Headlines

RR vs GT, IPL 2026: ಬೌಲಿಂಗ್‌ನಲ್ಲಿ ಫ್ಲಾಪ್ ಆದ ಜೋಫ್ರಾ ಆರ್ಚರ್: ಸೋಲಿನ ಬಳಿಕ ನಾಯಕ ಯಶಸ್ವಿ ಜೈಸ್ವಾಲ್ ಏನು ಹೇಳಿದ್ರು – Kannada News | Jofra Archer flopped in bowling What did captain Yashasvi Jaiswal say after the defeat

ಬೆಂಗಳೂರು (ಮೇ. 10): ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಐಪಿಎಲ್ 2026ರಲ್ಲಿ ತನ್ನ ತವರಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ ಮೂರನೇ ಸೋಲನ್ನು ಕಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ 77 ರನ್‌ಗಳಿಂದ ಸೋತಿತು. ನಿಯಮಿತ ನಾಯಕ ರಿಯಾನ್ ಪರಾಗ್ ಗಾಯದ ಕಾರಣದಿಂದ ಹೊರಗುಳಿದ ಕಾರಣ, ಯಶಸ್ವಿ ಜೈಸ್ವಾಲ್ ಕ್ಯಾಪ್ಟನ್ ಜವಾಬ್ದಾರಿ ನಾಯಕತ್ವ ವಹಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 229 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಇದನ್ನು ಬೆನ್ನತ್ತಿದ ರಾಜಸ್ಥಾನ ತಂಡ 152 ರನ್‌ಗಳಿಗೆ ಮಾತ್ರ ಸೀಮಿತವಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಆರ್ಚರ್ ಬಗ್ಗೆ ಜೈಸ್ವಾಲ್ ಸಮರ್ಥನೆ

ಈ ಪಂದ್ಯದಲ್ಲಿ ಜೋಫ್ರಾ ಆರ್ಚರ್ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಮಾಡಲಿಲ್ಲ. ತಮ್ಮ ಮೊದಲ ಓವರ್‌ನಲ್ಲೇ 11 ಎಸೆತಗಳನ್ನು ಎಸೆದು 18 ರನ್‌ಗಳನ್ನು ಬಿಟ್ಟುಕೊಟ್ಟರು. ತಮ್ಮ ಸ್ಪೆಲ್‌ನಲ್ಲಿ ಅವರು 3 ಓವರ್‌ಗಳಲ್ಲಿ 46 ರನ್‌ಗಳನ್ನು ನೀಡಿದರು. ಆದರೂ ನಾಯಕ ಜೈಸ್ವಾಲ್ ಅವರ ಪರ ನಿಂತು ಮಾತನಾಡಿದರು.

‘‘ಕ್ರಿಕೆಟ್‌ನಲ್ಲಿ ಎಲ್ಲ ದಿನವೂ ಒಂದೇ ರೀತಿಯ ಪ್ರದರ್ಶನ ಸಾಧ್ಯವಿಲ್ಲ. ಕೆಲ ದಿನಗಳು ನಮ್ಮದಾಗುತ್ತವೆ, ಕೆಲ ದಿನಗಳು ಹಾಗಾಗುವುದಿಲ್ಲ. ಆದರೆ ಆರ್ಚರ್ ಇತ್ತಿಚಿನ ಪಂದ್ಯಗಳಲ್ಲಿ ನಮ್ಮ ತಂಡಕ್ಕೆ ಉತ್ತಮವಾಗಿ ಸಹಕರಿಸಿದ್ದಾರೆ. ಅವರು ಮತ್ತೆ ಶೀಘ್ರದಲ್ಲೇ ಉತ್ತಮವಾಗಿ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ’’ ಎಂದು ಜೈಸ್ವಾಲ್ ಹೇಳಿದರು.

ಪವರ್‌ಪ್ಲೇನಲ್ಲಿ ಒತ್ತಡ

ಗುಜರಾತ್ ತಂಡದ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಪವರ್‌ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ಬೌಲರ್‌ಗಳ ಮೇಲೆ ಭಾರೀ ಒತ್ತಡ ಹೇರಿದರು. ಆರಂಭಿಕ ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

RR vs GT: ಗುಜರಾತ್ ಸಾಂಘಿಕ ಪ್ರದರ್ಶನಕ್ಕೆ ಮಣಿದ ರಾಜಸ್ಥಾನ

ಈ ಬಗ್ಗೆ ಜೈಸ್ವಾಲ್ ಮಾತನಾಡುತ್ತಾ, ‘‘ನಾವು ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ತುಂಬಾ ಚೆನ್ನಾಗಿ ಆಡಿದರು. ಬೌಂಡರಿಗಳನ್ನು ಹೇಗೆ ತಡೆಯಬೇಕು ಎಂಬುದರ ಬಗ್ಗೆ ನಾವು ಯೋಚಿಸಿದ್ದೇವೆ. ಆದರೆ ಅದು ಅವರಿಂದ ಒಳ್ಳೆಯ ಪ್ರದರ್ಶನವಾಗಿತ್ತು’’ ಎಂದರು.

ಮುಂದಿನ ಪಂದ್ಯಕ್ಕೆ ಗಮನ

‘‘ಈ ಪಂದ್ಯದಿಂದ ನಾವು ಕಲಿಯಬೇಕಾದುದನ್ನು ಗಮನಿಸುತ್ತೇವೆ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ನಾವು ಸಿದ್ಧರಾಗುತ್ತೇವೆ’’ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಗುಜರಾತ್ ದೊಡ್ಡ ಜಿಗಿತ

ಈ ಪಂದ್ಯಕ್ಕೂ ಮೊದಲು ಐದನೇ ಸ್ಥಾನದಲ್ಲಿ ಸಂಕಷ್ಟದಲ್ಲಿದ್ದ ಗುಜರಾತ್ ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಏತನ್ಮಧ್ಯೆ, ಇಲ್ಲಿಯವರೆಗೆ ಟೂರ್ನಿಯಲ್ಲಿ ಪ್ರಾಬಲ್ಯ ಹೊಂದಿದ್ದ ರಾಜಸ್ಥಾನ ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಜಿಟಿ 11 ಪಂದ್ಯಗಳಿಂದ ಏಳು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ, 14 ಅಂಕಗಳನ್ನು ಹೊಂದಿದೆ. ಅತ್ತ ರಾಜಸ್ಥಾನಕ್ಕೆ ಈ ಸೋಲು ದುಃಸ್ವಪ್ನವಾಗಿದೆ. ಈ ಋತುವಿನಲ್ಲಿ ರಾಜಸ್ಥಾನ್ ಮೊದಲ ಬಾರಿಗೆ ಅಗ್ರ ನಾಲ್ಕರಿಂದ ಹೊರಬಿದ್ದಿದೆ. 11 ಪಂದ್ಯಗಳಿಂದ ಆರು ಗೆಲುವುಗಳು ಮತ್ತು ಐದು ಸೋಲುಗಳೊಂದಿಗೆ, ರಾಯಲ್ಸ್ 12 ಅಂಕಗಳನ್ನು ಹೊಂದಿ ಐದನೇ ಸ್ಥಾನಕ್ಕೆ ಕುಸಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *