Headlines

ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್ – Kannada News | BMTC Gets 1750 New Electric Buses Under PM E DRIVE: Relief for Bangaluru Commuters

ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ (Shakti Yojana) ಆರಂಭವಾದ ಮೇಲೆ ಬಿಎಂಟಿಸಿ ಬಸ್ (BMTC bus) ​​ಗಳಲ್ಲಿ ಪುರುಷರಿಗೆ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ ಎನ್ನುವ ಅಸಮಾಧಾನವಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಬಸ್​​ಗಳು ಬರುತ್ತಿದ್ದು, ಇದಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಸದ್ಯ…

Read More

ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ – Kannada News | Kakra Singhi health benefits during winter, Baba Ramdev Explains

ಸಾಕಷ್ಟು ರೀತಿಯ ನೈಸರ್ಗಿಕ ಔಷಧೀಯ ಪದಾರ್ಥಗಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬಹಳ ಪ್ರಯೋಜನಕಾರಿ ಎನಿಸುವ ಔಷಧೀಯ ಪದಾರ್ಥಗಳಲ್ಲಿ ಕಾಕಡ ಸಿಂಗಿ (Kakra Singhi) ಒಂದು. ಆಯುರ್ವೇದಲ್ಲಿ ಕಾಕಡ ಸಿಂಗಿಯನ್ನು ಅಮೂಲ್ಯ ಗಿಡಮೂಲಿಕೆ ಎಂದು ಕರೆಯಲಾಗುತ್ತದೆ. ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ಗಳಲ್ಲಿ ಈ ಗಿಡಮೂಲಿಕೆ ಬಗ್ಗೆ ಮಾತನಾಡಿದ್ದಾರೆ. ಅದರ ಪ್ರಯೋಜನಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಚಳಿಗಾಲದಲ್ಲಿ ಕಾಕಡ ಸಿಂಗಿ ಬಳಕೆ ಬಹಳ ಉಪಯುಕ್ತವೆನಿಸುತತದೆ. ಸಮತೋಲಿತ ಪ್ರಮಾಣದಲ್ಲಿ ನಿಯಮಿತವಾಗಿ ಇದನ್ನು…

Read More

ಪ್ರತಿದಿನ ದೇವಸ್ಥಾನಕ್ಕೆ ಹೋಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | What are the benefits of visiting a temple every day?

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಜನ ಮನೆಯಲ್ಲಿ ಪ್ರತಿನಿತ್ಯ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಗಳಿಗೆ ಹೋಗಿ ಅಲ್ಲಿನ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಕಷ್ಟ ಅಂತ ಬಂದಾಗ ದೇವರ ಬಳಿ ಹೋದ್ರೆ ಇನ್ನೂ ಕೆಲವರು ಪ್ರತಿನಿತ್ಯ ದೇವಸ್ಥಾನಕ್ಕೆ (temple) ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಹೋಗುವುದು ಕೇವಲ ಧಾರ್ಮಿಕ ಚಟುವಟಿಕೆಯಲ್ಲ, ಇದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ. ಹೌದು ದೇವಸ್ಥಾನದ ಪ್ರಶಾಂತ ವಾತಾವರಣ, ಪೂಜೆ, ಹೋವ ಹವನ, ಗಂಟೆ ಸದ್ದು, ಮಂತ್ರ ಪಠಣೆ ಇವೆಲ್ಲವೂ ಮನಸ್ಸು ಮತ್ತು ದೇಹಕ್ಕೆ…

Read More

‘ಕಿರಾತಕ’ ಸುಂದರಿ ಓವಿಯಾ ಈಗೇನು ಮಾಡುತ್ತಿದ್ದಾರೆ? ಇಲ್ಲಿದೆ ವಿವರ

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ 'ಕಿರಾತಕ' ಸಿನಿಮಾದಲ್ಲಿ ನಟಿಸಿದ್ದ ನಟಿ ಓವಿಯಾ ಅವರು ತಮ್ಮ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಆ ಹಳ್ಳಿ ಹುಡುಗಿಯ ಪಾತ್ರ ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿದೆ. ಕಿರಾತಕ ಚಿತ್ರದ ಭರ್ಜರಿ ಯಶಸ್ಸಿನ ನಂತರ ಓವಿಯಾ ಅವರು ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಅವರು ತಮಿಳು ಚಿತ್ರರಂಗದತ್ತ ಗಮನ ಹರಿಸಿದರು. ಅಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ (2017) ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಪ್ರಸ್ತುತ ಓವಿಯಾ…

Read More

ಕೊನೆ ಕ್ಷಣದಲ್ಲಿ ಅಮೆರಿಕ ಜತೆಗಿನ ಒಪ್ಪಂದದಿಂದ ಹಿಂದೆ ಸರಿದ ಇರಾನ್ – Kannada News | Iran Abruptly Halts US Peace Deal: Hardliners and Khamenei’s Death Fuel Last Minute Retreat

ಡೊನಾಲ್ಡ್​ ಟ್ರಂಪ್-ಮೊಜ್ತಬಾ Image Credit source: NDTV ಟೆಹ್ರಾನ್, ಜೂನ್ 19: ಇನ್ನೇನು ಅಮೆರಿಕ-ಇರಾನ್(Iran) ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಅನ್ನುವಷ್ಟರಲ್ಲಿ ಸಂಧಾನವೇ ಮುರಿದು ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು (ಜೂನ್ 19, 2026) ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆಕ್ಷಣದಲ್ಲಿ ಹಿಂದೆ ಸರಿದಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗೆ…

Read More

ಐಪಿಎಸ್ ಅಧಿಕಾರಿಗಳಿಗೆ ಹೊಸ ನಿಯಮ; ಕೇಂದ್ರದಲ್ಲಿ ಐಜಿಯಾಗಲು ಎರಡು ವರ್ಷ ಕೇಂದ್ರೀಯ ಸೇವೆ ಕಡ್ಡಾಯ – Kannada News | MHA mandates two year Central stint as SP or DIG for IPS officers aiming IG rank

ನವದೆಹಲಿ, ಜನವರಿ 31: ಐಪಿಎಸ್ ಅಧಿಕಾರಿಗಳು ಕೇಂದ್ರದಲ್ಲಿ ಐಜಿ ಮಟ್ಟದ ಅಧಿಕಾರಿಯಾಗಲು ಕನಿಷ್ಠ ಎರಡು ವರ್ಷ ಎಸ್​ಪಿ ಅಥವಾ ಡಿಐಜಿ ಮಟ್ಟದಲ್ಲಿ ಕೇಂದ್ರೀಯ ಸೇವೆ ಪೂರ್ಣಗೊಳಿಸುವುದು (central deputation) ಕಡ್ಡಾಯ. ಹೀಗೊಂದು ಹೊಸ ನಿಯಮವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಮಾಡಿದೆ. ಜನವರಿ 28ರಂದು ಹೊರಡಿಸಲಾದ ಈ ಮಾರ್ಗಸೂಚಿ ಪ್ರಕಾರ 2011, ಹಾಗೂ ನಂತರದ ಬ್ಯಾಚ್ ಅಧಿಕಾರಿಗಳಿಗೆ ಹೊಸ ನಿಯಮ ಅನ್ವಯ ಆಗುತ್ತದೆ. ರಾಷ್ಟ್ರಮಟ್ಟದ ಜವಾಬ್ದಾರಿ ನಿಭಾಯಿಸಬಲ್ಲಂತಹ ಅಧಿಕಾರಿಗಳ ಸಮೂಹ ನಿರ್ಮಿಸುವುದು…

Read More

IPL 2026 Points Table: ಗುಜರಾತ್​ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ ಹೊರಬಂದ ಮುಂಬೈ – Kannada News | IPL 2026 Points Table: Mumbai Indians Stun GT, Tilak Varma Powers MI’s 10th to 7th Jump

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಸೋಲಿನ ಸರಪಳಿಯನ್ನು ಮುರಿದಿದೆ. ನಿನ್ನೆ ನಡೆದ ಟೂರ್ನಿಯ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ (MI vs GT) ವಿರುದ್ಧ 99 ರನ್‌ಗಳ ಅದ್ಭುತ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ 199 ರನ್ ಗಳಿಸಿತು. ತಂಡದ ಪರ ತಿಲಕ್ ವರ್ಮಾ (Tilak Varma) ಒಬ್ಬರೇ 101 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಗುರಿ…

Read More

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?

ಜೀ ಕನ್ನಡದಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ.ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025’ ಅಂತಿಮ ಹಂತ ತಲುಪಿದೆ. ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30ರವರೆಗೆ ಫಿನಾಲೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಈ ವೇಳೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಈ ಬಾರಿಯ ಡಿಕೆಡಿ ಚಾಂಪಿಯನ್ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ….

Read More

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ – Kannada News | Budget 2026; FM Nirmala Sitharaman Announces No Tax On Interest Awarded for Insurance Claims on the Motor Accident

ವಿತ್ತ ಸಚಿವರಿಂದ ಮಹತ್ವದ ಘೋಷಣೆImage Credit source: Google ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ದಾಖಲೆಯ 9ನೇ ಬಜೆಟ್​​ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1ರಿಂದ ನೂತನ ಐಟಿ ಕಾಯ್ದೆ ಜಾರಿಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ ನೀಡಿರೋದಾಗಿ ತಿಳಿಸಿದ್ದಾರೆ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಬಗ್ಗೆ ಕೋರ್ಟ್​​ನಲ್ಲಿ ತೀರ್ಮಾನ ಆಗಲಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ…

Read More

Video: ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ – Kannada News | Driver Killed After Vehicle Catches Fire on National Highway in Andhra Pradesh

ಕಾಕಿನಾಡ, ಜನವರಿ 29: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಎರಡು ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವದಹನವಾಗಿದ್ದಾರೆ. ಕತಿಪುಡಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಚ್ಚು ವಾಹನಗಳು ಓಡಾಡುವ ಹೆದ್ದಾರಿ, ಪಕ್ಕದ ರಸ್ತೆಯಿಂದ ಟ್ರಕ್​ ಒಂದು ಯೂಟರ್ನ್​ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹರಡುವ ಮೊದಲೇ ಓರ್ವ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ಟ್ರಕ್​ನಲ್ಲಿದ್ದ ಚಾಲಕನಿಗೆ ಅದು ಸಾಧ್ಯವಾಗಲಿಲ್ಲ….

Read More