ್ಣ ಮರಿಯಪ್ಪ ಎಂಬುವರು ಈ ಜಮೀನನ್ನು ಸ್ಮಶಾನಕ್ಕಾಗಿ ನೀಡಿದ್ದರು. ನಂತರದ ದಿನಗಳಲ್ಲಿ ಸಣ್ಣ ದ್ಯಾಮಪ್ಪ ಹಾಗೂ ಯಲ್ಲಪ್ಪ ಎಂಬುವರು ಈ ಜಮೀನನ್ನು ಹೊಂದಿದ್ದರು. ಕಳೆದ ಏಳು ದಶಕಗಳಿಂದಲೂ ಮಡಿವಾಳ ಸಮುದಾಯದವರು ಇಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾ ಬಂದಿದ್ದು, ಇಲ್ಲಿ 50ಕ್ಕೂ ಅಧಿಕ ಸಮಾಧಿಗಳಿದ್ದವು. ಆದರೆ, ಸಣ್ಣ ದ್ಯಾಮಪ್ಪನ ಮಕ್ಕಳ ಕಣ್ಣು ಈ ಸ್ಮಶಾನದ ಜಾಗದ ಮೇಲೆ ಬಿದ್ದಿದ್ದೇ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿದೆ. ಎಂ.ಡಿ. ಹನುಮಂತಪ್ಪ, ನವೀನ್ ಕುಮಾರ್, ಸರೋಜಮ್ಮ ಮತ್ತು ದಾಕ್ಷಾಯಣಮ್ಮ ಎಂಬುವರು 2021 ರಲ್ಲಿ ಈ ಸ್ಮಶಾನದ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡು, ಪಾಲು ಮಾಡಿಕೊಂಡಿದ್ದರು. ಈ ಅಕ್ರಮದ ವಿರುದ್ಧ ಮಡಿವಾಳ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ್ದ ಕೋರ್ಟ್, ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ, ಆಸ್ತಿ ಆಸೆಗೆ ಬಿದ್ದ ಇವರು ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿದ್ದಾರೆ. ಜೂನ್ 24ರಂದು ಟ್ರ್ಯಾಕ್ಟರ್ ಮೂಲಕ ಇಡೀ ಸ್ಮಶಾನವನ್ನು ಧ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ: ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್​ನಲ್ಲಿ ತಂದ ಮಕ್ಕಳು! ಎಫ್​ಐಆರ್ ದಾಖಲು

ಸ್ಮಶಾನದ ಜಾಗದ ಮೇಲೆ ಕಣ್ಣುಬಿದ್ದಿದ್ಯಾಕೆ?

ಸ್ಮಶಾನ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಜಾಗಕ್ಕೆ ಬೆಲೆ ಬಂದಿರೋದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎನ್ನಲಾಗ್ತಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಈ ಜಾಗ ಕನಿಷ್ಟ ಹತ್ತು ಕೋಟಿ ರೂಪಾಯಿ ಬೆಲೆ ಬಾಳಬಹುದಾಗಿರುವ ಕಾರಣ ಸ್ಮಶಾನ ಧ್ವಂಸಗೊಳಿಸಲಾಗಿದೆ. 75 ವರ್ಷಗಳಿಂದ ನಮ್ಮ ಪೂರ್ವಜರನ್ನ ಇಲ್ಲಿ ಮಣ್ಣು ಮಾಡ್ತಿದ್ದೀವಿ. ಕೋರ್ಟ್ ಆರ್ಡರ್ ತಂದಿದ್ದರೂ ನಮಗೆ ರಕ್ಷಣೆ ಸಿಕ್ಕಿಲ್ಲ. ಆಸ್ತಿ ಆಸೆಗಾಗಿ ಹೆತ್ತವರ ಸಮಾಧಿಯನ್ನೇ ನೆಲಸಮ ಮಾಡಿದ ಇವರಿಗೆ ಶಿಕ್ಷೆಯಾಗಲೇಬೇಕು. ಈ ಸಂಬಂಧ ಪೊಲೀಸರ ಬಳಿಗೆ ಹೋದರೂ ಪ್ರಯೋಜನವಾಗಿಲ್ಲ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಜಾರು ಬಂಡಿ ಆಟ ಆಡಲು ಕೋತಿಗಳಲ್ಲಿ ಪೈಪೋಟಿ, ವೈರಲ್‌ ಆಯ್ತು ದೃಶ್ಯ – Kannada News | Competition between monkeys in a slide game

ಕೋತಿಗಳು (monkey) ಚೇಷ್ಟೆ ಮಾಡುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಈ ಕೋತಿಗಳ ಕಪಿ ಚೇಷ್ಟೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಕೋತಿಗಳು ಜಾರುಬಂಡಿ ಆಟ ಆಡುತ್ತಿವೆ. ಆದರೆ ನಾನು ಮೊದಲು ಎಂಬಂತೆ ಕೋತಿಗಳೆಲ್ಲವು ಪೈಪೋಟಿಗೆ ಇಳಿದಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಈ ಕ್ಲಿಪಿಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹ್ಯೂಮರ್‌ ಅನಿಮಲ್‌ (humor animal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕ್ಲಿಪ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪಾರ್ಕ್ ನಂತಿರುವ ಪ್ರದೇಶದಲ್ಲಿ ಕೋತಿಗಳು ಜಾರು ಬಂಡಿ ಆಟ ಆಡುತ್ತಿದೆ. ಈ ಜಾರಬಂಡಿಯಲ್ಲಿ ನೇತಾಡುತ್ತಾ ಪೈಪೋಟಿಗೆ ಇಳಿದಿರುವ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರಿ ಕೋತಿಯ ಬಾಯಲ್ಲಿದ್ದ ಆಹಾರವನ್ನು ಕಸಿದು ತಿಂದ ಕೋತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಕ್ಯೂಟ್ ಎಂದಿದ್ದಾರೆ. ಇನ್ನೊಬ್ಬರು, ಇದು ಕೋತಿಗಳು ಸಾರ್ ಕೋತಿಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ಆಟದಲ್ಲಿ ಪುಟಾಣಿಗಳನ್ನೇ ಮೀರಿಸುವಂತಿದೆ ಈ ಕೋತಿಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ಮಾಡುವಂತಿಲ್ಲ: ಸಿಜೆಪಿ ಪ್ರತಿಭಟನೆ ವೇಳೆ ಪೊಲೀಸ್ ಕ್ರಮಕ್ಕೆ ಸುಪ್ರೀಂ ಅಸಮಾಧಾನ – Kannada News | Supreme Court: Peaceful Protests are a Right, Not Justification for Police Lathi charge

ನವದೆಹಲಿ, ಜುಲೈ 27: ಕಳೆದ ವಾರ ನೀಟ್(NEET) ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಸದಸ್ಯರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್‌ ಪ್ರಕರಣವನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠವು ಈ ಕುರಿತು ಪ್ರಮುಖ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಸಂವಿಧಾನದ ಅಡಿಯಲ್ಲಿ ಪ್ರಜೆಗಳಿಗೆ ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಶಾಂತಿಯುತ ಆಂದೋಲನ ನಡೆಯುತ್ತಿರುವಾಗ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಸ್ಪಷ್ಟಪಡಿಸಿದರು.

ಪೊಲೀಸರ ಕಡೆಯಿಂದ ಮಿತಿಮೀರಿದ ಬಲಪ್ರಯೋಗ ನಡೆದಿದ್ದರೆ ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಪ್ರತಿಭಟನೆಗಳನ್ನು ನಿರ್ವಹಿಸುವಾಗ ಶಿಸ್ತು ಕಾಯ್ದುಕೊಳ್ಳಲು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಪೊಲೀಸ್ ಶಿಷ್ಟಾಚಾರ ಜಾರಿಗೆ ತರುವ ಅಗತ್ಯವಿದೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳನ್ನು ಪ್ರತಿನಿಧಿಸುವ ವಕೀಲರಿಗೂ ವಿಚಾರಣೆಯಲ್ಲಿ ಭಾಗವಹಿಸಲು ಪೀಠ ಅವಕಾಶ ನೀಡಿತು. “ವಿದ್ಯಾರ್ಥಿಗಳಾಗಲಿ ಅಥವಾ ಪೊಲೀಸರಾಗಲಿ, ಯಾರಿಗೇ ಗಾಯಗಳಾದರೂ ಅದು ಸಮಾನ ಕಾಳಜಿಯ ವಿಷಯವಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ರಕ್ಷಣೆಗೆ ಸಾಕಷ್ಟು ಹೆಲ್ಮೆಟ್ ಹಾಗೂ ಉಪಕರಣಗಳನ್ನು ಏಕೆ ಒದಗಿಸಿಲ್ಲ ಎಂದು ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಲಾಗುವುದು” ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ತಿಳಿಸಿದರು.

ನೀಟ್-ಯುಜಿ 2026 ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ ಹಾಗೂ ಸಾವಿರಾರು ವಿದ್ಯಾರ್ಥಿಗಳು ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಾರಗಳ ಹಿಂದೆ ಪೊಲೀಸರು ನಡೆಸಿದ ಬಲಪ್ರಯೋಗ ಹಾಗೂ ಲಾಠಿಚಾರ್ಜ್‌ಗೆ ಹಲವು ವಿದ್ಯಾರ್ಥಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದರು.

ಮತ್ತಷ್ಟು ಓದಿ: ನೀಟ್ ಚಳವಳಿಯ ಪ್ರೇರಣೆ: ಈಗ ‘E20 ಜನತಾ ಪಕ್ಷ’ ಹುಟ್ಟು, 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆಯನ್ನು ತೆರವುಗೊಳಿಸುವ ವೇಳೆ ದೆಹಲಿ ಪೊಲೀಸರು ಬಲಪ್ರಯೋಗ ಮಾಡಿದ್ದರು. ಈ ವೇಳೆ ಹಲವು ವಿದ್ಯಾರ್ಥಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದರು. ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈಗಾಗಲೇ ರಾಜೀನಾಮೆ ನೀಡಿದ್ದು, ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026’ ಅನ್ನು ಲೋಕಸಭೆಯಲ್ಲಿ ಮಂಡಿಸಲಿದೆ.

ಈ ಪ್ರತಿಭಟನೆಗಳ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು ಹಾಗೂ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026’ ಅನ್ನು ಮಂಡನೆಯಾಗಿದೆ. ಪ್ರಸ್ತುತ ಪ್ರತಿಭಟನೆ ಮುಕ್ತಾಯಗೊಂಡಿದ್ದರೂ, ಪೊಲೀಸರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs SL: ಟೀಮ್ ಇಂಡಿಯಾದಿಂದ ಮೂವರು ಔಟ್! – Kannada News | IND vs SL: Injury Blows Rock India Ahead of Sri Lanka Tests

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿರುವುದು. ಅಂದರೆ ಕೆಲ ಪ್ರಮುಖ ಆಟಗಾರರು ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಸೂಕ್ತ ತಂಡವನ್ನು ಪ್ರಕಟಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೂರು ಆಟಗಾರರು ಔಟ್:

ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಮೂವರು ಆಟಗಾರರು ಹೊರಗುಳಿದಿದ್ದಾರೆ. ಈ ಮೂವರು ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ.

  • ಹರ್ಷಿತ್ ರಾಣಾ (ವೇಗದ ಬೌಲರ್): ಇಂಗ್ಲೆಂಡ್ ಪ್ರವಾಸದ ವೇಳೆ ಗಂಭೀರವಾದ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹರ್ಷಿತ್ ರಾಣಾ, ಶ್ರೀಲಂಕಾ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
  • ನಿತೀಶ್ ಕುಮಾರ್ ರೆಡ್ಡಿ (ಆಲ್​ರೌಂಡರ್): ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಹ್ಯಾಮ್​ಸ್ಟ್ರಿಂಗ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಆಯ್ಕೆಗೆ ಲಭ್ಯರಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
  • ವಾಷಿಂಗ್ಟನ್ ಸುಂದರ್ (ಸ್ಪಿನ್ ಆಲ್​ರೌಂಡರ್): ಇಂಗ್ಲೆಂಡ್ ಪ್ರವಾಸದಲ್ಲಿ ಕಾಲಿನ ಗಾಯಕ್ಕೆ ಒಳಗಾಗಿದ್ದ ಸುಂದರ್, ಆಗಸ್ಟ್ 15 ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.

ವಾಷಿಂಗ್ಟನ್ ಸುಂದರ್ ಎರಡನೇ ಟೆಸ್ಟ್‌ಗೆ ಲಭ್ಯರಿರುತ್ತಾರೆಯೇ ಇಲ್ಲವೇ ಎಂಬುದು ಅವರ ಚೇತರಿಕೆಯ ವೇಗದ ಮೇಲೆ ನಿರ್ಧಾರವಾಗಲಿದೆ. ಇವರ ಅನುಪಸ್ಥಿತಿಯಿಂದಾಗಿ ದೇಶಿ ಕ್ರಿಕೆಟ್ ತಾರೆ ಸರಾಂಶ್​ ಜೈನ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಭಾರತ ಮತ್ತು ಶ್ರೀಲಂಕಾ ಸರಣಿ ವೇಳಾಪಟ್ಟಿ:

ಆಗಸ್ಟ್ 4 ರಂದು ಕೊಲಂಬೋ ತಲುಪಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಸ್ಥಳೀಯ ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಸುದೀರ್ಘ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ 2 ಟೆಸ್ಟ್ ಮ್ಯಾಚ್​ಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ ಪಂದ್ಯದ ವಿವರ ಕ್ರೀಡಾಂಗಣ
ಆಗಸ್ಟ್ 7 – 10, 2026 4 ದಿನಗಳ ಅಭ್ಯಾಸ ಪಂದ್ಯ ಎನ್‌ಸಿಸಿ ಮೈದಾನ, ಕೊಲಂಬೋ
ಆಗಸ್ಟ್ 15 – 19, 2026 ಮೊದಲನೇ ಟೆಸ್ಟ್ ಪಂದ್ಯ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ
ಆಗಸ್ಟ್ 23 – 27, 2026 ಎರಡನೇ ಟೆಸ್ಟ್ ಪಂದ್ಯ ಎಸ್‌ಎಸ್‌ಸಿ ಮೈದಾನ, ಕೊಲಂಬೋ

ಇದನ್ನೂ ಓದಿ: ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ!

ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ಮ್ಯಾಚ್​ಗಳ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 26 ರಿಂದ ಶುರುವಾಗಲಿದ್ದು,  3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ.

Source link

ಚಿತ್ರಮಂದಿರಗಳಲ್ಲಿ ‘ಕರಾವಳಿ’ ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಬಿ ಶೆಟ್ಟಿ ಖುಷ್

‘ಕರಾವಳಿ’ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ನಟ ರಾಜ್ ಬಿ. ಶೆಟ್ಟಿ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಸಂಭ್ರಮವನ್ನು ಕಣ್ಣಾರೆ ಕಂಡಿರುವ ಅವರು, ಸಿನಿಮಾವನ್ನು ಇಷ್ಟಪಟ್ಟು ಬೆಂಬಲಿಸುತ್ತಿರುವ ಕನ್ನಡಿಗರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿವಾದಗಳನ್ನೆಲ್ಲ ಬದಿಗೊತ್ತಿ ಚಿತ್ರವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸುತ್ತಿರುವುದು ಇಡೀ ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿದೆ.

ಕರಾವಳಿ’ ಸಿನಿಮಾ ಗಳಿಕೆ ಕೇವಲ ಮೂರೇ ದಿನಗಳಲ್ಲಿ ನಾಲ್ಕು ಕೋಟಿ ರೂಪಾಯಿಯ ಸಮೀಪಕ್ಕೆ ಬಂದು ತಲುಪಿದೆ. ವೀಕೆಂಡ್‌ನ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡಿರುವ ಚಿತ್ರದ ಒಟ್ಟು ಇಂಡಿಯಾ ಗ್ರಾಸ್ ಕಲೆಕ್ಷನ್ ಬರೋಬ್ಬರಿ 3.88 ಕೋಟಿ ರೂಪಾಯಿ ದಾಟಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರ ಅವರ ಅದ್ಭುತ ನಟನೆಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version