ಇಂದು 2026 ಜುಲೈ 27 ರ ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ ಕನ್ನಡ ಡಿಜಿಟಲ್ನ ದಿನ ಭವಿಷ್ಯ ಕಾರ್ಯಮದಲ್ಲಿ ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿಯಂದು ಚಂದ್ರನು ಧನುಸ್ಸು ರಾಶಿಯ ಮೂಲಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ದಿನವು ಮಂಗಳ ತ್ರಯೋದಶಿಯಾಗಿದ್ದು, ಶುಭಕರವಾದ ಫಲಗಳನ್ನು ನೀಡುತ್ತದೆ. ಅಲ್ಲದೆ, ಲಯಕಾರಕ ಶಿವನ ಆರಾಧನೆಗೆ ಉತ್ತಮ ದಿನವಾಗಿದೆ. ಬೆಳಗ್ಗೆ 7:40 ರಿಂದ 9:15 ರವರೆಗೆ ರಾಹುಕಾಲವಿದ್ದರೆ, 9:14 ರಿಂದ 10:50 ರವರೆಗೆ ಶುಭಕಾಲ ಇರಲಿದೆ.
