Headlines

ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’: ಸತತ 3 ಗಂಟೆಗಳ ಮನರಂಜನೆ – Kannada News | BBK 12 Gilli Nata Colors Dodmane Habba special show on 14 February on Colors Kannada

ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (BBK 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’ (Colors Dodmane Habba) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14ರಂದು ಕರುನಾಡಿನ…

Read More

RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್! – Kannada News | RCB’s win has eliminated MI and LSG from the playoff race

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. (PC: IPL) ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20ನೇ…

Read More

ಮೈಸೂರು ಅಗ್ನಿ ದುರಂತ ಕೇಸ್​​ಗೆ ಟ್ವಿಸ್ಟ್​​: ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿತ್ತಾ ಪಬ್​​?

ಮೈಸೂರು, ಜೂನ್​​ 16: ದಟ್ಟಗಳ್ಳಿಯಲ್ಲಿರುವ ಫಾಕ್ಸ್ ಡೆನ್ ರೆಸ್ಟೋ ಬಾರ್​​ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿ ದುರಂತದ ಕುರಿತು ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ರೆಸ್ಟೋ ಬಾರ್ ಅನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲೇ ಈ ಪಬ್ ಕಾರ್ಯನಿರ್ವಹಿಸುತ್ತಿದ್ದು, 100 ಮೀಟರ್ ಅಂತರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನಗಳಿರಬಾರದು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಪಬ್‌ಗೆ ಕೇವಲ ಒಂದೇ ಕಿರಿದಾದ…

Read More

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ನಟ ವಜ್ರಾಂಗ್ ಮಾತು – Kannada News | Actor Vajrang talks about Vijay’s popularity in Tamil Nadu

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ವಿಧಾನಸಭೆ ಚುನಾವಣೆ ಗೆದ್ದಿದ್ದು, ಇದೀಗ ಮುಖ್ಯ ಮಂತ್ರಿ ಆಗಲಿದ್ದಾರೆ. ವಿಜಯ್ ಅವರು ಚುನಾವಣಾ ಕಣಕ್ಕೆ ಇಳಿಯುವ ಮೊದಲು ‘ಜನ ನಾಯಗನ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ವಿಜಯ್ ಜೊತೆಗೆ ಕನ್ನಡದ ನಟ ವಜ್ರಾಂಗ್ ಸಹ ಪಾತ್ರವೊಂದರಲ್ಲಿ ನಟಿಸಿದ್ದರು. ವಿಜಯ್ ಅವರೊಟ್ಟಿಗೆ ಸುಮಾರು 21 ದಿನಗಳ ಕಾಲ ವಜ್ರಾಂಗ್ ಶೂಟಿಂಗ್​​ನಲ್ಲಿದ್ದರು. ಈ ವೇಳೆ ಸಾಕಷ್ಟು ಬಾರಿ ವಿಜಯ್ ಅವರೊಟ್ಟಿಗೆ ಸಂವಾದ ಮಾಡಿದ್ದಾಗಿ ಹೇಳಿರುವ ವಜ್ರಾಂಗ್, ಶೂಟಿಂಗ್ ಸೆಟ್​​ನಲ್ಲಿ…

Read More

ಬಿಗ್ ಬಾಸ್ ವಿನ್ನರ್​​ಗಳ ಕರೆಸಿ ಹೊಸ ಸೀಸನ್ ಮಾಡಿದ್ರೂ ಗಿಲ್ಲಿನೇ ಗೆಲ್ಲೋದು; ಭವಿಷ್ಯ ನುಡಿದ ಕಿರುತೆರೆ ನಟ – Kannada News | Gilli Nata Will Win if All Bigg Boss Kannada Winners In Race Says Abhishek Ramdas

ಬಿಗ್ ಬಾಸ್ ಕನ್ನಡ ಸೀಸನ್ 12ರ (BBk 12) ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿಗೆ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅಭಿಮಾನಿಗಳಿದ್ದಾರೆ. ಈಗ ಕಿರುತೆರೆ ನಟನೋರ್ವ ಗಿಲ್ಲಿಯನ್ನು ಹೊಗಳಿದ್ದಾರೆ. ಎಲ್ಲಾ ಸೀಸನ್​​ಗಳ ವಿನ್ನರ್​ ಕರೆಸಿ ಶೋ ಮಾಡಿದರೂ ಗೆಲ್ಲೋದು ಗಿಲ್ಲಿ ಎಂದಿದ್ದಾರೆ. ಗಿಲ್ಲಿ ಎಲ್ಲರಿಗೂ ಇಷ್ಟ ಆಗೋಕೆ ಕಾರಣ ಅವರ ಮಾತು. ತಮ್ಮ ಮಾತುಗಳ ಮೂಲಕ, ಖಡಕ್…

Read More

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! – Kannada News | March 2026 Lunar Eclipse: Libra’s Fortune and Remedies by Dr.Basavaraj Guruji

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಅಂದರೆ ಮಾರ್ಚ್ 03 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸಲಿದ್ದು, 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 12 ರಾಶಿಗಳ ಪೈಕಿ ಈ ಒಂದು ಈ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು, ಚಿತ್ತಾ, ಸ್ವಾತಿ ಮತ್ತು ವಿಶಾಖ ನಕ್ಷತ್ರದವರು ಈ ಗ್ರಹಣದ ಪ್ರಭಾವಕ್ಕೆ ಒಳಪಡುತ್ತಾರೆ….

Read More

ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ: ಮಹಿಳೆಯ ರಕ್ಷಣೆ, ಪುಣಾಣಿಗಳು ಸಾವು – Kannada News | Mother Jumps into Well with Twin Children: Woman Rescued, Children Die

ಕೋಲಾರ/ಗದಗ, ಮಾರ್ಚ್​​ 02: ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳ ಜೊತೆ ತಾಯಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 3 ವರ್ಷದ ಹರ್ಷಿತ್​ ಮತ್ತು ಹಿತೇಶ್ ಮೃತಪಟ್ಟಿದ್ದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಉಷಾರನ್ನು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಿಸಿದ್ದಾರೆ. ಮೃತ ಪುಟಾಣಿಗಳಿಬ್ಬರೂ ಅವಳಿ-ಜವಳಿ ಎಂಬುದು ಗೊತ್ತಾಗಿದೆ. ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ….

Read More

ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಸುಪ್ರೀಂ ಸೂಚನೆ

ಕೋಲ್ಕತ್ತಾ, ಏಪ್ರಿಲ್ 02: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗಾಗಿ ನಿಯೋಜಿಸಲಾಗಿರುವ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಒಡ್ಡಿದ ಬೆದರಿಕೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿರುವ ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸಿ ಏಪ್ರಿಲ್1ರ ಸಂಜೆ ಮಾಲ್ಡಾ ಜಿಲ್ಲೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ತೊಡಗಿರುವ ಮೂವರು ಮಹಿಳಾ…

Read More

ಬಿಜೆಪಿ ತಂತ್ರಜ್ಞಾನದಲ್ಲೂ ‘ಕಾಪಿ-ಪೇಸ್ಟ್’ ಸಂಸ್ಕೃತಿ ಮುಂದುವರಿಸಿದೆ: ‘ರೋಬೋಡಾಗ್’ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ – Kannada News | Robodog Controversy: Chinese Tech Fiasco at India AI Summit Sparks ‘Make in India’ Debate

ಬೆಂಗಳೂರು, ಫೆ.19: ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (India AI Impact Summit) ಪ್ರದರ್ಶಿಸಲಾದ ‘ರೋಬೋಡಾಗ್’ (Robodog) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಈ ಹಿಂದೆ ಯುಪಿಎ (UPA) ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ತನ್ನದೇ ಎಂದು ಹೆಸರಿಟ್ಟುಕೊಂಡಿತ್ತು. ಈಗ ತಂತ್ರಜ್ಞಾನದಲ್ಲೂ ಅದೇ ‘ಕಾಪಿ-ಪೇಸ್ಟ್’ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ಎಕ್ಸ್​​ ಖಾತೆಯಲ್ಲಿ ಟೀಕಿಸಿದ್ದಾರೆ. ಸಮ್ಮೇಳನದಲ್ಲಿ ಪ್ರದರ್ಶಿಸಲಾದ…

Read More

GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ – Kannada News | Fake GST Officers Arrested in Bengaluru for Extorting Rs 5 Lakh from Gutka Trader

ಬೆಂಗಳೂರು, ಫೆಬ್ರವರಿ 26: ಜಿಎಸ್‌ಟಿ (GST) ಅಧಿಕಾರಿಗಳ ಹೆಸರಿನಲ್ಲಿ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು (Bangalore) ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಬಂಧಿತರನ್ನು ದಾದಾಪೀರ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯ ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಿಎಸ್‌ಟಿ ಕಚೇರಿಯಲ್ಲಿ ಹಲವು…

Read More