Headlines

ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ ಪ್ರಿಯಾಂಕಾ ಚೋಪ್ರಾ: ಹೇಳಿದ್ದೇನು?

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ನಟಿ. ಬಾಲಿವುಡ್​​ನಲ್ಲಿ ಹಲವು ವರ್ಷ ಸ್ಟಾರ್ ನಟಿಯಾಗಿ ಮೆರೆದ ಬಳಿಕ 2015 ರ ಸುಮಾರಿಗೆ ಅವರು ಹಾಲಿವುಡ್​​ಗೆ ಎಂಟ್ರಿ ನೀಡಿದರು. ಆಗಿನಿಂದ ಅವರು ಬಾಲಿವುಡ್ ಜೊತೆಗೆ ಸಂಪರ್ಕನ್ನೇ ಕಡಿದುಕೊಂಡರು. 2019 ರಲ್ಲಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸಿದ್ದು ಬಿಟ್ಟರೆ ಅದಾದ ಬಳಿಕ ಅವರು ಯಾವೊಂದು ಹಿಂದಿ ಸಿನಿಮಾನಲ್ಲಿಯೂ ನಟಿಸಿಲ್ಲ. ಇದೀಗ ಅವರು ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ…

Read More

RCB ತಂಡದಲ್ಲಿ ‘ಧುರಂಧರ’ರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

IPL 2026: ಒಬ್ಬ ಕ್ರಿಕೆಟ್ ತಂಡದ ನಾಯಕನಿಗೆ ತನ್ನ ತಂಡ ಸತತವಾಗಿ 200ಕ್ಕೂ ಹೆಚ್ಚು ರನ್ ಗಳಿಸುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಮಾಧಾನ ಮತ್ತೊಂದಿಲ್ಲ. ಪ್ರಸ್ತುತ ನನ್ನ ತಂಡದ ಬ್ಯಾಟಿಂಗ್ ಲೈನಪ್ ನೋಡಿದರೆ, ಕೇವಲ ಆಟಗಾರರಲ್ಲ, ಅಪ್ಪಟ ‘ಧುರಂಧರ’ರ ದಂಡೇ ಅಲ್ಲಿ ನಿಂತಿದೆ ಅನ್ನಿಸುತ್ತದೆ. ಹೀಗಂದಿರುವುದು ಮತ್ಯಾರೂ ಅಲ್ಲ, ರಾಯಲ್ ಚಾಲೆಂಜರ್ಸ್​ ಬೆಂಗಳೂರು  ತಂಡದ ನಾಯಕ ರಜತ್ ಪಾಟಿದಾರ್. ‘ಧುರಂಧರ’ರ ದಂಡು: ಪ್ರತಿ ಪಂದ್ಯದಲ್ಲೂ 200 ರನ್ ದಾಟುವುದು ಸುಲಭದ ಮಾತಲ್ಲ. ಇದಕ್ಕೆ ಆರಂಭಿಕರಿಂದ ಹಿಡಿದು ಫಿನಿಶರ್‌ಗಳವರೆಗೆ…

Read More

ಈ ವರ್ಷದಲ್ಲಿ ಸಖತ್ ಏರಿಕೆಯಾಗುತ್ತಾ ಚಿನ್ನದ ಬೆಲೆ; ಜೆಪಿ ಮೋರ್ಗನ್ ವರದಿಯಲ್ಲಿ ಗೋಲ್ಡ್ ಪ್ರೆಡಿಕ್ಷನ್ – Kannada News | Gold Rate to increase by 40pc in next few months, as per JP Morgan forecast report

ನವದೆಹಲಿ, ಜೂನ್ 18: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ (Gold Rates) ಬಹುತೇಕ ಇಳಿಕೆ ಕಾಣುತ್ತಾ ಬಂದಿದೆ. ಬೆಲೆ ಇನ್ನಷ್ಟು ಇಳಿಯಬಹುದು ಎಂದು ಕೆಲವರು ಗ್ರಹಿಸಿದ್ದಾರೆ. ಆದರೆ, ಜೆ.ಪಿ. ಮೋರ್ಗನ್ ಗ್ಲೋಬಲ್ ರಿಸರ್ಚ್ ಸಂಸ್ಥೆಯು ಚಿನ್ನದ ಬೆಲೆ ಏರಿಕೆ ಸಾಧ್ಯತೆ ಬಗ್ಗೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಈ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಚಿನ್ನದ ಬೆಲೆ ಈ ವರ್ಷ ಹಾಗೂ ಮುಂದಿನ ವರ್ಷ ಸತತವಾಗಿ ಏರಿಕೆಯಾಗಬಹುದು ಎನ್ನಲಾಗಿದೆ. ಜೆ.ಪಿ. ಮೋರ್ಗನ್ ತನ್ನ ವರದಿಯಲ್ಲಿ, 2026ರ ನಾಲ್ಕನೇ…

Read More

ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿ ಯಾರು? – Kannada News | Muslim Man held for trying to offer Namaz at Ayodhya Ram Temple

ಅಯೋಧ್ಯೆ, ಜನವರಿ 10: ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 55 ವರ್ಷದ ವ್ಯಕ್ತಿಯನ್ನು ಅಬ್ದುಲ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ. ಆ ವ್ಯಕ್ತಿ ಶುಕ್ರವಾರ ರಾಮ ಮಂದಿರಕ್ಕೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಆವರಣವನ್ನು ಪ್ರವೇಶಿಸಿದ ನಂತರ, ಸೀತಾ ರಸೋಯಿ ಬಳಿ ಕುಳಿತು ನಮಾಜ್ ಮಾಡಲು ಸಿದ್ಧರಾದಾಗ ಅದನ್ನು ಕಂಡ ಭದ್ರತಾ ಪಡೆಯ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಆ ವ್ಯಕ್ತಿಯನ್ನು…

Read More

ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ವಿಶ್ವ ದಾಖಲೆ ಬರೆದ ದೀಪ್ತಿ ಶರ್ಮಾ! – Kannada News | Deepti Sharma Makes History in Womens T20I

ಭಾರತದ ಸ್ಟಾರ್ ಆಲ್-ರೌಂಡರ್ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜೂನ್ 14, 2026 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ದೀಪ್ತಿ ಸ್ಪಿನ್ ಮೋಡಿ ಮಾಡಿದ್ದರು. ಈ ಸ್ಪಿನ್ ಮೋಡಿಯೊಂದಿಗೆ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದೀಪ್ತಿ ವಿಶ್ವ ದಾಖಲೆ: ಅತ್ಯಧಿಕ ವಿಕೆಟ್: ದೀಪ್ತಿ ಶರ್ಮಾ ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು…

Read More

ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಬೆಂಗಳೂರು, ಏಪ್ರಿಲ್​​ 04: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. 22 ವರ್ಷದ ವಿಜಯ್ ಕೊಲೆಯಾದ ವ್ಯಕ್ತಿಯಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಜಯ್​ಗೆ ಚಾಕು ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಕಿರಣ್ ಮತ್ತು ವಿನೋದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ನಿನ್ನೆ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್​​ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ…

Read More

ಕಾಂಗರೂಗಳನ್ನು ಅವರ ನೆಲದಲ್ಲಿ ಮಣಿಸಿ ಭಾರತದ ದಾಖಲೆ ಸರಿಗಟ್ಟಿದ ಇಂಗ್ಲೆಂಡ್‌

ಆಶಸ್ ಸರಣಿಯಲ್ಲಿ ಸತತ 3 ಪಂದ್ಯಗಳನ್ನು ಸೋತು, ಸರಣಿಯನ್ನು ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಸೋಲಿನ ಸರಣಿಯನ್ನು ಅಂತ್ಯಗೊಳಿಸಿದೆ. ಆತಿಥೇಯ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್‌, ಕಾಂಗರೂಗಳ ನಾಡಲ್ಲಿ 15 ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಇದಕ್ಕೂ ಮೊದಲು, ಇಂಗ್ಲೆಂಡ್ 2011 ರಲ್ಲಿ ನಡೆದ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿತ್ತು. ಈ ಗೆಲುವಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಧಿಕ ಗೆಲುವು ಸಾಧಿಸಿದ ಪಟ್ಟಿಯಲ್ಲಿ ಇಂಗ್ಲೆಂಡ್…

Read More

Viral: ಪ್ರಿಯಕರನಿಗೆ ಗಿಫ್ಟ್ ಕೊಡಲು 2ಲಕ್ಷ ರೂ. ಮೌಲ್ಯದ ವಾಚ್ ಕದ್ದ ಯುವತಿ ಅರೆಸ್ಟ್! – Kannada News | Hyderabad Watch Theft: Girlfriend Steals Rs 2 Lakh Tissot for Boyfriend, Arrested

ಹೈದರಾಬಾದ್: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಮಾತಿದೆ, ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಲು ಹೋಗಿ ಅರೆಸ್ಟ್ ಆಗಿದ್ದಾಳೆ. ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಐಷಾರಾಮಿ ಶೋರೂಮ್‌ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಯುವತಿ ಜುಬಿಲಿ ಹಿಲ್ಸ್‌ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್‌ಗೆ ಗ್ರಾಹಕಿಯಂತೆ ಎಂಟ್ರಿ ಕೊಟ್ಟಿದ್ದಾಳೆ. ತನಗೆ ಒಳ್ಳೆಯ ವಾಚ್‌ಗಳನ್ನು…

Read More

ಪೀಣ್ಯ ಇಂಡಸ್ಟ್ರಿಗೂ ತಟ್ಟಿದ ಗ್ಯಾಸ್ ​ಎಫೆಕ್ಟ್: ಕೆಲಸವಿಲ್ಲದೇ ಕೈಕಟ್ಟಿ ಕುಳಿತ ಕಾರ್ಮಿಕರು; ಕೋಟ್ಯಂತರ ರೂ ನಷ್ಟ

ನೆಲಮಂಗಲ, ಮಾರ್ಚ್​​ 14: ಮಧ್ಯಪ್ರಾಚ್ಯದಲ್ಲಿ ಯುದ್ದದ ಎಫೆಕ್ಟ್ ಹಿನ್ನೆಲೆ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗಳ (gas cylinder) ಅಭಾವ ಉಂಟಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಎಫೆಕ್ಟ್ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಗಳಿದ್ದು ಸಿಲಿಂಡರ್ ಎಫೆಕ್ಟ್​ನಿಂದ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ತಟ್ಟಿದ ಕಮರ್ಷಿಯಲ್ ಸಿಲಿಂಡರ್ ಬಿಸಿ ಕಮರ್ಷಿಯಲ್ ಸಿಲಿಂಡರ್ ಸ್ಟಾಕ್ ಬಂದ್ ಹಿನ್ನೆಲೆ ಹೋಟೆಲ್ ಉದ್ಯಮದ ಜೊತೆಗೆ ಪೀಣ್ಯ…

Read More

ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಬೆಂಗಳೂರು, ಮಾರ್ಚ್​ 18: ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು (Pulsar Babu) ಬೆಂಗಳೂರಿನ (Bangalore) ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಈಗಾಗಲೇ 19 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ಈತ ಈ ಹಿಂದೆ ಕೂಡ ಇಂಥದ್ದೇ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ. ಪಲ್ಸರ್ ಬಾಬುಗೆ ವರದಾನವಾಗಿದ್ದ…

Read More