ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ – Kannada News | When is India’s next match? Indian cricket team’ Schedule

ಭಾರತ ಮತ್ತು ಝಿಂಬಾಬ್ವೆ ನಡುವಣ ಸರಣಿ ಮುಕ್ತಾಯಗೊಂಡಿದೆ. ಮೂರು ಮ್ಯಾಚ್​ಗಳ ಈ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಭಾರತಕ್ಕೆ ಮರಳಲಿದ್ದು, ಮುಂದಿನ ತಿಂಗಳಲ್ಲಿ ಟೆಸ್ಟ್ ಸರಣಿ ಆಡಲಿದೆ. ಇದರ ಬೆನ್ನಲ್ಲೇ ಏಷ್ಯನ್ ಗೇಮ್ಸ್​ನಲ್ಲೂ ಕಣಕ್ಕಿಳಿಯಲಿದೆ. ಹಾಗಿದ್ರೆ ಭಾರತ ತಂಡದ ಮುಂದಿರುವ ಸರಣಿಗಳಾವುವು ಎಂದು ನೋಡುವುದಾದರೆ…

ಭಾರತ ತಂಡದ ಶ್ರೀಲಂಕಾ ಪ್ರವಾಸ (ಆಗಸ್ಟ್ 2026):

ಭಾರತ ತಂಡವು ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

  • ಆಗಸ್ಟ್ 15–19: 1ನೇ ಟೆಸ್ಟ್ ಪಂದ್ಯ (ಗಾಲ್ ಇಂಟರ್ನ್ಯಾಷನಲ್ ಸ್ಟೇಡಿಯಂ)
  • ಆಗಸ್ಟ್ 23–27: 2ನೇ ಟೆಸ್ಟ್ ಪಂದ್ಯ (ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್, ಕೊಲಂಬೊ)

ಏಷ್ಯನ್ ಗೇಮ್ಸ್ 2026 (ಸೆಪ್ಟೆಂಬರ್ – ಅಕ್ಟೋಬರ್ 2026):

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಭಾರತ ಕಣಕ್ಕಿಳಿಯಲಿದ್ದು, ನೇರವಾಗಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ.

  • ಸೆಪ್ಟೆಂಬರ್ 24 – ಅಕ್ಟೋಬರ್ 1: ಪುರುಷರ ಕ್ರಿಕೆಟ್ ಟೂರ್ನಮೆಂಟ್
  • ಸೆಪ್ಟೆಂಬರ್ 28: ಭಾರತ ತಂಡದ ಕ್ವಾರ್ಟರ್ ಫೈನಲ್ ಪಂದ್ಯ

ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ (ಸೆಪ್ಟೆಂಬರ್ – ಅಕ್ಟೋಬರ್ 2026):

ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಆಗಮಿಸಲಿದ್ದು, ಇಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

  • ಏಕದಿನ ಸರಣಿ ವೇಳಾಪಟ್ಟಿ:
  • ಮೊದಲ ಏಕದಿನ ಪಂದ್ಯ: ಸೆಪ್ಟೆಂಬರ್ 27 (ತಿರುವನಂತಪುರಂ)
  • ಎರಡನೇ ಏಕದಿನ ಪಂದ್ಯ: ಸೆಪ್ಟೆಂಬರ್ 30 (ಗುವಾಹಟಿ)
  • ಮೂರನೇ ಏಕದಿನ ಪಂದ್ಯ: ಅಕ್ಟೋಬರ್ 3 (ಮೊಹಾಲಿ).
  • ಟಿ20 ಸರಣಿ ವೇಳಾಪಟ್ಟಿ:
  • ಮೊದಲ ಟಿ20 ಪಂದ್ಯ: ಅಕ್ಟೋಬರ್ 6 (ಲಕ್ನೋ)
  • ಎರಡನೇ ಟಿ20 ಪಂದ್ಯ: ಅಕ್ಟೋಬರ್ 9 (ರಾಂಚಿ)
  • ಮೂರನೇ ಟಿ20 ಪಂದ್ಯ: ಅಕ್ಟೋಬರ್ 11 (ಇಂದೋರ್)
  • ನಾಲ್ಕನೇ ಟಿ20 ಪಂದ್ಯ: ಅಕ್ಟೋಬರ್ 14 (ಹೈದರಾಬಾದ್)
  • ಐಡನೇ ಟಿ20 ಪಂದ್ಯ: ಅಕ್ಟೋಬರ್ 17 (ಬೆಂಗಳೂರು).

ಇದನ್ನೂ ಓದಿ: ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ತಂಡವು 5 ಟಿ20, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳ ದೀರ್ಘ ಸರಣಿಯನ್ನು ಆಡಲಿದೆ.

Source link

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ಲೋಕಸಭೆಯಲ್ಲಿಂದು ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026’ ಮಂಡನೆ – Kannada News | India’s New Law: Stricter Penalties for Exam Paper Leaks and Malpractice to Protect Public Exams

ನವದೆಹಲಿ, ಜುಲೈ 27: ದೇಶದಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ(Question Paper leak) ಮತ್ತು ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ ಮತ್ತು ನಂಬಿಕೆಯನ್ನು ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಪರೀಕ್ಷಾ ಅಕ್ರಮಗಳ ತಡೆಗೆ ತಿದ್ದುಪಡಿ ಮಸೂದೆ 2026 ಅನ್ನು ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ(ಜುಲೈ 27) ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಇತ್ತೀಚಿನ ನೀಟ್ (NEET) ಸೇರಿದಂತೆ ಪ್ರಮುಖ ಪರೀಕ್ಷಾ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮೂಲ 2024ರ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಸೂದೆಯ ಕರಡನ್ನು ಈಗಾಗಲೇ ಸಂಸದರಿಗೆ ವಿತರಿಸಲಾಗಿದೆ. ಪರೀಕ್ಷಾ ಅಕ್ರಮ ಹಾಗೂ ಸೋರಿಕೆಯಲ್ಲಿ ಭಾಗಿಯಾದವರಿಗೆ ಪ್ರಸ್ತುತ ಇರುವ 3 ವರ್ಷಗಳ ಜೈಲು ಶಿಕ್ಷೆಯನ್ನು 5 ರಿಂದ 10 ವರ್ಷಗಳಿಗೆ ಏರಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ವಿಧಿಸುವ ಗರಿಷ್ಠ ದಂಡದ ಮೊತ್ತವನ್ನು 10 ಲಕ್ಷ ರೂ.ದಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಪರೀಕ್ಷೆ ಜವಾಬ್ದಾರಿ ಹೊತ್ತು ಕರ್ತವ್ಯಲೋಪ ಎಸಗುವ ಏಜೆನ್ಸಿಗಳಿಗೆ ವಿಧಿಸುವ ದಂಡವನ್ನು ಕೋಟಿಯಿಂದ 5 ಕೋಟಿ ರೂ. ಏರಿಸಲಾಗಿದ್ದು, ಅಂತಹ ಸಂಸ್ಥೆಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಸಂಘಟಿತ ಅಪರಾಧಕ್ಕೆ ಬ್ರೇಕ್: ಪರೀಕ್ಷಾ ಹಗರಣಗಳಲ್ಲಿ ಸಂಘಟಿತ ಅಪರಾಧವೆಂದು ಸಾಬೀತಾದರೆ 10 ಕೋಟಿ ರೂ. ವರೆಗೆ ದಂಡ ಮತ್ತು 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಎಸ್‌ಟಿಎಫ್ (STF) ಅಥವಾ ಯಾವುದೇ ಕೇಂದ್ರ ತನಿಖಾ ಸಂಸ್ಥೆಯು ಪರೀಕ್ಷಾ ಅಕ್ರಮದ ತನಿಖೆಯನ್ನು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಕಾಲಮಿತಿ ನಿಗದಿಪಡಿಸಲಾಗಿದೆ.

ಮತ್ತಷ್ಟು ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ; ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ, ಇನ್ನಷ್ಟು ತಲೆದಂಡ ಸಾಧ್ಯತೆ

ದೇಶಾದ್ಯಂತ ವಿದ್ಯಾರ್ಥಿ ಸಂಘಟನೆಗಳಿಂದ ನಡೆದ ತೀವ್ರ ಪ್ರತಿಭಟನೆಗಳು ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಪರೀಕ್ಷಾ ಹಗರಣಗಳ ಬೆನ್ನಲ್ಲೇ ಸರ್ಕಾರ ಈ ಕಠಿಣ ಕಾನೂನು ರೂಪಿಸುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಜಾಮೀನು ಸಿಗದಂತೆ ಕಠಿಣ ನಿಬಂಧನೆಗಳನ್ನು ತರಲು ಮತ್ತು ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರಿಗೆ ತಕ್ಕ ಶಾಸ್ತಿ ಮಾಡಲು ಈ ಮಸೂದೆ ಅತ್ಯಂತ ನಿರ್ಣಾಯಕವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:14 am, Mon, 27 July 26

Source link

ಬೆಳಗಾವಿ: ಪತ್ರಕರ್ತರ ಹೆಸರಲ್ಲಿ ಹಣ ಸುಲಿಗೆ ಆರೋಪ, ನಾಲ್ವರು ಯೂಟ್ಯೂಬರ್‌ಗಳ ಬಂಧನ – Kannada News | Four YouTubers Arrested in Belagavi for Alleged Extortion by Threatening Drug Case

ಬೆಳಗಾವಿ, ಜುಲೈ 27: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚವ್ಹಾಣ ಹಾಗೂ ಡೇವಿಡ್ ತಂಗೇರಾಳ ಎಂದು ಗುರುತಿಸಲಾಗಿದೆ. ಈ ಕುರಿತು ಕೊಟಬಾಗಿ ಗ್ರಾಮದ ಮೆಹಬೂಬ್ ಜಮಾದಾರ್ ನೀಡಿದ ದೂರಿನ ಆಧಾರದ ಮೇಲೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏನಿದು ಪ್ರಕರಣ?

ದೂರಿನ ಪ್ರಕಾರ, ಆರೋಪಿಗಳು ಮೆಹಬೂಬ್ ಜಮಾದಾರ್ ಅವರಿಗೆ ಮೊದಲು ಗಾಂಜಾ ಪ್ಯಾಕೆಟ್ ನೀಡಿದ್ದು, ಬಳಿಕ ಪೊಲೀಸರ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ‘ನೀವು ಗಾಂಜಾ ಮಾರಾಟ ಮಾಡುತ್ತಿದ್ದೀರಿ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದೇ ವೇಳೆ, ಗಾಂಜಾ ನೀಡಿದ ದೃಶ್ಯಗಳನ್ನು ತಾವೇ ವಿಡಿಯೊ ಚಿತ್ರೀಕರಿಸಿಕೊಂಡು, ಅದನ್ನು ಆಧಾರವನ್ನಾಗಿ ಮಾಡಿಕೊಂಡು 3 ಲಕ್ಷ ರೂ. ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಮೆಹಬೂಬ್ ಅವರಿಂದ 60 ಸಾವಿರ ರೂ. ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ.

ಹಣ ನೀಡದ ಬಳಿಕ ವಿಡಿಯೊ ಅಪ್ಲೋಡ್ ಆರೋಪ

ದೂರುದಾರರು ಹೆಚ್ಚಿನ ಹಣ ನೀಡಲು ನಿರಾಕರಿಸಿದ ನಂತರ, ಆರೋಪಿಗಳು ಚಿತ್ರೀಕರಿಸಿದ್ದ ವಿಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮೆಹಬೂಬ್ ಜಮಾದಾರ್ ಅವರು ಹುಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಳಿಯಿದ್ದ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಚಳವಳಿಯ ಪ್ರೇರಣೆ: ಈಗ ‘E20 ಜನತಾ ಪಕ್ಷ’ ಹುಟ್ಟು, 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ – Kannada News | E20 Janatha Paksha Demands 100percent Pure Petrol: Sansad Chalo on August 4

ನವದೆಹಲಿ, ಜುಲೈ 27: ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ(CJP) ನಡೆಸಿದ ಪ್ರತಿಭಟನೆಯು ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಬೆನ್ನಲ್ಲೇ, ಅದೇ ಹಾದಿಯಲ್ಲಿ ‘E20 ಜನತಾ ಪಕ್ಷ’ ಎಂಬ ನೂತನ ನಾಗರಿಕ ಹಕ್ಕುಗಳ ಚಳವಳಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಸರಬರಾಜಾಗುತ್ತಿರುವ ಶೇ. 20 ಎಥೆನಾಲ್ ಮಿಶ್ರಿತ ಇಂಧನದ (E20) ಬದಲು ಸಾರ್ವಜನಿಕರಿಗೆ ಶೇ.100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿರುವ ಈ ಸಂಘಟನೆಯು, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೆ ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುರುವಾದ ಈ ಚಳವಳಿಯು ಕೆಲವೇ ಗಂಟೆಗಳಲ್ಲಿ 25,000ಕ್ಕೂ ಹೆಚ್ಚು ಬೆಂಬಲಿಗರನ್ನು ಗಳಿಸಿದೆ. ಈ ಅಭಿಯಾನಕ್ಕೆ ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಆಗಸ್ಟ್ 4 ರಂದು ಸಂಸತ್ತಿನ ಕಡೆಗೆ ಬೃಹತ್ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ವಿಶೇಷವಾಗಿ ಹಳೆಯ ವಾಹನಗಳಲ್ಲಿ ಎಂಜಿನ್ ವೈಫಲ್ಯ ಮತ್ತು ದುರಸ್ತಿ ವೆಚ್ಚ ಹೆಚ್ಚಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.ನಾವು ಇಂಧನ ಉಚಿತವಾಗಿ ಕೇಳುತ್ತಿಲ್ಲ ಅಥವಾ ಸಬ್ಸಿಡಿ ಬಯಸುತ್ತಿಲ್ಲ. ಎಥೆನಾಲ್ ಪೆಟ್ರೋಲ್ ಅನ್ನು ಬ್ಯಾನ್ ಮಾಡಿ ಎಂದೂ ಹೇಳುತ್ತಿಲ್ಲ. ಗ್ರಾಹಕರಿಗೆ ಶೇ. 100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಅಧಿಕಾರ ಸಿಗಬೇಕು ಎಂಬುದು ಪಕ್ಷದ ಮುಖ್ಯ ಬೇಡಿಕೆಯಾಗಿದೆ.

ಮತ್ತಷ್ಟು ಓದಿ: ನೀಟ್​ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?

ಪ್ರತಿಯೊಂದು ಬಂಕ್‌ಗಳಲ್ಲಿ ಇಂಧನದ ವಿವರ, ಮೈಲೇಜ್, ಎಂಜಿನ್ ಮೇಲಾಗುವ ಪರಿಣಾಮಗಳ ಕುರಿತು ಸ್ವತಂತ್ರ ಅಧ್ಯಯನದ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಹಾಳಾಗುತ್ತಿದೆ ಎಂಬ ಕುರಿತು ಸರ್ಕಾರಕ್ಕೆ ಯಾವುದೇ ಸಮರ್ಥನೀಯ ದೂರುಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಪ್ರಸ್ತುತ ದೆಹಲಿಯಲ್ಲಿ ಸಾಮಾನ್ಯ E20 ಪೆಟ್ರೋಲ್ ಲೀಟರ್‌ಗೆ 102.12 ರೂ. ಇದ್ದರೆ, ಎಥೆನಾಲ್-ಮುಕ್ತವಾಗಿರುವ 100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಲೀಟರ್‌ಗೆ 169 ರೂ.ನಷ್ಟಿದೆ. ಇದು ಅತ್ಯಂತ ದುಬಾರಿಯಾಗಿರುವುದರಿಂದ ಸಾಮಾನ್ಯ ನಾಗರಿಕರಿಗೆ ಶುದ್ಧ ಪೆಟ್ರೋಲ್ ಸಿಗದಂತಾಗಿದೆ.

ಭಾರತ ಸರ್ಕಾರವು ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಲು ಮತ್ತು ಮಾಲಿನ್ಯ ನಿಯಂತ್ರಿಸಲು 2025-26 ರ ವೇಳೆಗೆ ಶೇ.20 ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿತ್ತು. ಆದರೆ ವಾಹನ ತಯಾರಕ ಸಂಸ್ಥೆಗಳು ಇ-20 ಇಂಧನಕ್ಕೆ ತಕ್ಕಂತೆ ಎಂಜಿನ್‌ಗಳನ್ನು ಪೂರ್ಣವಾಗಿ ನವೀಕರಿಸುವ ಮೊದಲೇ ಈ ನೀತಿ ಜಾರಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ! – Kannada News | Monkey Snatches Tourist’s Mobile at Shivagange, Returns Damaged: Video goes viral

ನೆಲಮಂಗಲ, ಜುಲೈ 27: ತಾಲೂಕಿನ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರ ಮೊಬೈಲ್ ಕಸಿದುಕೊಂಡು ಸುಮಾರು ಒಂದು ಗಂಟೆ ಕಾಲ ಸತಾಯಿಸಿದ ಕುತೂಹಲಕಾರಿ ಘಟನೆ ನಡೆದಿದೆ. ಶಿವಗಂಗೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ಬರ ಕೈಯಲ್ಲಿದ್ದ ಮೊಬೈಲ್ ಅನ್ನು ಸಡನ್ ಆಗಿ ಕಸಿದುಕೊಂಡ ಮಂಗ, ಸೀದಾ ದೇವಾಲಯದ ಗೋಪುರದ ಶಿಖರ ಏರಿ ಕುಳಿತುಕೊಂಡಿದೆ. ಮೊಬೈಲ್ ವಾಪಸ್ ಪಡೆಯಲು ಜೊತೆಯಲ್ಲಿದ್ದ ಯುವಕರು ಹರಸಾಹಸ ಪಟ್ಟಿದ್ದಾರೆ. ಒಂದು ಗಂಟೆಯ ನಂತರ ಕೊನೆಗೂ ಮಂಗ ಮೊಬೈಲ್ ಅನ್ನು ಕೆಳಗೆ ಹಾಕಿದ್ದು, ಫೋನ್ ಕೈಸೇರಿದ ಖುಷಿಯಲ್ಲಿದ್ದ ಯುವತಿಗೆ ಮೊಬೈಲ್‌ಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದ್ದನ್ನು ನೋಡಿ ಕೊಂಚ ಬೇಸರವೂ ಉಂಟಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ! – Kannada News | Laxman’s Fitness Reality Check for 15 Year Old Vaibhav Sooryavanshi

ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಕ್ಲೀನ್ ಸ್ವೀಪ್ ಗೆಲುವಿನ ಮುಖ್ಯ ರೂವಾರಿ ಯುವ ದಾಂಡಿಗ ವೈಭವ್ ಸೂರ್ಯವಂಶಿ. ಈ ಸರಣಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್​ಗೆ ಇದೀಗ ಟೀಮ್ ಇಂಡಿಯಾದ ಹಂಗಾಮಿ ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಫಿಟ್‌ನೆಸ್ ಅನ್ನು ಸುಧಾರಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆಟದ ಜೊತೆಗೆ ಫಿಟ್‌ನೆಸ್ ಮುಖ್ಯ:

ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಚ್ ಲಕ್ಷ್ಮಣ್, 15 ವರ್ಷದ ಈ ಯುವ ಪ್ರತಿಭೆಯ ಪಕ್ವತೆ ಮತ್ತು ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಆದಾಗ್ಯೂ, ಭವಿಷ್ಯದಲ್ಲಿ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದರು.

“ವೈಭವ್ ಸೂರ್ಯವಂಶಿ ತುಂಬಾ ಕಿರಿಯ ಆಟಗಾರ. ಅವರು ತಮ್ಮ ಆಟವನ್ನು ಇನ್ ಆಂಡ್ ಔಟ್ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ, ಅವರು ಪ್ರಮುಖವಾಗಿ ಗಮನ ಹರಿಸಬೇಕಾದ ಮತ್ತು ಸುಧಾರಿಸಿಕೊಳ್ಳಬೇಕಾದ ಏಕೈಕ ಕ್ಷೇತ್ರವೆಂದರೆ ಅವರ ಒಟ್ಟಾರೆ ಫಿಟ್‌ನೆಸ್.” ಎಂದು ವಿವಿಎಸ್​ ಲಕ್ಷ್ಮಣ್ ತಿಳಿಸಿದ್ದಾರೆ.

ಗಾಯದ ನಡುವೆಯೂ ಆಡುವ ಛಲ!

ಮೂರನೇ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಸಣ್ಣದಾಗಿ ಗಾಯಗೊಂಡಿದ್ದರು. ಆದರೂ ಮೈದಾನದಿಂದ ಹೊರಹೋಗಲು ನಿರಾಕರಿಸಿ, ತಂಡಕ್ಕಾಗಿ ಬ್ಯಾಟಿಂಗ್ ಮುಂದುವರಿಸಲು ಬಯಸಿದ್ದರು. ಕೊನೆಗೆ ತಂಡದ ಫಿಸಿಯೋ ಮೈದಾನಕ್ಕೆ ಬಂದು ಹಸ್ತಕ್ಷೇಪ ಮಾಡುವವರೆಗೂ ಅವರು ಮೈದಾನದಲ್ಲೇ ಇದ್ದರು. ಈ ಅವರ ಗೆಲ್ಲುವ ಛಲ ಮತ್ತು ಬದ್ಧತೆಗೆ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂತಹ ಛಲ ಒಳ್ಳೆಯದೇ. ಆದರೆ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ವೈಭವ್ ಸೂರ್ಯವಂಶಿ ತಮ್ಮ ಫಿಟ್​ನೆಸ್ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದು ವಿವಿಎಸ್​ ಲಕ್ಷ್ಮಣ್ ಹೇಳಿದ್ದಾರೆ.

ಹರಾರೆಯಲ್ಲಿ ವೈಭವ್ ಅಬ್ಬರ:

ಝಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 49 ಎಸೆತಗಳಲ್ಲಿ 81 ರನ್ (8 ಬೌಂಡರಿ, 4 ಸಿಕ್ಸರ್) ಚಚ್ಚಿದ್ದರು. ಈ ಭರ್ಜರಿ ಬ್ಯಾಟಿಂಗ್​ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 192 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಝಿಂಬಾಬ್ವೆ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್​ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 35 ರನ್​ಗಳ ಜಯ ಸಾಧಿಸಿದೆ.

ಇದನ್ನೂ ಓದಿ: ಕ್ಲೀನ್​ ಸ್ವೀಪ್​ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಇನ್ನು ಈ ಸರಣಿಯ ಮೂರು ಪಂದ್ಯಗಳಿಂದ ಒಟ್ಟು 151 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಈ ಸಿರೀಸ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ‘ಪ್ಲೇಯರ್ ಆಫ್ ದಿ ಸೀರೀಸ್’ ಎರಡೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Source link

ರಾಷ್ಟ್ರ ಪ್ರಶಸ್ತಿ ವಿವಾದ; ಇನ್ನೂ ಉತ್ತಮ ಚಿತ್ರಗಳಿದ್ದವು ಎಂಬುದನ್ನು ಒಪ್ಪಿಕೊಂಡ ಧನುಷ್ – Kannada News | Dhanush Breaks Silence On National Award Controversy For Raayan And Captain Miller

ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ನಟ ಧನುಷ್ (Dhanush) ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಿನಿಮಾಗಳ ಆಯ್ಕೆ ಬಗ್ಗೆ ಕೇಳಿಬಂದ ಟೀಕೆಗಳಿಗೆ ಅವರು ನೇರವಾಗಿಯೇ ಉತ್ತರಿಸಿದ್ದಾರೆ. ಈ ಪ್ರಶಸ್ತಿಯನ್ನು ವಿವಾದ ಮಾಡುವ ಬದಲು ತಮಿಳು ನಟನ ಸಾಧನೆಯಾಗಿ ಸಂಭ್ರಮಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಅವರ ಈ ಮಾತುಗಳು ಈಗ ತಮಿಳು ಸಿನಿರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿವೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಧನುಷ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದರು. 2024ರಲ್ಲಿ ಬಿಡುಗಡೆಯಾದ ತಮ್ಮದೇ ನಿರ್ದೇಶನದ ‘ರಾಯನ್’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಹಾಗೆಯೇ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ನಟನೆಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ಒಂದೇ ವರ್ಷದಲ್ಲಿ ಎರಡು ದೊಡ್ಡ ಗೌರವಗಳು ಇವರ ಮುಡಿಗೇರಿವೆ.

ಆದರೆ ಈ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ‘ರಾಯನ್’ ಚಿತ್ರಕ್ಕಿಂತ ‘ಮಹಾರಾಜ’ ಮತ್ತು ‘ಮೆಯ್ಯಳಗನ್’ ಸಿನಿಮಾಗಳು ಉತ್ತಮವಾಗಿದ್ದವು ಎಂದು ಸಿನಿಪ್ರೇಮಿಗಳು ವಾದಿಸಿದ್ದರು. ಈ ಟೀಕೆಗಳನ್ನು ಧನುಷ್ ಒಪ್ಪಿಕೊಂಡಿದ್ದಾರೆ. ರಾಯನ್ ಚಿತ್ರಕ್ಕಿಂತ ಖಂಡಿತವಾಗಿಯೂ ಬೇರೆ ಒಳ್ಳೆಯ ಸಿನಿಮಾಗಳು ಇದ್ದವು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಧನುಷ್ ತಮ್ಮ ಹಳೆಯ ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ. ‘ಪುದುಪೇಟ್ಟೈ’, ‘ವಡಾ ಚೆನ್ನೈ’, ‘ಕರ್ಣನ್’ ಮತ್ತು ‘ಮರಿಯನ್’ ಚಿತ್ರಗಳಿಗೆ ಪ್ರಶಸ್ತಿ ಸಿಗಬೇಕಿತ್ತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆ ಚಿತ್ರಗಳಿಗೆ ಪ್ರಶಸ್ತಿ ಸಿಗಲಿಲ್ಲ. ಆಗ ಯಾರೂ ಕೂಡ ಧ್ವನಿ ಎತ್ತಲಿಲ್ಲ ಎಂದು ಧನುಷ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮೈನಾ’ ಸೀರಿಯಲ್ ವಿಶೇಷ ಸಂಚಿಕೆಗಳು; ಕಬಡ್ಡಿ ಅಖಾಡದಲ್ಲಿ ಧೂಳೆಬ್ಬಿಸಿದ ಧನುಷ್

‘ಕೆಲವೊಮ್ಮೆ ನಾವು ಎಷ್ಟು ಶ್ರಮ ಪಟ್ಟರೂ ಪ್ರಶಸ್ತಿಗಳು ಸಿಗುವುದಿಲ್ಲ. ಆದರೆ ಈ ಬಾರಿ ಅದೃಷ್ಟ ಒಲಿದು ಬಂದಿದೆ. ಸಿನಿಮಾ ಹೇಗಿದೆ ಎನ್ನುವುದಕ್ಕಿಂತ ನನ್ನ ಶ್ರಮ ಪ್ರಾಮಾಣಿಕವಾಗಿತ್ತು. ಒಬ್ಬ ತಮಿಳು ನಟನಿಗೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದನ್ನು ಎಲ್ಲರೂ ಒಟ್ಟಾಗಿ ಸಂಭ್ರಮಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ಯಾಬ್, ಆಟೋ ನಂಬರ್ ಮ್ಯಾಚ್ ಆಗ್ತಿಲ್ವಾ? ಅಂತಹ ವಾಹನ ಹತ್ತಲೇಬೇಡಿ ಎಂದ ಬೆಂಗಳೂರು ಕಮಿಷನರ್! – Kannada News | Vehicle Mismatch on Ride Apps: Bengaluru Police Chief Urges Commuters to Report

ಬೆಂಗಳೂರು, ಜುಲೈ 27: ಮೊಬೈಲ್ ಆ್ಯಪ್‌ಗಳ ಮೂಲಕ ಆಟೋ ಹಾಗೂ ಕ್ಯಾಬ್‌ಗಳನ್ನು ಕಾಯ್ದಿರಿಸುವ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಆ್ಯಪ್‌ನಲ್ಲಿ ತೋರಿಸಲಾದ ವಾಹನದ ನೋಂದಣಿ ಸಂಖ್ಯೆ (Vehicle Registration Number) ಹಾಗೂ ಚಾಲಕನ ವಿವರಗಳು, ನಿಮ್ಮ ಬಳಿಗೆ ಬರುವ ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ.ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಡೇಟಾ ವ್ಯತ್ಯಾಸ ಹಾಗೂ ಪ್ರಯಾಣಿಕರ ಆತಂಕ

ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಉಬರ್, ರ್‍ಯಾಪಿಡೋ ಹಾಗೂ ನಮ್ಮ ಯಾತ್ರೆಯಂತಹ ರೈಡ್‌ ಆ್ಯಪ್‌ಗಳಲ್ಲಿ ಆಟೋ ಅಥವಾ ಟ್ಯಾಕ್ಸಿ ಬುಕ್ ಮಾಡಿದಾಗ, ಆ್ಯಪ್‌ನಲ್ಲಿ ಕಾಣಿಸುವ ನೋಂದಣಿ ಸಂಖ್ಯೆಗಿಂತ ಸಂಪೂರ್ಣ ಭಿನ್ನವಾದ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ನಗರವಾಸಿಗಳು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಹತ್ತರಲ್ಲಿ ಏಳು ಬಾರಿ ಇಂತಹ ವ್ಯತ್ಯಾಸಗಳು ಕಂಡುಬರುತ್ತವೆ ಎಂದು ಆರೋಪಿಸಿದ್ದಾರೆ. “ಒಂದು ಸಂಖ್ಯೆಯ ಆಟೋ ಬುಕ್ ಮಾಡಿದರೆ, ಮತ್ತೊಂದು ಸಂಖ್ಯೆಯ ಆಟೋ ಬರುತ್ತದೆ. ಚಾಲಕನನ್ನು ಕೇಳಿದರೆ ತಾಂತ್ರಿಕ ಕಾರಣ ಅಥವಾ ಸಾಲದ ನೆಪ ಹೇಳುತ್ತಾರೆ” ಎಂದು ಸಾರ್ವಜನಿಕರು ಆತಂಕ ತೋಡಿಕೊಂಡಿದ್ದಾರೆ.

ವಾಹನ ಹತ್ತದಂತೆ ಪೊಲೀಸರ ಮನವಿ

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, “ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಆ್ಯಪ್‌ನಲ್ಲಿರುವ ವಿವರಕ್ಕೂ, ನಿಜವಾಗಿ ಬರುವ ವಾಹನಕ್ಕೂ ವ್ಯತ್ಯಾಸವಿದ್ದರೆ ಯಾವುದೇ ಕಾರಣಕ್ಕೂ ಅಂತಹ ವಾಹನಗಳನ್ನು ಹತ್ತಬೇಡಿ” ಎಂದು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

ಯಾವುದೇ ಅನಾಹುತ, ಅಪರಾಧ ಅಥವಾ ಅಪಘಾತ ಸಂಭವಿಸಿದಾಗ ಆ್ಯಪ್‌ನಲ್ಲಿರುವ ದಾಖಲೆ ಹಾಗೂ ನಿಜವಾದ ವಾಹನ ಬೇರೆಯಾಗಿದ್ದರೆ ಜವಾಬ್ದಾರಿ ನಿಗದಿಪಡಿಸುವುದು ಮತ್ತು ತನಿಖೆ ನಡೆಸುವುದು ಕಷ್ಟಕರವಾಗುತ್ತದೆ. ಹೀಗಾಗಿ, ಇಂತಹ ವಾಹನಗಳನ್ನು ತಕ್ಷಣವೇ ತಿರಸ್ಕರಿಸಿ, 112 ತುರ್ತು ಸಹಾಯವಾಣಿ ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ ವಿವಾಹ ನೋಂದಣಿಗೆ ‘ಆಧಾರ್’ ಒಂದೇ ವಯಸ್ಸಿನ ಪುರಾವೆಯಲ್ಲ ಎಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ!

ಆ್ಯಪ್ ಸಂಸ್ಥೆಗಳು ಹಾಗೂ ಚಾಲಕರಿಗೆ ಕಠಿಣ ಎಚ್ಚರಿಕೆ

ಚಾಲಕರು ತಮ್ಮ ಖಾತೆಗಳನ್ನು ಇತರರಿಗೆ ಬಳಕೆಗೆ ನೀಡುವುದು, ನಕಲಿ ದಾಖಲೆ ಬಳಸುವುದು ಅಥವಾ ನೋಂದಾಯಿತವಲ್ಲದ ವಾಹನಗಳನ್ನು ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವ ಚಾಲಕರ ವಿರುದ್ಧ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಆ್ಯಪ್ ಆಧಾರಿತ ಸಂಸ್ಥೆಗಳ (Aggregators) ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳುವ ವಾಹನಗಳು ಮತ್ತು ಚಾಲಕರ ಹಿನ್ನೆಲೆಯನ್ನು ಕಾಲಕಾಲಕ್ಕೆ ಸರಿಯಾಗಿ ಪರಿಶೀಲಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಲೀನ್​ ಸ್ವೀಪ್​ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ – Kannada News | Team India’s World Record: Most T20I Series Whitewashes in Cricket History

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸೋತಿದ್ದ ಟೀಮ್ ಇಂಡಿಯಾ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅದು ಸಹ ಝಿಂಬಾಬ್ವೆ ತಂಡವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ. ಈ ಕ್ಲೀನ್ ಸ್ವೀಪ್​ನೊಂದಿಗೆ ಭಾರತ ತಂಡವು ಕನಿಷ್ಠ 3 ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ಬಾರಿ ಎದುರಾಳಿಗಳನ್ನು ವೈಟ್‌ವಾಶ್ ಮಾಡಿದ ವಿಶ್ವದ ಏಕೈಕ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಟೀಮ್ ಇಂಡಿಯಾ ವಿಶ್ವ ದಾಖಲೆ:

ಟೀಮ್ ಇಂಡಿಯಾ ಕನಿಷ್ಠ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಟ್ಟು 12 ಬಾರಿ ಕ್ಲೀನ್ ಸ್ವೀಪ್ ಜಯ ಸಾಧಿಸಿದೆ. ಭಾರತ ತಂಡವನ್ನು ಹೊರತುಪಡಿಸಿ ಯಾವುದೇ ತಂಡ ಕನಿಷ್ಠ 10 ವೈಟ್ ವಾಶ್ ಸರಣಿ ಗೆಲುವು ಸಾಧಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಈ ಪಟ್ಟಿಯಲ್ಲಿ ಪಾಕಿಸ್ತಾನ್ (8 ಬಾರಿ) ದ್ವಿತೀಯ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ (5 ಬಾರಿ) ತೃತೀಯ ಸ್ಥಾನದಲ್ಲಿದೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ ಭಾರತ ಕ್ಲೀನ್ ಸ್ವೀಪ್ ಗೆಲುವಿನಲ್ಲಿ ಮುಂಚೂಣಿಯಲ್ಲಿರುವುದು ಸ್ಪಷ್ಟ.

ಕ್ಲೀನ್ ಸ್ವೀಪ್​ನಲ್ಲಿ ನಾಯಕರ ಕೊಡುಗೆ:

ಭಾರತದ ಈ 12 ವೈಟ್‌ವಾಶ್ ಗೆಲುವಿನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪಾತ್ರ ಬಹು ದೊಡ್ಡದು. ಭಾರತ ತಂಡ ದಾಖಲಿಸಿರುವ ಅರ್ಧದಷ್ಟು (6 ಬಾರಿ) ಕ್ಲೀನ್ ಸ್ವೀಪ್‌ಗಳು ರೋಹಿತ್ ಅವರ ನಾಯಕತ್ವದಲ್ಲೇ ಬಂದಿವೆ.

  • ರೋಹಿತ್ ಶರ್ಮಾ: 6 ಬಾರಿ
  • ಸೂರ್ಯಕುಮಾರ್ ಯಾದವ್: 2 ಬಾರಿ
  • ವಿರಾಟ್ ಕೊಹ್ಲಿ: 2 ಬಾರಿ
  • ಎಂ.ಎಸ್. ಧೋನಿ: 1 ಬಾರಿ
  • ಶ್ರೇಯಸ್ ಅಯ್ಯರ್: 1 ಬಾರಿ

ಭಾರತದ ಕ್ಲೀನ್ ಸ್ವೀಪ್ ಗೆಲುವುಗಳ ಸಂಪೂರ್ಣ ಪಟ್ಟಿ:

ಸಂಖ್ಯೆ. ಎದುರಾಳಿ ಸರಣಿ  ಫಲಿತಾಂಶ ಕಾಲಾವಧಿ ನಾಯಕ
1 ಆಸ್ಟ್ರೇಲಿಯಾ 3–0 ಜನವರಿ 2016 ಎಂ.ಎಸ್. ಧೋನಿ
2 ಶ್ರೀಲಂಕಾ 3–0 ಡಿಸೆಂಬರ್ 2017 ರೋಹಿತ್ ಶರ್ಮಾ
3 ವೆಸ್ಟ್ ಇಂಡೀಸ್ 3–0 ನವೆಂಬರ್ 2018 ರೋಹಿತ್ ಶರ್ಮಾ
4 ವೆಸ್ಟ್ ಇಂಡೀಸ್ 3–0 ಆಗಸ್ಟ್ 2019 ವಿರಾಟ್ ಕೊಹ್ಲಿ
5 ನ್ಯೂಝಿಲೆಂಡ್ 5–0 ಜನೆವರಿ–ಫೆಬ್ರವರಿ 2020 ವಿರಾಟ್ ಕೊಹ್ಲಿ
6 ನ್ಯೂಝಿಲೆಂಡ್ 3–0 ನವೆಂಬರ್ 2021 ರೋಹಿತ್ ಶರ್ಮಾ
7 ವೆಸ್ಟ್ ಇಂಡೀಸ್ 3–0 ಫೆಬ್ರವರಿ 2022 ರೋಹಿತ್ ಶರ್ಮಾ
8 ಶ್ರೀಲಂಕಾ 3–0 ಫೆಬ್ರವರಿ 2022 ರೋಹಿತ್ ಶರ್ಮಾ
9 ಅಫ್ಘಾನಿಸ್ತಾನ್ 3–0 ಜನವರಿ 2024 ರೋಹಿತ್ ಶರ್ಮಾ
10 ಶ್ರೀಲಂಕಾ 3–0 ಜುಲೈ 2024 ಸೂರ್ಯಕುಮಾರ್ ಯಾದವ್
11 ಬಾಂಗ್ಲಾದೇಶ 3–0 ಅಕ್ಟೋಬರ್ 2024 ಸೂರ್ಯಕುಮಾರ್ ಯಾದವ್
12 ಝಿಂಬಾಬ್ವೆ 3–0 ಜುಲೈ 2026 ಶ್ರೇಯಸ್ ಅಯ್ಯರ್

ಇದನ್ನೂ ಓದಿ: ಈ ಬಾರಿ ಗೆಲ್ಲಲು ಇದುವೇ ಕಾರಣ: ಶ್ರೇಯಸ್ ಅಯ್ಯರ್

ಒಟ್ಟಾರೆಯಾಗಿ ಹೇಳುವುದಾದರೆ, ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡ ಸದ್ಯ ಜಾಗತಿಕ ಕ್ರಿಕೆಟ್ ಜಗತ್ತನ್ನು ಆಳುತ್ತಿದೆ ಎಂಬುದಕ್ಕೆ ಈ 12 ವೈಟ್‌ವಾಶ್‌ಗಳ ಐತಿಹಾಸಿಕ ವಿಶ್ವ ದಾಖಲೆಯೇ ಬಲವಾದ ಸಾಕ್ಷಿ. ಎಂ.ಎಸ್. ಧೋನಿ ಬಿತ್ತಿದ ಗೆಲುವಿನ ಗಿಡ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹೆಮ್ಮರವಾಗಿದೆ. ಇದೀಗ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಈ ವಿಜಯಯಾತ್ರೆ ಮುಂದುವರೆಯುತ್ತಿದೆ.

Source link

‘ಇಂಡಿಯನ್ ಐಡಲ್ ಸೀಸನ್ 16’ ಫಿನಾಲೆ ಗೆದ್ದ ಜ್ಯೋತಿರ್ಮಯಿ ನಾಯಕ್ – Kannada News | Indian Idol 16 Winner: Jyotirmayee Nayak Lifts Trophy, Tanishk Shukla Declared Runner Up

ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್ ಸೀಸನ್ 16’ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದೆ. ಒಡಿಶಾದ ಗಾಯಕಿ ಜ್ಯೋತಿರ್ಮಯಿ ನಾಯಕ್ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಜಿದ್ದಾಜಿದ್ದಿನ ಫಿನಾಲೆಯಲ್ಲಿ ಅವರು ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳುಗಳಿಂದ ಸಾಗಿದ್ದ ಈ ಸಂಗೀತದ ಮಹಾಸರಬರಾಯಿಗೆ ಈಗ ಅದ್ಧೂರಿ ತೆರೆ ಬಿದ್ದಿದೆ.

ಜ್ಯೋತಿರ್ಮಯಿ ನಾಯಕ್ ಸಾರ್ವಜನಿಕರಿಂದ ಅತಿ ಹೆಚ್ಚು ವೋಟುಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅಂತಿಮ ಹಂತದಲ್ಲಿದ್ದ ತನಿಷ್ಕ್ ಶುಕ್ಲಾ ಮೊದಲ ರನ್ನರ್ ಅಪ್ ಸ್ಥಾನ ಪಡೆದರು. ಮನ್ರಾಜ್ ವೀರ್ ಸಿಂಗ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಿನ್ನರ್ ಜ್ಯೋತಿರ್ಮಯಿಗೆ ಟ್ರೋಫಿ ಜೊತೆಗೆ 20 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇನ್ನುಳಿದ ರನ್ನರ್ ಅಪ್‌ಗಳಿಗೆ ತಲಾ 5 ಲಕ್ಷ ರೂಪಾಯಿ ಚೆಕ್ ನೀಡಲಾಯಿತು.

ಸೋನಿ ಟಿವಿಯಲ್ಲಿ ಪ್ರಸಾರವಾದ ಈ ಫಿನಾಲೆ ಸಂಚಿಕೆಯಲ್ಲಿ ಜ್ಯೋತಿರ್ಮಯಿ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಅಂತಿಮ ಸುತ್ತಿನಲ್ಲಿ ಅವರು ‘ಸೈಯ್ಯಾನ್ ಓ ಸೈಯ್ಯಾನ್’ ಹಾಡನ್ನು ಅದ್ಭುತವಾಗಿ ಹಾಡಿದರು. ಇವರ ಗಾಯನಕ್ಕೆ ತೀರ್ಪುಗಾರರಾದ ಶ್ರೇಯಾ ಘೋಷಾಲ್ ಹಾಗೂ ಬಾದ್‌ಶಾ ಫಿದಾ ಆದರು. ವಿಶಾಲ್ ದಡ್ಲಾನಿ ವಿಡಿಯೋ ಕಾಲ್ ಮೂಲಕ ಭಾಗವಹಿಸಿ ಶುಭ ಕೋರಿದರು.

ಇದನ್ನೂ ಓದಿ: ‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ

ವಿಜಯದ ಬಳಿಕ ಜ್ಯೋತಿರ್ಮಯಿ ಭಾವುಕರಾಗಿ ಮಾತನಾಡಿದರು. ಕೇವಲ ಒಂದು ಕನಸು ಹೊತ್ತು ಆಡಿಷನ್‌ಗೆ ಬಂದಿದ್ದ ನನಗೆ ಈ ಗೆಲುವು ಜೀವನವನ್ನೇ ಬದಲಾಯಿಸಿದೆ. ಈ ಟ್ರೋಫಿ ನನಗೆ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಸೇರಬೇಕು ಎಂದು ಅವರು ಧನ್ಯವಾದ ತಿಳಿಸಿದರು. ಆದಿತ್ಯ ನಾರಾಯಣ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.

ಶ್ರೀನಿಧಿ ಜಿ. ಶಾಸ್ತ್ರಿ ಅವರು ಸೀಶನ್ 16ರಲ್ಲಿ ಕಾಣಿಸಿಕೊಂಡಿದ್ದರು. ಇವರು ಬೆಂಗಳೂರು ಮೂಲದ ಗಾಯಕರಾಗಿದ್ದು, ಈ ಹಿಂದೆ ಜೀ ಕನ್ನಡದ ‘ಸಾ ರೇ ಗ ಮ ಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ‘ಇಂಡಿಯನ್ ಐಡಲ್ ಸೀಸನ್ 16’ರ ಟಾಪ್ 10 ಹಂತಕ್ಕೆ ತಲುಪಿದ್ದರು. ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಅತ್ಯಂತ ಮಧುರವಾಗಿ ಹಾಡುವ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version