ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?: ಹಾಸನದಲ್ಲೊಂದು ಡೆಡ್ಲಿ ಮರ್ಡರ್
ಹಾಸನ, ಜನವರಿ 13: ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಪತಿ ಕುಮಾರ್ ತನ್ನ ಮೊದಲ ಪತ್ನಿ ರಾಧಮ್ಮಳನ್ನು ಹತ್ಯೆ ಮಾಡಿರುವ ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಬರಿಮಲೆ ಯಾತ್ರೆ ಮುಗಿಸಿ ಬಂದ ದಿನವೇ ಕುಮಾರ್, ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ ರಾಧಾಳನ್ನು ಕೊಲೆ ಮಾಡಿದ್ದ. ಕುಮಾರ್ ಮತ್ತು ರಾಧಾ ದಂಪತಿಗೆ ವಿಶ್ವಾಸ್ ಎಂಬ ಮಗನಿದ್ದಾನೆ. ಕಳೆದ ಕೆಲ ವರ್ಷಗಳಿಂದ ಪತಿ ಕುಮಾರ್‌ನಿಂದ ರಾಧಾ ಪತ್ಯೇಕ ವಾಸವಿದ್ದು, ಹಾಸನದಲ್ಲಿ ಕೆಲಸ ಮಾಡಿಕೊಂಡು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಳು….