Headlines

ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು – Kannada News | Childhood Cardiac Arrest: Bengaluru Doctors Advise Awareness Over Panic

ಬೆಂಗಳೂರು, ಜುಲೈ 26: ಇತ್ತೀಚೆಗೆ ನಗರದ ಶಾಲಾ ಆವರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಹೃದಯಾಘಾತದಿಂದ (Cardiac Arrest) ಕುಸಿದು ಬಿದ್ದ ಘಟನೆಗಳು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಜಯದೇವ, ನಾರಾಯಣ ಹೆಲ್ತ್ ಹಾಗೂ ಸ್ಪರ್ಶ್ ಆಸ್ಪತ್ರೆಯ ಪ್ರಮುಖ ಹೃದ್ರೋಗ ತಜ್ಞರು, “ಮಕ್ಕಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅತ್ಯಂತ ಅಪರೂಪ ಹಾಗೂ ಲಕ್ಷದಲ್ಲಿ ಒಂದೆರಡು ಪ್ರಕರಣಗಳು. ಹೀಗಾಗಿ ಪೋಷಕರು ಅನಗತ್ಯವಾಗಿ ಭೀತಿಗೆ ಒಳಗಾಗುವ ಅಗತ್ಯವಿಲ್ಲ, ಬದಲಿಗೆ ಜಾಗೃತಿ ಮತ್ತು ತುರ್ತು ಸಿದ್ಧತೆ ಹೆಚ್ಚಿಸಿಕೊಳ್ಳಬೇಕು”…

Read More

ಆಗಸ್ಟ್​ 30ರಂದು ಪಿಜಿ ನೀಟ್ ಪರೀಕ್ಷೆ: ನೂತನ ಸಚಿವ ಪ್ರಲ್ಹಾದ್ ಜೋಶಿ ಮುಂದಿರುವ ಹೊಸ ಸವಾಲುಗಳು – Kannada News | Pralhad Joshi’s PG NEET Challenge: Ensuring Fair Exams and Implementing Reforms by August 30

ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿವಾದದ ಕಾರಣದಿಂದ ರಾಜೀನಾಮೆ ನೀಡಿ ಧರ್ಮೇಂದ್ರ ಪ್ರಧಾನ್(Dharmendra Pradhan) ನರೇಂದ್ರ ಮೋದಿ ಸಂಪುಟದಿಂದ ಹೊರನಡೆದಿದ್ದಾರೆ. ಈಗ ಕೋಟ್ಯಂತರ ಅಭ್ಯರ್ಥಿಗಳ ನಿರೀಕ್ಷೆಯ ಹೊರೆಯನ್ನು ಕನ್ನಡಿಗ ಪ್ರಲ್ಹಾದ್ ಜೋಶಿ ಹೊರಬೇಕಿದೆ. ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿ ಹಲವು ಸುಧಾರಣಾ ಕ್ರಮಗಳು ವಿದ್ಯಾರ್ಥಿ ವಲಯದಿಂದಲೂ ಕೇಳಿಬಂದಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಸುಧಾರಣೆಯ ಕ್ರಾಂತಿಕಾರಕ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.ಇವೆಲ್ಲಾ ನಿರೀಕ್ಷೆಯನ್ನು ಪ್ರಲ್ಹಾದ್​ ಜೋಶಿ…

Read More

Vasthu Tips: ನಿವೇಶನ ಖರೀದಿಗೂ ಮುನ್ನ ತಿಳಿದಿರಬೇಕಾದ ಪ್ರಮುಖ ವಾಸ್ತು ನಿಯಮಗಳಿವು – Kannada News | Vastu Tips for Plot Selection: Ensure Prosperity and Positive Energy in Your Home

ಸ್ವಂತ ಮನೆ ನಿರ್ಮಿಸುವುದು ಅಥವಾ ವ್ಯವಹಾರಕ್ಕಾಗಿ ಸ್ವಂತ ಕಚೇರಿ ಪ್ರಾರಂಭಿಸುವುದು ಪ್ರತಿಯೊಬ್ಬರ ಜೀವನದ ಮುಖ್ಯ ಕನಸಾಗಿರುತ್ತದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಮುನ್ನ ಸೂಕ್ತ ಸ್ಥಳ ಆಯ್ಕೆ ಮಾಡುವುದು ಅತ್ಯಂತ ಅಗತ್ಯ. ವಾಸ್ತು ತತ್ವಗಳ ಪ್ರಕಾರ ಸೂಕ್ತ ಗುಣಲಕ್ಷಣಗಳಿರುವ ಜಾಗದಲ್ಲಿ ನಿರ್ಮಾಣ ಕೈಗೊಂಡರೆ, ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿ ಸಮೃದ್ಧಿ ಮತ್ತು ಅಭಿವೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ದಿಕ್ಕುಗಳ ಕುರಿತಾದ ಸತ್ಯಾಸತ್ಯತೆ: ಪ್ರಖ್ಯಾತ ಜ್ಯೋತಿಷಿ ಡಾ. ಅಜಯ್ ಭಂಬಿ ಅವರ ಪ್ರಕಾರ, ಯಾವುದೇ ದಿಕ್ಕನ್ನು ಸಂಪೂರ್ಣವಾಗಿ ಶುಭ ಅಥವಾ…

Read More

ಭೈರಸಂದ್ರದಲ್ಲಿ ಗಂಗ-ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ‘ಹುಲಿಬೇಟೆ ವೀರಗಲ್ಲು’ ಪತ್ತೆ – Kannada News | Historical Discovery: 9th Century ‘Tiger Hunt Hero Stone’ From Ganga Rashtrakuta Era Unearthed Near Nelamangala

ಪತ್ತೆಯಾಗಿರುವ ‘ಹುಲಿಬೇಟೆ ವೀರಗಲ್ಲು Image Credit source: The New Indian Express ಬೆಂಗಳೂರು, ಜುಲೈ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅಪರೂಪದ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಸುಮಾರು ಕ್ರಿ.ಶ. 850ರ ಅವಧಿಗೆ ಸೇರಿದ ಈ ವೀರಗಲ್ಲು ಕನ್ನಡದ ಇತಿಹಾಸದಲ್ಲಿ ಮಹತ್ವದ ಆವಿಷ್ಕಾರವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 8 ಅಡಿ ಉದ್ದ ಮತ್ತು 2.5 ಅಡಿ ಅಗಲ ಹೊಂದಿರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ…

Read More

ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ: ಟ್ರೋಲ್‌ ಮಾಡಿದವರಿಗೆ ತಿರುಗೇಟು – Kannada News | Actor Jyotika Supports Student Protest and Slams Troll comments

ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು (Student Protest) ಬೆಂಬಲಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಧ್ವನಿ ಎತ್ತಿದ್ದ ನಟಿ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದವರಿಗೆ ಜ್ಯೋತಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಶನಿವಾರ (ಜುಲೈ 24) ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಬಂದಿರುವ ಕಮೆಂಟ್​ಗಳಿಗೆ ಜ್ಯೋತಿಕಾ ಉತ್ತರ ನೀಡಿದ್ದಾರೆ. ‘ಧರ್ಮೇಂದ್ರ ಪ್ರಧಾನ್ ಅವರೇ ನಿಮ್ಮ…

Read More

ರೈಲ್ವೆ ಜಾಗದಲ್ಲಿ ಕಸ ಎಸೆದರೆ ಬೀಳುತ್ತೆ ದಂಡ: ನೈರುತ್ಯ ರೈಲ್ವೆಯಿಂದ ಕಠಿಣ ಕ್ರಮದ ಎಚ್ಚರಿಕೆ! – Kannada News | Don’t Dump Waste on Railway Land: South Western Railway Warns Violators

ಬೆಂಗಳೂರು, ಜುಲೈ 26: ರೈಲ್ವೆ ಹಳಿಗಳ ಪಕ್ಕದಲ್ಲಿ ಮತ್ತು ರೈಲ್ವೆಗೆ ಸೇರಿದ ಜಾಗದಲ್ಲಿ ಕಸ ಹಾಗೂ ಕಟ್ಟಡದ ತ್ಯಾಜ್ಯ (ಡೆಬ್ರಿಸ್) ಚೆಲ್ಲುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೈರುತ್ಯ ರೈಲ್ವೆ (SWR)ಎಚ್ಚರಿಕೆ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ನಗರದ ಐದು ಪಾಲಿಕೆಗಳ ಸಹಯೋಗದೊಂದಿಗೆ ಮುಂದಿನ ಎರಡು ತಿಂಗಳಲ್ಲಿ ರೈಲ್ವೆ ಹಳಿಗಳ ಸುತ್ತಲಿನ ಕಸ ತೆರವುಗೊಳಿಸಲು ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಾನೂನು ಕ್ರಮ ಮತ್ತು ದಂಡ ಪ್ರಯೋಗ! ಶನಿವಾರ ಕೇಂದ್ರ ರೈಲ್ವೆ ರಾಜ್ಯ…

Read More

ನಿನ್ನೆ ಪಂದ್ಯ ಗೆದ್ದ ಟೀಮ್ ಇಂಡಿಯಾಗೆ ಇವತ್ತು ಮತ್ತೆ ಮ್ಯಾಚ್! – Kannada News | Back to Back Clash: India Aim to Whitewash Zimbabwe

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸರಣಿ ಸೋತು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ, ಇದೀಗ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಕಮಬ್ಯಾಕ್ ಮಾಡಿದೆ. ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ ಪಡೆ, ಇಂದು (ಜುಲೈ 26, 2026) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯರನ್ನು ‘ಕ್ಲೀನ್ ಸ್ವೀಪ್’ ಮಾಡುವ ಇರಾದೆಯಲ್ಲಿದೆ. ಅಂದರೆ ಶನಿವಾರ ಪಂದ್ಯವಾಡಿರುವ ಟೀಮ್ ಇಂಡಿಯಾ ಇದೀಗ…

Read More

ರಾಮ ಮಂದಿರ ದೇಣಿಗೆ ಕಳ್ಳತನ ತನಿಖೆ: ಸುಪ್ರೀಂ ಆದೇಶದಂತೆ ಯುಪಿ ಸರ್ಕಾರದಿಂದ ಎಸ್‌ಐಟಿ ಪುನಾರಚನೆ – Kannada News | Ram Mandir Donations: SC Orders UP to Reconstitute SIT for Theft Probe

ಲಕ್ನೋ,ಜುಲೈ 26: ಅಯೋಧ್ಯೆ(Ayodhya)ಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಕಾಣಿಕೆಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ಪುನರ್ರಚಿಸಿದೆ. ತನಿಖೆಯ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮೂವರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ಹೊಸ ತಂಡದಲ್ಲಿ ಸೇರಿಸಲಾಗಿದೆ. ಇನ್ಸ್‌ಪೆಕ್ಟರ್ ಜನರಲ್ (IG) ಕಿರಣ್ ಎಸ್ ತಂಡದ ನೇತೃತ್ವವಹಿಸಿದ್ದಾರೆ. ಅಯೋಧ್ಯೆಯ ಡಿಐಜಿ (DIG) ಸೋಮೆನ್ ವರ್ಮಾ ಮತ್ತು ಅಯೋಧ್ಯೆಯ ಎಸ್‌ಎಸ್‌ಪಿ (SSP) ಡಾ. ಗೌರವ್ ಗ್ರೋವರ್ ಕೂಡ…

Read More

ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ: 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ – Kannada News | Bengaluru’s Vehicle Count Soars to 1.47 Crore, 50 Lakh Added in Just Five Years

ಬೆಂಗಳೂರು, ಜುಲೈ 26: ಸಂಚಾರ ದಟ್ಟಣೆ ಸಮಸ್ಯೆಯಿಂದ ಸಿಲಿಕಾನ್​​ ಸಿಟಿ ಬೆಂಗಳೂರಿನ (Bengaluru) ನಿವಾಸಿಗಳು ಮೊದಲೇ ಹೈರಾಣಾಗಿರುವ ನಡುವೆ ಕಳೆದ ಐದು ವರ್ಷಗಳಲ್ಲಿ ದಾಖಲೆ ಪ್ರಮಾಣದ ಹೊಸ ವಾಹನಗಳು ನಗರದಲ್ಲಿ ರಸ್ತೆಗಿಳಿದಿರುವ ಮಾಹಿತಿಯೀಗ ಬಹಿರಂಗಗೊಂಡಿದೆ.  ನಗರದಲ್ಲಿ ವಾಹನಗಳ ಸಂಖ್ಯೆ ಸುಮಾರು 98 ಲಕ್ಷದಿಂದ 1.47 ಕೋಟಿಗೆ ಏರಿಕೆಯಾಗಿದ್ದು, ಸುಮಾರು 50 ಲಕ್ಷ ಹೊಸ ವಾಹನಗಳು ರಸ್ತೆಗೆ ಇಳಿದಿವೆ. ನಗರದ ಟ್ರಾಫಿಕ್ ಜಾಮ್ ಈಗ ನಿತ್ಯದ ಸಂಕಷ್ಟವಾಗಿ ಪರಿಣಮಿಸಿದ್ದು,  ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಮತ್ತು ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ವರೆಗೆ ಪ್ರಮುಖ…

Read More

ಆನ್​​ಲೈನ್​​ ವಂಚನೆ: ಮೊಬೈಲ್, ಸಿಮ್​​ ಬದಲಿಸಿಯೂ 48.5 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ಉದ್ಯೋಗಿ – Kannada News | Cyber Fraud in Bengaluru: Woman Duped of 48.5 Lakh After Fake Home Loan Trap

ಬೆಂಗಳೂರು, ಜುಲೈ 26: ಸ್ವಂತ ಮನೆ ಖರೀದಿಸಲು ಗೃಹ ಸಾಲ ಪಡೆಯಲು ಯತ್ನಿಸಿದ್ದ 28 ವರ್ಷದ ಮಹಿಳೆ ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 48.5 ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹಲಸೂರಿನ ನಿವಾಸಿಯಾಗಿರುವ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, 2025ರ ಅಕ್ಟೋಬರ್‌ನಲ್ಲಿ ವೆಬ್‌ಸೈಟ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಂಚಕರು ಕಳುಹಿಸಿದ್ದ ಲಿಂಕ್‌ನಲ್ಲಿ ಅವರು ಪ್ಯಾನ್ ಕಾರ್ಡ್, ಆಧಾರ್, ಕಚೇರಿ ವಿವರಗಳು ಹಾಗೂ ಸೆಲ್ಫಿ ಸೇರಿದಂತೆ ವೈಯಕ್ತಿಕ…

Read More