Headlines

ಗ್ರಾಹಕರ ಗಮನಕ್ಕೆ… ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲ್ಲ ವಡೆ, ಬಜ್ಜಿ, ಪಕೋಡ: ಸ್ನ್ಯಾಕ್ಸ್ ತಿಂಡಿಗೂ ಕೋಕ್

ಬೆಂಗಳೂರು, ಮಾ.11: ರಾಜಧಾನಿಯಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಹಾಹಾಕಾರ ಮಿತಿಮೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಅತಿ ಹೆಚ್ಚು ಗ್ಯಾಸ್ ವ್ಯಯವಾಗುವ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿಯನ್ ನಂತಹ ಸ್ನ್ಯಾಕ್ಸ್ ತಿಂಡಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕಡಿಮೆ ಗ್ಯಾಸ್ ಬಳಸಿ ಹೆಚ್ಚು ಜನರಿಗೆ ಉಣಬಡಿಸಬಹುದಾದ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ ನಂತಹ ರೈಸ್…

Read More

ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಮುಖಭಂಗ; ಸ್ಪೀಕರ್ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲು

ನವದೆಹಲಿ, ಮಾರ್ಚ್ 11: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಇಂದು ಸದನದಲ್ಲಿ ಧ್ವನಿ ಮತದಿಂದ ತಿರಸ್ಕರಿಸಲಾಯಿತು. ಹಲವಾರು ವಿರೋಧ ಪಕ್ಷದ ಸಂಸದರ ಬೆಂಬಲದೊಂದಿಗೆ ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಅವರು ಈ ನಿರ್ಣಯವನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದ ವೇಳೆ ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರು ಭಾರತದ ಪ್ರಜಾಪ್ರಭುತ್ವದ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ವೃತ್ತಿ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಉದ್ಯೋಗದ ನಿಮಿತ್ತ ಪ್ರಯಾಣದ ಯೋಗವಿದೆ. ನಿಮ್ಮ ಮಾತಿನ ಪ್ರಭಾವದಿಂದ ಅಧಿಕಾರಿ ವರ್ಗದವರ ಮನಸ್ಸು ಗೆಲ್ಲುವಿರಿ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿವೆ. ಇದಕ್ಕೆ ಪ್ರಭಾವಿಗಳ ಬೆಂಬಲ ನಿಮಗೆ ದೊರೆಯಲಿದೆ. ಸಂಗಾತಿಯ ಜೊತೆಗೂಡಿ ಭವಿಷ್ಯದ ಆರ್ಥಿಕ ಹೂಡಿಕೆಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ. ನಾಯಕತ್ವದ ಗುಣಕ್ಕೆ ಮನ್ನಣೆ ಸಿಗಲಿದೆ….

Read More

‘ಜೈಲರ್ 2’ ಬಿಡುಗಡೆಗೂ ಮುನ್ನವೇ 160 ಕೋಟಿ ರೂಪಾಯಿ ಒಟಿಟಿ ಡೀಲ್? – Kannada News | Rajinikanth Jailer 2 OTT rights sold to record price Amazon Prime Video

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಜೈಲರ್ 2’ (Jailer 2) ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯಲು ಶುರು ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ಮತ್ತು ರಜನಿಕಾಂತ್ (Rajinikanth) ಕಾಂಬಿನೇಷನ್‌ನ ಈ ಸಿನಿಮಾ ಬಿಗ್ ಬಜೆಟ್​ನಲ್ಲಿ ತಯಾರಾಗುತ್ತಿದೆ. ಚಿತ್ರಮಂದಿರಕ್ಕೆ ಬರುವ ಮೊದಲೇ ಈ ಸಿನಿಮಾ ಡಿಜಿಟಲ್ ಲೋಕದಲ್ಲಿ ಇತಿಹಾಸ ನಿರ್ಮಿಸಿದೆ. ವರದಿಗಳ ಪ್ರಕಾರ,…

Read More

ಸುರಕ್ಷತೆಗೆ ಮೊದಲ ಆದ್ಯತೆ: ಮುಂಬೈ ಹಳಿಗಳ ಮೇಲೆ ಓಡಲಿದೆ ಮೊದಲ ‘ಕ್ಲೋಸ್ಡ್ ಡೋರ್’ ನಾನ್-ಎಸಿ ರೈಲು – Kannada News | Mumbai’s First Non AC Sealed Door Local Train, What Makes It Stand Out

ಮುಂಬೈ, ಏಪ್ರಿಲ್ 14: ಮುಂಬೈನ ರೈಲು(Train) ಹಳಿಗಳ ಮೇಲೆ ಪ್ರತಿದಿನ ಲಕ್ಷಾಂತರ ಕನಸುಗಳು ಪ್ರಯಾಣಿಸುತ್ತವೆ. ಆದರೆ, ಆ ಕನಸುಗಳ ಜೊತೆಗೇ ಸಾವು ಕೂಡ ತೆರೆದ ಬಾಗಿಲುಗಳ ರೂಪದಲ್ಲಿ ಹೊಂಚು ಹಾಕುತ್ತಿರುತ್ತದೆ. 2025ರ ಜೂನ್‌ನಲ್ಲಿ ನಡೆದ ‘ಮುಂಬ್ರಾ ರೈಲು ಅಪಘಾತ’ ಇಡೀ ದೇಶವನ್ನು ನಡುಗಿಸಿತ್ತು. ಕಿಕ್ಕಿರಿದು ತುಂಬಿದ್ದ ರೈಲಿನ ತೆರೆದ ಬಾಗಿಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕರು ಪ್ರಾಣ ಕಳೆದುಕೊಂಡಾಗ, “ಪ್ರಗತಿಗಿಂತ ಪ್ರಯಾಣಿಕರ ಪ್ರಾಣ ಮುಖ್ಯ” ಎಂಬ ಕೂಗು ಕೇಳಿಬಂತು. ಇದೀಗ ಆ ಕೂಗಿಗೆ ಉತ್ತರ ಸಿಕ್ಕಿದೆ, ಭಾರತೀಯ ರೈಲ್ವೆಯ…

Read More

50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ತಮ್ಮ ಅಚಲವಾದ ಫಿಟ್ನೆಸ್ ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಅವರು ದಿನನಿತ್ಯದ ಯೋಗ, ಜಿಮ್ ವರ್ಕೌಟ್ ಮತ್ತು ಡಯೆಟ್ ಮಾಡುತ್ತಾರೆ. ‘ಆರೋಗ್ಯವಾಗಿರಿ, ಸಂತೋಷವಾಗಿರಿ’ ಎಂಬುದು ಅವರ ಧ್ಯೇಯವಾಕ್ಯ. ಅವರು ತಮ್ಮ ದೈನಂದಿನ ವ್ಯಾಯಾಮದ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸ್ನಾಯುಗಳ ಬಲವರ್ಧನೆಗೆ ಒತ್ತು ನೀಡುವ ಅತ್ಯಂತ ಕಠಿಣ ಹಾಗೂ ಸವಾಲಿನ ವ್ಯಾಯಾಮಗಳ ಫೋಟೋ ಮತ್ತು ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆ ಮೂಲಕ ಅಭಿಮಾನಿಗಳಿಗೂ ಸ್ಪೂರ್ತಿ ತುಂಬುತ್ತಾರೆ….

Read More

‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ – Kannada News | Sudha Murty Appeals: Bengaluru, Embrace Stray Dogs with Kindness, ABC

ಬೆಂಗಳೂರು, ಫೆ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇನ್ಫೋಸಿಸ್ ಫೌಂಡೇಶನ್‌ನ ಮಾರ್ಗದರ್ಶಕಿ ಸುಧಾ ಮೂರ್ತಿ (Sudha Murty) ಅವರು ಈ ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ನಗರದ ಜನತೆ ಬೀದಿ ನಾಯಿಗಳ ಬಗ್ಗೆ ತೋರುತ್ತಿರುವ ಅಸಡ್ಡೆಯನ್ನು ಬಿಟ್ಟು, ಮಾನವೀಯತೆಯಿಂದ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾ ಮೂರ್ತಿಯವರು, “ನನ್ನ ಮನೆಯ ಬಳಿಯೂ ಹಲವು ಬೀದಿ ನಾಯಿಗಳಿವೆ….

Read More

ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು? – Kannada News | Kj george Clarify about His resignation to Minister Post

ಬೆಂಗಳೂರು, (ಜನವರಿ 29): ಕರ್ನಾಟಕ ಕಾಂಗ್ರೆಸ್ (Karnataka Congress)​ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ವಾ? ಮೊದಲೇ ನಾಯಕತ್ವ ಬದಲಾವಣೆ ವಿಚಾರವಾಗಿ ಎದ್ದಿರುವ ಗೊಂದಲದ ಮಧ್ಯೆ ಸಿಎಂ ಆಪ್ತ ಸಚಿವ ಕೆ.ಜೆ.ಜಾರ್ಜ್ (kj george) ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಭಾರಿ ಸಂಚಲನ ಮೂಡಿಸಿದೆ. ಹೌದು… ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಇಂಥಾದ್ದೊಂದು ಅತಿದೊಡ್ಡ ಬೆಳವಣಿಗೆಯನ್ನ ಟಿವಿ9 ಇಂದು ಬ್ರೇಕ್ ಮಾಡಿದೆ. ಈ ವರದಿ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ ರಾಷ್ಟ್ರದಲ್ಲೂ ದೊಡ್ಡ ಸಂಚಲನ ಎಬ್ಬಿಸಿದೆ. ವಿಧಾನಸಭೆಯಲ್ಲೂ ಟಿವಿ9 ವರದಿ…

Read More