ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್ – Kannada News | Bengaluru Job Crisis 2025: Tech Layoffs and Their Impact on Young Professionals’ Careers

ಬೆಂಗಳೂರು, ಫೆ.4: ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ ಬಗ್ಗೆ ದಿನದಿಂದ ದಿನಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಬೆಂಗಳೂರಿನ ಟೆಕ್ ಉದ್ಯಮದಲ್ಲಿ 2025ರ ಕೊನೆಯ ಅವಧಿಯಲ್ಲಿ ಉಂಟಾದ ಉದ್ಯೋಗ ಕಡಿತ (Layoffs) ಮತ್ತು ಯುವ ವೃತ್ತಿಪರರ ಮಾನಸಿಕ ಸಂಘರ್ಷದ ಬಗ್ಗೆ ಬೆಂಗಳೂರಿನ ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಒಂದು ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 25 ಎಂದರೆ ಎಲ್ಲೆಡೆ ಸಂಭ್ರಮ, ರಜೆಯ ಮೋಜು. ಆದರೆ ಬೆಂಗಳೂರಿನ ಸಾವಿರಾರು ಯುವ ಟೆಕ್ಕಿಗಳಿಗೆ 2025ರ ಕ್ರಿಸ್‌ಮಸ್ ತಂದದ್ದು ಕೇವಲ ಆತಂಕ ಮತ್ತು ಅನಿಶ್ಚಿತತೆ. ಕೆಲಸ ಕಳೆದುಕೊಂಡ ನೋವು ಮತ್ತು ಭವಿಷ್ಯದ ಭಯ ಅವರ ಹಬ್ಬದ ಖುಷಿಯನ್ನು ನುಂಗಿ ಹಾಕಿತ್ತು.

26 ವರ್ಷದ ಯುವ ಡೇಟಾ ಇಂಜಿನಿಯರ್ ಒಬ್ಬರು ರೆಡ್ಡಿಟ್​​​ನಲ್ಲಿ (Reddit) ಹಂಚಿಕೊಂಡ ಕಥೆ ಇಡೀ ಉದ್ಯಮದ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರನ್ನು ಡಿಸೆಂಬರ್ 15 ರಂದು ಹಠಾತ್ತನೆ ಕೆಲಸದಿಂದ ತೆಗೆದುಹಾಕಲಾಯಿತು. ಲೇಆಫ್ ಆದ ಮೇಲೆ ದಿನಕ್ಕೆ 5-6 ಗಂಟೆ ಹೊಸ ಸ್ಕಿಲ್ ಕಲಿಯುವುದು, 3-4 ಗಂಟೆ ಕೆಲಸ ಹುಡುಕುವುದು ನನ್ನ ದಿನಚರಿಯಾಯಿತು. ಕೊನೆಗೂ ಅಮೆಜಾನ್‌ನಂತಹ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ, ಇದರಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 10 ದಿನಗಳು ಕಳೆದರೂ ಒಂದೇ ಒಂದು ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಯಾಕೆಂದರೆ ಮತ್ತೆ ಕೆಲಸ ಕಳೆದುಕೊಂಡರೆ ಎಂಬ ಭಯ.

ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ

ಇಲ್ಲಿದೆ ನೋಡಿ ಪೋಸ್ಟ್​:

Tech Layoffs

ಡಿಸೆಂಬರ್ 10 ರವರೆಗೆ 257 ಟೆಕ್ ಕಂಪನಿಗಳಿಂದ ಸುಮಾರು 1,22,549 ಉದ್ಯೋಗಿಗಳನ್ನು ಹೊರಹಾಕಲಾಗಿದೆ.ಜನವರಿ ತಿಂಗಳೊಂದರಲ್ಲೇ 27 ಕಂಪನಿಗಳಿಂದ 24,818 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಜನ ಹಲವು ರೀತಿಯಲ್ಲಿ ಸಲಹೆ ನೀಡಿದ್ದಾರೆ. ಒಬ್ಬ ರೆಡಿಟ್​​​ ನೆಟ್ಟಿಗರೊಬ್ಬರು 776 ಕಂಪನಿಗಳಿಗೆ ಅರ್ಜಿ ಹಾಕಿ, 100 ದಿನಗಳ ಸತತ ಪ್ರಯತ್ನದ ನಂತರ ಕೆಲಸ ಪಡೆದಿದ್ದೇನೆ ಎಂದು ಹೇಳಿದ್ದಾರೆ. ನೀವು ಜಿಮ್, ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹಬ್ಬಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

M Letter Personality: ‘M’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರ ಸ್ವಭಾವ ಹೇಗಿರುತ್ತದೆ ಗೊತ್ತಾ..? – Kannada News | M Letter Personality: Traits, Career and Love Revealed by Namashastra

ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರ, ರಾಶಿ ಮಾತ್ರವಲ್ಲ, ವ್ಯಕ್ತಿಯ ಹೆಸರಿಗೂ ವಿಶೇಷ ಮಹತ್ವ ನೀಡಲಾಗಿದೆ. ಕೆಲವರು ಹೆಸರಿನ ಮೊದಲ ಅಕ್ಷರವೇ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ನಂಬುತ್ತಾರೆ. ನಾಮಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಸ್ವಭಾವ, ಚಿಂತನೆ, ನಡೆನುಡಿ ಹಾಗೂ ಯಶಸ್ಸಿನ ಮೇಲೆ ಸೂಕ್ಷ್ಮವಾದ ಪ್ರಭಾವ ಬೀರುತ್ತದೆ. ಅದೇ ಕಾರಣಕ್ಕೆ ಅಕ್ಷರ ಆಧಾರಿತ ವ್ಯಕ್ತಿತ್ವ ವಿಶ್ಲೇಷಣೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈ ಹಿನ್ನೆಲೆದಲ್ಲಿ ಇಂಗ್ಲಿಷ್‌ನ ‘M’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳವರ ಗುಣಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಾಮಶಾಸ್ತ್ರದ ಪ್ರಕಾರ ‘M’ ಅಕ್ಷರವನ್ನು ಸಂಖ್ಯೆ 4 ರೊಂದಿಗೆ ಸಂಪರ್ಕಿಸಲಾಗುತ್ತದೆ. ಸಂಖ್ಯೆ 4 ಧೈರ್ಯ, ಬುದ್ಧಿವಂತಿಕೆ, ಕಠಿಣ ಪರಿಶ್ರಮ ಮತ್ತು ಶಿಸ್ತುಬದ್ಧತೆಯ ಸಂಕೇತವಾಗಿದೆ. ಈ ಅಕ್ಷರದಿಂದ ಹೆಸರು ಆರಂಭವಾಗುವವರು ಸಾಮಾನ್ಯವಾಗಿ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಅವರು ಎಲ್ಲರಿಗೂ ಬೇಗನೆ ಹತ್ತಿರವಾಗುತ್ತಾರೆ. ಆದರೆ ಸಣ್ಣ ವಿಷಯಗಳಿಗೂ ಬೇಗ ಕೋಪಗೊಳ್ಳುವ ಸ್ವಭಾವವೂ ಇರಬಹುದು. ಕೆಲವೊಮ್ಮೆ ಹಠಮಾರಿತನ ಅಥವಾ ನಾಚಿಕೆ ಸ್ವಭಾವವು ಅವರ ದೌರ್ಬಲ್ಯವಾಗಬಹುದು. ಆದರೂ ತಮ್ಮ ಅಭಿಪ್ರಾಯದಲ್ಲಿ ದೃಢವಾಗಿರುವುದು ಇವರ ವೈಶಿಷ್ಟ್ಯ.

ವೃತ್ತಿಜೀವನದ ವಿಷಯದಲ್ಲಿ ‘M’ ಅಕ್ಷರದವರು ಬಹಳ ಗಂಭೀರರು ಮತ್ತು ಪರಿಶ್ರಮಿಗಳು. ಬದಲಾವಣೆಯನ್ನು ಕಾಯುವುದಕ್ಕಿಂತ ತಮ್ಮದೇ ಆದ ಬದಲಾವಣೆಗಳನ್ನು ಸೃಷ್ಟಿಸಲು ಇಷ್ಟಪಡುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮೊದಲು ಸರಿಯಾದ ಯೋಜನೆ ಮಾಡುವುದು ಇವರ ಗುಣ. ಒಂದು ಕೆಲಸ ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವ ತನಕ ವಿಶ್ರಾಂತಿ ಪಡೆಯುವುದಿಲ್ಲ. ಪ್ರಾಯೋಗಿಕ ಮನೋಭಾವ ಮತ್ತು ಜವಾಬ್ದಾರಿತನ ಇವರನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪ್ರೀತಿಯ ವಿಷಯದಲ್ಲಿಯೂ ಇವರ ಸ್ವಭಾವ ವಿಶೇಷ. ಸುಲಭವಾಗಿ ಯಾರ ಮೇಲೂ ನಂಬಿಕೆ ಇಡುವುದಿಲ್ಲ, ಆದರೆ ಒಮ್ಮೆ ಮನಸಾರೆ ಪ್ರೀತಿಸಿದರೆ ಜೀವನಪೂರ್ಣ ನಿಷ್ಠೆಯಿಂದ ಜೊತೆಯಾಗಿರುತ್ತಾರೆ. ತಮ್ಮ ಸಂಗಾತಿ, ಕುಟುಂಬ ಮತ್ತು ಸ್ನೇಹಿತರಿಗಾಗಿ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಶಿಸ್ತು, ಪ್ರಾಮಾಣಿಕತೆ ಮತ್ತು ವಿಶ್ವಾಸ ಇವರ ಸಂಬಂಧಗಳ ಬಲ.

ಒಟ್ಟಾರೆ, ‘M’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಶಕ್ತಿಶಾಲಿ ವ್ಯಕ್ತಿತ್ವ, ಪರಿಶ್ರಮ ಮತ್ತು ನಿಷ್ಠೆಯಿಂದ ಜೀವನದಲ್ಲಿ ಗುರುತಿಸಿಕೊಂಡು ಮುಂದೆ ಸಾಗುವವರು ಎಂದು ನಾಮಶಾಸ್ತ್ರ ಹೇಳುತ್ತದೆ. ಅವರ ದೌರ್ಬಲ್ಯಗಳನ್ನು ನಿಯಂತ್ರಿಸಿಕೊಂಡರೆ, ಯಶಸ್ಸು ಖಚಿತ ಎಂದು ಹೇಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು

ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಪಘಾತದ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬಾಲಕನೊಬ್ಬ ಅಮ್ಮನ ಕೈಯಿಂದ ತಪ್ಪಿಸಿಕೊಂಡು ರಸ್ತೆ ದಾಟಲು ಯತ್ನಿಸುತ್ತಾನೆ. ಆಗ ಬೈಕ್​ವೊಂದು ವೇಗವಾಗ ಬಂದು ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಡಿಕ್ಕಿಯ ರಭಸಕ್ಕೆ ಬಾಲಕ ತುಂಬಾ ದೂರ ಹೋಗಿ ಬೀಳುತ್ತಾನೆ, ಬೈಕ್ ಸವಾರ ಕೂಡ ಆಯ ತಪ್ಪಿ ಬೀಳುತ್ತಾರೆ. ತಾಯಿ ಮಗನ ಕೈ ಹಿಡಿದು ರಸ್ತೆ ದಾಟಿಸಿದ್ದಕ್ಕೆ ಈ ಅಪಘಾತ ತಪ್ಪುತ್ತಿತ್ತು. ಮತ್ತೆ ಶಾಲೆ, ವಸತಿ ಪ್ರದೇಶಗಳಲ್ಲಿ ವಾಹನ ಚಲಾಯಿಸುವವರು ಕೂಡ ನಿಧಾನವಾಗಿ, ಜಾಗರೂಕರಾಗಿ ವಾಹನ ಚಲಾಯಿಸಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿದ್ದಾಪುರ ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ – Kannada News | Siddapura Murder Case: Kamalakar Bhat Among Four Sent to Judicial Custody

ಕಾರವಾರ, ಫೆಬ್ರವರಿ 04: ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಉತ್ತರ ಕನ್ನಡದ ಸಿದ್ದಾಪುರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಎರಡು ಮಕ್ಕಳ ತಾಯಿ ಸುಚಿತ್ರಾ ಜೊತೆಗಿನ ಅಕ್ರಮ ಸಂಬಂಧವೇ ಈ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ಅಕ್ರಮ ಸಂಬಂಧದ ವಿಚಾರದಲ್ಲಿ ವಾಗ್ವಾದ ನಡೆದು ವಸಂತ್ ಎಂಬುವವರ ಕೊಲೆ ಸಂಭವಿಸಿತ್ತು. ಮೃತ ವಸಂತ್ ಅವರು ಸುಚಿತ್ರಾ ಅವರ ಗಂಡನ ಸೋದರನಾಗಿದ್ದು, ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕಮಲಾಕರ್ ಭಟ್ ಅವರನ್ನು ಹತ್ತು ನಿಮಿಷಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ ಪ್ರಸಂಗವೂ ನಡೆದಿದೆ. ಇನ್ನು ಪ್ರಕರಣ ಸಂಬಂಧ ಎ1 ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ ಭಟ್ ಮತ್ತು ಎ4 ಆಕಾಶ್​​ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್​ಸಿ ಕೋರ್ಟ್​ ಆದೇಶ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? – Kannada News | Can Pakistan boycott ICC T20 World Cup 2026 match?

ಪಾಕಿಸ್ತಾನ್ ತಂಡಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಇತ್ತೀಚಿನ ನಿರ್ಧಾರ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಪಿಸಿಬಿ ತಿಳಿಸಿದೆ. ಇದರ ಬೆನ್ನಲ್ಲೇ ಹೀಗೆ ಒಂದು ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ… ಖಂಡಿತವಾಗಿಯೂ ಇದೆ.

ಏಕೆಂದರೆ ಐಸಿಸಿ ವಿಶ್ವಕಪ್​​ನಲ್ಲಿ 4 ಪಂದ್ಯಗಳು ಹೀಗೆ ಕಾರಣಾಂತರಗಳಿಂದ ರದ್ದಾಗಿವೆ. ಹೀಗೆ ರದ್ದಾಗಲು ಮುಖ್ಯ ಕಾರಣ ಪಂದ್ಯವನ್ನು ಬಹಿಷ್ಕರಿಸಿರುವುದು. ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಈ ಹಿಂದೆ ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಪಂದ್ಯವಾಡಲು ನಿರಾಕರಿಸಿದೆ.

ಇದೇ ರೀತಿ ಇದೀಗ ಪಾಕಿಸ್ತಾನ್ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದೆ. ಅತ್ತ ಈ ಹಿಂದೆ ನಾಲ್ಕು ತಂಡಗಳು ಐಸಿಸಿ ಟೂರ್ನಿಯ ಪಂದ್ಯಗಳನ್ನು ಬಹಿಷ್ಕರಿಸಿರುವ ಇತಿಹಾಸ ಹೊಂದಿರುವುದೇ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.

ಏಕೆಂದರೆ ಈ ಹಿಂದೆ ಪಂದ್ಯ ಬಹಿಷ್ಕರಿಸಿದ ರಾಷ್ಟ್ರಗಳ ವಿರುದ್ಧ ಐಸಿಸಿ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಇದೇ ಭಂಡ ಧೈರ್ಯದಲ್ಲೇ ಪಾಕಿಸ್ತಾನ್ ಕೂಡ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದೆ. ಆದರೆ ಈ ಬಾರಿ ಐಸಿಸಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಟೂರ್ನಿಗೆ ಆರ್ಥಿಕ ಹೊಡೆತ ಬೀಳಲಿದೆ.

ಹೀಗಾಗಿ ಫೆಬ್ರವರಿ 15 ರಂದು ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಕಣಕ್ಕಿಳಿಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 ವಿಶ್ವಕಪ್ ಬಾಯ್ಕಾಟ್ ಪಂದ್ಯಗಳ ಪಟ್ಟಿ:

ವರ್ಷ ಪಂದ್ಯಾವಳಿ ಪಂದ್ಯ ಕಾರಣ ಫಲಿತಾಂಶ
1996 ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
1996 ಏಕದಿನ ವಿಶ್ವಕಪ್ ವೆಸ್ಟ್ ಇಂಡೀಸ್ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ಇಂಗ್ಲೆಂಡ್ vs ಝಿಂಬಾಬ್ವೆ ರಾಜಕೀಯ ಕಾರಣ (ಮುಗಾಬೆ ಆಡಳಿತದ ವಿರುದ್ಧ) ಝಿಂಬಾಬ್ವೆಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ನ್ಯೂಝಿಲೆಂಡ್ vs ಕೀನ್ಯಾ ಭದ್ರತೆಯ ಕಾರಣ (ಭಯೋತ್ಪಾದನೆಯ ಭೀತಿ) ಕೀನ್ಯಾಗೆ ವಾಕ್‌ಓವರ್
2026 ಟಿ20 ವಿಶ್ವಕಪ್ ಪಾಕಿಸ್ತಾನ್ vs ಭಾರತ ರಾಜಕೀಯ ಮತ್ತು ಬಾಂಗ್ಲಾದೇಶ್​ ಬೆಂಬಲಕ್ಕಾಗಿ ಬಹಿಷ್ಕಾರದ ಘೋಷಣೆ

ಪ್ರಮುಖ ಮಾಹಿತಿ:

  • 1996: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭದ್ರತೆಯ ಕಾರಣ ಕೊಲಂಬೊದಲ್ಲಿ ಆಡಲು ನಿರಾಕರಿಸಿದವು. ಅಂಕಗಳನ್ನು ಕಳೆದುಕೊಂಡರೂ ಈ ಎರಡೂ ತಂಡಗಳು ನಾಕೌಟ್ ಹಂತಕ್ಕೆ ತಲುಪಿದ್ದವು.
  • 2003: ಇಂಗ್ಲೆಂಡ್ ತಂಡವು ಝಿಂಬಾಬ್ವೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪಂದ್ಯವನ್ನು ಬಹಿಷ್ಕರಿಸಿತು. ಇದರಿಂದಾಗಿ ಇಂಗ್ಲೆಂಡ್ ಟೂರ್ನಿಯಿಂದ ಬೇಗನೆ ಹೊರಬರಬೇಕಾಯಿತು.
  • 2026 (ಪ್ರಸ್ತುತ): ಫೆಬ್ರವರಿ 1, 2026 ರಂದು ಪಾಕಿಸ್ತಾನ ಸರ್ಕಾರವು ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
  • ಐಸಿಸಿ ನಿಯಮಗಳ ಪ್ರಕಾರ, ಯಾವುದೇ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಎದುರಾಳಿ ತಂಡಕ್ಕೆ ಜಯ (ವಾಕ್‌ಓವರ್) ನೀಡಲಾಗುತ್ತದೆ. ಅಲ್ಲದೆ ಬಹಿಷ್ಕರಿಸಿದ ತಂಡಕ್ಕೆ ಭಾರಿ ಆರ್ಥಿಕ ದಂಡ ವಿಧಿಸಲಾಗುತ್ತದೆ.

Source link

ರಣವೀರ್ ಶ್ರೇಷ್ಠ ಬಹುಮುಖ ಪ್ರತಿಭೆಯ ನಟ ಎಂದವರಿಗೆ ರಾಜ್​​ಕುಮಾರ್​ ನೆನಪಿಸಿದ ಕನ್ನಡಿಗರು – Kannada News | Ranveer Singh’s Versatility Sparks Rajkumar, Kamal Haasan Comparisons by South Fans

ರಣವೀರ್ ಸಿಂಗ್ (Ranveer Singh) ಉತ್ತಮ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರೇ ಶ್ರೇಷ್ಠ ಎಂದು ಅವರ ಫ್ಯಾನ್ಸ್ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ದಕ್ಷಿಣದ ಅಭಿಮಾನಿಗಳು ಕಮಲ್ ಹಾಸನ್, ಸೂರ್ಯ, ಕಮಲ್ ಹಾಸನ್, ರಜನಿಕಾಂತ್ ಅವರನ್ನು ನೆನಪಿಸಿದ್ದಾರೆ.

ರಣವೀರ್ ಸಿಂಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬ್ಯಾಂಡ್ ಬಜಾ ಭಾರತ್’ ಚಿತ್ರದ ಮೂಲಕ. ಆ ಬಳಿಕ ಅವರು ಐತಿಹಾಸಿಕ ಸಿನಿಮಾಗಳನ್ನು ಮಾಡಿದರು. ‘ಪದ್ಮಾವತ್’ ಸಿನಿಮಾದಲ್ಲಿನ ಖಿಲ್ಜಿ ಪಾತ್ರಕ್ಕೆ ಫ್ಯಾನ್ಸ್ ಹಾಗೂ ವಿಮರ್ಶಕರು ಫುಲ್ ಮಾರ್ಕ್ಸ್ ಕೊಟ್ಟರು. ‘ಧುರಂಧರ್’ ಸಿನಿಮಾದಲ್ಲಿ ಅವರ ನಟನೆ ಬೇರೊಂದು ಹಂತಕ್ಕೆ ಹೋಗಿದೆ. ಅವರ ವಿವಿಧ ಸಿನಿಮಾಗಳ ಪಾತ್ರಗಳನ್ನು ಸೇರಿಸಿ ಒಂದು ಪೋಸ್ಟರ್ ಮಾಡಲಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್

‘ದಕ್ಷಿಣ ಸಿನಿಮಾ ರಂಗದಲ್ಲಿ ಇಂತಹ ಓರ್ವ ಬಹುಮುಖ ನಟನನ್ನು ನನಗೆ ತೋರಿಸಿ, ನಾನು ನನ್ನ ಖಾತೆಯನ್ನು ಡಿಲೀಟ್ ಮಾಡುತ್ತೇನೆ’ ಎಂದು ಅದಿತಿ ಎಂಬುವವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜ್​​ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ರಾಜ್​​ಕುಮಾರ್ ನಟಿಸಿದ ಪಾತ್ರಗಳ ಫೋಟೋಗಳ ಕೊಲ್ಯಾಜ್​​ನ ಕಮೆಂಟ್ ಬಾಕ್ಸ್ ಅಲ್ಲಿ ಹಾಕಲಾಗಿದ್ದು, ‘ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಸಮಯ ಬಂದಿದೆ’ ಎಂದು ಬರೆಯಲಾಗಿದೆ.

ಕಮಲ್ ಹಾಸನ್, ಸೂರ್ಯ ಮೊದಲಾದ ಕಲಾವಿದರ ಅಭಿಮಾನಿಗಳು ಕೂಡ ತಮ್ಮಿಷ್ಟದ ನಟರ ಸಿನಿಮಾಗಳ ವಿವಿಧ ಪೋಸ್ಟರ್​​​ಗಳನ್ನು ಸೇರಿಸಿ ಕಮೆಂಟ್ ಬಾಕ್ಸ್​ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ಉತ್ತರ ನೀಡುವ ಕೆಲಸ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೀತಿ ಹೆಸರಲ್ಲಿ ವಿವಾಹಿತ ಮಹಿಳೆ ಜೊತೆ ಚಕ್ಕಂದ: ನಂಬಿಸಿ ಗರ್ಭಪಾತ ಮಾಡಿಸಿದ್ನಾ ಯುವಕ? – Kannada News | Devanahalli Forced Abortion: Man Accused of Deceiving Woman, Causing Miscarriage

ಸಂತ್ರಸ್ತೆ ಜೊತೆ ಆರೋಪಿImage Credit source: Tv9 Kannada

ದೇವನಹಳ್ಳಿ, ಫೆಬ್ರವರಿ 04: ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ಮದುವೆಯಾಗೋದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿದ್ದಲ್ಲದೆ, ಬಳಿಕ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಪ್ರಿಯಕರ ಊಟದಲ್ಲಿ ಗರ್ಭಪಾತದ ಮಾತ್ರೆ‌ಕೊಟ್ಟಿರುವ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ. ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ.

ಘಟನೆ ಏನು?

ಗಂಡನಿಂದ ದೂರವಾಗಿದ್ದ ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹತ್ತಿರವಿರುವ ಕೆಫೆಯೊಂದರಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಆಕೆಗೆ ಆರೋಪಿ ಪ್ರವೀಣ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಯಕ್ಕೆ ತಿರುಗಿದ್ದು, ಈ ವೇಳೆ ತನಗೆ ಅದಾಗಲೇ ಮದುವೆಯಾಗಿ ಮಗಳಿದ್ದ ಬಗ್ಗೆ ಮಹಿಳೆ ತಿಳಿಸಿದ್ದಳು. ಹೀಗಿದ್ದರೂ ನೀನೆಂದರೆ ತನಗೆ ಇಷ್ಟ ಎಂದು ನಂಬಿಸಿದ್ದ ಆರೋಪಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಸಾಲದ್ದಕ್ಕೆ ಸಂತ್ರಸ್ತೆ ಒಂದು ವರ್ಷ ಆತನ ಮನೆಯಲ್ಲೇ ನೆಲೆಸಿದ್ದಳು ಎನ್ನಲಾಗಿದೆ. ಈ ವೇಳೆ ಆಕೆ ತಾನೀಗ ನಾಲ್ಕು ತಿಂಗಳ ಗರ್ಭಿಣಿ ಎಂದು ಪ್ರವೀಣ್​​ಗೆ ತಿಳಿಸಿದ್ದು, ಆ ವೇಳೆ ಈತನ ಅಸಲೀ ಮುಖ ಅನಾವರಣ ಆಗಿದೆ ಎಂದು ಸಂತ್ರಸ್ತೆ ದೂರಿದ್ದಾಳೆ.

ಇದನ್ನೂ ಓದಿ: ಒಬ್ಬಳ ಮೇಲೆ ಇಬ್ಬರಿಗೆ ಲವ್​; ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ!

ತನ್ನನ್ನು ಮುದುವೆಯಾಗು ಎಂದು ಕೇಳಿದ್ದಕ್ಕೆ ನೀನು ಗಂಡನನ್ನು ಬಿಟ್ಟವಳು. ಅಲ್ಲದೆ ಬೇರೆ ಜಾತಿಯವಳು ಎಂದು ಬಾಯಿಗೆ ಬಂದಂತೆ ಬೈದು ಹಲ್ಲೆ ನಡೆಸಿದ್ದಾನೆ. ಆತನ ಮನೆಯವರೂ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ಎಲ್ಲ ಸೇರಿ ತನ್ನನ್ನು ಮನೆಯಿಂದ ಆಚೆ ಹಾಕಿದ್ದು, ಈ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆಗೆ ಹಾಜರಾಗಿ ಪ್ರವೀಣ್ ಕುಮಾರ್ ಹಾಗೂ ಅವರ ಮನೆಯವರನ್ನು ಕರೆಯಿಸಿ ಬುದ್ದಿ ಹೇಳಬೇಕೆಂದು ದೂರು ಅರ್ಜಿಯನ್ನು ನೀಡಿದ್ದೆ. ಅದರಂತೆ ಅವರು ಕರೆದು ಬುದ್ಧಿ ಹೇಳಿದ ಬಳಿಕ ಕೆಲ ದಿನ ಆತ ಚೆನ್ನಾಗಿಯೇ ನೋಡಿಕೊಂಡಿದ್ದಾನೆ. ಈ ನಡುವೆ ಜನವರಿ 25ರಂದು ನಾವು ಲಾಡ್ಜ್​​ನಲ್ಲಿ ರೂಮ್​​ ಮಾಡಿಕೊಂಡು ವಾಸವಿದ್ದ ವೇಳೆ ಆತ ತಂದುಕೊಟ್ಟ ಎಗ್​​ರೈಸ್​​ ತಿಂದ ಬಳಿಕ ತನಗೆ ಗರ್ಭಪಾತವಾಗಿದೆ. ಹೀಗಾಗಿ ಆತ ತನಗೆ ಕೊಟ್ಟಿದ್ದ ಊಟದಲ್ಲಿ ಮಾತ್ರೆ ಸೇರಿಸಿ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:26 am, Wed, 4 February 26

Source link

ಸುಪ್ರೀಂನಲ್ಲಿ ಎಸ್​ಐಆರ್​ ವಿರುದ್ಧದ ಅರ್ಜಿ ವಿಚಾರಣೆ, ಮಮತಾ ಬ್ಯಾನರ್ಜಿ ವಾದ ಮಂಡಿಸುವ ಸಾಧ್ಯತೆ – Kannada News | Bengal SIR Case, Mamata Banerjee Appears Before Supreme Court Today

ನವದೆಹಲಿ, ಫೆಬ್ರವರಿ 04: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ. ಈ ನಿರ್ಣಾಯಕ ವಿಚಾರಣೆಯ ಸಮಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದು ಹಾಜಗಲಿದ್ದಾರೆ. ಸುಪ್ರೀಂ ಕೋರ್ಟ್ ವೆಬ್‌ಸೈಟ್ ಪ್ರಕಾರ, ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ.

ಮಮತಾ ಬ್ಯಾನರ್ಜಿ, ಮೋಸ್ತಾರಿ ಬಾನೋ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒ’ಬ್ರೇನ್ ಮತ್ತು ಡೋಲಾ ಸೇನ್ ಅವರು ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಲಿದೆ.

ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸುತ್ತಾರೆಯೇ?
ಮೂಲಗಳ ಪ್ರಕಾರ, ಎಲ್‌ಎಲ್‌ಬಿ ಪದವಿ ಪಡೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ವಾದಗಳನ್ನು ಖುದ್ದಾಗಿ ಮಂಡಿಸಬಹುದು. ಇದಕ್ಕೂ ಮೊದಲು, ಜನವರಿ 19 ರಂದು, ಸುಪ್ರೀಂ ಕೋರ್ಟ್ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿತು. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ಅನನುಕೂಲತೆಯನ್ನು ಉಂಟುಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಎಸ್​ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯ ಕುರಿತು ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ. ವಿಚಾರಣೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಕೂಡ ನ್ಯಾಯಾಲಯದಲ್ಲಿ ಹಾಜರಿರುತ್ತಾರೆ ಮತ್ತು ನ್ಯಾಯಾಲಯದ ಮುಂದೆ ತಮ್ಮ ವಾದಗಳನ್ನು ಮಂಡಿಸುವ ಸಾಧ್ಯತೆಯಿದೆ.

ಮತ್ತಷ್ಟು ಓದಿ: ಸಿಎಂ ಮಮತಾ ಬ್ಯಾನರ್ಜಿ ತನಿಖೆಗೆ ಅಡ್ಡಿಪಡಿಸಿ, ಬಲವಂತವಾಗಿ ದಾಖಲೆ ಹೊತ್ತೊಯ್ದಿದ್ದಾರೆ; ಹೈಕೋರ್ಟ್​ ಮೊರೆ ಹೋದ ಇಡಿ

ಕೋಲ್ಕತ್ತಾದ ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಕೊನೆಯದಾಗಿ 2003 ರಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು. ಗಮನಾರ್ಹವಾಗಿ, ಬಂಗಾಳದ ಮುಖ್ಯಮಂತ್ರಿ ಜನವರಿ 28 ರಂದು ಉನ್ನತ ನ್ಯಾಯಾಲಯದಲ್ಲಿ ಎಸ್‌ಐಆರ್ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಜನವರಿ 19 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿತು. ಈ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಮತದಾರರಿಗೆ ತೊಂದರೆಗಳನ್ನು ಉಂಟುಮಾಡಬಾರದು ಎಂದು ನ್ಯಾಯಾಲಯ ಒತ್ತಿಹೇಳಿತ್ತು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತದ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಯನ್ನು ತಮ್ಮ ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೊಲೀಸರಿಗೆ ಶರಣಾಗಿ, ಖ್ಯಾತ ಹಾಸ್ಯನಟನಿಗೆ ಕೋರ್ಟ್ ಆದೇಶ: ಮಾಡಿದ ತಪ್ಪೇನು? – Kannada News | Delhi High Court ordered Rajpal Yadav to surrender to Jail officers

ಬಾಲಿವುಡ್​ನ ಖ್ಯಾತ ಹಾಸ್ಯನಟ ರಾಜ್​​ಪಾಲ್ ಯಾದವ್ (Rajpal Yadav) ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಈ ಕೂಡಲೇ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ರಾಜ್​ಪಾಲ್ ಯಾದವ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ನ್ಯಾಯಾಲಯದ ಆದೇಶದಂತೆ ಯಾದವ್ ಅವರು ಜೈಲು ಸೇರಲೇ ಬೇಕಿದೆ. ಈ ಬಗ್ಗೆ ನ್ಯಾಯಾಲಯವು ಕಠಿಣ ನಿಲವು ತಳೆದಿದ್ದು, ಯಾದವ್ ಅವರು ಈ ಪ್ರಕರಣದಲ್ಲಿ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿದ್ದು, ಅವುಗಳನ್ನು ನಾವು ನಿರ್ಲಕ್ಷ್ಯಿಸಲಾಗುವುದಿಲ್ಲ’ ಎಂದಿದ್ದಾರೆ.

ರಾಜ್​ಪಾಲ್ ಯಾದವ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆದು ಯಾದವ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಅಪರಾಧಿ ಎಂದು ಘೋಷಣೆಯಾಗಿ, ಯಾದವ್ ಅವರು ನಿರ್ದಿಷ್ಟ ಮೊತ್ತದ ಹಣವನ್ನು ದೂರುದಾರರಿಗೆ ನೀಡಬೇಕು ಎಂದು ನ್ಯಾಯಾಲಯ 2024ರಲ್ಲೇ ಆದೇಶ ನೀಡಿತ್ತು. ಆದರೆ ರಾಜ್​​ಪಾಲ್ ಯಾದವ್ ಆದೇಶವನ್ನು ಉಲ್ಲಂಘಿಸಿದ್ದರು. ದೂರುದಾರರಿಗೆ ಹಣ ಪಾವತಿ ಮಾಡಿರಲಿಲ್ಲ. ಹಾಗಾಗಿ ಈಗ ಜೈಲು ಅಧಿಕಾರಿಗಳ ಮುಂದೆ ಶರಣಾಗಿ, ಜೈಲು ವಾಸ ಅನುಭವಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ಸೆಷನ್ಸ್ ನ್ಯಾಯಾಲಯವು ರಾಜ್​ಪಾಲ್ ಯಾದವ್ ಅವರನ್ನು ಅಪರಾಧಿ ಎಂದು ಘೋಷಿಸಿ, ನಿಗದಿತ ಮೊತ್ತವನ್ನು ಕಂತುಗಳಲ್ಲಿ ಪಾವತಿ ಮಾಡುವಂತೆ ಆದೇಶ ನೀಡಿತ್ತು. ಆದರೆ ರಾಜ್​​ಪಾಲ್ ಯಾದವ್ ಹಣವನ್ನು ಪಾವತಿ ಮಾಡಿರಲಿಲ್ಲ. ‘ಆಘಾತಕಾರಿ ಸಂಗತಿಯೆಂದರೆ, ಇಂದಿಗೂ ಸಹ, ಈ ನ್ಯಾಯಾಲಯಕ್ಕೆ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ರಿಜಿಸ್ಟ್ರಾರ್ ಜನರಲ್‌ಗೆ ಠೇವಣಿ ಮಾಡಿಲ್ಲ ಅಥವಾ ₹2.10 ಕೋಟಿ ಮೊತ್ತವನ್ನು ಪಾವತಿಸಿಲ್ಲ’ ಎಂದು ದೆಹಲಿ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?

ರಾಜ್​ಪಾಲ್ ಯಾದವ್ ಬಾಲಿವುಡ್​ನ ಬಹು ಜನಪ್ರಿಯ ಹಾಸ್ಯ ನಟರಾಗಿದ್ದು, ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ, ಮರಾಠಿ, ಭೋಜ್​ಪುರಿ, ತೆಲುಗು ಸಿನಿಮಾಗಳಲ್ಲಿಯೂ ರಾಜ್​ಪಾಲ್ ಯಾದವ್ ನಟಿಸಿದ್ದಾರೆ. ಯಾದವ್ ಅವರಿಗೆ ನ್ಯಾಯಾಲಯದ ಪ್ರಕರಣಗಳು ಹೊಸದೇನಲ್ಲ. 2013 ರಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಕ್ಕೆ 10 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. 2010 ರಲ್ಲಿಯೂ ಸಹ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್​ಪಾಲ್ ಯಾದವ್​​ಗೆ ಮೂರು ತಿಂಗಳ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಆರು ತಿಂಗಳ ಶಿಕ್ಷೆಯನ್ನು ಯಾದವ್ ಅನುಭವಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಮೊಬೈಲ್ ಕದ್ದು ಬಸ್ಸಿನ ಕಿಟಕಿಯಿಂದ ಜಾರಿಕೊಳ್ಳುವ ಕಳ್ಳನ ಪ್ಲ್ಯಾನ್ ಫ್ಲಾಪ್ – Kannada News | Mobile Snatching Attempt Foiled as Commuters Nab Suspect on Moving Bus

ಚಲಿಸುತ್ತಿರುವ ಬಸ್ಸಿನಿಂದ ಮೊಬೈಲ್ ಕದ್ದು ಓಡಿ ಹೋಗುವ ಕಳ್ಳನ ಪ್ಲ್ಯಾನ್ ಫ್ಲಾಪ್ ಆಗಿರುವ ವಿಡಿಯೋ ವೈರಲ್ ಆಗಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ಮೊಬೈಲ್ ಫೋನ್ ಕಸಿದುಕೊಳ್ಳಲು ಕಳ್ಳನೊಬ್ಬ ಪ್ರಯತ್ನ ಪಟ್ಟು ಸಿಕ್ಕಿಬಿದ್ದಿದ್ದಾನೆ. ಕಳ್ಳ ಬಸ್ಸಿನ ಕಿಟಕಿಯಲ್ಲಿ ನೇತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆರೋಪಿಯು ಬಸ್ ಚಲಿಸುತ್ತಿದ್ದಾಗ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದ, ತಾನು ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ತಿಳಿದಿದ್ದ, ಆದರೆ ದೇಹ ಕಿಟಕಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು.ಘಟನೆ ನಡೆದ ಸ್ಥಳ ಮತ್ತು ದಿನಾಂಕ ನಿಖರವಾಗಿ ತಿಳಿದಿಲ್ಲ.ಕಳ್ಳನನ್ನು ಪೊಲೀಸರಿಗೆ ಒಪ್ಪಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version