Headlines

‘ರಾಮಾಯಣ’ ಚಿತ್ರದ ಪ್ರಚಾರದ ಬಜೆಟ್ ಹಣದಲ್ಲಿ 4 ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು – Kannada News | Ramayana Promotion Budget Shock: Sony Pictures & Makers to Spend Massive 375 Crore  RS Internationally

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’  (Ramayana) ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಚಿತ್ರದ ಮೇಲಿನ ಹೈಪ್ ಗಗನಕ್ಕೇರುತ್ತಿದೆ. ಈಗ ಚಿತ್ರದ ಪ್ರಚಾರದ ಬಜೆಟ್ ಕೇಳಿ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಈ ಹಣದಲ್ಲಿ 4 ಕೆಜಿಎಫ್ ನಿರ್ಮಾಣ ಮಾಡಬಹುದು ಎಂಬ ಮಾತು ಕೇಳಿ ಬಂದಿದೆ. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ…

Read More

ಒಂದೇ ಒಂದು ಪಂದ್ಯ ಆಡದಿದ್ದರೂ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದ್ದು ಹೇಗೆ? – Kannada News | Lovlina Borgohain Secures Medal Without Firing a Punch at CWG 2026

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ (CWG 2026) ಮೊದಲ ದಿನವೇ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ. ಅದು ಕೂಡ ಬಾಕ್ಸಿಂಗ್ ವಿಭಾಗದಲ್ಲಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಈ ಕ್ರೀಡಾಕೂಟದಲ್ಲಿ ಒಂದೇ ಒಂದು ಪಂದ್ಯವನ್ನು ಆಡದೆ ಕಂಚಿನ ಪದಕವನ್ನು ಖಚಿತಪಡಿಸಿರುವುದು ವಿಶೇಷ. ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅಸ್ಸಾಂನ 28 ವರ್ಷದ ಲವ್ಲಿನಾ, ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್…

Read More

Bengaluru Cleanliness Campaign: ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ – Kannada News | Minister Krishna Byre Gowda Launches Cleanliness Drive in Thanisandra, Bengaluru

ಬೆಂಗಳೂರು, ಜುಲೈ 25: ಬೆಂಗಳೂರನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಥಣಿಸಂದ್ರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನವು ಥಣಿಸಂದ್ರವನ್ನು ಸಂಪೂರ್ಣವಾಗಿ ಕಸಮುಕ್ತ ಪ್ರದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಸ್ವಚ್ಛತಾ ಅಭಿಯಾನವನ್ನು ಥಣಿಸಂದ್ರದಲ್ಲಿರುವ ಪೊಲೀಸ್ ತರಬೇತಿ ಶಾಲೆ ಮತ್ತು ರಾಷ್ಟ್ರೋತ್ಥಾನ ಶಾಲೆಯ ಆವರಣದಲ್ಲಿ ಪ್ರಾರಂಭಿಸಲಾಯಿತು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಪ್ರದೇಶದ ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ….

Read More

Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ – Kannada News | Amarnath Yatra Resumes: Pilgrims Head to Baltal After 6 Day Halt in Jammu and kashmir

ಅಮರನಾಥ ಯಾತ್ರೆ ಪುನರಾರಂಭImage Credit source: Getty Images ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ, ಭೂಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯನ್ನು ಶನಿವಾರದಂದು ಆಡಳಿತ ಮಂಡಳಿಯು ಅಧಿಕೃತವಾಗಿ ಪುನರಾರಂಭಿಸಿದೆ. ಹವಾಮಾನ ಸುಧಾರಿಸಿ, ಉಧಮ್‌ಪುರ-ರಾಂಬನ್ ಮಾರ್ಗದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಿದ ನಂತರ, ಭಗವತಿ ನಗರದ ಮೂಲ ಶಿಬಿರದಿಂದ ಹೊಸ ಯಾತ್ರಿಕರ ತಂಡಕ್ಕೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. 18 ನೇ ಬ್ಯಾಚ್‌ನಿಂದ ಬಾಲ್ಟಾಲ್ ಮಾರ್ಗದತ್ತ ಪ್ರಯಾಣ:…

Read More

ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್! – Kannada News | Bengaluru Man Promised Govt Job Duped of Rs 26 Lakh; 4 Booked

ಬೆಂಗಳೂರು, ಜುಲೈ 25: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯ ಹಿರಿಯ ವ್ಯವಸ್ಥಾಪಕರೊಬ್ಬರಿಗೆ 26 ಲಕ್ಷ ರೂಪಾಯಿ ವಂಚಿಸಿರುವ ಜಾಲವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್‌ನ ಖಾಸಗಿ ಗೋಲ್ಡ್ ಫರ್ಮ್‌ನಲ್ಲಿ ಕೆಲಸ ಮಾಡುತ್ತಿರುವ ಜಿ.ಕೆ. ರಘುನಂದನ್ (36) ಎಂಬುವರೇ ಹಣ ಕಳೆದುಕೊಂಡ ಸಂತ್ರಸ್ತ. ಈ ಸಂಬಂಧ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂತೋಷ್ ಹೊಸಮನಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ…

Read More

ಏಷ್ಯನ್ ಗೇಮ್ಸ್​​ಗೆ ಟೀಮ್ ಇಂಡಿಯಾ ಹೀಗಿದೆ – Kannada News | India Squad For Asian Games 2026

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಟೂರ್ನಿಗಾಗಿ ಬಲಿಷ್ಠ ಭಾರತ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಮಹಿಳಾ ತಂಡಕ್ಕೆ ಹರ್ಮನ್​ಪ್ರೀರ್ ಕೌರ್ ಸಾರಥ್ಯವಹಿಸಲಿದ್ದಾರೆ. ಇನ್ನು ಉಭಯ ತಂಡಗಳು ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯುವ ಮೂಲಕ ಏಷ್ಯನ್ ಗೇಮ್ಸ್ ಅಭಿಯಾನ ಆರಂಭಿಸಲಿದೆ. ಪಂದ್ಯಾವಳಿಯ ದಿನಾಂಕಗಳು: ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ 22 ರವರೆಗೆ ನಡೆಯಲಿದೆ. ಪುರುಷರ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ…

Read More

ಇಂದು ಮಧ್ಯಾಹ್ನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ‘ಸಿಜೆಪಿ’ ನೀಡಿದ ಡೆಡ್‌ಲೈನ್ ಅಂತ್ಯ – Kannada News | Delhi on High Alert as CJP Intensifies Protest for Dharmendra Pradhans Resignation Over NEET Paper Leak

ದೆಹಲಿ, ಜು.25: NEET ಪರೀಕ್ಷೆ ಪೇಪರ್ ಲೀಕ್ ಹಗರಣ ಖಂಡಿಸಿ ಸಿಜೆಪಿ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನೀಡಲಾಗಿದ್ದ ಗಡುವು ಇಂದು ಮಧ್ಯಾಹ್ನ ಅಂತ್ಯಗೊಳ್ಳಲಿದೆ. ಪ್ರಧಾನ್ ರಾಜೀನಾಮೆ ಸೇರಿದಂತೆ ಮೂರು ಬೇಡಿಕೆಗಳನ್ನು ಸಿಜೆಪಿ ಮುಂದಿಟ್ಟಿದ್ದು, ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಇಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ಸಿಜೆಪಿ ಜೊತೆ ಮೂರನೇ ಸುತ್ತಿನ ಸಭೆ ನಡೆಯಲಿದೆ. ಈಗಾಗಲೇ ನಡೆದ…

Read More

ರಾಜ್ಯದ ಜಲಾಶಯಗಳ ಇಂದಿನ ಸ್ಥಿತಿಗತಿ: ಕೃಷ್ಣಾ ನದಿಗೆ ಹರಿದುಬಂತು 88 ಸಾವಿರ ಕ್ಯೂಸೆಕ್ ನೀರು – Kannada News | Major Karnataka Dams: Kabini, KRS, Almatti Water Storage and Inflow

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವಿನ ಪ್ರಮಾಣದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿ ಇಂದಿನ (ಜುಲೈ ೨೫) ನೀರಿನ ಮಟ್ಟದ ವಿವರ ಇಲ್ಲಿದೆ. ಕಬಿನಿ ಜಲಾಶಯ (ಮೈಸೂರು) ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇಂದಿನ ನೀರಿನ ಮಟ್ಟ 72.77 ಅಡಿ (ಕಳೆದ ವರ್ಷ ಇದೇ ದಿನ: 82.86 ಅಡಿ). ಇನ್ನು ನೀರಿನ ಸಂಗ್ರಹ 13.61 ಟಿಎಂಸಿ (ಕಳೆದ ವರ್ಷ: 19.16…

Read More

‘ನಿರ್ದೇಶಕರ ಜೊತೆ ಮಲಗುವಂತೆ ಪತಿ ಒತ್ತಾಯಿಸುತ್ತಿದ್ದ’: ಆಮಿರ್ ಮಲಸಹೋದರನ ಬಗ್ಗೆ ನಟಿ ಇವಾ ಆರೋಪ – Kannada News | Aamir Khan’s Stepbrother Hyder Forced Me To Sleep With Directors Says Eva Grover 

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ ವಿರುದ್ಧ ಅವರ ಮಾಜಿ ಪತ್ನಿ, ನಟಿ ಇವಾ ಗ್ರೋವರ್ ಅತ್ಯಂತ ಆಘಾತಕಾರಿ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮತ್ತು ಮನೆ ನಡೆಸಲು ಪತಿ ತಮಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಇವಾ ಅವರ ಈ ಮಾತುಗಳು ಈಗ ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ. ಖ್ಯಾತ ನಿರೂಪಕ ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಇವಾ ಗ್ರೋವರ್ ಈ ಕಹಿ ಸತ್ಯವನ್ನು…

Read More

Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ – Kannada News | Shani Dev and Sade Sati: Why Applying Oil on Head on Saturday is Forbidden

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರವನ್ನು ಶನಿ ದೇವರಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿದೇವನನ್ನು “ನ್ಯಾಯಾಧಿಪತಿ” ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಯು ಅತ್ಯಂತ ಮಂದಗತಿಯ ಗ್ರಹವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿ ದೋಷ, ಧೈಯಾ ಅಥವಾ ಸಾಡೇ ಸಾತಿಯ ಪ್ರಭಾವದಿಂದ ಮುಕ್ತಿ ಪಡೆಯಲು ಶನಿವಾರದಂದು ವಿಶೇಷ ಪೂಜೆ, ಉಪವಾಸ ಮತ್ತು ದಾನ-ಧರ್ಮಗಳನ್ನು ಮಾಡಲಾಗುತ್ತದೆ. ಪದ್ಮ ಪುರಾಣದ…

Read More