Headlines

ಮೇ 15ಕ್ಕೆ ಗುಡ್ ನ್ಯೂಸ್ ಸಿಗತ್ತಾ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್! – Kannada News | DK Shivakumar’s Birthday: Karnataka Deputy CM DKS Bans Birthday Banners

ಬೆಂಗಳೂರು, ಏಪ್ರಿಲ್ 26: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ಅವರ ಮೇ 15 ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಗುಡ್ ನ್ಯೂಸ್​ನ ನಿರೀಕ್ಷೆಗಳು ಗರಿಗೆದರಿವೆ. ಆದರೆ, ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಹುಟ್ಟುಹಬ್ಬದಂದು ಯಾವುದೇ ಕಾರ್ಯಕರ್ತರು ಅಥವಾ ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.ನಜಾಹೀರಾತು ಬೇಕಿದ್ದರೆ ಹಣ ಕಟ್ಟಿ ಮಾಡಿಕೊಳ್ಳಿ, ಆದರೆ ರಸ್ತೆಯಲ್ಲಿ ಹಾಕಬಾರದು ಎಂದು ಮನವಿ ಮಾಡಿದ್ದಾರೆ. ಪಕ್ಷದಲ್ಲಿನ ಸಿಎಂ ಕುರ್ಚಿ ಕಾದಾಟ ಮತ್ತು ಸಚಿವ ಸಂಪುಟ…

Read More

ತೆಲಂಗಾಣದಲ್ಲೂ ಜನಸೇನಾ ಚುನಾವಣೆಗೆ ಸ್ಪರ್ಧಿಸಲಿದೆ; ಕಾಂಗ್ರೆಸ್​​ಗೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸವಾಲು

ಹೈದರಾಬಾದ್, ಜೂನ್ 2: ಜನ ಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಹೇಳಿಕೆಗಳು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. “ತೆಲಂಗಾಣದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್​​ನವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ತೆಲಂಗಾಣ ನಿಮ್ಮ ಕುಟುಂಬದ ಭೂಮಿಯೇ? ತೆಲಂಗಾಣದಲ್ಲೂ ಜನಸೇನಾ ಪಕ್ಷ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲಿದೆ. ನಾವು ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಸ್ಪರ್ಧಿಸುತ್ತೇವೆ. ನಾನೇ ತೆಲಂಗಾಣದಲ್ಲಿ ಸಂಚಾರ ಮಾಡಿ ಜನರನ್ನು ತಲುಪುತ್ತೇನೆ” ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು,…

Read More

ಲಿವ್-ಇನ್ ಸಂಗಾತಿಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಡಿಎಂಕೆ ಕಾರ್ಯಕರ್ತ – Kannada News | Tamil Nadu Man Linked to DMK Youth Wing Arrested in Toddler Assault and Murder Case

ಬಂಧನ-ಸಾಂದರ್ಭಿಕ ಚಿತ್ರImage Credit source: ipleaders ಕೃಷ್ಣಗಿರಿ, ಮಾರ್ಚ್​ 01: ಡಿಎಂಕೆ ಕಾರ್ಯರ್ತನೊಬ್ಬ ಲಿವ್-ಇನ್ ಸಂಗಾತಿ(Live-in Partner)ಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಪೆರಿಯನಾಯಗಂ ತನ್ನ ಸಂಗಾತಿ ಪ್ರಿನ್ಸಿಯ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಗಂಡ ಸೂರ್ಯನಿಂದ ಬೇರೆಯಾಗಿದ್ದಳು. ತಾಯಿ ಇಲ್ಲದ ಸಮಯದಲ್ಲಿ ಪೆರಿಯನಾಯಗಂ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ವೈವಾಹಿಕ ಭಿನ್ನಾಭಿಪ್ರಾಯಗಳ ನಂತರ, ಪ್ರಿನ್ಸಿ ತನ್ನ ತಾಯಿಯೊಂದಿಗೆ ಅಂಚೆಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದರು,…

Read More

Video: ಹುಳುಕು ಹಲ್ಲಿನ ಬದಲು ಸರಿ ಇದ್ದ ಹಲ್ಲು ಕಿತ್ತ ವೈದ್ಯ – Kannada News | Woman Alleges Wrong Tooth Extraction at JLN Hospital

ಅಜ್ಮೀರ್, ಮೇ 25: ಅಜ್ಮೀರ್​ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಶುಕ್ರವಾರ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರ ತಪ್ಪು ಹಲ್ಲು ಹೊರತೆಗೆದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಶಬಾನಾ ಖಾನ್ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ವೈದ್ಯರು ಅವರ ಒಂದು ಹಲ್ಲು ಹುಳುಕಾಗಿದ್ದು, ಅದನ್ನು ತೆಗೆಯಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ತಮ್ಮ ಪತಿಯೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಆದರೆ, ವೈದ್ಯರು ನೋವಿದ್ದ ಹಲ್ಲಿನ ಬದಲಿಗೆ ಪಕ್ಕದಲ್ಲಿದ್ದ ಆರೋಗ್ಯಕರ ಹಲ್ಲನ್ನು ಹೊರತೆಗೆದಿದ್ದಾರೆ…

Read More

Bengaluru Power Cut Today: ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ಕಡಿತ; ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ಮಾಹಿತಿ – Kannada News | Bengaluru Power Cut: BESCOM Issues Alert For 7 Hour Outage On June 22 And 23 In Key Areas

ಸಾಂದರ್ಭಿಕ ಚಿತ್ರ (ಕೃಪೆ: ಬೆಸ್ಕಾಂ ಎಕ್ಸ್​ ಹ್ಯಾಂಡಲ್)Image Credit source: @NammaBESCOM ಬೆಂಗಳೂರು, ಜೂನ್ 22: ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಇಂದು ಮತ್ತು ನಾಳೆ (ಜೂನ್ 22 ಮತ್ತು ಜೂನ್ 23) ಸುದೀರ್ಘ ಅವಧಿಯ ವಿದ್ಯುತ್ ಕಡಿತ (Power Cut) ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಅಧಿಕೃತ ಮಾಧ್ಯಮ ಪ್ರಕಟಣೆ ಹಾಗೂ ಎಕ್ಸ್ (X) ಪೋಸ್ಟ್ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದೆ. ತುರ್ತು ಮೂಲಸೌಕರ್ಯ ಕಾಮಗಾರಿ ಹಾಗೂ ನಿಯತಕಾಲಿಕ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಕಾಮಗಾರಿಗಳ…

Read More

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್​ಸಿಬಿ ಪರ ಆಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ – Kannada News

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಇದೇ ಜೂನ್ 6 ರಿಂದ ಆರಂಭವಾಗಲಿದೆ. ಇದಕ್ಕಾಗಿ ಉಭಯ ತಂಡಗಳು ಕೂಡ ತಯಾರಿ ನಡೆಸುತ್ತಿವೆ. ಈ ನಡುವೆ ಟೀಂ ಇಂಡಿಯಾ (Team India) ಪರ ಟೆಸ್ಟ್ ಪಂದ್ಯವನ್ನಾಡಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶ್ರೀಕರ್ ಭರತ್ (KS Bharat) ಕೇವಲ 32 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆಂಧ್ರಪ್ರದೇಶ ಪರ ದೇಶಿ ಕ್ರಿಕೆಟ್ ಆಡುತ್ತಿದ್ದ ಭರತ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ಕಾಲ ಇರದಿದ್ದರೂ,…

Read More

Wisden 2026: ಪ್ರತಿಷ್ಠಿತ ‘ವಿಸ್ಡನ್’ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – Kannada News | Wisden 2026: The Year of Indian Cricket’s Global Hegemony

ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ (Wisden Cricketers of the Year) 2026ರ ಸಾಲಿನ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಇಂಗ್ಲೆಂಡ್‌ನ ಬೇಸಿಗೆಯ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಐವರು ಆಟಗಾರರನ್ನು ಗುರುತಿಸುವ ಈ ಗೌರವದಲ್ಲಿ, ಈ ಬಾರಿ ಭಾರತೀಯ ಆಟಗಾರರು ಅಭೂತಪೂರ್ವ ಪ್ರಾಬಲ್ಯ ಮೆರೆದಿರುವುದು ವಿಶೇಷ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತದ ನಾಲ್ವರು ಆಟಗಾರರು ಜೊತೆಯಾಗಿ  ‘ವಿಸ್ಡನ್ ಕ್ರಿಕೆಟರ್ಸ್ ಆಫ್…

Read More

ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್! – Kannada News | Bengaluru Metro Red Line: BMRCL Drops One Underground Station to Cut Costs by Rs 2,920 Crore for Central Approval

ರೆಡ್ ಲೈನ್ ಮೆಟ್ರೋ ಮಾರ್ಗImage Credit source: tv9 ಬೆಂಗಳೂರು, ಜೂನ್ 19: ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ (Red Line Metro) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯ (DPR) ಅಂದಾಜು ವೆಚ್ಚ ಅತಿ ಹೆಚ್ಚಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ…

Read More

ಶಿಕ್ಷಣ ಸಚಿವರಿಲ್ಲದೆ ಇಲಾಖೆಯ ಚಟುವಟಿಕೆಗಳಿಗೆ ಅಡ್ಡಿ: ಸರ್ಕಾರಿ ಶಾಲೆಯ 30 ಸಾವಿರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ – Kannada News | Karnataka Academic Year Begins in Chaos: Delayed Cabinet Expansion Leaves Education Department Ministerless for Two Weeks

ಸಾಂದರ್ಭಿಕ ಚಿತ್ರImage Credit source: Karnataka Education Department ಬೆಂಗಳೂರು, ಜೂನ್ 16: ರಾಜ್ಯದಲ್ಲಿ 2026ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ಇಲಾಖೆಗೆ ಶಿಕ್ಷಣ ಸಚಿವರೇ (Education Minister) ಇಲ್ಲದಿರುವುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸಚಿವರ ಅನುಪಸ್ಥಿತಿಯಿಂದಾಗಿ ಹೊಸ ಶಿಕ್ಷಣ ನೀತಿಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮತ್ತು ಶಾಲಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರಿಗಳು ತಡಕಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ…

Read More

ಬಾಂಗ್ಲಾದೇಶದಲ್ಲಿ ಬಿಎನ್‌ಪಿಗೆ ಭರ್ಜರಿ ಜಯ; ತಾರಿಕ್ ರೆಹಮಾನ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ – Kannada News | PM Modi speaks to Bangladesh leader Tarique Rahman Congratulates on BNPs victory in election

ನವದೆಹಲಿ, ಫೆಬ್ರವರಿ 13: ನೆರೆಯ ದೇಶವಾದ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್​ಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಎರಡೂ ದೇಶಗಳ ಜನರ ನಡುವೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಮೋದಿ ಪುನರುಚ್ಛರಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ” ತಾರಿಕ್…

Read More