Headlines

2 ಶತಕದೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್ – Kannada News | Ryan Rickleton becomes the first player to score 2 Hundreds in the SA20 History

ಸೌತ್ ಆಫ್ರಿಕಾ ಟಿ20 ಲೀಗ್​ನ ಸೀಸನ್​ವೊಂದರಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ರಯಾನ್ ರಿಕೆಲ್ಟನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಈ ಟೂರ್ನಿಯ 20ನೇ ಪಂದ್ಯದಲ್ಲಿ ಎಂಐ ಕೇಪ್​ಟೌನ್ ಹಾಗೂ ಜೋಬರ್ಗ್​ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್​ಟೌನ್ ಪರ ಆರಂಭಿಕನಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ 60 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಶತಕದ…

Read More

Gold Rates: ಚಿನ್ನದ ಬೆಲೆ ಎರಡು ದಿನದಲ್ಲಿ 160 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 5th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 5: ಚಿನ್ನದ ಬೆಲೆ ಇವತ್ತೂ ಕುಸಿದಿದೆ. ನಿನ್ನೆ ಗ್ರಾಮ್​ಗೆ 120 ರೂ ಇಳಿದಿದ್ದ ಬಂಗಾರದ ದರ (Gold Rates) ಇವತ್ತು ಮಂಗಳವಾರ 40 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 15,000 ರೂ ಒಳಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಸ್ವರ್ಣ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲೂ ಇವತ್ತು ಭರ್ಜರಿ ಇಳಿಕೆ ಆಗಿದೆ. ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಅದರ ಬೆಲೆ 265 ರೂನಿಂದ 255 ರೂಗೆ ಇಳಿದಿದೆ. ಭಾರತದಲ್ಲಿ…

Read More

ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆಗೆ ವಿಶೇಷ ಪೂಜೆ, ಉರುಳು ಸೇವೆ – Kannada News

ರಾಯಚೂರು, ಜೂನ್ 10): ಡಿಕೆ ಶಿವಕುಮಾರ್ ಸರ್ಕಾರದ ಸಂಪುಟ ವಿಸ್ತರಣೆ ಆಗಬೇಕಿದ್ದು, ಬಾಕಿ ಇರುವ 20 ಸಚಿವ ಸ್ಥಾನಗಳಿಗೆ ಬರೋಬ್ಬರಿ 40 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ. ಕೆಲವರು ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಪ್ರತಿಭಟನೆಗಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಇನ್ನು  ಹಂಪನಗೌಡ ಬಾದರ್ಲಿಗೆ ಮತ್ರಿ ಸ್ಥಾನ ಕರುಣಿಸಲಿ ಎಂದು…

Read More

ಭಾರತೀಯರು ಒತ್ತಡದಲ್ಲಿದ್ದಾರೆ, ಅದಕ್ಕೆ ನನ್ನ ಬಗ್ಗೆ ಮಾತಾಡ್ತಿದ್ದಾರೆ! – Kannada News | Indian batters in under extra pressure: Usman Tariq

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಅವರ ಬೌಲಿಂಗ್ ಶೈಲಿ. ವಿಭಿನ್ನ ಶೈಲಿಯಲ್ಲಿ ಚೆಂಡೆಸೆಯುವ ಆಕ್ಷನ್ ಹೊಂದಿರುವ ಉಸ್ಮಾನ್ ಅವರ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಇದರ ನಡುವೆ ಭಾರತೀಯ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಶ್ರೀವಾಸ್ತವ್ ಗೋಸ್ವಾಮಿ ಉಸ್ಮಾನ್ ತಾರಿಖ್ ಅವರ ಆಕ್ಷನ್ ಬಗ್ಗೆ ಪ್ರಶ್ನೆಗಳೆತ್ತಿದ್ದರು. ಇದೀಗ ಈ ಪ್ರಶ್ನೆಗೆ ಪಾಕ್ ಸ್ಪಿನ್ನರ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಉಸ್ಮಾನ್ ತಾರಿಖ್, ಭಾರತೀಯರು ನನ್ನ ಬೌಲಿಂಗ್ ಆಕ್ಷನ್ ಬಗ್ಗೆ…

Read More

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು; ಗಾಜಾ ಶಾಂತಿ ಯೋಜನೆ ಕುರಿತು ಚರ್ಚೆ – Kannada News | Israeli PM Benjamin Netanyahu Calls PM Modi Discuss Strategic Partnership and Gaza Peace Plan Status

ನವದೆಹಲಿ, ಜನವರಿ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿದ್ದರು. ಫೋನ್​ನಲ್ಲಿ ತಮ್ಮ ಗೆಳೆಯ ನೆತನ್ಯಾಹು ಜೊತೆ ಮಾತನಾಡಿದ ಮೋದಿ (PM Modi) ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. “ಇಬ್ಬರು ನಾಯಕರು ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಎರಡೂ ದೇಶಗಳ ಜನರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದರು” ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಗಾಜಾ ಶಾಂತಿ ಯೋಜನೆಯ ಅನುಷ್ಠಾನದ ಕುರಿತು ನೆತನ್ಯಾಹು…

Read More

ಕೊಟ್ಟ ಮಾತು ಉಳಿಸಿಕೊಂಡ ನಟ ಅಲ್ಲು ಅರ್ಜುನ್: ಭೇಷ್ ಎಂದ ನೆಟ್ಟಿಗರು

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳ ಬಳಿಕ ಅಲ್ಲು ಅರ್ಜುನ್ ರೇಂಜ್ ಭಾರತದ ಗಡಿ ದಾಟಿದೆ. ಇದೀಗ ಭಾರತದ ಸ್ಟಾರ್ ನಿರ್ದೇಶಕರುಗಳು ಒಬ್ಬರಾದ ಬಳಿಕ ಒಬ್ಬರೆಂಬಂತೆ ಅಲ್ಲು ಅರ್ಜುನ್ ಜೊತೆ ಸಾಲುಗಟ್ಟಿ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಈ ಹಿಂದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದ…

Read More

ಕರ್ನಾಟಕ ಅಧಿಕಾರ ಹಂಚಿಕೆ: ಕಾಂಗ್ರೆಸ್ ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ – Kannada News | Karnataka Power Tussle: CM Siddaramaiah’s First Reaction After Delhi Congress Meet, Says Will Speak Everything Tomorrow

ಬೆಂಗಳೂರು, ಮೇ 27: ದೆಹಲಿಯಲ್ಲಿ ಕಾಂಗ್ರೆಸ್ (Congress) ಹೈಕಮಾಂಡ್ ನಾಯಕರೊಂದಿಗೆ ಮಂಗಳವಾರ ನಡೆದ 7 ಗಂಟೆಗಳ ದೀರ್ಘಾವಧಿ ಸಭೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು (ಮೇ 27) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ, ಹೈಕಮಾಂಡ್ ಸಭೆಯ ಕುರಿತಾದ ಪ್ರಶ್ನೆ ಎದುರಿಸಬೇಕಾಯಿತು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ ನಾಳೆ…

Read More

Horoscope Today 15 January; ಇಂದು 12 ರಾಶಿಗಳ ಅದೃಷ್ಟ ಫಲ ಹೇಗಿದೆ? – Kannada News | Makara Sankranti 2026: Astrological Forecasts for All Zodiac Signs by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 15ರ ಗುರುವಾರದ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ಪುಷ್ಯಮಾಸ, ಕೃಷ್ಣಪಕ್ಷ ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿಯೋಗ ಮತ್ತು ಕೌಲವಕರಣ ಇರುವ ದಿನವಾಗಿದೆ. ರಾಹುಕಾಲವು ಮಧ್ಯಾಹ್ನ 1:54 ರಿಂದ 3:20ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:29 ರಿಂದ 1:53ರ ವರೆಗೆ ಇರುತ್ತದೆ. ಈ ದಿನದ ಪ್ರಮುಖ ಘಟನೆ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ…

Read More

ಬೆಂಗಳೂರು: ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್ ಪೀಸ್

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಬಷೀರ್ ಮತ್ತು ಆತನ ಸ್ನೇಹಿತ ಟೀ ಅಂಗಡಿಯ ಬಳಿ ಇದ್ದಾಗ, ವೆಂಕಟೇಶ್ ಎಂಬಾತನ ನೇತೃತ್ವದ ಏಳರಿಂದ ಎಂಟು ಜನರ ಗ್ಯಾಂಗ್ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ಕಾರಿನಲ್ಲಿ ಅಡಗಿಕೊಂಡಿದ್ದಾರೆ. ಆದರೆ, ಗ್ಯಾಂಗ್ ಲಾಂಗು, ಮಚ್ಚು ಮತ್ತು ಕಲ್ಲುಗಳಿಂದ ಕಾರಿನ ಮೇಲೆ ಹಲ್ಲೆ ನಡೆಸಿದೆ. ನಂತರ ಯುವಕರು ಕಾರಿನಿಂದ ತಪ್ಪಿಸಿಕೊಂಡು ಮುಖ್ಯ…

Read More

ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ತಮನ್ನಾ ಭಾಟಿಯಾ (Tamannah Bhatia), ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ‘ಐಟಂ ಗರ್ಲ್’. ತಮನ್ನಾ ಭಾಟಿಯಾ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರೆಂದರೆ ಆ ಸಿನಿಮಾ ಸೂಪರ್ ಹಿಟ್, ಆ ಹಾಡು ಸಹ ಸೂಪರ್ ಹಿಟ್ ಆಗಿಯೇ ತೀರುತ್ತದೆ ಎಂಬುದು ನಿರ್ಮಾಪಕ, ನಿರ್ದೇಶಕರುಗಳ ನಂಬಿಕೆ. ಇದೇ ಕಾರಣಕ್ಕೆ ತಮನ್ನಾಗೆ ಈಗ ಸಿನಿಮಾಗಳಿಗಿಂತಲೂ ಐಟಂ ಹಾಡುಗಳ ಆಫರ್ ಹೆಚ್ಚು ಬರುತ್ತಿದೆ. ಅದು ಮಾತ್ರವೇ ಅಲ್ಲ, ತಮನ್ನಾ ಭಾಟಿಯಾ ಈಗ ಐಟಂ ಹಾಡಿಗೆ ಅತಿ ಹೆಚ್ಚು ಸಂಭಾವನೆ ಪಡೆವ ನಟಿ…

Read More