ಸಂಪುಟ ವಿಸ್ತರಣೆಗೆ ಇಂದು ದೆಹಲಿಯಲ್ಲಿ ಮಹತ್ವದ ಕಸರತ್ತು: ಹೈಕಮಾಂಡ್ ಗ್ರೀನ್ ಸಿಗ್ನಲ್ ನಿರೀಕ್ಷೆ – Kannada News | Karnataka Cabinet Expansion: CM DK Shivakumar Leaves for Delhi, High Command to Decide on New Ministers

ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಕೆಪಿ ಹರಿಪ್ರಸಾದ್Image Credit source: tv9

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಚರ್ಚೆ ಮತ್ತೆ ಜೋರಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ದೆಹಲಿಗೆ ತೆರಳಲಿದ್ದು, ಸಂಜೆ ರಾಜ್ಯದ ಸಂಸದರೊಂದಿಗೆ ಆಡಳಿತಾತ್ಮಕ ವಿಚಾರವಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಸಂಪುಟ ವಿಸ್ತರಣೆ ಕುರಿತು ಅಂತಿಮ ಹಂತದ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ಇಂದು ದೆಹಲಿಗೆ ತೆರಳಲಿದ್ದಾರೆ.

ಹೈಕಮಾಂಡ್ ಒಪ್ಪಿಗೆ ನೀಡಿದರೆ ಇದೇ ವಾರ, ಜುಲೈ 29 ಅಥವಾ 30ರಂದು ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳ ನೇಮಕದ ಕುರಿತ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಖರ್ಗೆ ಭೇಟಿಗೆ ಸಚಿವಾಕಾಂಕ್ಷಿಗಳ ದಂಡು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳುವ ಮುನ್ನವೇ ಬೆಂಗಳೂರಿನ ಅವರ ನಿವಾಸಕ್ಕೆ ಸಚಿವ ಸ್ಥಾನಾಕಾಂಕ್ಷಿ ಶಾಸಕರು ಭೇಟಿ ನೀಡಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಹಂಪನಗೌಡ ಬಾದರ್ಲಿ, ದದ್ದಲ್, ಅಜಯ್ ಸಿಂಗ್, ರಹೀಂ ಖಾನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಶಾಸಕರು ಖರ್ಗೆ ಅವರನ್ನು ಭೇಟಿಯಾಗಿದ್ದಾರೆ.

ಇದೇ ವೇಳೆ ಬಿ. ನಾಗೇಂದ್ರ, ವಿಜಯಾನಂದ ಕಾಶಪ್ಪನವರ್ ಹಾಗೂ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಕೆಲ ನಾಯಕರು ಪ್ರತ್ಯೇಕವಾಗಿ ದೆಹಲಿಗೆ ತೆರಳಿ ತಮ್ಮ ಪರ ಲಾಬಿ ನಡೆಸುತ್ತಿದ್ದಾರೆ.

ಸಚಿವ ಸ್ಥಾನಕ್ಕಾಗಿ ನಾಯಕರ ನಿರೀಕ್ಷೆ

ಚಿತ್ರದುರ್ಗ ಶಾಸಕ ಶಿವಗಂಗಾ ಬಸವರಾಜ ಅವರು ಸಚಿವ ಸ್ಥಾನ ಕುರಿತು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ನಾನು ಪಕ್ಷದಲ್ಲಿ ಶಿವನ ಮುಂದಿನ ಬಸವ ಇದ್ದಂತೆ. ಡಿಕೆಶಿ ಸಾಹೇಬರನ್ನ ಗಣಪತಿಯಂತೆ ಸುತ್ತುವರಿಯುತ್ತೇನೆ, ಮಂತ್ರಿಗಿರಿ ಕೊಟ್ಟರೆ ಗುಡ್, ಕೊಡದಿದ್ದರೆ ವೆರಿ ಗುಡ್’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮತ್ತೊಂದೆಡೆ ಸಚಿವ ಎಂ.ಬಿ. ಪಾಟೀಲ್ ವಿಜಯಪುರ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ತಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ಸುದ್ದಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇಂದು ರಾಜ್ಯ ಸಂಸದರ ಜತೆ ಡಿಕೆಶಿ ಸಭೆ

ಸಂಸತ್ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸಂಜೆ 6.30ಕ್ಕೆ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಸಭೆ ಕರೆದಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಬಾಕಿ ಉಳಿದಿರುವ ಯೋಜನೆಗಳ ಕುರಿತು ಚರ್ಚಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಂಸದರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನಿವೃತ್ತಿ ಘೋಷಣೆ ಬೆನ್ನಲ್ಲೇ ಆಪ್ತರು ಮತ್ತು ಅಭಿಮಾನಿಗಳಲ್ಲಿ ಆತಂಕ

ಸಂಪುಟ ವಿಸ್ತರಣೆ ಕುರಿತ ಚರ್ಚೆ, ಸಚಿವಾಕಾಂಕ್ಷಿಗಳ ಲಾಬಿ ಹಾಗೂ ದೆಹಲಿಯಲ್ಲಿ ನಡೆಯಲಿರುವ ಸರಣಿ ಸಭೆಗಳ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಯಾವುದು ಎಂಬುದರ ಮೇಲೆ ರಾಜಕೀಯ ವಲಯದ ಚಿತ್ತ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ – Kannada News | Karnataka Weather Forecast: Heavy Rain Alert for Coastal Karnataka on July 27 28, IMD Predicts Strong Winds Across State

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವೆಡೆ ಭಾರಿ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆ (IMD) ಜುಲೈ 27 ಮತ್ತು 28ರಂದು ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಹಾಗೂ ಬಿರುಗಾಳಿಯ ಮುನ್ಸೂಚನೆ (Weather Forecast) ನೀಡಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿಯಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ

ಇಂದು (ಜುಲೈ 27 ರಂದು) ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ. ಜುಲೈ 28 ರಂದೂ ಸಹ ಈ ಮೂರು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಎಲ್ಲೆಲ್ಲಿ ಮಳೆ?

ಜುಲೈ 27 ರಂದು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 40-50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಜುಲೈ 28 ರಂದು ಬೀದರ್, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೂ ಮಳೆ ಮುನ್ಸೂಚನೆ

ಜುಲೈ 27 ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ದಾವಣಗೆರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆ ಇದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಜುಲೈ 28 ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಮುನ್ಸೂಚನೆ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಭಾನುವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಅತೀ ಹೆಚ್ಚು ಮಳೆ ದಾಖಲಾದ ಪ್ರದೇಶಗಳು

  • ಮಂಕಿ (ಉತ್ತರ ಕನ್ನಡ) – 12 ಸೆಂ.ಮೀ.
  • ಮೂಡುಬಿದಿರೆ (ದಕ್ಷಿಣ ಕನ್ನಡ) – 12 ಸೆಂ.ಮೀ.
  • ಬೆಳ್ತಂಗಡಿ (ದಕ್ಷಿಣ ಕನ್ನಡ) – 9 ಸೆಂ.ಮೀ.
  • ಕಾರ್ಕಳ (ಉಡುಪಿ) – 8 ಸೆಂ.ಮೀ.
  • ಧರ್ಮಸ್ಥಳ (ದಕ್ಷಿಣ ಕನ್ನಡ) – 7 ಸೆಂ.ಮೀ.
  • ಮಂಗಳೂರು ವೀಕ್ಷಣಾಲಯ – 7 ಸೆಂ.ಮೀ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇರುವುದರಿಂದ ಮೀನುಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಿನಲ್ಲಿ ಸುಧಾರಿಸಿದ ವಾಯು ಗುಣಮಟ್ಟ! ನಿಮ್ಮ ಏರಿಯಾದ AQI ಎಷ್ಟು? – Kannada News | Karnataka AQI Today: Bengaluru Air Quality Improves to Good Level

ಬೆಂಗಳೂರಿನಲ್ಲಿ ಸುಧಾರಿಸಿದ ವಾಯು ಗುಣಮಟ್ಟ

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟ (AQI) ‘ಉತ್ತಮ’ ಮತ್ತು ‘ಸಾಧಾರಣ’ ಮಟ್ಟದಲ್ಲಿದೆ. ಐಟಿ ಸಿಟಿ ಬೆಂಗಳೂರಿನಲ್ಲಿ ನಿರಂತರ ಮಳೆ ಹಾಗೂ ತಂಪಾದ ಹವಾಮಾನದಿಂದಾಗಿ ಗಾಳಿಯ ಶುದ್ಧತೆ ಹೆಚ್ಚಾಗಿದೆ. ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 47ರಷ್ಟಿದ್ದು, ಇದು ಅತ್ಯುತ್ತಮ ವಾಯು ಮಟ್ಟವನ್ನು ಸೂಚಿಸುತ್ತದೆ.

ಬೆಂಗಳೂರಿನಲ್ಲಿ ನಿರಾಳ ವಾತಾವರಣ

  • ಸಿಟಿ ಸೆಂಟರ್ / ಜಯನಗರ: 35 – 45 (ಅತ್ಯುತ್ತಮ)
  • ಪೀಣ್ಯ ಮತ್ತು ವೈಟ್‌ಫೀಲ್ಡ್: 50 – 65 (ಸಾಧಾರಣ)

PM2.5 ಮತ್ತು PM10 ಪ್ರಮಾಣಗಳು ತೀರಾ ಕಡಿಮೆಯಾಗಿದ್ದು, ಸಾರ್ವಜನಿಕರು ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.ಮಳೆಯಿಂದಾಗಿ ಧೂಳಿನ ಕಣಗಳು ನೆಲಸಮಗೊಂಡಿರುವುದು ಮತ್ತು ವಾಹನ ಸಂಚಾರದ ಹೊಗೆ ಶಮನವಾಗಿರುವುದು ನಗರದಲ್ಲಿ ಗಾಳಿ ಶುದ್ಧವಾಗಲು ಮುಖ್ಯ ಕಾರಣವಾಗಿದೆ.

ರಾಜ್ಯದ ಇತರೆ ನಗರಗಳಲ್ಲಿ ಹೇಗಿದೆ ಗಾಳಿಯ ಸ್ಥಿತಿ?

  • ಮೈಸೂರು ಹಾಗೂ ಮಡಿಕೇರಿ: 30 ರಿಂದ 40 AQI (ಅತ್ಯಂತ ಶುದ್ಧ ಗಾಳಿ)
  • ಮಂಗಳೂರು ಮತ್ತು ಉಡುಪಿ: 25 ರಿಂದ 35 AQI (ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಮಾಲಿನ್ಯ ಮುಕ್ತ)
  • ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ: 45 ರಿಂದ 55 AQI (ಉತ್ತಮ ಸ್ಥಿತಿ)

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, 0-50 ರವರೆಗಿನ AQI ಅನ್ನು ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಕರ್ನಾಟಕದ ಪ್ರಮುಖ ನಗರಗಳು ಇದೇ ವಲಯದಲ್ಲಿದ್ದು, ಉಸಿರಾಟದ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರಿಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವುದರಿಂದ ವಾಯು ಗುಣಮಟ್ಟ ಹೀಗೆಯೇ ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Mangala Trayodashi Horoscope Today: July 27, 2026 Daily Horoscope for All 12 Zodiac Signs in Kannada

ಇಂದು 2026 ಜುಲೈ 27 ರ ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ ಕನ್ನಡ ಡಿಜಿಟಲ್​ನ ದಿನ ಭವಿಷ್ಯ ಕಾರ್ಯಮದಲ್ಲಿ ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿಯಂದು ಚಂದ್ರನು ಧನುಸ್ಸು ರಾಶಿಯ ಮೂಲಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ದಿನವು ಮಂಗಳ ತ್ರಯೋದಶಿಯಾಗಿದ್ದು, ಶುಭಕರವಾದ ಫಲಗಳನ್ನು ನೀಡುತ್ತದೆ. ಅಲ್ಲದೆ, ಲಯಕಾರಕ ಶಿವನ ಆರಾಧನೆಗೆ ಉತ್ತಮ ದಿನವಾಗಿದೆ. ಬೆಳಗ್ಗೆ 7:40 ರಿಂದ 9:15 ರವರೆಗೆ ರಾಹುಕಾಲವಿದ್ದರೆ, 9:14 ರಿಂದ 10:50 ರವರೆಗೆ ಶುಭಕಾಲ ಇರಲಿದೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅನ್ಯಾಯದಲ್ಲಿ ಗೊತ್ತಿಲ್ಲದೇ ಸಿಕ್ಕಿಹಾಕಿಕೊಳ್ಳುವರು – Kannada News | Daily Horoscope for July 27, 2026: Uttarayan Greeshma season, Ashada Masa shukla Paksha Monday astrology Prediction

ಮೇಷ ರಾಶಿ :

ಇಂದು ನಿಮ್ಮ ಅನಪೇಕ್ಷಿತ ಹಸ್ತಕ್ಷೇಪದಿಂದಾ ಲಾಭದ ಹಾದಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಎಲ್ಲವನ್ನೂ ನೀವು ನಿಭಾಯಿಸಲು ಸಾಧ್ಯವಾಗದು. ಎಷ್ಟೋ ದಿನಗಳಿಂದ ಅನುಭವಿಸಬೇಕಾದುದನ್ನು ನೀವು ಇಂದು ಅನುಭವಿಸುವಿರಿ. ಇಂದು ಬರುವ ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸೀತು. ನಿಮ್ಮ ಮಾತೇ ನಿಮಗೆ ಮುಳುವಾಗಬಹುದು. ನಿಮಗೆ ಬೇಕಾದ ಯಾವುದನ್ನೂ ಇಂದು ಸುಲಭವಾಗಿ ಪಡೆಯಲಾಗದು.

ವೃಷಭ ರಾಶಿ:

ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ತೊಂದರೆಗಳು ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಒಯ್ಯಬಹುದು. ದುರದೃಷ್ಟವನ್ನು ದಾನದಿಂದ ತೊಳೆದುಕೊಳ್ಳುವ ದಾರಿಯು ಗೊತ್ತಾಗಲಿದೆ. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.‌ ಅಪಮಾನದ ಭಯದಿಂದ ಕೆಲಸ ಮಾಡುವಿರಿ. ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿ ನೀವಿರುವಿರಿ.ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ.

ಮಿಥುನ ರಾಶಿ:

ಮನೆಯಲ್ಲಿ ಮಾಡಲಾಗದೇ ಮುಂದೂಡಿದ್ದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಈ ದಿನ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ದೂರಾಲೋಚನೆಯಿಂದ ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇರುವುದರಿಂದ ಅಲ್ಲಿಯೇ ಅದು ಮುಕ್ತಾಯವಾಗಬಹುದು. ಅನವಶ್ಯಕ ಮಾತುಗಳಿಗೆ ಅವಕಾಶ ಮಾಡಿಕೊಡವುದು ಬೇಡ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ.

ಕರ್ಕಾಟಕ ರಾಶಿ:

ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ದಿನ ನೀವು ಕಠಿಣ ಪರಿಶ್ರಮದ ಅನಂತರ ಅಂದುಕೊಂಡಿದ್ದನ್ನು ಅಲ್ಪವಾದರೂ ಸಾಧಿಸುವಿರಿ. ನೀವು ಇಂದು ಸುಳ್ಳನ್ನಾಡಬೇಕಾಗಿ ಬರವುದು. ಅಶಿಸ್ತಿನಿಂದ ನಿಮಗೆ ಕೋಪ ಬರಲಿದ್ದು ಮನೆಯವರ ಮೇಲೆ ತೋರಿಸುವಿರಿ. ಇಂದಿನ ಘಟನೆಗಳು ಮಾನಸಿಕವಾಗಿ ಕಿರಿಕಿರಿಯನ್ನು ಮಾಡುತ್ತವೆ. ಸಹವಾಸದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಅಸಮತೋಲನ‌ ಕಾಣಿಸಿಕೊಳ್ಳುವುದು.

ಸಿಂಹ ರಾಶಿ:

ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಈ ದಿನ ನೀವು ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಯೋಗ್ಯತೆಯನ್ನು ಅರಿತು ಕೆಲವನ್ನು ಕೊಡಿ. ಆಹಾರದಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವಿರಿ. ಪ್ರೇಮದಲ್ಲಿ ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಸ್ವಾಮಿನಿಷ್ಠೆಯನ್ನು ಇಟ್ಟುಕೊಂಡವರಿಗೆ ಆದ್ಯತೆ ಸಿಗಲಿದೆ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ.

ಕನ್ಯಾ ರಾಶಿ:

ವಿನಾಕಾರಣ ವಾಗ್ವಾದವನ್ನು ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನೀವು ಈ ದಿನ ಕೆಲಸದ ಸ್ಥಳದಲ್ಲಿ ಕೊಪವನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ವೈದ್ಯಕೀಯ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುವ ಯೋಜನೆ ಇರುವುದು. ಹಣಕಾಸಿನ ವಿಚಾರದಲ್ಲಿ ನೀವು ದಂಡ ತೆರಬೇಕಾದೀತು. ಪ್ರಯಾಣದಲ್ಲಿ ಕೆಲವು ಕಾಲ ತಡೆಯುಂಟಾಗಲಿದ್ದ ಗಲಿಬಿಲಿಗೊಳ್ಳುವಿರಿ. ಅಪರಿಚಿತರ ಮಾತನ್ನು ಕೇಳಿ ಎಲ್ಲ ಕಾರ್ಯವನ್ನೂ ಹಾಳುಮಾಡಿಕೊಳ್ಳುವಿರಿ.

ತುಲಾ ರಾಶಿ:

ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಸುಖವು ಸಿಗುವ ಸೂಚನೆ ಇರುವುದು. ಕೆಲಸಗಳನ್ನು ಬಹಳ ಸಂಕೀರ್ಣ ಮಾಡಿಕೊಳ್ಳುವಿರಿ. ಸರಳವಾದ ಆಲೋಚನೆಯಿಂದ ನಿಮ್ಮ ಕೆಲಸಗಳು ಸಲೀಸಾಗಬಹುದು. ಅಂಗೈ ಗಾಯಕ್ಕೆ ಕನ್ನಡಿ ನೋಡುವ ಅವಶ್ಯಕತೆ ಇಲ್ಲ. ಬೇಕಾದುದನ್ನು ಅವರಿಗೆ ನೀಡಿ ಖುಷಿಪಡಿಸುವಿರಿ. ಭಕ್ತಿಯಲ್ಲಿ ಏಕಾಗ್ರತೆಯನ್ನು ಸಾಧಿಸಲಾಗದು. ನಿಮ್ಮಿಂದ ಪಾಲಕರಿಗೆ ತೊಂದರೆಯಾಗುವುದು.

ವೃಶ್ಚಿಕ ರಾಶಿ:

ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ನಿಮಗೆ ಇಷ್ಟವಾದವರ ಜೊತೆ ನಿಮ್ಮ ವಾಯವಿಹಾರ ಮಾಡುವಿರಿ. ಇಂದು ಬಾಯಿ ಚಪಲಕ್ಕೆ ಅಹಿತಕರವಾದ ಆಹಾರವನ್ನು ಸೇವಿಸುವಿರಿ. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಕುಳಿತುಕೊಳ್ಳುವಿರಿ. ಒಳ್ಳೆಯ ಉದ್ದೇಶಕ್ಕೆ ಮಾಡಿದ ಕಾರ್ಯವು ದುರುಪಯೋಗವಾಗಲಿದೆ. ಹಳೆಯ ಮನೆಯ ರಿಪೇರಿ ಕೆಲಸ ಮಾಡುವಿರಿ. ನೂತನ ಉದ್ಯೋಗವನ್ನು ಆರಂಭಿಸಲು ಭಯವಿರುವುದು.

ಧನು ರಾಶಿ:

ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಈ ದಿನ ನಿಮಗೆ ವಾಹನ ಮತ್ತು ವಸತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ನಿಮ್ಮ ಹಣವನ್ನು ಪರಿಚಿತರು ಕೇಳಬಹುದು. ನಿಮ್ಮ ಸೌಂದರ್ಯ ನಿಮಗೆ ತೊಂದರೆ ಕೊಡಬಹುದು.

ಮಕರ ರಾಶಿ:

ಇಂದು ನೀವು ಕೆಲಸವು ಬೇಕಷ್ಟು ಇದ್ದರೂ ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಂದು ನೀವು ಧೈರ್ಯವನ್ನು ಕಳೆದುಕೊಳ್ಳದೇ ಮುನ್ನಡೆಯಿರಿ. ಕೆಲವು ನಷ್ಟಗಳು ನಿಮ್ಮ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡದು. ಹಣಕಾಸಿನ ವಿಚಾರದಲ್ಲಿ ಕಛೇರಿಯಲ್ಲಿ ಕಲಹವಾದೀತು. ದಾಖಲೆಗಳನ್ನು ಸರಿಯಾಗಿ ಇಡಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ಒಪ್ಪದೇ ಮುಂದೂಡುವಿರಿ.

ಕುಂಭ ರಾಶಿ:

ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಇಂದು ನೀವು ಹಣಕಾಸಿನ ವ್ಯವಹಾರಕ್ಕೆ ವಾದ ಮಾಡುವ ಹಾಗೆ ಆಗಬಹುದು. ನಿಮ್ಮ ಕಾರ್ಯಕ್ರಮಗಳು ಎಲ್ಲವೂ ವ್ಯತ್ಯಾಸವಾಗಲಿದೆ. ಯಾರನ್ನೂ ಸಹಿಸಿಕೊಳ್ಳುವ ಸ್ಥಿತಿ ಇರದು. ಸಂಪನ್ಮೂಲವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸಂಕುಚಿತ ಭಾವವು ಇಷ್ಟವಾಗದು. ಅವರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ‌. ಅಕಾಲಿಕ ಭೋಜನ ಅತಿಯಾಗುವುದು.

ಮೀನ ರಾಶಿ:

ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿಕೊಳ್ಳದೇ ದಿನವನ್ನು ಕಳೆಯುವಿರಿ. ಇಂದು ನಿಮ್ಮ ಸಮಯವು ಸದುಪಯೋಗವಾಗಿದೆ ಎಂದು ಅನ್ನಿಸಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆದುಕೊಳ್ಳಬಹುದು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಅಧಿಕ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮೂಲಾ, ಯೋಗ : ವಿಷ್ಕಂಭ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:47, ಯಮಗಂಡ ಕಾಲ 12:26 – 14:01, ಗುಳಿಕ ಕಾಲ 15:37 – 17:12

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದೇವಿ’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ನಟಿ ಭವ್ಯಾ – Kannada News | Bigg Boss ex contestant Bhavya talks about Devi movie

ಬಿಗ್​​ಬಾಸ್ (Bigg Boss) ಮಾಜಿ ಸ್ಪರ್ಧಿ ಮತ್ತು ನಟಿ ಭವ್ಯಾ ಅವರು ‘ದೇವಿ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಟಿ ಭವ್ಯಾ ಅವರು ‘ದೇವಿ’ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ‘ದೇವಿ’ ಸಿನಿಮಾನಲ್ಲಿ ತಮ್ಮದು ಕಾಲೇಜು ಯುವತಿಯ ಪಾತ್ರ ಎಂದ ನಟಿ, ಬಹಳ ಮಾಡರ್ನ್ ಅಲ್ಲದ ಹಾಗೆಯೇ ಬಹಳ ಗ್ರಾಮೀಣ ಸಹ ಅಲ್ಲದ ರೀತಿಯ ಯುವತಿಯ ಪಾತ್ರ ತಮ್ಮದು ಎಂದಿದ್ದಾರೆ. ಅಲ್ಲದೆ, ತಾವು ‘ದೇವಿ’ ಸಿನಿಮಾ ಅನ್ನು ಒಪ್ಪಿಕೊಳ್ಳಲು ಕಾರಣ ಏನೆಂಬುದನ್ನು ಸಹ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು ಅಂದಿದ್ದಕ್ಕೆ ಸಿಟಿ ರವಿ ಏನಂದ್ರು ನೋಡಿ

ದಾವಣಗೆರೆ, ಜುಲೈ 26: ‘ಮುಲ್ಲಾ ಹೇಳಿಕೆಯನ್ನು ಯಾವುದೇ ಭಯವಿಲ್ಲದೆ, ನೂರಕ್ಕೆ ಸಾವಿರ ಸಾರಿ ಕೋರ್ಟ್ ಮುಂದೆ ಸಹ ಹೇಳುತ್ತೇನೆ. ಜೀವನದಲ್ಲಿ ಹಿಂದಿಟ್ಟ ಹೆಜ್ಜೆ ಇಲ್ಲ’ ಎಂದು ಬಿಜೆಪಿ ಪರಿಷತ್​ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಈ ಹೇಳಿಕೆಯು ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಹೇಳಿರುವುದು. ದೆಹಲಿಯಲ್ಲಿ ನೀಟ್ ಚಳುವಳಿಯ ಸಂದರ್ಭದಲ್ಲಿ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಿದ ಮುಲ್ಲಾನನ್ನು ಉದ್ದೇಶಿಸಿ ನಾನು ಮಾತನಾಡಿದ್ದು, ಅವನನ್ನು ಸಮರ್ಥಿಸುವವರೆಲ್ಲರೂ ಪಾಪಿಗಳು ಮತ್ತು ಅಧರ್ಮಿಗಳು’ ಎಂದು ಅವರು ಆರೋಪಿಸಿದರು. ‘ನೀಟ್ ಪರೀಕ್ಷೆಗೆ ಸಂಬಂಧಿಸಿದ ಚಳುವಳಿಯಲ್ಲೇ ಈ ಘಟನೆ ನಡೆದಿರುವ ಮಾಹಿತಿ ಇದೆ. ಇದಲ್ಲದೆ, ಸೈನಿಕರು ಮತ್ತು ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದ ಬಗ್ಗೆಯೂ ವಿಡಿಯೋ ಸಾಕ್ಷ್ಯಗಳಿವೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಇದ್ದಕ್ಕಿದ್ದಂತೆ ತಂಡ ಬದಲಾಯಿಸಿದ ಆರ್​​ಸಿಬಿ ವೇಗಿ ಯಶ್ ದಯಾಳ್

Source link

ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಡೆ: ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚನೆ – Kannada News | Karnataka Public Service Commission freezes vet recruitment list after scam allegations

ಬೆಂಗಳೂರು, ಜುಲೈ 26): ಕರ್ನಾಟಕ ಲೋಕಸೇವಾ ಆಯೋಗವು (KPSC) ಮೊದಲಿನಿಂದಲೂ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವೇ ಆಗಿದೆ. ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಬಗ್ಗೆ ಸಾಲು ಸಾಲು ದೂರುಗಳು ಬೆಳಕಿಗೆ ಬರುತ್ತಿದ್ದು, ಇದೀಗ ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆಗೆ ಮುಂದಾಗಿದೆ. ಈ ಸಂಬಂಧ ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗವು 2026ರ ಜುಲೈ 26ರಂದು ತುರ್ತು ಸಭೆ ನಡೆಸಿದೆ.
ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಆರೋಪಗಳ ಗಂಭೀರತೆಯನ್ನು ಮನಗಂಡು ಆಯೋಗವು ಕೆಳಕಂಡ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್​​ಗೆ ಮತ್ತೊಂದು ಶಾಕ್​​: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಸಂಬಂಧ FIR

ಪ್ರಾಥಮಿಕ ಮಾಹಿತಿಯ ಪರಿಶೀಲನೆ: 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ 2026ರ ಜುಲೈ 25ರಂದು ಪೊಲೀಸ್ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು (FIR) ಆಯೋಗವು ಗಂಭೀರವಾಗಿ ಪರಿಗಣಿಸಿದೆ.

ಆಂತರಿಕ ತನಿಖಾ ಉಪಸಮಿತಿ ರಚನೆ: ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದೆ.

ಒಂದು ವಾರದಲ್ಲಿ ವರದಿ ಸಲ್ಲಿಕೆ: ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ ಹಾಗೂ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಾಸ್ತವಾಂಶಗಳ ಕುರಿತ ವಿವರವಾದ ವರದಿಯನ್ನು ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಲಾಗಿದೆ.

ತನಿಖೆಗೆ ನೋಡಲ್ ಅಧಿಕಾರಿಗಳ ನೇಮಕ: ತನಿಖಾ ಕಾರ್ಯಕ್ಕೆ ಅಗತ್ಯವಾದ ಆಡಳಿತಾತ್ಮಕ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಕೆಪಿಎಸ್‌ಸಿ ಕಾರ್ಯದರ್ಶಿಯನ್ನು ಹಾಗೂ ಅಗತ್ಯ ಕಾನೂನು ಸಲಹೆ ನೀಡಲು ಕಾನೂನು ವಿಭಾಗದ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ: ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ, 2026ರ ಜುಲೈ 17ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗವು ನಿರ್ಧರಿಸಿದೆ.

ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ – Kannada News | Yuva Raitha Chethan talks about his movie Devi

ಯುವ ರೈತ ಚೇತನ್, ‘ದೇವಿ’ (Devi) ಸಿನಿಮಾನಲ್ಲಿ ನಾಯಕರಾಗಿ ನಟಿಸಿದ್ದಾರೆ. ನಾಯಕ ನಟ ಆಗಬೇಕು ಎಂಬುದು ಅವರ 10 ವರ್ಷದ ಕನಸಂತೆ. ಆ ಕನಸನ್ನು ‘ದೇವಿ’ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚೇತನ್, ತಾವು ನಟ ದರ್ಶನ್ ಅವರ ಅಭಿಮಾನಿ ಆಗಿದ್ದು, ಅವರನ್ನು ನೋಡಿ ಸಿನಿಮಾ ಹೀರೋ ಆಗಬೇಕೆಂಬ ಕನಸು ಮೂಡಿತ್ತು ಎಂದು ಹೇಳಿದ್ದಾರೆ. ಯುವ ರೈತ ಎಂದು ತಮ್ಮನ್ನು ಕರೆದುಕೊಳ್ಳು ಚೇತನ್ ಚಿತ್ರರಂಗದ ಬಗ್ಗೆ, ತಮ್ಮ ಸಿನಿಮಾ ‘ದೇವಿ’ ಬಗ್ಗೆ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version