ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ
ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಂದಿ ಇದರ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಡೆಂಗ್ಯೂಗೆ ನಿರ್ದಿಷ್ಟ ಲಸಿಕೆ ಲಭ್ಯವಿರಲಿಲ್ಲ. ಆದರೆ ಈಗ ದೇಶದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೌದು, ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್‌ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ (Takeda Pharmaceutical Company) ಅಭಿವೃದ್ಧಿಪಡಿಸಿದ್ದು, ಹೈದರಾಬಾದ್‌ನ ಬಯೋಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ…