ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ: ಏಷ್ಯಾದ ಮೊದಲ ಜಲ ವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಕರೆಂಟ್​ ಉತ್ಪಾದನೆ ಸ್ಥಗಿತ – Kannada News | Monsoon Failure: Power Generation Halting at Asia’s First Hydroelectric Station in Shivanasamudra Due to Water Scarcity

ಮಂಡ್ಯ, ಜುಲೈ 26: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಭಾವ ಜಲ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಿನ್ನೆಲೆ ಮಂಡ್ಯ ‌ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಏಷ್ಯಾದ ಮೊದಲ ಜಲ ವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಒಂದೂವರೆ ತಿಂಗಳಿಂದ ಜಲ‌ ವಿದ್ಯುತ್ ಉತ್ಪಾದನೆ ಬಂದ್ ಆಗಿದ್ದು, ಕೆಆರ್​​ಎಸ್ ಅಥವಾ ಕಬಿನಿ ಡ್ಯಾಂನಿಂದ ನೀರು ಬಿಟ್ಟರೆ ಮಾತ್ರ ಮತ್ತೆ ವಿದ್ಯುತ್ ಉತ್ಪಾದನೆ ಪುನಾರಂಭ ಆಗಲಿದೆ. ಈ ಕೇಂದ್ರದಲ್ಲಿ ನಿತ್ಯ 10 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು‌. ಅದಕ್ಕಾಗಿ ನಿತ್ಯ 1,450 ಕ್ಯೂಸೆಕ್ ನೀರು ಅಗತ್ಯ ಇತ್ತು‌.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ – Kannada News | Team India Back at the Top of ICC T20I Rankings

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಅದ್ಭುತ ಪ್ರದರ್ಶನದ ಫಲವಾಗಿ, ಭಾರತ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟಿ20 ತಂಡದ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಮರಳಿ ಪಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಅಗ್ರಸ್ಥಾನವನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಕೇವಲ 13 ದಿನಗಳಲ್ಲೇ ಭರ್ಜರಿ ಕಮ್‌ಬ್ಯಾಕ್ ಮಾಡುವ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ತನ್ನ ಸರ್ವೋಚ್ಚ ಪ್ರಭುತ್ವವನ್ನು ಸಾಬೀತುಪಡಿಸಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 4-0 ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದ ಟೀಮ್ ಇಂಡಿಯಾ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡಿತ್ತು. ಭಾರತವನ್ನು ವೈಟ್‌ವಾಶ್ ಮಾಡಿದ್ದ ಇಂಗ್ಲೆಂಡ್ ತಂಡವು ಐಸಿಸಿ ಟಿ20 ಶ್ರೇಯಾಂಕದ ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಆದರೆ, ಇದೀಗ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ತಂಡ, ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟಿ20 ಕ್ರಿಕೆಟ್​ನ ನಂಬರ್ 1 ತಂಡ ಎನಿಸಿಕೊಂಡಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ:

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾ, ಸದ್ಯ ಮೂರೂ ಸ್ವರೂಪಗಳ ಶ್ರೇಯಾಂಕದಲ್ಲೂ ಅದ್ಭುತ ಪ್ರಾಬಲ್ಯ ಮೆರೆದಿದೆ. ಬಿಳಿ ಚೆಂಡಿನ ಕ್ರಿಕೆಟ್‌ನ ಎರಡು ಪ್ರಮುಖ ಮಾದರಿಗಳಾದ ಟಿ20 ಹಾಗೂ ಏಕದಿನ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ತಂಡವಾಗಿ ಹೊರಹೊಮ್ಮಿದೆ.  ಇನ್ನು ಸುದೀರ್ಘ ಸ್ವರೂಪದ ಟೆಸ್ಟ್ ಕ್ರಿಕೆಟ್‌ನಲ್ಲೂ ಅಗ್ರ ನಾಲ್ಕರ ಪಟ್ಟಿಯಲ್ಲಿ ಭದ್ರವಾಗಿ ನೆಲೆಯೂರಿದೆ.

  • ಏಕದಿನ ಕ್ರಿಕೆಟ್‌ನಲ್ಲೂ ನಂ.1: ಭಾರತ ತಂಡವು ಕೇವಲ ಟಿ20 ಮಾದರಿಯಲ್ಲಿ ಮಾತ್ರವಲ್ಲದೆ, ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲೂ ವಿಶ್ವದ ನಂಬರ್ 1 ತಂಡವಾಗಿ ಮುಂದುವರಿದಿದೆ.
  • ಟೆಸ್ಟ್‌ನಲ್ಲಿ ಸವಾಲು: ಸುದೀರ್ಘ ಮಾದರಿಯಾದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಸದ್ಯ 4ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡವು 131 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
  • ಟಿ20 ಯಲ್ಲಿ ಕಮ್‌ಬ್ಯಾಕ್: ಝಿಂಬಾಬ್ವೆ ವಿರುದ್ಧದ ಭರ್ಜರಿ ಗೆಲುವಿನ ನಂತರ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಮತ್ತೆ ಟಿ20 ಮಾದರಿಯಲ್ಲಿ ಜಗತ್ತಿನ ನಂಬರ್ 1 ಪಟ್ಟಕ್ಕೇರಿದೆ.

ಇದನ್ನೂ ಓದಿ: ಬ್ಯಾಟಿಂಗ್​ನಲ್ಲಿ ಅಲ್ಲ, ಬೌಲಿಂಗ್​ನಲ್ಲಿ ಭರ್ಜರಿ ದಾಖಲೆ ಬರೆದ ಅಭಿಷೇಕ್ ಶರ್ಮಾ

ಟಿ20 ತಂಡಗಳ ನೂತನ ಶ್ರೇಯಾಂಕ ಪಟ್ಟಿ:

ಸ್ಥಾನ ತಂಡ ರೇಟಿಂಗ್
1 ಭಾರತ 268.13
2 ಇಂಗ್ಲೆಂಡ್ 268.05
3 ಆಸ್ಟ್ರೇಲಿಯಾ 260
4 ವೆಸ್ಟ್ ಇಂಡೀಸ್ 254
5 ಸೌತ್ ಆಫ್ರಿಕಾ 249
6 ನ್ಯೂಝಿಲೆಂಡ್ 247
7 ಪಾಕಿಸ್ತಾನ್ 241
8 ಶ್ರೀಲಂಕಾ 233
9 ಬಾಂಗ್ಲಾದೇಶ್ 225
10 ಆಫ್ಘಾನಿಸ್ತಾನ್ 222

Source link

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ! – Kannada News | Karnataka Cabinet Expansion: Congress MLAs Head to Delhi, CM Visit Rescheduled

ಬೆಂಗಳೂರು, ಜುಲೈ 26: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸಚಿವಾಕಾಂಕ್ಷಿ ಶಾಸಕರು ನವದೆಹಲಿಯತ್ತ ಮುಖ ಮಾಡಿದ್ದಾರೆ. ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಸುಧಾಮ್ ದಾಸ್, ಮಂಜುನಾಥ ಭಂಡಾರಿ, ಶರಣಗೌಡ ಬಯ್ಯಾಪುರ, ವಿಜಯಾನಂದ ಕಾಶಪ್ಪನವರ್, ಬ್ಯಾಡಗಿ ಶಿವಣ್ಣನವರ್, ಗುಬ್ಬಿ ವಾಸು, ಪುಟ್ಟಣ್ಣ, ಎಂ.ಆರ್.ಸೀತಾರಾಮ್ ಹಾಗೂ ಬಿ.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಭೇಟಿಗೆ ಸಜ್ಜಾಗಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿ ಅಂತಿಮ ಪಟ್ಟಿ ಕುರಿತು ಚರ್ಚಿಸಲಿದ್ದಾರೆ. ಚಿತ್ರದುರ್ಗ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ದೆಹಲಿ ಪ್ರಯಾಣ ರದ್ದಾಗಿದ್ದು, ನಾಳೆ ಅವರು ದೆಹಲಿಗೆ ತೆರಳಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ – Kannada News | Dr. Basavaraj Gurujis Weekly Horoscope: July 27 August 02, 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಜುಲೈ 27 ರಿಂದ ಆಗಸ್ಟ್ 02 ರವರೆಗಿನ ವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿಶ್ಲೇಷಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಗ್ರಹಗಳ ಸಂಚಾರ, ತಿಥಿಗಳ ಮಹತ್ವ ಮತ್ತು ಪರಾಭವ ನಾಮ ಸಂವತ್ಸರದ ಪ್ರಭಾವಗಳನ್ನು ತಿಳಿಸಲಾಗಿದೆ. ಈ ವಾರದಲ್ಲಿ ಮಂಗಳ ತ್ರಯೋದಶಿ, ವಿವೇಕಾನಂದರ ಪುಣ್ಯ ದಿನ, ಗುರು ಪೂರ್ಣಿಮೆ, ಚಾತುರ್ಮಾಸ ಸಂಕಲ್ಪ, ಆಡಿ ಶುಕ್ರವಾರ, ಸಂಕಷ್ಟ ಚತುರ್ಥಿ, ವಿಶ್ವ ಸ್ನೇಹ ದಿನ ಮತ್ತು ಬಾಲಗಂಗಾಧರನಾಥ ಸ್ವಾಮಿಗಳ ಪುಣ್ಯ ದಿನಗಳಂತಹ ಮಹತ್ವದ ಘಟನೆಗಳು ನಡೆಯಲಿವೆ. ಗುರು ಪೂರ್ಣಿಮೆಯು ಗುರುವಿಗೆ ಕೃತಜ್ಞತೆ ಸಲ್ಲಿಸುವ ಪ್ರಮುಖ ದಿನವಾಗಿದೆ.

ಗ್ರಹಗತಿಗಳ ಬಗ್ಗೆ ವಿವರಿಸಿದ ಗುರೂಜಿ, ಶನಿ ಮೀನ ರಾಶಿಯಲ್ಲಿ, ಕುಜ ವೃಷಭದಲ್ಲಿ, ಬುಧ ಮಿಥುನದಲ್ಲಿ, ಗುರು ಮತ್ತು ರವಿ ಕರ್ಕಾಟಕದಲ್ಲಿ ಸಂಚರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಆಗಸ್ಟ್ ಒಂದರಂದು ಶುಕ್ರ ಸಿಂಹದಿಂದ ಕನ್ಯಾ ರಾಶಿಗೆ ಸಂಚರಿಸಲಿದ್ದಾನೆ. ಈ ವಾರ ಮೇಷ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಕಾನೂನು ವಿಷಯಗಳಲ್ಲಿ ಜಯ ಹಾಗೂ ಭೂ ವಿವಾದಗಳ ಇತ್ಯರ್ಥ ಸಾಧ್ಯತೆಗಳಿವೆ. ವೃಷಭ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳಿದ್ದರೂ ವಾಹನ ಯೋಗ, ಭೂಮಿ ಯೋಗ ಉತ್ತಮವಾಗಿದೆ. ಮಿಥುನ ರಾಶಿಯವರಿಗೆ ಆಕಸ್ಮಿಕ ಧನ ಲಾಭ ಮತ್ತು ಕೆಲಸ ಕಾರ್ಯಗಳಲ್ಲಿ ಶುಭವಾಗಲಿದೆ. ಪ್ರತಿ ರಾಶಿಯವರಿಗೆ ಆರೋಗ್ಯ, ಕುಟುಂಬ, ವೃತ್ತಿ ಮತ್ತು ಆರ್ಥಿಕ ವಿಷಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Source link

ನೀಟ್ ಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ – Kannada News | NEET Leak: Pradhan Resigns; Amit Shah Vows Reforms for Student Welfare

ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಾರಗಟ್ಟಲೆ ನಡೆದ ಪ್ರತಿಭಟನೆಗಳು ಮತ್ತು ಕೇಂದ್ರ ಸರ್ಕಾರದಿಂದ ಉತ್ತರದಾಯಿತ್ವಕ್ಕಾಗಿ ಬಂದ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಹುದ್ದೆಗಿಂತ ದೇಶ, ಯುವಕರು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಬಿಜೆಪಿಯ ಈ ತತ್ವ ಮತ್ತು ಬದ್ಧತೆಯನ್ನು ಎತ್ತಿಹಿಡಿದಿದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಭವಿಷ್ಯದಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಸುಧಾರಣೆಗಳನ್ನು ತರಲಿದೆ ಎಂದು ಭರವಸೆ ನೀಡಿದ್ದಾರೆ.

ಸಚಿವರ ರಾಜೀನಾಮೆ, ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಕಾನೂನು ಕ್ರಮಗಳನ್ನು ಹಿಂಪಡೆಯುವ ಭರವಸೆಯನ್ನು ಸರ್ಕಾರ ನೀಡಿದ ನಂತರ ಜಿರಳೆ ಜನತಾ ಪಕ್ಷವು ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದೆ.

ಇದೇ ವೇಳೆ, ಧರ್ಮೇಂದ್ರ ಪ್ರಧಾನ್ ಅವರ ಸೇವೆಯನ್ನು ಶ್ಲಾಘಿಸಿದ ಅಮಿತ್ ಶಾ, ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳ ವಿಸ್ತರಣೆ, ಪಿಎಂ ಶ್ರೀ ಶಾಲೆಗಳ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.

ಮತ್ತಷ್ಟು ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕಾರ, ಪ್ರಲ್ಹಾದ್ ಜೋಶಿಗೆ ಕೇಂದ್ರ ಶಿಕ್ಷಣ ಖಾತೆ ಹೆಚ್ಚುವರಿ ಹೊಣೆ

ರಾಜೀನಾಮೆ ಕುರಿತು ‘ಎಕ್ಸ್’ (ಟ್ವಿಟರ್)ನಲ್ಲಿ ಹಂಚಿಕೊಂಡಿರುವ ಧರ್ಮೇಂದ್ರ ಪ್ರಧಾನ್, “ಇದು ನನ್ನ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ. ಕಳೆದ ಕೆಲವು ದಿನಗಳ ಬೆಳವಣಿಗೆಗಳು ನನಗೆ ತೀವ್ರ ಬೇಸರ ತಂದಿವೆ. ದೇಶದ ಯುವಶಕ್ತಿಯು ಗೊಂದಲದ ಜಾಲದಲ್ಲಿ ಸಿಲುಕುವುದು ನನಗೆ ಇಷ್ಟವಿಲ್ಲ. ಈ ಜಂತರ್ ಮಂತರ್ ಪ್ರತಿಭಟನೆಯನ್ನು ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು, ದೇಶದ ಏಕತೆ ಕಾಪಾಡಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯ ಕಾನೂನು ಸಂಕಷ್ಟಗಳಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ತಕ್ಷಣವೇ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿ, ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21 ರಂದು ಮರುಪರೀಕ್ಷೆ ನಡೆಸಿ ಜುಲೈ 16 ರಂದು ಫಲಿತಾಂಶವನ್ನೂ ಪ್ರಕಟಿಸಿತ್ತು ಎಂದು ಅವರು ತಮ್ಮ ಪತ್ರದಲ್ಲಿ ಸ್ಮರಿಸಿದ್ದಾರೆ. ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ.

ಸಚಿವರ ರಾಜೀನಾಮೆ, ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಕಾನೂನು ಕ್ರಮಗಳನ್ನು ಹಿಂಪಡೆಯುವ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿದ ಹಿನ್ನೆಲೆಯಲ್ಲಿ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದೆ.

ಇದೇ ವೇಳೆ, ಧರ್ಮೇಂದ್ರ ಪ್ರಧಾನ್ ಅವರ ಸೇವೆಯನ್ನು ಶ್ಲಾಘಿಸಿದ ಅಮಿತ್ ಶಾ, ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಪರಿಣಾಮಕಾರಿ ಅನುಷ್ಠಾನ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳ ವಿಸ್ತರಣೆ, ಪಿಎಂ ಶ್ರೀ ಶಾಲೆಗಳ ಬಲವರ್ಧನೆ, ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ನೀಡಿರುವ ಪ್ರಮುಖ ಕೊಡುಗೆಯನ್ನು ಸ್ಮರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:23 am, Sun, 26 July 26

Source link

Gold Rates 26 July: ಚಿನ್ನದ ಬೆಲೆ 55 ರೂ, ಬೆಳ್ಳಿ ಬೆಲೆ 5 ರೂ ಹೆಚ್ಚಳ – Kannada News | Gold Price Today on 26th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 26: ಚಿನ್ನದ ಬೆಲೆಯಲ್ಲಿ (Gold Rates) ಏರಿಳಿತಗಳು ಹೆಚ್ಚುತ್ತಿವೆ. ಶುಕ್ರವಾರ ಒಮ್ಮೆಲೇ 270 ರೂನಷ್ಟು ಕುಸಿದಿದ್ದ ಬಂಗಾರದ ದರ ವಾರಾಂತ್ಯದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಇಂದು ಇದರ ಬೆಲೆ ಗ್ರಾಮ್​ಗೆ 55 ರೂ ಹೆಚ್ಚಿದೆ. ವಿದೇಶಗಳಲ್ಲೂ ವಿವಿಧೆಡೆ ಬೆಲೆಗಳ ಏರಿಳಿತವಾಗಿದೆ. ಬೆಳ್ಳಿ ಬೆಲೆಯೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,493 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,285 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,870 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,493 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,285 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,285 ರೂ
  • ಚೆನ್ನೈ: 13,285 ರೂ
  • ಮುಂಬೈ: 13,285 ರೂ
  • ದೆಹಲಿ: 13,300 ರೂ
  • ಕೋಲ್ಕತಾ: 13,285 ರೂ
  • ಕೇರಳ: 13,285 ರೂ
  • ಅಹ್ಮದಾಬಾದ್: 13,290 ರೂ
  • ಜೈಪುರ್: 13,300 ರೂ
  • ಲಕ್ನೋ: 13,300 ರೂ
  • ಭುವನೇಶ್ವರ್: 13,285 ರೂ

ಇದನ್ನೂ ಓದಿ: ಇನಾಪರೇಟಿವ್ ಇಪಿಎಫ್ ಅಕೌಂಟ್​ಗಳಲ್ಲಿ ಕೊಳೆಯುತ್ತಿದೆ 9,330 ಕೋಟಿ ರೂ.; ಏನು ಮಾಡಬೇಕು?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 548 ರಿಂಗಿಟ್ (12,917 ರುಪಾಯಿ)
  • ದುಬೈ: 490 ಡಿರಾಮ್ (12,864 ರುಪಾಯಿ)
  • ಅಮೆರಿಕ: 134.50 ಡಾಲರ್ (12,969 ರುಪಾಯಿ)
  • ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (13,441 ರುಪಾಯಿ)
  • ಕತಾರ್: 492.50 ಕತಾರಿ ರಿಯಾಲ್ (13,027 ರೂ)
  • ಸೌದಿ ಅರೇಬಿಯಾ: 505 ಸೌದಿ ರಿಯಾಲ್ (12,972 ರುಪಾಯಿ)
  • ಓಮನ್: 52.20 ಒಮಾನಿ ರಿಯಾಲ್ (13,073 ರುಪಾಯಿ)
  • ಕುವೇತ್: 41.05 ಕುವೇತಿ ದಿನಾರ್ (12,860 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ದರ ಏರಿಕೆ ಬಿಸಿ: ಬೇಕರಿ ಉತ್ಪನ್ನಗಳ ಬೆಲೆ 3-5 ರೂ. ಹೆಚ್ಚಳ? – Kannada News | Price Hike Alert: Bakery Products and Sweets to Get Costlier by 3 to 5 Rupees in Karnataka

ಬೆಂಗಳೂರು, ಜುಲೈ 26: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಬೇಕರಿ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಳೆದ ಕೆಲವು ತಿಂಗಳುಗಳಿಂದ ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳು, ಅಡುಗೆ ಎಣ್ಣೆ, ಮೈದಾ, ಸಕ್ಕರೆ ಸೇರಿದಂತೆ ಬಹುತೇಕ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಜೊತೆಗೆ ವಿದ್ಯುತ್ ದರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ವೆಚ್ಚ, ಕಾರ್ಮಿಕರ ವೇತನ, ಸಾರಿಗೆ ವೆಚ್ಚ ಹಾಗೂ ಅಂಗಡಿಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿರುವುದರಿಂದ ಬೇಕರಿ ಉದ್ಯಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಳೆಯ ದರದಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲಾಭದ ಮಾತು ಬಿಡಿ, ಮೂಲ ವೆಚ್ಚವನ್ನೇ ಭರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಚಿಂತನೆ ನಡೆದಿದೆ.

ಶೀಘ್ರದಲ್ಲೇ ಮಹತ್ವದ ಸಭೆ

ವಿಶೇಷವಾಗಿ ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್, ತುಪ್ಪದ ಲಡ್ಡು, ಬಾದೂಷಾ, ಕಾಜು ಸ್ವೀಟ್ಸ್, ಡ್ರೈಫ್ರೂಟ್ ಐಟಂಗಳು, ಪ್ರೀಮಿಯಂ ಕೇಕ್‌ಗಳು ಹಾಗೂ ವಿವಿಧ ಬೇಕರಿ ಸಿಹಿತಿಂಡಿಗಳ ಉತ್ಪಾದನಾ ವೆಚ್ಚ ಹೆಚ್ಚು ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ತುಪ್ಪವನ್ನು ಬಳಸುವ ಬೇಕರಿಗಳಿಗೆ ಈ ಹೊರೆ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಗುಣಮಟ್ಟವನ್ನು ಉಳಿಸಿಕೊಳ್ಳಲು ಬೆಲೆ ಹೆಚ್ಚಳ ಅನಿವಾರ್ಯ ಎಂದು ಬೇಕರಿ ಮಾಲೀಕರು ಹೇಳ್ತಿದ್ದಾರೆ . ಬೇಕರಿ ಉದ್ಯಮ ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಕೋವಿಡ್ ನಂತರ ನಿಧಾನವಾಗಿ ಚೇತರಿಸಿಕೊಂಡಿದ್ದ ಉದ್ಯಮಕ್ಕೆ ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಹಲವು ಬೇಕರಿಗಳು ಇದುವರೆಗೆ ಬೆಲೆ ಏರಿಕೆ ಮಾಡದೆ ನಷ್ಟದಲ್ಲೇ ವ್ಯಾಪಾರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಅಸೋಸಿಯೇಷನ್ ಶೀಘ್ರದಲ್ಲೇ ಮಹತ್ವದ ಸಭೆ ನಡೆಸಲಿದ್ದು, ರಾಜ್ಯಾದ್ಯಂತ ಬೇಕರಿ ಉತ್ಪನ್ನಗಳ ದರ ಪರಿಷ್ಕರಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ; 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ

3 ರಿಂದ 5 ರೂಪಾಯಿ ಹೆಚ್ಚಳ ಸಾಧ್ಯತೆ

ಸಭೆಯಲ್ಲಿ ಜಿಲ್ಲೆಯ ಬೇಕರಿ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳೊಂದಿಗೆ ಚರ್ಚಿಸಿ ಹೊಸ ದರ ನಿಗದಿಪಡಿಸುವ ನಿರೀಕ್ಷೆಯಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರತಿ ಬೇಕರಿ ಉತ್ಪನ್ನದ ಮೇಲೆ 3 ರಿಂದ 5 ರೂಪಾಯಿ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಪೈಕಿ ಕೆಲವು ಪ್ರೀಮಿಯಂ ಸ್ವೀಟ್ಸ್ ಹಾಗೂ ತುಪ್ಪ ಆಧಾರಿತ ಉತ್ಪನ್ನಗಳ ಬೆಲೆ ಹೆಚ್ಚು ಏರಿಕೆಯಾಗುವ ಸಾಧ್ಯತೆ ಇದ್ದು, ದರ ಏರಿಕೆ ಜಾರಿಯಾದರೆ ದಿನನಿತ್ಯ ಬೇಕರಿ ಉತ್ಪನ್ನಗಳನ್ನು ಖರೀದಿಸುವ ಸಾಮಾನ್ಯ ಗ್ರಾಹಕರ ಜೇಬಿಗೂ ಹೆಚ್ಚುವರಿ ಹೊರೆ ಬೀಳಲಿದೆ.

ನಟರಾಜ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Rajahmundry Jagannath Temple: ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಆಂಧ್ರಪ್ರದೇಶದ ವಿಶಿಷ್ಟ ಜಗನ್ನಾಥ ಸ್ವಾಮಿ ದೇವಾಲಯವಿದು – Kannada News | Rajahmundry Jagannath Temple: Rare Toli Ekadashi Darshan, Open Only Once a Year

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿರುವ ದೇವಿ ಚೌಕ್‌ನ ಜಗನ್ನಾಥ ಸ್ವಾಮಿ ದೇವಾಲಯವು ಭಾರತದ ಅತ್ಯಂತ ಅಪರೂಪದ ಹಾಗೂ ವಿಶಿಷ್ಟ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ಬಾಗಿಲು ವರ್ಷದಲ್ಲಿ ತೊಲಿ ಏಕಾದಶಿ (ಮೊದಲ ಏಕಾದಶಿ) ಯಂದು ಮಾತ್ರ ಭಕ್ತರ ದರ್ಶನಕ್ಕಾಗಿ ತೆರೆಯಲ್ಪಡುತ್ತದೆ.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ:

ಸಾಧಾರಣವಾಗಿ ದೇವಾಲಯಗಳು ಪ್ರತಿದಿನ ತೆರೆದಿರುತ್ತವೆ. ಆದರೆ ರಾಜಮಂಡ್ರಿಯ ಈ ಜಗನ್ನಾಥ ಸ್ವಾಮಿ ದೇವಾಲಯವು ವರ್ಷದ 364 ದಿನಗಳು ಮುಚ್ಚಿರುತ್ತದೆ. ಕೇವಲ ಆಷಾಢ ಮಾಸದ ಶುಕ್ಲ ಏಕಾದಶಿಯ ಶುಭದಿನದಂದು ಮಾತ್ರ ದೇವಾಲಯದ ಬಾಗಿಲುಗಳನ್ನು ತೆರೆದು, ಸಾವಿರಾರು ಭಕ್ತರಿಗೆ ಶ್ರೀ ಜಗನ್ನಾಥ (ವಿಷ್ಣು) ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ದೇವಾಲಯದ ಆಡಳಿತ ಮತ್ತು ಪೂಜಾ ಕೈಂಕರ್ಯಗಳು ಅಲ್ಲಿನ ಟ್ರಸ್ಟಿ/ನಿರ್ವಾಹಕ ಕುಟುಂಬದ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿವೆ. ವರ್ಷ ಪೂರ್ತಿ ಈ ಕುಟುಂಬದ ಸದಸ್ಯರಿಗೆ ಮಾತ್ರ ದೇವಾಲಯದೊಳಗೆ ಧೂಪ, ದೀಪ ಹಾಗೂ ನಿತ್ಯ ಪೂಜೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಸಾರ್ವಜನಿಕರಿಗೆ ಅಥವಾ ಹೊರಗಿನ ಭಕ್ತರಿಗೆ ದರ್ಶನದ ಪ್ರವೇಶ ಸಂಪೂರ್ಣವಾಗಿ ನಿಷೇಧವಾಗಿರುತ್ತದೆ.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಕಾಯುವ ಸಾವಿರಾರು ಭಕ್ತರ ಮಹಾಪೂರ:

ವರ್ಷಕ್ಕೊಮ್ಮೆ ಲಭಿಸುವ ಈ ಅಪರೂಪದ ಪುಣ್ಯ ದರ್ಶನಕ್ಕಾಗಿ ಆಂಧ್ರಪ್ರದೇಶ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಭಕ್ತರು ರಾಜಮಂಡ್ರಿಗೆ ಆಗಮಿಸುತ್ತಾರೆ. ತೊಲಿ ಏಕಾದಶಿಯಂದು ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ, ಭಕ್ತರು ಭಗವಂತನ ಕೃಪೆಗೆ ಪಾತ್ರರಾಗಲು ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಾರೆ. ತಮ್ಮ ಕೋರಿಕೆಗಳನ್ನು ಈಡೇರಿಸುವ ಶಕ್ತಿಶಾಲಿ ದೈವವೆಂದು ನಂಬಲಾದ ಜಗನ್ನಾಥ ಸ್ವಾಮಿಗೆ ಭಕ್ತರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಸಂಪ್ರದಾಯ, ಶ್ರದ್ಧೆ ಮತ್ತು ಅಪರೂಪದ ಕಟ್ಟುಪಾಡುಗಳಿಂದಾಗಿ ಈ ಕ್ಷೇತ್ರವು ಆಂಧ್ರಪ್ರದೇಶದ ಅತ್ಯಂತ ಪ್ರಸಿದ್ಧ ಹಾಗೂ ಕೌತುಕಮಯ ಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:52 am, Sun, 26 July 26

Source link

ಇದೀಗ ಆರಂಭ, ಇನ್ನೂ ಬಹಳ ದೂರ ಸಾಗಬೇಕಿದೆ, ಪ್ರತಿಭಟನೆ ಕೊನೆಗೊಂಡ ನಂತರ ಅಭಿಜೀತ್ ದೀಪ್ಕೆ ವೀಡಿಯೊ ಸಂದೇಶ – Kannada News | NEET Protest Ends: Abhijit Deepke’s Message After Dharmendra Pradhan’s Resignation

ನವದೆಹಲಿ, ಜುಲೈ 26: ನೀಟ್ (NEET) ಪತ್ರಿಕೆ ಸೋರಿಕೆ ಖಂಡಿಸಿ ನಡೆದ 37 ದಿನಗಳ ಸುದೀರ್ಘ ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯುವ ನಾಯಕ ಅಭಿಜೀತ್ ದೀಪ್ಕೆ ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿ ವೀಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಹಾಗೂ ಸರ್ಕಾರದ ಸಕಾರಾತ್ಮಕ ಭರವಸೆಗಳ ನಂತರ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದು, 30 ವರ್ಷದ ದೀಪ್ಕೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನಿರಾಳತೆಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

37 ದಿನಗಳ ಹೋರಾಟ ಅತ್ಯಂತ ಕಠಿಣವಾಗಿತ್ತು ಎಂದು ಸ್ಮರಿಸಿದ ದೀಪ್ಕೆ, ಇದು ಕೇವಲ ಆರಂಭವಷ್ಟೇ, ಕಾಕ್ರೋಚ್ ಜನತಾ ಪಾರ್ಟಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ.

ಟೈಫಾಯ್ಡ್ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ನಿನ್ನೆ ಜಂತರ್ ಮಂತರ್‌ನಲ್ಲಿ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ಕ್ಷಮೆ ಕೋರಿದ ಅವರು, ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. “ನಮ್ಮನ್ನು ಟೀಕಿಸಿದವರಿಗೂ ಧನ್ಯವಾದಗಳು. ಅವರ ಪ್ರಶ್ನೆಗಳು ಮತ್ತು ಟೀಕೆಗಳು ನಾವು ತಪ್ಪುಗಳನ್ನು ತಿದ್ದಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾದವು” ಎಂದು ಹೇಳಿದರು.

ಮತ್ತಷ್ಟು ಓದಿ: ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಫಸ್ಟ್​​ ರಿಯಾಕ್ಷನ್​​

ಮೇ ತಿಂಗಳಲ್ಲಿ ವಿಡಂಬನಾತ್ಮಕವಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ, ಕೇವಲ 70 ದಿನಗಳಲ್ಲಿ ದೇಶದ ಸಾವಿರಾರು ಜೆನ್​ ಜಿ ಯುವಕರನ್ನು ಒಗ್ಗೂಡಿಸುವ ಬೃಹತ್ ಚಳವಳಿಯಾಗಿ ಬೆಳೆಯಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಭ್ಯರ್ಥಿಗಳ ಆತ್ಮಹತ್ಯೆಗೆ ಜವಾಬ್ದಾರಿ ಹೊರಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಯುವಕರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ್ದರು.

ವಿಡಿಯೋ

ನಿನ್ನೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:55 am, Sun, 26 July 26

Source link

ಬ್ಯಾಟಿಂಗ್​ನಲ್ಲಿ ಅಲ್ಲ, ಬೌಲಿಂಗ್​ನಲ್ಲಿ ಭರ್ಜರಿ ದಾಖಲೆ ಬರೆದ ಅಭಿಷೇಕ್ ಶರ್ಮಾ

Source link

Exit mobile version