Horoscope Today: ಇಂದು ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ

Horoscope Today: ಇಂದು ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 10, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ನವಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

 

 

Source link

‘ಸ್ಪಿರಿಟ್’ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಂದೀಪ್ ರೆಡ್ಡಿ ಸಿನಿಮಾ

ಸಂದೀಪ್ ರೆಡ್ಡಿ ವಂಗಾ (Sandeep Reddy Vanga), ಪ್ರಸ್ತುತ ಭಾರತದ ಯಶಸ್ವಿ ಮತ್ತು ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು. ‘ಅನಿಮಲ್’ ಸಿನಿಮಾದ ಯಶಸ್ವಿನ ಬಳಿಕ ಸಂದೀಪ್ ರೆಡ್ಡಿ ಇದೀಗ ಪ್ರಭಾಸ್ ಜೊತೆಗೆ ಕೆಲಸ ಮಾಡುತ್ತಿದ್ದು, ಪ್ರಭಾಸ್ ಅವರಿಗಾಗಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ಮತ್ತೊಬ್ಬ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ತಯಾರಾಗಿದ್ದು, ಈಗಾಗಲೇ ಮಾತುಕತೆ ಸಹ ಚಾಲ್ತಿಯಲ್ಲಿದೆ.

ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ, ಅಲ್ಲು ಅರ್ಜುನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದ್ದು, ಕತೆ ಫೈನಲ್ ಆಗಿದೆಯಂತೆ. ಅಲ್ಲು ಅರ್ಜುನ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಂದೀಪ್ ಅವರೊಟ್ಟಿಗೆ ಕೆಲಸ ಮಾಡಲು ಆಸಕ್ತಿ ತೋರಿದ್ದಾರಂತೆ.

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಈ ಮೂರೂ ಸಿನಿಮಾಗಳು ಮುಗಿದ ಬಳಿಕವಷ್ಟೆ ಸಂದೀಪ್ ರೆಡ್ಡಿ ವಂಗಾ ಜೊತೆಗೆ ಸಿನಿಮಾ ಮಾಡಲಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ

ಸಂದೀಪ್ ರೆಡ್ಡಿ ವಂಗಾ ಸಹ ‘ಸ್ಪಿರಿಟ್’ ಮುಗಿಸಿದ ಬಳಿಕ ರಣ್​​ಬೀರ್ ಕಪೂರ್ ಜೊತೆಗೆ ‘ಅನಿಮಲ್ ಪಾರ್ಕ್’ ಸಿನಿಮಾ ಮಾಡಲಿದ್ದಾರೆ. ಇದು ‘ಅನಿಮಲ್’ ಸಿನಿಮಾದ ಮುಂದುವರೆದ ಭಾಗ ಆಗಿರಲಿದೆ. ಅದರ ಬಳಿಕ ಅಲ್ಲು ಅರ್ಜುನ್ ಜೊತೆಗೆ ಕೆಲಸ ಪ್ರಾರಂಭಿಸಲಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ಮುಂದಿನ ಕೆಲ ವರ್ಷಗಳು ವೃತ್ತಿ ಜೀವನದ ಅತ್ಯುತ್ತಮ ವರ್ಷಗಳಾಗುವುದು ಖಾತ್ರಿ. ಸುಕುಮಾರ್ ಬಳಿಕ ಈಗ ಅಟ್ಲಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಲೋಕೇಶ್ ಕನಗರಾಜ್, ಬಾಸಿಲ್ ಜೋಸೆಫ್, ಸಂದೀಪ್ ರೆಡ್ಡಿ ವಂಗಾ, ಮತ್ತೆ ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪ್ರಶಾಂತ್ ನೀಲ್ ಅವರುಗಳೊಟ್ಟಿಗೆ ಅಲ್ಲು ಅರ್ಜುನ್ ಕೆಲಸ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆಂಡತಿಯ ಒಂದು ಕ್ಷಣದ ಸಿಟ್ಟಿಗೆ ಪತಿ ಬಲಿ: ಶವದ ಪಕ್ಕದಲ್ಲೇ ರಾತ್ರಿ ಕಳೆದ ಪತ್ನಿ

ಗುಜರಾತ್, ಏಪ್ರಿಲ್ 10: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಘಟನೆಯು ಕೌಟುಂಬಿಕ ಕಲಹವು ಎಷ್ಟು ಭೀಕರ ರೂಪ ಪಡೆದುಕೊಳ್ಳಬಹುದು ಎಂಬುದಕ್ಕೆ ಕನ್ನಡಿಯಾಗಿದೆ. ಆ ಕ್ಷಣದ ಸಿಟ್ಟು ಮತ್ತು ಆನಂತರದ ಮೌನ ಎರಡೂ ಈ ಘಟನೆಯಲ್ಲಿದೆ. ಪ್ರೀತಿ ಮತ್ತು ವಿಶ್ವಾಸದಿಂದ ಇರಬೇಕಾದ ದಂಪತಿ ನಡುವೆ ನಡೆದ ಸಣ್ಣ ಜಗಳವೊಂದು ಅಂತಿಮವಾಗಿ ಕೊಲೆ(Murder)ಯಲ್ಲಿ ಅಂತ್ಯವಾಗಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ದಾರಿಯುದ್ದಕ್ಕೂ ನಡೆದ ಜಗಳ
ಘಟನೆಯ ದಿನ ಪತಿ ಮತ್ತು ಪತ್ನಿ ಇಬ್ಬರೂ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದರು. ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಜಗಳ, ರಸ್ತೆಯುದ್ದಕ್ಕೂ ಮುಂದುವರೆದಿದೆ. ವಾದವು ಮಿತಿಮೀರಿದಾಗ ಪತಿ ಆಕ್ರೋಶಗೊಂಡು ಪತ್ನಿಯ ಕೆನ್ನೆಗೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ.

ಕಲ್ಲು ಎತ್ತಿ ತಲೆಗೆ ಹೊಡೆದ ಪತ್ನಿ
ಪತಿ ಕೈಮಾಡಿದ್ದರಿಂದ ವಿಚಲಿತಳಾದ ಮಹಿಳೆ, ತಕ್ಷಣವೇ ರಸ್ತೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿಕೊಂಡಿದ್ದಾಳೆ. ಆ ಕ್ಷಣದ ಆವೇಶದಲ್ಲಿ ಅವಳು ಅದೇ ಕಲ್ಲಿನಿಂದ ಪತಿಯ ತಲೆಗೆ ಬಲವಾಗಿ ಜಜ್ಜಿದ್ದಾಳೆ. ತಲೆಗೆ ತೀವ್ರವಾದ ಗಾಯಗಳಾದ ಪರಿಣಾಮವಾಗಿ, ಪತಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಮತ್ತಷ್ಟು ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ: ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

 

ಶವದ ಪಕ್ಕದಲ್ಲೇ ಕಳೆದುಹೋದ ರಾತ್ರಿ
ಸಾಮಾನ್ಯವಾಗಿ ಕೊಲೆ ಮಾಡಿದವರು ಭಯದಿಂದ ಸ್ಥಳ ಬಿಟ್ಟು ಓಡಿಹೋಗುತ್ತಾರೆ. ಆದರೆ ಇಲ್ಲಿ ನಡೆದಿದ್ದೇ ಬೇರೆ. ಕೊಲೆಯ ನಂತರ ಆ ಮಹಿಳೆ ಅಲ್ಲಿಂದ ಕದಲಲಿಲ್ಲ. ರಾತ್ರಿಯಿಡೀ ಅವಳು ತನ್ನ ಪತಿಯ ಶವದ ಪಕ್ಕದಲ್ಲೇ ಮೌನವಾಗಿ ಕುಳಿತು ಕಾಲ ಕಳೆದಿದ್ದಾಳೆ. ಅಳು ಅಥವಾ ಪಶ್ಚಾತ್ತಾಪವೋ ಎಂಬುದು ತಿಳಿದಿಲ್ಲವಾದರೂ, ಮರುದಿನ ಬೆಳಗ್ಗೆಯವರೆಗೂ ಅವಳು ಅದೇ ಸ್ಥಳದಲ್ಲಿ ಇದ್ದಳು.

ಮರುದಿನ ಬೆಳಗ್ಗೆ ಸ್ಥಳೀಯರು ಮತ್ತು ಅಧಿಕಾರಿಗಳು ಅಲ್ಲಿಗೆ ಬಂದಾಗ ಮಹಿಳೆ ಶವದ ಪಕ್ಕದಲ್ಲೇ ಇರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ನ್ಯಾಯ ಸಂಹಿತಾದ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಂಪತಿ ನಡುವಿನ ಜಗಳಕ್ಕೆ ನಿಖರವಾದ ಕಾರಣವೇನು? ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘಟನೆಯು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕ್ಷಣಿಕ ಆವೇಶವೊಂದು ಇಡೀ ಸಂಸಾರವನ್ನೇ ಹೇಗೆ ಸ್ಮಶಾನ ಮಾಡಬಲ್ಲದು ಎಂಬುದಕ್ಕೆ ಇದು ದುರಂತ ಸಾಕ್ಷಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಕಾಲಾಷ್ಟಮಿಯು ಮಹತ್ತರವಾದ ಪ್ರಭಾವವನ್ನು ಬೀರುವ, ಪರಿವರ್ತನೆ ಮತ್ತು ಅದೃಷ್ಟವನ್ನು ತರುವ, ಸಂಕಟಗಳನ್ನು ದೂರಮಾಡುವ ವಿಶೇಷ ಪರ್ವಕಾಲವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಶಿವನ ಉಗ್ರ ರೂಪವಾದ ಕಾಲಭೈರವನನ್ನು ಆರಾಧಿಸಲಾಗುತ್ತದೆ. ಕಾಲಭೈರವನು ಕಾಲದ ಅಧಿಪತಿಯಾಗಿದ್ದು, ಅತ್ಯಂತ ಬೇಗ ಫಲಿತಾಂಶಗಳನ್ನು ನೀಡುವ ಶಕ್ತಿಯನ್ನು ಹೊಂದಿದ್ದಾನೆ.

ಮನೆ ಕಟ್ಟುವ ಕನಸು, ವಿವಾಹ, ಮಕ್ಕಳ ಪ್ರಾಪ್ತಿ, ಆರೋಗ್ಯ ಸುಧಾರಣೆ, ಶತ್ರುಗಳ ಸಂಹಾರ, ರಾಜಕೀಯ ಸ್ಥಾನಮಾನದಂತಹ ಎಲ್ಲ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಕಾಲಾಷ್ಟಮಿ ದಿನ ಅತ್ಯಂತ ಶುಭಪ್ರದವಾಗಿದೆ. ಭಯ, ಆತಂಕ, ಸಾಲಬಾದೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಬಳಲುತ್ತಿರುವವರಿಗೆ ಕಾಲಭೈರವನ ಆರಾಧನೆಯು ಪರಿಹಾರವನ್ನು ನೀಡುತ್ತದೆ. ಶನಿ ದೋಷ, ರಾಹು ದೋಷ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಮತ್ತು ಪಂಚಮ ಶನಿ ದೋಷಗಳ ನಿವಾರಣೆಗೂ ಈ ಪೂಜೆ ಸಹಕಾರಿಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.

 

Source link

ಇವಿಎಂನಲ್ಲಿ ಭದ್ರವಾಯ್ತು ಮಿನಿ ಕದನದ ಅಭ್ಯರ್ಥಿಗಳ ಭವಿಷ್ಯ! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲೋದ್ಯಾರು? ಬಾಗಲ‘ಕೋಟೆ’ ಯಾರಿಗೆ?

ಬೆಂಗಳೂರು, ಏಪ್ರಿಲ್ 10: ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Karnataka Bypolls 2026) ಮತದಾನ ಗುರುವಾರ ಮುಕ್ತಾಯಗೊಂಡಿದೆ. ಕಳೆದ 15 ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾನವೂ ಮುಗಿದಿದೆ. ಮತದಾರ ಪ್ರಭು ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಸಮಾನ ಪ್ರಮಾಣದ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

ಮತದಾನದ ಶೇಕಡಾವಾರು ವಿವರ

  • ದಾವಣಗೆರೆ ದಕ್ಷಿಣ: ಶೇ 68.55 ರಷ್ಟು ಮತದಾನ ದಾಖಲಾಗಿದೆ.
  • ಬಾಗಲಕೋಟೆ: ಶೇ 68.73 ರಷ್ಟು ಮತದಾನವಾಗಿದೆ.

ಹಣ ಮತ್ತು ಕೋಳಿ ಹಂಚಿಕೆ ಆರೋಪ

ಮತದಾನದ ನಡುವೆಯೇ ಮತದಾರರಿಗೆ ಆಮಿಷ ಒಡ್ಡಿದ ಹಲವು ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಜಾಫರ್ ಬೇಫಾರಿ ಎಂಬಾತ ಹಣ ಹಂಚುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ನವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಂಬೆ ಕಾಲೋನಿಯಲ್ಲಿ ಮಹಿಳೆಯೊಬ್ಬರು ತನಗೆ ಕಾಂಗ್ರೆಸ್‌ನವರು 500 ರೂ. ನೀಡಿದ್ದಾರೆ ಎಂದು ಹಣ ಪ್ರದರ್ಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಹಳೇಪೇಟೆಯಲ್ಲಿ ಹಣ ಹಂಚಲು ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹೊರಗಿನಿಂದ ಲಾಕ್ ಮಾಡಿದ್ದರೂ, ಅವರು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ.

ಇನ್ನು ದಾವಣಗೆರೆಯಲ್ಲಿ ವಿಭಿನ್ನ ಆಮಿಷದ ಆರೋಪ ಕೇಳಿಬಂದಿದೆ. ಎಸ್‌ಪಿಎಸ್ ನಗರದಲ್ಲಿ ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನವರು ಮತಕ್ಕಾಗಿ ‘ಕೋಳಿ’ ಹಂಚಿದ್ದಾರೆ ಎಂದು ಬಾಲಕರು ಹೇಳುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ವಿನಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆ: ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!

ಈ ಎಲ್ಲಾ ಜಿದ್ದಾಜಿದ್ದಿಗಳ ನಡುವೆ, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

ವರದಿ: ಬಸವರಾಜ್ ದೊಡ್ಮನಿ, ರವಿಮೂಕಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು: ತಾಯಿಯ ನಡವಳಿಕೆ ಮೇಲೆಯೇ ಸಂಬಂಧಿಕರ ಶಂಕೆ!

ಬೆಂಗಳೂರು, ಏಪ್ರಿಲ್ 10: ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟವಾದ ದಿನವೇ ಬೆಂಗಳೂರಿನ (Bangalore) ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ, ಸಂಬಂಧಿಕರು ಮಾತ್ರ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ

ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಳಾದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಆಶಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಕೆ.ಜಿ. ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸಂಬಂಧಿಕರ ಅನುಮಾನಕ್ಕೆ ಕಾರಣವೇನು?

ಈ ಪ್ರಕರಣದಲ್ಲಿ ತಾಯಿ ಆಶಾ ಅವರ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದರೂ, ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ, ಪೊಲೀಸರಿಗೆ ತಿಳಿಸದೆಯೇ 4-5 ಯುವಕರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಘಟನೆ ನಡೆದು 8 ಗಂಟೆಗಳ ಕಾಲ ಮಾಹಿತಿ ಮುಚ್ಚಿಟ್ಟಿರುವುದು ಯಾಕೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವಿದ್ಯಾರ್ಥಿನಿ ತನುಶ್ರೀ ಸಹೋದರ ಹೇಳಿಕೆ ಮೂಡಿಸಿದ ಅನುಮಾನ

ತನುಶ್ರೀ ತಾಯಿ ಆಶಾ ನನಗೆ ಚಿಕ್ಕಮ್ಮ ಆಗಬೇಕು. ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಮಾನಸಿಕವಾಗಿ ಬಹಳ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ನಾವು ನಂಬಲ್ಲ ಎಂದು ಮೃತ ವಿದ್ಯಾರ್ಥಿನಿಯ ಸಹೋದರ ಧನುಷ್ ಎಂಬಾತ ಅನುಮಾನ ವ್ಯಕ್ತಪಡಿಸಿದ್ದಾನೆ. ನಮಗೆ ಅವಳ ತಾಯಿ ಆಶಾ ಮೇಲೆ ಅನುಮಾನ ಇದೆ. ತನುಶ್ರೀ ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಪ್ಪ ಸತ್ತಿದ್ದೇ ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿ. ಈಗಲೂ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂದೂ ಬಾಲಕಿ ಮೇಲೆ ಮುಸ್ಲಿಂ ಯುವಕನಿಂದ ಅತ್ಯಾಚಾರ, ದುಡಿಯಲು ಬಂದವನಿಂದ ನೀಚ ಕೃತ್ಯ

ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿದೆ. ಇದೇ ಕಾರಣಕ್ಕೆ ತನುಶ್ರೀಯನ್ನ ಕೊಲೆ ಮಾಡಿರುವ ಅನುಮಾನ ಇದೆ. ಘಟನೆ ನಡೆದು ಎಂಟತ್ತು ತಾಸಾದರೂ ಮಾಹಿತಿ ನೀಡಿಲ್ಲ. ಆಸ್ಪತ್ರೆಗೆ ಹೋದ ಬಳಿಕ ಅಲ್ಲಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ನಮ್ಮ ತಂಗಿಗೆ ಏನಾಯ್ತು ಎಂಬುದರ ಸತ್ಯಾಂಶ ಗೊತ್ತಾಗಬೇಕು. ಆಶಾ ಬಗ್ಗೆಯೂ ತನಿಖೆ ಆಗಬೇಕು ಎಂದು ಆತ ಆಗ್ರಹಿಸಿದ್ದಾನೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ವಿಶ್ವಾಸ ಕಳೆದುಕೊಳ್ಳಬೇಕಾಗುವುದು

ಮೇಷ ರಾಶಿ:

ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ‌. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಯಾವುದೋ ಅಗಾಧ ಯೋಚನೆಯಲ್ಲಿ ನೀವು ಇರುವಿರಿ. ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ.

ವೃಷಭ ರಾಶಿ:

ವಿದ್ಯಾಭ್ಯಾಸದಲ್ಲಿ ಶ್ರಮದ ಅಗತ್ಯ ಬಹಳ ಕಾಣಿಸುವುದು. ಎಂತಹ ಸವಾಲನ್ನೂ ನೀವು ಎದುರಿಸುವ ಹುಂಬುತನದಲ್ಲಿ ಏನನ್ನಾದರೂ ಮಾಡಿಕೊಳ್ಳುಬಿರಿ. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ಧೈರ್ಯವನ್ನು ಕಾಪಾಡಿಕೊಳ್ಳುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ.

ಮಿಥುನ ರಾಶಿ:

ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಉಪಯುಕ್ತ ಮಾಹಿತಿಯನ್ನು ಕೊಡುವರು.‌ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಿಮಗೆ ಉತ್ತಮವಾಗಿರುತ್ತದೆ. ನೂತನ ಮನೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಸಾಮಾಜಿಕ‌ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವಿರಿ. ನಿಮ್ಮ ಹವ್ಯಾಸವು ಬದಲಾಗಬಹುದು. ಮನೆಯ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳುವುದು ಬೇಡ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ.

ಕರ್ಕಾಟಕ ರಾಶಿ:

ಅಶುಭಕರ ಸೂಚನೆಯನ್ನು ನಿರ್ಲಕ್ಷಿಸುವಿರಿ. ಅನುಮಾನದ ನಿಮ್ಮ ಸ್ವಭಾವವು ಅಧಿಕವಾಗುದು. ಎಲ್ಲವನ್ನೂ ಸಮಾನವಾಗಿ ನೋಡಲು ಕಷ್ಟವಾಗಬಹುದು. ಕಲಹಕ್ಕೆ ಏನಾದರೂ ವಿಷಯವನ್ನು ಹುಡುಕಿಕೊಳ್ಳುವಿರಿ. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡುವುದು. ಪರರ ಸೇವೆಗೆ ನಿಮ್ಮ‌ ಮನಸ್ಸು ಒಪ್ಪದು. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.

ಸಿಂಹ ರಾಶಿ:

ಹಿತಶತ್ರುಗಳಿಂದ ನೀವು ಹತಾಶರಾದಂತೆ ತೋರುವುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸ್ಥಾನವು ಸಿಗಲಿದೆ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳನ್ನು ನೀವು ಅಲಕ್ಷ್ಯ ಮಾಡುವುದು ಸರಿಯಾಗದು. ನಿಮಗೆ ಕೊಟ್ಟ ಕೆಲಸಕ್ಕೆ ಏನಾದರೂ ನೆಪವನ್ನು ಹೇಳಿ ತಪ್ಪಿಸಿಕೊಳ್ಳುವಿರಿ. ಕನಸನ್ನು ನೀವು ನೆನಪಿನಲ್ಲಿ ಇಡುವಿರಿ. ಹೂಡಿಕೆಯ ವಿಷಯದಲ್ಲಿ ಸ್ವಲ್ಪ ಹಿಂದೇಡು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ.

ಕನ್ಯಾ ರಾಶಿ:

ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಗೆಲುವನ್ನು ಕಾಣಲು ಸೂಕ್ತ ಮಾಹಿತಿಯ ಕೊರತೆ ಕಾಣಿಸುವುದು. ನಕಲಿ ದಾಖಲೆಗಳ ಅನಾವರಣ. ಅಪಮಾನವನ್ನು ಸಹಿಸಲಾಗದು. ಏಕಾಂತದಲ್ಲಿ ಇಂದು ನೆಮ್ಮದಿಯನ್ನು ಕಾಣಬಯಸುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದು. ಮನೆಗೆ ಅತಿಥಿಗಳ ಆಗಮನ. ನಿಮಗೆ ಸಂತೋಷವಾಗುವುದು. ಕಳೆದುಕೊಂಡ ವಸ್ತುವಿನ ಬಗ್ಗೆ ಮೋಹವು ಹೆಚ್ಚಾಗುವುದು. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು.

ತುಲಾ ರಾಶಿ:

ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ತೋರುತ್ತದೆ. ಶ್ರಮದ ಸಾಧನೆಗೆ ತೃಪ್ತಿ ಇರುವುದು. ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ಗುರಿಯ ನಿರ್ಧಾರವಾಗದೇ ಇದ್ದರೆ ಇಂದು ನಿರ್ಧರಿಸಿ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಅವಕಾಶಗಳು ಮತ್ತೆ ಬಾರದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು.

ವೃಶ್ಚಿಕ ರಾಶಿ:

ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಹೊಸ ಆವಿಷ್ಕಾರಗಳ‌ ಕಡೆ ನಿಮ್ಮ ಮನಸ್ಸಿರುವುದು. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ.

ಧನು ರಾಶಿ:

ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ಮನಸ್ಸಿನೊಳಗೆ ಹಲವು ಗೊಂದಲಗಳನ್ನು ಇಟ್ಟುಕೊಂಡು ಚಡಪಡಿಸುವಿರಿ. ಬಂಗಾರದ ಉದ್ಯಮದ ವಿಸ್ತರಣೆ ಸಾಧ್ಯವಾಗಲಿದೆ. ಇಂದು ನಿಮಗೆ ಏನಾದರೂ ವಿಶೇಷವಾದ ವಸ್ತುವು ಸಿಗಬಹುದು. ಪ್ರೇಮದಿಂದ ವಂಚನೆಯಾಗಬಹುದು. ಚಂಚಲವಾದ ಮನಸ್ಸನ್ನು ನೀವು ಒಂದೇ ಕಡೆ ನಿಲ್ಲಿಸುವುದು ಕಷ್ಡವಾದೀತು. ಇಂದು ಸ್ತ್ರೀಯರ ತಾಳ್ಮೆಗೆ ಪರೀಕ್ಷೆಯಾಗಬಹುದು.

ಮಕರ ರಾಶಿ:

ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ವಿವಾಹ ಯೋಗವು ಕೂಡಿಬರಲಿದ್ದು, ಅಲ್ಲಗಳೆಯುವುದು ಬೇಡ. ಕಳ್ಳರ ಭೀತಿಯಿಂದ ನಿಮಗೆ ಚಿಂತೆಯಾಗಬಹುದು. ಕ್ಷಣಕಾಲದ ಕೋಪವನ್ನು ನೀವು ನಿಯಂತ್ರಣವನ್ನು ಇಟ್ಟುಕೊಳ್ಳುವುದು ಅನಿವಾರ್ಯ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು.

ಕುಂಭ ರಾಶಿ:

ಇಂದಿನ ಹಣಕಾಸಿನ‌ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ವಾಹನ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ನೀವು ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಂಡು ಅನಂತರ ಪಶ್ಚಾತ್ತಾಪಪಡುವಿರಿ. ಅಮೂಲ್ಯ ವಸ್ತುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಪ್ರಯೋಜನವಿಲ್ಲದೇ ನೀವು ಯಾರನ್ನೂ ಇಂದು ಮಾತನಾಡಿಸಲಾರಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ.

ಮೀನ ರಾಶಿ:

ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ಇಂದು ಅಧಿಕ ಬಾಯಾರಿಕೆ ನಿಮಗಾಗಲಿದೆ. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕಾಗುವುದು. ಇಂದು ನೀವು ನಿಮ್ಮವರಿಗೆ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿರಿಯ ವ್ಯಕ್ತಿಗಳ ಜೊತೆ ಇಂದು ಪ್ರಯಾಣ ಮಾಡುವಿರಿ. ಯಾರದೋ ಕಾರ್ಯಕ್ಕೆ ನೀವು ಶ್ರಮಿಸಬೇಕಾದೀತು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 15 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:53 – 12:26, ಯಮಗಂಡ ಕಾಲ 15:31 – 17:04, ಗುಳಿಕ ಕಾಲ 07:48 – 09:21

-ಲೋಹಿತ ಹೆಬ್ಬಾರ್-8762924271 (what’s app only)

Source link

KKR vs LSG: ಯುವ ಬ್ಯಾಟರ್ ಮುಕುಲ್ ಚೌಧರಿ ಎದುರು ಸೋತ ಕೆಕೆಆರ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026 ರ 15ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಲೀಗ್​ನಲ್ಲಿ ಮೊದಲ ಗೆಲುವಿಗಾಗಿ ಹುಡುಕಾಟ ನಡೆಸುತ್ತಿರುವ ಕೆಕೆಆರ್ ತಂಡ ತವರಿನಲ್ಲಿ ನಡೆದ ಸತತ ಎರಡನೇ ಪಂದ್ಯದಲ್ಲೂ ಸೋಲು ಕಂಡಿತು. ಈ ಮೂಲಕ ಲೀಗ್​ನಲ್ಲಿ ಕೆಕೆಆರ್​ಗೆ ಸತತ 4ನೇ ಸೋಲು ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿ ಗೆಲ್ಲಲು 182 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ 17ನೇ ಓವರ್ ಮುಕ್ತಾಯದವರೆಗೂ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಪಂದ್ಯದ ದಿಕ್ಕು ಬದಲಿಸಿದ ಲಕ್ನೋ ತಂಡದ ಯುವ ಬ್ಯಾಟರ್ ಮುಕುಲ್ ಚೌಧರಿ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Source link

ಲೆಬನಾನ್‌ನೊಂದಿಗೆ ಶೀಘ್ರದಲ್ಲೇ ಇಸ್ರೇಲ್ ನೇರ ಮಾತುಕತೆ; ನೆತನ್ಯಾಹು ಘೋಷಣೆ

ಟೆಲ್ ಅವಿವ್, ಏಪ್ರಿಲ್ 9: ಹಿಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸಲು ಮತ್ತು ಎರಡೂ ದೇಶಗಳ ನಡುವೆ ಶಾಂತಿ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯವಾದಷ್ಟು ಬೇಗ ಲೆಬನಾನ್‌ನೊಂದಿಗೆ ನೇರ ಮಾತುಕತೆಗಳನ್ನು ಪ್ರಾರಂಭಿಸಲು ನಮ್ಮ ಸಂಪುಟಕ್ಕೆ ಸೂಚನೆ ನೀಡಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹೇಳಿದ್ದಾರೆ. ಬೈರುತ್, ಬೆಕಾ ಕಣಿವೆ ಮತ್ತು ಲೆಬನಾನ್​ನ ದಕ್ಷಿಣ ಭಾಗದಾದ್ಯಂತ ಇಸ್ರೇಲ್ ಮಾರಕ ದಾಳಿಗಳನ್ನು ನಡೆಸಿದ ಒಂದು ದಿನದ ನಂತರ ಅವರ ಈ ಹೇಳಿಕೆ ಬಂದಿದೆ. ಈ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಸುದ್ದಿ ಸಂಸ್ಥೆ AFP ಪ್ರಕಾರ, ಅಮೆರಿಕಕ್ಕೆ ಇಸ್ರೇಲ್‌ನ ರಾಯಭಾರಿಯಾಗಿರುವ ಯೆಚಿಯಲ್ ಲೀಟರ್ ಲೆಬನಾನ್ ಜೊತೆಗಿನ ಈ ಮಾತುಕತೆಯಲ್ಲಿ ಇಸ್ರೇಲ್ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಮಾತುಕತೆಗಳು ಹಿಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸುವುದು, ಇಸ್ರೇಲ್ ಮತ್ತು ಲೆಬನಾನ್ ನಡುವೆ ಶಾಂತಿಯುತ ಸಂಬಂಧಗಳನ್ನು ಸ್ಥಾಪಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ಇದನ್ನೂ ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

“ಇಸ್ರೇಲ್‌ನೊಂದಿಗೆ ನೇರ ಮಾತುಕತೆಗಳನ್ನು ನಡೆಸಲು ಲೆಬನಾನ್ ಪದೇ ಪದೇ ವಿನಂತಿಸಿದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಲೆಬನಾನ್‌ನೊಂದಿಗೆ ನೇರ ಮಾತುಕತೆಗಳನ್ನು ಪ್ರಾರಂಭಿಸಲು ನಾನು ನಿನ್ನೆ ಕ್ಯಾಬಿನೆಟ್‌ಗೆ ಸೂಚಿಸಿದ್ದೇನೆ” ಎಂದು ನೆತನ್ಯಾಹು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ತಾಯಿ ನಿಧನದ ದುಃಖದಲ್ಲೇ ಪರೀಕ್ಷೆ ಬರೆದು ಈಗ ಕರ್ನಾಟಕಕ್ಕೆ ಟಾಪರ್:ನೋವಲ್ಲೂ ಸಾಧಿಸಿದ ದಿಶಾ

ಮಂಗಳೂರು, (ಏಪ್ರಿಲ್ 09): ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ದಿಶಾ, ವಾಣಿಜ್ಯ ವಿಭಾಗದಲ್ಲಿ (ಕಾಮರ್ಸ್) 600ಕ್ಕೆ 600 ಅಂಕ ಗಳಿಸಿ ದಕ್ಷಿಣ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೇ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈ ಮೂಲಕ ಮಾದರಿಯಾಗಿದ್ದಾಳೆ. ಇನ್ನು ದಿಶಾ ಸಾಧನೆಗೆ ಕುಟುಂಬಸ್ಥರು, ಕಾಲೇಜು ಆಡಳಿತ ಮಂಡಲಿ ಶುಭಾಶಯಗಳನ್ನ ತಿಳಿಸಿದೆ.

Source link

Exit mobile version