‘ಧೂಮ್ 4’ ವದಂತಿಗಳಿಗೆ ಕೊನೆಗೂ ಬ್ರೇಕ್ ಹಾಕಿದ ರಣಬೀರ್ ಕಪೂರ್

ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಸದ್ಯ ತಮ್ಮ ಮೋಸ್ಟ್ ಅಡ್ವೆಂಚರಸ್ ಪ್ರಾಜೆಕ್ಟ್ ‘ರಾಮಾಯಣ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) 2026 ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಭಾಗವಹಿಸಿ ಚಿತ್ರದ ಪ್ರಚಾರ ಮಾಡಿದ್ದರು. ಈ ಅದ್ಧೂರಿ ವೇದಿಕೆಯಲ್ಲಿ ರಣಬೀರ್ ಕಪೂರ್ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ‘ಧೂಮ್ 4’ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈಗ ಸ್ವತಃ ರಣಬೀರ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಸಂದರ್ಶನವೊಂದರಲ್ಲಿ ನಿರೂಪಕರು ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಹಾಗೂ ರಣಬೀರ್ ಅವರ ‘ಧೂಮ್ 4’ ಚಿತ್ರದ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ರಣಬೀರ್ ಕಪೂರ್, ‘ಸದ್ಯಕ್ಕೆ ನಾನು ಧೂಮ್ 4 ಚಿತ್ರದಲ್ಲಿ ನಟಿಸುತ್ತಿಲ್ಲ. ಈಗ ನನ್ನ ಗಮನವೇನಿದ್ದರೂ ನಿತೇಶ್ ತಿವಾರಿ ಅವರ ‘ರಾಮಾಯಣ’ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರಗಳ ಮೇಲಷ್ಟೇ ಇದೆ. ‘ಲವ್ ಆ್ಯಂಡ್ ವಾರ್’ ಸಿನಿಮಾ 2027ರ ಜನವರಿಯಲ್ಲಿ ತೆರೆಗೆ ಬರಲಿದೆ’ ಎಂದು ಸ್ಪಷ್ಟಪಡಿಸಿದರು. ರಣಬೀರ್ ಅವರ ಈ ನೇರ ನುಡಿಯು ‘ಧೂಮ್ 4’ ಚಿತ್ರಕ್ಕೆ ಅವರು ಎಂಟ್ರಿ ಕೊಡಲಿದ್ದಾರೆ ಎಂಬ ಎಲ್ಲ ಚರ್ಚೆಗಳಿಗೂ ಪೂರ್ಣವಿರಾಮ ಇಟ್ಟಿದೆ.

‘ಅನಿಮಲ್ ಪಾರ್ಕ್’ ಬಗ್ಗೆಯೂ ಮೌನವಹಿಸಿದ ರಣಬೀರ್

ಇದೇ ಸಂದರ್ಭದಲ್ಲಿ ರಣಬೀರ್ ಕಪೂರ್ ತಮ್ಮ ಮುಂಬರುವ ಚಿತ್ರಗಳ ಪಟ್ಟಿಯನ್ನು ಹೇಳುವಾಗ ಸೂಪರ್ ಹಿಟ್ ‘ಅನಿಮಲ್’ ಚಿತ್ರದ ಸೀಕ್ವೆಲ್ ಆದ ‘ಅನಿಮಲ್ ಪಾರ್ಕ್’ ಬಗ್ಗೆ ಯಾವುದೇ ಉಲ್ಲೇಖ ಮಾಡದಿರುವುದು ಸಿನಿಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ನಟಿಸುವುದು ಪಕ್ಕಾ ಎನ್ನಲಾಗುತ್ತಿತ್ತಾದರೂ, ಈ ಪ್ರಾಜೆಕ್ಟ್ ಸದ್ಯ ಯಾವ ಹಂತದಲ್ಲಿದೆ ಎಂಬ ಬಗ್ಗೆ ನಟ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

‘ಧೂಮ್ 4’ ಚರ್ಚೆಗಳು ಶುರುವಾಗಿದ್ದು ಹೇಗೆ?

2024ರಲ್ಲಿ ಹೊರಬಿದ್ದ ಕೆಲವು ಮಾಧ್ಯಮ ವರದಿಗಳ ಪ್ರಕಾರ, ನಿರ್ಮಾಪಕ ಆದಿತ್ಯ ಚೋಪ್ರಾ ಅವರು ‘ಧೂಮ್ 4’ ಚಿತ್ರದ ಖಳನಾಯಕನ ಪಾತ್ರಕ್ಕೆ ರಣಬೀರ್ ಕಪೂರ್ ಸೂಕ್ತ ಆಯ್ಕೆ ಎಂದು ಭಾವಿಸಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ರಣಬೀರ್ ಅವರ ಹೊಸ ಸ್ಟೈಲಿಶ್ ಲುಕ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಇದು ‘ಧೂಮ್ 4’ ಅಥವಾ ‘ಅನಿಮಲ್ ಪಾರ್ಕ್’ ಚಿತ್ರದ್ದೇ ಇರಬಹುದು ಎಂದು ಊಹಿಸಿದ್ದರು. ಇದರ ನಡುವೆ ವಿಕ್ಕಿ ಕೌಶಲ್ ಹೆಸರೂ ಕೂಡ ಕೇಳಿಬಂದಿತ್ತು. ಆದರೆ ಯಶ್ ರಾಜ್ ಫಿಲ್ಮ್ಸ್ ಈವರೆಗೂ ‘ಧೂಮ್ 4’ ಚಿತ್ರದ ತಾರಾಗಣದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಧೂಮ್​ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್​​: ಬೆಳಗಾವಿಯಲ್ಲೊಬ್ಬ ಖತರ್ನಾಕ್​ ಕಳ್ಳ

‘ಧೂಮ್’ ಫ್ರಾಂಚೈಸಿಯ ಯಶಸ್ವಿ ಪಯಣ

2004ರಲ್ಲಿ ತೆರೆಕಂಡ ‘ಧೂಮ್’ ಸಿನಿಮಾ ಬಾಲಿವುಡ್‌ನಲ್ಲಿ ಹೈ-ಸ್ಪೀಡ್ ಆಕ್ಷನ್ ಚಿತ್ರಗಳ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಮೊದಲ ಭಾಗದಲ್ಲಿ ಜಾನ್ ಅಬ್ರಹಾಂ ಖಳನಾಯಕನಾಗಿ ಅಬ್ಬರಿಸಿದರೆ, ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಪೋಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ನಟನೆಯ ‘ಧೂಮ್ 2’ ಪ್ರೇಕ್ಷಕರ ಹೃದಯ ಗೆದ್ದರೆ, ಆಮಿರ್ ಖಾನ್ ಅವರ ದ್ವಿಪಾತ್ರವಿದ್ದ ‘ಧೂಮ್ 3’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಇತಿಹಾಸ ಬರೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಸಿಯಾಟಲ್ ಫುಡ್ ಫೆಸ್ಟಿವಲ್‌ನಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿ: ಇಬ್ಬರು ಸಾವು, ಐವರಿಗೆ ಗಂಭೀರ ಗಾಯ – Kannada News | Seattle Food Festival Shooting: 2 Dead, 5 Injured at Bite of Seattle Event

ವಾಷಿಂಗ್ಟನ್, ಜುಲೈ 27: ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಆಹಾರ ಉತ್ಸವದಲ್ಲಿಸಂಭವಿಸಿದ ಸಾಮೂಹಿಕ ಗುಂಡಿನ ದಾಳಿ(Firing) ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಪ್ರಖ್ಯಾತ ಪ್ರವಾಸಿ ತಾಣವಾದ ‘ಸ್ಪೇಸ್ ನೀಡಲ್’ ಬಳಿಯ ಸಿಯಾಟಲ್ ಸೆಂಟರ್‌ನಲ್ಲಿ ಈ ದುರಂತ ಸಂಭವಿಸಿದೆ.

ವಾರ್ಷಿಕವಾಗಿ ನಡೆಯುವ ‘ಬೈಟ್ ಆಫ್ ಸಿಯಾಟಲ್’ ಆಹಾರ ಉತ್ಸವದ ವೇಳೆ ಸಂಜೆ ಸುಮಾರು 6 ಗಂಟೆಗೆ ಈ ಗುಂಡಿನ ಚಕಮಕಿ ನಡೆದಿದೆ. ಉತ್ಸವದಲ್ಲಿ ನೂರಾರು ಅಡುಗೆ ಮಳಿಗೆಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ 7 ರಿಂದ 8 ಸುತ್ತು ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಗಾಬರಿಗೊಂಡ ಸಾರ್ವಜನಿಕರು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಈ ವೇಳೆ ಕಾಲ್ತುಳಿತವೂ ಸಂಭವಿಸಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಿಯಾಟಲ್ ಪೊಲೀಸ್ ಇಲಾಖೆಯು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಸಾರ್ವಜನಿಕರು ಆ ಪ್ರದೇಶಕ್ಕೆ ತೆರಳದಂತೆ ಸೂಚಿಸಿದೆ. ದಾಳಿಕೋರನ ಸುಳಿವು ಅಥವಾ ಬಂಧನದ ಕುರಿತು ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಬೈಟ್ ಆಫ್ ಸಿಯಾಟಲ್ ಇತಿಹಾಸ: 1982 ರಲ್ಲಿ ಪ್ರಾರಂಭವಾದ ಈ ಆಹಾರ ಉತ್ಸವವು ಅಮೆರಿಕದ ಅತ್ಯಂತ ಹಳೆಯ ಮತ್ತು ದೊಡ್ಡ ಆಹಾರ ಮೇಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.

ಮತ್ತಷ್ಟು ಓದಿ: ಕೆನಡಾದ ಬೃಹತ್ ಬೀದಿ ಉತ್ಸವದಲ್ಲಿ ರಕ್ತಪಾತ: ಮನಬಂದಂತೆ ಗುಂಡು ಹಾರಿಸಿದ ದುಷ್ಕರ್ಮಿ, ಇಬ್ಬರು ಸಾವು, ಹಲವರಿಗೆ ಗಾಯ

ಅಮೆರಿಕದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಡೆಯುವ ಸಾಮೂಹಿಕ ಗುಂಡಿನ ದಾಳಿಗಳು ನಿರಂತರವಾಗಿ ಕಳವಳ ಮೂಡಿಸುತ್ತಿವೆ. ‘ಗನ್ ವೈಯಲೆನ್ಸ್ ಆರ್ಕೈವ್’ ಪ್ರಕಾರ, ಪ್ರಸಕ್ತ ವರ್ಷದಲ್ಲೇ ಅಮೆರಿಕದಲ್ಲಿ ನೂರಾರು ಸಾಮೂಹಿಕ ಗುಂಡಿನ ದಾಳಿಗಳು ವರದಿಯಾಗಿವೆ. ಸಾರ್ವಜನಿಕ ಹಬ್ಬಗಳು ಹಾಗೂ ಸಭೆ-ಸಮಾವೇಶಗಳಲ್ಲಿ ಬಂದೂಕು ಹಿಡಿದು ಬರುವುದನ್ನು ತಡೆಯಲು ಮತ್ತು ಬಂದೂಕು ನಿಯಂತ್ರಣ ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸಲು ಯುಎಸ್ ಸರ್ಕಾರಕ್ಕೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅವಕಾಶ​ ಕೈ ತಪ್ಪಿದಾಗ ಬೇಸರವಾಗುತ್ತೆ… ಕಂಬ್ಯಾಕ್​ಗೆ ಅಭಿಷೇಕ್ ಶರ್ಮಾ ಪಣ! – Kannada News | Abhishek Sharma Vows Strong Comeback After Zimbabwe Batting Slump

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ, ಬೌಲಿಂಗ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಯುವ ಆಲ್ ರೌಂಡರ್, ಮುಂಬರುವ ದಿನಗಳಲ್ಲಿ “ಇನ್ನಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್” ಮಾಡುವ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಝಿಂಬಾಬ್ವೆ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಭಿಷೇಕ್ ಶರ್ಮಾ, ಅವಕಾಶಗಳು ಕೈ ತಪ್ಪಿದಾಗ ಬೇಸರವಾಗುತ್ತದೆ. ಇದಾಗ್ಯೂ ಮುಂಬರುವ ದಿನಗಳಲ್ಲಿ ಕಠಿಣ ಪರಿಶ್ರಮದೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಂಬ್ಯಾಕ್​ಗೆ ಅಭಿ ಪಣ:

ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬೆನ್ನಲ್ಲೇ ಅಭಿಮಾನಿಗಳನ್ನು ಉದ್ದೇಶಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್​ ಹಂಚಿಕೊಂಡಿರುವ ಅಭಿಷೇಕ್, “ಚಿನ್ನದಂತಹ ಅವಕಾಶಗಳು ಕೈ ತಪ್ಪಿದಾಗ ಬೇಸರವಾಗುತ್ತದೆ, ಆದರೆ ಇದು ಕಲಿಕೆಯ ಹಾದಿ. ಮುಂಬರುವ ದಿನಗಳಲ್ಲಿ ಕಠಿಣ ಪರಿಶ್ರಮದೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇಂತಹದೊಂದು ಪೋಸ್ಟ್ ಹಂಚಿಕೊಳ್ಳಲು ಝಿಂಬಾಬ್ವೆ ವಿರುದ್ಧದ ಕಳಪೆ ಪ್ರದರ್ಶನವೇ ಕಾರಣ. ಏಕೆಂದರೆ ಮೂರು ಪಂದ್ಯಗಳಿಂದ ಅಭಿಷೇಕ್ ಶರ್ಮಾ ಕಲೆಹಾಕಿದ ಒಟ್ಟು ರನ್​ಗಳು ಕೇವಲ 11 ಮಾತ್ರ.

  • ಮೊದಲ ಟಿ20: 8 ಎಸೆತಗಳಲ್ಲಿ ಕೇವಲ 1 ರನ್
  • ಎರಡನೇ ಟಿ20: 8 ಎಸೆತಗಳಲ್ಲಿ ಕೇವಲ 8 ರನ್
  • ಮೂರನೇ ಟಿ20: 4 ಎಸೆತಗಳಲ್ಲಿ ಕೇವಲ 2 ರನ್

ಮೂರು ಪಂದ್ಯಗಳಿಂದ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದ ಅಭಿಷೇಕ್ ಶರ್ಮಾ ಅವರ ಫಾರ್ಮ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಥಿರತೆಯ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ.

ಬೌಲಿಂಗ್‌ನಲ್ಲಿ ಐತಿಹಾಸಿಕ ದಾಖಲೆ!

ಬ್ಯಾಟಿಂಗ್ ಕೈಕೊಟ್ಟರೂ, ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ತಮ್ಮ ಅದ್ಭುತ ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಇತಿಹಾಸ ನಿರ್ಮಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಝಿಂಬಾಬ್ವೆಯ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಕರಾರುವಾಕ್ ದಾಳಿಯ ಮೂಲಕ ಪೆವಿಲಿಯನ್​ಗೆ ಕಳುಹಿಸಿದ್ದ ಅಭಿಷೇಕ್, 2.5 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದ್ದರು.

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಈ ಮೂರು ವಿಕೆಟ್​ಗಳೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 3 ವಿಕೆಟ್ ಪಡೆದ ಮೊದಲ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಅಪರೂಪದ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Source link

ಭವ್ಯಾ ಗೌಡಗೆ ತಂಗಿ ಎಂದು ಕರೆದು ಕಾಳೆದ ಹುಲಿ ಕಾರ್ತಿಕ್

ಕನ್ನಡದ ‘ದೇವಿ’ ಸಿನಿಮಾದ ವಿಶೇಷ ಹಾಡಿನ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಹಾಸ್ಯ ನಟ ಹುಲಿ ಕಾರ್ತಿಕ್ ತಮ್ಮ ಸೆಟ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ನಿರ್ವಹಿಸುತ್ತಿರುವ ಹುಲಿ ಕಾರ್ತಿಕ್, ಚಿತ್ರೀಕರಣದ ಸೆಟ್‌ನಲ್ಲಿರುವ ಸಕಾರಾತ್ಮಕ ವಾತಾವರಣವನ್ನು ಪ್ರಶಂಸಿಸಿದರು.

ನಾಯಕ ನಟ ಚೇತನ್ ಬಗ್ಗೆ ಮಾತನಾಡಿದ ಕಾರ್ತಿಕ್, ‘ಚೇತನ್ ಒಬ್ಬ ದೊಡ್ಡ ಮನುಷ್ಯ. ಅವರು ರೈತರಾಗಿದ್ದರಿಂದ ದೊಡ್ಡ ಮನಸ್ಸು ಹೊಂದಿದ್ದಾರೆ. ರೈತರು ತಾವು ಚೆನ್ನಾಗಿರದಿದ್ದರೂ ತಮ್ಮವರು ಚೆನ್ನಾಗಿರಬೇಕು ಎಂದು ಬಯಸುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟಿ ಭವ್ಯಾ ಗೌಡ ಅವರನ್ನು ತಂಗಿ ಎಂದು ಕರೆದು ಕಾಲೆಳೆದರು. ಆ ಬಳಿಕ ಮುಂಬೈನಿಂದ ಬಂದ ನಟಿ ಗುಪ್ತಾ ಅವರನ್ನು ಹಾಡಿ ಹೊಗಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬೈಕ್ ಬದಲು ಕುದುರೆ ಏರಿ ಆಹಾರ ತಲುಪಿಸಲು ಹೊರಟ ಡೆಲಿವರಿ ಬಾಯ್ – Kannada News | Chennai: Delivery boy sets out to deliver food on horseback instead of a bike on a Chennai road.

ಚೆನ್ನೈ, ಜುಲೈ 27: ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಫುಡ್ ಆರ್ಡರ್ ಮಾಡಿದ್ರೆ ಫುಡ್ ಡೆಲಿವರಿ ಬಾಯ್ (delivery boy) ಬೈಕ್ ನಲ್ಲಿ ಬಂದು ಫುಡ್ ಡೆಲಿವರಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಹಾರ ವಿತರಣಾ ಸಿಬ್ಬಂದಿಯೂ ಕುದುರೆ ಏರಿ ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದಾನೆ. ಹೌದು, ಚೆನ್ನೈನ (Chennai) ಇಸಿಆರ್‌ನ ಪಲವಕ್ಕಂ ಪ್ರದೇಶದಲ್ಲಿ ಕುದುರೆ ಏರಿ ಆಹಾರ ವಿತರಿಸಲು ಹೊರಟ ಡೆಲಿವರಿ ಬಾಯ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ವಿತರಣಾ ಸಿಬ್ಬಂದಿ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಐಯಮ್ ವೆಂಕಟ್_ವಿವಿಆರ್ (iamvenkat_vvr) ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಡೆಲಿವರಿ ಬಾಯ್ ಯೊಬ್ಬ ಕುದುರೆ ಏರಿ ಆಹಾರ ತಲುಪಿಸುತ್ತಿರುವ ದೃಶ್ಯ ಕಾಣಬಹುದು. ಚೆನ್ನೈನ ರಸ್ತೆಯಲ್ಲಿ ಕುದುರೆ ಸವಾರಿ ಮಾಡಿಕೊಂಡು ಫುಡ್‌ ಡೆಲಿವರಿ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿದ ಡೆಲಿವರಿ ಬಾಯ್! ವೀಡಿಯೋ ವೈರಲ್

ಈ ವಿಡಿಯೋ ಇದುವರೆಗೆ 69 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟ್ರಾಫಿಕ್ ಸಮಸ್ಯೆಯಿಲ್ಲ, ಮೈಲೇಜ್ ಚಿಂತೆಯಿಲ್ಲ, ಹುಲ್ಲು ಹಾಕಿದ್ರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನ್ಯೂ ಅಪ್ಡೇಟ್ ಎಂದಿದ್ದಾರೆ. ಮತ್ತೊಬ್ಬರು, ಪೆಟ್ರೋಲ್ ಹಾಗೂ ಹಣ ಉಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:10 am, Mon, 27 July 26

Source link

“ಅಮ್ಮ ಏಳಮ್ಮ…” ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ: ಕಣ್ಣೀರಿಟ್ಟ ಜನತೆ – Kannada News | Heartbreaking: Madikeri Elephant Calf Refuses to Leave Deceased Mother in Coorg

ಮಡಿಕೇರಿ, ಜು.27: ಕೊಡಗು ಜಿಲ್ಲೆಯ ಅಮ್ಮತಿ ಸಮೀಪದ ಆನಂದಪುರದಲ್ಲಿ ಕರುಳು ಹಿಂಡುವಂತಹ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ಮೃತಪಟ್ಟು ಬಿದ್ದಿದ್ದ ತಾಯಿ ಆನೆಯ ದೇಹವನ್ನು ಬಿಟ್ಟು ದೂರ ಹೋಗಲು ನಿರಾಕರಿಸಿದ ಆನೆ ಮರಿಯ ಗೋಳಾಟವು ಸ್ಥಳೀಯರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ಶನಿವಾರ ತಡರಾತ್ರಿ ಆನೆ ಮರಿಯ ನಿರಂತರ ಕೂಗು ಕೇಳಿ ಸ್ಥಳೀಯ ಗ್ರಾಮಸ್ಥರು ಕಾಫಿ ತೋಟದತ್ತ ತೆರಳಿದಾಗ ಸುಮಾರು ೩೦ ವರ್ಷ ವಯಸ್ಸಿನ ಹೆಣ್ಣು ಕಾಡುಆನೆಯ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಭಾನುವಾರ ಬೆಳಿಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಆನೆಯ ಬಳಿಗೆ ಹೋಗಲು ಪ್ರಯತ್ನಿಸಿದಾಗ, ಆನೆ ಮರಿಯು ತಾಯಿಯನ್ನು ರಕ್ಷಿಸಲು ಮುನ್ನುಗ್ಗಿ ಅಧಿಕಾರಿಗಳನ್ನು ತಡೆಯಿತು. ತಾಯಿಯ ದೇಹದಿಂದ ದೂರ ಮಾಡಲು ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಆನೆ ಮರಿ ನಿರಾಕರಿಸಿತು.

ಇಲ್ಲಿದೆ ನೋಡಿ ಸ್ಟೋರಿ:

ಕೊನೆಗೆ ಬೇರೆ ದಾರಿಯಿಲ್ಲದೇ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಬಳಸಿ ಆನೆ ಮರಿಯನ್ನು ಸೆರೆಹಿಡಿದು, ಪಕ್ಕಕ್ಕೆ ಕಟ್ಟಿಹಾಕಬೇಕಾಯಿತು. ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರಾದ ಡಾ. ಮುಜೀಬ್ ಹಾಗೂ ಡಾ. ನವೀನ್ ಕುಮಾರ್ ನಡೆಸಿದರು.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!

ವಿರಾಜಪೇಟೆ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಕಿರುಬನಂತನ್ ಟಿ ಅವರು ಮಾಹಿತಿ ನೀಡಿ, “ಮೃತಪಟ್ಟ ಕಾಡು ಆನೆಗೆ ಸುಮಾರು ೩೦ ವರ್ಷ ವಯಸ್ಸಾಗಿತ್ತು. ಪಶುವೈದ್ಯರ ಪ್ರಾಥಮಿಕ ವರದಿಯಂತೆ ಆನೆಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ಆಂತರಿಕ ರಕ್ತಸ್ರಾವ ಸಂಭವಿಸಿ ಸಾವು ಸಂಭವಿಸಿದೆ” ಎಂದು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆಯ ನಂತರ ಬಿಡುಗಡೆ ಮಾಡಲಾದ ಆನೆ ಮರಿಯು ತಾಯಿ ಮೃತಪಟ್ಟ ಸ್ಥಳದಲ್ಲೇ ಕಣ್ಣೀರು ಹಾಕುತ್ತಾ ಅಲೆದಾಡುತ್ತಿರುವುದು ಕಂಡವರ ಮನ ಕರಗಿಸುವಂತಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bandipur Safari: ಬಂಡೀಪುರ ಸಫಾರಿ ದರ ಬಹುತೇಕ ಡಬಲ್, ಸೆಪ್ಟೆಂಬರ್ 1ರಿಂದ ಪ್ರವಾಸಿಗರಿಗೆ ಹೊಸ ಶುಲ್ಕ – Kannada News | Bandipur Safari Becomes Costlier: Karnataka Forest Department Revises Safari, Camera and Vehicle Charges from September 1

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶImage Credit source: tv9

ಚಾಮರಾಜನಗರ, ಜುಲೈ 27: ಚಾಮರಾಜನಗರ ಜಿಲ್ಲೆಯ (Chamarajanagar) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ (Bandipur Tiger Reserve) ಭೇಟಿ ನೀಡುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಸೆಪ್ಟೆಂಬರ್ 1, 2026ರಿಂದ ಜಾರಿಗೆ ಬರುವಂತೆ ಸಫಾರಿ, ಖಾಸಗಿ ವಾಹನ, ಕ್ಯಾಮೆರಾ ಬಳಕೆ ಸೇರಿದಂತೆ ಹಲವು ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಹೊಸ ದರಗಳ ಪ್ರಕಾರ ಹಲವು ಸೇವೆಗಳ ಶುಲ್ಕವು ಹಿಂದಿನದರಿಗಿಂತ ಗಣನೀಯವಾಗಿ ಏರಿಕೆಯಾಗಿದ್ದು, ಬಂಡೀಪುರ ಸಫಾರಿ ಪ್ರವಾಸ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ದುಬಾರಿಯಾಗಲಿದೆ.

ಅರಣ್ಯ ಇಲಾಖೆಯ ಆದೇಶದ ಪ್ರಕಾರ, ಬಸ್ ಮತ್ತು ಜೀಪ್ ಸಫಾರಿಯ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ. ಇದೇ ವೇಳೆ ಖಾಸಗಿ ವಾಹನಗಳ ಪ್ರವೇಶ ಶುಲ್ಕ, ಬೋಟ್ ಸೇವೆ, ಕ್ಯಾಮೆರಾ ಬಳಕೆ ಹಾಗೂ ಅರಣ್ಯ ಇಲಾಖೆಯ ಅತಿಥಿಗೃಹಗಳ ಶುಲ್ಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.

ಬಂಡೀಪುರ ಸಫಾರಿ: ಹೊಸ ದರ ಎಷ್ಟು?

  • ಅರಣ್ಯ ಇಲಾಖೆ ಬಸ್ ಸಫಾರಿಗೆ ವಯಸ್ಕರ ದರ ₹650 ರಿಂದ ₹1,000ಕ್ಕೆ ಏರಿಕೆ.
  • 12 ವರ್ಷದೊಳಗಿನ ಮಕ್ಕಳಿಗೆ ₹350ರಿಂದ ₹500ಕ್ಕೆ ಹೆಚ್ಚಳ.
  • ಅರಣ್ಯ ಇಲಾಖೆ ಜೀಪ್ ಸಫಾರಿಗೆ ವಯಸ್ಕರ ದರ ₹750ರಿಂದ ₹1,500ಕ್ಕೆ ಏರಿಕೆ.
  • ಮಕ್ಕಳಿಗೆ ₹750 ದರ ನಿಗದಿ ಮಾಡಲಾಗಿದೆ.
  • ಈ ದರಗಳಲ್ಲಿ ನೇಚರ್ ಗೈಡ್ ಶುಲ್ಕ ಸೇರಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ಯಾಮೆರಾ ಬಳಕೆಗೂ ಹೊಸ ನಿಯಮ

ಇದುವರೆಗೆ 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಪ್ರತ್ಯೇಕ ಶುಲ್ಕ ಇರಲಿಲ್ಲ. ಹೊಸ ಆದೇಶದಂತೆ;

  • 200 ಮಿ.ಮೀ.ವರೆಗೆ ಲೆನ್ಸ್ ಹೊಂದಿರುವ ಕ್ಯಾಮೆರಾಗೆ ಶುಲ್ಕ ಇಲ್ಲ.
  • 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ 18% GST ಪಾವತಿಸಬೇಕು.

ಖಾಸಗಿ ವಾಹನ ಪ್ರವೇಶ ಶುಲ್ಕವೂ ಹೆಚ್ಚಳ

ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವ ಖಾಸಗಿ ವಾಹನಗಳಿಗೂ ಹೊಸ ದರ ನಿಗದಿಯಾಗಿದೆ.

  • ಕಾರು – ₹100 + 18% GST
  • ಲಘು ವಾಣಿಜ್ಯ ವಾಹನ (LCV) – ₹200 + 18% GST
  • ಬಸ್ – ₹300 + 18% GST
  • ಬಂಡೀಪುರ ಸಫಾರಿಗೆ ಪ್ರತ್ಯೇಕ ಪ್ರವೇಶ ದರ

ಬಂಡೀಪುರದಲ್ಲಿ ಸ್ವಂತ ಜೀಪ್, ಎಲ್‌ಸಿವಿ ಅಥವಾ ಬೋಟ್ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿಯಾಗಿದೆ.

  • ವಯಸ್ಕರಿಗೆ – ₹600
  • ಮಕ್ಕಳಿಗೆ – ₹300
  • ಜೀಪ್ – ₹2,500
  • ಲಘು ವಾಣಿಜ್ಯ ವಾಹನ – ₹3,500
  • ಬೋಟ್ – ₹3,500

ಬಂಡೀಪುರ ಸಫಾರಿ: ಹೊಸ ದರ ಯಾವಾಗಿನಿಂದ ಜಾರಿ?

ಅರಣ್ಯ ಇಲಾಖೆಯ ಆದೇಶದ ಪ್ರಕಾರ 2026ರ ಸೆಪ್ಟೆಂಬರ್ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಈ ಆದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಸಂಬಂಧಿತ ಅರಣ್ಯ ಪ್ರವಾಸೋದ್ಯಮ ಸೇವೆಗಳಿಗೆ ಅನ್ವಯವಾಗಲಿದೆ.

ಇದನ್ನೂ ಓದಿ: ಮುಂಗಾರು ಮಳೆ ಕೊರತೆ: ಭರಚುಕ್ಕಿ ಜಲಪಾತ ಭಣಭಣ, ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ

ಹೊಸ ದರಗಳು ಪ್ರವಾಸೋದ್ಯಮದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಯಾಗಿದ್ದರೂ, ಏಕಾಏಕಿ ದರ ಏರಿಕೆಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರವಾಸಿಗರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:56 am, Mon, 27 July 26

Source link

ಕಾಡುಹಂದಿ ಶಿಕಾರಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು: ಶವ ಹೂತು ಹಾಕಿದ್ದ ಮೂವರ ಬಂಧನ! – Kannada News | Chikkamagaluru Crime: 3 Arrested for Burying Man Killed by Electric Fence

ಚಿಕ್ಕಮಗಳೂರು, ಜುಲೈ 27: ಕಾಡುಹಂದಿ ಶಿಕಾರಿಗೆಂದು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಿಷಯ ಹೊರಬಾರದಂತೆ ಶವವನ್ನು ಹೂತುಹಾಕಿದ್ದ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿಯಲ್ಲಿ ಈ ದೋರಣ ಘಟನೆ ನಡೆದಿದೆ. ಗ್ರಾಮದ ಕರಿಯಪ್ಪ (55) ಮೃತಪಟ್ಟ ದುರದೃಷ್ಟಕರ ವ್ಯಕ್ತಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಚಂದ್ರಪ್ಪ, ಕೆಂಚಪ್ಪ ಮತ್ತು ಯದುಕುಮಾರ್ ಎಂಬುವವರನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.

ನಡೆದಿದ್ದೇನು?

ದೊಣ್ಣೆಕೋರನಹಳ್ಳಿ ಗ್ರಾಮದ ಬಳಿ ಆರೋಪಿಗಳು ಕಾಡುಹಂದಿ ಬೇಟೆಯಾಡಲು ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಈ ವೇಳೆ ಅಲ್ಲಿಗೆ ತೆರಳಿದ್ದ ಕರಿಯಪ್ಪ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದ ಗಾಬರಿಗೊಂಡ ಆರೋಪಿಗಳು, ಪ್ರಕರಣದಿಂದ ನುಣುಚಿಕೊಳ್ಳಲು ಯಾರಿಗೆ ವಿಷಯ ತಿಳಿಯದಂತೆ ಕರಿಯಪ್ಪ ಅವರ ಶವವನ್ನು ಗುಟ್ಟಾಗಿ ಹೂತುಹಾಕಿ ಪುರಾವೆ ನಾಶಪಡಿಸಲು ಯತ್ನಿಸಿದ್ದಾರೆ.

ಸಿಸಿಟಿವಿ ಪರಿಶೀಲನೆಯಿಂದ ಬೆಳಕಿಗೆ ಬಂದ ಸತ್ಯ!

ಇತ್ತ ಕರಿಯಪ್ಪ ಅವರು ಮನೆಗೆ ವಾಪಸ್ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಸುಳಿವು ಸಿಗದಿದ್ದಾಗ ಯಗಟಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು FIR ದಾಖಲಿಸಿದ್ದರು.

ಪ್ರಕರಣದ ಬೆನ್ನತ್ತಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪ್ರಕರಣದ ಗಂಭೀರತೆ ತಿಳಿದ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಸದ್ಯ ಯಗಟಿ ಠಾಣೆ ಪೊಲೀಸರು ಮೂವರನ್ನೂ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವುದೇಕೆ? ಉತ್ತರಿಸಿದ ನಿತೇಶ್ ತಿವಾರಿ – Kannada News | Why Ramayana Movie Comes in Two Part  Director Nitesh Tiwari Explains 

ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರ (Ramayana Movie) ಹಲವು ಕಾರಣಗಳಿಂದ ಚರ್ಚೆಯಲ್ಲಿದೆ. ಈ ಮಹಾಕಾವ್ಯವನ್ನು ಎರಡು ಭಾಗದಲ್ಲಿ ಹೇಳುತ್ತಿರುವುದು ಏಕೆ ಎಂಬುದನ್ನು ನಿರ್ದೇಶಕ ನಿತೇಶ್ ತಿವಾರಿ ರಿವೀಲ್ ಮಾಡಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026 ಕಾರ್ಯಕ್ರಮದಲ್ಲಿ ಚಿತ್ರತಂಡ ಈ ಬಗ್ಗೆ ಮಾತನಾಡಿದೆ. ಕುತೂಹಲದ ತಿರುವಿನೊಂದಿಗೆ ಮೊದಲ ಭಾಗ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಇಡೀ ಭಾರತೀಯ ಚಿತ್ರರಂಗದಲ್ಲೇ ‘ರಾಮಾಯಣ’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಾಮಾಯಣದ ಕಥೆ ಅತ್ಯಂತ ವಿಶಾಲವಾಗಿದೆ. ಹಾಗಾಗಿ ಇದನ್ನು ಎರಡು ಭಾಗಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಭಾಗ ಮುಗಿದ ತಕ್ಷಣ ಪ್ರೇಕ್ಷಕರಿಗೆ ಎರಡನೇ ಭಾಗವನ್ನು ನೋಡಲೇಬೇಕು ಎಂಬ ಹಪಾಹಪಿ ಶುರುವಾಗುತ್ತದೆ. ನಿರ್ದೇಶಕರು ಕಥೆಯನ್ನು ಅಷ್ಟು ಅದ್ಭುತವಾಗಿ ಹೆಣೆದಿದ್ದಾರಂತೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ತುಣುಕುಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ದೆಹಲಿಯ ಭಾರತ್ ಮಂಟಪಂ ಸ್ಕ್ರೀನಿಂಗ್ ವೇಳೆ ವಿಡಿಯೋ ಸೋರಿಕೆಯಾಗಿದೆ. ಈಗ ಕಾಮಿಕ್-ಕಾನ್ ಪ್ರದರ್ಶನದ ಬಳಿಕವೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಅಲರ್ಟ್ ಆಗಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಕಾನೂನು ತಂಡವು ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಟ್ರೇಲರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಸೆಟ್‌ನಲ್ಲಿ ಹೇಗಿತ್ತು ಯಶ್ ಹವಾ, ಕೊಡ್ತಿದ್ರು ಸಖತ್ ಕ್ವಾಟ್ಲೆ

ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರಕ್ಕೆ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಜಂಟಿಯಾಗಿ ಸಂಗೀತ ನೀಡುತ್ತಿದ್ದಾರೆ. ನಟ ಯಶ್ ಕೂಡ ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ 2026ರ ನವೆಂಬರ್ ತಿಂಗಳಿನಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ: ರೈತರು ಫುಲ್ ಖುಷ್ – Kannada News | Basavasagar Dam Releases 30,000 Cusecs into Krishna River, Farmers in North Karnataka Get Relief

ಯಾದಗಿರಿ, ಜುಲೈ 27: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದೆ. ಬಸವಸಾಗರ ಜಲಾಶಯವೂ ತುಂಬಿದ್ದು, ಡ್ಯಾಂನಿಂದ ಕೃಷ್ಣಾ ನದಿಗೆ 30 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ರಾಯಚೂರು ತಾಲ್ಲೂಕಿನ ಗುರ್ಜಾಪುರದಲ್ಲಿರುವ ಬ್ರಿಡ್ಜ್-ಕಂ-ಬ್ಯಾರೇಜ್‌ನ 196 ಗೇಟ್‌ಗಳನ್ನು ತೆರೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಈ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯುವುದರಿಂದ ಹಿನ್ನೀರಿನ ಸಂಗ್ರಹವನ್ನು ತಪ್ಪಿಸಿ, ನೀರು ಸುಗಮವಾಗಿ ಹರಿಯಲು ಸಹಾಯಕವಾಗುತ್ತದೆ. ಹಿನ್ನೀರಿನಿಂದಾಗಿ ಗುರ್ಜಾಪುರ, ಮರಚೇಣಿಗೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಈಗಾಗಲೇ ನೂರಕ್ಕೂ ಹೆಚ್ಚು ಗೇಟ್‌ಗಳನ್ನು ತೆರೆದಿದ್ದಾರೆ.

ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರಿಗೆ, ಈ ನೀರು ಬಿಡುಗಡೆಯು ಕೊಂಚ ನಿರಾಳತೆಯನ್ನು ತಂದಿದೆ. ಕೃಷಿ ಚಟುವಟಿಕೆಗಳು ಮತ್ತೆ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ದೇವರಸೂಗೂರು, ಗಂಜಿಹಳ್ಳಿ, ಡಿ. ರಾಮಪುರ ಮುಂತಾದ ಕೆಳಭಾಗದ ಹಳ್ಳಿಗಳಿಗೆ ನೀರು ತಲುಪುವ ಭರವಸೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version