ಸೋಲಿನ ಬೆನ್ನಲ್ಲೇ ಮತ್ತೆ ಪುಟಿದೇಳಲು ರೆಡಿ ಆದ ಮಣಿರತ್ನಂ; ದೊಡ್ಡ ಪ್ಲ್ಯಾನ್ – Kannada News | Mani Ratnam Begins Shooting For His Next Love Story With Vijay Sethupathi and Sai Pallavi At Howrah Bridge

ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ನಿರ್ದೇಶನದ ಕೊನೆಯ ಸಿನಿಮಾ ‘ಥಗ್ ಲೈಫ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ಹೀನಾಯ ಸೋಲು ಕಂಡಿತು. ಇಂದಿನ ಜನರ ಇಷ್ಟಕ್ಕೆ ತಕ್ಕಂತೆ ಅವರು ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹಲವರು ಸಲಹೆ ನೀಡಿದ್ದರು. ಹೀಗಾಗಿ, ಮಣಿರತ್ನಂ ಈಗ ತಮಗೆ ಅತ್ಯಂತ ಹಿಡಿತವಿರುವ ರೋಮ್ಯಾಂಟಿಕ್ ಕಥೆಗಳ ಜೋನರ್‌ಗೆ ಮರಳಿದ್ದಾರೆ ಎಂದು ವರದಿ ಆಗಿದೆ.

ಮಣಿರತ್ನಂ ಕೋಲ್ಕತ್ತಾದ ಹೌರಾ ಬ್ರಿಡ್ಜ್ ಹಿನ್ನೆಲೆ ಇಟ್ಟುಕೊಂಡು ಹೊಸ ಕಥೆಯೊಂದನ್ನು ಹೆಣೆಯುತ್ತಿದ್ದಾರೆ. ತಮ್ಮ ಕೊನೆಯ ಸಿನಿಮಾ ಸೋಲಿನ ಬಳಿಕ ಅವರು ಮತ್ತೊಮ್ಮೆ ಪ್ರೇಮಕಥೆಯನ್ನೇ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸಿನಿರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕೋಲ್ಕತ್ತಾದ ಸುಂದರ ಪರಿಸರದಲ್ಲಿ ಚಿತ್ರದ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ.

ಮಣಿರತ್ನಂ ಕೊನೆಯದಾಗಿ 2009ರ ‘ರಾವಣ್’ ಸಿನಿಮಾಗಾಗಿ ಕೋಲ್ಕತ್ತಾದಲ್ಲಿ ಶೂಟಿಂಗ್ ಮಾಡಿದ್ದರು. ಈಗ ದಶಕಗಳ ಬಳಿಕ ಮತ್ತೆ ಪ್ರೇಮಕಾವ್ಯವನ್ನು ತೆರೆಗೆ ತರಲು ಈ ಸುಂದರ ನಗರವನ್ನು ಆರಿಸಿಕೊಂಡಿದ್ದಾರೆ. ಹೌರಾ ಬ್ರಿಡ್ಜ್ ಈಗಾಗಲೇ ಹಲವು ಎವರ್‌ಗ್ರೀನ್ ಪ್ರೇಮಕಥೆಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ಅವರು ವಿಜಯ್ ಸೇತುಪತಿ ಜೊತೆ ‘ಚೆಕ್ಕ ಚಿವಂತ ವಾನಮ್’ ಬಳಿಕ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ನಟಿ ಸಾಯಿ ಪಲ್ಲವಿ ಅವರೊಂದಿಗೆ ಮಣಿರತ್ನಂಗೆ ಇದು ಮೊದಲ ಸಿನಿಮಾವಾಗಿದೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಈ ಮೊದಲು ವೇದಿಕೆ ಒಂದರಲ್ಲಿ ಸಾಯಿ ಪಲ್ಲವಿಗೆ ವೇದಿಕೆ ಮೇಲೆಯೇ ಸಾಯಿ ಪಲ್ಲವಿಗೆ ಸಿನಿಮಾ ಆಫರ್ ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಬಾರಿ ಗೆಲ್ಲಲು ಇದುವೇ ಕಾರಣ: ಶ್ರೇಯಸ್ ಅಯ್ಯರ್ – Kannada News | Shreyas iyer Post match interview after IND vs ZIM 3rd T20 Match

ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಯುವ ಪಡೆಯ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಂಡದಲ್ಲಿರುವ ಯುವ ಆಟಗಾರರು ಅತ್ಯಂತ ಭಯವಿಲ್ಲದೆ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಾಯಕರಾಗಿ ತಮ್ಮ ಮೊದಲ ಸರಣಿ ಗೆಲುವಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನಮ್ಮ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಅವರು ಮೈದಾನದಲ್ಲಿ ತೋರುತ್ತಿರುವ ಎನರ್ಜಿ ಮತ್ತು ಆಟದ ಮೇಲಿರುವ ಅವರ ಬದ್ಧತೆ ನಿಜಕ್ಕೂ ಅದ್ಭುತ. ಅದರಲ್ಲೂ ಸತತವಾಗಿ ಪಂದ್ಯಗಳನ್ನು ಆಡುವಾಗ ಇಷ್ಟೊಂದು ಉತ್ಸಾಹ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ.

ಒಬ್ಬ ನಾಯಕನಾಗಿ ಹಾಗೂ ತಂಡವಾಗಿ ನಮಗೆ ಇಂತಹ ಎನರ್ಜಿಯ ಅಗತ್ಯವಿತ್ತು. ಹೀಗಾಗಿಯೇ ಝಿಂಬಾಬ್ವೆ ನೆಲದಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿರುವುದು ನನಗೆ ಅತ್ಯಂತ ವಿಶೇಷ ಕ್ಷಣ ಎಂದು ಅಯ್ಯರ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಸೀನಿಯರ್-ಜೂನಿಯರ್ ಅನುಭವ:

ತಂಡದ ಉಳಿದ ಆಟಗಾರರಿಗಿಂತ ನಿಮಗೇ ಹೆಚ್ಚಿನ ಅನುಭವವಿದೆಯೇ ಮತ್ತು ನಾಯಕನಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, ದಾಖಲೆಗಳನ್ನು ಗಮನಿಸಿದರೆ ನಾವೆಲ್ಲರೂ ಸರಿಸುಮಾರು 55 ರಿಂದ 60 ಪಂದ್ಯಗಳನ್ನಷ್ಟೇ ಆಡಿದ್ದೇವೆ. ಹಾಗಾಗಿ ನಾವೆಲ್ಲರೂ ಒಂದೇ ಮಟ್ಟದಲ್ಲಿದ್ದೇವೆ. ಅಂದರೆ ಇಲ್ಲಿ ಸೀನಿಯರ್-ಜೂನಿಯರ್ ಸಮಾನ ಅನುಭವ ಹೊಂದಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯುವ ಆಟಗಾರರು ಐಪಿಎಲ್ ಆಡುವುದರಿಂದ ಅವರಿಗೂ ಭರಪೂರ ಅನುಭವ ಸಿಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು ತಮ್ಮ ನಾಯಕತ್ವದ ಶೈಲಿಯ ಬಗ್ಗೆ ಮಾತನಾಡಿದ ಶ್ರೇಯಸ್, ಮೈದಾನಕ್ಕೆ ಇಳಿದಾಗಲೆಲ್ಲಾ ತಂಡದ ಆಟಗಾರರು ಯಾವುದೇ ಒತ್ತಡವಿಲ್ಲದೆ, ಆರಾಮವಾಗಿ ಇರುವಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ಆಟಗಾರರು ಒತ್ತಡ ಮುಕ್ತವಾಗಿದ್ದಾಗ ಮಾತ್ರ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತರಲು ಸಾಧ್ಯ ಎಂದು ತಮ್ಮ ಯಶಸ್ಸಿನ ಸೂತ್ರವನ್ನು ಬಿಚ್ಚಿಟ್ಟರು.

ಸಾಂಘಿಕ ಪ್ರದರ್ಶನವೇ ಬಲ:

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್—ಮೂರೂ ವಿಭಾಗಗಳಲ್ಲೂ ಆಟಗಾರರು ಜವಾಬ್ದಾರಿಯನ್ನು ಹೊತ್ತುಕೊಂಡು, ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿರುವುದನ್ನು ನೋಡುವುದೇ ನಾಯಕನಿಗೆ ಒಂದು ಅದ್ಭುತ ಅನುಭವ. ಭವಿಷ್ಯದ ಯಶಸ್ಸಿಗೂ ನಮಗೆ ಇದೇ ರೀತಿಯ ಪ್ರದರ್ಶನದ ಅಗತ್ಯವಿದೆ. ಸದ್ಯ ತಂಡದಲ್ಲಿ ಉತ್ತಮ ಲಯ ಸೃಷ್ಟಿಯಾಗಿದ್ದು, ನಮ್ಮ ಆಟದ ಶೈಲಿ ಮತ್ತು ಧೋರಣೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದರು.

ಇದೇ ವೇಳೆ ಭವಿಷ್ಯದ ಸವಾಲುಗಳ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳು ಖಂಡಿತ ಸವಾಲಿನಿಂದ ಕೂಡಿರಲಿವೆ. ಆದರೆ ನಮ್ಮ ತಂಡದಲ್ಲಿರುವ ಸಂಯಮ ಮತ್ತು ಆಟಗಾರರು ಪ್ರದರ್ಶಿಸುತ್ತಿರುವ ಧೈರ್ಯವನ್ನು ಗಮನಿಸಿದರೆ, ಇದು ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಶುಭ ಶಕುನ ಎಂದು ನನಗೆ ಅನಿಸುತ್ತದೆ ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, ಝಿಂಬಾಬ್ವೆ ವಿರುದ್ಧದ ಈ ಕ್ಲೀನ್ ಸ್ವೀಪ್ ಗೆಲುವು ಕೇವಲ ಒಂದು ಸರಣಿಯ ಯಶಸ್ಸಷ್ಟೇ ಅಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯ ಮುನ್ನುಡಿಯಾಗಿದೆ. ನಾಯಕ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಹಾಗೂ ಆಟಗಾರ ಸ್ನೇಹಿ ನಾಯಕತ್ವ, ಯುವ ಪಡೆಯ ಭಯವಿಲ್ಲದ ಆಟ ಮತ್ತು ಮೂರೂ ವಿಭಾಗಗಳ ಸಾಂಘಿಕ ಪ್ರದರ್ಶನ ಟೀಮ್ ಇಂಡಿಯಾದ ಬಲಿಷ್ಠತೆಯನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ: CWG 2026: ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ!

ಫಲಿತಾಂಶಕ್ಕಿಂತ ನಿರಂತರ ಸುಧಾರಣೆಗೆ ಒತ್ತು ನೀಡುವ ಶ್ರೇಯಸ್ ಅಯ್ಯರ್ ಅವರ ಈ ಹೊಸ ಆಲೋಚನಾ ಶೈಲಿ, ಮುಂಬರುವ ಕಠಿಣ ಸವಾಲುಗಳನ್ನು ಎದುರಿಸಲು ಮತ್ತು ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರಭುತ್ವವನ್ನು ಕಾಯ್ದುಕೊಳ್ಳಲು ಯುವ ತಂಡಕ್ಕೆ ದಿಕ್ಸೂಚಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

Source link

ಅಮೆರಿಕ-ಇರಾನ್ ಸಂಘರ್ಷ ಶಮನ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ, ಹಣದುಬ್ಬರ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗುವ ಪರಿಣಾಮವೇನು? – Kannada News | US Iran Truce: Oil Prices Plummet, Impact on Global Economy, Inflation and India

ನ್ಯೂಯಾರ್ಕ್,ಜುಲೈ 27: ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ(Crude Oil) ಬೆಲೆಗಳು ತೀವ್ರ ಕುಸಿತ ಕಂಡಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಸದ್ಯಕ್ಕೆ ಶಮನಗೊಂಡಿರುವುದರಿಂದ ಇಂಧನ ಪೂರೈಕೆಯಲ್ಲಿ ಎದುರಾಗಿದ್ದ ಅಡಚಣೆಗಳ ಆತಂಕ ದೂರವಾಗಿದ್ದು, ಕಚ್ಚಾ ತೈಲ ಬೆಲೆ ಶೇಕಡಾ 4.9 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 92.02 ಡಾಲರ್‌ಗೆ ತಲುಪಿದೆ.

ಕಳೆದ ವಾರವಷ್ಟೇ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 102 ಡಾಲರ್‌ಗಳ ಗಡಿ ದಾಟಿ ಇತ್ತೀಚಿನ ತಿಂಗಳುಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿತ್ತು. ಆದರೆ ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಘೋಷಣೆಯಿಂದಾಗಿ ಮಾರುಕಟ್ಟೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಹೂಡಿಕೆದಾರರು ಲಾಭ ಕಾಯ್ದಿರಿಸಲು ಮುಂದಾಗಿದ್ದಾರೆ.

ಕಚ್ಚಾ ತೈಲ ಬೆಲೆ ಇಳಿಕೆಗೆ ಕಾರಣಗಳು
ಮಿಲಿಟರಿ ಹಿಂಜರಿತ: ಅಮೆರಿಕ ಮತ್ತು ಇರಾನ್ ಸತತ ಎರಡು ದಿನಗಳಿಂದ ಪರಸ್ಪರ ದಾಳಿಗಳಿಂದ ದೂರವುಳಿದಿರುವುದು ಜಾಗತಿಕ ಇಂಧನ ಕಾರಿಡಾರ್‌ನಲ್ಲಿ ಸಾಗಣೆ ಸುಗಮಗೊಳ್ಳುವ ಭರವಸೆ ನೀಡಿದೆ.

ಹಾರ್ಮುಜ್ ಜಲಸಂಧಿಯ ಭದ್ರತೆ: ವಿಶ್ವದ ಒಟ್ಟು ತೈಲ ರಫ್ತಿನ ಶೇ. 20 ರಷ್ಟು ಭಾಗವು ಹಾದುಹೋಗುವ ಇರಾನ್‌ನ ಕರಾವಳಿಯ ‘ಹಾರ್ಮುಜ್ ಜಲಸಂಧಿ’ಯಲ್ಲಿ ಸಂಚಾರ ಮತ್ತೆ ಯಥಾಸ್ಥಿತಿಗೆ ಮರಳುವ ಲಕ್ಷಣಗಳು ಕಂಡುಬಂದಿವೆ.  ರೆಡ್ ಸೀ ಮಾರ್ಗದಲ್ಲಿ ಸೌದಿ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಗಳ ಭೀತಿ ಕಡಿಮೆಯಾಗಿರುವುದು ಮಾರುಕಟ್ಟೆಗೆ ಸಮಾಧಾನ ತಂದಿದೆ.

ಮತ್ತಷ್ಟು ಓದಿ: PM Modi Speech in Rajya Sabha: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ: ಪ್ರಧಾನಿ ಮೋದಿ

ಜಾಗತಿಕ ಆರ್ಥಿಕತೆ ಮತ್ತು ಹಣದುಬ್ಬರದ ಮೇಲಿನ ಪರಿಣಾಮಗಳು
ಇಂಧನ ಬೆಲೆ ಮತ್ತು ಸಾಗಣೆ ವೆಚ್ಚ ಕುಸಿತ: ತೈಲ ಬೆಲೆ ಕಡಿಮೆಯಾದರೆ ಸಾರಿಗೆ ಮತ್ತು ಉತ್ಪಾದನಾ ವೆಚ್ಚಗಳು ಇಳಿಕೆಯಾಗಲಿವೆ. ಇದರಿಂದ ದಿನಸಿ ವಸ್ತುಗಳು ಸೇರಿದಂತೆ ನಿತ್ಯಬಳಕೆಯ ಸರಕುಗಳ ಬೆಲೆ ನಿಯಂತ್ರಣಕ್ಕೆ ಬರಲಿದೆ. ಪ್ರಸ್ತುತ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 4.11 ಡಾಲರ್‌ಗೆ ಏರಿಕೆಯಾಗಿತ್ತು, ಇದು ಈಗ ಇಳಿಕೆಯಾಗುವ ನಿರೀಕ್ಷೆಯಿದೆ.

ಫೆಡರಲ್ ರಿಸರ್ವ್ ಮತ್ತು ಬಡ್ಡಿದರ: ಇಂಧನ ಬೆಲೆ ಏರಿಕೆಯು ಜಾಗತಿಕವಾಗಿ ಹಣದುಬ್ಬರವನ್ನು ಹೆಚ್ಚಿಸಿತ್ತು. ಹೀಗಾಗಿ ಅಮೆರಿಕದ ಫೆಡರಲ್ ರಿಸರ್ವ್ ಮತ್ತೆ ಬಡ್ಡಿದರ ಹೆಚ್ಚಿಸಬಹುದು (ಶೇ. 36 ರಷ್ಟು ಸಾಧ್ಯತೆ) ಎಂದು ಹೂಡಿಕೆದಾರರು ಅಂದಾಜಿಸಿದ್ದರು. ಪ್ರಸ್ತುತ ತೈಲ ಬೆಲೆ ಇಳಿಕೆಯು ಬಡ್ಡಿದರ ಏರಿಕೆಯ ಒತ್ತಡವನ್ನು ಕಡಿಮೆ ಮಾಡಬಹುದು.

ಐಟಿ ಮತ್ತು ವಸತಿ ವಲಯಕ್ಕೆ ಚೇತರಿಕೆ: ಬಡ್ಡಿದರಗಳು ಹೆಚ್ಚಾಗದಿದ್ದರೆ, ಅಡಮಾನ ದರಗಳು ಕಡಿಮೆಯಾಗಿ ವಸತಿ ಕ್ಷೇತ್ರಕ್ಕೆ ನೆರವಾಗಲಿದೆ. ಜೊತೆಗೆ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳಲ್ಲಿನ ಬೃಹತ್ ಹೂಡಿಕೆಗಳು ನಿರಂತರವಾಗಿ ಸಾಗಲು ಹಾದಿ ಸುಗಮವಾಗುತ್ತದೆ.

ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ಒಪೆಕ್ ಒಕ್ಕೂಟವು ತೈಲ ಉತ್ಪಾದನಾ ಕಡಿತವನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಇನ್ನೂ ಅಸ್ತಿತ್ವದಲ್ಲಿದೆ.

ಭಾರತದ ಮೇಲಿನ ಪರಿಣಾಮ: ಭಾರತವು ತನ್ನ ತೈಲ ಅಗತ್ಯದ ಶೇ. 85 ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾದರೆ ಭಾರತದ ಆಮದು ವೆಚ್ಚ ಕಡಿಮೆಯಾಗಲಿದ್ದು, ಪೆಟ್ರೋಲ್-ಡೀಸಲ್ ಬೆಲೆ ಸ್ಥಿರವಾಗಿರಲು ಮತ್ತು ಚಾಲ್ತಿ ಖಾತೆ ಕೊರತೆ (CAD) ಕಡಿಮೆಯಾಗಲು ನೆರವಾಗಲಿದೆ.

ಆದಾಗ್ಯೂ, ಮಧ್ಯಪ್ರಾಚ್ಯದ ಸ್ಥಿತಿ ಇನ್ನೂ ಸೂಕ್ಷ್ಮವಾಗಿದ್ದು, ಜಲಮಾರ್ಗಗಳಲ್ಲಿ ಯಾವುದೇ ಸಣ್ಣ ಮಟ್ಟದ ಸಂಘರ್ಷ ಎದುರಾದರೂ ಕಚ್ಚಾ ತೈಲ ಬೆಲೆಗಳು ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನು ಮಾರುಕಟ್ಟೆ ವಿಶ್ಲೇಷಕರು ತಳ್ಳಿಹಾಕಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:54 am, Mon, 27 July 26

Source link

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ 6 ವರ್ಷಗಳಲ್ಲೇ ಎರಡನೇ ಕನಿಷ್ಠ ಸಂಗ್ರಹ! ಕಾವೇರಿ ಕಣಿವೆಯಲ್ಲಿ ಬರದ ಛಾಯೆ – Kannada News | Karnataka Reservoir Water Levels: Major Dams Record Second Lowest Storage in Six Years, Cauvery Basin Faces Severe Crisis

ಬೆಂಗಳೂರು, ಜುಲೈ 27: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹವು (Karnataka Dam Water Level) ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜುಲೈ 24ರ ವೇಳೆಗೆ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 419.35 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು ಕಳೆದ ಆರು ವರ್ಷಗಳಲ್ಲಿ ಇದೇ ಅವಧಿಯಲ್ಲಿ ದಾಖಲಾಗಿರುವ ಎರಡನೇ ಕನಿಷ್ಠ ಮಟ್ಟವಾಗಿದೆ. 2023ರ ಬರ ವರ್ಷದಲ್ಲಿ ಇದೇ ದಿನಕ್ಕೆ 371.07 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಜಲಾಶಯಗಳ ಒಟ್ಟು ಸಾಮರ್ಥ್ಯ 895.69 ಟಿಎಂಸಿ ಆಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ ಜಲಾಶಯ ಮಾತ್ರ ಹಿಂದಿನ ವರ್ಷಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದು, ಪ್ರಸ್ತುತ 106.33 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಉಳಿದ ಬಹುತೇಕ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 25ರಿಂದ 30 ಶೇಕಡಾದವರೆಗೆ ನೀರಿನ ಸಂಗ್ರಹ ಕುಸಿತ ಕಂಡುಬಂದಿದೆ.

ಕಾವೇರಿ ಕಣಿವೆಯಲ್ಲಿ ಹೆಚ್ಚಿದ ಆತಂಕ

ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಪರಿಸ್ಥಿತಿ ಹೆಚ್ಚು ಚಿಂತಾಜನಕವಾಗಿದೆ. ಇವುಗಳಲ್ಲಿ ಹಾರಂಗಿ ಮಾತ್ರ ತನ್ನ 8.50 ಟಿಎಂಸಿ ಸಾಮರ್ಥ್ಯದ ಎದುರು 7.58 ಟಿಎಂಸಿ ನೀರಿನೊಂದಿಗೆ ತುಸು ಸಮಾಧಾನಕರ ಸ್ಥಿತಿಯಲ್ಲಿದೆ.

ಕೆಆರ್​ಎಸ್ ಡ್ಯಾಂ ನೀರಿನ ಮಟ್ಟ ಆತಂಕಕಾರಿ

ಕೆಆರ್‌ಎಸ್ ಜಲಾಶಯದಲ್ಲಿ ಜುಲೈ 24, 2025ರಂದು 48.06 ಟಿಎಂಸಿ ನೀರು ಇದ್ದರೆ, ಈ ವರ್ಷ ಕೇವಲ 17.13 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 2023ರ ಬರ ವರ್ಷದಲ್ಲಿಯೂ ಇದೇ ದಿನ 19.34 ಟಿಎಂಸಿ ನೀರು ಇತ್ತು ಎನ್ನುವುದು ಗಮನಾರ್ಹ. ಈ ಕುಸಿತಕ್ಕೆ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿನ ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ. ಕೊಡಗು ಜಿಲ್ಲೆಯಲ್ಲಿ 45%, ಮೈಸೂರು 58%, ಚಿಕ್ಕಮಗಳೂರು 42%, ಹಾಸನ 33% ಹಾಗೂ ಮಂಡ್ಯದಲ್ಲಿ 27% ಮಳೆ ಕೊರತೆ ದಾಖಲಾಗಿದೆ.

ಕೃಷ್ಣಾ ಕಣಿವೆಯಲ್ಲೂ ಮಳೆ ಕೊರತೆ

ಕೃಷ್ಣಾ ಕಣಿವೆಯ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿಯೂ ಮಳೆ ಕೊರತೆ ಕಂಡುಬಂದಿದೆ. ಆದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಉತ್ತಮ ಮಳೆಯಿಂದ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿ ನೀರಿನ ಸಂಗ್ರಹ ಸುಧಾರಿಸಿದೆ. ಇದೇ ವೇಳೆ ಘಟಪ್ರಭಾ ಜಲಾಶಯಕ್ಕೆ ಜುಲೈನಲ್ಲಿ ಉತ್ತಮ ಒಳಹರಿವು ಬಂದಿದ್ದರೂ, ಜುಲೈ 24ರಂದು ಕೇವಲ 27.24 ಟಿಎಂಸಿ ನೀರು ಮಾತ್ರ ಇತ್ತು. ಕಳೆದ ವರ್ಷ ಇದೇ ದಿನ 46.35 ಟಿಎಂಸಿ ನೀರು ಸಂಗ್ರಹವಾಗಿತ್ತು.

ತುಂಗಭದ್ರಾ ಮತ್ತು ಜಲವಿದ್ಯುತ್ ಜಲಾಶಯಗಳಲ್ಲೂ ನೀರಿನ ಕೊರತೆ

ಇತ್ತೀಚೆಗೆ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲಾಗಿದ್ದ ತುಂಗಭದ್ರಾ ಜಲಾಶಯದಲ್ಲೂ ಕೇವಲ 29.47 ಟಿಎಂಸಿ ನೀರು ಮಾತ್ರ ಇದೆ. ಇದರ ಗರಿಷ್ಠ ಸಾಮರ್ಥ್ಯ 105.79 ಟಿಎಂಸಿ ಆಗಿದ್ದು, ಕಳೆದ ವರ್ಷ ಇದೇ ದಿನ 78.24 ಟಿಎಂಸಿ ನೀರು ಸಂಗ್ರಹವಾಗಿತ್ತು.

ಲಿಂಗನಮಕ್ಕಿ ಡ್ಯಾಂನಲ್ಲೂ ನೀರಿನ ಸಂಗ್ರಹ ಭಾರೀ ಕಡಿಮೆ

ರಾಜ್ಯದ ಅತಿದೊಡ್ಡ ಜಲಾಶಯವಾದ ಲಿಂಗನಮಕ್ಕಿಯಲ್ಲಿ 151.75 ಟಿಎಂಸಿ ಸಾಮರ್ಥ್ಯದ ಎದುರು ಕೇವಲ 38.76 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು 2023ರ ಬರ ವರ್ಷಕ್ಕಿಂತಲೂ ಸುಮಾರು 10 ಟಿಎಂಸಿ ಕಡಿಮೆ ಎನ್ನಲಾಗಿದೆ. ಅದೇ ರೀತಿ ಸೂಪಾ ಜಲಾಶಯದಲ್ಲಿ ಪ್ರಸ್ತುತ 46.79 ಟಿಎಂಸಿ ನೀರು ಮಾತ್ರ ಇದ್ದು, ಅದರ ಗರಿಷ್ಠ ಸಾಮರ್ಥ್ಯಕ್ಕಿಂತ ಸುಮಾರು 100 ಟಿಎಂಸಿ ಕಡಿಮೆ ನೀರು ಸಂಗ್ರಹವಾಗಿದೆ.

ಜಲಾಶಯಗಳನ್ನು ಎರಡು ವರ್ಷಗಳ ಕುಡಿಯುವ ನೀರಿನ ಅಗತ್ಯ ಹಾಗೂ ಕನಿಷ್ಠ ಒಂದು ಬೆಳೆ ಹಂಗಾಮಿನ ನೀರಾವರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಿಸಲಾಗಿದೆ. ಆದರೆ ಸಮರ್ಪಕ ನಿರ್ವಹಣೆ ಮತ್ತು ಯೋಜನೆಯ ಕೊರತೆಯಿಂದಾಗಿ ಜಲಾಶಯಗಳು ನಿರೀಕ್ಷೆಗಿಂತ ಮೊದಲೇ ಖಾಲಿಯಾಗುತ್ತಿವೆ ಎಂದು ಐಎಂಡಿಯ ಮಾಜಿ ಮಹಾನಿರ್ದೇಶಕ ಡಾ. ಕೆ.ಜೆ. ರಮೇಶ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.

ಇದನ್ನೂ ಓದಿ: ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ

ಬೇಸಿಗೆ ಬೆಳೆಗಳಿಗೆ ಜಲಾಶಯದ ನೀರನ್ನು ಬಿಡಬಾರದು ಎಂಬ ನಿಯಮ ಇದ್ದರೂ, ರೈತರ ಒತ್ತಡದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ಹಂಗಾಮಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂದು ಡಾ. ಕೆ.ಜೆ. ರಮೇಶ್ ಅಭಿಪ್ರಾಯಪಟ್ಟಿರುವುದನ್ನೂ ವರದಿ ಉಲ್ಲೇಖಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ! – Kannada News | Bengaluru Road Rage: Drama on Bannerghatta Road as Swift Driver Chases Innova

ಬೆಂಗಳೂರು, ಜುಲೈ 27: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ರಸ್ತೆ ಅಪಘಾತವೊಂದರ ಹಿನ್ನೆಲೆಯಲ್ಲಿ ಇನ್ನೋವಾ ಮತ್ತು ಸ್ವಿಫ್ಟ್ ಕಾರು ಚಾಲಕರ ನಡುವೆ ಸಿನಿಮಾ ಮಾದರಿಯ ಚೇಸಿಂಗ್ ಹಾಗೂ ಹೈಡ್ರಾಮಾ ನಡೆದಿದೆ. ಸ್ವಿಫ್ಟ್ ಕಾರಿಗೆ ಸ್ಪರ್ಶಿಸಿದ ಇನ್ನೋವಾ ಚಾಲಕ, ಸ್ವಿಫ್ಟ್ ಚಾಲಕನ ಕಾರಿನ ಕೀ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಜಾಗೃತನಾದ ಸ್ವಿಫ್ಟ್ ಚಾಲಕ, ಬೈಕ್ ಸವಾರನ ನೆರವು ಪಡೆದು ಇನ್ನೋವಾ ಕಾರನ್ನು ಚೇಸ್ ಮಾಡಿ ಹಿಡಿದಿದ್ದಾರೆ. ಈ ವೇಳೆ ಠಾಣೆಗೆ ಬರುವುದಾಗಿ ಹೇಳಿ ಇನ್ನೋವಾ ಚಾಲಕ ಮತ್ತೆ ರ್ಯಾಶ್ ಡ್ರೈವಿಂಗ್ ಮಾಡುತ್ತಾ ಎಸ್ಕೇಪ್ ಆಗಲು ಯತ್ನಿಸಿದಾಗ, ಮತ್ತೆ ಬೈಕ್‌ನಲ್ಲಿ ಬೆನ್ನಟ್ಟಿ ಕೊನೆಗೂ ಆತನನ್ನು ತಡೆಯಲಾಗಿದೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಸಂಪೂರ್ಣ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹ ನೋಂದಣಿಗೆ ‘ಆಧಾರ್’ ಒಂದೇ ವಯಸ್ಸಿನ ಪುರಾವೆಯಲ್ಲ ಎಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ! – Kannada News | Don’t Rely Only on Aadhaar for Marriage Age Verification: Karnataka Child Rights Panel

ಬೆಂಗಳೂರು, ಜುಲೈ 27: ಬಾಲ್ಯ ವಿವಾಹಗಳನ್ನು (Child Marriage) ಪರಿಣಾಮಕಾರಿಯಾಗಿ ತಡೆಯಲು ವಿವಾಹ ನೋಂದಣಿ ಸಮಯದಲ್ಲಿ ವಯಸ್ಸಿನ ಸರಿಯಾದ ಪರಿಶೀಲನೆ ನಡೆಸಬೇಕು ಹಾಗೂ ಆಧಾರ್ ಕಾರ್ಡ್ ಒಂದನ್ನೇ ವಯಸ್ಸಿನ ಅಂತಿಮ ಪುರಾವೆಯಾಗಿ ಪರಿಗಣಿಸಬಾರದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಸರ್ಕಾರಕ್ಕೆ ಮನವಿ ಮಾಡಿದೆ. ಬಾಲ್ಯ ವಿವಾಹ ನಿಷೇಧ ನಿಯಮಗಳು 2014 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವ ಆಯೋಗ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಈ ಕುರಿತು ಅಧಿಕೃತ ಪತ್ರ ಬರೆದಿದೆ.

ಶಾಲಾ ದಾಖಲೆ, ಜನನ ಪ್ರಮಾಣಪತ್ರ ಕಡ್ಡಾಯಗೊಳಿಸಲು ಮನವಿ

ವಿವಾಹ ನೋಂದಣಿ ವೇಳೆ ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ವಯಸ್ಸಿನ ಪುರಾವೆಯಾಗಿ ಸ್ವೀಕರಿಸುವುದರಿಂದ ಅಪ್ರಾಪ್ತರ ವಿವಾಹಗಳು ನೋಂದಣಿಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ ಆಧಾರ್‌ಗೆ ಬದಲಾಗಿ ಅಥವಾ ಅದರೊಂದಿಗೆ ಜನನ ಪ್ರಮಾಣಪತ್ರ, ಶಾಲಾ ದಾಖಲೆಗಳು / ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ್ನೂ ಸಹ ಸ್ವೀಕರಿಸಬೇಕು. ಅಗತ್ಯಬಿದ್ದಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ವಯಸ್ಸಿನ ದೃಢೀಕರಣಕ್ಕೆ ಮೂಲ ದಾಖಲೆಗಳಾಗಿ ಸ್ವೀಕರಿಸುವಂತೆ ನೋಂದಣಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

ಆಧಾರ್ ಗುರುತಿನ ಚೀಟಿ ಮಾತ್ರ, ವಯಸ್ಸಿನ ಅಂತಿಮ ದಾಖಲೆಯಲ್ಲ!

ಆಯೋಗದ ಪರವಾಗಿ ಮನವಿ ಸಲ್ಲಿಸಿದ ಮಾಜಿ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಆಧಾರ್ ಕಾರ್ಡ್ ಮೂಲತಃ ವ್ಯಕ್ತಿಯ ಗುರುತಿನ ದಾಖಲೆಯಾಗಿದೆಯೇ ಹೊರತು, ವಯಸ್ಸಿನ ಪರಿಪೂರ್ಣ ಪುರಾವೆಯಲ್ಲ. ಆಧಾರ್‌ನಲ್ಲಿರುವ ಜನನ ದಿನಾಂಕವು ಸ್ವಯಂ ಘೋಷಣೆ ಅಥವಾ ಸಾಮಾನ್ಯ ದಾಖಲೆಗಳ ಮೇಲೆ ಆಧಾರಿತವಾಗಿರಬಹುದು. ಹೀಗಾಗಿ ಮದುವೆ ನೋಂದಣಿ ಅಧಿಕಾರಿಗಳು ಆಧಾರ್ ಮೇಲೆ ಮಾತ್ರ ಅವಲಂಬಿತರಾಗಬಾರದು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ ಧಾರವಾಡ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!

ಬಾಲ್ಯವಿವಾಹ ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನೋಂದಣಿ ಸಿಬ್ಬಂದಿಗೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಯೋಗ ಆಗ್ರಹಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಕರಾವಳಿ’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು? – Kannada News | Karavali Box Office Collection Raj B Shetty Starrer Nears 4 Crore Mark After Strong Weekend

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ಕರಾವಳಿ’ (Karavali Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಸಾಧಾರಣ ಕಲೆಕ್ಷನ್ ಮಾಡಿತ್ತು. ಆದರೆ, ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನ ಕೇವಲ 68 ಲಕ್ಷ ರೂಪಾಯಿ ಗಳಿಸಿದ್ದ ಈ ಚಿತ್ರ, ಆ ಬಳಿಕ ಪ್ರೇಕ್ಷಕರಿಂದ ಸಿಕ್ಕ ಪಾಸಿಟಿವ್ ವಿಮರ್ಶೆಗಳ ಬೆಂಬಲದೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿದೆ. ಸದ್ಯ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾದ ಒಟ್ಟಾರೆ ಗಳಿಕೆ ಹೆಚ್ಚುತ್ತಿದೆ. ಸಿನಿಮಾದ ಒಟ್ಟೂ ಗಳಿಕೆ ನಾಲ್ಕು ಕೋಟಿ ರೂಪಾಯಿ ಸಮೀಪಕ್ಕೆ ಬಂದು ತಲುಪಿದೆ.

ಚಿತ್ರದ ದಿನಾವಾರು ಕಲೆಕ್ಷನ್ ನೋಡುವುದಾದರೆ, ಮೊದಲ ದಿನ 0.68 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ಎರಡನೇ ದಿನ ಅಂದರೆ ಶನಿವಾರದಂದು 1.14 ಕೋಟಿ ರೂಪಾಯಿ ಬಾಚಿಕೊಂಡಿತು. ಇನ್ನು ಮೂರನೇ ದಿನ ಭಾನುವಾರದ ವೀಕೆಂಡ್ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡ ಚಿತ್ರ 1.64 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚಿತ್ರದ ಭಾರತದ ನೆಟ್ ಕಲೆಕ್ಷನ್ 3.46 ಕೋಟಿ ರೂಪಾಯಿಗೆ ತಲುಪಿದೆ. ಇಂಡಿಯಾ ಗ್ರಾಸ್ ಕಲೆಕ್ಷನ್ ಬರೋಬ್ಬರಿ 3.88 ಕೋಟಿ ರೂಪಾಯಿ ದಾಟಿದೆ ಎಂದು ಸ್ಯಾಸ್ನಿಲ್ಕ್​ ವರದಿ ಮಾಡಿದೆ.

ಇನ್ನು ಈ ಸಿನಿಮಾ ಬಿಡುಗಡೆಗೂ ಮುನ್ನ ನಟ ಪ್ರಜ್ವಲ್ ದೇವರಾಜ್ ವಿಷಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿಕೊಂಡಿತ್ತು. ಟ್ರೈಲರ್ ಲಾಂಚ್ ವೇಳೆ ಪ್ರಜ್ವಲ್ ದೇವರಾಜ್ ಗೈರುಹಾಜರಿ, ಸಂಭಾವನೆ ಬಾಕಿ ಹಾಗೂ ಅವರ ಧ್ವನಿಗೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಿದ ವಿಚಾರವಾಗಿ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ; ವಿಡಿಯೋ ನೋಡಿ

ಸದ್ಯ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರ ಸೇರಿದಂತೆ ಪ್ರಮುಖ ತಾರಾಗಣದ ಅದ್ಭುತ ನಟನೆ ಮತ್ತು ಗುರುದತ್ ಗಾಣಿಗ ಅವರ ನಿರ್ದೇಶನವು ವಿವಾದಗಳನ್ನೆಲ್ಲ ಬದಿಗೊತ್ತಿ ಚಿತ್ರವನ್ನು ಯಶಸ್ಸಿನತ್ತ ಮುನ್ನಡೆಸುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:30 am, Mon, 27 July 26

Source link

CWG 2026: ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ! – Kannada News | India Won 4 Medals in Commonwealth Games 2026

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ನಾಲ್ಕನೇ ದಿನದ ಅಂತ್ಯಕ್ಕೆ  ಭಾರತ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

‘ಗೋಲ್ಡನ್ ಹ್ಯಾಟ್ರಿಕ್’:

ಭಾರತದ ಸ್ಟಾರ್ ವೇಟ್‌ಲಿಫ್ಟರ್, ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಸ್ನ್ಯಾಚ್‌ನಲ್ಲಿ ಗೇಮ್ಸ್ ದಾಖಲೆಯ 85 ಕೆಜಿ ಹಾಗೂ ಒಟ್ಟು 190 ಕೆಜಿ ಭಾರ ಎತ್ತುವ ಮೂಲಕ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕೂಟದಲ್ಲಿ ಸತತ 3ನೇ ಬಾರಿ ಚಿನ್ನ ಗೆದ್ದು ‘ಗೋಲ್ಡನ್ ಹ್ಯಾಟ್ರಿಕ್’ ಐತಿಹಾಸಿಕ ಸಾಧನೆ ಮಾಡಿದ್ದಾರೆ.

  • 2018 ರ ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
  • 2022 ರ ಬರ್ಮಿಂಗ್​ಹ್ಯಾಮ್ (ಇಂಗ್ಲೆಂಡ್) ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿ ಮೀರಾಬಾಯಿ ಚಾನು ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.
  • 2026 ರ ಗ್ಲ್ಯಾಸ್ಗೋ (ಸ್ಕಾಟ್​ಲ್ಯಾಂಡ್) ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಬೆಳ್ಳಿ ಹೊಳಪು:

ಪುರುಷರ ವೇಟ್‌ಲಿಫ್ಟಿಂಗ್‌ನಲ್ಲೂ ಭಾರತಕ್ಕೆ ಎರಡು ಬೆಳ್ಳಿ ಪದಕಗಳು ಲಭಿಸಿವೆ. ಹೀಗೆ ಒಂದೇ ದಿನ 2 ಬೆಳ್ಳಿ ಪದಕಗಳನ್ನು ತಂದುಕೊಟ್ಟವರು ರಿಷಿಕಾಂತ್ ಸಿಂಗ್ ಹಾಗೂ ಮುತ್ತುಪಾಂಡಿ ರಾಜಾ.

  • ರಿಷಿಕಾಂತ್ ಸಿಂಗ್: ಪುರುಷರ 60 ಕೆಜಿ ವಿಭಾಗದಲ್ಲಿ ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ಚೊಚ್ಚಲ ಕೂಟದಲ್ಲೇ ರಿಷಿಕಾಂತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅದರಲ್ಲೂ ಸ್ನ್ಯಾಚ್‌ನಲ್ಲಿ 121 ಕೆಜಿ ಎತ್ತುವ ಮೂಲಕ ರಿಷಿಕಾಂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
  • ಮುತ್ತುಪಾಂಡಿ ರಾಜಾ: ಪುರುಷರ 65 ಕೆಜಿ ವಿಭಾಗದಲ್ಲಿ ಒಟ್ಟು 286 ಕೆಜಿ ತೂಕವನ್ನು ಎತ್ತುವ ಮೂಲಕ ದ್ವಿತೀಯ ಸ್ಥಾನ ಗಳಿಸಿ ಮುತ್ತುಪಾಂಡಿ ರಾಜಾ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ.

ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ

ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲೂ ಪದಕ:

ಭಾರತದ ಪ್ಯಾರಾ ಅಥ್ಲೀಟ್ ಝಂಡು ಕುಮಾರ್ ಅವರು ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 190 ಕೆಜಿ ಭಾರ ಎತ್ತುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದರು. ಇದೀಗ ಒಟ್ಟು 4 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಅಲಂಕರಿಸಿದೆ.

Published On – 7:26 am, Mon, 27 July 26

Source link

ದೇಶದ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಸಮಿತಿ: ಕಾರ್ಯಪಡೆ ಮುನ್ನಡೆಸಲು ನೇಮಕಗೊಂಡ ನಂದನ್ ನಿಲೇಕಣಿ ಯಾರು? – Kannada News | Nandan Nilekani to Lead India’s Exam Reform Task Force for Transparency and Tech

ನವದೆಹಲಿ, ಜುಲೈ 27: ನೀಟ್(NEET) ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ಹಾಗೂ ಪಾರದರ್ಶಕತೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ‘ಉನ್ನತಾಧಿಕಾರ ಕಾರ್ಯಪಡೆ’ ರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಈ ತಂತ್ರಜ್ಞಾನ ಆಧಾರಿತ ಸುಧಾರಣಾ ಸಮಿತಿಯ ಮುಖ್ಯಸ್ಥರನ್ನಾಗಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಹಾಗೂ ಪ್ರಸಿದ್ಧ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರನ್ನು ನೇಮಿಸಲಾಗಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ವಿಷಯ ಪ್ರಕಟಿಸಿರುವ ಪ್ರಧಾನಿ ಮೋದಿ, “ನಮ್ಮ ಪರೀಕ್ಷಾ ವ್ಯವಸ್ಥೆಯು ವಿಶ್ವಾಸಾರ್ಹ, ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತವಾಗಿರಬೇಕು. ಪರೀಕ್ಷಾ ಸುಧಾರಣೆಗಳಿಗಾಗಿ ಜಾಗತಿಕ ಮಟ್ಟದ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇವರ ಶಿಫಾರಸುಗಳ ಆಧಾರದ ಮೇಲೆ ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಶೀಘ್ರದಲ್ಲೇ ಖಚಿತಪಡಿಸುತ್ತೇವೆ” ಎಂದು ತಿಳಿಸಿದ್ದಾರೆ.

ನಂದನ್ ನಿಲೇಕಣಿ ಯಾರು?

ಇನ್ಫೋಸಿಸ್ ಪ್ರಯಾಣ: ನಂದನ್ ನಿಲೇಕಣಿ ಅವರು 1981 ರಲ್ಲಿ ಎನ್.ಆರ್. ನಾರಾಯಣ ಮೂರ್ತಿ ಅವರೊಂದಿಗೆ ಸೇರಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದ ಪ್ರಮುಖ ಸಹ-ಸಂಸ್ಥಾಪಕರು. 2002 ರಿಂದ 2007 ರವರೆಗೆ ಇನ್ಫೋಸಿಸ್ ಸಿಇಒ ಆಗಿ ಸೇವೆ ಸಲ್ಲಿಸಿದ ಅವರು, ಪ್ರಸ್ತುತ ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ.

2009 ರಲ್ಲಿ ಇನ್ಫೋಸಿಸ್ ತೊರೆದು ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಮೊದಲ ಅಧ್ಯಕ್ಷರಾಗಿ ಜಗತ್ತಿನ ಅತಿ ದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆಯಾದ ‘ಆಧಾರ್’ ಯೋಜನೆಯನ್ನು ಯಶಸ್ವಿಯಾಗಿ ರೂಪಿಸಿದರು.

ಮತ್ತಷ್ಟು ಓದಿ: ನೀಟ್​ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?

ಡಿಜಿಟಲ್ ಕ್ರಾಂತಿ: ಭಾರತದಲ್ಲಿ ಯುಪಿಐ (UPI) ಮತ್ತು ಒಎನ್‌ಡಿಸಿ (ONDC) ನಂತಹ ಡಿಜಿಟಲ್ ಮೂಲಸೌಕರ್ಯಗಳನ್ನು ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ರಾಜಕೀಯ: 2014 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ನಾಯಕ ಅನಂತ್ ಕುಮಾರ್ ವಿರುದ್ಧ ಸೋಲನುಭವಿಸಿದ್ದರು.

ಕಾರ್ಯಪಡೆಯಲ್ಲಿದ್ದಾರೆ ಪ್ರಮುಖ ಗಣ್ಯರು
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಪ್ರಕ್ರಿಯೆಗಳನ್ನು ಸುಧಾರಿಸಲು ರಚಿಸಲಾದ ಈ ಕಾರ್ಯಪಡೆಯಲ್ಲಿ ನಿಲೇಕಣಿ ಅವರೊಂದಿಗೆ ಇಸ್ರೋ (ISRO) ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಐಬಿ (IB) ಮಾಜಿ ನಿರ್ದೇಶಕ ತಪನ್ ದೇಕಾ, ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಅಮೃತ್ ಲಾಲ್ ಮೀನಾ ಅವರಂತಹ ಪ್ರಮುಖ ತಜ್ಞರು ಸದಸ್ಯರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಲ್ಕು ದಿನಕ್ಕೆ 200 ಕೋಟಿ ರೂಪಾಯಿ ಗಳಿಸಿದ ‘ಜನ ನಾಯಗನ್’; ಅಸಲಿ ಪರೀಕ್ಷೆ ಈಗ ಶುರು – Kannada News | Jana Nayagan Box Office Collection Day 4: Vijay Starrer Crosses 200 Crore Mark Worldwide

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ (Jana Nayagan Movie) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 217.48 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 200 ಕೋಟಿ ಕ್ಲಬ್ ಸೇರಿ ಧೂಳೆಬ್ಬಿಸಿದೆ. ಬಿಡುಗಡೆಯಾದ ನಾಲ್ಕನೇ ದಿನ ಒಟ್ಟು 12,107 ಶೋಗಳಿಂದ ಭಾರತದಾದ್ಯಂತ 32.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 145.98 ಕೋಟಿ ರೂಪಾಯಿಗೆ ತಲುಪಿದ್ದು, ನೆಟ್ ಕಲೆಕ್ಷನ್ ಮೊತ್ತ 124.75 ಕೋಟಿ ರೂಪಾಯಿ ದಾಟಿದೆ.

ಇನ್ನು ವಿದೇಶಗಳಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾಲ್ಕನೇ ದಿನವೊಂದರಲ್ಲೇ ಓವರ್‌ಸೀಸ್ ಮಾರುಕಟ್ಟೆಯಿಂದ 10.00 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆಯೊಂದಿಗೆ ಚಿತ್ರದ ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಬರೋಬ್ಬರಿ 71.50 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶ ಹಾಗೂ ವಿದೇಶ ಎರಡೂ ಕಡೆಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬೀಳುತ್ತಿರುವುದರಿಂದ ‘ಜನ ನಾಯಗನ್’ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಸೃಷ್ಟಿಸುತ್ತಿದೆ.

ಭಾಷಾವಾರು ಕಲೆಕ್ಷನ್ ನೋಡುವುದಾದರೆ, ಎಂದಿನಂತೆ ತಮಿಳು ಆವೃತ್ತಿಯಲ್ಲೇ ಅತಿ ಹೆಚ್ಚು ಅಂದರೆ 6,347 ಶೋಗಳ ಮೂಲಕ ಶೇಕಡಾ 67.0 ರಷ್ಟು ಆಕ್ಯುಪೆನ್ಸಿಯೊಂದಿಗೆ ಬರೋಬ್ಬರಿ 27.30 ಕೋಟಿ ರೂಪಾಯಿ ಗಳಿಸಿದೆ. ಇನ್ನುಳಿದಂತೆ ಹಿಂದಿ ಆವೃತ್ತಿಯಲ್ಲಿ 4,557 ಶೋಗಳಿಂದ ಶೇಕಡಾ 19.0 ರಷ್ಟು ಆಕ್ಯುಪೆನ್ಸಿಯೊಂದಿಗೆ 3.35 ಕೋಟಿ ರೂಪಾಯಿ ಹಾಗೂ ತೆಲುಗು ಆವೃತ್ತಿಯಲ್ಲಿ 1,203 ಶೋಗಳ ಮೂಲಕ ಶೇಕಡಾ 24.0 ರಷ್ಟು ಆಕ್ಯುಪೆನ್ಸಿಯೊಂದಿಗೆ 1.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಮೊದಲ ವಾರಾಂತ್ಯದಲ್ಲಿ ಅಬ್ಬರಿಸಿರುವ ಈ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಅಸಲಿ ಚಾಲೆಂಜ್ ಎದುರಾಗಲಿದೆ. ವೀಕೆಂಡ್ ಮುಗಿದು ವಾರದ ದಿನಗಳು ಆರಂಭವಾಗಿರುವುದರಿಂದ, ಸೋಮವಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಕಾಯ್ದುಕೊಳ್ಳುವುದು ಚಿತ್ರಕ್ಕೆ ದೊಡ್ಡ ಸವಾಲಾಗಿದೆ. ಈ ಕಲೆಕ್ಷನ್‌ನ ಅಬ್ಬರ ಹೀಗೆಯೇ ಮುಂದುವರಿಯುತ್ತದೆಯೇ ಅಥವಾ ಗಳಿಕೆಯಲ್ಲಿ ಕುಸಿತ ಕಾಣುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 3ನೇ ದಿನ ಚೇತರಿಸಿಕೊಂಡ ‘ಜನ ನಾಯಗನ್’ ಕಲೆಕ್ಷನ್: 100 ಕೋಟಿ ರೂ. ಕ್ಲಬ್‌ನತ್ತ ವಿಜಯ್ ಸಿನಿಮಾ 

ಈ ಹಿಂದೆ ವಿಜಯ್ ಅಭಿನಯದ ‘ಲಿಯೋ’ ಸಿನಿಮಾ ಆರಂಭದಲ್ಲಿ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಂತಿಮವಾಗಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈಗ ‘ಜನ ನಾಯಗನ್’ ಚಿತ್ರಕ್ಕೂ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ನೆಗೆಟಿವ್ ವಿಮರ್ಶೆಗಳ ಮಧ್ಯೆಯೂ ಚಿತ್ರವು ‘ಲಿಯೋ’ ತರಹವೇ 600 ಕೋಟಿ ರೂಪಾಯಿ ಕ್ಲಬ್ ಸೇರಲಿದೆಯೇ ಎಂಬ ಕುತೂಹಲ ಸಿನಿರಂಗದಲ್ಲಿ ಮೂಡಿದೆ.

ಪ್ರಶ್ನೆ : ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಿದೆ?
ಉತ್ತರ: ಜುಲೈ 23

ಪ್ರಶ್ನೆ : ಇದು ವಿಜಯ್ ಕೊನೆ ಚಿತ್ರವೇ?
ಉತ್ತರ: ಹೌದು

ಪ್ರಶ್ನೆ : ಜನ ನಾಯಗನ್ ರಿಮೇಕ್ ಚಿತ್ರವೇ?
ಉತ್ತರ: ಹೌದು, ಭಗವಂತ ಕೇಸರಿ ಚಿತ್ರದ ರಿಮೇಕ್

Source link

Exit mobile version