ಸಿಇಒರಂಥ ಸಿಇಒರನ್ನೇ ದಾಸರನ್ನಾಗಿ ಮಾಡಿಕೊಳ್ಳುತ್ತೆ ರೀಲ್ಸ್… ಬೇಸ್ತುಬಿದ್ದ ಸ್ಯಾಮ್ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ ಕಥೆ – Kannada News | OpenAI CEO Sam Altman deletes TikTok from his mobile, interesting reason behind this

ಯುವಕನೊಬ್ಬ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಚಿತ್ರImage Credit source: Annette Riedl/picture alliance via Getty Images

ಪ್ರಪಂಚದಲ್ಲಿ ಅತ್ಯಂತ ವ್ಯಸನಕಾರಕ (Addiction) ಯಾವುದು ಎಂದರೆ ಡ್ರಗ್ಸ್ ಹೌದು. ಆದರೆ, ಡ್ರಗ್ಸ್ ಅನ್ನೂ ಮೀರಿಸುವಂತಹ ಚಟಕಾರಕವಾಗಿದೆ ರೀಲ್ಸ್. ಬಸ್ಸಲ್ಲಿ, ರೈಲಲ್ಲಿ ಕೂತವರ ಕೈಯಲ್ಲಿ ಮೊಬೈಲು ಸ್ಕ್ರೋಲಿಂಗ್ ಕಾಣುತ್ತಿರುತ್ತದೆ. ಧಾರವಾಹಿಗಳಂತೆ ರೀಲ್ಸ್ ಅನ್ನು ಒಮ್ಮೆ ನೋಡಲು ಮೊದಲಿಟ್ಟರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲೂ ಜನರು ರೀಲ್ಸ್ ನೋಡುವುದುಂಟು. ರೀಲ್ಸ್​ಗೆ ದಾಸರಾಗದವರು ಯಾರಾದರೂ ಉಂಟೆ? ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮನ್ (Sam Altman) ಅವರೇ ತಾನು ಈ ರೀಲ್ಸ್​ಗೆ ಅಡಿಕ್ಟ್ ಆಗಿದ್ದ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಸ್ಯಾಮ್ ಎಷ್ಟು ಅಡಿಕ್ಟ್ ಆದರೆಂದರೆ, ಅದರಿಂದ ಹೊರಬರಲು ಟಿಕ್​ಟಾಕ್ (TikTok) ಆ್ಯಪನ್ನೇ ಡಿಲೀಟ್ ಮಾಡಬೇಕಾಯಿತಂತೆ. ಇತ್ತೀಚೆಗೆ ಒಂದು ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ, ಅವರು ಇದನ್ನು ತಿಳಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಅವರ ಅನುಭವ.

ಟಿಕ್​ಟಾಕ್ ಬಳಸುವವರಿಗೆ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಟಿಕ್​ಟಾಕ್ ಸ್ಕ್ರೋಲ್ ಮಾಡತೊಡಗಿದ ಓಪನ್​ಎಐ ಸಿಇಒ ಅವರು ಒಂದು ರೀತಿಯಲ್ಲಿ ಆ ಟಿಕ್​ಟಾಕ್​ಗೆ ಡ್ರಗ್ಸ್​ನಂತೆ ದಾಸರಾಗಿ ಹೋಗಿದ್ದರಂತೆ.

ಸೋರಾ (Sora) ಆ್ಯಪ್ ನಿರ್ಮಾಣದ ಹಿನ್ನೆಲೆ

OpenAI ನ ಎಐ ವಿಡಿಯೋ ಜನರೇಶನ್ ಆ್ಯಪ್ ‘ಸೋರಾ’ (Sora) ನಿರ್ಮಿಸುವಾಗ, ಶಾರ್ಟ್-ವಿಡಿಯೋ ಆ್ಯಪ್‌ಗಳ ಬಳಕೆದಾರ ಅನುಭವ (User Experience) ಹೇಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಲ್ಟ್‌ಮನ್ ಟಿಕ್‌ಟಾಕ್ ಬಳಸಲು ಪ್ರಾರಂಭಿಸಿದ್ದರು. ಆರಂಭದಲ್ಲಿ ರಾತ್ರಿ ಮಲಗುವ ಮುನ್ನ ಕೇವಲ 10 ನಿಮಿಷ ಬಳಸುವ ಯೋಜನೆ ಹೊಂದಿದ್ದ ಆಲ್ಟ್‌ಮನ್, ಕ್ರಮೇಣ ಅದಕ್ಕೆ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಲಾರಂಭಿಸಿದರು. ಒಂದು ಶನಿವಾರ ಮಧ್ಯಾಹ್ನ ಸತತ 3 ಗಂಟೆಗಳ ಕಾಲ ಟಿಕ್‌ಟಾಕ್ ಸ್ಕ್ರಾಲ್ ಮಾಡುತ್ತಾ ಕುಳಿತಾಗ ತಮಗೆ ಇದರ ತೀವ್ರ ಅಡಿಕ್ಷನ್ ಅರಿವಾಯಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಫೋನ್​ನಿಂದ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ್ರು ಸ್ಯಾಮ್

“ನನಗೆ ಇದು ಮೋಜು ನೀಡುತ್ತಿತ್ತಾದರೂ, ನನ್ನ ಆರೋಗ್ಯ ಮತ್ತು ಸಮಯಕ್ಕೆ ಕೆಟ್ಟದ್ದು ಎಂಬುದು ಸ್ಪಷ್ಟವಾಗಿತ್ತು. ಮೊಬೈಲ್ ಬಳಕೆಯ ಉದ್ದೇಶವೇ ಇದಲ್ಲ” ಎಂದು ಭಾವಿಸಿದ ಅವರು ಟಿಕ್‌ಟಾಕ್ ಆ್ಯಪ್ ಅನ್ನು ಫೋನ್‌ನಿಂದ ಸಂಪೂರ್ಣವಾಗಿ ಡಿಲೀಟ್ ಮಾಡಿದರು.

ಆಲ್ಟ್‌ಮನ್ ತಮ್ಮ ಮೊಬೈಲ್‌ನ ಮೆಸೇಜಿಂಗ್ ಆ್ಯಪ್‌ಗಳು ಸೇರಿದಂತೆ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ (Off) ಮಾಡಿದ್ದು, ಇದು ತಮ್ಮ ಜೀವನದ ಶ್ರೇಷ್ಠ ನಿರ್ಧಾರ ಎಂದು ಬಣ್ಣಿಸಿದ್ದಾರೆ.

ಸಮಯ ಹಾಳು ಮಾಡುವ ಆ್ಯಪ್ ಬೇಕಿಲ್ಲ

‘ನಾನ್ಯಾವತ್ತೂ ಟಿಕ್​ಟಾಕ್ ಬಳಸಿದವನಲ್ಲ. ಜನರು ನನಗೆ ಟಿಕ್​ಟಾಕ್ ವಿಡಿಯೋಗಳನ್ನು ಕಳುಹಿಸುತ್ತಿದ್ದರಾದರೂ ಅದರ ಸಹವಾಸಕ್ಕೆ ಹೋಗಿರಲಿಲ್ಲ. ಜನರ ಸಮಯವನ್ನು ಸೆಳೆದುಕೊಳ್ಳುವಂತಹದ್ದನು ಕಟ್ಟುವುದು ನನಗೆ ಬೇಕಾಗಿರಲಿಲ್ಲ’ ಎನ್ನುತ್ತಾರೆ ಸ್ಯಾಮ್ ಆಲ್ಟ್​ಮನ್.

ಇದನ್ನೂ ಓದಿ: mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

ಸೋರಾ ಆ್ಯಪ್ ಅನ್ನು ಟಿಕ್​ಟಾಕ್, ಇನ್ಸ್​ಟಾಗೆ ಪ್ರತಿಸ್ಪರ್ಧಿ ಎಂದು ಭಾವಿಸಲಾಗಿತ್ತು. ಆದರೆ, ಕಳೆದ ವರ್ಷ ಓಪನ್​ಎಐ ತನ್ನ ಸೋರಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿತ್ತು. ಓಪನ್​ಎಐ ತನ್ನ ಹಲವಾರು ಪ್ರಾಜೆಕ್ಟ್​ಗಳಲ್ಲಿ ಆದ್ಯತೆಯ ಕೆಲವನ್ನಷ್ಟೇ ಆಯ್ದುಕೊಂಡು, ಉಳಿದವನ್ನು ಕೈಬಿಟ್ಟಿದೆ. ಹೀಗೆ ಕೈಬಿಟ್ಟ ಪ್​ರಾಜೆಕ್ಟ್​ಗಳಲ್ಲಿ ಸೋರಾ ಕೂಡ ಒಂದು.

ತಂತ್ರಜ್ಞಾನ ಲೋಕದ ಪ್ರಮುಖ ನಾಯಕರಾದ ಸ್ಯಾಮ್ ಆಲ್ಟ್‌ಮನ್, ಸೋಶಿಯಲ್ ಮೀಡಿಯಾ ಅಡಿಕ್ಷನ್ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ತಮ್ಮ ಉದಾಹರಣೆಯನ್ನೇ ನೀಡಿದ್ದು, ಬಳಕೆದಾರರು ತಮ್ಮ ಸಮಯ ಮತ್ತು ಡಿಜಿಟಲ್ ಹೆಲ್ತ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಪರೋಕ್ಷವಾಗಿ ಸಂದೇಶ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:50 pm, Sun, 26 July 26

Source link

Leave a Reply

Your email address will not be published. Required fields are marked *