ಈ ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬುವ ತಪ್ಪನ್ನು ಮಾಡಬೇಡಿ – Kannada News | Grind these items in a mixer grinder can damage the blade and motor

ಮಿಕ್ಸರ್‌ ಗ್ರೈಂಡರ್‌ (mixer grinder) ಅಡುಗೆ ಮನೆಯಲ್ಲಿರುವ ಅಗತ್ಯ ವಸ್ತುವಾಗಿದ್ದು, ಇದು ಚಟ್ನಿ ತಯಾರಿಸುವುದು, ಮಸಾಲೆಗಳನ್ನು ರುಬ್ಬುವುದು, ಜ್ಯೂಸ್‌ ತಯಾರಿಸುವುದು ಹೀಗೆ ಪ್ರತಿಯೊಂದು ಅಡುಗೆ ಕೆಲಸಗಳನ್ನು ಥಟ್ಟನೆ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚಿನವರು ಗಟ್ಟಿ ಮಸಾಲೆ, ಐಸ್‌, ಹುರಿದಿಟ್ಟ ಬಿಸಿಬಿಸಿ ಮಸಾಲೆ ಎಲ್ಲವನ್ನೂ ಮಿಕ್ಸಿಯಲ್ಲೇ ರುಬ್ಬುತ್ತಾರೆ. ಆದರೆ ಹೀಗೆ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಬಾರದು. ವಿಶೇಷವಾಗಿ ಈ ಕೆಲವೊಂದು ವಸ್ತುಗಳನ್ನು ಮಿಕ್ಸರ್‌ ಗ್ರೈಂಡರ್‌ನಲ್ಲಿ ಗ್ರೈಂಡ್‌ ಮಾಡುವುದರಿಂದ ಮಿಕ್ಸಿಯ ಮೋಟಾರ್‌ ಮತ್ತು ಜಾರ್‌ನ ಬ್ಲೇಡ್‌ ಹಾನಿಗೊಳಲಾಗುತ್ತದೆ. ಹಾಗಾಗಿ ಮಿಕ್ಸಿ ದೀರ್ಘ ಕಾಲ ಬಾಳಿಕೆ ಬರಬೇಕೆಂದಿದ್ದರೆ, ಈ ವಸ್ತುಗಳನ್ನು ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಬೇಡಿ.

ಮಿಕ್ಸಿಯಲ್ಲಿ ಯಾವೆಲ್ಲಾ ವಸ್ತುಗಳನ್ನು ರುಬ್ಬಬಾರದು?

ಬಿಸಿ ಆಹಾರ ಪದಾರ್ಥಗಳು: ಹುರಿದಿಟ್ಟ ಬಿಸಿ ಮಸಾಲೆಗಳು, ಸೂಪ್‌ ತಯಾರಿಸಲು ಬೇಯಿಸಿದ ತರಕಾರಿಗಳು ಇವೆಲ್ಲವನ್ನೂ ಬಿಸಿ ಇರುವಾಗಲೇ ಮಿಕ್ಸಿಯಲ್ಲಿ ರುಬ್ಬಬಾರದು. ಏಕೆಂದರೆ ಈ ಬಿಸಿ ಪದಾರ್ಥಗಳು ಜಾರ್‌ ಒಳಗೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಮುಚ್ಚಳ ಒಮ್ಮೆಲೆ ತೆರೆಯಲು ಕಾರಣವಾಗಬಹುದು. ಅಲ್ಲದೆ ಪದೇ ಪದೇ ಬಿಸಿ ಪದಾರ್ಥಗಳನ್ನು ರುಬ್ಬುವುದರಿಂದ ಮಿಕ್ಸರ್ ಜಾರ್ ಮತ್ತು ಮೋಟಾರ್ ಎರಡರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಬಿಸಿ ಮಾಡಿದ ಪದಾರ್ಥಗಳು ತಣ್ಣಗಅದ ಬಳಿಕವೇ ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿ.

ಐಸ್‌ಕ್ಯೂಬ್:‌ ಜ್ಯೂಸ್‌ ಮಾಡುವ ಸಂದರ್ಭದಲ್ಲಿ ಐಸ್‌ಕ್ಯೂಬ್‌ಗಳನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬುತ್ತಾರೆ. ಹೀಗೆ ಅತಿಯಾಗಿ ಐಸ್‌ಕ್ಯೂಬ್‌ ಹಾಕುವುದರಿಂದ ಇದು ಬ್ಲೇಡ್‌ಗಳ ಮೇಲೆ ಹಠಾತ್ ಒತ್ತಡವನ್ನುಂಟು ಮಾಡುತ್ತದೆ, ಇದು ಬ್ಲೇಡ್‌ಗಳಿಗೆ ಹಾನಿ ಉಂಟುಮಾಡುವುದಲ್ಲದೆ, ಮೋಟಾರ್‌ ಮೇಲೆಯೂ ಒತ್ತಡವನ್ನು ಉಂಟುಮಾಡುತ್ತದೆ.

ಗಟ್ಟಿ ಮಸಾಲೆಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಲಬೆರಕೆ ಮಸಾಲೆಪುಡಿಗಳು ಇರುತ್ತವೆ ಎಂದು ಮೆಣಸಿನ ಪುಡಿ, ಅರಶಿನ ಪುಡಿ ಇವೆಲ್ಲವನ್ನೂ ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಆದರೆ ಗಟ್ಟಿ ಮಸಾಲೆಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಬಾರದು. ಹೌದು ಅರಶಿನ ಕೊಂಬು, ಜಾಯಿಕಾಯಿ, ದಾಲ್ಚಿನ್ನಿಯಂತಹ ಗಟ್ಟಿ ಮಸಾಲೆಗಳನ್ನು ರುಬ್ಬುವುರಿಂದ ಜಾರ್‌ ಬ್ಲೇಡ್‌ ಹಾನಿಗೊಳಗಾಗಬಹುದು. ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ರುಬ್ಬುವುದರಿಂದ ಮೋಟಾರ್ ಮೇಲೂ ಒತ್ತಡ ಬೀಳಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಿ

ಚಪಾತಿ ಹಿಟ್ಟು: ಅನೇಕ ಜನರು ಸಮಯವನ್ನು ಉಳಿಸಲು ಮತ್ತು ಕೈಗಳು ಕೊಳೆಯುವುದನ್ನು ತಪ್ಪಿಸಲು ಚಪಾತಿ ಹಿಟ್ಟನ್ನು ಮಿಕ್ಸಿಯಲ್ಲಿ ರುಬ್ಬುತ್ತಾರೆ. ಈ ದಪ್ಪ ಹಿಟ್ಟು ಬ್ಲೇಡ್‌ಗೆ ಅಂಟಿಕೊಂಡು, ಬ್ಲೇಡ್‌ಗೆ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ.

ಒಣ ಪದಾರ್ಥಗಳು:   ಬಾದಾಮಿ, ಗೋಡಂಬಿ ಅಥವಾ ಇತರ ಒಣ ಹಣ್ಣುಗಳನ್ನು ನೀರಿಲ್ಲದೆ ದೊಡ್ಡ ಪ್ರಮಾಣದಲ್ಲಿ ರುಬ್ಬುವುದರಿಂದ ಮೋಟಾರ್ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದಲ್ಲದೆ  ಅಕ್ಕಿ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಿಸುವುದರಿಂದ ಯಂತ್ರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದು ಮಿಕ್ಸರ್ ಗ್ರೈಂಡರ್‌ನ ಮೋಟಾರ್ ಬೇಗನೆ ಹಾಳಾಗಲು ಕಾರಣವಾಗಬಹುದು.

ಇದಲ್ಲದೆ ಮಿಕ್ಸರ್‌ ಜಾರ್‌ಗಳನ್ನು ಓವರ್‌ಲೋಡ್‌ ಮಾಡಬಾರದು. ಇದು ಹೆಚ್ಚಿನವರು ಮಾಡುವ ಸಾಮಾನ್ಯ ತಪ್ಪಾಗಿದೆ. ಹೀಗೆ ಮಾಡುವುದರಿಂದ ಮಿಕ್ಸಿಯ ಕಾರ್ಯಕ್ಷಮತೆ ದುರ್ಬಲಗೊಳ್ಳುತ್ತದೆ ಮತ್ತು ಮೋಟಾರ್, ಬ್ಲೇಡ್‌ ಹಾನಿಗೊಳಗಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ – Kannada News | India Clean Sweeps Zimbabwe 3 0 in T20 Series; Shreyas Iyer’s First Captaincy Win

ಹರಾರೆಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ, ಜಿಂಬಾಬ್ವೆಯನ್ನು 35 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 192 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಜಿಂಬಾಬ್ವೆ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ, ಜಿಂಬಾಬ್ವೆಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಈ ಮೂಲಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಮೊದಲ ಟಿ20 ಸರಣಿ ಗೆದ್ದ ಸಾಧನೆಯನ್ನೂ ಮಾಡಿತು. ಇದಕ್ಕೂ ಮೊದಲು ಶ್ರೇಯಸ್ ನಾಯಕತ್ವದಲ್ಲಿ ಭಾರತ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

Source link

ಬೆಂಗಳೂರಿನಲ್ಲಿ ಹೆಚ್ಚಿದ ಚಿರತೆ ಭೀತಿ: ಬ್ಯಾಡರಹಳ್ಳಿಯಲ್ಲಿ ಚಿರತೆ ಇದೆ ಎಚ್ಚರಿಕೆ ಬೋರ್ಡ್, ಬನಶಂಕರಿಯಲ್ಲೂ ಪ್ರತ್ಯಕ್ಷ! – Kannada News | Leopard Scare Grows in Bengaluru: Warning Board Installed in Byadarahalli; leopard spotted in Banashankari too

ಬೆಂಗಳೂರು, ಜುಲೈ 26: ಕಳೆದ 15 ದಿನಗಳಿಂದ ಬ್ಯಾಡರಹಳ್ಳಿಯ ಭಾರತ ನಗರದಲ್ಲಿ ಒಂಟಿ ಚಿರತೆ (leopard) ಕಾಣಿಸಿಕೊಳ್ಳುತ್ತಿದ್ದು, ಇದರಿಂದ ನಿವಾಸಿಗಳು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಹೀಗಾಗಿ ಮನೆಯ ಎದುರು ಚಿರತೆ ಇದೆ ಎಚ್ಚರಿಕೆ ಎನ್ನುವ ಬೋರ್ಡ್ ಕೂಡ ಹಾಕಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಅರಣ್ಯ ಇಲಾಖೆ ಮಾತ್ರ ಆ ಒಂಟಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾಗುತ್ತಿಲ್ಲ.

15 ದಿನದಿಂದ ಸೆರೆಯಾಗದ ಚಿರತೆ

ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಭಾರತ ನಗರದ 2ನೇ ಹಂತದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾಟ ಎದುರಾಗಿದೆ. ಬೀದಿನಾಯಿಗಳ ಮೇಲೆ ಅಟ್ಯಾಕ್ ಮಾಡುತ್ತಿದೆ. ಈಗಾಗಲೇ ಭಾರತ್ ನಗರದಲ್ಲಿ ಬೀದಿನಾಯಿಗಳು ಕಾಣೆ ಆಗುತ್ತಿವೆ. ಕಳೆದ ವಾರವೂ ಚಿರತೆ ಬೀದಿನಾಯಿ ಮೇಲೆ ಅಟ್ಯಾಕ್ ಮಾಡಲು ಮುಂದಾಗಿತ್ತು, ಆದರೆ ನಾಯಿ ಎಸ್ಕೇಪ್ ಆಗಿತ್ತು. ರಾತ್ರಿಯಾದರೆ ಈ ಒಂಟಿ ಚಿರತೆ ಪ್ರತ್ಯಕ್ಷವಾಗುತ್ತಿದೆ.

ಮನೆಗಳ ಮುಂದೆ ಚಿರತೆ ಇದೆ ಎಚ್ಚರಿಕೆ ಎಂಬ ಬೋರ್ಡ್

ಚಿರತೆ ಕಂಡ ತಕ್ಷಣ ಬೀದಿನಾಯಿಗಳು ಜೋರಾಗಿ ಬೊಗಳುತ್ತವೆ. ಇದರಿಂದ ಫುಲ್ ಭಯದಲ್ಲಿರುವ ಭಾರತ ನಗರದ ನಿವಾಸಿಗಳು ತಮ್ಮ ಮನೆಗಳ ಮುಂದೆ ಚಿರತೆ ಇದೆ ಎಚ್ಚರಿಕೆ ಎಂದು ಬೋರ್ಡ್ ಹಾಕಿದ್ದಾರೆ. ಇನ್ನೂ ಕೆಲ ಮನೆ ಮಾಲೀಕರು ತಮ್ಮ ಮನೆಯ ಮುಂಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!

ಭಾರತ್ ನಗರದಲ್ಲಿ ಚಿರತೆ ಕಾಣಿಸಿಕೊಂಡ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಒಂದೇ ಒಂದು ಬೋನ್ ಇಟ್ಟಿದ್ದರು. ಅದರಲ್ಲಿ ಒಂದು ಕೋಳಿಯನ್ನು ಇಟ್ಟಿದ್ದರು. ಆದರೆ ಈಗ ಕೋಳಿ ಕೂಡ ಬೋನ್​ನಲ್ಲಿ ಇಲ್ಲ. ಅರಣ್ಯ ಇಲಾಖೆ ಚಿರತೆ ಹಿಡಿಯಲು ಯಾವುದೇ ಪ್ರಯತ್ನ ಕೂಡ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಹದಿನೈದು‌ ದಿನಗಳಿಂದ ಚಿರತೆ ಭಾರತ ನಗರದ ನಿವಾಸಿಗಳಿಗೆ ವಿಪರೀತ ಭಯ ಹುಟ್ಟಿಸಿದ್ದು, ಜೀವ ಕೈಯಲ್ಲಿ ಹಿಡಿದು ಜೀವನ ಮಾಡುತ್ತಿದ್ದಾರೆ. ಇನ್ನು ನಗರಕ್ಕೆ ಸಂಬಂಧಿಕರು ಬರಲು ಹಿಂದೇಟು ಹಾಕುತ್ತಿದ್ದಾರಂತೆ. ಮಕ್ಕಳು ಆಟವಾಡಲು ಹೊರಗೆ ಕಳಿಸಲು ಮತ್ತು ವಾಕಿಂಗ್ ಹೋಗಲು ಭಯ ಆಗುತ್ತಿದೆ ಎಂದು ನಿವಾಸಿ ಗೋಪಾಲ್ ಅವರ ಮಾತು.

ಬನಶಂಕರಿ 6ನೇ ಹಂತದಲ್ಲೂ ಚಿರತೆ ಪ್ರತ್ಯಕ್ಷ

ಇನ್ನೊಂದೆಡೆ, ನಗರದ ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನಲ್ಲಿಯೂ ಇಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಏಕಾಏಕಿ ಚಿರತೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ.

ಇದನ್ನೂ ಓದಿ: Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಒಟ್ಟಿನಲ್ಲಿ ಒಂಟಿ ಚಿರತೆ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಎರಡೂ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳನ್ನು ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಏನು ಕ್ರಮಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ – Kannada News | Rishab Shetty promoting Spider Man movie in Kannada

ಕನ್ನಡ ಸಿನಿಮಾಗಳು ಈಗ ಹಾಲಿವುಡ್​ ಲೆವೆಲ್​​​ನಲ್ಲಿ ಮಿಂಚುತ್ತಿವೆ. ಕನ್ನಡದ ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’, ‘ಕಾಂತಾರ 1’, ‘ಸಪ್ತ ಸಾಗರದಾಚೆ ಎಲ್ಲೊ’ ಇನ್ನೂ ಕೆಲ ಸಿನಿಮಾಗಳು ವಿದೇಶಗಳಲ್ಲಿ ಸಹ ಪ್ರೇಕ್ಷಕರನ್ನು ಸೆಳೆದಿವೆ. ಈ ಸಿನಿಮಾಗಳ ಮೂಲಕ ಕನ್ನಡದ ನಟ-ನಟಿಯರಿಗೆ ವಿದೇಶಗಳಲ್ಲಿಯೂ ಪರಿಚಯ, ಜನಪ್ರಿಯತೆ ಸೃಷ್ಟಿಯಾಗಿದೆ. ಇದೀಗ ಹಾಲಿವುಡ್ (Hollywood) ಸಿನಿಮಾ ಒಂದು ತಮ್ಮ ಸಿನಿಮಾದ ಪ್ರಚಾರಕ್ಕೆ ಕನ್ನಡದ ನಟರೊಬ್ಬರ ಜೊತೆ ಕೈ ಜೋಡಿಸಿದೆ.

ಹಾಲಿವುಡ್​​ನ ಬಲು ಜನಪ್ರಿಯ ಸಿನಿಮಾ ‘ಸ್ಪೈಡರ್​​ ಮ್ಯಾನ್’ ಸರಣಿಯ ಹೊಸ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಸಹ ಬಲು ಅದ್ಧೂರಿಯಾಗಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾ, ಕನ್ನಡ ಆವೃತ್ತಿಯಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ‘ಸ್ಪೈಡರ್​ ಮ್ಯಾನ್’ ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ, ವಿಶೇಷವಾಗಿ ಸಿನಿಮಾದ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಸೋನಿ, ರಿಷಬ್ ಶೆಟ್ಟಿ ಅವರ ಜೊತೆಗೆ ಕೈ ಜೋಡಿಸಿದೆ.

ರಿಷಬ್ ಶೆಟ್ಟಿ ಅವರು, ‘ಸ್ಪೈಡರ್​ ಮ್ಯಾನ್’ ಸಿನಿಮಾದ ಪ್ರಚಾರಕ್ಕಾಗಿ ವಿಡಿಯೋ ಒಂದನ್ನು ಮಾಡಿದ್ದಾರೆ. ವಿಡಿಯೋನಲ್ಲಿ ರಿಷಬ್ ಶೆಟ್ಟಿ ಅವರನ್ನು ಅವರ ತಂಡದವರೇ ಮರೆತು ಹೋಗಿದ್ದಾರೆ. ರಿಷಬ್ ಶೆಟ್ಟಿ ಯಾರೆಂಬುದು ಅವರ ಗೆಳೆಯರು, ಅವರೊಟ್ಟಿಗೆ ಕೆಲಸ ಮಾಡುವವರಿಗೆ ಗೊತ್ತಿಲ್ಲ. ಈಗ ‘ಸ್ಪೈಡರ್​ ಮ್ಯಾನ್’ ಪರಿಸ್ಥಿತಿಯೂ ಸಹ ಅದೇ. ಸ್ಪೈಡರ್​​ಮ್ಯಾನ್​​ ಸಿನಿಮಾದ ಈ ಹಿಂದಿನ ಸಿನಿಮಾನಲ್ಲಿ ಆತನ ಗೆಳೆಯರು, ಗರ್ಲ್​​ಫ್ರೆಂಡ್ ಸೇರಿದಂತೆ ಎಲ್ಲರೂ ಸ್ಪೈಡರ್​​ಮ್ಯಾನ್​​ನ ಇರುವಿಕೆಯನ್ನೇ ಮರೆತಿದ್ದಾರೆ. ವಿಡಿಯೋನಲ್ಲಿ ರಿಷಬ್ ಶೆಟ್ಟಿ, ತನ್ನವರೇ ತನ್ನನ್ನು ಮರೆತಿರುವ ಬಗ್ಗೆ ಆಶ್ಚರ್ಯ ಪಡುತ್ತಿದ್ದಾಗ ರಿಷಬ್ ಎದುರು ಸ್ಪೈಡರ್​​ಮ್ಯಾನ್ ಬರುತ್ತಾನೆ, ‘ನೀನು ಹೇಗೆ ಇದನ್ನೆಲ್ಲ ನಿಭಾಯಿಸುತ್ತಿದ್ದೀಯ’ ಎಂದು ರಿಷಬ್ ಶೆಟ್ಟಿ ಸ್ಪೈಡರ್​​ಮ್ಯಾನ್ ಅನ್ನು ಕೇಳಿದಾಗ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟೀಸರ್ ಪ್ರದರ್ಶನ ಆಗುತ್ತದೆ.

ಇದನ್ನೂ ಓದಿ:‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಬಡ ಮಕ್ಕಳ ಸಹಾಯಕ್ಕೆ ನಿಂತ ಡಿವೈನ್ ಸ್ಟಾರ್

‘ಯಾರು ಎಲ್ಲವನ್ನೂ ಕಳೆದುಕೊಂಡರೂ ಮತ್ತೆ ಮೊದಲಿನಿಂದ ಶುರು ಮಾಡ್ತಾನೋ ಅವನೇ ನಿಜವಾದ ಹೀರೋ, ಥಿಯೇಟರ್​​ಗಳಲ್ಲಿ ಭೇಟಿ ಆಗೋಣ, ಸ್ಪೈಡರ್​ ಮ್ಯಾನ್ ಸಿನಿಮಾ ಇದೇ 30ಕ್ಕೆ ಬಿಡುಗಡೆ ಆಗುತ್ತಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

‘ಸ್ಪೈಡರ್​​ಮ್ಯಾನ್’ ಸರಣಿಯ ಹೊಸ ಸಿನಿಮಾ ಇದೇ ಜುಲೈ 30ಕ್ಕೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾಕ್ಕೆ ‘ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದೆ. ಈ ಸಿನಿಮಾನಲ್ಲಿ ಹಲ್ಕ್ ಸೇರಿದಂತೆ ಹಲವರ ವಿರುದ್ಧ ‘ಸ್ಪೈಡರ್​​ ಮ್ಯಾನ್’ ಹೋರಾಡುತ್ತಿದ್ದಾನೆ. ಒಟ್ಟಾರೆ, ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಕತೆಯನ್ನು ಈ ಹೊಸ ಸಿನಿಮಾ ಒಳಗೊಂಡಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಬುಕಿಂಗ್ ಜೋರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು; ಜುಲೈ 27ರಂದು ಲೋಕಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ – Kannada News | Govt to table Public Examination Amendment Act for stricter anti paper leak system

ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ನಡೆದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ವಿಧೇಯಕ-2026’ (Public Examinations Amendment Bill, 2026) ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲು ನಿರ್ಧರಿಸಿದೆ.

ಕೇಂದ್ರ ಸಿಬ್ಬಂದಿ, ಕುಂದುಕೊರತೆ ಮತ್ತು ಪಿಂಚಣಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋಮವಾರ ಈ ಮಸೂದೆಯನ್ನು ಮಂಡಿಸಲಿದ್ದಾರೆ.

ವಿಧೇಯಕದ ಪ್ರಮುಖ ತಿದ್ದುಪಡಿಗಳು ಹಾಗೂ ಮುಖ್ಯಾಂಶಗಳು

  • ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ: ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಸೆಷನ್ಸ್ ಕೋರ್ಟ್‌ಗಳನ್ನು ‘ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ’ಗಳನ್ನಾಗಿ ಕಾಯ್ದಿರಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಲಾಗುತ್ತದೆ.
  • ವಿಚಾರಣೆಗೆ 3 ತಿಂಗಳು ಗಡುವು: ಸ್ಪೆಷಲ್ ಫಾಸ್ಟ್ ಟ್ರ್ಯಾಕ್ ಕೋರ್ಟ್​ನಲ್ಲಿ ಟ್ರಯಲ್​ಗಳು 3 ತಿಂಗಳೊಳಗೆ ಮುಗಿಯಬೇಕು. ಚಾರ್ಜ್‌ಶೀಟ್ ಸಲ್ಲಿಕೆಯಾದ ದಿನದಿಂದ 3 ತಿಂಗಳ ಒಳಗಾಗಿ ದಿನನಿತ್ಯದ ಆಧಾರದ ಮೇಲೆ (Day-to-day basis) ವಿಚಾರಣೆ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ.
  • ತನಿಖೆಗೆ 2 ತಿಂಗಳ ಗಡುವು: ಪ್ರಕರಣದ ತನಿಖೆಯನ್ನು ಕೇವಲ 2 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಾಗುತ್ತದೆ.
  • ವಿಶೇಷ ಟಾಸ್ಕ್ ಫೋರ್ಸ್ (STF) ರಚನೆ: ಹಲವು ರಾಜ್ಯಗಳಿಗೆ ಹರಡಿರುವ ಅಥವಾ ದೊಡ್ಡ ಮಟ್ಟದ ಪರೀಕ್ಷಾ ವಂಚನೆಗಳ ತನಿಖೆಗೆ ವಿಶೇಷ ಕಾರ್ಯಪಡೆ (Special Task Force) ರಚಿಸುವ ಅಧಿಕಾರ ಕೇಂದ್ರಕ್ಕೆ ಇರುತ್ತದೆ.
  • ಕಠಿಣ ಶಿಕ್ಷೆ ಮತ್ತು ದಂಡ: ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳು, ಕೋಚಿಂಗ್ ಸೆಂಟರ್‌ಗಳು ಹಾಗೂ ಏಜೆನ್ಸಿಗಳಿಗೆ ಸುದೀರ್ಘ ಜೈಲು ಶಿಕ್ಷೆ ಹಾಗೂ ಭಾರೀ ಮೊತ್ತದ ಆರ್ಥಿಕ ದಂಡ ವಿಧಿಸಲು ಕಠಿಣ ಕಾನೂನು ರೂಪಿಸಲಾಗಿದೆ.
  • ವಿಶೇಷ ಅಭಿಯೋಜಕರ (Legal Counsel) ನೇಮಕ: ಈ ಪ್ರಕರಣಗಳನ್ನು ದಕ್ಷತೆಯಿಂದ ನಿರ್ವಹಿಸಲು ವಿಶೇಷ ವಕೀಲರನ್ನು ನೇಮಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ

ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ಹಾಗೂ ಅಭ್ಯರ್ಥಿಗಳ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯಲು ಕೇಂದ್ರ ಸರ್ಕಾರ ಈ ಕಠಿಣ ತಿದ್ದುಪಡಿಯನ್ನು ಜಾರಿಗೆ ತರುತ್ತಿದೆ. ಇದೇ ವೇಳೆ, ಧರ್ಮೇಂದ್ರ ಪ್​ರದಾನ್ ರಾಜೀನಾಮೆ ಬೆನ್ನಲ್ಲೇ ಪ್ರಲ್ಹಾದ್ ಜೋಶಿ ಅವರು ಶಿಕ್ಷಣ ಖಾತೆಯ ಹೆಚ್ಚುವರಿ ಜವಾಬ್ದಾರಿ ಪಡೆದಿದ್ದಾರೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ತಿಳಿದು ಮುಂದುವರಿಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಿ – Kannada News | These are the vegetables that should not be eaten during the rainy season

ಮಾನ್ಸೂನ್ ಆಗಮನದೊಂದಿಗೆ, ಹವಾಮಾನವು ಆಹ್ಲಾದಕರವಾಗಿರುತ್ತದೆ. ಈ ಶೀತ ಮತ್ತು ತೇವಯುಕ್ತ ವಾತಾವರಣವು ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ಮಳೆಗಾಲದಲ್ಲಿ ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಕೆಲವೊಂದು ತರಕಾರಿಗಳನ್ನು (vegetables) ತಿನ್ನುವುದರಿಂದಲೂ ಸೋಂಕು ತಗುಲುವ ಅಪಾಯ ಇದೆ. ಹೌದು ಮಳೆಗಾಲದಲ್ಲಿ ಕೆಲವು ತರಕಾರಿಗಳಲ್ಲಿ ಅತೀ ಹೆಚ್ಚು ಅಗೋಚರವಾಗಿರುವ ಕೀಟಗಳು, ಸೂಕ್ಷ್ಮಾಣು ಜೀವಿಗಳು ಇರುವ ಕಾರಣ ಅವುಗಳ ಸೇವನೆಯಿಂದಲೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಈ ಕೆಲವು ತರಕಾರಿಗಳನ್ನು ಸೇವನೆ ಮಾಡಬಾರದು.

ಮಳೆಗಾಲದಲ್ಲಿ ಸೇವನೆ ಮಾಡಬಾರದ ತರಕಾರಿಗಳು:

ಹೂಕೋಸು: ಮಳೆಗಾಲದಲ್ಲಿ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿ ಹೂಕೋಸಿನ ಎಲೆಗಳನ್ನು ಆಕ್ರಮಿಸುತ್ತವೆ. ಅನೇಕಾರೂ ಸೂಕ್ಷ್ಮ ಜೀವಿಗಳು ಕೂಡ ಇದರಲ್ಲಿರುತ್ತವೆ. ಇದರ ಸೇವನೆಯಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಳೆಗಾಲದಲ್ಲಿ ಹೂಕೋಸನ್ನು ಸೇವನೆ ಮಾಡಿ

ಬದನೆಕಾಯಿ: ಮಳೆಗಾಲದಲ್ಲಿ ಬದನೆಕಾಯಿ ಸೇವಿಸೋದು ಸಹ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ಬದನೆಕಾಯಿ ಹೆಚ್ಚು ಕೀಟಗಳ ಭಾದೆಗೆ ಒಳಗಾಗುತ್ತದೆ.  ಈ ತರಕಾರಿಯೊಳಗೆ ಸಣ್ಣ ಕೀಟಗಳು ಹೆಚ್ಚಾಗಿ ಕಂಡುಬರುತ್ತವೆ. ಹೀಗಿರುವಾಗ ಅದನ್ನು ಸರಿಯಾದ ರೀತಿಯಲ್ಲಿ ಕ್ಲೀನ್‌ ಮಾಡದೇ, ಸರಿಯಾಗಿ ಬೇಯಿಸದರೆ ತಿಂದರೆ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಸೊಪ್ಪು ತರಕಾರಿಗಳು: ಪಾಲಕ್, ಲೆಟಿಸ್, ಮೆಂತ್ಯ ದಂತಹ ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಇವುಗಳನ್ನು ಸೇವಿಸುವುದನ್ನಿ ಸಾಧ್ಯವಾದಷ್ಟು ತಪ್ಪಿಸಬೇಕು. ಏಕೆಂದರೆ ಮಳೆಗಾಲದಲ್ಲಿ, ಪಾಲಕ್ ಸೊಪ್ಪಿನಂತಹ ಎಲೆಗಳ ತರಕಾರಿಗಳು ಸುಲಭವಾಗಿ ಕೊಳೆ, ಸಣ್ಣ ಕೀಟಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಆಶ್ರಯಿಸಬಹುದು. ಆದ್ದರಿಂದ ಈ ಸಮಯದಲ್ಲಿ ಅವುಗಳ ಸೇವನೆಯನ್ನು ತಪ್ಪಿಸಿ, ಈ ಸೊಪ್ಪನ್ನು ತಿನ್ನಲೇಬೇಕು ಎಂದಿದ್ದರೆ ಅವುಗಳನ್ನು ಚೆನ್ನಾಗಿ ತೊಳೆದು ಚೆನ್ನಾಗಿ ತೊಳೆದ ನಂತರವೇ ತಿನ್ನಬೇಕು.

ಎಲೆಕೋಸು: ಮಳೆಗಾಲದ ಸಮಯದಲ್ಲಿ ಎಲೆಕೋಸು ಖರೀದಿಸುವುದನ್ನು ಸಹ ಸಾಧ್ಯವಾದಷ್ಟು ತಪ್ಪಿಸಿ. ಮಳೆಗಾಲದಲ್ಲಿನ ಹೆಚ್ಚಿನ ಆದ್ರತೆಯು ಎಲೆಕೋಸಿನಲ್ಲಿ  ಬ್ಯಾಕ್ಟೀರಿಯಾ ಮತ್ತು ಕೀಟಗಳು ಸಂತಾನೋತ್ಪತ್ತಿ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ತರಕಾರಿಯನ್ನು ಚೆನ್ನಾಗಿ ಸ್ವಚ್ಛಗೊಳಿಸದೆ, ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ರೀತಿ ಗಿಡವನ್ನು ಆರೈಕೆ ಮಾಡಿ

ಅಣಬೆ: ಅಣಬೆಗಳು ನೈಸರ್ಗಿಕವಾಗಿ ಹೆಚ್ಚಿನ ಪ್ರಮಾಣದ ತೇವಾಂಶವನ್ನು ಹೊಂದಿರುತ್ತವೆ, ಇದು ಮಳೆಗಾಲದಲ್ಲಿ ಅವು ಹಾಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ಅಣಬೆ ಖರೀದಿಸುವುದು ಸೂಕ್ತವಲ್ಲ.

ಈ ತರಕಾರಿಗಳು ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ, ಮಳೆಗಾಲದಲ್ಲಿ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ಅವುಗಳನ್ನು ಸುರಕ್ಷಿತವಾಗಿ ಸೇವಿಸುವುದರ ಮೇಲೆ ನಿಮ್ಮ ಗಮನ ಹರಿಸಬೇಕು. ಅಲ್ಲದೆ ತಾಜಾ ತರಕಾರಿಗಳನ್ನು ಖರೀದಿಸಿ, ಅವುಗಳನ್ನು ಚೆನ್ನಾಗಿ ತೊಳೆಯಿರಿ, ಅವುಗಳನ್ನು ಚೆನ್ನಾಗಿ ಬೇಯಿಸಿ ಮತ್ತು ಅವುಗಳನ್ನು ಸರಿಯಾಗಿ ಸಂಗ್ರಹಿಸಿ. ಪಾಲಕ್, ಎಲೆಕೋಸು, ಹೂಕೋಸು, ಬ್ರೊಕೊಲಿ, ಬದನೆ, ಕ್ಯಾಪ್ಸಿಕಂ ಮತ್ತು ಅಣಬೆಗಳಂತಹ ತರಕಾರಿಗಳನ್ನು ಕತ್ತರಿಸುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಕೀಟಗಳು ಮತ್ತು ಕೊಳೆಯನ್ನು ತೆಗೆದುಹಾಕಲು, ಎಲೆಗಳ ತರಕಾರಿಗಳು, ಹೂಕೋಸು ಮತ್ತು ಬ್ರೊಕೊಲಿಯನ್ನು ಸ್ವಲ್ಪ ಉಪ್ಪು ಅಥವಾ ವಿನೆಗರ್ ಸೇರಿಸಿದ ಶುದ್ಧ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಅವುಗಳನ್ನು ಚೆನ್ನಾಗಿ ತೊಳೆಯಿರಿ. ನಂತರವೇ ಸೇವಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್​ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು? – Kannada News | PM Modi announces Nandan Nilekani led task force on exam reforms

ನವದೆಹಲಿ, (ಜುಲೈ 26): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತಾಗಿದೆ. ಇದೊಂದು ಕೇಂದ್ರ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಈ ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಬಹುದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಹೌದು…..ಪರೀಕ್ಷಾ ಸುಧಾರಣೆಗಳಿಗಾಗಿ ಟಾಸ್ಕ್​​ ಫೋರ್ಸ್​​​ ರಚಿಸುವುದಾಗಿ ಖುದ್ದು ಮೋದಿಯೇ ಘೋಷಣೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಪ್ರಧಾನಿ ಮೋದಿ, ಮಾಡಿರುವ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸುವುದಾಗಿ ಘೋಷಣೆ ಮಾಡಿದ್ದಾರೆ.

“ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಭಾರತ ಸರ್ಕಾರ ನಿರಂತರವಾಗಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಈಗಾಗಲೇ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಕಠಿಣ ಕಾನೂನು ನಿಬಂಧನೆಗಳನ್ನು ಒಳಗೊಂಡಿರುವ ಸಂಸತ್ತಿನಲ್ಲಿ ಹೊಸ ಶಾಸನವನ್ನು ಜಾರಿಗೆ ತರಲು ಮುಂದಾಗಿದ್ದೇವೆ. ಆದಾಗ್ಯೂ, ನಾವು ಭವಿಷ್ಯದತ್ತ ನೋಡಬೇಕು. ನಮ್ಮ ಪರೀಕ್ಷಾ ವ್ಯವಸ್ಥೆಯು ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿರಬೇಕು ಮತ್ತು ಅದು ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದ್ದೇವೆ. ಈ ಕಾರ್ಯಪಡೆ ಪರೀಕ್ಷಾ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅದರ ವರದಿಯ ಆಧಾರದ ಮೇಲೆ, ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಆದಷ್ಟು ಬೇಗ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ

Source link

ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನಿವೃತ್ತಿ ಘೋಷಣೆ ಬೆನ್ನಲ್ಲೇ ಆಪ್ತರು ಮತ್ತು ಅಭಿಮಾನಿಗಳಲ್ಲಿ ಆತಂಕ – Kannada News | Siddaramaiahs retirement announcement sparks anxiety among close associates and supporters

ಮಾಜಿ ಸಿಎಂ ಸಿದ್ದರಾಮಯ್ಯImage Credit source: tv9 kannada

ಬೆಂಗಳೂರು, ಜುಲೈ 26: ಸಿದ್ದರಾಮಯ್ಯ (Siddaramaiah) ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದರು. ಈಗಲೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿರುವ ಅವರು, ಆದರೆ 2028ಕ್ಕೆ ಸ್ಪರ್ಧಿಸಲ್ಲ ಎಂದಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯದಿಂದ ಸಿದ್ದರಾಮಯ್ಯ ದೂರಸರಿಯಲು ನಿರ್ಧರಿಸಿದ್ದಾರೆ. ಈ ನಿರ್ಧಾರ ಇದೀಗ ಅವರ ಅಭಿಮಾನಿಗಳು ಸೇರಿದಂತೆ ಆಪ್ತರಲ್ಲಿ ಆತಂಕ ಮನೆ ಮಾಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ನಿವೃತ್ತಿ ಆದ್ರೆ ಮಾರ್ಗದರ್ಶಕರೇ ಇಲ್ಲದಂತಾಗುತ್ತೆ: ಶಾಸಕ ಬಸವರಾಜ ರಾಯರೆಡ್ಡಿ

ಈ ಕುರಿತಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ‘‘2028ಕ್ಕೆ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ಪತ್ರಿಕೆಯಲ್ಲಿ ನೋಡಿದ್ದೇನೆ, ಆದರೆ ಅವರು‌ ನಿವೃತ್ತಿಯಾಗಬಾರದು’’ ಎಂದರು

ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

‘‘ಸಿದ್ದರಾಮಯ್ಯ ನಿವೃತ್ತಿ ಆದರೆ ರಾಜಕಾರಣದಲ್ಲಿ ಒಬ್ಬ ಸೂಕ್ತ ಮಾರ್ಗದರ್ಶಕರೇ ಇಲ್ಲದಂತಾಗುತ್ತೆ. ಇನ್ನೊಂದು ಚುನಾವಣೆ‌ಗೆ ಸ್ಪರ್ಧೆ ಮಾಡಲಿ ಅಂತಾ ಕೇಳಿಕೊಳ್ಳುವೆ’’ ಎಂದು ಹೇಳಿದರು.

ಸಿದ್ದರಾಮಯ್ಯನವರು ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ: ಜಿ.ಸಿ.ಚಂದ್ರಶೇಖರ್ 

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ‘‘ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ನಿವೃತ್ತಿಯಾಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ಅವಶ್ಯಕತೆ ಇದೆ. ಅವರು ರಾಜ್ಯ ಕಂಡಂತಹ ದೊಡ್ಡ ರಾಜಕಾರಣಿ. ಸಿದ್ದರಾಮಯ್ಯನವರು ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ಮುಂದೆ ಕೂಡ ಪಕ್ಷಕ್ಕೆ ಅವರ ಅವಶ್ಯಕತೆ ಇದೆ ಎನ್ನುವುದು ನನ್ನ ಭಾವನೆ’’ ಎಂದರು.

ರಾಹುಲ್ ಗಾಂಧಿ ಹೇಳಿದ್ರೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ: ಶಾಸಕ ಅಶೋಕ್ ಪಟ್ಟಣ್

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಪಟ್ಟಣ್, ‘‘ಚುನಾವಣೆಗೆ ನಿಲ್ಲದಿದ್ದರೂ ಪಕ್ಷದ ಪರ ಕೆಲಸ ಮಾಡುತ್ತಾರೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ 100ಕ್ಕೆ 100ರಷ್ಟು ಗೆಲ್ಲುತ್ತೇವೆ. ರಾಹುಲ್ ಗಾಂಧಿ ಹೇಳಿದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಈಗ ಅವರೇ ಕರೆದು ನೀವು ಕೆಲಸ ಮಾಡಿ ಅಂದರೆ ಮಾಡುತ್ತಾರೆ. ನೀವು ಚುನಾವಣೆಗೆ ನಿಲ್ಲಿ ಅಂದರೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ’’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ – Kannada News | Pm modi announces constituting high powered task force for examination reforms

ನವದೆಹಲಿ, ಜುಲೈ 26: ನೀಟ್ (NEET-UG) ಸೇರಿದಂತೆ ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸೋರಿಕೆ ಮತ್ತು ಅಕ್ರಮಗಳ ಬೆನ್ನಲ್ಲೇ, ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು (High-Powered Task Force) ರಚಿಸುವುದಾಗಿ ಘೋಷಿಸಿದ್ದಾರೆ.

(ಇನ್ನಷ್ಟು ವಿವರಗಳಿಗೆ ನಿರೀಕ್ಷಿಸಿ…)

Source link

IND vs ZIM: ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್ – Kannada News | Vaibhav Sooryavanshi’s Explosive 81: Zimbabwe Tour Century Denied by Brilliant Catch

15 ವರ್ಷಕ್ಕೆ ಅಂತರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಟೀಂ ಇಂಡಿಯಾದ ಯುವ ಆರಂಭಿ ವೈಭವ್ ಸೂರ್ಯವಂಶಿ ಆಡಿರುವ ಬೆರಳೆಣಿಕೆಯ ಪಂದ್ಯಗಳಲ್ಲಿ ಬರೋಬ್ಬರಿ 2 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ವೈಭವ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಉತ್ತಮವಾಗಿ ಆರಂಭವಾಗಲಿಲ್ಲ. ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ವಿಫಲವಾದರೂ, ಮುಂದಿನ ಮೂರು ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ, ವೈಭವ್ ತಮ್ಮ ಎರಡನೇ ಅರ್ಧಶತಕವನ್ನು ಬಾರಿಸುವ ಮೂಲಕ ಶತಕದತ್ತ ಸಾಗುತ್ತಿದ್ದರು. ಆದರೆ ಜಿಂಬಾಬ್ವೆ ಫಿಲ್ಡರ್ ಇವಾನ್ಸ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ವೈಭವ್ ಶತಕ ವಂಚಿತರಾಗಬೇಕಾಯಿತು.

ಹರಾರೆಯಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಮ್ಮ ಮತ್ತು ತಮ್ಮ ತಂಡದ ಖಾತೆಯನ್ನು ತೆರೆದರು. ಅದಾದ ನಂತರವೂ ಅವರ ಆಕ್ರಮಣ ಮುಂದುವರೆಯಿತು. ಹೀಗಾಗಿ ವೈಭವ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ವೈಭವ್ ಶತಕ ಬಾರಿಸುತ್ತಾರೆ ಎಂದು ತೋರುತ್ತಿತ್ತು. ಆದರೆ ವೆಸ್ಲಿ ಮಾಧೇವೆರೆ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಲಾಂಗ್-ಆಫ್‌ನಿಂದ ಓಡಿ ಬಂದ ಬ್ರಾಡ್ ಇವಾನ್ಸ್ ಅದ್ಭುತ ಡೈವಿಂಗ್ ಕ್ಯಾಚ್ ಪಡೆದರು. ವೈಭವ್ ಕೇವಲ 40 ಎಸೆತಗಳಲ್ಲಿ 81 ರನ್ ಗಳಿಸಿದರು, ಇದರಲ್ಲಿ 8 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

Source link

Exit mobile version