ಕಲಬುರಗಿ ಆರ್ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ!
ಕಲಬುರಗಿ, ಫೆಬ್ರವರಿ 5: ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ಟಿಓ) ನಡೆಯುತ್ತಿರುವ ಭ್ರಷ್ಟಾಚಾರವನ್ನು ‘ಟಿವಿ9’ ಸುದ್ದಿ ವಾಹಿನಿ ಬಯಲು ಮಾಡಿದೆ. ಆರ್ಟಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಮತ್ತು ದಾಖಲೆಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವುದು ಬಹಿರಂಗವಾಗಿದೆ. ಈ ಕಚೇರಿಯಲ್ಲಿ ಹಣ ನೀಡಿದರೆ ವಾಹನಗಳ ಆರ್ಸಿ ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತವೆ. ಅರ್ಹರಲ್ಲದವರಿಗೂ ಅಥವಾ ಅನಗತ್ಯ ವ್ಯಕ್ತಿಗಳಿಗೂ ಈ ಭೂಪರು ಸರ್ಕಾರಿ ದಾಖಲೆಗಳನ್ನು ನೀಡುತ್ತಾರೆ. ಲಂಚ ಪಡೆದು ಆರ್ಸಿ ಕಾರ್ಡ್ ವಿತರಿಸುವ…