ತನ್ನ ಜೀವದ ಹಂಗು ತೊರೆದು ಕಿಟಕಿಯಿಂದ ಪಕ್ಕದ ಮನೆಯ ಜಗಳ ರೆಕಾರ್ಡ್​ ಮಾಡಿದ ವ್ಯಕ್ತಿ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಪಕ್ಕದ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ ಗೋಡೆಗಳ ಕಾರಣದಿಂದ ಜಗಳದ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ತನ್ನ ತಡೆಯಲಾಗದ ಕುತೂಹಲದಿಂದಾಗಿ, ಈ ವ್ಯಕ್ತಿ ತನ್ನ ಪ್ರಾಣದ ಹಂಗನ್ನು ತೊರೆದು ಬಹುಮಹಡಿ ಕಟ್ಟಡದ ಕಿಟಕಿಯಿಂದ ಹೊರಗೆ ನೇತಾಡಿದ್ದಾರೆ. ಅಪಾಯಕಾರಿ ರೀತಿಯಲ್ಲಿ ತೂಗಾಡುತ್ತಾ, ಪಕ್ಕದ ಮನೆಯ ಕಿಟಕಿಯ ಕಡೆಗೆ ಮೊಬೈಲ್ ಹಿಡಿದು ಜಗಳದ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಸ್ವಲ್ಪ ಆಯತಪ್ಪಿದರೂ ಪ್ರಾಣಕ್ಕೇ ಕುತ್ತು ಬರುತ್ತಿದ್ದ ಈ…

Read More

ಜನಪ್ರಿಯತೆಯಲ್ಲಿ ವಿಜಯ್, ಪ್ರಭಾಸ್​ ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ 20 ವರ್ಷದ ನಟಿ – Kannada News | Sara Arjun Tops IMDb Popularity: Beats Vijay, Prabhas with ‘Dhurandhar’ Success

ಭಾರತೀಯ ಸಿನಿಮಾ ರಂಗದಲ್ಲಿ ಸೂಪರ್‌ಸ್ಟಾರ್‌ಗಳೇ ಪ್ರಾಬಲ್ಯ ಹೊಂದಿರುತ್ತಾರೆ. ಆದರೆ ಈ ಬಾರಿ 20 ವರ್ಷದ ನಟಿಯೊಬ್ಬರು ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ನಟಿ, IMDbಯಲ್ಲಿ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಸಿನಿಮಾ ರಂಗದ ದಳಪತಿ ವಿಜಯ್ ಮತ್ತು ಪ್ರಭಾಸ್‌ರಂತಹ ದೊಡ್ಡ ನಟರನ್ನು ಮೀರಿಸಿದ್ದಾರೆ. ಈ ನಟಿ ಬೇರೆ ಯಾರೂ ಅಲ್ಲ, ‘ಧುರಂಧರ್’ ತಾರೆ ಸಾರಾ ಅರ್ಜುನ್. ‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ, ಅವರು…

Read More

SRH vs RR: ಶಹಬ್ಬಾಸ್ ಸೂರ್ಯವಂಶಿ; ಶತಕ ವಂಚಿತರಾದ್ರೂ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದ ವೈಭವ್

ವೈಭವ್ ಸೂರ್ಯವಂಶಿ (Vaibhav Sooryavanshi).. ತಾನು ಕ್ರೀಸ್​ನಲ್ಲಿ ಇರುವವರೆಗೂ ಎದುರಾಳಿಗಳ ಗುಂಡಿಗೆಯ ಬಡಿತ ಹೆಚ್ಚಿಸುವ ಹದಿನೈದೇ ವರ್ಷದ ಹಾಲ್ಗೆನ್ನೆಯ ಯುವಕ. ಬರೀ ಹೊಡಿಬಡಿ ಆಟವನ್ನೇ ಕೇಳುವ ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರನೆನಿಸಿಕೊಂಡಿರುವ ವೈಭವ್, ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲೂ ಅದೇ ಆಟವನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸನ್‌ರೈಸರ್ಸ್, ಪಂದ್ಯ ಆರಂಭಕ್ಕೂ ಮುನ್ನವೇ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ನಾನಾ ರಣತಂತ್ರವನ್ನು ಹೆಣೆದುಕೊಂಡು ಮೈದಾನಕ್ಕಿಳಿದಿತ್ತು….

Read More

‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌ – Kannada News | Dhurandhar actor Ranveer Singh responds after FWICE bans him over Don 3 exit

ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ಹಠಾತ್ ಹೊರನಡೆದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಸಿನಿಮಾ ನೌಕರರ ಒಕ್ಕೂಟ (FWICE) ಅಸಹಕಾರದ ಮೂಲಕ ಬ್ಯಾನ್ ಮಾಡಿದೆ. ಈ ವಿವಾದದ ಬೆನ್ನಲ್ಲೇ ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಕೊನೆಗೂ ಮೌನ ಮುರಿದಿದ್ದಾರೆ. ‘ಡಾನ್ 3’ ಚಿತ್ರದ ನಿರ್ದೇಶಕ ಫರ್ಹಾನ್ ಅಖ್ತರ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ರಣವೀರ್ ಸಿಂಗ್ ಅವರು ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ…

Read More

ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು

ಬೆಂಗಳೂರು, ಮಾರ್ಚ್​ 28: ವ್ಯಕ್ತಿ ಓರ್ವ ತನ್ನ ಪಾಡಿಗೆ ತಾನು ಚಹಾ ಕುಡಿಯುತ್ತಾ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ವೇಳೆ ಆಗಮಿಸಿದ ಮೂವರು ಕಿಡಿಗೇಡಿಗಳು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ (Kidnape). ಸ್ವಲ್ಪ ಹೊತ್ತಲ್ಲೇ ಆಟೋದಿಂದ ಇಳಿಸಿ ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್​​ನಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.​​ ನಡೆದಿದ್ದೇನು? ಶರತ್​​ ಕಿಡ್ನ್ಯಾಪ್​ ಆಗಿದ್ದ…

Read More

Coconut Trees: ಶಾಸ್ತ್ರೋಕ್ತ ವಿಧಿವಿಧಾನ ಅನುಸರಿಸದೇ ತೆಂಗಿನ ಮರವನ್ನು ಕಡಿಯಬಾರದು ಯಾಕೆ? ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Understanding the Spiritual Significance of Coconut Trees and Their Auspicious Felling

“ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ಪುರಾತನ ನುಡಿಯಂತೆ, ಮರಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿದೆ. ಹಿಂದಿನ ಕಾಲದಿಂದಲೂ ಮರಗಳು ಮನುಷ್ಯನಿಗೆ ನೆರಳು, ಆಹಾರ, ಹಣ್ಣು, ಆರೋಗ್ಯ ಮತ್ತು ಆಶ್ರಯವನ್ನು ಒದಗಿಸುತ್ತಾ ಬಂದಿವೆ. ಇಂತಹ ಪೂಜನೀಯ ವೃಕ್ಷಗಳಲ್ಲಿ ತೆಂಗಿನ ಮರಕ್ಕೆ ವಿಶೇಷ ಸ್ಥಾನವಿದೆ, ಇದನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ತೆಂಗಿನ ಮರವು ದೈವಾಂಶ, ದೈವ ಲಹರಿಗಳು ಮತ್ತು ಸಕಾರಾತ್ಮಕ ಶಕ್ತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಎಂದು ನಂಬಲಾಗುತ್ತದೆ. ಆದ್ದರಿಂದ ತೆಂಗಿನ ಮರದ ಮಹತ್ವ ಮತ್ತು…

Read More

RR vs GT, IPL 2026: ಬೌಲಿಂಗ್‌ನಲ್ಲಿ ಫ್ಲಾಪ್ ಆದ ಜೋಫ್ರಾ ಆರ್ಚರ್: ಸೋಲಿನ ಬಳಿಕ ನಾಯಕ ಯಶಸ್ವಿ ಜೈಸ್ವಾಲ್ ಏನು ಹೇಳಿದ್ರು – Kannada News | Jofra Archer flopped in bowling What did captain Yashasvi Jaiswal say after the defeat

ಬೆಂಗಳೂರು (ಮೇ. 10): ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಐಪಿಎಲ್ 2026ರಲ್ಲಿ ತನ್ನ ತವರಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ ಮೂರನೇ ಸೋಲನ್ನು ಕಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ 77 ರನ್‌ಗಳಿಂದ ಸೋತಿತು. ನಿಯಮಿತ ನಾಯಕ ರಿಯಾನ್ ಪರಾಗ್ ಗಾಯದ ಕಾರಣದಿಂದ ಹೊರಗುಳಿದ ಕಾರಣ, ಯಶಸ್ವಿ ಜೈಸ್ವಾಲ್ ಕ್ಯಾಪ್ಟನ್ ಜವಾಬ್ದಾರಿ ನಾಯಕತ್ವ ವಹಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 229 ರನ್‌ಗಳ ದೊಡ್ಡ ಮೊತ್ತ…

Read More

ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ – Kannada News | Meet Param: India’s Most Powerful Native Robot Dog

ಬೆಂಗಳೂರು, ಫೆ.20: ಬೆಂಗಳೂರು ಮೂಲದ ರೋಬೋಟಿಕ್ಸ್ ಸ್ಟಾರ್ಟ್-ಅಪ್ ‘ಜನರಲ್ ಅಟಾನಮಿ’ (General Autonomy) ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ರೋಬೋಟಿಕ್ ನಾಯಿ ‘ಪರಮ್’ (Param) ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ ರಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ. ಕಂಪನಿಯು ಪರಮ್ ಅನ್ನು “ಭಾರತದ ಅತ್ಯಂತ ಶಕ್ತಿಶಾಲಿ ಸ್ಥಳೀಯ ರೋಬೋಟ್ ನಾಯಿ” ಎಂದು ಬಣ್ಣಿಸಿದೆ. ‘ಪರಮ್’ ಕೇವಲ ಭಾರತದಲ್ಲಿ ಜೋಡಿಸಲಾದ ಯಂತ್ರವಲ್ಲ, ಬದಲಿಗೆ ಭಾರತೀಯ ಇಂಜಿನಿಯರ್‌ಗಳು ಮೊದಲಿನಿಂದಲೂ ವಿನ್ಯಾಸಗೊಳಿಸಿ ನಿರ್ಮಿಸಿರುವ ಸಂಪೂರ್ಣ ಸ್ವದೇಶಿ ರೋಬೋಟ್…

Read More

Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್! – Kannada News | Bengaluru Bird Flu Alert: H5N1 Virus outbreak in poultry farm of Hesaraghatta

ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಹಕ್ಕಿ ಜ್ವರದ (Bird Flu) ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ತಪಾಸಣೆಯ ವೇಳೆ ಕೋಳಿಗಳಲ್ಲಿ ಈ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಆಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ತಾಪಮಾನ…

Read More

ಕನ್ನಡ ವೆಬ್ ಸರಣಿ ‘ಜೆರಾಕ್ಸ್’ ವಿಶೇಷತೆಗಳೇನು? ತಂಡ ಹೇಳಿದ್ದು ಹೀಗೆ – Kannada News | Nagabhushan talks about Kannada web series xerox specialities

ಕನ್ನಡದಲ್ಲಿ ವೆಬ್ ಸರಣಿಗಳು (web series) ಬಹಳ ಕಡಿಮೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೆ ನಿರ್ಮಾಣಗೊಂಡು ಬಿಡುಗಡೆ ಆಗುತ್ತವೆ. ಈ ಹಿಂದೆ ‘ಅಯ್ಯನ ಮನೆ’ ವೆಬ್ ಸರಣಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ‘ಜೆರಾಕ್ಸ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ನಾಗಭೂಷಣ್, ಪಾಯಲ್ ಚೆಂಗಪ್ಪ ನಟನೆಯ ಈ ವೆಬ್ ಸರಣಿ ಗಮನ ಸೆಳೆದಿದ್ದು, ಈ ವೆಬ್ ಸರಣಿಯ ವಿಶೇಷತೆಗಳು ಏನೇನು ಎಂದು ಚಿತ್ರತಂಡ ವಿವರಿಸಿದೆ. ಅಂದಹಾಗೆ ಈ ವೆಬ್ ಸರಣಿಯನ್ನು ಡಾಲಿ ಧನಂಜಯ್…

Read More