‘ರಾಮಾಯಣ’ ಸೆಟ್‌ನಲ್ಲಿ ಹೇಗಿತ್ತು ಯಶ್ ಹವಾ, ಕೊಡುತ್ತಿದ್ರು ಕ್ವಾಟ್ಲೆ – Kannada News | Yash said he use to listen to music in Ramayana set it will annoy other crew members

ಯಶ್ (Yash) ನಟನೆಯ ಎರಡು ಅತಿ ದೊಡ್ಡ ಸಿನಿಮಾಗಳು ಈ ಕೆಲವೇ ತಿಂಗಳುಗಳ ಅಂತರದಲ್ಲಿ ಬಿಡುಗಡೆ ಆಗಲಿವೆ. ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಇತ್ತೀಚೆಗಷ್ಟೆ ‘ರಾಮಾಯಣ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಯಶ್ ಅವರ ಪರವಾಗಿ ಅಭಿಮಾನಿಗಳ ಕರತಾಡನ, ಕಿರುಚಾಟಗಳೇ ಅವರ ಸ್ಟಾರ್​​ ಡಮ್ ಅನ್ನು ಸಾರಿ ಹೇಳುತ್ತಿದ್ದವು. ಅವರು ಜನರ ನಡುವೆ ಮಾತ್ರವಲ್ಲ, ಸೆಟ್​​ನಲ್ಲಿ ಇದ್ದಾಗಲೂ ಅವರದ್ದೇ ಹವಾ. ‘ರಾಮಾಯಣ’ ಸೆಟ್​​ನಲ್ಲಿ ಸಹ ಸಖತ್ ಕ್ವಾಟ್ಲೆ ಕೊಡುತ್ತಿದ್ದಿದ್ದಾಗಿ ಯಶ್ ನೆನಪು ಮಾಡಿಕೊಂಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಅವರು ತಮ್ಮ ಮುಂಬರುವ ‘ರಾಮಾಯಣ’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಯಶ್ ಮತ್ತು ರಣಬೀರ್ ಚಿತ್ರದ ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದರು. ಯಶ್ ತಮ್ಮ ಕೆಲಸದ ಶೈಲಿ ಹಾಗೂ ರಾವಣ ಪಾತ್ರಕ್ಕೆ ತಯಾರಾದ ಬಗ್ಗೆ ಹೇಳಿಕೊಂಡರು.

ಯೂಟ್ಯೂಬ್ ಚಾನಲ್‌ ಜೊತೆಗೆ ಮಾತನಾಡಿದ ನಟ ಯಶ್, ರಾವಣನ ಪಾತ್ರಕ್ಕೆ ಹೇಗೆ ತಯಾರಾಗುತ್ತೀರಿ ಎಂದು ಕೇಳಿದಾಗ? ಸೆಟ್‌ಗೆ ಕಾಲಿಡುವಾಗ ತಾನು ಧರಿಸುವ ಭಾರವಾದ ಹಾಗೂ ದೊಡ್ಡದಾದ ಕಿರೀಟವು ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಲು ಪ್ರತಿದಿನ ಸಹಾಯ ಮಾಡುತ್ತಿದ್ದವು ಎಂದು ಯಶ್ ತಿಳಿಸಿದರು. ನಿರ್ದೇಶಕ ನಿತೇಶ್ ಅವರು ಯಶ್ ಅವರ ಸಂಗೀತದ ಬಗ್ಗೆ ನೆನಪಿಸಿದಾಗ, ನಟ ತಮಾಶೆಯಾಗಿ, ‘ನಾನು ಸೆಟ್‌ನ ಇಡೀ ವಾತಾವರಣವನ್ನು ಸ್ವಲ್ಪ ಮಟ್ಟಿಗೆ ಹಾಳು ಮಾಡುತ್ತಿದ್ದೆ. ನಾನು ತುಂಬಾ ಗಂಭೀರವಾಗಿರುತ್ತಿದ್ದೆ’ ಎಂದರು. ರಣಬೀರ್ ಕಪೂರ್ ಮಾತನಾಡಿ, ತಾನು ಇನ್ನೂ ಯಶ್ ಜೊತೆ ದೃಶ್ಯಗಳಲ್ಲಿ ನಟಿಸಿಲ್ಲವಾದರೂ, ಅವರ ಜೊತೆ ಕೆಲಸ ಮಾಡಿದ ಎಲ್ಲರೂ ಕನ್ನಡದ ಸ್ಟಾರ್ ತಮ್ಮ ಸಂಗೀತದ ಮೂಲಕ ಇಡೀ ಸೆಟ್‌ನ ಎನರ್ಜಿಯನ್ನೇ ಬದಲಾಯಿಸುತ್ತಿದ್ದರು ಎಂದು ಹೇಳುತ್ತಿದ್ದರು ಎಂದರು.

ಇದನ್ನೂ ಓದಿ:ಕ್ಯಾಲಿಫೋರ್ನಿಯಾದಲ್ಲಿ ಯಶ್ ನೋಡಿ ‘ಡ್ಯಾಡಿಸ್ ಹೋಂ’ ಎಂದ ಫ್ಯಾನ್ಸ್

‘ನಾನು ದೊಡ್ಡ ಸ್ಪೀಕರ್‌ಗಳನ್ನು ತರಿಸಿ ಪೂರ್ಣ ವಾಲ್ಯೂಮ್‌ನಲ್ಲಿ ಸಂಗೀತವನ್ನು ಹಾಕಿಕೊಳ್ಳುತ್ತಿದ್ದೆ. ಹಾಗಾಗಿ ನಾನು ಆ ಜೋನ್​​​ನಲ್ಲೇ ಇರುತ್ತಿದ್ದೆ. ನಾನು ಶಿವನ ಹಾಡುಗಳನ್ನು ಹಾಕುತ್ತಿದ್ದೆ. ರಾವಣನು ಭಗವಾನ್ ಶಿವನ ದೊಡ್ಡ ಭಕ್ತನಾಗಿದ್ದಾನೆ. ಆ ಟ್ರಾನ್ಸ್ ಸ್ಥಿತಿಯಲ್ಲೇ ಇರಲು ನಾನು ಹಾಗೆ ಮಾಡುತ್ತಿದ್ದೆ. ಸಂಗೀತವು ತುಂಬಾ ಜೋರಾಗಿರುತ್ತಿದ್ದಿದ್ದರಿಂದ, ಅನಿವಾರ್ಯವಾಗಿ ಎಲ್ಲರೂ ಬಹಳ ಕಷ್ಟಪಟ್ಟು ಮಾತನಾಡಬೇಕಾಗುತ್ತಿತ್ತು’ ಎಂದು ಯಶ್ ವಿವರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ – Kannada News | Vaibhav Sooryavanshi Breaks Another World Record: Youngest to Two T20 Fifties Before 16

ಜಿಂಬಾಬ್ವೆ ವಿರುದ್ಧದ ಈ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಬಾರಿಸಿದ ಎರಡನೇ ಶತಕ ಇದಾಗಿದೆ. ಮೊದಲ ಅರ್ಧಶತಕ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಿಸಿದ್ದ ವೈಭವ್ ಇದೀಗ ಎರಡನೇ ಅರ್ಧಶತಕದೊಂದಿಗೆ, ನೇಪಾಳದ ಬ್ಯಾಟ್ಸ್‌ಮನ್ ಕುಶಾಲ್ ಮಾಲಾ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸಹ ಮುರಿದರು(PC-BCCI).

Source link

PM Modi Interaction: ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು? – Kannada News | PM Narendra Modi Interacts with Participants of Viksit Vibrant Village Program 2026, here Is video What discussed

ನವದೆಹಲಿ, (ಜುಲೈ 26): ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ‘ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ದಲ್ಲಿ (Viksit Vibrant Village Program 2026) ಭಾಗವಹಿಸಿದವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ‘ಮೈ ಭಾರತ್’ ಮೂಲಕ ಜಾರಿಗೆ ತರಲಾದ ‘ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ’ವನ್ನು ಭಾರತದ ಗಡಿ ಗ್ರಾಮಗಳನ್ನು ರಾಷ್ಟ್ರದ ಮೊದಲ ಗ್ರಾಮಗಳೆಂದು ಪರಿಗಣಿಸುವ ಮತ್ತು ವಿಕಸಿತ ಭಾರತದ ಪ್ರಯಾಣದಲ್ಲಿ ಅವುಗಳನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ರೂಪಿಸಲಾಗಿದೆ. ಈ ಸಂವಾದದಲ್ಲಿ ದೇಶಾದ್ಯಂತ ಆಯ್ದ 400 ಯುವಜನತೆ ಭಾಗವಹಿಸಿದ್ದು, ಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು. ಗ್ರಾಮಸ್ಥರೊಂದಿಗಿನ ಒಡನಾಟ, ಅಲ್ಲಿ ಕಂಡಿರುವ ಅಭಿವೃದ್ಧಿ ಇತ್ಯಾದಿ ಎಲ್ಲವನ್ನೂ ಅವರು ಮೋದಿ ಜೊತೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viksit Vibrant Village Programme 2026: ಯುವಜನರು ಆತ್ಮವಿಶ್ವಾಸದಿಂದ ಬೆಳೆಯುವುದು ಗುರಿ- ವೈಬ್ರೆಂಟ್ ವಿಲೇಜ್ ಅಭಿಯಾನದಲ್ಲಿ ಮೋದಿ ಮಾತು – Kannada News | PM Modi Interaction with Participants of VVVP 2026, speaks of youth getting empowered with self confidence

ನವದೆಹಲಿ, ಜುಲೈ 26: ದೇಶದ ಪ್ರತಿಯೊಬ್ಬ ಯುವಜನರನ್ನು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯಿಂದ ಮುಂದಕ್ಕೆ ಕೊಂಡೊಯ್ಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಮೈ ಭಾರತ್ ಪ್ಲಾಟ್​​ಫಾರ್ಮ್ ವತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿತವಾದ ‘ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ 2026’ ನಲ್ಲಿ (Viksit Vibrant Village Programme) ಮಾತನಾಡುತ್ತಿದ್ದ ಪ್ರಧಾನಿಗಳು, ಗಡಿಭಾಗದ ಅಭಿವೃದ್ಧಿ ಮತ್ತು ಗಡಿ ಗ್ರಾಮಗಳ ಅಭ್ಯುದಯವು ದೇಶದ ವಿಕಾಸಕ್ಕೆ ಬಹಳ ಮುಖ್ಯ ಎಂದು ಹೇಳಿದ್ದಾರೆ.

‘ಯುವಜನರು ಭಾರತದ ಗಡಿಭಾಗದ ಗ್ರಾಮಗಳಿಗೆ ಹೋಗಿ ಅಲ್ಲಿರುವ ಬದುಕಿನ ಅನುಭವ ಪಡೆಯುವುದು ಬಹಳ ಅಗತ್ಯ. ಗಡಿ ಗ್ರಾಮಗಳಲ್ಲಿ ಜನರಿಗೆ ದೇಶ ಅದೆಷ್ಟು ಮುಖ್ಯ, ಈ ದೇಶಕ್ಕಾಗಿ ಅದೆಷ್ಟು ಜಾಗ್ರತೆಯಿಂದ ಇರುತ್ತಾರೆ ನಿಮಗೆ ಗೊತ್ತಾಗುತ್ತದೆ’ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

‘ಸೊಲೊ ಟ್ರಾವೆಲ್’ ಮತ್ತು ಯುವ ಶಕ್ತಿಯ ಮೆಚ್ಚುಗೆ

ಸಂವಾದದ ವೇಳೆ ಮಾತನಾಡಿ ಪ್ರಧಾನಿಯವರು, ಇತ್ತೀಚಿನ ದಿನಗಳಲ್ಲಿ ‘ಒಂಟಿ ಪ್ರಯಾಣ’ (Solo Travel) ದೊಡ್ಡ ಟ್ರೆಂಡ್ ಆಗಿದೆ ಎಂದರು.

“ಸೊಲೊ ಟ್ರಾವೆಲ್ ಎನ್ನುವುದು ನಮ್ಮನ್ನು ನಾವು ಕಂಡುಕೊಳ್ಳುತ್ತಾ ಜಗತ್ತನ್ನು ತಿಳಿಯುವ ಅತ್ಯುತ್ತಮ ಮಾರ್ಗ. ನೀವು ಈ ಅಭಿಯಾನದಲ್ಲಿ ಒಂಟಿಯಾಗಿ ಹೊರಟಿದ್ದರೂ, ಭಾರತದಾದ್ಯಂತ ಸಾಗಿದ ಈ ಪ್ರಯಾಣವು ನಿಮ್ಮನ್ನೆಲ್ಲ ಒಂದೇ ಕುಟುಂಬವನ್ನಾಗಿ ಮಾಡಿದೆ. ಭಾರತದ ಹೆಣ್ಣುಮಕ್ಕಳು ಒಂಟಿಯಾಗಿ ಇಂತಹ ಸಾಹಸಿ ಪ್ರಯಾಣ ಕೈಗೊಂಡಿರುವುದು ಅವರಲ್ಲಿ ಬೆಳೆಯುತ್ತಿರುವ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: PM Modi Interaction: ವಿಕಸಿತ್ ವೈಬ್ರೆಂಟ್ ಗ್ರಾಮ ಯೋಜನೆ; ಪ್ರಧಾನಿ ಜೊತೆ ಅನುಭವ ಹಂಚಿಕೊಂಡ ಯುವಜನರು

ಇದಕ್ಕೂ ಮುನ್ನ, ಅಭಿಯಾನದಲ್ಲಿ ಪಾಲ್ಗೊಂಡ ಯುವಜನರು ತಮ್ಮ ಅನುಭಗಳನ್ನು ಹಂಚಿಕೊಂಡರು. ಗಡಿಗ್ರಾಮಗಳಲ್ಲಿನ ಸಂಸ್ಕೃತಿ, ಅಲ್ಲಿಯ ಜನರ ಆಚಾರ ವಿಚಾರ, ತಮಗೆ ಸಿಕ್ಕ ಸತ್ಕಾರ ಇತ್ಯಾದಿ ಎಲ್ಲವನ್ನೂ ಈ ಮಕ್ಕಳು ಪ್ರಧಾನಿಗಳ ಜೊತೆ ಹೇಳಿಕೊಂಡರು.

ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ನ ಮುಖ್ಯ ವಿವರಗಳು

ಗಡಿ ಗ್ರಾಮಗಳನ್ನು ದೇಶದ “ಮೊದಲ ಗ್ರಾಮಗಳು” ಎಂದು ಪರಿಗಣಿಸುವ ಪ್ರಧಾನಿಯವರ ಕಲ್ಪನೆಯಂತೆ ‘ಮೈ ಭಾರತ್’ ಮೂಲ ರಚನೆಯಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜೂನ್ 4 ರಿಂದ ಜೂನ್ 30 ರವರೆಗೆ ಎರಡು ಹಂತಗಳಲ್ಲಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ 74 ಗಡಿ ಗ್ರಾಮಗಳಲ್ಲಿ ಈ ಅಭಿಯಾನ ನಡೆಯಿತು. ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದ ಆನ್‌ಲೈನ್ ಕ್ವಿಜ್ ಸ್ಪರ್ಧೆಯ ಮೂಲಕ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 400ಕ್ಕೂ ಹೆಚ್ಚು ಯುವಕರನ್ನು ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಖಡಕ್ ಸಲಹೆ ಸೂಚನೆಗಳನ್ನ ನೀಡಿದ ಪ್ರಲ್ಹಾದ ಜೋಶಿ

ಗಡಿ ಗ್ರಾಮಗಳಲ್ಲಿ ಯುವಕರ ಚಟುವಟಿಕೆಗಳು

ಗಡಿ ಭಾಗದ ಸ್ಥಳೀಯ ಕುಟುಂಬಗಳೊಂದಿಗೆ ವಾಸಿಸಿದ ಯುವಕರು ಕೆಳಗಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು:

  • ಸ್ವಚ್ಛತಾ ಅಭಿಯಾನ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ.
  • ಯುವ ಸಮ್ಮೇಳನಗಳು, ಸಾಂಸ್ಕೃತಿಕ ವಿನಿಮಯ ಮತ್ತು ಸಸಿನೆಡುವಿಕೆ.
  • ‘ಮಿನಿ ಮಾಡೆಲ್ ಪಂಚಾಯತ್’ ಸಿಮ್ಯುಲೇಶನ್ ಹಾಗೂ ಸ್ಥಳೀಯ ಕಲಾಕಾರರೊಂದಿಗೆ ಸಂವಾದ.
  • ಗಡಿ ಭಾಗದ ಆಶೋತ್ತರಗಳು, ಸಂಸ್ಕೃತಿ ಮತ್ತು ಆಯಕಟ್ಟಿನ ಪ್ರಾಮುಖ್ಯತೆಯನ್ನು ಹತ್ತಿರದಿಂದ ಅರಿಯುವುದು.

ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವಲ್ಲಿ ಯುವಜನತೆಯ ಈ ಸಕ್ರಿಯ ಪಾಲ್ಗೊಳ್ಳುವಿಕೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬರಗಾಲದ ಮಧ್ಯೆ ಹಾವೇರಿ ರೈತರಿಗೆ ಮತ್ತೊಂದು ಸಂಕಷ್ಟ: ಕಂಗಾಲಾದ ಅನ್ನದಾತ! – Kannada News | Farmers Hit by Borewell Cable Theft Amid Drought; Crops Wither

ಬೋರ್‌ವೆಲ್ ಕೇಬಲ್ ಕಳ್ಳತನImage Credit source: tv9 kannada

ಹಾವೇರಿ, ಜುಲೈ 26: ಒಂದು ಕಡೆ ಮಳೆರಾಯನ ಕಣ್ಣಮುಚ್ಚಾಲೆ, ಇನ್ನೊಂದೆಡೆ ವಿದ್ಯುತ್ ಪೂರೈಕೆ ವ್ಯತ್ಯಯ. ಇದರ ನಡುವೆ ಇದೀಗ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಜಮೀನಿನಲ್ಲಿ ಅಳವಡಿಸಿದ್ದ ಲಕ್ಷಾಂತರ ರೂ ಮೌಲ್ಯ ಬೋರ್‌ವೆಲ್ ಕೇಬಲ್ (borewell cable theft) ಮತ್ತು ವಿವಿಧ ವಸ್ತುಗಳನ್ನ ಖದೀಮರು ಕದ್ದು ಪರಾರಿಯಾಗಿರುವ ಹಾವೇರಿ (haveri) ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.

ಬೋರವೆಲ್ ಕೇಬಲ್ ಮತ್ತು ಬಿಡಿ ಭಾಗಗಳು ಕದ್ದು ಪರಾರಿ

ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ರಸ್ತೆಯ ಬದಿಯಿರುವ ಜಮೀನಿಗಳನ್ನ ಟಾರ್ಗೆಟ್​​ ಮಾಡಿರುವ ಖದೀಮರು 22ಕ್ಕೂ ಹೆಚ್ಚು ರೈತರ ಬೋರವೆಲ್ ವಸ್ತುಗಳ ಕದ್ದು ಪರಾರಿ ಆಗಿದ್ದಾರೆ. ಈ ವರ್ಷ ಮಳೆ ಇಲ್ಲದೆ ಅನ್ನದಾತರು ಬೆಳೆಗಳನ್ನ ರಕ್ಷಣೆ ಮಾಡಲು ಹರಸಹಾಸ ಪಡುತ್ತಿದ್ದು, ಹಗಲು-ರಾತ್ರಿ ಎನ್ನದೆ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅದರೆ ಖದೀಮರು ರಸ್ತೆಯ ಉದ್ದಕ್ಕೂ ಇರುವ ಬೋರವೆಲ್ ಕೇಬಲ್ ಮತ್ತು ಬಿಡಿ ಭಾಗಗಳನ್ನ ಕದ್ದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ಖದೀಮರು ಕಳ್ಳತನ ಮಾಡಿದ್ದಾರೆ. ಗ್ರಾಮದ ರೈತರಾದ ಕರಿಯಪ್ಪ ಅಣ್ಣಿ, ನಾಗರಾಜ್ ಮೊಟೇಬೆನ್ನೂರು, ರೇವಣಸಿದ್ದಪ್ಪ ವಾಳದ, ಸಿದ್ದಮ್ಮ, ಶಂಕ್ರಪ್ಪ, ಭರಮಪ್ಪ, ಮರಲಿಂಗಪ್ಪ, ತಿರಕಪ್ಪ, ಬಸವರಾಜ್, ಹೊಳಲಪ್ಪ, ದುಂಡಪ್ಪ ಸೇರಿದಂತೆ ಒಟ್ಟು 22ಕ್ಕೂ ಹೆಚ್ಚು ರೈತರ  ಬೋರವೆಲ್​​​ ಕೇಬಲ್ ಕಳ್ಳತನವಾಗಿದೆ. ‘‘ನಾವು ಹೇಗೆ ಜೀವನ ಮಾಡಬೇಕು’’ ಎಂದು ರೈತ ಶಂಕ್ರಪ್ಪ ತಮ್ಮ ಅಳಲು ತೊಡಿಕೊಂಡರು.

ಸಾವಿರಾರು ಮೌಲ್ಯದ ವಸ್ತುಗಳನ್ನ ಕದ್ದುಕೊಂಡು ಹೋದರೆ ಹೇಗೆ ಬದುಕುವುದು ಎಂದ ರೈತ

ಕರ್ಜಗಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಹಲವಾರು ಭಾರೀ ಖದೀಮರು ಕೇಬಲ್ ಮತ್ತು ಕೃಷಿ ಉಪಕರಣಗಳನ್ನ ಕದ್ದುಕೊಂಡು ಹೋಗಿದ್ದಾರೆ. ‘‘ನಾವು ಮತ್ತೆ 20 ರಿಂದ 30 ಸಾವಿರ ರೂ ಖರ್ಚು ಮಾಡಬೇಕು. ಒಂದು ಕಡೆ ಮಳೆ ಇಲ್ಲ. ಇನ್ನೊಂದು ಕಡೆ ಬೆಳೆ ಒಣಗುತ್ತಿವೆ. ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಖದೀಮರು ರೈತರ ಕೇಬಲ್ ಕದ್ದು ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸರು ಖದೀಮರ ಪತ್ತೆ ಮಾಡುವ ಕೆಲಸ ಮಾಡಬೇಕು. ನಾವು ದುಡಿದ ತಿನ್ನುವ ಜನರು. ಸಾವಿರಾರು ರೂ ಮೌಲ್ಯದ ವಸ್ತುಗಳನ್ನ ಕದ್ದು ಹೋದರೆ ನಾವು ಹೇಗೆ ಬದುಕುವುದು’’ ಎಂಬುವುದು ರೈತ ನಶೀರ್ ಖಾನ್​​ರ ನೋವಿನ ಮಾತು.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಒಟ್ಟಿನಲ್ಲಿ ಮಳೆರಾಯನ ಅವಕೃಪೆ ನಡುವೆ ಈಗ ರೈತರು ಇನ್ನೊಂದು ಸಂಕಷ್ಟವನ್ನ ಅನುಭವಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನ ಪತ್ತೆ ಮಾಡಿ, ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ – Kannada News | Karnataka Former CM Siddaramaiah Gives Reasons for Retirement from Electoral Politics

ಬೆಂಗಳೂರು, (ಜುಲೈ 26): 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಹಿರಂಗವಾಗಿಯೇ ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ‌.ಆರ್.ಪೇಟೆಯಲ್ಲಿ‌ ನಡೆದಿದ್ದ K.R.ಪೇಟೆ ಕೃಷ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿರುವ ವೇಳೆ ಚುನಾವನಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ಕಾಂಗ್ರೆಸ್​​​​ನಲ್ಲಿ ಸಂಚಲನ ಮೂಡಿಸಿದೆ. ಇದೀಗ ಸಿದ್ದರಾಮಯ್ಯನವರು ಚುನಾವಣಾ ರಾಜಕೀಯ ನಿವೃತ್ತಿಯಾಗಿರುವುದ್ಯಾಕೆ ಎನ್ನುವುದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಮೂರು ಕಾರಣ ಬಿಚ್ಚಿಟ್ಟಿದ್ದಾರೆ.

ಸ್ಪರ್ಧೆ ಮಾಡಿದ್ರೆ ಜನರೇ ಗೆಲ್ಲಿಸಿಕೊಂಡು ಬರುತ್ತಿದ್ದರು

” ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ.
ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂದುಕೊಂಡಿದ್ದೇನೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ: 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಮಾಜಿ ಸಿಎಂ

ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿಲ್ಲ

ಈಗ ನನಗೆ 79 ವರ್ಷ. ನಮ್ಮ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಇದೆ. ಆಗ ನನಗೆ 81-82 ವರ್ಷವಾಗಿರುತ್ತದೆ. ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. 2028ರ ವೇಳೆಗೆ ನನಗೆ 82 ವರ್ಷವಾಗಿರುತ್ತದೆ. ಆಗ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತದೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ಸೋಲು – ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ ಎಂದು ಹೇಳಿದ್ದಾರೆ.

ರಾಜಕಾರಣ ಸಾಕಷ್ಟು ಕಲುಷಿತವಾಗಿದೆ

ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಕಂಡಿದ್ದಾರೆ, ಪ್ರೀತಿಯಿಂದ ಸಲಹಿದ್ದಾರೆ. ಈ ಋಣಭಾರ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನ ಸಹ ಜನಸೇವೆಗೆ ಮುಡಿಪಾಗಿರುತ್ತದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:13 pm, Sun, 26 July 26

Source link

IND vs ZIM: ವೈಭವ್ ತೋಳ್ಬಲಕ್ಕೆ 102 ಮೀ. ದೂರ ಹೋಗಿ ಬಿದ್ದ ಚೆಂಡು; ವಿಡಿಯೋ – Kannada News | Vaibhav Sooryavanshi’s Explosive 81: India Dominates Zimbabwe 3rd T20 with 102m Six

ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 81 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ವೈಭವ್ 9 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಬಾರಿಸಿದರು. ಈ 4 ಸಿಕ್ಸರ್​ನಲ್ಲಿ ಒಂದು ಸಿಕ್ಸರ್ ಬರೋಬ್ಬರಿ 102 ಮೀಟರ್ ದೂರ ಹೋಗಿ ಬಿದ್ದಿತು. ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಓವರ್​ನಲ್ಲಿ ವೈಭವ್ ಈ ಬೃಹತ್ ಸಿಕ್ಸರ್ ಬಾರಿಸಿದರು. ಮೊದಲ ಪಂದ್ಯದಲ್ಲೂ ವೈಭವ್ 99 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇನ್ನು ಈ ಪಂದ್ಯದಲ್ಲಿ ವೈಭವ್ ಶತಕ ವಂಚಿತರಾದರೂ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

Source link

ಪವನ್ ಕಲ್ಯಾಣ್ ಬಳಿಕ ಈಗ ರಾಮ್ ಚರಣ್​ಗೂ ಶಸ್ತ್ರಚಿಕಿತ್ಸೆ – Kannada News | Ram Charan to under go minor surgery for his hand injury

ಇತ್ತೀಚೆಗಷ್ಟೆ ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರಿಗೆ ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಪವನ್ ಕಲ್ಯಾಣ್ ಅವರಿಗೆ ಭುಜದ ಹಾಗೂ ತೋಳಿನ ಭಾಗದ ಮಾಂಸಖಂಡಗಳಲ್ಲಿ ಗಾಯಗಳು ಹಾಗೂ ಹರಿತ ಉಂಟಾಗಿತ್ತು. ತೋಳು ಹಾಗೂ ಭುಜದಲ್ಲಿ ಪದೇ ಪದೇ ನೋವುಗಳು ಕಾಣಿಸಿಕೊಳ್ಳುತ್ತಿದ್ದ ಕಾರಣ ಕೊನೆಗೆ ಇತ್ತೀಚೆಗಷ್ಟೆ ನಟ ಪವನ್ ಕಲ್ಯಾಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇದೀಗ ಅವರದ್ದೇ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ಸಹ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ನಟ ರಾಮ್ ಚರಣ್ ಸಹ ‘ಪೆದ್ದಿ’ ಸಿನಿಮಾದ ಪ್ರಚಾರದ ಸಮಯದಲ್ಲಿ ಕೈಗೆ ಪ್ಲಾಸ್ಟರ್ ಹಾಕಿಕೊಂಡು ಓಡಾಡುತ್ತಿದ್ದಿದ್ದನ್ನು ಅಭಿಮಾನಿಗಳು ಗಮನಿಸಿದ್ದರು. ‘ಪೆದ್ದಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಿದ್ದು ರಾಮ್ ಚರಣ್ ಅವರಿಗೆ ಮಣಿಕಟ್ಟಿಗೆ ಗಾಯವಾಗಿತ್ತು. ಆದರೆ ಪ್ರಚಾರಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ರಾಮ್ ಚರಣ್ ವೈದ್ಯರ ಸಲಹೆಯಂತೆ ಕೇವಲ ಪ್ಲಾಸ್ಟರ್ ಧರಿಸಿಕೊಂಡು ಓಡಾಡುತ್ತಿದ್ದರು. ಆದರೆ ದಿನೇ-ದಿನೇ ನೋವು ಉಲ್ಬಣಗೊಳ್ಳುತ್ತಿರುವ ಕಾರಣ, ಹಾಗೂ ಕಸರತ್ತು ಮಾಡುವ ವೇಳೆ ಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡ ಬಿದ್ದು ನೋವು ತೀವ್ರವಾದ ಕಾರಣಕ್ಕೆ ಇದೀಗ ಭುಜದ ಶಸ್ತ್ರ ಚಿಕಿತ್ಸೆಗೆ ರಾಮ್ ಚರಣ್ ಒಳಗಾಗುತ್ತಿದ್ದಾರೆ.

‘ಪೆದ್ದಿ’ ಸಿನಿಮಾದ ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ರಾಮ್ ಚರಣ್ ಅವರ ಮಣಿಕಟ್ಟಿಗೆ ಗಾಯವಾಗಿತ್ತು. ಆಗಲೇ ಅವರು ಕೆಲ ಸಮಯ ಚಿತ್ರೀಕರಣದಿಂದ ವಿರಾಮ ಪಡೆದು ಚಿಕಿತ್ಸೆ ಪಡೆದಿದ್ದರು. ಬಳಿಕ ಮಣಿಕಟ್ಟಿಗೆ ಆರ್ಥೋ ಪ್ಲಾಸ್ಟರ್ ಅನ್ನು ಧರಿಸಿ ಓಡಾಡುತ್ತಿದ್ದರು. ಆದರೆ ಇತ್ತೀಚೆಗಿನ ಸ್ಕ್ಯಾನಿಂಗ್​​ ಗಮನಿಸಿದ ವೈದ್ಯರು, ಮಣಿಕಟ್ಟಿಗೆ ಮೈನರ್ ಶಸ್ತ್ರಚಿಕಿತ್ಸೆ ಮಾಡಿಸುವ ಸಲಹೆಯನ್ನು ನೀಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು

ಇದೇ ಕಾರಣಕ್ಕೆ ರಾಮ್ ಚರಣ್ ಅವರು, ಮೂಳೆ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಯಲ್ಲಿ ಶೀಘ್ರವೇ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸುರೇಕಾ, ಉಪಾಸನಾ ಮತ್ತು ಕುಟುಂಬದ ಇತ್ತೀಚಿನ ಇತರ ಸದಸ್ಯರು ಶಸ್ತ್ರಚಿಕಿತ್ಸೆಯ ಪೂರ್ತಿ ಅವಧಿಯಲ್ಲಿ ಅವರೊಂದಿಗೆ ಇರಲು ಮತ್ತು ಮಾನಸಿಕ ಧೈರ್ಯ ತುಂಬಲು ಕೊಯಮತ್ತೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರಸಿದ್ಧ ಮೂಳೆ ತಜ್ಞ ಡಾ ರಾಜಶೇಖರ್ ಅವರ ನೇತೃತ್ವದಲ್ಲಿ, ಅತ್ಯಂತ ನುರಿತ ತಜ್ಞ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದೆ.

ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ಸುಕುಮಾರ್ ಅವರೊಟ್ಟಿಗೆ ಇರಲಿದೆ. ಸುಕುಮಾರ್ ಈಗಾಗಲೇ ಚಿತ್ರಕತೆ ರೆಡಿ ಮಾಡಿಟ್ಟುಕೊಂಡಿದ್ದು ಶೀಘ್ರವೇ ಪ್ರೀ ಪ್ರೊಡಕ್ಷನ್ ಶುರು ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನೀಟ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ: ಯುವತಿ ವಿರುದ್ಧ FIR – Kannada News | Fir against young woman in bengaluru Who provocative poster display During neet protest

ಬೆಂಗಳೂರು, (ಜುಲೈ 26): 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ (Umar Khalid) ಮತ್ತು ಶಾರ್ಜೀಲ್ ಇಮಾಮ್ ಪರ ಪೋಸ್ಟರ್‌ ಪ್ರದರ್ಶಿಸಿದ್ದ ಯುವತಿ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ. ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಗೆ (Upparpet Police Station) ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ. ʻಗಲಭೆ ಉದ್ದೇಶದಿಂದ ಪ್ರಚೋದನೆʼ ನೀಡುವ ಆರೋಪದ ಮೇಲೆ ಕೇಸ್‌ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಏನಿದು ವಿವಾದ?

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ (ಜು.24) ಯುವತಿಯೊಬ್ಬಳು ಹಿಡಿದಿದ್ದ ಪೋಸ್ಟರ್‌ ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಗೆ ಬಂದಿದ್ದ ಆಕೆ ಗಲಭೆ ಪ್ರಕರಣದ ಆರೋಪಿಗಳಾದ ಉಮರ್‌ ಖಾಲಿದ್‌ ಹಾಗೂ ಶಾರ್ಜೀಲ್ ಇಮಾಮ್ ಪರವಾಗಿ ಘೋಷಣೆಗಳಿರುವ ಪೋಸ್ಟರ್‌ಗಳನ್ನ ಪ್ರದರ್ಶಿಸಿದ್ದಳು. ಅಷ್ಟೇ ಅಲ್ಲದೇ ʻUkhad Le BLR Policeʼ ಎಂಬ ಬರಹವನ್ನು ಪೋಸ್ಟರ್‌ನಲ್ಲಿ ಪ್ರದರ್ಶಿಸಿ, ಬೆಂಗಳೂರು ಪೊಲೀಸರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಳು.

ಇದನ್ನೂ ಓದಿ: Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

ಈ ಪೋಸ್ಟರ್‌ಗಳು ಅಲ್ಲಿದ್ದ ಪೊಲೀಸರ ಗಮನ ಸೆಳೆದು, ಪರಿಸ್ಥಿತಿ ಉದ್ವಿಗ್ನವಾಗದಂತೆ ಪೊಲೀಸರು ತಕ್ಷಣವೇ ಪೋಸ್ಟರ್‌ಗಳನ್ನ ವಶಪಡಿಸಿಕೊಂಡಿದ್ದರು. ಇದೇ ವೇಳೆ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್‌ ತೆಗದುಕೊಂಡು, ಪ್ರತಿಭಟನಾ ಸ್ಥಳದಿಂದ ಕಳುಹಿಸಿದ್ದರು. ಇದೀಗ ಈ ಸಂಬಂಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆ್ಯಂಬುಲೆನ್ಸ್​ನ್ನೇ ಡ್ರಗ್ಸ್​ ಪೂರೈಕೆ ಅಡ್ಡೆ ಮಾಡಿಕೊಂಡಿದ್ದ ಆರೋಪಿ: ಜಲೀಲ್ ಬಾಬಾ ಕರಾಳ ಮುಖವಾಡ ಬಯಲಾಗಿದ್ದೇಗೆ? – Kannada News | Ambulance Driver’s Drug Smuggling Racket Busted; Police Uncover Illegal Operation

ಮಂಗಳೂರು, ಜುಲೈ 26: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಮಾಜ ಸೇವಕ ಹಾಗೂ ಆಪದ್ಬಾಂಧವ ಎಂದೇ ಗುರುತಿಸಿಕೊಂಡಿದ್ದ ಆ್ಯಂಬುಲೆನ್ಸ್‌ ಚಾಲಕ ಜಲೀಲ್ ಆಲಿಯಾಸ್ ಜಲೀಲ್ ಬಾಬಾ ಎಂಬಾತನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಸಮಾಜ ಸೇವೆಯ ನೆಪದಲ್ಲಿ ಈತ ಆ್ಯಂಬುಲೆನ್ಸ್‌ ಬಳಸಿ ಭಾರೀ ಪ್ರಮಾಣದ ಡ್ರಗ್ಸ್ (drug) ಪೂರೈಕೆ ಮಾಡುತ್ತಿದ್ದ ಸ್ಪೋಟಕ ಸಂಗತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆಪದ್ಬಾಂಧವನ ಮತ್ತೊಂದು ಮುಖವಾಡ ಬಯಲು

ಜಲೀಲ್ ಅಲಿಯಾಸ್ ಜಲೀಲ್ ಬಾಬಾ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜನರಿಗೆ ಈತನ ಮುಖ ಚಿರಪರಿಚಿತ. ಇಡೀ ತಾಲೂಕಿನಲ್ಲಿ ಎಲ್ಲೇ ಅಪಘಾತವಾಗಲೀ, ಯಾವುದೇ ಅನಾಹುತವಾಗಲೀ ಈ ಜಲೀಲ್ ಬಾಬಾ ಆ ಜಾಗಕ್ಕೆ ತನ್ನ ಆ್ಯಂಬುಲೆನ್ಸ್‌ ಸಮೇತ ಎಂಟ್ರಿ ಕೊಡುತ್ತಿದ್ದ. ಇದೇ ಕಾರಣಕ್ಕೆ ಜನ ಈತನನ್ನ‌ ಆಪದ್ಬಾಂಧವ ಅಂತಾನೇ ಕರೆಯುತ್ತಿದ್ದರು. ಆದರೆ ಸದ್ಯ ಈತನ ಮತ್ತೊಂದು ಮುಖವಾಡ ಬಯಲಾಗಿದೆ. ಸಮಾಜ ಸೇವೆಯ ಹೆಸರಿನಲ್ಲಿ ಈತ‌ ನಡೆಸುತ್ತಿದ್ದ ಭಾರೀ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ.

ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ: ಅಡಿಂಜೆಯಲ್ಲಿ ಪ್ರಿಂಟಿಂಗ್ ಮೆಷಿನ್ ಜಪ್ತಿ

ಸಮಾಜ ಸೇವೆಯ ಹೆಸರಿನಲ್ಲಿ ಆ್ಯಂಬುಲೆನ್ಸ್‌ ಓಡಿಸುತ್ತಿದ್ದ ಜಲೀಲ್ ಡ್ರಗ್ಸ್ ಪೂರೈಕೆಗೆ ಅದನ್ನೇ ಬಳಸುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಮಂಗಳೂರು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 5 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಬೆಳ್ತಂಗಡಿಯ ಆ್ಯಂಬುಲೆನ್ಸ್‌ ಚಾಲಕ ಜಲೀಲ್ ಬಾಬಾನ ಪಾತ್ರ ಪತ್ತೆಯಾಗಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾದೆ.

ಜಲೀಲ್ ಬಾಬಾ ಸಿಕ್ಕಿಬಿದ್ದಿದ್ದು ಹೇಗೆ?

ಅಸಲಿಗೆ ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ದೆಹಲಿಯಿಂದ ಡ್ರಗ್ಸ್ ಬರುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಸುಮಾರು 5 ಕೋಟಿ ರೂ ಮೌಲ್ಯದ 5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಬೆಳ್ತಂಗಡಿ ಮೂಲದ ಮಹಮ್ಮದ್ ಅಲ್ಫಾಜ್ ಹಾಗೂ ಮಹಮ್ಮದ್ ಮುಸ್ತಾಫಾ ಎಂಬುವವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ; ಆರೋಪಿ ಬಂಧನ

ಬಂಧಿತರ ವಿಚಾರಣೆ ವೇಳೆ ಬೆಳ್ತಂಗಡಿಯ ಜಲೀಲ್ ಬಾಬಾ ಎಂಬ ಸ್ಥಳೀಯ ಡ್ರಗ್ಸ್​ ಪೆಡ್ಲರ್‌ಗೆ ಎಂಡಿಎಂಎ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಜಲೀಲ್ ತನ್ನ ಆ್ಯಂಬುಲೆನ್ಸ್​ನ್ನೇ ಡ್ರಗ್ಸ್​ ಸಾಗಣೆ ಹಾಗೂ ಪೂರೈಕೆಗೆ ಬಳಸುತ್ತಿದ್ದ. ವೈದ್ಯರು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ತಲೆಮರೆಸಿಕೊಂಡಿರುವ ಜಲೀಲ್ ಬಾಬಾ

ಈ ಸಂಬಂಧ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಲೀಲ್ ಬಾಬಾ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಆತ ತನ್ನ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನ ರಚಿಸಿ ಪೊಲೀಸರು ಶೋಧ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:31 pm, Sun, 26 July 26

Source link

Exit mobile version