ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು – Kannada News | Swami Vivekananda’s these words are an inspiration to today’s Gen Z youth

ಸ್ವಾಮಿ ವಿವೇಕಾನಂದರುImage Credit source: Getty Images

ಯುವಶಕ್ತಿ (youth) ತಿರುಗಿ ಬಿದ್ದರೆ ಸಮಾಜದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತವೆ ಎಂಬುದಕ್ಕೆ ಯುವಜನರು ಮತ್ತು ವಿದ್ಯಾರ್ಥಿಗಳು ಜೊತೆ ಸೇರಿ ನೀಟ್‌ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಪ್ರತಿಭಟನೆಯೇ ಸಾಕ್ಷಿ. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರು ಅದೆಷ್ಟೋ ವರ್ಷಗಳ ಮುಂಚೆಯೇ ಯುವಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದರು, ಯುವಶಕ್ತಿಯಿಂದ ದೇಶದ ಬದಲಾವಣೆ ಸಾಧ್ಯ ಎಂದು ನಂಬಿದ್ದರು.  ಇಂದಿನ ಜೆನ್‌ ಝೀ ಯುವಕರು ಭಾರತವನ್ನು ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು, ಜೀವನದಲ್ಲಿ ಉನ್ನತಿಯನ್ನು ಕಾಣಲು ಸ್ವಾಮಿ ವಿವೇಕಾನಂದರ ಈ ಕೆಲವೊಂದು ವಿಚಾರಧಾರೆಗಳನ್ನು, ಮಾತುಗಳನ್ನು ತಪ್ಪದೇ ಪಾಲಿಸಬೇಕು.

ಯುವಜನತೆ ಸ್ವಾಮಿ ವಿವೇಕಾನಂದರ ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು:

ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ: ನಮ್ಮ ಗುರಿ ಮತ್ತು ಆಕಾಂಕ್ಷೆಗಳನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂದು ವಿವೇಕಾನಂದರು ಹೇಳಿದ್ದಾರೆ. ಯುವಕರು ತಮ್ಮ ಗುರಿಗಳನ್ನು ಸಾಧಿಸಲು ತಮ್ಮ ಪ್ರಯತ್ನಗಳಲ್ಲಿ ದೃಢಸಂಕಲ್ಪ ಮತ್ತು ನಿರಂತರವಾಗಿರಬೇಕು ಎಂದು ಅವರು ಒತ್ತಾಯಿಸುತ್ತಿದ್ದರು. ಜೀವನದಲ್ಲಿ ಎಷ್ಟೇ ವೈಫಲ್ಯಗಳು ಎದುರಾದರೂ ಅದನ್ನು ಮೆಟ್ಟಿ ನಿಂತು ಗುರಿ ಮುಟ್ಟುವ ತನಕ ಛಲವನ್ನು ಬಿಡಬಾರದು. ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಯುವಕರು ಯಾವಾಗಲೂ ದೇಶವನ್ನು ಇನ್ನಷ್ಟು ಉತ್ತಮವನ್ನಾಗಿ ಮಾಡಲು, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮಿಸಬೇಕು. ಗುರಿ ಮತ್ತು ಆಕಾಂಕ್ಷೆಗಳನ್ನು ಎಂದಿಗೂ ಬಿಟ್ಟುಕೊಡಬಾರದು. ಅಂದುಕೊಂಡ ಗುರಿಯನ್ನು ಸಾಧಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಚ್ಚರವಾಗಿರಬೇಕು.

ನಿಮ್ಮನ್ನು ದುರ್ಬಲ ಎಂದು ಭಾವಿಸಬೇಡಿ: ನಮ್ಮನ್ನು ನಾವು ದುರ್ಬಲರು ಎಂದುಕೊಳ್ಳುವುದೇ ದೊಡ್ಡ ಪಾಪ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನನ್ನಿಂದ ಸಾಧ್ಯವಿಲ್ಲ, ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಯೋಚಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ, ಅದೇ ರೀತಿ ತಪ್ಪುಗಳು ನಡೆದಾಗ ಅದನ್ನು ಪ್ರಶ್ನಿಸುವ ಧೈರ್ಯ ಇಲ್ಲದಿದ್ದರೆ ದೇಶವನ್ನು ಮುನ್ನಡೆಸಲು ಕೂಡ ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಧೈರ್ಯ ಮತ್ತು ಸಾಮರ್ಥ್ಯಗಳ ಮೇಲೆ ನಂಬಿಕೆ ಇಡಿ, ಯಶಸ್ಸಿಗಾಗಿ ಹೋರಾಡಿ, ಅದೇ ರೀತಿ ನೀಟ್‌ ಪ್ರಶ್ನೆಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಧೈರ್ಯದಿಂದ ಹೋರಾಟ ನಡೆಸಿದಂತೆ, ತಪ್ಪುಗಳು, ದುರಾಡಳಿತದ ವಿರುದ್ಧ ಧ್ವನಿಯನ್ನು ಎತ್ತಿ. ಆಗ ಮಾತ್ರ ಯುವಕರು ಉತ್ತಮ ರಾಷ್ಟ್ರವನ್ನು ನಿರ್ಮಿಸಬಹುದು.

ಸವಾಲುಗಳನ್ನು ಎದುರಿಸಲು ಯಾವುದೇ ಭಯ ಬೇಡ: ವಿವೇಕಾನಂದರು ಭಯವಿಲ್ಲದೆ ಎಂತಹದ್ದೇ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಭಯವು ಪ್ರಗತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಅವರು ನಂಬಿದ್ದರು. ಯುವಜನರು ತಮ್ಮ ಭಯಗಳನ್ನು ಎದುರಿಸಲು, ಸವಾಲುಗಳನ್ನು ಸ್ವೀಕರಿಸಲು ಕಲಿಯಬೇಕು ಆಗ ಮಾತ್ರ ಕನಸುಗಳು ನನಸಾಗಲು ಸಾಧ್ಯ. ಅದೇ ರೀತಿ ಭಯವನ್ನು ಬಿಟ್ಟು ದೇಶದಲ್ಲಿ ನಡೆಯುವ ತಪ್ಪುಗಳನ್ನು ಪ್ರಶ್ನಿಸಿದಾಗ, ಅಭಿವೃದ್ಧಿಗಾಗಿ ಧ್ವನಿ ಎತ್ತಿದಾಗ ದೇಶವು ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ. ನಿಮಗಾಗಿ ಹೋರಾಡಲು ಎಂದಿಗೂ ಭಯಪಟ್ಟುಕೊಳ್ಳಬೇಡಿ.

ಭರವಸೆ ಕಳೆದುಕೊಳ್ಳಬಾರದು: ಯುವಜನರು ದೇಶದ ಶಕ್ತಿ, ಅವರು ಭರವಸೆ ಕಳೆದುಕೊಳ್ಳಬಾರದು, ಜೀವನದಲ್ಲಿ ಭರವಸೆ ನದಿಯಂತೆ ಹರಿಯುತ್ತಿರಬೇಕು ಎಂದು ವಿವೇಕಾನಂದರು ಹೇಳುತ್ತಾರೆ. ನಮ್ಮ ಗುರಿ ದೊಡ್ಡದಾಗಿದ್ದಷ್ಟು ಹೋರಾಟ ದೊಡ್ಡದಾಗಿರುತ್ತದೆ, ಆ ಹೋರಾಟದ ಹಾದಿಯಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು. ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ದೃಢವಾದ ಭರವಸೆಯನ್ನು ಇಟ್ಟಾಗ ಮಾತ್ರ ಇಂದು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧದ ಹೋರಾಟದಲ್ಲಿ ಜೆನ್‌ ಝೀಗಳು ವಿಜಯವನ್ನು ಸಾಧಿಸಿದಂತೆ ಯಾವುದೇ ಹೋರಾಟವನ್ನು ಜಯಿಸಲು ಸಾಧ್ಯ. ಹಾಗಾಗಿ ಎಂದಿಗೂ ಜೀವನದಲ್ಲಿ ಭಯವಸೆಯನ್ನು ಕಳೆದುಕೊಳ್ಳಬಾರದು.

ಇದನ್ನೂ ಓದಿ: ಕಾರ್ಗಿಲ್‌ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣವೇನು? ಕದನದಲ್ಲಿ ಭಾರತ ಗೆದ್ದು ಬೀಗಿದ ಪರಾಕ್ರಮದ ಕಥೆಯನ್ನು ತಿಳಿಯಿರಿ

ಉತ್ತಮ ಶಿಕ್ಷಣ ಪಡೆಯಿರಿ, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ: ಯುವಕರು ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಚಿಂತೆಯ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಸಕಾರಾತ್ಮಕ ಮನೋಭಾವದ ಜೊತೆಗೆ ಸರಿಯಾದ ಶಿಕ್ಷಣ, ವ್ಯಕ್ತಿತ್ವ, ಬಲವಾದ ಇಚ್ಛಾಶಕ್ತಿ ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ ಎಂದು ಹೇಳಿದ್ದಾರೆ. ಹಾಗಾಗಿ ಯುವಕರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು.

ಭಾರತವು ಯುವ ಜನರಿಂದ ತುಂಬಿದ ರಾಷ್ಟ್ರವಾಗಿದ್ದು, ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಆದರ್ಶಗಳನ್ನು ಪಾಲಿಸಿ ಸರಿ ದಾರಿಯಲ್ಲಿ ನಡೆಯುವ ಮೂಲಕ ಹಾಗೂ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ರೇವಣ್ಣ ಕೇಸ್: ಪೆನ್​ಡ್ರೈವ್ ಮೂಲಕ ಫೋಟೋ, ವಿಡಿಯೋ ಹಂಚಿದವರಿಗೂ ಸಂಕಷ್ಟ – Kannada News | Bengaluru 42 ACJM Court summons to prajwal revanna videos distribute Case 8 Accused

ಬೆಂಗಳೂರು, (ಜುಲೈ 25): ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿ ಪ್ರಜ್ವಲ್‌ ರೇವಣ್ಣ (Prajwal Revanna) ಸದ್ಯ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೊಂದೆಡೆ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಪೆನ್​​​ಡ್ರೈವ್​​ ಮೂಲಕ ಹಂಚಿದವರಿಗೂ ಸಂಕಷ್ಟ ಎದುರಾಗಿದೆ. 8 ಆರೋಪಿಗಳಿಗೆ ಸಮನ್ಸ್ ಜಾರಿಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ, ಐಪಿಸಿ ಸೆ.509ರಡಿ ಕೇಸ್​​​​​ನಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೆ ನ್ಯಾಯಾಧೀಶ ಸಂದೀಪ್ ಪಾಟೀಲ್ ಆದೇಶಿಸಿದ್ದಾರೆ.

ಪೆನ್​ಡ್ರೈವ್ ಮೂಲಕ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ ಪ್ರಕರಣರದ ಎ2 ನವೀನ್ ಗೌಡ, ಎ3 ಹೆಚ್.ಪಿ.ಲಿಖಿತ್, ಎ4 ಎಂ.ಜೆ.ನಿಶಾಂತ್, ಎ5 ಎಸ್.ಕೆ.ಕಿರಣ್, ಎ6 ಎಂ.ಜಿ.ಶರತ್, ಎ7 ಡಿ.ಎನ್.ತೇಜಸ್,
ಎ8 ಸಿ.ಗಗನ್ ಕುಮಾರ್, ಎ9 ಹೆಚ್​.ರೇವಂತ್​ಗೆ ಸಮನ್ಸ್ ಜಾರಿಗೆ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಏಜೆಂಟ್ ಆಗಿದ್ದ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ಹಾಸನ ಸಿಇಎನ್ ಪೊಲೀಸ್ ಠಾಣೆಗೆ 2024ರ ಏ.23ರಂದು ದೂರು ನೀಡಿದ್ದರು. ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ಏ.26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್‌ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ರಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ಒಳಗೊಂಡ ಸಿಡಿ ಹಾಗೂ ಪೆನ್​ಡ್ರೈವ್ ಸಿದ್ಧಪಡಿಸಿಕೊಂಡಿದ್ದಾರೆ. ಬಳಿಕ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್​ಆ್ಯಪ್/ಮೊಬೈಲ್​ಗಳಲ್ಲಿ ತೋರಿಸಿ ಜನರಿಗೆ ದಿಕ್ಕು ತಪ್ಪಿಸಿ ಪ್ರಜ್ವಲ್ ರೇವಣ್ಣಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಈ ದೂರಿನ ಮೇರೆಗೆ ಅರ್ಜಿದಾರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 171 (ಜಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67(ಎ) ಅಡಿಯಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಸುಳ್ಳು ಹೇಳಿಕೆ ಪ್ರಕಟಿಸಿದ, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋ ಪ್ರಕಟಿಸಿದ ಮತ್ತು ರವಾನಿಸಿದ ಆರೋಪ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ನಾಯಕನಾಗಿ ಮೊದಲ ಟಿ20 ಸರಣಿ ಗೆದ್ದ ಶ್ರೇಯಸ್ ಅಯ್ಯರ್ – Kannada News | India Dominates Zimbabwe in 2nd T20, Shreyas Iyer Secures Series Win in Harare by 90 Runs

ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್ ಮೊದಲ ಟಿ20 ಸರಣಿ ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕಿಶನ್ ಹಾಗೂ ತಿಲಕ್ ಅವರ ಅರ್ಧಶತಕದ ನೆರವಿನಿಂದ 219 ರನ್ ಕಲೆಹಾಕಿ ಜಿಂಬಾಬ್ವೆ ಗೆಲುವಿಗೆ 220 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 18ನೇ ಓವರ್​ನಲ್ಲಿ 129 ರನ್​ಗಳಿಗೆ ಆಲೌಟ್ ಆಗುವ ಮೂಲಕ 90 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

‘ಜನ ನಾಯಗನ್’ ಹೆಸರು ಹೇಳಿದ್ದಕ್ಕೆ ವಿದ್ಯಾರ್ಥಿಗಳ ಆಕ್ರೋಶ: ನಟಿಗೆ ಛೀಮಾರಿ – Kannada News | Actress Booed by students for talking about Jana Nayagan

ವಿಜಯ್ (Vijay)​​ ನಟನೆಯ ‘ಜನ ನಾಯಗನ್’ ಸಿನಿಮಾ ಇದೇ ಗುರುವಾರ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೂ ಮೊದಲ ದಿನ ಸಿನಿಮಾ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ವಿಜಯ್ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಇದೀಗ ನಟಿಯೊಬ್ಬರು ಕಾರ್ಯಕ್ರಮವೊಂದರಲ್ಲಿ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳ ವಿರೋಧ ಎದುರಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು, ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗಿ ಆಗಿದ್ದರು. ನಟಿ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಸನಮ್ ಶೆಟ್ಟಿ ಸಹ ಭಾಗಿ ಆಗಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸನಮ್ ಶೆಟ್ಟಿ, ಭಾಷಣದ ವೇಳೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರಸ್ತಾಪ ಮಾಡಿದರೂ ಕೂಡಲೇ ವಿದ್ಯಾರ್ಥಿಗಳು, ನಟಿಗೆ ಧಿಕ್ಕಾರ ಕೂಗಿ ವೇದಿಕೆಯಿಂದ ಇಳಿಯುವಂತೆ ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸನಮ್ ಶೆಟ್ಟಿ, ‘ನಾನು ವಿದ್ಯಾರ್ಥಿಗಳ ಪರ ಬೆಂಬಲ ಸೂಚಿಸಲು ಬಂದಿದ್ದೇನೆ. ನಾನು ನಿನ್ನೆಯಷ್ಟೆ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಮೊದಲ ಶೋ ನೋಡಿದೆ. ಆ ಸಿನಿಮಾ ನೋಡಿ ಸ್ಪೂರ್ತಿ ಪಡೆದು ನಾನು ಇಲ್ಲಿಗೆ ಬಂದಿದ್ದೇನೆ ಎಂದರು. ಅಷ್ಟರಲ್ಲೇ ಕೆಲ ವಿದ್ಯಾರ್ಥಿಗಳು ‘ಬೂ…’ ಎಂದು ‘ಬೂಯಿಂಗ್’ ಆರಂಭಿಸಿದರು. ‘ಥಮ್ಸ್ ಡೌನ್’ ತೋರಿಸಲು ಆರಂಭಿಸಿದರು. ಆದರೆ ಮಾತು ಮುಂದುವರೆಸಿದ ನಟಿ, ವಿದ್ಯಾರ್ಥಿಗಳ ಮೇಲೆ ಸಿಟ್ಟು ಹೊರಹಾಕಿದರು. ಇದನ್ನು ಪ್ರಜಾಪ್ರಭುತ್ವ ಎನ್ನುವುದಿಲ್ಲ’ ಎಂದರು.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಆಸಕ್ತಿಕರ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

‘ಯಾರೋ ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿಲ್ಲ, ನನ್ನ ಮನಸ್ಸಿನಲ್ಲಿ ಇರುವುದನ್ನು ಹೇಳುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಬೇರೆ ಯಾರಿಗೋ ಇಷ್ಟವಾಗುತ್ತದೆ, ಕಷ್ಟವಾಗುತ್ತದೆ ಎಂದು ನಾನು ಮಾತನಾಡದೇ ಇರಲಾರೆ. ಇಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ’ ಎಂದರು. ಬಳಿಕ ಆಯೋಜಕರು ಬಂದು ನಟಿಯಿಂದ ಮೈಕ್ ಅನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊರ ಬಂದು ಮಾಧ್ಯಮಗಳ ಬಳಿ ಮಾತನಾಡಿದ ನಟಿ ಸನಮ್, ‘ನಾನು ಒಂದು ಸಿನಿಮಾ ನೋಡಿದ್ದಕ್ಕೆ ನನ್ನನ್ನು ಜೋಕರ್ ಎಂದಿದ್ದಾರೆ, ಅದೇ ವೆಟ್ರಿಮಾರನ್ ಅವರು ಎಷ್ಟು ಸಿನಿಮಾ ತೆಗೆದಿದ್ದಾರೆ. ಅವರೂ ಸಹ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ ಅವರನ್ನು ಜೋಕರ್ ಎನ್ನುತ್ತಾರಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ, ‘ಕೆಲವು ವಿದ್ಯಾರ್ಥಿಗಳು ಅಲ್ಲಿ, ಡಿಎಂಕೆ ಟಿ-ಶರ್ಟ್ ಧರಿಸಿ ಕುಳಿತಿದ್ದಾರೆ. ಅವರೇ ಇದನ್ನೆಲ್ಲ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಬಯೋಗ್ಯಾಸ್ ಘಟಕಕ್ಕೆ ವಿರೋಧ: ಸಿಡಿದೆದ್ದ 10ಕ್ಕೂ ಹೆಚ್ಚು ಹಳ್ಳಿ ಜನರು; ಏನಿದು ವಿವಾದ? – Kannada News | Bio Gas Plant Protest: Villagers Allege Pollution, Health Risks and Water Contamination

ಧಾರವಾಡ, ಜುಲೈ 25: ಧಾರವಾಡ (dharwad) ತಾಲೂಕಿನ ಶಿವಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಅನೇಕ ದಿನಗಳಿಂದ ಆತಂಕದಲ್ಲಿದ್ದಾರೆ. ನಾಳೆ ತಮ್ಮ ಹಾಗೂ ಮಕ್ಕಳ ಭವಿಷ್ಯ ಏನಾಗುತ್ತೆ ಅನ್ನೋ ಚಿಂತೆಯಲ್ಲಿದ್ದಾರೆ. ತಮ್ಮ ಹೊಲಗಳಲ್ಲಿನ ನೀರಿಗೂ ಸಮಸ್ಯೆಯಾದರೆ, ಕೃಷಿ ಮಾಡುವುದಾದರೂ ಹೇಗೆ ಅನ್ನೋ ದುಗುಡದಲ್ಲಿದ್ದಾರೆ. ಇದೇ ಕಾರಣಕ್ಕೆ ಇದೀಗ ಹೋರಾಟದ ಹಾದಿ ತುಳಿದಿದ್ದಾರೆ. ತಮ್ಮೂರಿನಲ್ಲಿ ಪಕ್ಕದೂರಿನ ಕಸವನ್ನು ತಂದು ಹಾಕಿ, ಬಯೋಗ್ಯಾಸ್ (bio-gas) ಉತ್ಪಾದನಾ ಘಟಕವೇ ಅವರೆಲ್ಲರ ಆತಂಕಕ್ಕೆ ಮೂಲ ಕಾರಣವಾಗಿದೆ.

ಬಯೋಗ್ಯಾಸ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಭಾರೀ ವಿರೋಧ

ಧಾರವಾಡ ತಾಲೂಕಿನ ಶಿವಳ್ಳಿ ಸಮೀಪದ ಮಡ್ಡಿಗುಡ್ಡದಲ್ಲಿ ಘನ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದೆ. ಸುಮಾರು 450 ಟನ್ ಸಾಮರ್ಥ್ಯದ ಈ ಘಟಕ ಇಲ್ಲಿ ಸ್ಥಾಪನೆಯಾಗುವುದು ಬೇಡ ಅಂತಾ ಹಲವಾರು ವರ್ಷಗಳಿಂದ ಶಿವಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಈ ಘಟಕದಲ್ಲಿ ಬಯೋಗ್ಯಾಸ್ ಉತ್ಪಾದನೆಯಾಗುವುದು ಈ ಗ್ರಾಮಗಳ ಜನರು ಬೀಸಾಕಿದ ಘನ ತ್ಯಾಜ್ಯದಿಂದಲ್ಲ. ಬದಲಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಗ್ರಹವಾದ ಕಸದಿಂದ.

ಇದನ್ನೂ ಓದಿ: ಉಳಿತಾಯ ಖಾತೆಯ ಹಣ ನೀಡದ ಸೊಸೈಟಿಗೆ ದಂಡ: ಹುಬ್ಬಳ್ಳಿ ಮಹಿಳೆಗೆ ಸಿಕ್ತು ನ್ಯಾಯ!

ಯಾವುದೋ ದೊಡ್ಡ ನಗರದಲ್ಲಿನ ಕಸ ನಮ್ಮೂರಲ್ಲಿ ಏಕೆ ತಂದು ಹಾಕಿ, ಇಲ್ಲಿ ಬಯೋಗ್ಯಾಸ್ ಉತ್ಪಾದನೆ ಮಾಡಬೇಕು ಅನ್ನೋದು ಈ ಗ್ರಾಮಗಳ ಜನರ ಪ್ರಶ್ನೆ. ಈ ಗ್ರಾಮದ ಸುತ್ತಮುತ್ತಲಿನ ಹೆಬ್ಬಳ್ಳಿ, ಮಾರಡಗಿ, ಶಿವಳ್ಳಿ, ಸುಳ್ಳ ಮತ್ತು ಸೋಮಾಪುರ ಹಳ್ಳಿಗಳ ಜನರು ಸೇರಿ ಪರಿಸರ ರಕ್ಷಣೆ ಜನಾಂದೋಲನ ಸಮಿತಿ  ಮಾಡಿಕೊಂಡಿದ್ದು, ಈ ಸಮಿತಿ ವತಿಯಿಂದ ಇದೀಗ ಹೋರಾಟ ಶುರು ಮಾಡಿದ್ದಾರೆ. ಶುಕ್ರವಾರವಷ್ಟೇ ಈ ಎಲ್ಲಾ ಗ್ರಾಮಗಳ ನೂರಾರು ಜನರು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಧಾರವಾಡಕ್ಕೆ ಬಂದು, ಪಾಲಿಕೆ ಕಚೇರಿ ಮುಂದೆ ಪ್ರತಿಭಟಿಸಿದರು. ‘ಯಾವುದೇ ಕಾರಣಕ್ಕೂ ಘಟಕವನ್ನು ತಮ್ಮೂರ ಬಳಿ ನಿರ್ಮಿಸಲು ಬಿಡುವುದಿಲ್ಲ’ ಎಂದು ಸ್ಥಳೀಯರಾದ ಚೆನ್ನಯ್ಯ ವಸ್ತ್ರದ ಎಚ್ಚರಿಕೆ ನೀಡಿದ್ದಾರೆ.

ದುರ್ನಾತ ಸೇರಿದಂತೆ ಅಂತರ್ಜಲವೂ ಕಲುಷಿತ

ಈ ಯೋಜನೆಯನ್ನು ಒಟ್ಟು 67 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಒಂದು ವೇಳೆ ಈ ಯೋಜನೆ ಶುರುವಾದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ದುರ್ನಾತ ಹರಡುವುದರ ಜೊತೆಗೆ ಸೊಳ್ಳೆ, ನೊಣಗಳ ಹಾವಳಿಯೂ ಹೆಚ್ಚುತ್ತೆ ಎಂಬ ಆತಂಕ ಜನರದ್ದು. ಇದರೊಂದಿಗೆ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಅಂತರ್ಜಲವೂ ಕಲುಷಿತಗೊಳ್ಳುತ್ತೆ. ಒಂದು ವೇಳೆ ಅಂತರ್ಜಲವೇ ಕಲುಷಿತಗೊಂಡರೆ ಜನರ ಆರೋಗ್ಯದ ಗತಿ ಏನು ಅನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ಕೃಷಿಗೂ ಕೂಡ ಕಲುಷಿತ ಅಂತರ್ಜಲದಿಂದ ದೊಡ್ಡ ತೊಂದರೆಯಾಗುತ್ತೆ.

ಪ್ರತಿಭಟನೆ ಆರಂಭಿಸಿದ ಜನರು 

ಘಟಕದ ವಿಷಕಾರಿ ತ್ಯಾಜ್ಯ ದ್ರವವು (ಸ್ಲರಿ) ಭೂಮಿಯಲ್ಲಿ ಇಂಗೋದ್ರಿಂದಾಗಿ ಮಣ್ಣಿನ ಫಲವತ್ತತೆ ಕೂಡ ಹಾಳಾಗಲಿದೆ. ಇದಲ್ಲದೇ ಕಸ ಘಟಕಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಅಪಾಯವಿದ್ದು, ಅಪಾಯಕಾರಿ ಅನಿಲ ತಮ್ಮೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇರಿಕೊಂಡು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ‘ಯಾವುದೇ ಕಾರಣಕ್ಕೂ ಈ ಘಟಕವನ್ನು ನಿರ್ಮಿಸಲು ಅವಕಾಶ ಕೊಡುವುದಿಲ್ಲ’ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ ‘ನಮ್ಮ ಗ್ರಾಮ, ನಮ್ಮ ಹಕ್ಕು’, ‘ನಮ್ಮ ಆರೋಗ್ಯ ನಮ್ಮ ಹಕ್ಕು’ ಅನ್ನೋ ಘೋಷಣೆ ಮೂಲಕ ಹೋರಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!

ಗ್ರಾಮಸ್ಥರ ಒತ್ತಡ ಹೆಚ್ಚಾಗಿದ್ದರಿಂದ ಇದೀಗ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಕೆಲಸವನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ. ಆದರೆ ಇಂದಲ್ಲ ನಾಳೆ ಮತ್ತೆ ನಿರ್ಮಾಣ ಕಾರ್ಯವನ್ನು ಆರಂಭಸಲಾಗುತ್ತೆ ಅನ್ನೋ ಆತಂಕ ಜನರದ್ದು. ಹೀಗಾಗಿ ಇಲ್ಲಿಂದ ಘಟಕ ಬೇರೆಡೆ ಸ್ಥಳಾಂತರವಾಗುವವರೆಗೆ ಹೋರಾಟ ಮುಂದುವರೆಸುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ZIM: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ – Kannada News | Team India’s Historic T20 Feat: 52 Times 200+ Runs, Equals Annual Record

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (India vs Zimbabwe) 20 ಓವರ್​ಗಳಲ್ಲಿ 219 ರನ್ ಕಲೆಹಾಕಿತು. ತಂಡದ ಪರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ (Team India) 200 ರನ್​ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 200 ಕ್ಕೂ ಅಧಿಕ ರನ್​ ಕಲೆಹಾಕಿದ ತಂಡವೆಂಬ ವಿಶ್ವದಾಖಲೆ ನಿರ್ಮಿಸಿತು. ಟಿ20 ಇತಿಹಾಸದಲ್ಲಿ ಟೀಂ ಇಂಡಿಯಾ ಇದುವರೆಗೆ 52 ಬಾರಿ 200+ ರನ್ ಕಲೆಹಾಕಿದೆ. ಇದರೊಂದಿಗೆ ಈ ಸಾಧನೆ ಮಾಡಿದ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಹಾಗೆಯೇ ಟೀಂ ಇಂಡಿಯಾ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ (9 ಬಾರಿ) 200+ ಮೊತ್ತ ಕಲೆಹಾಕಿದ ತನ್ನ ದಾಖಲೆಯನ್ನು ಸರಿಗಟ್ಟಿತು.

ತನ್ನದೇ ದಾಖಲೆ ಸರಿಗಟ್ಟಿದ ಭಾರತ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 46 ಬಾರಿ 200 ಕ್ಕೂ ಹೆಚ್ಚು ರನ್‌ಗಳಿಸಿದೆ. ಕೌಂಟಿ ಕ್ರಿಕೆಟ್ ತಂಡ ಸೋಮರ್‌ಸೆಟ್ 44 ಬಾರಿ ಈ ಸಾಧನೆ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಹಾಗೆಯೇ 2026 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡ ಮತ್ತೊಂದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಒಂದೇ ವರ್ಷದಲ್ಲಿ 9 ಬಾರಿ 200 ಪ್ಲಸ್ ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಇದಕ್ಕೂ ಮೊದಲು ಅಂದರೆ 2024 ರಲ್ಲಿ ಇದೇ ಟೀಂ ಇಂಡಿಯಾ 9 ಬಾರಿ 200ಕ್ಕೂ ಅಧಿಕ ರನ್ ಕಲೆಹಾಕಿತ್ತು.

IND vs ZIM: ಜಿಂಬಾಬ್ವೆ ವಿರುದ್ಧ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ

ಇದಕ್ಕೂ ಮೊದಲು, ಭಾರತ 2023 ರಲ್ಲಿ 7 ಬಾರಿ, ಜಪಾನ್ 2024 ರಲ್ಲಿ 7 ಬಾರಿ ಮತ್ತು ಆಸ್ಟ್ರಿಯಾ 2025 ರಲ್ಲಿ 7 ಬಾರಿ ಈ ಮೈಲಿಗಲ್ಲು ಸಾಧಿಸಿತು. 2022 ರಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು 2024 ರಲ್ಲಿ ವೆಸ್ಟ್ ಇಂಡೀಸ್ ತಲಾ 6 ಬಾರಿ 200 ಕ್ಕೂ ಅಧಿಕ ರನ್​ಗಳ ದಾಟುವಲ್ಲಿ ಯಶಸ್ವಿಯಾಗಿದ್ದವು. ಆದಾಗ್ಯೂ, ಭಾರತ ಅವೆಲ್ಲವನ್ನೂ ಮೀರಿಸಿದ್ದು ಮಾತ್ರವಲ್ಲದೆ ತನ್ನದೇ ಆದ ದಾಖಲೆಗಳನ್ನು ಪುನಃ ಬರೆಯುವ ಮೂಲಕ ಮುನ್ನಡೆಯುತ್ತಿದೆ. ಮುಂಬರುವ ಪಂದ್ಯದಲ್ಲಿ ಅಥವಾ ಸರಣಿಯಲ್ಲಿ ಭಾರತ ಇದೇ ಆಕ್ರಮಣಕಾರಿ ಶೈಲಿಯನ್ನು ಮುಂದುವರಿಸಿದರೆ, ಒಂದೇ ವರ್ಷದಲ್ಲಿ 10 ಬಾರಿ 200+ ರನ್ ಗಳಿಸಿದ ಮೊದಲ ತಂಡವಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಅವಕಾಶ ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Sat, 25 July 26

Source link

Kargil Vijay Diwas 2026: ಕಾರ್ಗಿಲ್‌ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣವೇನು? ಕದನದಲ್ಲಿ ಭಾರತ ಗೆದ್ದು ಬೀಗಿದ ಪರಾಕ್ರಮದ ಕಥೆಯನ್ನು ತಿಳಿಯಿರಿ – Kannada News | Kargil Vijay Diwas 2026: What was the reason for the Kargil War? Here is some interesting information about it

ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್‌ ವಿಜಯ ದಿನವನ್ನು (Kargil Vijay Diwas) ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತೀಯರ ಪಾಲಿಗೆ ಇದು ಮರೆಯಲಾಗದ ಹೆಮ್ಮೆಯ ದಿನವಾಗಿದೆ. ಇದು ಕೇವಲ ವಿಜಯದ ದಿನವಲ್ಲ, ಹೆಮ್ಮೆಯ ಯೋಧರ ಶೌರ್ಯ, ಪರಾಕ್ರಮ, ತ್ಯಾಗವನ್ನು ಸ್ಮರಿಸುವ ಸಂದರ್ಭವಾಗಿದೆ. 1999 ಮೇ ತಿಂಗಳಲ್ಲಿ ಆರಂಭವಾಗ ಈ ಕಾರ್ಗಿಲ್‌ ಯುದ್ಧ ಜುಲೈ ಅಂತ್ಯದ ವರೆಗೆ ಅಂದರೆ ಸುಮಾರು 85 ದಿನಗಳವರೆಗೆ ನಡೆಯಿತು, ಈ ಯುದ್ಧದಲ್ಲಿ ಭಾರತೀಯ ಸೇನೆ ಆಪರೇಶನ್‌ ವಿಜಯ್‌ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಸೇನೆಯನ್ನು ಸದೆ ಬಡಿದು  ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ಮತ್ತೆ ವಶಕ್ಕೆ ಪಡೆದುಕೊಂಡಿತು. ಈ ಯುದ್ಧದಲ್ಲಿ ವಿಕ್ರಮ್ ಬಾತ್ರಾ, ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಅನೇಕ ಕೆಚ್ಚೆದೆಯ ಸೈನಿಕರ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅಷ್ಟಕ್ಕೂ ಕಾರ್ಗಿಲ್‌ನಲ್ಲಿ ಯುದ್ಧ ಆರಂಭವಾದದ್ದು ಹೇಗೆ, ಪಾಕ್‌ ಕ್ರೌರ್ಯದ ವಿರುದ್ಧ ಯುದ್ಧ ಭೂಮಿಯಲ್ಲಿ ಭಾರತೀಯ ಸೈನಿಕ  ರೋಚಕ ಹೋರಾಟ ಹೇಗಿತ್ತು ಎಂಬ ಪರಾಕ್ರಮದ ಕಥೆಯನ್ನು ತಿಳಿಯಿರಿ.

ಕಾರ್ಗಿಲ್ ಯುದ್ಧ ಹೇಗೆ ಆರಂಭವಾಯಿತು?

1947 ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ದೇಶವು ವಿಭಜನೆಯಾಯಿತು, ಧರ್ಮದ ಆಧಾರದ ಮೇಲೆ ಪಾಕಿಸ್ತಾನವನ್ನು ರಚಿಸಲಾಯಿತು. ಈ ದೇಶ ವಿಭಜನೆಯ ನಂತರ  ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದ ವಿಚಾರದಲ್ಲಿ ಘರ್ಷಣೆ ನಡೆದವು.  ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಪಟ್ಟುಹಿಡಿದ ಪರಿಣಾಮವೇ ಕಾರ್ಗಿಲ್ ಯುದ್ಧ. ಇದು ಭಾರತದ ವಿರುದ್ಧ ತಂತ್ರ ರೂಪಿಸಲು ಪಾಕಿಸ್ತಾನವನ್ನು ಪ್ರೇರೇಪಿಸಿತು. ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಪಾಕಿಸ್ತಾನ ಸಿದ್ಧವಾಯಿತು. ಆಗಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್, ಜನರಲ್‌ಗಳಾದ ಮೊಹಮ್ಮದ್ ಅಜೀಜ್, ಜಾವೇದ್ ಹಸನ್ ಮತ್ತು ಮಹಮ್ಮದ್ ಅಹ್ಮದ್ ಈ ಕಾರ್ಯಾಚರಣೆಗೆ ಕಾರಣರಾದವರಾಗಿದ್ದಾರೆ. ಪಾಕ್‌ ಆಪರೇಷನ್ ಬದ್ರ್ ಹೆಸರಿನಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನದ ಕಾರ್ಯಾಚರಣೆಯ ಬಗ್ಗೆ ತಿಳಿದ ನಂತರ, ಭಾರತ ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು.

ಕಾಶ್ಮೀರದ ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ತಾಪಮಾನ ಮೈನಸ್‌ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಆ ಸಮಯದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್‌ ಸೈನಿಕರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು,   1999 ರಲ್ಲಿ ಮೋಸದಿಂದ ಪಾಕಿಸ್ತಾನಿ ಸೈನಿಕರು ಕಾಶ್ಮೀರಿ ಉಗ್ರಗಾಮಿಗಳ ವೇಷದಲ್ಲಿ ರಹಸ್ಯವಾಗಿ ನಿಯಂತ್ರಣ ರೇಖೆಯನ್ನು (LoC) ದಾಟಿ ಲಡಾಖ್‌ನ ಕಾರ್ಗಿಲ್, ಡ್ರಾಸ್, ಬಟಾಲಿಕ್ ಮತ್ತು ಕಕ್ಸರ್ ವಲಯಗಳಲ್ಲಿನ ಭಾರತೀಯ ಪೋಸ್ಟ್‌ಗಳನ್ನು ವಶಪಡಿಸಿಕೊಂಡರು. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ (NH-1A) ಅನ್ನು ಕಡಿತಗೊಳಿಸುವುದು ಮತ್ತು ಭಾರತೀಯ ಸೇನೆಯ ಸರಬರಾಜುಗಳನ್ನು ಅಡ್ಡಿಪಡಿಸುವುದು ಅವರ ಗುರಿಯಾಗಿತ್ತು. ಪಾಕಿಸ್ತಾನಿ ಸೈನಿಕರು ಒಳನುಸುಳಿರುವ ಬಗ್ಗೆ ತಿಳಿಯುತ್ತಿದ್ದಂತೆ ಭಾರತ ಸರ್ಕಾರವು “ಆಪರೇಷನ್‌ ವಿಜಯ್”‌ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 20 ಸಾವಿರ ಸೈನಿಕರನ್ನು ನಿಯೋಜಿಸಿ, ಪಾಕಿಸ್ತಾನಿ ಸೈನಿಕರನ್ನು ತನ್ನ ಭೂಪ್ರದೇಶದಿಂದ ಹೊರಹಾಕುವಲ್ಲಿ ಸೇನೆ ಯಶಸ್ವಿಯಾಯಿತು.

ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ

ಆಪರೇಷನ್ ವಿಜಯ್ ಯುದ್ಧದ ಇಡೀ ಚಿತ್ರಣವನ್ನೇ ಬದಲಾಯಿಸಿತು:

1999 ಮೇ 5 ರಂದು ಅತಿಕ್ರಮಣ ನಡೆದ ಬಗ್ಗೆ ತಿಳಿದ ನಂತರ, ಭಾರತ ಆಪರೇಷನ್ ವಿಜಯ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕ್‌ ಸೇನೆ ವಶಪಡಿಸಿಕೊಂಡ ಭಾರತದ ಪ್ರತಿಯೊಂದು ಭೂಪ್ರದೇಶವನ್ನು ಮರಳಿ ಪಡೆಯುವುದು ಒಂದೇ ಭಾರತೀಯ ಸೇನೆಯ ಗುರಿಯಾಗಿತ್ತು. ಸೈನಿಕರು ನಿಯಂತ್ರಣ ರೇಖೆಯನ್ನು ದಾಟದೆ ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಈ ಯುದ್ಧವನ್ನು ನಡೆಸಿದರು. ರಾತ್ರಿಯ ಕತ್ತಲೆಯಲ್ಲಿ ಸಾವಿರಾರು ಅಡಿ ಹಿಮದಿಂದ ಆವೃತವಾದ ಶಿಖರಗಳನ್ನು ಹತ್ತುವುದು ಮತ್ತು ಶತ್ರುಗಳ ಗುಂಡಿನ ದಾಳಿಯ ನಡುವೆ ಮುನ್ನಡೆಯುವುದು ಈ ಕಾರ್ಯಾಚರಣೆಯ ದೊಡ್ಡ ಸವಾಲಾಗಿತ್ತು. ಈ ಸವಾಲುಗಳನ್ನು ಲೆಕ್ಕಿಸದೆ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಟ ನಡೆಸಿದರು.

ಯುದ್ಧದ ಸಮಯದಲ್ಲಿ ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ನಿರ್ಣಾಯಕ ಶಿಖರಗಳಾಗಿದ್ದವು. ಭಾರತೀಯ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ಶಿಖರಗಳನ್ನು ಮರಳಿ ವಶಪಡಿಸಿಕೊಂಡರು. ಟೈಗರ್ ಹಿಲ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು, ಇದು ಯುದ್ಧದ ಅತ್ಯಂತ ಸ್ಮರಣೀಯ ಕ್ಷಣವಾಯಿತು. ಜುಲೈ 26, 1999 ರ ವೇಳೆಗೆ ಭಾರತೀಯ ಸೇನೆಯು ಕಾರ್ಗಿಲ್‌ನ ಎಲ್ಲಾ ಶಿಖರಗಳನ್ನು ಶತ್ರು ರಾಷ್ಟ್ರದಿಂದ ಮುಷ್ಠಿಯಿಂದ ಮುಕ್ತಗೊಳಿಸಿತು. ಭಾರತಕ್ಕೆ ದೊರೆತ ಈ ಗೆಲುವು ನಮ್ಮ ದೇಶ, ಸೇನೆಯ ಶಕ್ತಿ ಮತ್ತು ಸಂಯಮ ಎರಡನ್ನೂ ಜಗತ್ತಿಗೆ ಪ್ರದರ್ಶಿಸಿತು.

ಮೈನಸ್‌ ಡಿಗ್ರಿ ತಾಪಮಾನ, ಆಮ್ಲಜನಕದ ಕೊರತೆ, ಹಿಮಾವೃತ ಗಾಳಿ ಇದ್ಯಾವುದನ್ನೂ ಲೆಕ್ಕಿಸದೆ ಕಡಿದಾದ ಪರ್ವತಗಲ್ಲಿಯೂ ಸಹ ನಮ್ಮ ಹೆಮ್ಮೆಯ ಸೈನಿಕರು ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಅನುಜ್ ನಯ್ಯರ್, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಸೇರಿದಂತೆ ಅನೇಕ ಸೈನಿಕರು ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿದರು.  ಈ ಯುದ್ಧದಲ್ಲಿ ಸುಮಾರು 545 ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇವರಲ್ಲಿ, ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ನಾಲ್ವರು ಸೈನಿಕರಿಗೆ ಪರಮ ವೀರ ಚಕ್ರ, 10 ಸೈನಿಕರಿಗೆ ಮಹಾವೀರ ಚಕ್ರ ಮತ್ತು 70 ಜನರಿಗೆ ವೀರ ಚಕ್ರಗಳನ್ನು ನೀಡಿ ಗೌರವಿಸಲಾಯಿತು.

ದೇಶಭಕ್ತಿಯ ಸಂದೇಶವನ್ನು ಸಾರುವ ಕಾರ್ಗಿಲ್ ವಿಜಯ ದಿವಸ:

ಜುಲೈ 26 ಕೇವಲ ಒಂದು ದಿನವಲ್ಲ, ಅದು ದೇಶಭಕ್ತಿ, ಏಕತೆ ಮತ್ತು ತ್ಯಾಗದ ಸಂಕೇತವಾಗಿದೆ. ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ, ಅಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜ ಮತ್ತು ಹುತಾತ್ಮರ ಹೆಸರುಗಳು ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಸೈನಿಕರು ಭಾರತದ ಸಾರ್ವಭೌಮತ್ವ ಮತ್ತು ಏಕತೆಯನ್ನು ರಕ್ಷಿಸಲು ಎಂತಹ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ರವಾನಿಸುತ್ತವೆ. ಒಟ್ಟಾರೆಯಾಗಿ ಕಾರ್ಗಿಲ್‌ ವಿಜಯ ದಿವಸ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸುತ್ತದೆ ಮತ್ತು ರಾಷ್ಟ್ರವನ್ನು ರಕ್ಷಿಸುವಲ್ಲಿ ಯೋಧರ ಶೌರ್ಯ ಮತ್ತು ಸ್ಥೈರ್ಯವನ್ನು ಗೌರವಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿಕೆ – Kannada News | Government Agreed to all Demands of students Union Minister JP Nadda said after Meeting with CJP

ನವದೆಹಲಿ, ಜುಲೈ 25: ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ಪ್ರತಿಭಟನೆಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ನಡೆದ ಮಾತುಕತೆಯ ವೇಳೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP)ಯ ಎಲ್ಲಾ ಬೇಡಿಕೆಗಳನ್ನು ಸರ್ಕಾರವು ಒಪ್ಪಿಕೊಂಡಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದ್ದಾರೆ. ಪರೀಕ್ಷಾ ಸುಧಾರಣೆಗಳ ಕುರಿತು ಸಿಜೆಪಿ ಸಲ್ಲಿಸಿರುವ 5 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಲಿದ್ದು, ಮಾತುಕತೆಯ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಡ್ಡಾ ಹೇಳಿದರು.

ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಪಿ ನಡ್ಡಾ, “ನೀವು ನನಗೆ ನೀಡಿದ ಈ 5 ಅಂಶಗಳ ಚಾರ್ಟರ್ ಶಿಕ್ಷಣ ಪರೀಕ್ಷೆಗಳ ಸುಧಾರಣೆಗೆ ಸಂಬಂಧಿಸಿದ್ದಾಗಿದೆ. ಈ ಸುಧಾರಣಾ ಚಾರ್ಟರ್ ಕುರಿತು ನಾವು ಗಂಭೀರವಾಗಿ ಆಲೋಚಿಸುತ್ತೇವೆ. ಪ್ರತಿಭಟನೆಯ ಸಮಯದಲ್ಲಿ ದಾಖಲಾದ ಪ್ರಕರಣಗಳ ಕುರಿತೂ ಚರ್ಚಿಸಲಾಗಿದೆ. ಪ್ರತಿಭಟನಾಕಾರರಿಗೆ ಎಫ್‌ಐಆರ್‌ಗಳ ಪ್ರತಿಯನ್ನು ಒದಗಿಸಲಾಗುವುದು. ಅವರ ವಿರುದ್ಧ ಯಾವುದೇ ಸೇಡು ತೀರಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳುವುದಿಲ್ಲ” ಎಂದು ಭರವಸೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಸಹ ಈಗಾಗಲೇ ಬರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದ ಸಿಎಂ ಡಿಕೆಶಿ – Kannada News | CM DK Shivakumar talks about Drought situation In karnataka

ಚಿತ್ರದುರ್ಗ, (ಜುಲೈ 25): ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕರ್ನಾಟಕದಲ್ಲಿ ಬರಗಾಲ ಆವರಿಸಿದೆ. ಮಳೆ ಇಲ್ಲದೇ ಜಲಾಶಗಳು, ನದಿ, ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಹೀಗಾಗಿ ವ್ಯವಸಾಯಕ್ಕೆ ನೀರಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬರದ ಬಗ್ಗೆ ಚಿತ್ರದುರ್ಗದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಧಾನಿ ಮೋದಿ ಸಹ ಈಗಾಗಲೇ ಬರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜಲಾಶಯ, ಕೆರೆಗಳು ತುಂಬದೆ ರೈತರ ವ್ಯವಸಾಯ ಮಾಡಬೇಡಿ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿ ಎಂದು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಬ್ರೇಕ್: ಅರಣ್ಯ ಇಲಾಖೆಯ ಮೆಗಾ ಪ್ಲ್ಯಾನ್ ಏನು ಗೊತ್ತಾ? – Kannada News | New Railway Fence Protects Farmers from Elephant Attacks

ರೈಲ್ವೆ ಬ್ಯಾರಿಕೇಡ್Image Credit source: tv9 kannada

ಚಾಮರಾಜನಗರ, ಜುಲೈ 25: ಸದಾ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷದ (wildlife conflict) ಸುದ್ದಿಯಿಂದ ಸದ್ದು ಮಾಡುತ್ತಿದ್ದ ಚಾಮರಾಜನಗರ (chamarajanagar) ಜಿಲ್ಲೆಗೆ ಅರಣ್ಯಾಧಿಕಾರಿಗಳು ಮದ್ದು ಅರೆಯಲು ಮುಂದಾಗಿದ್ದಾರೆ. ಕಾಡು ಪ್ರಾಣಿಗಳಿಂದ ರೈತರಿಗೆ ಶಾಶ್ವತ ಪರಿಹಾರ ನೀಡಲು ಪಣ ತೊಟ್ಟಿದ್ದಾರೆ. ಬರೋಬ್ಬರಿ 314 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಸಿದ್ದತೆ ನಡೆಸಿದ್ದಾರೆ. ಆ ಮೂಲಕ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಮುಂದಾಗಿದ್ದಾರೆ.

ಕಾಡು ಪ್ರಾಣಿಗಳು, ಮಾನವ ನಡುವಿನ ಸಂಘರ್ಷಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್

ಅತೀ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಅದೆ ರೀತಿ ಅತೀ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಸಾಕ್ಷಿಯಾದ ಜಿಲ್ಲೆ ಎಂಬ ಅಪಖ್ಯಾತಿ ಕೂಡ ಚಾಮರಾಜನಗರ ಜಿಲ್ಲೆಗೆ ಸಲ್ಲುತ್ತೆ. ಶತಾಯ ಗತಾಯ ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷಕ್ಕೆ ಬ್ರೇಕ್ ಹಾಕಲೇಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆ ಹೊಸದೊಂದು ಮಾಸ್ಟರ್ ಪ್ಲ್ಯಾನ್​​ ಮಾಡಿದ್ದಾರೆ.

ಇದನ್ನೂ ಓದಿ: ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ, ಬೆಚ್ಚಿಬಿದ್ದ ಪ್ರಯಾಣಿಕರು: ವಿಡಿಯೋ ವೈರಲ್

ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನ ಅರಣ್ಯಾಧಿಕಾರಿಗಳು ಕಂಡು ಹಿಡಿದಿದ್ದಾರೆ. ರೈಲ್ವೆ ಬ್ಯಾರಿಗೇಡ್​ ಅಳವಡಿಸುವ ಮೂಲಕ ಕಾಡಾನೆ ದಾಳಿ, ಬೆಳೆ ಹಾನಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆ. ಇನ್ನು ಕಾಡಂಚಿನ ಪ್ರದೇಶಗಳಲ್ಲಿ ಆಗಾಗ್ಗೆ ಕಾಡು ಬಿಟ್ಟು ನಾಡಿಗೆ ಬರುವ ಆನೆಗಳು ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತವೆ. ಅಲ್ಲದೆ ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿ ಸಾವನ್ನಪ್ಪಿರುವ ಸಾಕಷ್ಟು ನಿದರ್ಶನಗಳಿವೆ. ರೈತರು ಕೂಡ ಅಕ್ರಮವಾಗಿ ವಿದ್ಯುತ್ ಹರಿಸಿ ವನ್ಯಪ್ರಾಣಿಗಳ ಸಾವಿಗೆ ಕಾರಣವಾಗಿರುವ ಉದಾಹರಣೆಗಳಿವೆ. ಹೀಗಾಗಿ ಆನೆಗಳು ಹೆಚ್ಚಾಗಿ ಕಾಡಿನಿಂದ ಆಚೆ ಬರುವ ಪ್ರದೇಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಿ ಅಂತಹ ಜಾಗದಲ್ಲಿ ರೈಲ್ವೆ ಬ್ಯಾರಿಗೇಡ್‌ಗಳನ್ನು ಅಳವಡಿಸಲು ಮುಂದಾಗಿದ್ದಾರೆ.

ಒಂದೂವರೆ ಕೋಟಿ ರೂ ವೆಚ್ಚ

ಬಂಡೀಪುರದಲ್ಲಿ ಇಲ್ಲಿಯವರೆಗೂ 60 ಕಿ.ಮೀ ರೈಲ್ವೆ ಬ್ಯಾರಿಕೇಡ್ ಸಿದ್ಧಪಡಿಸಲಾಗಿದ್ದು, ಈ ವರ್ಷ ಮತ್ತೆ 27 ಕಿ.ಮೀ ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದ ಕಾಡಂಚಿನ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಪ್ಪಲಿದೆ. ಇನ್ನೂ ಈ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚು ದುಬಾರಿ ವೆಚ್ಚ ತಗುಲುತ್ತದೆ. ಒಂದು ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ಹಾಕಲು ಅಂದಾಜು ಒಂದೂವರೆ ಕೋಟಿ ರೂ. ಖರ್ಚಾಗುತ್ತದೆ. ಹೀಗಾಗಿ ಆನೆಗಳು ಹೆಚ್ಚಾಗಿ ಹೊರಗೆ ಬರುವ ಪ್ರದೇಶಗಳನ್ನು ಗುರುತಿಸಿ ಅಂತಹ ಜಾಗಗಳಲ್ಲಿ ಅಧಿಕಾರಿಗಳು ಬ್ಯಾರಿಕೇಡ್​ ಅಳವಡಿಸುವ ಕೆಲಸ ನಡೆದಿದೆ.

ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ಇನ್ನು ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆನೆ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲಿ ಕೂಡ ಮುಂದಿನ ದಿನಗಳಲ್ಲಿ ಈ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪುತ್ತದೆ. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version