Video: ನೀಟ್ ಪರೀಕ್ಷಾ ಅಕ್ರಮ; ‘ಹಕ್ಕುಗಳಿಗಾಗಿ ಹೋರಾಡಿ, ಆದರೆ ವಿವೇಚನೆ ಕಳೆದುಕೊಳ್ಳಬೇಡಿ’ – ರವಿಶಂಕರ್ ಗುರೂಜಿ – Kannada News | Sri Sri Ravi Shankar Urges Calm Amidst NEET UG Protests: Peaceful Talks Key
ದೆಹಲಿ, ಜು.25: ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವ ಆಕ್ರೋಶದ ಕುರಿತು ಪ್ರತಿಕ್ರಿಯಿಸಿರುವ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು, ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿರುವುದು ಸಮಂಜಸವಾಗಿದ್ದರೂ, ಆವೇಶದ ನಡುವೆ ವಿವೇಚನೆ ಮತ್ತು ಸಮಾಧಾನವನ್ನು ಕಳೆದುಕೊಳ್ಳಬಾರದೆಂದು ಕರೆ ನೀಡಿದ್ದಾರೆ. ಪ್ರತಿಭಟನೆಗಳ ಸನ್ನಿವೇಶವನ್ನು ಅಸಾಮಾಜಿಕ ಹಾಗೂ ದೇಶವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿರುವುದರಿಂದ ಪ್ರತಿಯೊಬ್ಬರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು…