Headlines

ಬರಲಿದೆಯಾ ‘ಧುರಂಧರ್ 3’? ಚಿತ್ರತಂಡದ ಪ್ರಮುಖ ಸದಸ್ಯ ಹೇಳಿದ್ದೇನು?

‘ಧುರಂಧರ್ 2’ (Dhurandhar 2) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿದೆ. 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಆಗಿದೆ. ಮೊದಲ ಭಾಗಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ‘ಧುರಂಧರ್ 2’ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ. ಕೋವಿಡ್ ಬಳಿಕ ಸೀಕ್ವೆಲ್​​ಗಳ ಅಬ್ಬರ ಜೋರಾಗಿದೆ. ಸಾಮಾನ್ಯ ಸಿನಿಮಾಗಳನ್ನು ಸಹ ಸೀಕ್ವೆಲ್ ಅಥವಾ ಫ್ರಾಂಚೈಸ್ ಸಿನಿಮಾ (ಸರಣಿ) ಮಾಡಲಾಗುತ್ತಿದೆ. ಹಾಲಿವುಡ್​​ನಲ್ಲಂತೂ ಈ ಸಿನಿಮಾ ಪ್ರಾಂಚೈಸ್ ಬಹಳ ಜನಪ್ರಿಯ….

Read More

Video: ಎರಡೂವರೆ ತಾಸಿಂದ ನೋಡ್ತಿದ್ದೀನಿ ಗುರಾಯ್ಸೋದ್ಯಾಕೆ ಎಂದು ಕೇಳಿದ್ದಕ್ಕೆ ಯುವತಿಗೆ ಕಪಾಳಮೋಕ್ಷ ಮಾಡಿದ ಯುವಕ – Kannada News | Train Altercation Video Sparks Outrage After Woman Assaulted

ರೈಲು ಪ್ರಯಾಣವೆಂದರೆ ನೂರಾರು ಅಪರಿಚಿತರ ನಡುವೆ ಸಾಗುವ ಪಯಣ, ಎಲ್ಲಾ ರೀತಿಯ ಜನರೂ ಇರ್ತಾರೆ. ಸುಮಾರು ಎರಡೂವರೆ ಗಂಟೆಯಿಂದ ಯುವತಿಯನ್ನು ದಿಟ್ಟಿಸಿ ನೋಡುತ್ತಿದ್ದ ಯುವಕನ ಬಳಿ ಪ್ರಶ್ನೆ ಮಾಡಿದಾಗ ಆತ ಕೂಡಲೇ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ರೈಲಿನಲ್ಲಿ ನೂರಾರು ಪ್ರಯಾಣಿಕರು ಇದ್ದರೂ, ಈ ಹಲ್ಲೆಯನ್ನು ತಡೆಯಲು ಯಾರೂ ಮುಂದೆ ಬಂದಿಲ್ಲದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.ಪ್ರಸ್ತುತ ರೈಲ್ವೆ ಅಧಿಕಾರಿಗಳು ಈ ವಿಡಿಯೋ ಯಾವ ಮಾರ್ಗದ ರೈಲಿನಲ್ಲಿ…

Read More

ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ‘ದೋಸ್ತಿ’ ನಾಯಕರಿಂದ ಅಹೋರಾತ್ರಿ ಧರಣಿ

ಬೆಂಗಳೂರು, ಫೆಬ್ರವರಿ 04: ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು, ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿವೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಶಾಸಕರು ಜಾಗಟೆ ಬಾರಿಸಿ, ಹಾಡು ಹಾಡಿ ವಿಭಿನ್ನವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಆವರಣದಲ್ಲೇ ರಾತ್ರಿ ಊಟ ಮಾಡಿ, ವಿಶ್ರಮಿಸುವ ಮೂಲಕ ಸರ್ಕಾರದ ವಿರುದ್ಧ ನಾಯಕರು ಕಿಡಿಕಾರಿದ ಪ್ರಸಂಗ ನಡೆದಿದೆ. ಮತ್ತಷ್ಟು ವಿಡಿಯೋ ನೋಡಲು…

Read More

Financial Stress: ಇಎಂಐ ಮತ್ತು ಸಾಲದ ಹೊರೆಯಿಂದ ಕಂಗಾಲಾಗಿದ್ದೀರಾ? ಮಂಗಳವಾರ ಈ ಒಂದು ಕೆಲಸ ಮಾಡಿ – Kannada News | Financial Peace: Angaraka Stotra Solution for Debt and Loan EMI Stress

ಇಂದಿನ ಆಧುನಿಕ ಜೀವನದಲ್ಲಿ ಹೋಮ್ ಲೋನ್​, ವೈಯಕ್ತಿಕ ಸಾಲ (Personal Loan), ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳ ಸುಳಿಗೆ ಸಿಲುಕದವರೇ ಇಲ್ಲ. ಈ ಸಾಲದ ಕಂತುಗಳು ಕೇವಲ ಜೇಬಿಗೆ ಕತ್ತರಿ ಹಾಕುವುದು ಮಾತ್ರವಲ್ಲದೆ, ತೀವ್ರ ಮಾನಸಿಕ ಅಶಾಂತಿ ಮತ್ತು ಕೌಟುಂಬಿಕ ಒತ್ತಡಕ್ಕೂ ಕಾರಣವಾಗುತ್ತವೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕಠಿಣ ಪರಿಶ್ರಮದ ಜೊತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಿಹಾರಗಳ ಮೊರೆ ಹೋಗುವವರಿಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ವಿಶೇಷ ಮಾರ್ಗವನ್ನು ಸೂಚಿಸಲಾಗಿದೆ. ಅದೇ ‘ಋಣ ವಿಮೋಚನ ಅಂಗಾರಕ ಸ್ತೋತ್ರ’. ಸಾಲ…

Read More

ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!

ಜೈಪುರ, ಏಪ್ರಿಲ್ 4: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಲು ಯುವಕನೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ತನ್ನ ಸ್ಕಾರ್ಪಿಯೋಗೆ ಡೀಸೆಲ್ ತುಂಬಿಸಿದ ನಂತರ ಡೀಸೆಲ್​ನಿಂದಲೇ ತನ್ನ ಗಾಡಿಯನ್ನು ತೊಳೆದಿರುವ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಈ ಕೃತ್ಯ ಎಸಗಿದ ಆತನನ್ನು ಬಂಧಿಸಲು ಒತ್ತಾಯಿಸಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು, ವಿಡಿಯೋ ಮಾಡಿದವನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

Read More

ಪುರುಷರು ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ 2 ಹುರಿದ ಖರ್ಜೂರ ಸೇವನೆ ಮಾಡಬೇಕು ಯಾಕೆ ಗೊತ್ತಾ? – Kannada News | Health Benefits of Dates: What Experts Say

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿಯೇ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅದಲ್ಲದೆ ಈ ಸಮಯದಲ್ಲಿ, ಆಹಾರ ಪದ್ಧತಿಯೂ ಬದಲಾಗುವುದರಿಂದ ಈ ಋತುವಿನಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಒಣ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾದದ್ದು ಖರ್ಜೂರ (Dates). ಇದನ್ನು ಹುರಿದು ಸೇವನೆ ಮಾಡುವುದರಿಂದ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆಯುರ್ವೇದದಲ್ಲಿಯೂ ಇದನ್ನು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಗಾದರೆ ಹುರಿದ ಖರ್ಜೂರ ಸೇವನೆ ಮಾಡುವುದರಿಂದ ಯಾವ…

Read More

KKR vs GT: 34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್

ಐಪಿಎಲ್ 2026 ರ 60 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಫಿನ್ ಅಲೆನ್ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈಡನ್ ಗಾರ್ಡನ್ಸ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ ಅಲೆನ್ ಕೇವಲ 7 ರನ್​ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಅಲೆನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಹತ್ತು ಸಿಕ್ಸರ್‌ಗಳ ಸಹಿತ 93 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು….

Read More