5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಮರಿ ವೀರಪ್ಪನ್ ಕೊನೆಗೂ ಬಂಧನ – Kannada News | Male Mahadeshwara Tiger Poacher Govinda Caught: Forest Officials End 5 Month Hunt
ಚಾಮರಾಜನಗರ, ಜ.8: ಬರೋಬ್ಬರಿ 5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ನಟೋರಿಯಸ್ ಗೋವಿಂದ (Govinda) ಅಲಿಯಾಸ್ ಮರಿ ವೀರಪ್ಪನ್ ಇದೀಗ ಕೊನೆಗೂ ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಮರಿ ವೀರಪ್ಪನ್ ಬಂಧನ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಇದೀಗ ನಿರಂತರ ಕಾರ್ಯಚರಣೆಯ ನಂತರ ಗೋವಿಂದನ್ನು ಬಂಧಿಸಲಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟೋರಿಯಸ್ ಗೋವಿಂದ ಹುಡುಕಾಟ ನಡೆದಿತ್ತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ…