Video: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ, ರಾಮಲಲ್ಲಾನಿಗೆ ಸೂರ್ಯ ತಿಲಕ; ಇಲ್ಲಿದೆ ಅದ್ಭುತ ವಿಡಿಯೋ!
ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೂತನ ರಾಮ ಮಂದಿರದಲ್ಲಿ ಬಾಲರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸಿ, ಸೂರ್ಯ ತಿಲಕವಿಟ್ಟಂತೆ ಭಾಸವಾದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಾಕ್ಷಿಯಾಯಿತು. ಈ ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ ರಾಮಲಲ್ಲಾನ ವಿಗ್ರಹದ ಹಣೆಗೆ ಸೂರ್ಯನ ಕಿರಣಗಳು ಬೀಳುವಂತೆ ವಿಶೇಷ ವಾಸ್ತು ವಿನ್ಯಾಸ ಮಾಡಲಾಗಿದೆ. ಐಐಟಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ವಿಜ್ಞಾನಿಗಳು ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ತಜ್ಞರು ಜಂಟಿಯಾಗಿ…