ಮದುವೆ ಬಳಿಕ ಪ್ರಧಾನಿ ಮೋದಿಯ ಭೇಟಿಯಾದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ: ಚಿತ್ರಗಳು
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ನಿನ್ನೆಯಷ್ಟೆ (ಫೆಬ್ರವರಿ 26) ರಾಜಸ್ಥಾನದ ಉದಯಪುರದಲ್ಲಿ ಐಶಾರಾಮಿ ಐಟಿಸಿ ರೆಸಾರ್ಟ್ನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ವಿವಾಹವಾದ ಮರುದಿವೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜಂಟಿಯಾಗಿ ದೆಹಲಿಗೆ ತೆರಳಿದ್ದು, ಅಮಿತ್ ಶಾ, ಪ್ರಧಾನಿ ನರೇಂದ್ರ ಇನ್ನೂ ಕೆಲವರನ್ನು ಭೇಟಿ ಆಗಿದ್ದಾರೆ. ರಶ್ಮಿಕಾ-ವಿಜಯ್ ಅವರ ಮದುವೆ ಮುಗಿದಿದೆ ಆದರೆ ಆರತಕ್ಷತೆ ಕಾರ್ಯಕ್ರಮ ಮಾರ್ಚ್ 04ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರನ್ನು ಖುದ್ದಾಗಿ ಆಹ್ವಾನಿಸುತ್ತಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ….