Headlines

ನೇಣುಬಿಗಿದ ಸ್ಥಿತಿಯಲ್ಲಿ ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ? – Kannada News | Kalaburagi pocso case accused hanged police probe suicide or foul play

ಕಲಬುರಗಿ, ಏಪ್ರಿಲ್​​ 20: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ ಪೋಕ್ಸೋ ಕೇಸ್​​ ಎದುರಿಸುತ್ತಿದ್ದ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ನಡೆದಿದೆ. ರೇವಣಸಿದ್ದಪ್ಪ ತಳಕೇರಿ (26) ಮೃತನಾಗಿದ್ದು, ಶೌಚಕ್ಕೆ ಹೋಗಿ ಬರೋದಾಗಿ ಹೇಳಿ ಹೋರಹೋದವ ಊರಾಚೆಗಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಹೀಗಾಗಿ ರೇವಣಸಿದ್ದಪ್ಪ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಟಂಟಂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ರೇವಣಸಿದ್ದಪ್ಪ, ತನ್ನದೇ ಆಟೋದಲ್ಲಿ ನಿತ್ಯ…

Read More

West Bengal Election 2026: 142 ಕ್ಷೇತ್ರಗಳು, 1448 ಅಭ್ಯರ್ಥಿಗಳು, 3.21 ಕೋಟಿ ಮತದಾರರು, ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ – Kannada News | West Bengal Election 2026: Phase 2 Voting Begins, 3.21 Crore Voters Decide Fate

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ(West Bengal)ದ ಹದಿನಾರನೇ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈಗ ಎಲ್ಲರ ಕಣ್ಣು ಇಂದಿನ ಮತದಾನದ ಮೇಲೆ ನೆಟ್ಟಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಚಾರದ ಅಂತಿಮ ದಿನದಂದು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಗೆಲುವಿನ ಬಗ್ಗೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದಿನ ತಿಂಗಳು…

Read More

Mangaluru: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ! – Kannada News | Domestic Row Claims Two Lives in Manjeshwara, Kasaragod

ಶೇಕುಂಞ ಮತ್ತು ಉಮರ್ ಫಾರೂಕ್​​ ಜೊತೆ ಜುಮೈಲImage Credit source: Tv9 Kannada ಮಂಗಳೂರು, ಫೆಬ್ರವರಿ 03: ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ. ಜುಮೈಲ(18) ಮತ್ತು ಶೇಕುಂಞ(55) ಮೃತ ದುರ್ದೈವಿಗಳಾಗಿದ್ದು, ಆರೋಪಿ ಉಮರ್ ಫಾರೂಕ್​​ನ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜಗಳ ಬಿಡಿಸಲು ಹೋದ ಜುಮೈಲ ಮೊದಲು ಮೃತ ಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಶೇಕುಂಞ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಫಾರೂಕ್​ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ…

Read More

ಯಾವುದೇ ಭಾಷೆಯಲ್ಲಾದರೂ ಕರೆ ಮಾಡಿ, ಪೊಲೀಸರು ಓಡಿ ಬರ್ತಾರೆ! ನಮ್ಮ 112 ಗೆ ಹೈಟೆಕ್ AI ಟಚ್; ಇದು ಜನರಿಗೆ ಹೇಗೆ ಪ್ರಯೋಜನ? – Kannada News | VANKI AI Transforms Bengaluru Emergency Calls: Namma 112 Now Multilingual and Faster

ಬೆಂಗಳೂರು, ಏ.29: ಸಿಲಿಕಾನ್ ಸಿಟಿಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಪೊಲೀಸರು ತಮ್ಮ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ ಗೆ ಭರ್ಜರಿ ಅಪ್‌ಗ್ರೇಡ್ ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಭಾಷೆಯ ಅಡೆತಡೆಯನ್ನು ನಿವಾರಿಸಲು ಭಾರತದಲ್ಲೇ ಮೊದಲ ಬಾರಿಗೆ ಬಹುಭಾಷಾ AI ಚಾಲಿತ ‘VANKI’ (Voice AI for Nationwide Key Interventions) ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇದು ಜನರಿಗೆ ಹೇಗೆ ಪ್ರಯೋಜನ ಆಗಲಿದೆ ಎಂಬುದನ್ನು ಕೂಡ ಹೇಳಿದೆ. ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಏನಿದು…

Read More

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ – Kannada News | Tooth Decay Explained: Early Cavity Symptoms You Shouldn’t Ignore

ಪ್ರತಿದಿನ ಹಲ್ಲುಗಳನ್ನು ಬ್ರಷ್ (Brushing) ಮಾಡುತ್ತಿದ್ದರೂ ಕ್ಯಾವಿಟಿ ಸಮಸ್ಯೆ (Cavity) ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ. ದಂತ ಆರೋಗ್ಯದ ಬಗ್ಗೆ ಜಾಗೃತಿ ಇದ್ದರೂ ಈ ಸಮಸ್ಯೆ ಉಂಟಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ದಂತ ವೈದ್ಯರ ಪ್ರಕಾರ, ಕ್ಯಾವಿಟಿ ಎಂದರೆ ದಂತದ ಮೇಲ್ಭಾಗದಲ್ಲಿ ಹಾನಿ ಉಂಟಾಗುವುದು. ಇದು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಉಂಟಾಗಿ, ನಿಧಾನವಾಗಿ ದಂತದಲ್ಲಿ ಕುಳಿ ಉಂಟುಮಾಡುತ್ತದೆ. ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ…

Read More

ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಊಟ-ತಿಂಡಿ ದರವೂ ಹೆಚ್ಚಾಗುತ್ತಾ? ಹೋಟೆಲ್ ಮಾಲೀಕರು ಏನಂತಾರೆ ನೋಡಿ

ಬೆಂಗಳೂರು, ಜೂನ್ 1: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸರಣಿಯಾಗಿ ಏರಿಕೆಯಾಗುತ್ತಿರುವುದು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂದು ಕೂಡ ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಬೆಂಗಳೂರಿನಲ್ಲಿ 46 ರೂ. ಹೆಚ್ಚಳವಾಗಿದ್ದು, ಮುಂಬರುವ ದಿನಗಳಲ್ಲಿ ಇದರ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ಗ್ಯಾಸ್ ಏಜೆನ್ಸಿಗಳು ಈಗಾಗಲೇ ಮುನ್ಸೂಚನೆ ನೀಡಿವೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದ್ದು, ದರ ಏರಿಕೆ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲದ ಕಾರಣ…

Read More

ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ಬಾಗಿಲು ಲಾಕ್ ಆಗದೇ ಇದ್ದುದರ ಅಸಲಿ ಕಾರಣ ಬಯಲು – Kannada News | BMRCL Clarifies: Passenger’s Metal Chain Caused Cubbon Park Metro Door Malfunction and Service Delay

ಪರ್ಪಲ್ ಲೈನ್ ಮೆಟ್ರೋ ರೈಲು (ಸಂಗ್ರಹ ಚಿತ್ರ) ಹಾಗೂ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದ ಲೋಹದ ಸರImage Credit source: tv9 ಬೆಂಗಳೂರು, ಜೂನ್ 26: ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೆ ಪ್ರಯಾಣಿಕರು ಆತಂಕಗೊಂಡಿದ್ದ ಮತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲಿನಲ್ಲಿ…

Read More