‘ರಾಮಾಯಣ’ ಚಿತ್ರದ ಪ್ರಚಾರದ ಬಜೆಟ್ ಹಣದಲ್ಲಿ 4 ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು – Kannada News | Ramayana Promotion Budget Shock: Sony Pictures & Makers to Spend Massive 375 Crore  RS Internationally

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’  (Ramayana) ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಚಿತ್ರದ ಮೇಲಿನ ಹೈಪ್ ಗಗನಕ್ಕೇರುತ್ತಿದೆ. ಈಗ ಚಿತ್ರದ ಪ್ರಚಾರದ ಬಜೆಟ್ ಕೇಳಿ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಈ ಹಣದಲ್ಲಿ 4 ಕೆಜಿಎಫ್ ನಿರ್ಮಾಣ ಮಾಡಬಹುದು ಎಂಬ ಮಾತು ಕೇಳಿ ಬಂದಿದೆ.

ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಸೋನಿ ಪಿಕ್ಚರ್ಸ್ ಸಂಸ್ಥೆ ಕೈಜೋಡಿಸಿದೆ. ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಸೋನಿ ಸಂಸ್ಥೆ ಭರ್ಜರಿ ಪ್ರಚಾರದ ತಂತ್ರ ರೂಪಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 24ರಂದು ಟ್ರೇಲರ್ ರಿಲೀಸ್ ಆಗಬೇಕಿತ್ತು. ಆದರೆ, ಸೋನಿ ಜೊತೆ ಕೈ ಜೋಡಿಸಿದ ಕಾರಣ ಟ್ರೇಲರ್ ಲಾಂಚ್ ಅನ್ನು ಮುಂದಕ್ಕೆ ಹಾಕಲಾಗಿದೆ.

ವರದಿಗಳ ಪ್ರಕಾರ ಅಂತಾರಾಷ್ಟ್ರೀಯ ಪ್ರಚಾರಕ್ಕಾಗಿ ಸೋನಿ ಸಂಸ್ಥೆ ಬರೋಬ್ಬರಿ 235 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇದರ ಜೊತೆಗೆ ಚಿತ್ರದ ನಿರ್ಮಾಪಕರು ಕೂಡ 140 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಒಟ್ಟು ಪ್ರಚಾರದ ಬಜೆಟ್ ಬರೋಬ್ಬರಿ 375 ಕೋಟಿ ರೂಪಾಯಿ ತಲುಪಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರಚಾರಕ್ಕೆ ಬಳಸುತ್ತಿರುವುದು ಇದೇ ಮೊದಲು. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಚಿತ್ರತಂಡ ಹಠಕ್ಕೆ ಬಿದ್ದಿದೆ. ಈ ಮೂಲಕ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಕನಸು ಚಿತ್ರತಂಡಕ್ಕಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲೂ ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿ ಅದ್ಭುತವಾದ ವಿಶ್ಯುವಲ್ ಎಫೆಕ್ಟ್ಸ್ ಇರಲಿವೆ. ಚಿತ್ರವು ಐಮ್ಯಾಕ್ಸ್ ಪರದೆಯ ಮೇಲೆ ಮೂಡಿಬರಲಿದೆ. ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಹ್ಯಾನ್ಸ್ ಜಿಮ್ಮರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಟ್ರೇಲರ್ ಬಿಡುಗಡೆಯಾದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣದಲ್ಲಿ ರಾವಣ ಪಾತ್ರಧಾರಿ ಯಾರು?
ಉತ್ತರ:
ಯಶ್ 

ಪ್ರಶ್ನೆ: ರಾಮಾಯಣದಲ್ಲಿ ರಾಮನ ಪಾತ್ರಧಾರಿ ಯಾರು?
ಉತ್ತರ:
ರಣಬೀರ್ ಕಪೂರ್

Published On – 10:32 am, Sat, 25 July 26

Source link

ಒಂದೇ ಒಂದು ಪಂದ್ಯ ಆಡದಿದ್ದರೂ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದ್ದು ಹೇಗೆ? – Kannada News | Lovlina Borgohain Secures Medal Without Firing a Punch at CWG 2026

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ (CWG 2026) ಮೊದಲ ದಿನವೇ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ. ಅದು ಕೂಡ ಬಾಕ್ಸಿಂಗ್ ವಿಭಾಗದಲ್ಲಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಈ ಕ್ರೀಡಾಕೂಟದಲ್ಲಿ ಒಂದೇ ಒಂದು ಪಂದ್ಯವನ್ನು ಆಡದೆ ಕಂಚಿನ ಪದಕವನ್ನು ಖಚಿತಪಡಿಸಿರುವುದು ವಿಶೇಷ.

ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅಸ್ಸಾಂನ 28 ವರ್ಷದ ಲವ್ಲಿನಾ, ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಇಂತಹದೊಂದು ವಿಶಿಷ್ಟ ರೀತಿಯಲ್ಲಿ ಭಾರತಕ್ಕೆ ಮೊದಲ ಪದಕ ಒಲಿದಿರುವುದು ಇದೇ ಮೊದಲು.

ಪಂದ್ಯ ಆಡದಿದ್ದರೂ ಪದಕ ಖಚಿತವಾಗಿದ್ದು ಹೇಗೆ?

ಲವ್ಲಿನಾ ಬೊರ್ಗೊಹೈನ್ ಅವರು ರಿಂಗ್‌ನಲ್ಲಿ ಒಂದೇ ಒಂದು ಪಂದ್ಯ ಆಡದಿದ್ದರೂ ಪದಕ ಖಚಿತವಾಗಲು ಕಾಮನ್‌ವೆಲ್ತ್ ಗೇಮ್ಸ್‌ನ ವಿಶೇಷ ಡ್ರಾ ವ್ಯವಸ್ಥೆ ಮತ್ತು ಬಾಕ್ಸಿಂಗ್ ನಿಯಮಗಳೇ ಕಾರಣ.

  • ಕಡಿಮೆ ಸ್ಪರ್ಧಿಗಳ ಸಂಖ್ಯೆ: ಗ್ಲ್ಯಾಸ್ಗೋ ಕ್ರೀಡಾಕೂಟದ ಮಹಿಳೆಯರ 75 ಕೆಜಿ ತೂಕದ ವಿಭಾಗದಲ್ಲಿ ಈ ಬಾರಿ ಕೇವಲ 5 ಬಾಕ್ಸರ್‌ಗಳು ಮಾತ್ರ ಕಣದಲ್ಲಿದ್ದಾರೆ.
  • ಲಕ್ಕಿ ‘ಬೈ’: ಈ ವಿಭಾಗದ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ ಕಾರಣ, ಲವ್ಲಿನಾ ಅವರಿಗೆ ಮೊದಲ ಸುತ್ತಿನಲ್ಲಿ (ಕ್ವಾರ್ಟರ್‌ಫೈನಲ್) ‘ಬೈ’ ಸಿಕ್ಕಿದೆ. ಬಾಕ್ಸಿಂಗ್​ನಲ್ಲಿ ‘ಬೈ’ ಎಂದರೆ ಯಾವುದೇ ಎದುರಾಳಿ ಇಲ್ಲದೆ ನೇರವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವುದು ಎಂದರ್ಥ.
  • ಸೆಮಿಫೈನಲ್​ಗೆ ಎಂಟ್ರಿ: ಕ್ವಾರ್ಟರ್ ಫೈನಲ್​ನಲ್ಲಿ ಬೈ ಸಿಕ್ಕ ಕಾರಣ ಲವ್ಲಿನಾ ಯಾವುದೇ ಪಂದ್ಯ ಆಡದೆ ನೇರವಾಗಿ ಅಂತಿಮ ನಾಲ್ಕರ ಘಟ್ಟ ಅಂದರೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
  • ಬಾಕ್ಸಿಂಗ್‌ನಲ್ಲಿ ಜಂಟಿ ಕಂಚಿನ ನಿಯಮ: ಅಂತರರಾಷ್ಟ್ರೀಯ ಬಾಕ್ಸಿಂಗ್ ನಿಯಮಗಳ ಪ್ರಕಾರ, ಸೆಮಿಫೈನಲ್‌ನಲ್ಲಿ ಸೋಲುವ ಇಬ್ಬರೂ ಬಾಕ್ಸರ್‌ಗಳಿಗೆ ಮೂರನೇ ಸ್ಥಾನಕ್ಕಾಗಿ ಯಾವುದೇ ಪ್ರತ್ಯೇಕ ಪಂದ್ಯವನ್ನು ನಡೆಸದೆ ಜಂಟಿಯಾಗಿ ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ ಸೆಮಿಫೈನಲ್ ತಲುಪಿರುವ ಲವ್ಲಿನಾ ಅವರಿಗೆ ಕನಿಷ್ಠ ಕಂಚಿನ ಪದಕ ಈಗಾಗಲೇ ಪಕ್ಕಾ ಆಗಿದೆ.

ಲವ್ಲಿನಾ ಅವರ ಮೊದಲ CWG ಪದಕ:

ವಿಶ್ವ ಚಾಂಪಿಯನ್‌ಶಿಪ್ ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಲವ್ಲಿನಾ ಅವರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಚೊಚ್ಚಲ ಪದಕವಾಗಿದೆ. ಇದಕ್ಕೂ ಮುನ್ನ 2018ರ ಗೋಲ್ಡ್ ಕೋಸ್ಟ್ ಮತ್ತು 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಕ್ವಾರ್ಟರ್‌ಫೈನಲ್ ಹಂತದಲ್ಲೇ ಸೋತು ನಿರಾಸೆ ಅನುಭವಿಸಿದ್ದರು.

ಆದರೆ ಈ ಬಾರಿ ರಿಂಗ್ ಪ್ರವೇಶಿಸುವ ಮುನ್ನವೇ ಅವರ ಪದಕದ ಕನಸು ನನಸಾಗಿದೆ. ಇದರೊಂದಿಗೆ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಮೂರರಲ್ಲೂ ಪದಕ ಗೆದ್ದ ಭಾರತದ ಕೆಲವೇ ಕೆಲವು ಬಾಕ್ಸರ್‌ಗಳ ಗಣ್ಯ ಸಾಲಿಗೆ ಲವ್ಲಿನಾ ಬೊರ್ಗೊಹೈನ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​​ಗೆ ಟೀಮ್ ಇಂಡಿಯಾ ಪ್ರಕಟ

ಮುಂದಿನ ಗುರಿ ಚಿನ್ನದ ಪದಕ!

ಲವ್ಲಿನಾ ಬೊರ್ಗೊಹೈನ್ ಅವರಿಗೆ ಕಂಚಿನ ಪದಕ ಖಚಿತವಾಗಿದ್ದರೂ, ಅವರ ಕಣ್ಣು ಮಾತ್ರ ಚಿನ್ನದ ಪದಕದ ಮೇಲಿದೆ. ಜುಲೈ 31 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅವರು ತುವಾಲು ದೇಶದ ತಾರೋನಾ ಖಾನುಮ್ ಬಾದಿ ಪಸೋನಿ  ಅವರ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯದಲ್ಲಿ ಲವ್ಲಿನಾ ಗೆದ್ದರೆ ಅವರು ಚಿನ್ನ ಅಥವಾ ಬೆಳ್ಳಿಯ ಪದಕಕ್ಕಾಗಿ ಫೈನಲ್ ಪ್ರವೇಶಿಸಲಿದ್ದಾರೆ.

Source link

Bengaluru Cleanliness Campaign: ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ – Kannada News | Minister Krishna Byre Gowda Launches Cleanliness Drive in Thanisandra, Bengaluru

ಬೆಂಗಳೂರು, ಜುಲೈ 25: ಬೆಂಗಳೂರನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಥಣಿಸಂದ್ರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನವು ಥಣಿಸಂದ್ರವನ್ನು ಸಂಪೂರ್ಣವಾಗಿ ಕಸಮುಕ್ತ ಪ್ರದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಸ್ವಚ್ಛತಾ ಅಭಿಯಾನವನ್ನು ಥಣಿಸಂದ್ರದಲ್ಲಿರುವ ಪೊಲೀಸ್ ತರಬೇತಿ ಶಾಲೆ ಮತ್ತು ರಾಷ್ಟ್ರೋತ್ಥಾನ ಶಾಲೆಯ ಆವರಣದಲ್ಲಿ ಪ್ರಾರಂಭಿಸಲಾಯಿತು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಪ್ರದೇಶದ ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ – Kannada News | Amarnath Yatra Resumes: Pilgrims Head to Baltal After 6 Day Halt in Jammu and kashmir

ಅಮರನಾಥ ಯಾತ್ರೆ ಪುನರಾರಂಭImage Credit source: Getty Images

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ, ಭೂಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯನ್ನು ಶನಿವಾರದಂದು ಆಡಳಿತ ಮಂಡಳಿಯು ಅಧಿಕೃತವಾಗಿ ಪುನರಾರಂಭಿಸಿದೆ. ಹವಾಮಾನ ಸುಧಾರಿಸಿ, ಉಧಮ್‌ಪುರ-ರಾಂಬನ್ ಮಾರ್ಗದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಿದ ನಂತರ, ಭಗವತಿ ನಗರದ ಮೂಲ ಶಿಬಿರದಿಂದ ಹೊಸ ಯಾತ್ರಿಕರ ತಂಡಕ್ಕೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ.

18 ನೇ ಬ್ಯಾಚ್‌ನಿಂದ ಬಾಲ್ಟಾಲ್ ಮಾರ್ಗದತ್ತ ಪ್ರಯಾಣ:

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, 1,470 ಮಹಿಳೆಯರು, 25 ಮಕ್ಕಳು ಹಾಗೂ 54 ಸಾಧುಗಳು ಸೇರಿದಂತೆ ಒಟ್ಟು 6,269 ಯಾತ್ರಿಕರನ್ನೊಳಗೊಂಡ 18 ನೇ ಬ್ಯಾಚ್, 223 ವಾಹನಗಳ ಬೆಂಗಾವಲು ಪಡೆಯೊಂದಿಗೆ ಬೆಳಗಿನ ಜಾವ 2:40 ರ ಸುಮಾರಿಗೆ ಬಾಲ್ಟಾಲ್ ಬೇಸ್ ಕ್ಯಾಂಪ್‌ನತ್ತ ತೆರಳಿತು.

ಪ್ರಸ್ತುತ ಹವಾಮಾನ ಪರಿಸ್ಥಿತಿ ಮತ್ತು ಹಳಿಗಳ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು, ಈ ಬ್ಯಾಚ್‌ಗೆ 14 ಕಿಲೋಮೀಟರ್‌ಗಳಷ್ಟು ಕಿರಿದಾದ ಬಾಲ್ಟಾಲ್ ಮಾರ್ಗವನ್ನು ಮಾತ್ರ ನಿಯೋಜಿಸಲಾಗಿದೆ. ಸಾಂಪ್ರದಾಯಿಕ 48 ಕಿಲೋಮೀಟರ್ ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ಇನ್ನೂ ಯಾತ್ರಿಕರ ಸಂಚಾರಕ್ಕೆ ಅನುಮತಿ ನೀಡಿಲ್ಲ. ಜಮ್ಮುವಿನಿಂದ ಕಾಶ್ಮೀರಕ್ಕೆ ಪ್ರಯಾಣಿಸುವ ಎಲ್ಲಾ ಯಾತ್ರಿಕರಿಗೂ ಬಿಗಿ ಭದ್ರತಾ ಪಡೆ ಮತ್ತು ಬೆಂಗಾವಲು ಪಡೆಯ ರಕ್ಷಣೆ ಒದಗಿಸಲಾಗಿದೆ.

ಭಾರಿ ಮಳೆ ಮತ್ತು ಭೂಕುಸಿತದಿಂದ ಸ್ಥಗಿತಗೊಂಡಿದ್ದ ಯಾತ್ರೆ:

ಜುಲೈ 19 ರಂದು ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳಲ್ಲಿ ಹಾಗೂ ಪವಿತ್ರ ಗುಹೆ ದೇವಾಲಯದ ಸುತ್ತಮುತ್ತ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಥಯಾತ್ರೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದಲ್ಲದೆ, ಉಧಮ್‌ಪುರ-ರಾಂಬನ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ದೊಡ್ಡ ಬಂಡೆಗಳು ರಸ್ತೆಗೆ ಬಿದ್ದಿದ್ದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮೂರು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಶನಿವಾರ ಹೆದ್ದಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ತಕ್ಷಣವೇ ಅಮರನಾಥ ಯಾತ್ರೆಯನ್ನು ಮರುಆರಂಭಿಸಲು ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಿಮಲಿಂಗ ದರ್ಶನ:

ಈ ವರ್ಷದ ಜುಲೈ 2 ರಂದು ಭಗವತಿ ನಗರ ಮೂಲ ಶಿಬಿರದಿಂದ ಮೊದಲ ಬ್ಯಾಚ್‌ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಸಿರು ನಿಶಾನೆ ತೋರಿದ್ದರು. ತದನಂತರ ಜುಲೈ 3 ರಂದು ಕಣಿವೆಯಲ್ಲಿ ಔಪಚಾರಿಕವಾಗಿ ಯಾತ್ರೆ ಆರಂಭಗೊಂಡಿತ್ತು. 52 ದಿನಗಳ ಕಾಲ ನಡೆಯುವ ಈ ಪವಿತ್ರ ಯಾತ್ರೆಯು ರಕ್ಷಾ ಬಂಧನದ ಪವಿತ್ರ ದಿನದಂದು ಮುಕ್ತಾಯಗೊಳ್ಳಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಸಮುದ್ರ ಮಟ್ಟದಿಂದ ಸುಮಾರು 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಅಮರನಾಥ ಗುಹೆಯಲ್ಲಿ ಇದುವರೆಗೆ ಸುಮಾರು 4,00,000 ಯಾತ್ರಿಕರು ಹಿಮಾವೃತ ಶಿವಲಿಂಗದ ದರ್ಶನ ಪಡೆದಿದ್ದಾರೆ. ಈ ಪೈಕಿ ಸುಮಾರು 1,20,000 ಯಾತ್ರಿಕರು ಜಮ್ಮುವಿನ ಭಗವತಿ ನಗರ ಮೂಲ ಶಿಬಿರದ ಮೂಲಕವೇ ತಮ್ಮ ಪಯಣವನ್ನು ಆರಂಭಿಸಿದ್ದವರು ಎಂದು ತಿಳಿದುಬಂದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್! – Kannada News | Bengaluru Man Promised Govt Job Duped of Rs 26 Lakh; 4 Booked

ಬೆಂಗಳೂರು, ಜುಲೈ 25: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯ ಹಿರಿಯ ವ್ಯವಸ್ಥಾಪಕರೊಬ್ಬರಿಗೆ 26 ಲಕ್ಷ ರೂಪಾಯಿ ವಂಚಿಸಿರುವ ಜಾಲವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್‌ನ ಖಾಸಗಿ ಗೋಲ್ಡ್ ಫರ್ಮ್‌ನಲ್ಲಿ ಕೆಲಸ ಮಾಡುತ್ತಿರುವ ಜಿ.ಕೆ. ರಘುನಂದನ್ (36) ಎಂಬುವರೇ ಹಣ ಕಳೆದುಕೊಂಡ ಸಂತ್ರಸ್ತ. ಈ ಸಂಬಂಧ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂತೋಷ್ ಹೊಸಮನಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

50 ಲಕ್ಷಕ್ಕೆ ಡೀಲ್, 26 ಲಕ್ಷ ರೂ. ಅಡ್ವಾನ್ಸ್!

ಸಂತ್ರಸ್ತ ರಘುನಂದನ್ ಅವರಿಗೆ 2024 ರ ಡಿಸೆಂಬರ್‌ನಲ್ಲಿ ಸಂತೋಷ್ ಹೊಸಮನಿ ಎಂಬಾತನ ಪರಿಚಯವಾಗಿತ್ತು. ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ (DPAR) ಕೆಲಸ ಮಾಡುತ್ತಿದ್ದು, ಕೆಪಿಎಸ್‌ಸಿ (KPSC) ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿದೆ ಎಂದು ಸಂತೋಷ್ ನಂಬಿಸಿದ್ದ. ಪಿಡಿಒ ಹುದ್ದೆ ಕೊಡಿಸಲು 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪಿ, ಹಂತ ಹಂತವಾಗಿ ಒಟ್ಟು 26 ಲಕ್ಷ ರೂಪಾಯಿ ನಗದನ್ನು ಪಡೆದುಕೊಂಡಿದ್ದ.

ಕೆಪಿಎಸ್‌ಸಿ ಕಚೇರಿ ಲ್ಯಾಂಡ್‌ಲೈನ್‌ ಹೆಸರಿನಲ್ಲಿ ನಕಲಿ ಕರೆ!

ಹಣ ನೀಡಿದ ಮೇಲೂ ನೇಮಕಾತಿ ಆದೇಶ ಪತ್ರ ಬಾರದೇ ಇದ್ದಾಗ ರಘುನಂದನ್ ಆರೋಪಿಯನ್ನು ಪ್ರಶ್ನಿಸಲು ಆರಂಭಿಸಿದ್ದರು. ಈ ವೇಳೆ ಸಂಶಯ ಬಾರದಂತೆ ತಡೆಯಲು, ಕೆಪಿಎಸ್‌ಸಿ ಕಚೇರಿಯ ಲ್ಯಾಂಡ್‌ಲೈನ್ ಸಂಖ್ಯೆಗಳಿಂದ ‘ರಾವ್’ ಎಂಬ ವ್ಯಕ್ತಿ ರಘುನಂದನ್ ಅವರಿಗೆ ಕರೆ ಮಾಡಿ, “ನಿಮಗೆ ಪಿಡಿಒ ಕೆಲಸ ಖಚಿತವಾಗಿದೆ” ಎಂದು ಹಲವು ಬಾರಿ ಭರವಸೆ ನೀಡಿದ್ದ. ಆದರೆ, ದಿನಗಳು ಕಳೆದರೂ ನೇಮಕಾತಿ ಆದೇಶ ಸಿಗದೆ, ಆರೋಪಿ ಸಂತೋಷ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ರಘುನಂದನ್‌ಗೆ ಅರಿವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ಸಂತೋಷ್ ಹೊಸಮನಿ, ರಾವ್, ಮಹೇಶ್ ಕುಮಾರ್ ಮತ್ತು ಬಸವರಾಜ್ ಎಂಬ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯನ್ ಗೇಮ್ಸ್​​ಗೆ ಟೀಮ್ ಇಂಡಿಯಾ ಹೀಗಿದೆ – Kannada News | India Squad For Asian Games 2026

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಟೂರ್ನಿಗಾಗಿ ಬಲಿಷ್ಠ ಭಾರತ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಮಹಿಳಾ ತಂಡಕ್ಕೆ ಹರ್ಮನ್​ಪ್ರೀರ್ ಕೌರ್ ಸಾರಥ್ಯವಹಿಸಲಿದ್ದಾರೆ. ಇನ್ನು ಉಭಯ ತಂಡಗಳು ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯುವ ಮೂಲಕ ಏಷ್ಯನ್ ಗೇಮ್ಸ್ ಅಭಿಯಾನ ಆರಂಭಿಸಲಿದೆ.

ಪಂದ್ಯಾವಳಿಯ ದಿನಾಂಕಗಳು:

  • ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ 22 ರವರೆಗೆ ನಡೆಯಲಿದೆ.
  • ಪುರುಷರ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ ಜರುಗಲಿದೆ.

ಪುರುಷರ ತಂಡಗಳು:

  • ಕ್ವಾರ್ಟರ್ ಫೈನಲ್​ಗೆ ನೇರ ಅರ್ಹತೆ
  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ಶ್ರೀಲಂಕಾ

ಪ್ರಾಥಮಿಕ ಸುತ್ತಿನ ಗುಂಪುಗಳು:

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಮಹಿಳಾ ತಂಡಗಳು:

  • ಭಾರತ
  • ಪಾಕಿಸ್ತಾನ್
  • ಶ್ರೀಲಂಕಾ
  • ಬಾಂಗ್ಲಾದೇಶ್
  •  ಜಪಾನ್
  •  ಚೀನಾ
  • ಮಲೇಷ್ಯಾ
  • ಥಾಯ್ಲೆಂಡ್

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ಏಷ್ಯನ್​ ಗೇಮ್ಸ್​ಗೆ ಭಾರತ ತಂಡಗಳು:

ಭಾರತ ಪುರುಷರ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

ಇದನ್ನೂ ಓದಿ: 59 ಎಸೆತಗಳಲ್ಲಿ ಪಂದ್ಯ ಮುಗಿಸಿದ ‘ಸೂಪರ್ ಜೈಂಟ್ಸ್​’

ಭಾರತ ಮಹಿಳಾ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಾಲಿನಿ (ವಿಕೆಟ್‌ಕೀಪರ್), ಭಾರ್ತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್*, ರಾಧಾ ಯಾದವ್, ನಂದಿನಿ ಶರ್ಮಾ.

ಭಾರತ ಪುರುಷರ ತಂಡದ ವೇಳಾಪಟ್ಟಿ:

ಪಂದ್ಯದ ಹಂತ ದಿನಾಂಕ ಎದುರಾಳಿ ತಂಡ
ಕ್ವಾರ್ಟರ್‌ಫೈನಲ್ ಸೆಪ್ಟೆಂಬರ್ 28 ಅರ್ಹತಾ ಸುತ್ತಿನಿಂದ ಬರುವ ತಂಡ
ಸೆಮಿಫೈನಲ್ ಸೆಪ್ಟೆಂಬರ್ 30 / ಅಕ್ಟೋಬರ್ 1 ಪಾಕಿಸ್ತಾನ್ (ಉಭಯ ತಂಡಗಳು ಕ್ವಾರ್ಟರ್ ಫೈನಲ್ ಗೆದ್ದರೆ)
ಫೈನಲ್ / ಕಂಚಿನ ಪದಕದ ಪಂದ್ಯ ಅಕ್ಟೋಬರ್ 1 / ಅಕ್ಟೋಬರ್ 3 ನಿರ್ಧಾರವಾಗಬೇಕಿದೆ (ಸೆಮಿಫೈನಲ್​ನಲ್ಲಿ ಭಾರತ ಗೆದ್ದರೆ)

ಭಾರತ ಮಹಿಳಾ ತಂಡದ ವೇಳಾಪಟ್ಟಿ:

ಪಂದ್ಯದ ಹಂತ ದಿನಾಂಕ ಎದುರಾಳಿ ತಂಡ
ಕ್ವಾರ್ಟರ್ ಫೈನಲ್ ಸೆಪ್ಟೆಂಬರ್ 17  ಜಪಾನ್
ಸೆಮಿಫೈನಲ್ (ಗೆದ್ದರೆ) ಸೆಪ್ಟೆಂಬರ್ 20 ಬಾಂಗ್ಲಾದೇಶ್ ಅಥವಾ ಚೀನಾ
ಕಂಚಿನ ಪದಕದ ಪಂದ್ಯ (ಸೆಮಿಫೈನಲ್‌ನಲ್ಲಿ ಸೋತರೆ) ಸೆಪ್ಟೆಂಬರ್ 22 ಇನ್ನು ನಿರ್ಧಾರವಾಗಿಲ್ಲ
ಫೈನಲ್ ಪಂದ್ಯ (ಸೆಮಿಫೈನಲ್‌ನಲ್ಲಿ ಗೆದ್ದರೆ) ಸೆಪ್ಟೆಂಬರ್ 22 ಇನ್ನು ನಿರ್ಧಾರವಾಗಿಲ್ಲ

ಅಂದರೆ ಭಾರತ ತಂಡಗಳು ಕೇವಲ ಮೂರು ಮ್ಯಾಚ್​ಗಳಲ್ಲಿ ಗೆಲವು ಸಾಧಿಸಿದರೆ ಈ ಬಾರಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳಬಹುದು.

Source link

ಇಂದು ಮಧ್ಯಾಹ್ನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ‘ಸಿಜೆಪಿ’ ನೀಡಿದ ಡೆಡ್‌ಲೈನ್ ಅಂತ್ಯ – Kannada News | Delhi on High Alert as CJP Intensifies Protest for Dharmendra Pradhans Resignation Over NEET Paper Leak

ದೆಹಲಿ, ಜು.25: NEET ಪರೀಕ್ಷೆ ಪೇಪರ್ ಲೀಕ್ ಹಗರಣ ಖಂಡಿಸಿ ಸಿಜೆಪಿ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನೀಡಲಾಗಿದ್ದ ಗಡುವು ಇಂದು ಮಧ್ಯಾಹ್ನ ಅಂತ್ಯಗೊಳ್ಳಲಿದೆ. ಪ್ರಧಾನ್ ರಾಜೀನಾಮೆ ಸೇರಿದಂತೆ ಮೂರು ಬೇಡಿಕೆಗಳನ್ನು ಸಿಜೆಪಿ ಮುಂದಿಟ್ಟಿದ್ದು, ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಇಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ಸಿಜೆಪಿ ಜೊತೆ ಮೂರನೇ ಸುತ್ತಿನ ಸಭೆ ನಡೆಯಲಿದೆ. ಈಗಾಗಲೇ ನಡೆದ ಎರಡು ಸುತ್ತಿನ ಮಾತುಕತೆಗಳಲ್ಲಿ ಎರಡು ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದರೂ, ಪ್ರಧಾನ್ ರಾಜೀನಾಮೆ ಕುರಿತು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇಂದಿನ ಸಭೆ ನಿರ್ಣಾಯಕವಾಗಿದ್ದು, ಮಧ್ಯಾಹ್ನ 3:30ಕ್ಕೆ ಡೆಡ್‌ಲೈನ್ ಅಂತ್ಯವಾಗಲಿದೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಜಂತರ್ ಮಂತರ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 18 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಪ್ರಯಾಣಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ ಸರ್ಕಾರ ಸಿಜೆಪಿ ಬೇಡಿಕೆಗಳನ್ನು ಈಡೇರಿಸದಿದ್ದರೆ, ಹೋರಾಟ ಜಂತರ್ ಮಂತರ್‌ಗೆ ಮಾತ್ರ ಸೀಮಿತವಾಗದೆ ದೇಶಾದ್ಯಂತ ತೀವ್ರಗೊಳ್ಳುವ ಮುನ್ಸೂಚನೆ ಇದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಜಲಾಶಯಗಳ ಇಂದಿನ ಸ್ಥಿತಿಗತಿ: ಕೃಷ್ಣಾ ನದಿಗೆ ಹರಿದುಬಂತು 88 ಸಾವಿರ ಕ್ಯೂಸೆಕ್ ನೀರು – Kannada News | Major Karnataka Dams: Kabini, KRS, Almatti Water Storage and Inflow

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವಿನ ಪ್ರಮಾಣದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿ ಇಂದಿನ (ಜುಲೈ ೨೫) ನೀರಿನ ಮಟ್ಟದ ವಿವರ ಇಲ್ಲಿದೆ.

ಕಬಿನಿ ಜಲಾಶಯ (ಮೈಸೂರು)

ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇಂದಿನ ನೀರಿನ ಮಟ್ಟ 72.77 ಅಡಿ (ಕಳೆದ ವರ್ಷ ಇದೇ ದಿನ: 82.86 ಅಡಿ). ಇನ್ನು ನೀರಿನ ಸಂಗ್ರಹ 13.61 ಟಿಎಂಸಿ (ಕಳೆದ ವರ್ಷ: 19.16 ಟಿಎಂಸಿ). ಇನ್ನು ಒಳಹರಿವು, 4,494 ಕ್ಯೂಸೆಕ್ (ಕಳೆದ ವರ್ಷ: 15,718 ಕ್ಯೂಸೆಕ್), ಹೊರಹರಿವು, ನದಿಗೆ 500 ಕ್ಯೂಸೆಕ್ ನೀರು ಬಿಡುಗಡೆ (ಕಳೆದ ವರ್ಷ: 16,875 ಕ್ಯೂಸೆಕ್) ಆಗಿದೆ. ಕಳೆದ 24 ಗಂಟೆಗಳಲ್ಲಿ 10 ಮಿ.ಮೀ. ಮಳೆ ದಾಖಲಾಗಿದೆ.

ಕೃಷ್ಣರಾಜಸಾಗರ / ಕೆಆರ್‌ಎಸ್ ಡ್ಯಾಂ (ಮಂಡ್ಯ)

ನೀರಿನ ಗರಿಷ್ಠ ಮಟ್ಟ 124.80 ಅಡಿ (ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ) ಆದರೆ ಇಂದಿನ ನೀರಿನ ಮಟ್ಟ: 91.82 ಅಡಿ ಇದೆ. ಇಂದಿನ ಸಂಗ್ರಹ ಆಗಿರುವ ನೀರಿನ ಮಟ್ಟ 17.051 ಟಿಎಂಸಿ, ನೀರಿನ ಒಳಹರಿವು 726 ಕ್ಯೂಸೆಕ್, ಹೊರಹರಿವು 1,576 ಕ್ಯೂಸೆಕ್ ಇದೆ.

ಆಲಮಟ್ಟಿ ಜಲಾಶಯ (ವಿಜಯಪುರ)

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ ಡ್ಯಾಂ) ಭರ್ತಿಯಾಗುವ ಹಂತ ತಲುಪಿದ್ದು, ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ. ಗರಿಷ್ಠ ಮಟ್ಟದಲ್ಲಿ 519.60 ಮೀಟರ್ ಇಂದಿನ ನೀರಿನ ಮಟ್ಟದಲ್ಲಿ 518. 69 ಮೀಟರ್ (ಗರಿಷ್ಠ ಮಟ್ಟಕ್ಕೆ ಹತ್ತಿರ) ಇದೆ. ಒಳಹರಿವು 88,228 ಕ್ಯೂಸೆಕ್ ಹಾಗೂ ಹೊರಹರಿವು 68,425 ಕ್ಯೂಸೆಕ್ ಇದೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಗುಡ್​​ ನ್ಯೂಸ್ : ಒಸಿ ಸಿಕ್ಕ ಮೇಲೆ ಬಿಲ್ಡರ್‌ಗಳ ಇಷ್ಟದಂತೆ ನಕ್ಷೆ ಬದಲಾಯಿಸುವಂತಿಲ್ಲ

ಹೇಮಾವತಿ ಜಲಾಶಯ (ಹಾಸನ – ಗೊರೂರು)

ಗರಿಷ್ಠ ಮಟ್ಟ 2,922 ಅಡಿ (37 ಟಿಎಂಸಿ) ಆದರೆ ಇಂದಿನ ನೀರಿನ ಮಟ್ಟ 2,904.97ಅಡಿ (23.045 ಟಿಎಂಸಿ) ಹಾಗೂ ಒಳಹರಿವು 3,068 ಕ್ಯೂಸೆಕ್ ಮತ್ತು ಹೊರಹರಿವು 450 ಕ್ಯೂಸೆಕ್(ಗಮನಿಸಿ: ಕಳೆದ ವರ್ಷ ಇದೇ ದಿನ 2,921.03 ಅಡಿ [36.165 ಟಿಎಂಸಿ] ನೀರಿತ್ತು ಹಾಗೂ 8,347 ಕ್ಯೂಸೆಕ್ ಒಳಹರಿವಿತ್ತು).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿರ್ದೇಶಕರ ಜೊತೆ ಮಲಗುವಂತೆ ಪತಿ ಒತ್ತಾಯಿಸುತ್ತಿದ್ದ’: ಆಮಿರ್ ಮಲಸಹೋದರನ ಬಗ್ಗೆ ನಟಿ ಇವಾ ಆರೋಪ – Kannada News | Aamir Khan’s Stepbrother Hyder Forced Me To Sleep With Directors Says Eva Grover 

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ ವಿರುದ್ಧ ಅವರ ಮಾಜಿ ಪತ್ನಿ, ನಟಿ ಇವಾ ಗ್ರೋವರ್ ಅತ್ಯಂತ ಆಘಾತಕಾರಿ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮತ್ತು ಮನೆ ನಡೆಸಲು ಪತಿ ತಮಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಇವಾ ಅವರ ಈ ಮಾತುಗಳು ಈಗ ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ.

ಖ್ಯಾತ ನಿರೂಪಕ ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಇವಾ ಗ್ರೋವರ್ ಈ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ದೈಹಿಕ ಸಂಬಂಧ ಹೊಂದುವಂತೆ ಪತಿ ಹೈದರ್ ತಮ್ಮ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರು ಎಂದು ಇವಾ ಹೇಳಿದ್ದಾರೆ.

ಮನೆ ನಡೆಸಲು ಹಣವಿಲ್ಲದ ಕಾರಣಕ್ಕೆ ಪತಿ ಈ ರೀತಿ ಮಾಡುತ್ತಿದ್ದಾಗಿ ಇವಾ ತಿಳಿಸಿದ್ದಾರೆ. ‘ಮನೆಯ ಕರೆಂಟ್ ಬಿಲ್ ಕಟ್ಟಲು ಹಣವಿಲ್ಲ. ಮಗುವಿನ ಖರ್ಚಿಗೆ ಹಣ ಬೇಕು. ಆಫರ್ ಬಂದಾಗ ನಿರ್ದೇಶಕರ ಜೊತೆ ಮಲಗಿದರೆ ಏನಂತೆ? ಒಪ್ಪಿಕೋ, ಮನೆ ನಡೆಸಬೇಕಲ್ಲ’ ಎಂದು ಪತಿ ಹೇಳುತ್ತಿದ್ದ ಘಟನೆಯನ್ನು ಇವಾ ನೆನೆದಿದ್ದಾರೆ. ಈ ಮಾತಿನ ನಂತರ ಪತಿಯ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಿದ್ದಾಗಿ ಹೇಳಿದ್ದಾರೆ.

‘ಪತಿ ಹೈದರ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಇವಾ ಹೇಳಿದ್ದಾರೆ. ಮದುವೆಯಾದ ಹೊಸರಲ್ಲೇ ಪತಿ ತಮ್ಮ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದರು. ಮೈ ಮೇಲಿನ ಗಾಯದ ಗುರುತುಗಳನ್ನು ನೋಡಿ ತಮ್ಮ ಪೋಷಕರು ಕಣ್ಣೀರು ಹಾಕುತ್ತಿದ್ದರು’ ಎಂದು ಇವಾ ಹಳಹಳಿಸಿದ್ದಾರೆ. ಪ್ರಸ್ತುತ ಹೈದರ್ ಅತ್ಯಂತ ಕಡುಬಡತನದಲ್ಲಿದ್ದಾರೆ.

ಇದನ್ನೂ ಓದಿ: ಊಟಕ್ಕೂ ಪರದಾಡುತ್ತಿದ್ದಾರೆ ಆಮಿರ್ ಖಾನ್ ಸಹೋದರ, ಗುಡಿಸಿಲಿನಲ್ಲಿ ವಾಸ

ಆಮಿರ್ ಖಾನ್ ಅವರ ತಂದೆ ತಾಹಿರ್ ಹುಸೇನ್ ಅವರ ಎರಡನೇ ಪತ್ನಿಯ ಮಗ ಹೈದರ್ ಅಲಿ ಖಾನ್ ಅವರು. ಈ ಹಿನ್ನೆಲೆಯಲ್ಲಿ ಇವರು ಆಮಿರ್ ಖಾನ್ ಅವರ ಮಲ ಸಹೋದರನಾಗುತ್ತಾರೆ. ಆದರೆ ಆಮಿರ್ ಖಾನ್ ಕುಟುಂಬಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿಗಳು ಹೇಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ – Kannada News | Shani Dev and Sade Sati: Why Applying Oil on Head on Saturday is Forbidden

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರವನ್ನು ಶನಿ ದೇವರಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿದೇವನನ್ನು “ನ್ಯಾಯಾಧಿಪತಿ” ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಯು ಅತ್ಯಂತ ಮಂದಗತಿಯ ಗ್ರಹವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿ ದೋಷ, ಧೈಯಾ ಅಥವಾ ಸಾಡೇ ಸಾತಿಯ ಪ್ರಭಾವದಿಂದ ಮುಕ್ತಿ ಪಡೆಯಲು ಶನಿವಾರದಂದು ವಿಶೇಷ ಪೂಜೆ, ಉಪವಾಸ ಮತ್ತು ದಾನ-ಧರ್ಮಗಳನ್ನು ಮಾಡಲಾಗುತ್ತದೆ.

ಪದ್ಮ ಪುರಾಣದ ಶಾಸ್ರ್ತೀಯ ನಿಯಮಗಳು:

ಧಾರ್ಮಿಕ ಗ್ರಂಥವಾದ ಪದ್ಮ ಪುರಾಣದ ಉತ್ತರಖಂಡದ 33 ಮತ್ತು 34ನೇ ಅಧ್ಯಾಯಗಳಲ್ಲಿ ಶನಿ ದೇವರನ್ನು ಪೂಜಿಸುವ ಮತ್ತು ಆರಾಧಿಸುವ ವಿಧಿವಿಧಾನಗಳನ್ನು ಅತ್ಯಂತ ವಿವರವಾಗಿ ಉಲ್ಲೇಖಿಸಲಾಗಿದೆ. ಶನಿವಾರದ ಪೂಜೆಯ ಸಮಯದಲ್ಲಿ ಶನಿ ದೇವರಿಗೆ ಎಣ್ಣೆ, ಕಪ್ಪು ಎಳ್ಳು ಮತ್ತು ಇತರ ಪವಿತ್ರ ದ್ರವ್ಯಗಳನ್ನು ಅರ್ಪಿಸುವುದು ಅತ್ಯಂತ ಶುಭಪ್ರದ. ಆದಾಗ್ಯೂ, ಈ ಪೂಜಾ ಆಚರಣೆಗಳಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಅದರಲ್ಲಿ ಮುಖ್ಯವಾಗಿ ಶನಿವಾರದಂದು ಸ್ವಂತ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಸಾಡೇ ಸಾತಿಯ ಅವಧಿಯಲ್ಲಿ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದಿರುವುದಕ್ಕೆ ಕಾರಣಗಳು:

ಶನಿಯ ಸಾಡೇ ಸಾತಿ ಅಥವಾ ಧೈಯಾದ ಪ್ರಭಾವದಲ್ಲಿರುವವರು ಶನಿವಾರದಂದು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ತಪ್ಪಿಸಬೇಕು. ಶನಿ ದೇವರಿಗೆ ಅರ್ಪಿಸುವ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಅಂದು ಸ್ವಂತ ದೇಹಸೌಂದರ್ಯಕ್ಕೆ ಅಥವಾ ಬಳಕೆಗೆ ಉಪಯೋಗಿಸಬಾರದು ಎಂಬುದು ಶಾಸ್ತ್ರೀಯ ನಿಯಮ. ಸಾಡೇ ಸಾತಿ ಅವಧಿಯಲ್ಲಿ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಂಡರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದು ಮತ್ತು ನಿರೀಕ್ಷಿತ ಧನಾಗಮನಕ್ಕೆ ತೊಂದರೆಯಾಗಿ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಈ ವಿಶೇಷ ಪರಿಸ್ಥಿತಿಯಲ್ಲಿರುವವರು ಶನಿವಾರ ಎಣ್ಣೆ ಬಳಸಬಾರದು:

ಕೆಲವು ನಿರ್ದಿಷ್ಟ ರಾಶಿ ಮತ್ತು ಜಾತಕದ ಪರಿಸ್ಥಿತಿಯಲ್ಲಿರುವವರು ಶನಿವಾರ ತಲೆಗೆ ಎಣ್ಣೆ ಹಚ್ಚುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಪ್ರಸ್ತುತ ಸಾಡೇ ಸಾತಿಯ ವಿವಿಧ ಹಂತಗಳನ್ನು ಎದುರಿಸುತ್ತಿರುವ ಮೇಷ, ಮೀನ ಮತ್ತು ಕುಂಭ ರಾಶಿಯವರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರ ಜೊತೆಗೆ, ಶನಿಯ ಮಹಾದಶಾ ಅಥವಾ ಏಳನೇ ದಿನದ ಅಧಿಪತಿಯಾದ ಸೂರ್ಯನ ಬಲವಾದ ಪ್ರಭಾವದಲ್ಲಿ ಜನಿಸಿದವರು ಕೂಡ ಎಚ್ಚರ ವಹಿಸಬೇಕು. ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಮಗನೆಂದು ಪರಿಗಣಿಸಿದರೂ ಅವರನ್ನು ಪರಸ್ಪರ ಶತ್ರುಗಳೆಂದು ಕರೆಯಲಾಗುತ್ತದೆ, ಆದ್ದರಿಂದ ಶನಿಯ ಪ್ರಭಾವಕ್ಕೆ ವಿರುದ್ಧವಾದ ಕ್ರಿಯೆಗಳನ್ನು ಅಂದು ಮಾಡಬಾರದು.

ಶನಿ ದೋಷ ನಿವಾರಣೆ ಮತ್ತು ಪರಿಹಾರ ಮಾರ್ಗಗಳು:

ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಎಣ್ಣೆ, ಕಪ್ಪು ಎಳ್ಳು, ಉದ್ದಿನ ಬೇಳೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡುವ ಪರಿಪಾಠವಿದೆ. ಹೀಗೆ ದಾನ ಧರ್ಮದಲ್ಲಿ ತೊಡಗಿಕೊಳ್ಳುವವರು ಅಂದು ಅವರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು. ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅಭಿಷೇಕವಾಗಿ ಅರ್ಪಿಸಿ, ಅಗತ್ಯವಿರುವ ಬಡವರಿಗೆ ದಾನ ಮಾಡುವುದು ಶನಿಯ ಕೃಪೆಗೆ ಪಾತ್ರರಾಗಲು ಅತ್ಯುತ್ತಮ ಮಾರ್ಗವಾಗಿದೆ. ಬಾಹ್ಯ ಆಚರಣೆಗಳ ಜೊತೆಗೆ, ಸದಾಚಾರದಿಂದ ಜೀವಿಸುವುದು ಮತ್ತು ಇತರರಿಗೆ ಹಾನಿ ಮಾಡದಿರುವುದೇ ಶನಿದೇವನ ನಿಜವಾದ ಕೃಪೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version