ಚಂದಾಪುರದಲ್ಲಿ ಅಗ್ನಿ ದುರಂತ: ಏಕಾಏಕಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು – Kannada News | Anekal Bus Fire: Four Private Buses Gutted in Chandapura Parking Lot Inferno

ಬಸ್​ಗಳು ಬೆಂಕಿಗಾಹುತಿImage Credit source: tv9 kannada

ಆನೇಕಲ್, ಜುಲೈ 26: ಬೆಂಗಳೂರು (Bangaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಳೆ ಚಂದಾಪುರ ಬಳಿಯ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಖಾಸಗಿ ಬಸ್‌ಗಳು ಏಕಾಏಕಿ ಬೆಂಕಿಗಾಹುತಿಯಾದ (bus fire) ಘಟನೆ ನಡೆದಿದೆ. ಮೊದಲು ಒಂದು ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಒಂದರ ನಂತರ ಮೊತ್ತೊಂದರಂತೆ ನಾಲ್ಕು ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಪಾರ್ಕಿಂಗ್ ಲಾಟ್​ನಲ್ಲಿ ನಿಲ್ಲಿಸಿದ್ದ 4 ಬಸ್​ಗಳು ಏಕಾಏಕಿ ಹೊತ್ತಿ ಉರಿದಿವೆ. ಮೊದಲು ಒಂದು ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದಲ್ಲಿದ್ದ ಇತರ ಬಸ್‌ಗಳಿಗೂ ಹರಡಿದೆ. ಪರಿಣಾಮ ನಾಲ್ಕೂ ಬಸ್‌ಗಳು ಧಗಧಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿವೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾದಲ್ಲೂ ಕರೆಂಟ್ ಇರಲ್ವಾ? ಇಲ್ಲಿದೆ ವಿವರ!

ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸದ್ಯಕ್ಕೆ ಈ ಬಸ್‌ಗಳ ಮಾಲೀಕರ ವಿವರಗಳು ಲಭ್ಯವಾಗಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಕೂಡ ತಿಳಿದುಬಂದಿಲ್ಲ.

ಕಿಡಿಗೇಡಿಗಳಿಂದ ಗುಡಿಸಲಿಗೆ ಬೆಂಕಿ: ವೃದ್ಧೆ ಪ್ರಾಣಾಪಾಯದಿಂದ ಪಾರು

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಕಾಲೋನಿ ಗೇಟ್ ಸಮೀಪ ಕಿಡಿಗೇಡಿಗಳು ವೃದ್ಧೆಯೊಬ್ಬರ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಇತ್ತೀಚೆಗೆ ನಡೆದಿದೆ. 75 ವರ್ಷದ ಕದಿರಮ್ಮ ಎಂಬ ವೃದ್ಧೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಗುಡಿಸಲಿಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದ್ದು, ಪೀಠೋಪಕರಣ, ಟಿವಿ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದವು.

ಇದನ್ನೂ ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?

ಇನ್ನು ಅದೃಷ್ಟವಶಾತ್​ ಘಟನೆ ವೇಳೆ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀನಿವಾಸಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಂಕಷ್ಟದಲ್ಲಿರುವ ವೃದ್ಧೆಗೆ ನೆರವು ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Shani Vakri 2026: ಜು. 27ರಿಂದ ಮೀನ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ; ಈ 5 ರಾಶಿಗಳು ಜಾಗರೂಕರಾಗಿರಿ! – Kannada News | Shani Vakri 2026: Saturn Retrograde Impact and Remedies for 5 Zodiac Signs

ಮೀನ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆImage Credit source: Getty Images

ಜುಲೈ 27 ರಂದು, ನ್ಯಾಯದಾತ ಹಾಗೂ ಶಿಸ್ತಿನ ದೇವತೆಯಾದ ಶನಿಯು ಮೀನ ರಾಶಿಯಲ್ಲಿ ಹಿಮ್ಮುಖವಾಗಿ (Vakra) ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಕ್ರಿಯೆ, ಜವಾಬ್ದಾರಿ, ತಾಳ್ಮೆ ಮತ್ತು ನ್ಯಾಯದ ಸಂಕೇತವಾಗಿದ್ದು, ಈ ಹಿಮ್ಮುಖ ಚಲನೆಯು ಆತುರಪಡುವ ಬದಲು ನಮ್ಮ ನ್ಯೂನತೆಗಳನ್ನು ತಿದ್ದಿಕೊಳ್ಳಲು ಮತ್ತು ದೀರ್ಘಕಾಲೀನ ಗುರಿಗಳನ್ನು ಮೌಲ್ಯಮಾಪನ ಮಾಡಲು ನಮಗೆ ದೊರೆತ ನಿರ್ಣಾಯಕ ಸಮಯವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಮೇಷ, ಸಿಂಹ, ಕನ್ಯಾ, ಧನು ಮತ್ತು ಮೀನ ರಾಶಿಯವರು ಸ್ವಲ್ಪ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದ್ದು, ಆಯಾ ರಾಶಿಗಳ ಮೇಲಿನ ಪ್ರಭಾವ ಹಾಗೂ ಸರಳ ಪರಿಹಾರಗಳು ಇಲ್ಲಿವೆ.

ಮೇಷ ರಾಶಿ:

ಮೇಷ ರಾಶಿಯವರ ಹನ್ನೆರಡನೇ ಮನೆಯಲ್ಲಿ ಶನಿಯು ಹಿಮ್ಮುಖವಾಗುತ್ತಿದ್ದು, ಈ ಅವಧಿಯಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಅನಿರೀಕ್ಷಿತ ವೆಚ್ಚಗಳು, ವಿದೇಶಾಂಗ ವ್ಯವಹಾರಗಳು ಮತ್ತು ಗುಪ್ತ ಜವಾಬ್ದಾರಿಗಳು ನಿಮ್ಮ ಗಮನ ಸೆಳೆಯಬಹುದು. ಬಜೆಟ್ ಅನ್ನು ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ನಿಮ್ಮ ಆರೋಗ್ಯದ ಮೇಲೂ ವಿಶೇಷ ಕಾಳಜಿ ವಹಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ವಿದೇಶಿ ಸಂಬಂಧಿತ ಕೆಲಸಗಳಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಎಂಟನೇ ಮನೆಯಲ್ಲಿ ಶನಿ ವಕ್ರಿಯಾಗಲಿದ್ದು, ಇದು ಸಂಯೋಜಿತ ಹಣಕಾಸು, ತೆರಿಗೆಗಳು, ಹೂಡಿಕೆಗಳು ಮತ್ತು ಆಸ್ತಿ ಸಂಬಂಧಿತ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸುತ್ತದೆ. ಯಾವುದೇ ರೀತಿಯ ಆರ್ಥಿಕ ಅಪಾಯಗಳು ಅಥವಾ ದೊಡ್ಡ ಮೊತ್ತದ ಹೂಡಿಕೆಗಳಿಂದ ದೂರವಿರಿ. ಯಾವುದೇ ಒಪ್ಪಂದ ಅಥವಾ ದಾಖಲೆಗಳಿಗೆ ಸಹಿ ಹಾಕುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಿ. ಬುದ್ಧಿವಂತಿಕೆಯಿಂದ ವರ್ತಿಸುವುದರಿಂದ ದೊಡ್ಡ ನಷ್ಟಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಕನ್ಯಾ ರಾಶಿ:

ಕನ್ಯಾ ರಾಶಿಯವರ ಏಳನೇ ಮನೆಯಲ್ಲಿ ಶನಿಯು ಹಿಮ್ಮುಖವಾಗುತ್ತಿರುವುದರಿಂದ, ಇದು ನಿಮ್ಮ ಪಾಲುದಾರಿಕೆ ಮತ್ತು ನಿಕಟ ಸಂಬಂಧಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಸಮಯವಾಗಿದೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ತಪ್ಪುಗ್ರಹಿಕೆಗಳು ಉಂಟಾಗದಂತೆ ಎಚ್ಚರವಿಸಿ. ಸಂಗಾತಿ ಅಥವಾ ವ್ಯಾಪಾರ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಿದರೆ ಅವುಗಳನ್ನು ಶಾಂತಿ ಮತ್ತು ಪ್ರೀತಿಯಿಂದ ಮಾತ್ರ ಪರಿಹರಿಸಿ. ಹೊಸ ಒಪ್ಪಂದಗಳಿಗೆ ಕಾಲಿಡುವ ಮುನ್ನ ನಿಯಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಧನು ರಾಶಿ:

ಧನು ರಾಶಿಯವರ ನಾಲ್ಕನೇ ಮನೆಯ ಮೇಲೆ ಶನಿಯ ಪ್ರಭಾವವಿರುವುದರಿಂದ, ಮನೆ ಮತ್ತು ಕುಟುಂಬದ ಕಡೆಗೆ ನಿಮ್ಮ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗಲಿವೆ. ರಿಯಲ್ ಎಸ್ಟೇಟ್ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಸ್ವಲ್ಪ ನಿಧಾನಗತಿ ಕಂಡುಬರಬಹುದು. ಯಾವುದೇ ಭಾವನಾತ್ಮಕ ಅಥವಾ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಕುಟುಂಬದೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ಹೆಚ್ಚಿನ ಪ್ರಯತ್ನ ಬೇಕು. ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.

ಮೀನ ರಾಶಿ:

ಮೀನ ರಾಶಿಯವರ ಮೊದಲ ಮನೆಯಲ್ಲೇ ಶನಿ ವಕ್ರಿಯಾಗುತ್ತಿರುವುದರಿಂದ ಇದು ನಿಮಗೆ ಗಮನಾರ್ಹ ಬದಲಾವಣೆಯ ಕಾಲವಾಗಿದೆ. ನಿಮ್ಮ ಪ್ರಗತಿ ಸ್ವಲ್ಪ ನಿಧಾನವಾದಂತೆನಿಸಿದರೂ, ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದು ಸಂಪೂರ್ಣ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕಾದ ಸಮಯ. ನಿಮ್ಮ ದೀರ್ಘಕಾಲೀನ ಗುರಿಗಳಿಗೆ ಸಮರ್ಪಿತರಾಗಿರಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಮೂಲಕ ನಿಮ್ಮ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ. ಶಿಸ್ತುಬದ್ಧ ದಿನಚರಿಯನ್ನು ಅನುಸರಿಸಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಕೊನೆಯ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs Zimbabwe 3rd T20: Shreyas Iyer’s Team Aims for Clean Sweep; Playing XI, Toss and Live Updates

ಮೂರು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈಗ, ಭಾರತ ತಂಡವು ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಆತಿಥೇಯರನ್ನು ಕ್ಲೀನ್ ಸ್ವೀಪ್ ಮಾಡುವತ್ತ ಗಮನ ಹರಿಸಿದೆ. ಈ ಪಂದ್ಯವು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಸರಣಿಯನ್ನು ಅಬ್ಬರದಿಂದ ಆರಂಭಿಸಿತು. ಎರಡನೇ ಪಂದ್ಯದಲ್ಲಿಯೂ ತನ್ನ ಅಬ್ಬರ ಮುಂದುವರೆಸಿದ ಟೀಂ ಇಂಡಿಯಾ ಆತಿಥೇಯರನ್ನು 90 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಇದೀಗ ಮೂರನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆಲ್‌ರೌಂಡರ್ ಶಿವಂ ದುಬೆ ಮತ್ತು ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಪ್ರಿನ್ಸ್ ಯಾದವ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು, ಅಶೋಕ್ ಶರ್ಮಾ ಮತ್ತು ಸೂರ್ಯಾಂಶ್ ಶೆಡ್ಗೆ ಅವರನ್ನು ತಂಡದಲ್ಲಿ ಆಡಿಸಲಾಗುತ್ತಿದೆ.

ಉಭಯ ತಂಡಗಳು

ಜಿಂಬಾಬ್ವೆಯ ಆಡುವ 11: ಬ್ರಿಯಾನ್ ಬೆನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮುರಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ.

ಭಾರತದ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ರವಿ ಬಿಷ್ಣೋಯ್, ಅಶೋಕ್ ಶರ್ಮಾ, ಯಶ್ ಠಾಕೂರ್, ಮಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Sun, 26 July 26

Source link

Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು? – Kannada News | Bagalkot Car Blast: SP Rules Out Explosives, Points to Technical Fault in Mahindra XUV300

ಬಾಗಲಕೋಟೆ, ಜುಲೈ 26: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ, ಕಾರು ಸ್ಫೋಟದಲ್ಲಿ ಯಾವುದೇ ಸ್ಫೋಟಕ ವಸ್ತುಗಳ ಬಳಕೆಯ ಕುರುಹುಗಳು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಪ್ಪರಗಿಯ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರ ಕಾರು ನಿನ್ನೆ ಸಂಜೆ 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿತ್ತು. ರಾತ್ರಿ 10:45ರ ಸುಮಾರಿಗೆ ಕಾರು ಸ್ಫೋಟಗೊಂಡಿದೆ. ಘಟನೆಯ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಒಸಿಒ (Scene of Crime) ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿ.ಸಿ.ಟಿ.ವಿ. ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಕಾರು ನಿಲ್ಲಿಸಿದ ನಂತರ ಯಾರೂ ಅದರ ಸಮೀಪ ಸುಳಿದಿಲ್ಲ ಎಂದು ತಿಳಿದುಬಂದಿದೆ. ಪ್ರಸ್ತುತ ತಾಂತ್ರಿಕ ದೋಷದಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಎಸ್​ಪಿ ಸಿದ್ಧಾರ್ಥ್ ಗೋಯಲ್ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zimbabwe vs India 3rd T20, Live Score: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ – Kannada News | Zimbabwe vs India 3rd T20, Live Cricket Score IND vs ZIM Full Scorecard Match Updates from Harare in Kannada

LIVE Cricket Score & Updates

  • 26 Jul 2026 04:07 PM (IST)

    IND vs ZIM 3rd T20 Live: ಟಾಸ್ ಗೆದ್ದ ಟೀಂ ಇಂಡಿಯಾ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ಹರಾರೆಯಲ್ಲಿ ನಡೆಯುತ್ತಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟಿ20 ಸರಣಿಯನ್ನು ಗೆದ್ದ ನಂತರ, ಭಾರತ ತಂಡ ಜಿಂಬಾಬ್ವೆಯನ್ನು ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.

Published On – Jul 26,2026 4:05 PM

Source link

Swapna Shastra: ಹೊಸ ಮನೆಯ ಬಗ್ಗೆ ಪದೇ ಪದೇ ಕನಸು ಬೀಳುತ್ತಿದ್ದರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವ ಆಸಕ್ತಿದಾಯಕ ಸಂಗತಿಗಳಿವು – Kannada News | New House Dream Meaning: Unveiling Future Changes and Opportunities

ಕನಸುಗಳು ನಮ್ಮ ಜೀವನದ ಸಾಮಾನ್ಯ ಭಾಗವಾಗಿದ್ದು, ಕೆಲವೊಮ್ಮೆ ನಾವು ದಿನವಿಡೀ ಯೋಚಿಸದ ವಿಷಯಗಳ ಬಗ್ಗೆಯೂ ಕನಸು ಕಾಣುತ್ತೇವೆ. ಸ್ವಪ್ನ ಶಾಸ್ತ್ರ ಅಥವಾ ಕನಸಿನ ವಿಜ್ಞಾನವು ಕೆಲವು ನಿರ್ದಿಷ್ಟ ಕನಸುಗಳನ್ನು ವಿಶೇಷ ಚಿಹ್ನೆಗಳು ಮತ್ತು ನಮ್ಮ ಜೀವನದ ಬದಲಾವಣೆಗಳೊಂದಿಗೆ ಸಂಯೋಜಿಸುತ್ತದೆ. ಹೊಸ ಮನೆಯ ಬಗ್ಗೆ ಕನಸು ಕಾಣುವುದು ಹೆಚ್ಚಾಗಿ ಜೀವನದ ಬದಲಾವಣೆ, ಹೊಸ ಆರಂಭ ಮತ್ತು ಹೊಸ ಅವಕಾಶಗಳೊಂದಿಗೆ ಸಂಬಂಧಿಸಿದೆ. ಆದಾಗ್ಯೂ, ಕನಸಿನ ನಿಜವಾದ ಅರ್ಥವು ಮನೆಯ ನೋಟ ಮತ್ತು ಆ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಅವಲಂಬಿಸಿರುತ್ತದೆ.

ಕನಸಿನಲ್ಲಿ ಹೊಸ ಮನೆಯನ್ನು ನೋಡುವುದು:

ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಹೊಸ ಮನೆಯನ್ನು ನೋಡುವುದು ನಿಮ್ಮ ಜೀವನದಲ್ಲಿ ಸಂಭವಿಸಲಿರುವ ಕೆಲವು ಹೊಸ ಬದಲಾವಣೆಯ ಸಂಕೇತವಾಗಿದೆ. ಈ ಬದಲಾವಣೆಯು ನಿಮ್ಮ ಉದ್ಯೋಗ, ವ್ಯವಹಾರ, ಕುಟುಂಬ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿರಬಹುದು. ನಿಮ್ಮ ಕನಸಿನಲ್ಲಿ ಹೊಸ ಮನೆಯನ್ನು ನೋಡುವುದರಿಂದ ನಿಮಗೆ ಸಂತೋಷ ಮತ್ತು ನಿರಾಳತೆ ಸಿಕ್ಕಿದ್ದರೆ, ಅದನ್ನು ಸಕಾರಾತ್ಮಕ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಭವಿಷ್ಯದಲ್ಲಿ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು ಅಥವಾ ಜೀವನದಲ್ಲಿ ಮುಂದುವರಿಯಲು ಹೊಸ ಮಾರ್ಗವು ತೆರೆದುಕೊಳ್ಳಬಹುದು ಎಂದು ಸೂಚಿಸುತ್ತದೆ.

ಕನಸಿನಲ್ಲಿ ಹೊಸ ಮನೆ ಖರೀದಿಸುವುದು:

ನೀವು ಹೊಸ ಮನೆ ಖರೀದಿಸುತ್ತಿರುವಂತೆ ಕನಸು ಕಂಡರೆ, ಅದು ಸುಧಾರಿತ ಆರ್ಥಿಕ ಯೋಗಕ್ಷೇಮ ಮತ್ತು ಜೀವನದ ಸ್ಥಿರತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಈ ಕನಸು ಹೊಸ ಯೋಜನೆಯನ್ನು ಕೈಗೊಳ್ಳುವ ಅಥವಾ ನಿಮ್ಮ ದೀರ್ಘಕಾಲದ ಕನಸನ್ನು ನನಸಾಗಿಸುವ ಆಳವಾದ ಬಯಕೆಯನ್ನು ಸೂಚಿಸುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಅಂತಹ ಕನಸು ಒಬ್ಬರ ಜೀವನದಲ್ಲಿ ಪ್ರಗತಿ ಮತ್ತು ಭವಿಷ್ಯದ ಹೊಸ ಜವಾಬ್ದಾರಿಗಳನ್ನು ಎತ್ತಿ ತೋರಿಸುತ್ತದೆ.

ಕನಸಿನಲ್ಲಿ ಹೊಸ ಮನೆಗೆ ಪ್ರವೇಶಿಸುವುದು:

ನೀವು ಹೊಸ ಮನೆಗೆ ಪ್ರವೇಶಿಸುವ (ಗೃಹಪ್ರವೇಶ) ಕನಸು ಕಂಡರೆ, ಅದನ್ನು ಒಂದು ಸುಂದರವಾದ ಹೊಸ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ನಿಮ್ಮ ಜೀವನದಲ್ಲಿ ತೀರಾ ಹೊಸ ಅಧ್ಯಾಯವು ಪ್ರಾರಂಭವಾಗಲಿದೆ ಎಂದು ಸೂಚಿಸಬಹುದು. ಉದ್ಯೋಗ ಬದಲಾವಣೆ ಮಾಡಿಕೊಳ್ಳುವವರಿಗೆ, ಹೊಸ ಉದ್ಯಮವನ್ನು ಪ್ರಾರಂಭಿಸುವವರಿಗೆ ಅಥವಾ ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಎದುರಿಸುತ್ತಿರುವವರಿಗೆ ಈ ಕನಸು ವಿಶೇಷವಾಗಿ ಮುಖ್ಯವಾಗಿದೆ.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಕನಸಿನಲ್ಲಿ ಸುಂದರವಾದ ಮತ್ತು ಸ್ವಚ್ಛವಾದ ಮನೆಯನ್ನು ನೋಡುವುದು:

ನೀವು ಅತ್ಯಂತ ಸುಂದರವಾದ ಹಾಗೂ ಸ್ವಚ್ಛವಾದ ಹೊಸ ಮನೆಯ ಕನಸು ಕಂಡರೆ, ಅದನ್ನು ಅತ್ಯಂತ ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಅಂತಹ ಕನಸು ನಿಮ್ಮ ಜೀವನದಲ್ಲಿ ಅಪಾರ ಸಂತೋಷ, ಶಾಂತಿ, ಸಕಾರಾತ್ಮಕ ಬದಲಾವಣೆ ಮತ್ತು ಉತ್ತಮ ಅವಕಾಶಗಳ ಆಗಮನವನ್ನು ಸೂಚಿಸುತ್ತದೆ. ಈ ಕನಸು ಆಂತರಿಕ ಮಾನಸಿಕ ತೃಪ್ತಿ ಮತ್ತು ಭವಿಷ್ಯದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಸಹ ಸಂಕೇತಿಸುತ್ತದೆ.

ಕನಸಿನಲ್ಲಿ ಅಪೂರ್ಣ ಅಥವಾ ನಿರ್ಮಾಣ ಹಂತದಲ್ಲಿರುವ ಮನೆಯನ್ನು ನೋಡುವುದು:

ಹೊಸ ಮನೆ ಕಟ್ಟಲಾಗುತ್ತಿದೆ ಅಥವಾ ಮನೆ ಅಪೂರ್ಣವಾಗಿದೆ ಎಂದು ನೀವು ಕನಸು ಕಂಡರೆ, ಅದು ನಿಮ್ಮ ಯಾವುದೋ ಅಪೂರ್ಣ ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿರಬಹುದು. ಬಹುಶಃ ನೀವು ಜೀವನದಲ್ಲಿ ಸಾಧಿಸಲು ಇನ್ನೂ ಹೆಚ್ಚಿನ ಪ್ರಯತ್ನದ ಅಗತ್ಯವಿರುವ ಗುರಿಯನ್ನು ಹೊಂದಿರಬಹುದು. ಈ ಕನಸು ನೀವು ತಾಳ್ಮೆಯಿಂದಿರಬೇಕು ಮತ್ತು ನಿಮ್ಮ ಅಪೂರ್ಣ ಕೆಲಸವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಎಚ್ಚರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಇಒರಂಥ ಸಿಇಒರನ್ನೇ ದಾಸರನ್ನಾಗಿ ಮಾಡಿಕೊಳ್ಳುತ್ತೆ ರೀಲ್ಸ್… ಬೇಸ್ತುಬಿದ್ದ ಸ್ಯಾಮ್ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ ಕಥೆ – Kannada News | OpenAI CEO Sam Altman deletes TikTok from his mobile, interesting reason behind this

ಯುವಕನೊಬ್ಬ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಚಿತ್ರImage Credit source: Annette Riedl/picture alliance via Getty Images

ಪ್ರಪಂಚದಲ್ಲಿ ಅತ್ಯಂತ ವ್ಯಸನಕಾರಕ (Addiction) ಯಾವುದು ಎಂದರೆ ಡ್ರಗ್ಸ್ ಹೌದು. ಆದರೆ, ಡ್ರಗ್ಸ್ ಅನ್ನೂ ಮೀರಿಸುವಂತಹ ಚಟಕಾರಕವಾಗಿದೆ ರೀಲ್ಸ್. ಬಸ್ಸಲ್ಲಿ, ರೈಲಲ್ಲಿ ಕೂತವರ ಕೈಯಲ್ಲಿ ಮೊಬೈಲು ಸ್ಕ್ರೋಲಿಂಗ್ ಕಾಣುತ್ತಿರುತ್ತದೆ. ಧಾರವಾಹಿಗಳಂತೆ ರೀಲ್ಸ್ ಅನ್ನು ಒಮ್ಮೆ ನೋಡಲು ಮೊದಲಿಟ್ಟರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲೂ ಜನರು ರೀಲ್ಸ್ ನೋಡುವುದುಂಟು. ರೀಲ್ಸ್​ಗೆ ದಾಸರಾಗದವರು ಯಾರಾದರೂ ಉಂಟೆ? ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮನ್ (Sam Altman) ಅವರೇ ತಾನು ಈ ರೀಲ್ಸ್​ಗೆ ಅಡಿಕ್ಟ್ ಆಗಿದ್ದ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಸ್ಯಾಮ್ ಎಷ್ಟು ಅಡಿಕ್ಟ್ ಆದರೆಂದರೆ, ಅದರಿಂದ ಹೊರಬರಲು ಟಿಕ್​ಟಾಕ್ (TikTok) ಆ್ಯಪನ್ನೇ ಡಿಲೀಟ್ ಮಾಡಬೇಕಾಯಿತಂತೆ. ಇತ್ತೀಚೆಗೆ ಒಂದು ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ, ಅವರು ಇದನ್ನು ತಿಳಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಅವರ ಅನುಭವ.

ಟಿಕ್​ಟಾಕ್ ಬಳಸುವವರಿಗೆ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಟಿಕ್​ಟಾಕ್ ಸ್ಕ್ರೋಲ್ ಮಾಡತೊಡಗಿದ ಓಪನ್​ಎಐ ಸಿಇಒ ಅವರು ಒಂದು ರೀತಿಯಲ್ಲಿ ಆ ಟಿಕ್​ಟಾಕ್​ಗೆ ಡ್ರಗ್ಸ್​ನಂತೆ ದಾಸರಾಗಿ ಹೋಗಿದ್ದರಂತೆ.

ಸೋರಾ (Sora) ಆ್ಯಪ್ ನಿರ್ಮಾಣದ ಹಿನ್ನೆಲೆ

OpenAI ನ ಎಐ ವಿಡಿಯೋ ಜನರೇಶನ್ ಆ್ಯಪ್ ‘ಸೋರಾ’ (Sora) ನಿರ್ಮಿಸುವಾಗ, ಶಾರ್ಟ್-ವಿಡಿಯೋ ಆ್ಯಪ್‌ಗಳ ಬಳಕೆದಾರ ಅನುಭವ (User Experience) ಹೇಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಲ್ಟ್‌ಮನ್ ಟಿಕ್‌ಟಾಕ್ ಬಳಸಲು ಪ್ರಾರಂಭಿಸಿದ್ದರು. ಆರಂಭದಲ್ಲಿ ರಾತ್ರಿ ಮಲಗುವ ಮುನ್ನ ಕೇವಲ 10 ನಿಮಿಷ ಬಳಸುವ ಯೋಜನೆ ಹೊಂದಿದ್ದ ಆಲ್ಟ್‌ಮನ್, ಕ್ರಮೇಣ ಅದಕ್ಕೆ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಲಾರಂಭಿಸಿದರು. ಒಂದು ಶನಿವಾರ ಮಧ್ಯಾಹ್ನ ಸತತ 3 ಗಂಟೆಗಳ ಕಾಲ ಟಿಕ್‌ಟಾಕ್ ಸ್ಕ್ರಾಲ್ ಮಾಡುತ್ತಾ ಕುಳಿತಾಗ ತಮಗೆ ಇದರ ತೀವ್ರ ಅಡಿಕ್ಷನ್ ಅರಿವಾಯಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಫೋನ್​ನಿಂದ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ್ರು ಸ್ಯಾಮ್

“ನನಗೆ ಇದು ಮೋಜು ನೀಡುತ್ತಿತ್ತಾದರೂ, ನನ್ನ ಆರೋಗ್ಯ ಮತ್ತು ಸಮಯಕ್ಕೆ ಕೆಟ್ಟದ್ದು ಎಂಬುದು ಸ್ಪಷ್ಟವಾಗಿತ್ತು. ಮೊಬೈಲ್ ಬಳಕೆಯ ಉದ್ದೇಶವೇ ಇದಲ್ಲ” ಎಂದು ಭಾವಿಸಿದ ಅವರು ಟಿಕ್‌ಟಾಕ್ ಆ್ಯಪ್ ಅನ್ನು ಫೋನ್‌ನಿಂದ ಸಂಪೂರ್ಣವಾಗಿ ಡಿಲೀಟ್ ಮಾಡಿದರು.

ಆಲ್ಟ್‌ಮನ್ ತಮ್ಮ ಮೊಬೈಲ್‌ನ ಮೆಸೇಜಿಂಗ್ ಆ್ಯಪ್‌ಗಳು ಸೇರಿದಂತೆ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ (Off) ಮಾಡಿದ್ದು, ಇದು ತಮ್ಮ ಜೀವನದ ಶ್ರೇಷ್ಠ ನಿರ್ಧಾರ ಎಂದು ಬಣ್ಣಿಸಿದ್ದಾರೆ.

ಸಮಯ ಹಾಳು ಮಾಡುವ ಆ್ಯಪ್ ಬೇಕಿಲ್ಲ

‘ನಾನ್ಯಾವತ್ತೂ ಟಿಕ್​ಟಾಕ್ ಬಳಸಿದವನಲ್ಲ. ಜನರು ನನಗೆ ಟಿಕ್​ಟಾಕ್ ವಿಡಿಯೋಗಳನ್ನು ಕಳುಹಿಸುತ್ತಿದ್ದರಾದರೂ ಅದರ ಸಹವಾಸಕ್ಕೆ ಹೋಗಿರಲಿಲ್ಲ. ಜನರ ಸಮಯವನ್ನು ಸೆಳೆದುಕೊಳ್ಳುವಂತಹದ್ದನು ಕಟ್ಟುವುದು ನನಗೆ ಬೇಕಾಗಿರಲಿಲ್ಲ’ ಎನ್ನುತ್ತಾರೆ ಸ್ಯಾಮ್ ಆಲ್ಟ್​ಮನ್.

ಇದನ್ನೂ ಓದಿ: mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

ಸೋರಾ ಆ್ಯಪ್ ಅನ್ನು ಟಿಕ್​ಟಾಕ್, ಇನ್ಸ್​ಟಾಗೆ ಪ್ರತಿಸ್ಪರ್ಧಿ ಎಂದು ಭಾವಿಸಲಾಗಿತ್ತು. ಆದರೆ, ಕಳೆದ ವರ್ಷ ಓಪನ್​ಎಐ ತನ್ನ ಸೋರಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿತ್ತು. ಓಪನ್​ಎಐ ತನ್ನ ಹಲವಾರು ಪ್ರಾಜೆಕ್ಟ್​ಗಳಲ್ಲಿ ಆದ್ಯತೆಯ ಕೆಲವನ್ನಷ್ಟೇ ಆಯ್ದುಕೊಂಡು, ಉಳಿದವನ್ನು ಕೈಬಿಟ್ಟಿದೆ. ಹೀಗೆ ಕೈಬಿಟ್ಟ ಪ್​ರಾಜೆಕ್ಟ್​ಗಳಲ್ಲಿ ಸೋರಾ ಕೂಡ ಒಂದು.

ತಂತ್ರಜ್ಞಾನ ಲೋಕದ ಪ್ರಮುಖ ನಾಯಕರಾದ ಸ್ಯಾಮ್ ಆಲ್ಟ್‌ಮನ್, ಸೋಶಿಯಲ್ ಮೀಡಿಯಾ ಅಡಿಕ್ಷನ್ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ತಮ್ಮ ಉದಾಹರಣೆಯನ್ನೇ ನೀಡಿದ್ದು, ಬಳಕೆದಾರರು ತಮ್ಮ ಸಮಯ ಮತ್ತು ಡಿಜಿಟಲ್ ಹೆಲ್ತ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಪರೋಕ್ಷವಾಗಿ ಸಂದೇಶ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:50 pm, Sun, 26 July 26

Source link

ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ವಿಡಿಯೋ ವೈರಲ್ ಆಗ್ತಿದ್ದಂತೆಯೇ ವ್ಯಕ್ತಿ ಪತ್ತೆಗೆ ಬಲೆ ಬೀಸಿದ ಪೊಲೀಸ್ರು – Kannada News | Inappropriate Behavior with Young Girl on BMTC Bus: Police Hunt for Man After Viral Video

ಬೆಂಗಳೂರು, ಜುಲೈ 26: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ (Inappropriate Behavior) ವರ್ತಿಸಿದ್ದಾನೆ. ಕಿರುಕುಳ ನೀಡಿದ ಆಸಾಮಿಗೆ ಯುವತಿ ಮತ್ತು ಚಾಲಕ ಥಳಿಸಿದ್ದರು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲೇನಿದೆ?

ಜುಲೈ 24ರ ಮಧ್ಯಾಹ್ನ ಸುಮಾರು 12:42ರ ಸಮಯದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ  ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ

ಪರಿಶೀಲನೆಯ ವೇಳೆ ಈ ಕೃತ್ಯವು ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ರಿಂಗ್ ರಸ್ತೆಯ ಮಾನ್ಯತಾ ಟೆಕ್ ಪಾರ್ಕ್ ಬಸ್ ನಿಲ್ದಾಣದ ಹತ್ತಿರ ನಡೆದಿರುವುದು ತಿಳಿದುಬಂದಿದೆ. ಸಾರ್ವಜನಿಕ ಸ್ಥಳವಾದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಅಪರಿಚಿತ ವ್ಯಕ್ತಿಯ ಬಗ್ಗೆ ಎಲ್ಲೆಡೆ ಮಾಹಿತಿ ಸಂಗ್ರಹಿಸಲು ಯತ್ನಿಸಲಾಗಿದೆಯಾದರೂ, ಸದ್ಯಕ್ಕೆ ಆತನ ಸುಳಿವು ಲಭ್ಯವಾಗಿಲ್ಲ. ಹೀಗಾಗಿ, ಮಹಿಳೆಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.

ನಡೆದಿದ್ದೇನು?

ಜುಲೈ 24ರಂದು ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ತೆರಳುತ್ತಿದ್ದ ಬಸ್​​​​​​​ಗೆ ಹತ್ತಿದ ವ್ಯಕ್ತಿಯೊಬ್ಬ, ಮಹಿಳೆಯರಿಗೆ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿರುವ ಆರೋಪ ಕೇಳಿ ಬಂದಿತ್ತು. ಆತನ ವರ್ತನೆ ಮಿತಿಮೀರುತ್ತಿದ್ದಂತೆ ಯುವತಿ ಕೂಡಲೇ ಬಸ್ ಚಾಲಕನ ಗಮನಕ್ಕೆ ತಂದಿದ್ದಾಳೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೊರಳಪಟ್ಟಿ ಹಿಡಿದೆಳೆದು ಕಪಾಳಕ್ಕೆ ಬಾರಿಸಿದ್ದಳು. ಅರೆಬೆತ್ತಲಾದ ಆತನಿಗೆ ಬಸ್ ಚಾಲಕ ಕೂಡ ಗೂಸಾ ನೀಡಿದ್ದ. ಬಳಿಕ ಬಸ್​​​​ನಿಂದ ಆತ ಎಸ್ಕೇಪ್​ ಆಗಿದ್ದ. ಇನ್ನು ಈ ದೃಶ್ಯವನ್ನ ಯುವತಿ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ: ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್​​

ಮತ್ತೊಂದು ವಿಷಯ ಏನಂದರೆ ಆರೋಪಿ ವ್ಯಕ್ತಿ ಇದೇ ರೀತಿ ಹಲವು ಸಲ ಕಾಟ ಕೊಟ್ಟಿದ್ದಾನೆ. ಮಹಿಳೆಯರ ಸೀಟ್​​ನಲ್ಲಿ ಕುಳಿತುಕೊಳ್ಳುವುದು, ಮುಂದಿನ ಬಾಗಿಲಿನಿಂದ ಬಸ್​ ಹತ್ತೋದು, ರಶ್​ ಇದ್ದಾಗ ಅಸಭ್ಯವಾಗಿ ವರ್ತಿಸ್ತಿದ್ನಂತೆ. ಆದರೆ ಈ ಸಲ ಮಹಿಳೆ ಧೈರ್ಯದಿಂದ ಆತನಿಗೆ ತಕ್ಕ ಪಾಠ ಕಲಿಸಿದ್ದಳು.

ವರದಿ: ನಟರಾಜ್ ಟಿವಿ9 ಬೆಂಗಳೂರು​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

50 ದಿನಗಳಲ್ಲಿ 8 ಆಟಗಾರರು ಟೀಂ ಇಂಡಿಯಾ ಪರ ಪಾದಾರ್ಪಣೆ; ಎಲ್ಲರ ಪ್ರದರ್ಶನ ಹೇಗಿದೆ? – Kannada News | India’s 8 Cricket Debutants: Performance Review of New Stars in 50 Days

ಕಳೆದ 50 ದಿನಗಳಲ್ಲಿ ಟೀಂ ಇಂಡಿಯಾ ಪರ ಮೂರು ಮಾದರಿಗಳಲ್ಲಿ ಒಟ್ಟು 8 ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ ಒಬ್ಬರು, ಏಕದಿನದಲ್ಲಿ ಮೂವರು ಮತ್ತು ಟಿ20ಕ್ರಿಕೆಟ್​ನಲ್ಲಿ ಐವರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಪ್ರಸ್ತುತ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಇಬ್ಬರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಹಾಗಿದ್ದರೆ ಈ 8 ಆಟಗಾರರ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ(PC-BCCI)..

Source link

ISRO VSSC Internship 2026: ಇಸ್ರೋದಿಂದ ಇಂಟರ್ನ್‌ಶಿಪ್‌ಗೆ ಅರ್ಜಿ ಆಹ್ವಾನ; ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಸುವರ್ಣಾವಕಾಶ! – Kannada News | ISRO VSSC Internship 2026: Kickstart Your Space Science Career in India Now

ಬಾಹ್ಯಾಕಾಶ ವಿಜ್ಞಾನ ಮತ್ತು ಹೊಸ ತಂತ್ರಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಕನಸು ಕಾಣುವ ವಿದ್ಯಾರ್ಥಿಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ಇಸ್ರೋ ಇಂಟರ್ನ್‌ಶಿಪ್ 2026 ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲು ಮತ್ತು ನವೀಕೃತ ಬಾಹ್ಯಾಕಾಶ ಸಂಶೋಧನಾ ತಂತ್ರಗಳನ್ನು ಕಲಿಯಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಎಂಜಿನಿಯರಿಂಗ್, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇದು ಸಕಾಲವಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ISRO VSSC ಇಂಟರ್ನ್‌ಶಿಪ್ ಗೆ ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕರು ಮಾತ್ರ ಅರ್ಹರಾಗಿರುತ್ತಾರೆ. ಅರ್ಜಿದಾರರು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ನಿಯಮಿತ BE, BTech, ME, MTech, BSc, MSc (ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ) ಅಥವಾ PhD ಕಾರ್ಯಕ್ರಮವನ್ನು ಅನುಸರಿಸುತ್ತಿರಬೇಕು. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಯಲ್ಲಿ ಕನಿಷ್ಠ 60 ಪ್ರತಿಶತ ಅಂಕಗಳನ್ನು ಅಥವಾ 10-ಪಾಯಿಂಟ್ ಸ್ಕೇಲ್‌ನಲ್ಲಿ 6.32 CGPA ಹೊಂದಿರಬೇಕು. ಇದರೊಂದಿಗೆ, ಬಿಇ ಮತ್ತು ಬಿಟೆಕ್ ವಿದ್ಯಾರ್ಥಿಗಳು ತಮ್ಮ ಆರನೇ ಸೆಮಿಸ್ಟರ್ ಅನ್ನು ಪೂರ್ಣಗೊಳಿಸಿರಬೇಕು ಮತ್ತು ಎಂಇ, ಎಂಟೆಕ್ ಮತ್ತು ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಮೊದಲ ಸೆಮಿಸ್ಟರ್ ಅನ್ನು ಪೂರ್ಣಗೊಳಿಸಿರಬೇಕು. ಫೆಬ್ರವರಿ 14, 2025 ರ ನಂತರ ತಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಈ ಇಂಟರ್ನ್‌ಶಿಪ್ ಅವಕಾಶವು ಪ್ರತಿ ವಿದ್ಯಾರ್ಥಿಗೆ ಅವರ ಪದವಿ ಅವಧಿಯಲ್ಲಿ ಒಮ್ಮೆ ಮಾತ್ರ ಲಭ್ಯವಿರುತ್ತದೆ.

ಇಂಟರ್ನ್‌ಶಿಪ್ ಮತ್ತು ಆಯ್ಕೆ ಪ್ರಕ್ರಿಯೆ:

ಈ ಇಂಟರ್ನ್‌ಶಿಪ್ ಅವಧಿಯು 21 ರಿಂದ 45 ದಿನಗಳವರೆಗೆ ಇರಲಿದ್ದು, ಇದು ಸಂಪೂರ್ಣವಾಗಿ ತರಬೇತಿ ಆಧಾರಿತ ಕಾರ್ಯಕ್ರಮವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯಾವುದೇ ಸ್ಟೈಫಂಡ್ ಅಥವಾ ಆರ್ಥಿಕ ಸಹಾಯ ದೊರೆಯುವುದಿಲ್ಲ. ಇಂಟರ್ನ್‌ಶಿಪ್ ಸಮಯದಲ್ಲಿ, ವಿದ್ಯಾರ್ಥಿಗಳು ಇಸ್ರೋ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ಅಭ್ಯರ್ಥಿಗಳ ಆಯ್ಕೆಯು ಅವರ ಶೈಕ್ಷಣಿಕ ಅರ್ಹತೆಗಳು ಮತ್ತು ಲಭ್ಯವಿರುವ ಸೀಟುಗಳನ್ನು ಆಧರಿಸಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಅಧಿಕೃತ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಪ್ರಕ್ರಿಯು ಆಗಸ್ಟ್ 14 ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಿ ಸೆಪ್ಟೆಂಬರ್ 14 ರ ರಾತ್ರಿ 11:59 ರವರೆಗೆ ಮುಂದುವರಿಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಇಂಟರ್ನ್‌ಶಿಪ್ ನವೆಂಬರ್ 1, 2026 ರಿಂದ ಜನವರಿ 31, 2027 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ VSSC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಂಕಪಟ್ಟಿಗಳು, ತಾಂತ್ರಿಕ ಕೌಶಲ್ಯಗಳು, ಯೋಜನೆಯ ವಿವರಗಳು ಮತ್ತು ಕಾಲೇಜು ಅನುಮತಿ ಪತ್ರವನ್ನು 5 MB ಗಾತ್ರದವರೆಗಿನ PDF ಫೈಲ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Exit mobile version