ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಫಸ್ಟ್​​ ರಿಯಾಕ್ಷನ್​​ – Kannada News | Pralhad Joshi Reacts After Getting Additional Charge of Union Education Ministry

ನವದೆಹಲಿ, ಜುಲೈ 26: ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಜವಾಬ್ದಾರಿಯ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಮಾನ್ಯ ಪ್ರಧಾನ ಮಂತ್ರಿಗಳ ಅಪೇಕ್ಷೆಯಂತೆ ನಾನು ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಕಳೆದ 12 ವರ್ಷಗಳಲ್ಲಿ ಪ್ರಧಾನಮಂತ್ರಿ ಮೋದಿ ಸರ್ಕಾರವು ಅನೇಕ ಐತಿಹಾಸಿಕ ಸಾಧನೆಗಳನ್ನು ಮಾಡಿದೆ ಎಂಬುದನ್ನು ಸ್ಮರಿಸಿದ ಅವರು, ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಜಾರಿಗೊಳಿಸಿರುವುದನ್ನೂ ಶ್ಲಾಘಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅನ್ಯಾಯಕ್ಕೆ ಒಳಗಾಗುವರು – Kannada News | Daily Horoscope for July 26, 2026: Sunday Astrology Predictions for All 12 Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮೂಲಾ, ಯೋಗ : ವಿಷ್ಕಂಭ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:47, ಯಮಗಂಡ ಕಾಲ 12:26 – 14:01, ಗುಳಿಕ ಕಾಲ 15:37 – 17:12

ಮೇಷ ರಾಶಿ: ಇಂದು ನಿಮ್ಮ ಅನಪೇಕ್ಷಿತ ಹಸ್ತಕ್ಷೇಪದಿಂದಾ ಲಾಭದ ಹಾದಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಎಲ್ಲವನ್ನೂ ನೀವು ನಿಭಾಯಿಸಲು ಸಾಧ್ಯವಾಗದು. ಎಷ್ಟೋ ದಿನಗಳಿಂದ ಅನುಭವಿಸಬೇಕಾದುದನ್ನು ನೀವು ಇಂದು ಅನುಭವಿಸುವಿರಿ. ಇಂದು ಬರುವ ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸೀತು. ನಿಮ್ಮ ಮಾತೇ ನಿಮಗೆ ಮುಳುವಾಗಬಹುದು. ನಿಮಗೆ ಬೇಕಾದ ಯಾವುದನ್ನೂ ಇಂದು ಸುಲಭವಾಗಿ ಪಡೆಯಲಾಗದು.

ವೃಷಭ ರಾಶಿ: ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ತೊಂದರೆಗಳು ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಒಯ್ಯಬಹುದು. ದುರದೃಷ್ಟವನ್ನು ದಾನದಿಂದ ತೊಳೆದುಕೊಳ್ಳುವ ದಾರಿಯು ಗೊತ್ತಾಗಲಿದೆ. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.‌ ಅಪಮಾನದ ಭಯದಿಂದ ಕೆಲಸ ಮಾಡುವಿರಿ. ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿ ನೀವಿರುವಿರಿ.ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ.

ಮಿಥುನ ರಾಶಿ: ಮನೆಯಲ್ಲಿ ಮಾಡಲಾಗದೇ ಮುಂದೂಡಿದ್ದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಈ ದಿನ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ದೂರಾಲೋಚನೆಯಿಂದ ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇರುವುದರಿಂದ ಅಲ್ಲಿಯೇ ಅದು ಮುಕ್ತಾಯವಾಗಬಹುದು. ಅನವಶ್ಯಕ ಮಾತುಗಳಿಗೆ ಅವಕಾಶ ಮಾಡಿಕೊಡವುದು ಬೇಡ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ.

ಕರ್ಕಾಟಕ ರಾಶಿ: ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ದಿನ ನೀವು ಕಠಿಣ ಪರಿಶ್ರಮದ ಅನಂತರ ಅಂದುಕೊಂಡಿದ್ದನ್ನು ಅಲ್ಪವಾದರೂ ಸಾಧಿಸುವಿರಿ. ನೀವು ಇಂದು ಸುಳ್ಳನ್ನಾಡಬೇಕಾಗಿ ಬರವುದು. ಅಶಿಸ್ತಿನಿಂದ ನಿಮಗೆ ಕೋಪ ಬರಲಿದ್ದು ಮನೆಯವರ ಮೇಲೆ ತೋರಿಸುವಿರಿ. ಇಂದಿನ ಘಟನೆಗಳು ಮಾನಸಿಕವಾಗಿ ಕಿರಿಕಿರಿಯನ್ನು ಮಾಡುತ್ತವೆ. ಸಹವಾಸದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಅಸಮತೋಲನ‌ ಕಾಣಿಸಿಕೊಳ್ಳುವುದು.

ಸಿಂಹ ರಾಶಿ: ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಈ ದಿನ ನೀವು ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಯೋಗ್ಯತೆಯನ್ನು ಅರಿತು ಕೆಲವನ್ನು ಕೊಡಿ. ಆಹಾರದಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವಿರಿ. ಪ್ರೇಮದಲ್ಲಿ ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಸ್ವಾಮಿನಿಷ್ಠೆಯನ್ನು ಇಟ್ಟುಕೊಂಡವರಿಗೆ ಆದ್ಯತೆ ಸಿಗಲಿದೆ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ.

ಕನ್ಯಾ ರಾಶಿ: ವಿನಾಕಾರಣ ವಾಗ್ವಾದವನ್ನು ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನೀವು ಈ ದಿನ ಕೆಲಸದ ಸ್ಥಳದಲ್ಲಿ ಕೊಪವನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ವೈದ್ಯಕೀಯ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುವ ಯೋಜನೆ ಇರುವುದು. ಹಣಕಾಸಿನ ವಿಚಾರದಲ್ಲಿ ನೀವು ದಂಡ ತೆರಬೇಕಾದೀತು. ಪ್ರಯಾಣದಲ್ಲಿ ಕೆಲವು ಕಾಲ ತಡೆಯುಂಟಾಗಲಿದ್ದ ಗಲಿಬಿಲಿಗೊಳ್ಳುವಿರಿ. ಅಪರಿಚಿತರ ಮಾತನ್ನು ಕೇಳಿ ಎಲ್ಲ ಕಾರ್ಯವನ್ನೂ ಹಾಳುಮಾಡಿಕೊಳ್ಳುವಿರಿ.

ತುಲಾ ರಾಶಿ: ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಸುಖವು ಸಿಗುವ ಸೂಚನೆ ಇರುವುದು. ಕೆಲಸಗಳನ್ನು ಬಹಳ ಸಂಕೀರ್ಣ ಮಾಡಿಕೊಳ್ಳುವಿರಿ. ಸರಳವಾದ ಆಲೋಚನೆಯಿಂದ ನಿಮ್ಮ ಕೆಲಸಗಳು ಸಲೀಸಾಗಬಹುದು. ಅಂಗೈ ಗಾಯಕ್ಕೆ ಕನ್ನಡಿ ನೋಡುವ ಅವಶ್ಯಕತೆ ಇಲ್ಲ. ಬೇಕಾದುದನ್ನು ಅವರಿಗೆ ನೀಡಿ ಖುಷಿಪಡಿಸುವಿರಿ. ಭಕ್ತಿಯಲ್ಲಿ ಏಕಾಗ್ರತೆಯನ್ನು ಸಾಧಿಸಲಾಗದು. ನಿಮ್ಮಿಂದ ಪಾಲಕರಿಗೆ ತೊಂದರೆಯಾಗುವುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ನಿಮಗೆ ಇಷ್ಟವಾದವರ ಜೊತೆ ನಿಮ್ಮ ವಾಯವಿಹಾರ ಮಾಡುವಿರಿ. ಇಂದು ಬಾಯಿ ಚಪಲಕ್ಕೆ ಅಹಿತಕರವಾದ ಆಹಾರವನ್ನು ಸೇವಿಸುವಿರಿ. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಕುಳಿತುಕೊಳ್ಳುವಿರಿ. ಒಳ್ಳೆಯ ಉದ್ದೇಶಕ್ಕೆ ಮಾಡಿದ ಕಾರ್ಯವು ದುರುಪಯೋಗವಾಗಲಿದೆ. ಹಳೆಯ ಮನೆಯ ರಿಪೇರಿ ಕೆಲಸ ಮಾಡುವಿರಿ. ನೂತನ ಉದ್ಯೋಗವನ್ನು ಆರಂಭಿಸಲು ಭಯವಿರುವುದು.

ಧನು ರಾಶಿ: ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಈ ದಿನ ನಿಮಗೆ ವಾಹನ ಮತ್ತು ವಸತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ನಿಮ್ಮ ಹಣವನ್ನು ಪರಿಚಿತರು ಕೇಳಬಹುದು. ನಿಮ್ಮ ಸೌಂದರ್ಯ ನಿಮಗೆ ತೊಂದರೆ ಕೊಡಬಹುದು.

ಮಕರ ರಾಶಿ: ಇಂದು ನೀವು ಕೆಲಸವು ಬೇಕಷ್ಟು ಇದ್ದರೂ ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಂದು ನೀವು ಧೈರ್ಯವನ್ನು ಕಳೆದುಕೊಳ್ಳದೇ ಮುನ್ನಡೆಯಿರಿ. ಕೆಲವು ನಷ್ಟಗಳು ನಿಮ್ಮ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡದು. ಹಣಕಾಸಿನ ವಿಚಾರದಲ್ಲಿ ಕಛೇರಿಯಲ್ಲಿ ಕಲಹವಾದೀತು. ದಾಖಲೆಗಳನ್ನು ಸರಿಯಾಗಿ ಇಡಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ಒಪ್ಪದೇ ಮುಂದೂಡುವಿರಿ.

ಕುಂಭ ರಾಶಿ: ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಇಂದು ನೀವು ಹಣಕಾಸಿನ ವ್ಯವಹಾರಕ್ಕೆ ವಾದ ಮಾಡುವ ಹಾಗೆ ಆಗಬಹುದು. ನಿಮ್ಮ ಕಾರ್ಯಕ್ರಮಗಳು ಎಲ್ಲವೂ ವ್ಯತ್ಯಾಸವಾಗಲಿದೆ. ಯಾರನ್ನೂ ಸಹಿಸಿಕೊಳ್ಳುವ ಸ್ಥಿತಿ ಇರದು. ಸಂಪನ್ಮೂಲವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸಂಕುಚಿತ ಭಾವವು ಇಷ್ಟವಾಗದು. ಅವರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ‌. ಅಕಾಲಿಕ ಭೋಜನ ಅತಿಯಾಗುವುದು.

ಮೀನ ರಾಶಿ: ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿಕೊಳ್ಳದೇ ದಿನವನ್ನು ಕಳೆಯುವಿರಿ. ಇಂದು ನಿಮ್ಮ ಸಮಯವು ಸದುಪಯೋಗವಾಗಿದೆ ಎಂದು ಅನ್ನಿಸಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆದುಕೊಳ್ಳಬಹುದು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಅಧಿಕ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.

ಲೋಹಿತ್ ಹೆಬ್ಬಾರ್-8762924271 (what’s app only)

Source link

ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು: ರಾಜೀವ್ ಗೌಡ ಬೆಂಬಲಿಗನಿಗೆ ಧರ್ಮದೇಟು – Kannada News | Fighting Between Congress Workers In Chikkaballapur

ಚಿಕ್ಕಬಳ್ಳಾಪುರ, (ಜುಲೈ 25): ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಘಟನ್ ಸೃಜನ್ ಅಭಿಯಾನದ ಸಭೆಯಲ್ಲಿ AICC ವೀಕ್ಷಕರ ಮುಂದೆಯೇ ಮಾಜಿ ಸಚಿವ ಶಾಸಕ ಡಾ. ಎಂ ಸಿ ಸುಧಾಕರ್ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ರಾಜೀವ್ ಗೌಡ ಬೆಂಬಲಿಗರು ನಡುವೆ ಗಲಾಟೆಯಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳೊ ಹಂತಕ್ಕೆ ಹೋಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಸಂಬಂಧ ಎಐಸಿಸಿ ವತಿಯಿಂದ ಸಂಘಟನೆ ಸೃಜನ್ ಅಭಿಯಾನದ ಮೂಲಕ ನೂತನ ಜಿಲ್ಲಾಧ್ಯಕ್ಷರ ನೇಮಕಾತಿಗೆ ಅಭಿಪ್ರಾಯ ಸಂಗ್ರಹ ಸಭೆಯನ್ನ ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ ಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ರಾಜೀವ್ ಗೌಡ ಬದಲು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟ ಆಂಜಿನಪ್ಪನವರನ್ನು ಕರೆದು ವಿಕ್ಷಕರು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ರಾಜೀವ್ ಗೌಡ ಬೆಂಬಲಿರು, ಮೊದಲು ರಾಜೀವ್ ಗೌಡನನ್ನು ಕರೆಯಬೇಕಿತ್ತು ಎಂದು ವೀಕ್ಷಕರ ವಿರುದ್ದ ಘೋಷಣೆ ಕೂಗಿದ್ದಾರೆ. ಇದೆ ಸಂದರ್ಭದಲ್ಲಿ ರಾಜೀವ್ ಗೌಡ ಜೋರು ಧ್ವನಿಯಲ್ಲಿ ಟೇಬಲ್ ಗುದ್ದಿದ್ದಾನೆ, ಇದ್ರಿಂದ ಹೊರ ಹೋಗಿದ್ದ ಮಾಜಿ ಸಚಿವ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಎಂ ಸಿ ಸುಧಾಕರ್, ಮತ್ತೆ ವಾಪಾಸ್ ಬಂದು ಗಲಾಟೆ ಮಾಡದಂತೆ ತಾಕೀತು ಮಾಡಿದ್ದಾರೆ.
ಈ ವೇಳೆ ರಾಜೀವ್ ಗೌಡ ಬೆಂಬಲಿಗನೊರ್ವ, ಶಾಸಕ ಹಾಗೂ ಮಾಜಿ ಸಚಿವ ಡಾ.ಎಂ.ಸಿ. ಸುಧಾಕರ್ ವಿರುದ್ದ ಕೈ ಬೆರಳು ತೋರಿಸಿ ಅವಾಚ್ಯ ಪದ ಬಳಿಸಿದ್ದಾನೆ ಎನ್ನಲಾಗಿದೆ. ಇದ್ರಿಂದ ಕೆರಳಿದ ಎಂ.ಸಿ.ಸುಧಾಕರ್ ಬೆಂಬಲಿಗರು, ರಾಜೀವ್ ಗೌಡ ಬೆಂಬಲಿಗನ ಮೇಲೆ ಮುಗಿಬಿದ್ದು,ಧರ್ಮದೇಟು ನೀಡಿದ್ದಾರೆ.

Source link

ಬಿಹಾರದಲ್ಲಿ ಲಾಲುಪ್ರಸಾದ್ ಮಗ ತೇಜ್ ಪ್ರತಾಪ್ ಯಾದವ್ ಬಂಧನ; ರಹಸ್ಯ ಸ್ಥಳಕ್ಕೆ ಶಿಫ್ಟ್? – Kannada News | Bihar Former Minister Tej Pratap Yadav arrested hours after joining students protest in Patna

ಪಾಟ್ನಾ, ಜುಲೈ 25: ಜನಶಕ್ತಿ ಜನತಾ ದಳ (JJD) ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರನ್ನು ಪಾಟ್ನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಾಟ್ನಾದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಪಾಟ್ನಾದ ಗಾಂಧಿ ಮೈದಾನದ ಬಳಿಯ ರಾಮ್ ಗುಲಾಮ್ ಚೌಕ್‌ನಲ್ಲಿ ‘ನೀಟ್’ ಪೇಪರ್ ಲೀಕ್ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ತೇಜ್ ಪ್ರತಾಪ್ ಯಾದವ್ ಬೆಂಬಲ ಸೂಚಿಸಿ, ವಿದ್ಯಾರ್ಥಿಗಳೊಂದಿಗೆ ಧರಣಿಯಲ್ಲಿ ಕುಳಿತಿದ್ದರು.

ಆ ಪ್ರತಿಭಟನೆಯ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಅಲ್ಲಿಂದ ತೆರವುಗೊಳಿಸಿದ ನಂತರ, ನಗರದ ಶಾಪಿಂಗ್ ಮಾಲ್ ಒಂದರಲ್ಲಿದ್ದ ತೇಜ್ ಪ್ರತಾಪ್ ಅವರನ್ನು ವಶಕ್ಕೆ ಪಡೆದು, ಪಾಟ್ನಾ ಎಸ್​ಪಿ ನೇತೃತ್ವದ ಪೊಲೀಸ್ ತಂಡವು ಬಿಗಿ ಭದ್ರತೆಯ ನಡುವೆ ತಮ್ಮ ಅಧಿಕೃತ ವಾಹನದಲ್ಲಿ ಕರೆದೊಯ್ದಿದೆ.

ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

ಈ ವೇಳೆ ಪೋಲಿಸ್ ವಾಹನದ ಬಾಗಿಲನ್ನು ಹಿಡಿದು ನಿಂತು ಮಾತನಾಡಿದ ತೇಜ್ ಪ್ರತಾಪ್ ಯಾದವ್, “ನಾವು ವಿದ್ಯಾರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ಅವರ ಹಕ್ಕುಗಳಿಗಾಗಿ ಅಗತ್ಯಬಿದ್ದರೆ ಜೀವ ನೀಡಲು ನಾನು ಸಿದ್ಧ” ಎಂದು ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ತೇಜ್ ಪ್ರತಾಪ್, “ಈ ರಾಜೀನಾಮೆ ತೀರಾ ಮುಂಚೆಯೇ ಆಗಬೇಕಿತ್ತು. ಆದರೆ ಕೇವಲ ಒಬ್ಬ ಸಚಿವರ ರಾಜೀನಾಮೆಯಿಂದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಗುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ಪ್ರತಿಭಟನೆ ಅಂತ್ಯ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ತೇಜ್ ಪ್ರತಾಪ್ ಅವರ ವಶಕ್ಕೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇಂದು ಬೆಳಗ್ಗೆ ಗಾಂಧಿ ಮೈದಾನದ ಬಳಿಯ ರಾಮ್ ಗುಲಾಮ್ ಚೌಕ್‌ನಲ್ಲಿ ನೀಟ್ ಪೇಪರ್ ಲೀಕ್ ಕುರಿತು ನ್ಯಾಯಯುತ ತನಿಖೆಗೆ ಆಗ್ರಹಿಸಿ ನಡೆಯುತ್ತಿದ್ದ ಧರಣಿಯಲ್ಲಿ ತೇಜ್ ಪ್ರತಾಪ್ ಭಾಗವಹಿಸಿದ್ದರು. ಆ ವೇಳೆ ಪ್ರತಿಭಟನೆಯ ಸ್ಥಳದಲ್ಲೂ ಅವರನ್ನು ಸ್ವಲ್ಪ ಸಮಯ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಅವರನ್ನು ರಹಸ್ಯವಾದ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ನಾಳೆಯೇ ನಡೆಯಲಿದೆ ಭಾರತ- ಜಿಂಬಾಬ್ವೆ ನಡುವಿನ ಕೊನೆಯ ಟಿ20 ಪಂದ್ಯ – Kannada News | India vs Zimbabwe 3rd T20: Clean Sweep Bid, Date, Time and Live Stream Info

ಭಾರತ ಮತ್ತು ಜಿಂಬಾಬ್ವೆ (India vs Zimbabwe) ನಡುವೆ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 90 ರನ್​ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ, ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಾಗಿ ಉಭಯ ತಂಡಗಳ ನಡುವೆ ನಡೆಯಲಿರುವ ಮೂರನೇ ಟಿ20 ಪಂದ್ಯವು ಟೀಂ ಇಂಡಿಯಾಕ್ಕೆ ಔಪಚಾರಿಕವಾಗಿರಲಿದೆ. ಆದಾಗ್ಯೂ ಕಳೆದೆರಡು ಸರಣಿಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದ ಟೀಂ ಇಂಡಿಯಾ, ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಆತಿಥೇಯರನ್ನು ಕ್ಲೀನ್​ಸ್ವೀಪ್ ಮಾಡುವ ಗುರಿ ಹೊಂದಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಜುಲೈ 26 ರ ಭಾನುವಾರದಂದು ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 4:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 4 ಗಂಟೆಗೆ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯವನ್ನು ನಾನು ಟಿವಿಯಲ್ಲಿ ಹೇಗೆ ನೋಡಬಹುದು?

ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಟಿ20 ಪಂದ್ಯವನ್ನು ನೀವು Unite8 ಸ್ಪೋರ್ಟ್ಸ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಮೊಬೈಲ್​ನಲ್ಲಿ FanCode ಅಪ್ಲಿಕೇಶನ್ ಬಳಸಿ ವೀಕ್ಷಿಸಬಹುದು.

IND vs ZIM: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಉಭಯ ತಂಡಗಳು

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಜಿಂಬಾಬ್ವೆ ತಂಡ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮನಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರ್ವಾ, ನ್ಯೂಮನ್ ನ್ಯಾಮುರಿ, ಮಿಲ್ಟನ್ ಶುಂಬಾ, ಮಿಲ್ಟನ್ ಶುಂಬಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೀಕ್ ಆಯ್ತು ‘ರಾಮಾಯಣ’ ಸಿನಿಮಾ ಟ್ರೈಲರ್, ಸಿನಿಪ್ರಿಯರು ಹೇಳಿದ್ದೇನು? – Kannada News | Ramayana movie trailer leaked online, fans demand official release

ರಾಮಾಯಣ’ (Ramayana) ಭಾರತದ ಈ ವರೆಗಿನ ಅತಿ ಹೆಚ್ಚು ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಅನ್ನು ವಿಶ್ವ ಮಟ್ಟದಲ್ಲಿ ಬಲು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ರಣ್​​ಬೀರ್ ಕಪೂರ್, ಯಶ್ ಹಾಗೂ ಇಡೀ ಚಿತ್ರತಂಡ ವಿದೇಶಗಳಲ್ಲಿ ಭರ್ಜರಿಯಾಗಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾಮಿಕಾನ್​​ನಲ್ಲಿ ಸಹ ಚಿತ್ರತಂಡ ಭಾಗವಹಿಸಿತ್ತು. ಕಾಮಿಕಾನ್​​ನಲ್ಲಿ ಸಿನಿಮಾದ ಅನ್ ರಿಲೀಸ್ಡ್ ಟ್ರೈಲರ್ ಪ್ರದರ್ಶಿಸಲಾಯ್ತು. ಆದರೆ ಇದೀಗ ಆನ್​​ಲೈನ್​​​ನಲ್ಲಿ ಟ್ರೈಲರ್ ಲೀಕ್ ಆಗಿದೆ.

‘ರಾಮಾಯಣ ಪಾರ್ಟ್ 1’ ಟ್ರೇಲರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನೊಳಗೊಂಡ ದೃಶ್ಯಗಳು ತುಂಡು ತುಂಡಾಗಿ ಹಲವಾರು ಬಾರಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲ ನೆಟ್ಟಿಗರು ಈ ವರೆಗೆ ಲೀಕ್ ಆಗಿರುವ ವಿಡಿಯೋಗಳನ್ನೆಲ್ಲ ಸಂಪಾದಿಸಿ ಎಲ್ಲ ಬಿಡಿ ದೃಶ್ಯಗಳನ್ನು ಜೋಡಿಸಿ ಪೂರ್ಣ ಟ್ರೈಲರ್ ಅನ್ನೇ ಮಾಡಿ ಹಂಚಿಕೊಂಡಿದ್ದಾರೆ.

ಜುಲೈ 18 ರಂದು ಹೊಸ ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿ ರಾಮಾಯಣದ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು, ಅದರ ನಂತರ ಅದರ ಕೆಲವು ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಕಾಮಿಕ್-ಕಾನ್‌ನಲ್ಲಿ ಪ್ರದರ್ಶನಗೊಂಡ ನಂತರವೂ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಹರಿದಾಡಿದವು. ಅಂದಿನಿಂದ, ಎಕ್ಸ್ ಬಳಕೆದಾರರೊಬ್ಬರು ಸೋರಿಕೆಯಾದ ಕ್ಲಿಪ್‌ಗಳನ್ನು ಒಟ್ಟುಗೂಡಿಸಿ 2 ನಿಮಿಷಗಳ ಟ್ರೇಲರ್ ಮಾಡಿದ್ದಾರೆ. ಅಂತಿಮ ಟ್ರೇಲರ್ ಹೀಗೆಯೇ ಇರುತ್ತದೆಯೇ ಎಂಬುದು ತಿಳಿದಿಲ್ಲವಾದರೂ, ಕೆಲವು ಅಭಿಮಾನಿಗಳು ಈಗ ನೆಟ್ಟಿಗ ಮಾಡಿರುವ ಟ್ರೈಲರ್ ನೋಡಿ ಪ್ರಭಾವಿತರಾಗಿದ್ದಾರೆ. ಬೇಗನೆ ಟ್ರೈಲರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

‘ರಾಮಾಯಣ’ ಸಿನಿಮಾದ ಟ್ರೈಲ್ ಮೊನ್ನೆ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಟ್ರೈಲರ್ ಬಿಡುಗಡೆ ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳ ಮೇಲೆ ಆದ ಹಲ್ಲೆಯ ಕಾರಣಕ್ಕೆ ಟ್ರೈಲರ್ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗಿತ್ತು. ಆದರೆ ಸಿನಿಮಾದ ನಿರ್ಮಾಪಕ ಹಂಚಿಕೊಂಡಿದ್ದ ಪೋಸ್ಟ್​​​ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಉಲ್ಲೇಖ ಇರಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಟ್ರೈಲರ್ ಬಿಡುಗಡೆ ಮುಂದೂಡಿರುವುದಾಗಿ ಮಾತ್ರವೇ ಇತ್ತು.

‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್​​ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತೀಶ್ ತಿವಾರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಪೊಲೀಸರಿಂದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್ – Kannada News | Delhi Police blocked over 400 Pakistan linked social media handles for spreading fake videos over protest

ನವದೆಹಲಿ, ಜುಲೈ 25: ದೆಹಲಿಯಲ್ಲಿ ನಡೆದ ಸಿಜೆಪಿ (CJP) ಪ್ರತಿಭಟನೆಯ ಬಗ್ಗೆ ಸುಳ್ಳು ಮಾಹಿತಿ ಹಾಗೂ ವದಂತಿಗಳನ್ನು ಹರಡಲು ಎಐ ನಿರ್ಮಿತ ವಿಡಿಯೋಗಳು, ಡೀಪ್‌ಫೇಕ್‌ಗಳು ಮತ್ತು ನಕಲಿ ಪೋಸ್ಟ್‌ಗಳನ್ನು ಒಳಗೊಂಡ ಸಂಘಟಿತ ಅಪಪ್ರಚಾರ ನಡೆಸಲಾಗುತ್ತಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಪಿತೂರಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳನ್ನು ಗುರುತಿಸಿ ಬ್ಲಾಕ್ ಮಾಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೊಲೀಸರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ದಾರಿ ತಪ್ಪಿಸುವ ಮತ್ತು ಸುಳ್ಳು ಮಾಹಿತಿಯನ್ನು ಹರಡುವ ಹಲವು ಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ. ಯಾವುದೇ ಪೋಸ್ಟ್‌ಗಳು, ವಿಡಿಯೋಗಳು ಮತ್ತು ಫೋಟೋಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ನಕಲಿ ಮತ್ತು ದಾರಿ ತಪ್ಪಿಸುವ ವಿಷಯಗಳನ್ನು ಹರಡುವಲ್ಲಿ ಪಾಕಿಸ್ತಾನ ಮೂಲದ ಹಲವಾರು ಸಾಮಾಜಿಕ ಜಾಲತಾಣ ಖಾತೆಗಳು ಭಾಗಿಯಾಗಿರುವುದು ಕಂಡುಬಂದಿದೆ. ಇಂತಹ 400ಕ್ಕೂ ಹೆಚ್ಚು ಖಾತೆಗಳನ್ನು ಗುರುತಿಸಿ ಬ್ಲಾಕ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಂಗಿನ ಹೂ ದೇಹದ ಶಕ್ತಿಯನ್ನು ದ್ವಿಗುಣಗೊಳಿಸುವ ಅಪರೂಪದ ಸೂಪರ್‌ಫುಡ್ ! – Kannada News | Don’t Throw Away Coconut Flower! Discover Its Amazing Health Benefits

ತೆಂಗಿನಕಾಯಿ ಒಡೆದಾಗ ಅದರೊಳಗೆ ಕೆಲವೊಮ್ಮೆ ಕಾಣಿಸಿಕೊಳ್ಳುವ ಬಿಳಿ, ಮೃದುವಾದ ಸ್ಪಂಜಿನಂತಿರುವ ಭಾಗವನ್ನು ತೆಂಗಿನ ಹೂ (Coconut Flower / Coconut Apple / Sprouted Coconut) ಎಂದು ಕರೆಯಲಾಗುತ್ತದೆ. ಹೆಚ್ಚಿನವರು ಇದನ್ನು ಎಸೆದುಬಿಡುತ್ತಾರೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ, ಇದು ಶಕ್ತಿ, ಫೈಬರ್, ಆರೋಗ್ಯಕರ ಕೊಬ್ಬುಗಳು ಹಾಗೂ ಹಲವು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಅಪರೂಪದ ಆಹಾರವಾಗಿದೆ. ಆದರೆ ಇದರ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಇನ್ನೂ ಸೀಮಿತವಾಗಿದ್ದು, ಇದನ್ನು ಯಾವುದೇ ರೋಗಕ್ಕೆ ಔಷಧಿ ಎಂದು ಪರಿಗಣಿಸಬಾರದು. ಸಮತೋಲಿತ ಆಹಾರದ ಭಾಗವಾಗಿ ಮಿತ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ನೆರವಾಗಬಹುದು.

ತೆಂಗಿನ ಹೂ ಎಂದರೇನು?

ಸಾಮಾನ್ಯವಾಗಿ ತೆಂಗಿನಕಾಯಿ ಮೊಳಕೆಯೊಡೆಯಲು ಆರಂಭಿಸಿದಾಗ ಅದರ ಒಳಭಾಗದಲ್ಲಿ ರೂಪುಗೊಳ್ಳುವ ಸ್ಪಂಜಿನಂತಹ ಬಿಳಿ ಪದಾರ್ಥವೇ ತೆಂಗಿನ ಹೂ. ಇದು ಮೊಳಕೆಯ ಬೆಳವಣಿಗೆಗೆ ಶಕ್ತಿಯನ್ನು ಒದಗಿಸುವ ನೈಸರ್ಗಿಕ ಆಹಾರ ಸಂಗ್ರಹವಾಗಿದೆ.

ತೆಂಗಿನ ಹೂ ಸೇವಿಸುವುದರಿಂದ ದೊರೆಯಬಹುದಾದ ಆರೋಗ್ಯ ಪ್ರಯೋಜನಗಳು:

ಶಕ್ತಿಯನ್ನು ಹೆಚ್ಚಿಸಲು ಸಹಕಾರಿ: ತೆಂಗಿನ ಹೂದಲ್ಲಿ ಕಾರ್ಬೋಹೈಡ್ರೇಟ್, ಆರೋಗ್ಯಕರ ಕೊಬ್ಬುಗಳು ಹಾಗೂ ಸ್ವಲ್ಪ ಪ್ರಮಾಣದ ಪ್ರೋಟೀನ್ ಇರುತ್ತವೆ. ಇವು ದೇಹಕ್ಕೆ ಶಕ್ತಿ ನೀಡಲು ನೆರವಾಗಬಹುದು.

ಜೀರ್ಣಕ್ರಿಯೆಗೆ ನೆರವು: ಇದರಲ್ಲಿರುವ ಫೈಬರ್ ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇದರಿಂದ, ಮಲಬದ್ಧತೆ ಕಡಿಮೆಯಾಗಲು ನೆರವಾಗಬಹುದು, ಜೀರ್ಣಕ್ರಿಯೆ ಸುಧಾರಿಸಬಹುದು, ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಉಳಿಯಬಹುದು

ರೋಗನಿರೋಧಕ ಶಕ್ತಿಗೆ ಬೆಂಬಲ: ತೆಂಗಿನ ಹೂದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ದೇಹದ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡಬಹುದು. ಇದರಲ್ಲಿರುವ ಕೆಲವು ಖನಿಜಾಂಶಗಳು ಹಾಗೂ ಪೋಷಕಾಂಶಗಳು ರೋಗನಿರೋಧಕ ವ್ಯವಸ್ಥೆಯ ಆರೋಗ್ಯಕ್ಕೆ ಸಹಕಾರಿಯಾಗಬಹುದು.

ಹೃದಯದ ಆರೋಗ್ಯಕ್ಕೆ ನೆರವಾಗಬಹುದು: ತೆಂಗಿನ ಹೂದಲ್ಲಿ ಮಧ್ಯಮ ಸರಪಳಿಯ ಕೊಬ್ಬು ಆಮ್ಲಗಳು (Medium Chain Triglycerides – MCTs) ಇರುತ್ತವೆ. ಇವು ದೇಹದಲ್ಲಿ ಶಕ್ತಿಯಾಗಿ ಬಳಸಲ್ಪಡುವ ಸಾಧ್ಯತೆ ಹೆಚ್ಚು. ಆದರೆ ಹೃದಯದ ಆರೋಗ್ಯದ ಮೇಲೆ ಇದರ ಪರಿಣಾಮ ಕುರಿತು ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳು ಅಗತ್ಯವಿವೆ.

ತೂಕ ನಿಯಂತ್ರಣಕ್ಕೆ ಸಹಕಾರಿ: ಫೈಬರ್ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಇರಬಹುದು. ಇದರಿಂದ ಅನಗತ್ಯ ತಿಂಡಿ ಸೇವನೆ ಕಡಿಮೆಯಾಗಲು ನೆರವಾಗಬಹುದು.

ಚರ್ಮ ಮತ್ತು ಕೂದಲಿನ ಆರೋಗ್ಯ: ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳು ಚರ್ಮದ ಆರೋಗ್ಯ ಕಾಪಾಡಲು ಹಾಗೂ ಕೂದಲಿನ ಪೋಷಣೆಗೆ ನೆರವಾಗಬಹುದು.

ಮಧುಮೇಹ ಇರುವವರು ಸೇವಿಸಬಹುದೇ?

ತೆಂಗಿನ ಹೂನಲ್ಲಿ ಸಾಮಾನ್ಯ ಎಳನೀರಿಗಿಂತ ಹೆಚ್ಚು ಕಾರ್ಬೋಹೈಡ್ರೇಟ್ ಇರಬಹುದು. ಆದ್ದರಿಂದ ಮಧುಮೇಹ ಇರುವವರು ಇದನ್ನು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇದು ಮಧುಮೇಹಕ್ಕೆ ಔಷಧಿ ಅಲ್ಲ. ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

ಯಾರು ಎಚ್ಚರಿಕೆಯಿಂದ ಸೇವಿಸಬೇಕು?

  • ಮಧುಮೇಹ ರೋಗಿಗಳು
  • ತೂಕ ಇಳಿಸುವ ವಿಶೇಷ ಡಯಟ್ ಅನುಸರಿಸುವವರು
  • ಮೂತ್ರಪಿಂಡದ ಗಂಭೀರ ಸಮಸ್ಯೆಯಿರುವವರು
  • ತೆಂಗಿನಕಾಯಿಗೆ ಅಲರ್ಜಿ ಇರುವವರು

ತೆಂಗಿನ ಹೂವನ್ನು ಹೇಗೆ ಸೇವಿಸಬೇಕು?

  • ನೇರವಾಗಿ ತಿನ್ನಬಹುದು.
  • ಬೆಳಗಿನ ಉಪಾಹಾರದೊಂದಿಗೆ ಸೇವಿಸಬಹುದು.
  • ಹಣ್ಣುಗಳ ಸಲಾಡ್‌ಗೆ ಸೇರಿಸಬಹುದು.
  • ಸ್ಮೂದಿ ಅಥವಾ ಮಿಲ್ಕ್‌ಶೇಕ್‌ನಲ್ಲಿ ಸೇರಿಸಬಹುದು.
  • ಒಮ್ಮೆಕ್ಕೆ ಸುಮಾರು 30–50 ಗ್ರಾಂ ಪ್ರಮಾಣ ಸಾಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ಚಿತ್ರದಲ್ಲಿ ಕೆಲಸ ಮಾಡಿದ್ದು ನನ್ನ ಜೀವನದ ದೊಡ್ಡ ತಪ್ಪು’: ಪ್ರಭಾಸ್ ಸಿನಿಮಾ ಬಗ್ಗೆ ಬೇಸರ – Kannada News | Manoj Muntashir said working in Adipursh movie is biggest mistake of his life

ದೊಡ್ಡ ಬಜೆಟ್​​, ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ಕಾದು ಕುಳಿತಿರುವ ಹಲವಾರು ನಟ-ನಟಿಯರು, ತಂತ್ರಜ್ಞರು ಇದ್ದಾರೆ. ಆದರೆ ಇಲ್ಲೊಬ್ಬರು, ಅತಿ ದೊಡ್ಡ ಬಜೆಟ್​​ನ, ದೊಡ್ಡ ನಿರ್ಮಾಣ ಸಂಸ್ಥೆಯ ಮತ್ತು ಪ್ರಭಾಸ್ ಅಂಥಹಾ ದೊಡ್ಡ ಸ್ಟಾರ್ ನಟನ ಸಿನಿಮಾನಲ್ಲಿ ಕೆಲಸ ಮಾಡಿ, ಈಗ ಆ ಸಿನಿಮಾನಲ್ಲಿ ಕೆಲಸ ಮಾಡಿದ್ದು ನಾನು ಮಾಡಿದ ದೊಡ್ಡ ತಪ್ಪು, ಆ ಸಿನಿಮಾನಲ್ಲಿ ನಾನ ಮಾಡಿದ ಕೆಲಸಕ್ಕೆ ನಾಚಿಕೆ ಆಗುತ್ತಿದೆ’ ಎಂದಿದ್ದಾರೆ.

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ 2023 ರಲ್ಲಿ ರಿಲೀಸ್ ಆಗಿತ್ತು. ರಾಮಾಯಣ ಕತೆ ಆಧರಿಸಿದ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಫ್ಲಾಫ್ ಆಯ್ತು. ಸಿನಿಮಾ ನೋಡಿದವರು ಇನ್ನಿಲ್ಲದಂತೆ ಟೀಕೆ ಮಾಡಿದರು. ಸಿನಿಮಾದ ವಿರುದ್ಧ ಹಲವಾರು ಕಡೆ ದೂರುಗಳು ದಾಖಲಾದವು. ನ್ಯಾಯಾಲಯ ಸಹ ಸಿನಿಮಾ ಅನ್ನು ಟೀಕೆ ಮಾಡಿತು. ವಿಶೇಷವಾಗಿ ಸಿನಿಮಾದ ಸಂಭಾಷಣೆಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಆ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮನೋಜ್ ಮುಂತಶೀರ್, ‘ಆ ಸಿನಿಮಾನಲ್ಲಿ ಕೆಲಸ ಮಾಡಿದ್ದು ನನ್ನ ಜೀವನದ ದೊಡ್ಡ ತಪ್ಪು’ ಎಂದಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಮನೋಜ್, ‘ಆದಿಪುರುಷ್’ ಬಿಡುಗಡೆಯಾಗಲು ಸುಮಾರು ಆರು ತಿಂಗಳ ಮುಂಚೆಯೇ, ಜನರು ನಿರ್ಮಾಪಕರನ್ನು ಪ್ರಶ್ನಿಸಲು ಮತ್ತು ಈ ಪ್ರಾಜೆಕ್ಟ್ ಅನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದರು ಎಂಬುದನ್ನು ಅವರು ನೆನಪಿಸಿಕೊಂಡರು. ಈ ಆಕ್ರೋಶದ ಮುಖವಾಗಿ ತಾನೇ ನಿಲ್ಲಬೇಕಾಗುತ್ತದೆ ಎಂದು ನನ್ನ ಪತ್ನಿ ಭಯಪಟ್ಟಿದ್ದರು. ಹಿಂದಿನದನ್ನು ಸಿಂಹಾವಲೋಕನ ಮಾಡುವಾಗ, ತಾನು ಪತ್ನಿಯ ಮಾತನ್ನು ಕೇಳಲಿಲ್ಲವಲ್ಲ ಎಂದು ಪಶ್ಚಾತಾಪಪಡುವುದಾಗಿ ಮನೋಜ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಜೊತೆಗಿರುವ ಆ ಒಬ್ಬರನ್ನು ಕದಿಯುವಾಸೆ ನಟಿ ಪೂಜಾ ಹೆಗ್ಡೆಗೆ

‘ಆದಿಪುರುಷ್’ ಸಿನಿಮಾಕ್ಕೆ ವ್ಯಕ್ತವಾದ ಟೀಕೆಯ ಬಗ್ಗೆ ಮಾತನಾಡಿದ ಮನೋಜ್, ‘ಮೊದಲಿಗೆ ನಾನು ಸ್ವಲ್ಪ ನಿರ್ಲಕ್ಷ್ಯದಿಂದ ವರ್ತಿಸಿದೆ. ಅರ್ಥಮಾಡಿಕೊಳ್ಳಲು ನನಗೆ ಎರಡು ದಿನಗಳು ಬೇಕಾಯಿತು. ಆದಿಪುರುಷ್ ನನ್ನ ಜೀವನದ ಅತ್ಯಂತ ದೊಡ್ಡ ತಪ್ಪು, ಮತ್ತು ಆ ಚಿತ್ರವನ್ನು ಸಮರ್ಥಿಸಿದ್ದು ಅದಕ್ಕಿಂತಲೂ ದೊಡ್ಡ ತಪ್ಪು. ಚಿತ್ರದ ಸುತ್ತ ಏನೆಲ್ಲಾ ನಡೆಯಿತೋ, ಅದಕ್ಕೆ ನನಗೆ ಬಹಳ ನಾಚಿಕೆಯಾಗುತ್ತದೆ ಮತ್ತು ನಡೆದ ಎಲ್ಲ ಘಟನೆಗಳಿಗಾಗಿ ನಾನು ಈ ದೇಶದ ಕ್ಷಮೆ ಯಾಚಿಸುತ್ತೇನೆ. ಭಗವಾನ್ ಶ್ರೀರಾಮ ಮತ್ತು ಭಗವಾನ್ ಹನುಮಂತನಿಗೆ ತಾನು ನ್ಯಾಯ ಒದಗಿಸಲು ವಿಫಲನಾಗಿರುವುದಕ್ಕೆ ತನಗೆ ನಿರಾಶೆಯಾಗಿದೆ’ ಎಂದು ಒಪ್ಪಿಕೊಂಡಿದ್ದಾರೆ.

‘ಆದಿಪುರುಷ್’ ಸಿನಿಮಾವನ್ನು ಓಂ ರಾವತ್ ನಿರ್ದೇಶಿಸಿದ್ದರು. ಸಿನಿಮಾಕ್ಕೆ ಭೂಷಣ್ ಕುಮಾರ್ ಹಾಗೂ ಇತರರು ಬಂಡವಾಳ ಹೂಡಿದ್ದರು. ಸಿನಿಮಾನಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ನಟಿಸಿದ್ದರು. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಸಿನಿಮಾ ಇನ್ನಿಲ್ಲದಂತೆ ಮುಗ್ಗರಿಸಿತು. ಸಿನಿಮಾದ ವಿಎಫ್​​ಎಕ್ಸ್ ಅತ್ಯಂತ ಕೆಟ್ಟದಾಗಿತ್ತು. ರಾಮನ ಪಾತ್ರಕ್ಕೆ ಪ್ರಭಾಸ್ ಸೂಟ್ ಆಗಲಿಲ್ಲ. ಸಂಭಾಷಣೆಯ ಬಗ್ಗೆಯೂ ಸಹ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಒಟ್ಟಾರೆ ಸಿನಿಮಾ ಸೋತಿತು. ಈಗ ಬಾಲಿವುಡ್​​ನಲ್ಲಿ ಮತ್ತೊಂದು ರಾಮಾಯಣ ಆಧರಿಸಿದ ಕತೆ ಸಿನಿಮಾ ಆಗಿದ್ದು, ನವೆಂಬರ್​​​ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: ಈ ವಾರ ನಿಮ್ಮ ಪ್ರೀತಿ-ದಾಂಪತ್ಯ ಹೇಗಿರಲಿದೆ? ದ್ವಾದಶ ರಾಶಿಗಳ ಪ್ರೇಮ ಫಲ – Kannada News | Weekly Love Horoscope: Love and Marriage Predictions for All 12 Zodiac Signs This Week

ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Getty images

ಜುಲೈ 26ರಿಂದ ಆಗಷ್ಟ್ 01ರ ತನಕದ ಐದನೇ ವಾರವಾಗಿದ್ದು ಮನಸ್ತಾಪ, ಪರಸ್ಪರ ಪ್ರೀತಿಯ ಕೊರತೆ, ದೂರಪ್ರಯಾಣ, ಅನ್ಯರ ಆಕರ್ಷಣೆ, ಮೌನದಿಂದ ಸಮಸ್ಯೆ ದೂರ ಇವೆಲ್ಲ ಈ ವಾರದ ಪ್ರೇಮ ಭವಿಷ್ಯ.

ಮೇಷ ರಾಶಿ: ​ನಿಮ್ಮ ರಾಶಿಗೆ ಸಪ್ತಮಾಧಿಪತಿಯಾದ ಶುಕ್ರನು ಕನ್ಯಾರಾಶಿಯಲ್ಲಿ ನೀಚಸ್ಥಿತಿಯಲ್ಲಿದ್ದಾನೆ. ಇದರಿಂದಾಗಿ ಪ್ರೇಮಿಗಳಲ್ಲಿ ಮತ್ತು ದಂಪತಿಗಳಲ್ಲಿ ಸಣ್ಣ ವಿಷಯಕ್ಕೂ ಮನಸ್ತಾಪಗಳು ಏರ್ಪಡಬಹುದು. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ನಕಾರಾತ್ಮಕ ಚಿಂತನೆಗಳನ್ನು ಬದಿಗೊತ್ತಿ ತಾಳ್ಮೆಯಿಂದ ವರ್ತಿಸಿದರೆ ವಿಚ್ಛೇದನದಂತಹ ಕಠಿಣ ಪರಿಸ್ಥಿತಿಗಳನ್ನು ತಡೆಯಬಹುದು.

ವೃಷಭ ರಾಶಿ: ​ರಾಶ್ಯಾಧಿಪತಿ ಶುಕ್ರನು ಪಂಚಮದಲ್ಲಿ ನೀಚನಾಗಿದ್ದರೂ, ದಶಮದ ಚಂದ್ರ, ರಾಹು ಹಾಗೂ ಸಪ್ತಮದ ಶುಭ ದೃಷ್ಟಿಯಿಂದ ದಾಂಪತ್ಯದಲ್ಲಿ ಮಿಶ್ರಫಲ. ಹಳೆಯ ಭಿನ್ನಾಭಿಪ್ರಾಯಗಳು ತಿಳಿಯಾಗುವ ಲಕ್ಷಣಗಳಿವೆ. ಪ್ರೇಮಿಗಳಿಗೆ ಕೊಂಚ ಗೊಂದಲಮಯ ವಾತಾವರಣವಿರುತ್ತದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕಾಗಿ ಪರಸ್ಪರ ಗೌರವ ನೀಡುವುದು ಅತ್ಯಗತ್ಯ.

ಮಿಥುನ ರಾಶಿ: ​ಚತುರ್ಥದ ಶುಕ್ರ ಮತ್ತು ಲಗ್ನದ ಬುಧನ ಬಲದಿಂದಾಗಿ ಪ್ರೇಮ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರುವ ಕಾಲ. ಈಗಾಗಲೇ ದಾಂಪತ್ಯದಲ್ಲಿ ಬಿರುಕು ಮೂಡಿದ್ದ ಕುಟುಂಬಗಳಲ್ಲಿ ಹಿರಿಯರ ಮಧ್ಯಸ್ಥಿಕೆಯಿಂದ ರಾಜಿ ಸಂಧಾನ ಏರ್ಪಟ್ಟು, ವಿಚ್ಛೇದನದಂಚಿನಲ್ಲಿದ್ದ ಸಂಬಂಧಗಳು ಚೇತರಿಸಿಕೊಳ್ಳಲಿವೆ.

ಕರ್ಕಾಟಕ ರಾಶಿ: ​ನಿಮ್ಮ ರಾಶಿಯಲ್ಲಿ ರವಿ-ಗುರುಗಳ ಸನ್ನಿಧಾನವಿದ್ದು, ಸಪ್ತಮ ಸ್ಥಾನಕ್ಕೆ ಶುಭದೃಷ್ಟಿ ಬೀಳುತ್ತಿದೆ. ದಾಂಪತ್ಯದಲ್ಲಿ ಅನುರಾಗ ಮತ್ತು ಆತ್ಮೀಕತೆ ವೃದ್ಧಿಯಾಗಲಿದೆ. ಪ್ರೇಮಿಗಳ ನಡುವೆ ನಂಬಿಕೆ ಗಟ್ಟಿಯಾಗಲಿದೆ. ದೀರ್ಘಕಾಲದ ದಾಂಪತ್ಯ ಕಲಹಗಳಿಗೆ ಶಾಶ್ವತ ಪರಿಹಾರ ಸಿಗಲಿದ್ದು, ಪ್ರೇಮ ಸಂಬಂಧಗಳು ವಿವಾಹ ಹಂತಕ್ಕೆ ತಲುಪಲು ಕಾಲ ಅನುಕೂಲವಾಗಿದೆ.

ಸಿಂಹ ರಾಶಿ: ​ನಿಮ್ಮ ರಾಶಿಯಲ್ಲಿ ಕೇತುವಿದ್ದು, ಸಪ್ತಮದಲ್ಲಿ ಚಂದ್ರ-ರಾಹು-ಲಗ್ನ ಸ್ಥಿತವಾಗಿವೆ. ಸಪ್ತಮ ಸ್ಥಾನದ ಮೇಲೆ ಪಾಪಗ್ರಹಗಳ ಪ್ರಭಾವವಿರುವುದರಿಂದ ದಾಂಪತ್ಯದಲ್ಲಿ ಅನಗತ್ಯ ಸಂಶಯ ಮತ್ತು ಅಹಂಕಾರದ ಘರ್ಷಣೆಗಳು ಉಂಟಾಗಬಹುದು. ನ್ಯಾಯಾಲಯದಲ್ಲಿರುವ ವಿಚ್ಛೇದನ ಪ್ರಕರಣಗಳಲ್ಲಿ ತೀವ್ರತೆ ಕಂಡುಬರಬಹುದು. ಕೋಪ ನಿಯಂತ್ರಣ ಅತ್ಯಗತ್ಯ.

ಕನ್ಯಾ ರಾಶಿ: ​ನಿಮ್ಮ ರಾಶಿಯಲ್ಲೇ ಶುಕ್ರನು ನೀಚನಾಗಿದ್ದರೂ, ಸಪ್ತಮದ ಶನಿಯ ಪ್ರಭಾವವಿದೆ. ಪ್ರೇಮ ವ್ಯವಹಾರಗಳಲ್ಲಿ ಭ್ರಮನಿರಸನ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸುವಾಗ ಜಾಗರೂಕರಾಗಿರಿ. ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಸಾರದಲ್ಲಿ ಅಶಾಂತಿ ಉಂಟಾಗದಂತೆ ಎಚ್ಚರವಹಿಸಿ.

ತುಲಾ ರಾಶಿ: ​ರಾಶ್ಯಾಧಿಪತಿ ಶುಕ್ರ ದ್ವಾದಶದಲ್ಲಿದ್ದು, ಸಪ್ತಮದ ಮೇಲೆ ಗುರುವಿನ ಶುಭ ದೃಷ್ಟಿ ಇದೆ. ಪ್ರೇಮಿಗಳಿಗೆ ದೂರದ ಪ್ರಯಾಣ ಹಾಗೂ ಸಂತೋಷದ ಕ್ಷಣಗಳು ಎದುರಾಗಲಿವೆ. ದಾಂಪತ್ಯದಲ್ಲಿದ್ದ ಸಣ್ಣಪುಟ್ಟ ಕಟುಸತ್ಯಗಳು ದೂರವಾಗಿ ಆಕರ್ಷಣೆ ಹೆಚ್ಚಲಿದೆ. ಬಿರುಕು ಬಿಟ್ಟಿದ್ದ ವೈವಾಹಿಕ ಬಾಂಧವ್ಯಗಳು ಮರುಜೀವ ಪಡೆಯಲಿವೆ.

ವೃಶ್ಚಿಕ ರಾಶಿ: ​ಭಾಗ್ಯದ ರವಿ-ಗುರುಗಳ ಬಲದಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಕಂಗೊಳಿಸಲಿದೆ. ನವದಂಪತಿಗಳಿಗೆ ಶುಭ ವಾರ್ತೆ ಲಭಿಸುವ ಯೋಗವಿದೆ. ಪ್ರೇಮಿಗಳ ನಡುವೆ ಆಳವಾದ ತಿಳುವಳಿಕೆ ಮೂಡಲಿದೆ. ಕಾನೂನುತ್ಮಕ ವಿಚ್ಛೇದನಕ್ಕೆ ಕಾಯುತ್ತಿದ್ದವರಿಗೆ ಸೌಹಾರ್ದಯುತವಾದ ಅಂತಿಮ ತೀರ್ಮಾನ ದೊರೆಯಬಹುದು.

ಧನು ರಾಶಿ: ​ಸಪ್ತಮದಲ್ಲಿ ಬುಧನ ಉಪಸ್ಥಿತಿಯಿಂದಾಗಿ ಪ್ರೇಮ ಪ್ರಸಂಗಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಅಷ್ಟಮದ ರವಿ ಮತ್ತು ತೃತೀಯದ ರಾಹು-ಚಂದ್ರರ ಪ್ರಭಾವದಿಂದಾಗಿ ಸಂಗಾತಿಯ ಮನಸ್ಥಿತಿಯಲ್ಲಿ ಏರಿಳಿತ ಕಂಡುಬರಬಹುದು. ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಜಗಳವಾಡುವುದನ್ನು ತಪ್ಪಿಸಿದರೆ ದಾಂಪತ್ಯವು ಶಾಂತಿಯುತವಾಗಿರುತ್ತದೆ.

ಮಕರ ರಾಶಿ: ​ಸಪ್ತಮದಲ್ಲಿ ಉಚ್ಚ ಗುರುವು ಮೂಢ ಸ್ಥಿತಿಯಲ್ಲಿದ್ದರೂ ಬಲ ಹಾಗೂ ರವಿಯ ಸ್ಥಿತಿಯಿಂದಾಗಿ ದಾಂಪತ್ಯದಲ್ಲಿ ಗೌರವ ಮತ್ತು ಬದ್ಧತೆ ಹೆಚ್ಚಲಿದೆ. ವಿವಾಹ ಬಂಧನಕ್ಕೆ ಕಾಲಿಡಲು ಬಯಸುವವರಿಗೆ ಒಳ್ಳೆಯ ಪ್ರಸ್ತಾವನೆಗಳು ಬರಲಿವೆ. ಪ್ರೇಮಿಗಳಲ್ಲಿ ಇದ್ದ ಅನುಮಾನಗಳು ನಿವಾರಣೆಯಾಗಿ ಪ್ರೀತಿ ಗಾಢವಾಗಲಿದೆ.

ಕುಂಭ ರಾಶಿ: ​ನಿಮ್ಮ ರಾಶಿಯಲ್ಲೇ ಲಗ್ನ, ಚಂದ್ರ, ರಾಹು ಇದ್ದು, ಸಪ್ತಮದಲ್ಲಿ ಕೇತು ಇದೆ. ಈ ಗ್ರಹಗತಿಗಳು ವೈವಾಹಿಕ ಜೀವನದಲ್ಲಿ ತೀವ್ರ ಮನಸ್ತಾಪ ಹಾಗೂ ಮಾನಸಿಕ ಅಭದ್ರತೆಯನ್ನು ತರಬಹುದು. ಪ್ರೇಮ ಸಂಬಂಧಗಳಲ್ಲಿ ಬಿರುಕು ಮೂಡುವ ಸನ್ನಿವೇಶಗಳಿವೆ. ವಿಚ್ಛೇದನದ ನಿರ್ಧಾರಗಳನ್ನು ಈ ವಾರ ಮುಂದೂಡುವುದು ಕ್ಷೇಮ.

ಮೀನ ರಾಶಿ: ​ನಿಮ್ಮ ರಾಶಿಯಲ್ಲಿ ಶನಿ ಹಾಗೂ ಸಪ್ತಮದಲ್ಲಿ ನೀಚ ಶುಕ್ರನ ಪ್ರಭಾವವಿದೆ. ದಾಂಪತ್ಯದಲ್ಲಿ ತಾಳ್ಮೆ ಮತ್ತು ಸಹನೆ ಅತ್ಯಗತ್ಯ. ಚಿಕ್ಕ ವಿಷಯಗಳೂ ದೊಡ್ಡದಾಗಿ ಬೆಳೆದು ಕೌಟುಂಬಿಕ ಅಶಾಂತಿಗೆ ಕಾರಣವಾಗಬಹುದು. ಸಂಗಾತಿಯ ಭಾವನೆಗಳಿಗೆ ಬೆಲೆ ನೀಡಿ, ವಾಗ್ಯುದ್ಧದಿಂದ ದೂರವಿದ್ದರೆ ಸಂಸಾರ ನೌಕೆ ಸುಸೂತ್ರವಾಗಿ ಸಾಗಲಿದೆ.

ಲೋಹಿತ್ ಹೆಬ್ಬಾರ್

Source link

Exit mobile version