Viral Photo: ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ? – Kannada News | Why Is The Big Eyed Mystery Woman photo hanging At Bengaluru Construction Sites Viral News
ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅದರ ಮುಂದೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತ ನೋಡಿರುತ್ತೀರಿ. ಅದರಲ್ಲೂ ನೀವು ಬೆಂಗಳೂರಿನಲ್ಲಿ (Bengaluru) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಕಂಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ,…