Headlines

ಮಾರಿ ಹಬ್ಬಕ್ಕೆಂದು ಹೋದಾತ ಸಿಕ್ಕಿದ್ದು ಹೆಣವಾಗಿ: ಬರ್ಬರವಾಗಿ ಕೊಂದು ಶವ ಸುಟ್ಟರಾ ದುಷ್ಟರು? – Kannada News | Burned Body of Man Found in Davanagere; Family Suspect Murder

ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ ದಾವಣಗೆರೆ, ಜನವರಿ 16: ಹೋರಿ ಹಬ್ಬಕ್ಕೆಂದು ತೆರಳಿದ್ದ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪ ನಡೆದಿದೆ. ಹೋಟೆಲ್​​ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಬೈರನಹಳ್ಳಿ ಗ್ರಾಮದ ಚೇತನ್ (31) ಮೃತ ವ್ಯಕ್ತಿಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಯುವಕನ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. 10 ವರ್ಷಗಳಿಂದ ಬೆಂಗಳೂರಿನ ಹೋಟೇಲ್​​ನಲ್ಲಿ ಅಡುಗೆ…

Read More

ರಾಮನಗರ: ಹಲವು ಜಿಲ್ಲೆಯ ಪೊಲೀಸರ‌ ನಿದ್ದೆಗೆಡಿಸಿದ್ದ ಅಂತಾರಾಜ್ಯ ಬೈಕ್​​​​ ಕಳ್ಳರ ಬಂಧನ – Kannada News | Ramanagara Police Arrest Inter State Vehicle Thieves, Recover Rs 50 Lakh Stolen Goods

ಬಂಧಿತರಿಂದ ವಶಕ್ಕೆ ಪಡೆದಿರುವ ವಾಹನಗಳುImage Credit source: tv9 kannada ರಾಮನಗರ, ಮಾರ್ಚ್​ 02: ಅವರಿಬ್ಬರು ಖತರ್ನಾಕ್ ಕಳ್ಳರು. ಹಲವು ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿದ್ದರು. ಸಿಕ್ಕಸಿಕ್ಕ ಕಡೆಗಳಲ್ಲಿ ವಾಹನಗಳ ಕಳ್ಳತನ (vehicle theft) ಮಾಡುವುದೇ ಇವರ ಕಾಯಕ. ಹೀಗೆ ಕದ್ದ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ, ಇಂಜನ್ ಹಾಗೂ ಚಾರ್ಸಿ ನಂಬರ್ ನಕಲು ಮಾಡಿ ಕಡಿಮೆ ಬೆಲೆಗೆ ವಾಹನಗಳನ್ನ ಮಾರಾಟ ಮಾಡುತ್ತಿದ್ದರು. ಆದರೆ ಕೊನೆಗೂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ. ಬೈಕ್​, ವಾಹನ ಸೇರಿದಂತೆ…

Read More

ಈ ಕೆಲವು ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು, ಕೈಯಲ್ಲಿ ಒಗೆದರೆ ಉತ್ತಮ – Kannada News | These are some clothes that should never be washed in the washing machine

ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರಿಗೆ ಮನೆಕೆಲಸಗಳನ್ನು ಮಾಡುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಈ ಬಟ್ಟೆ ಒಗೆಯುವುದೆಂದರೆ ಹಲವರಿಗೆ ತಲೆಬಿಸಿ. ಇದಕ್ಕಾಗಿ ಹೆಚ್ಚಿನವರು ಎಲ್ಲಾ ಬಟ್ಟೆಗಳನ್ನು ಸಹ ಒಮ್ಮೆಲೇ ವಾಷಿಂಗ್‌ ಮಷಿನ್‌ನಲ್ಲಿ (washing machine) ತೊಳೆದುಬಿಡುತ್ತಾರೆ. ಇದರಿಂದ ಕೆಲಸ ಸುಲಭವಾಗುತ್ತದೆ, ಸಮಯ ಉಳಿತಾಯವಾಗುತ್ತದೆ ನಿಜ. ಆದ್ರೆ ಎಲ್ಲಾ ರೀತಿಯ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು ಸೂಕ್ತವಲ್ಲ. ಹೌದು ಕೆಲವೊಂದು ಬಟ್ಟೆಗಳನ್ನು ಮಷಿನ್‌ನಲ್ಲಿ ವಾಶ್‌ ಮಾಡಿದಾಗ ಅವುಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಬಟ್ಟೆಗಳನ್ನು ಕೈಯಲ್ಲಿ…

Read More

ಬಿಸಿಸಿಐ ಮೇಲೆ ವರ್ಣ ತಾರತಮ್ಯ ಆರೋಪ; ಕಾಮೆಂಟ್ರಿಗೆ ಶಿವರಾಮಕೃಷ್ಣನ್ ವಿದಾಯ

2026 ರ ಐಪಿಎಲ್ ಆರಂಭಕ್ಕೆ ಸರಿಯಾಗಿ 8 ದಿನಗಳು ಬಾಕಿ ಉಳಿದಿವೆ. ಈ ಲೀಗ್​ಗಾಗಿ ಬಿಸಿಸಿಐ ಕೂಡ ಸರ್ವ ತಯಾರಿ ಮಾಡಿಕೊಂಡಿದೆ. ಆದರೆ ಇದರ ನಡುವೆ ಬಿಸಿಸಿಐ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ ಮೇಲೆ ವರ್ಣ ತಾರತಮ್ಯದಂತಹ ಗಂಭೀರ ಆರೋಪವನ್ನು ಹೊರಿಸಿರುವ ಟೀಂ ಇಂಡಿಯಾದ ಲೆಜೆಂಡರಿ ಆಟಗಾರರೊಬ್ಬರು ಕಾಮೆಂಟರಿ ಪ್ಯಾನಲ್​ಗೆ ನಿವೃತ್ತಿ ಘೋಷಿಸಿದ್ದಾರೆ. 1983 ರಿಂದ 1987 ರ ನಡುವೆ ಟೀಂ ಇಂಡಿಯಾ ಪರ ಆಡಿದ್ದ ತಮಿಳುನಾಡು ಮೂಲದ ಲಕ್ಷ್ಮಣ್…

Read More

ಬೂದಿ ಮುಚ್ಚಿದ ಕೆಂಡದಂತಾಗಿದೆ ಭಟ್ಕಳ, ಮೂರಿನ್ ಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಸಮರ್ಥಿಸಿಕೊಂಡ ಮುಸ್ಲಿಂ ಮುಖಂಡ – Kannada News | Bhatkal Murin Katte Row: Muslim Leader Talks about Why opposed

ಕಾರವಾರ, (ಮೇ 25): ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮೂರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮೂರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ…

Read More

ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ – Kannada News | Gilli Reflects on Bigg Boss Journey: From Unexpected Public Love to Celebrity Endorsements

ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ, ಬಿಗ್ ಬಾಸ್ ಮನೆಯೊಳಗಿನ ಅನುಭವಗಳ ಬಗ್ಗೆ ಹಂಚಿಕೊಳ್ಳುವ ವೇಳೆ ದರ್ಶನ ಅವರ ಬಗ್ಗೆಯೂ ಅಚ್ಚರಿಯ ವಿಚಾರಗಳನ್ನು ಹೇಳಿದ್ದಾರೆ.  ಡೆವಿಲ್ ಚಿತ್ರೀಕರಣದ ವೇಳೆ ಡಿ ಬಾಸ್ ದರ್ಶನ್ ಅವರನ್ನು ಭೇಟಿ ಮಾಡಿದ್ದ ಘಟನೆಯನ್ನು ಗಿಲ್ಲಿ ಟಿವಿ9 ಕನ್ನಡ ಜತೆಗೆ ಹಂಚಿಕೊಂಡಿದ್ದಾರೆ. ‘ದರ್ಶನ್ ಅವರು ನನ್ನನ್ನು ಕರೆದು ಹಾಸ್ಯ ಪ್ರಜ್ಞೆಯನ್ನು ಮೆಚ್ಚಿ, ನೀವು ಕಾಮಿಡಿ ಎಲ್ಲಾ ಸಕ್ಕತ್ತಾಗಿ ಮಾಡ್ತೀರಾ ಎಂದು ಹೇಳಿದ್ದರು. ದರ್ಶನ ಜತೆಗೆ ಈ ಸಿನಿಮಾದಲ್ಲಿ ನಟಿಸಿರುವುದು ನನಗೆ ತುಂಬಾ…

Read More

‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ – Kannada News | Nalapad Speaks Out: ED Raid Timed to Prevent Father N.A. Harriss Ministerial Position

ಬೆಂಗಳೂರು, ಏ.21: ನಲಪಾಡ್ ನಿವಾಸದ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಯ ಕುರಿತು ಮೊಹಮ್ಮದ್ ಹಾರಿಸ್ ನಲಪಾಡ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ದಾಳಿ ತಮ್ಮ ತಂದೆ ಎನ್.ಎ. ಹಾರಿಸ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಾಳಿಯು ತಮ್ಮ ಮತ್ತು ತಮ್ಮ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ತಮ್ಮ ತಂದೆ ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೊಹಮ್ಮದ್…

Read More

ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್‌ಗೆ ಬಂದು ‘ಧುರಂಧರ್ 2’ ನೋಡಿದ ಆರ್. ಮಾಧವನ್

ಬಾಲಿವುಡ್‌ನ ಖ್ಯಾತ ನಟ ಆರ್. ಮಾಧವನ್ ಅವರು ಈಗ ‘ಧುರಂಧರ್: ದಿ ರಿವೇಂಜ್’ (Dhurandhar The Revenge) ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಖುದ್ದಾಗಿ ನೋಡಲು ಮಾಧವನ್ (R Madhavan) ಅವರು ಯಾರಿಗೂ ಗೊತ್ತಾಗದಂತೆ ಮುಂಬೈನ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರು ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರೇಕ್ಷಕರಂತೆ ಯಾರಿಗೂ ಗುರುತು ಸಿಗದ ರೀತಿಯಲ್ಲಿ ಕುಳಿತು…

Read More

ಉಪ್ಪಿ ಮಕ್ಕಳು ಹೇಗಿದ್ದಾರೆ ನೋಡಿ; ಮಿಂಚಿದ ಆಯುಷ್-ಐಶ್ವರ್ಯಾ

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ, ಯುವ ನಟ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥವು ಇತ್ತೀಚೆಗೆ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದ ಸುಂದರ ಕ್ಷಣಕ್ಕೆ ಇಡೀ ಉಪ್ಪಿ ಕುಟುಂಬ ಸಾಕ್ಷಿಯಾಗಿದೆ. ಈ ಅಪರೂಪದ ಕೌಟುಂಬಿಕ ಸಮಾರಂಭದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿ ಜೊತೆಯಾಗಿ ಭಾಗವಹಿಸಿದ್ದರು. ಚಿತ್ರದಲ್ಲಿರುವಂತೆ ಇಡೀ ಕುಟುಂಬವು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದು, ನಿಶ್ಚಿತಾರ್ಥದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಬಹುದು. ವಿಶೇಷವೆಂದರೆ, ಉಪೇಂದ್ರ ಅವರ ಮಗ ಆಯುಷ್ ಹಾಗೂ…

Read More

ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ

ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಇತ್ತೀಚೆಗೆ ತಾವು ಹಾಕುವ ಉಡುಗೆ ಮೂಲಕ ಸುದ್ದಿಯಲ್ಲಿದ್ದರು. ಸಾಮಾನ್ಯವಾಗಿ ತಮಿಳುನಾಡು ರಾಜಕಾರಣಿಗಳು ಧರಿಸುವ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ಪಂಚೆ ಬದಲಿಗೆ, ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಕೋಟ್-ಸೂಟ್ ಧರಿಸಿ ಗಮನ ಸೆಳೆದಿದ್ದರು. ಆ ಬಳಿಕ ನಡೆದ ಎಲ್ಲಾ ಸರ್ಕಾರಿ ಸಭೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅವರು ಇದೇ ಶೈಲಿಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಂಟರ್ನೆಟ್‌ನಲ್ಲಿ ಭಾರಿ…

Read More