Headlines

ಬಳ್ಳಾರಿಯಲ್ಲಿ ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ

ಬಳ್ಳಾರಿ, ಮೇ 21: ವಿವಿಧ ಏರಿಯಾಗಳಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸತ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧಿನಗರ, ಎಪಿಎಂಸಿ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 8 ಮಹಿಳಾ ಸಂತ್ರಸ್ತೆಯರನ್ನು…

Read More

ಭಾರತದ ಇಬ್ಬರು ಗೇಮಿಂಗ್ ಸ್ಟಾರ್​ಗಳು MOBA Legends 5v5 ಪ್ರವೇಶ; ಗೇಮಿಂಗ್ ಲೋಕದಲ್ಲಿ ಹೊಸ ಸಂಚಲನ – Kannada News | Rai Star & Gyan Gaming Join MOBA Legends 5v5: Indian Esports Strategic Shift

ಭಾರತೀಯ ಈ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಕೆಲವು ನಿರ್ಧಾರಗಳು ಕೇವಲ ಸ್ಟ್ರಾಟಿಜಿಕ್ ಇರುತ್ತವೆ ಎಂದಲ್ಲ, ಅವು ಒಳಗಿನಿಂದ ಹುಟ್ಟುವ ಎಮೋಶನ್ಸ್​ಗಳ ಪ್ರತಿಬಿಂಬವಾಗಿರುತ್ತವೆ. ಭಾರತೀಯ ಗೇಮಿಂಗ್ ಸ್ಟಾರ್​ಗಳೆನಿಸಿರುವ ರೈಸ್ಟಾರ್ (Rai Star) ಮತ್ತು ಗ್ಯಾನ್ ಗೇಮಿಂಗ್ (Gyan Gaming) ಅವರುಗಳು MOBA Legends 5v5 ಗೆ ಪ್ರವೇಶಿಸಿರುವುದು ಅಂತಹದ್ದೇ ಒಂದು ಕ್ಷಣ. ಇವರು ಹಿಂದೆ ಆಡುತ್ತಿದ್ದ ಗೇಮ್​ಗಳಿಂದ ಬಹಳ ಫೇಮಸ್ ಆದವರು. ಈಗ ಇವರ ಹೊಸ ಗೇಮ್ ಆಯ್ಕೆಯು ಕೇವಲ ಒಂದು ಘೋಷಣೆ ಮಾತ್ರವಲ್ಲ, ದೀರ್ಘ ಪ್ರಯಾಣದ ದಿಕ್ಕು ಬದಲಾವಣೆ. ಡಿಸೆಂಬರ್…

Read More

ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ: ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್​​ – Kannada News | Fake Nagasadhus Deceive Man and Steal Ring in Bengaluru

ಬೆಂಗಳೂರು, ಜೂನ್​​ 22: ನಕಲಿ ನಾಗಸಾಧುಗಳ ಸೋಗಿನಲ್ಲಿ ಬಂದ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಆರ್‌ಪಿಸಿ ಲೇಔಟ್ ನಿವಾಸಿ ಅರುಣ್ ಶ್ರೀಪಾದ್ ಎಂಬುವರು ಇಂತಹದೊಂದು ವಂಚನೆಗೆ ಒಳಗಾಗಿದ್ದಾರೆ. ಸಾಧುಗಳ ವೇಷದಲ್ಲಿದ್ದ ಕೆಲ ವ್ಯಕ್ತಿಗಳು ಅರುಣ್ ಶ್ರೀಪಾದ್ ಅವರ ಬಳಿ ತೆರಳಿ, ಕಾಶಿ ಮತ್ತು ಗಂಗಾ ಸ್ನಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದ್ದಾರೆ. ಧಾರ್ಮಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡು, ಅವರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ಆಶೀರ್ವಾದ ಮಾಡುವ ಸೋಗಿನಲ್ಲಿ ಅರುಣ್ ಶ್ರೀಪಾದ್…

Read More

94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ – Kannada News | Singeetam Srinivasa Rao directing new movie in his age of 94

ಸಿಂಗೀತಂ ಶ್ರೀನಿವಾಸ್, ಭಾರತದ ಲಿಜೆಂಡರಿ ಸಿನಿಮಾ ನಿರ್ದೇಶಕರುಗಳಲ್ಲಿ (Director) ಒಬ್ಬರು. ಅವರು ನಿರ್ದೇಶಿಸಿರುವ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲಿಯೂ ಸಿನಿಮಾಗಳನ್ನು ನಿರ್ದೇಶಿಸಿರುವುದು ಮಾತ್ರವೇ ಅಲ್ಲ ಸುಮಾರು 20ಕ್ಕೂ ಹೆಚ್ಚು ಆಲ್​​ಟೈಂ ಕಲ್ಟ್ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿದ ಅತ್ಯದ್ಭುತ ನಿರ್ದೇಶಕ ಅವರು. ಅಪ್ಪಟ ಸಿನಿಮಾ ಪ್ರೇಮಿ ಆಗಿರುವ ಸಿಂಗೀತಂ ಶ್ರೀನಿವಾಸ್ ವಯಸ್ಸು ಈಗ 94 ವರ್ಷ. ಈ ವಯಸ್ಸಿನಲ್ಲೂ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂದಾಗಿರುವುದು…

Read More

Silver Shivling Benefits: ಬೆಳ್ಳಿಯ ಶಿವಲಿಂಗ ಪೂಜಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳಿವು – Kannada News | Silver Shivling Benefits: Strengthen Venus and Moon, Attract Wealth and Peace

ನೀವು ಶಿವನ ಭಕ್ತರಾಗಿದ್ದರೆ, ನಿಮ್ಮ ಶುಕ್ರ ಮತ್ತು ಚಂದ್ರನನ್ನು ಬಲಪಡಿಸಲು ಯಾವ ಶಿವಲಿಂಗವನ್ನು ಮನೆಗೆ ತರಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಬೆಳ್ಳಿಯ ಶಿವಲಿಂಗವು ನಿಮ್ಮ ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಬೆಳ್ಳಿ ಶುಕ್ರ ಮತ್ತು ಚಂದ್ರನನ್ನು ಸಂಕೇತಿಸುತ್ತದೆ. ಬೆಳ್ಳಿಯ ಶಿವಲಿಂಗವು ಈ ಎರಡು ಶುಭ ಗ್ರಹಗಳ ಶಕ್ತಿಯನ್ನು ಸಂಕೇತಿಸುತ್ತದೆ. ನಿಯಮಿತ ಪೂಜೆಯು ಆಧ್ಯಾತ್ಮಿಕ ಪ್ರಯೋಜನಗಳನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಶಾಂತಿಯಂತಹ ಲೌಕಿಕ ಪ್ರಯೋಜನಗಳನ್ನು ಸಹ ನೀಡುತ್ತದೆ. ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದಾಗುವ ಪ್ರಯೋಜನಗಳು:…

Read More

Video: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ – Kannada News | A little girl scolding her parents in her own language

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ (daughter) ತುಂಬಾನೇ ಇಷ್ಟ. ಮನೆಯಲ್ಲಿ ಹೆಣ್ಣು ಮಗುವಿದ್ದರೆ ತಾಯಿಗಿಂತ ತಂದೆಯನ್ನೇ ಹೆಚ್ಚು ಹಚ್ಚಿಕೊಂಡು ಬಿಡುವುದಿದೆ. ಇದೀಗ ಪುಟ್ಟ ಮಗುವೊಂದು ಹೆತ್ತವರ ಮೇಲೆ ಕೋಪಗೊಂಡಂತಿದೆ. ಹೀಗಾಗಿ ಅಪ್ಪನ ಮುಂದೆ ನಿಂತು ತನ್ನದೇ ಭಾಷೆಯಲ್ಲಿ ಬೈಯುತ್ತಿದ್ದು, ಈ ಮುದ್ದಾದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಪುಟಾಣಿಯ ಕ್ಯೂಟ್ ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ. Alpha Culture ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಮುದ್ದಾದ ಬೈಗುಳದ ದೃಶ್ಯ…

Read More

ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ – Kannada News | Apollo Hyderabad: 24/7 Healthcare and Future Hospital Vision from Int’l Health Dialogue

ಹೈದರಾಬಾದ್, ಫೆಬ್ರುವರಿ 01: ಅಪೋಲೋ ಹಾಸ್ಪಿಟಲ್ಸ್ (Apollo Hospitals)​​ ವತಿಯಿಂದ ಹೈದರಾಬಾದ್​​​ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ (International Health Dialogue)​​ ಸಂವಾದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವರ್ಷದ 365 ದಿನವೂ ತನ್ನ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಭವಿಷ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಅಪೋಲೋ ಘೋಷಿಸಿದೆ. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಹಾಗೂ ಆನ್‌ಲೈನ್ ಮೂಲಕ 27,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು…

Read More

ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ – Kannada News | Shivarajkumar Political Entry? Will He Follow Thalapathy Vijay’s Path? Answer Revealed

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮದೇ ಆದ ‘ಟಿವಿಕೆ’ (TVK) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲಿ ಹೊಸ ಸುನಾಮಿ ಎಬ್ಬಿಸಿದ್ದಾರೆ. ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಚುನಾವಣಾ ರಾಜಕೀಯಕ್ಕೆ ಬರಬೇಕು ಎಂಬ ಒತ್ತಾಯಗಳು ಮತ್ತೆ ಕೇಳಿಬರುತ್ತಿವೆ. ಆದರೆ, ಶಿವಣ್ಣ ಅವರು ಈ ವಿಷಯದಲ್ಲಿ ಈ ಮೊದಲೇ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದರು. ಆಂಧ್ರ ಪ್ರದೇಶದಲ್ಲಿ…

Read More

ಬಿಜೆಪಿ-ಕಾಂಗ್ರೆಸ್​​ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ – Kannada News | Udupi Flag Row: BJP Opposes Congress Complaint; DC Issues Clarification

ಉಡುಪಿ ಡಿಸಿ ನಡೆಗೆ ಪರ-ವಿರೋಧ ಚರ್ಚೆ ಉಡುಪಿ, ಜನವರಿ 21: ಶೀರೂರು ಮಠದ ಪರ್ಯಾಯ ಮಹೋತ್ವ ಹಿನ್ನೆಲೆ ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಜಿಲ್ಲಾಧಿಕಾರಿಗಳಿಂದ ಚಾಲನೆ ವಿಚಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಬಿಜೆಪಿ ಶಾಸಕ ಯಶಪಾಲ್ ಸುವರ್ಣ ನೀಡಿದ್ದ ಕೇಸರಿ ಧ್ವಜವನ್ನು ಪಡೆದಿದ್ದ ಡಿಸಿ ಸ್ವರೂಪ ಟಿ. ಕೆ. ಅದನ್ನು ತೋರಿಸುವ ಮೂಲಕ ಪರ್ಯಾಯ ಮೆರವಣಿಗೆ ಚಾಲನೆ ನೀಡಿದ್ದರು. ಇದೇ ವಿಚಾರಕ್ಕೀಗ ಉಡುಪಿ ಜಿಲ್ಲಾ ಕಾಂಗ್ರೆಸ್​​ ಸಮಿತಿ ಆಕ್ಷೇಪ ತೆಗೆದಿದೆ. ಮುಂದುವರಿದು ಮುಖ್ಯಮಂತ್ರಿಗಳಿಗೆ…

Read More

ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ

ಹಾಸನ, ಮಾರ್ಚ್​ 30: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್​ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್​ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ….

Read More