ಇರಾನ್ ಬೆದರಿಕೆ ವಿರುದ್ಧ ಗಲ್ಫ್ ರಾಷ್ಟ್ರಗಳ ಮಾಸ್ಟರ್ ಪ್ಲ್ಯಾನ್, ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಹೊಸ ಬಂದರು ನಿರ್ಮಾಣ – Kannada News | Gulf Nations Bypass Iran Threat: New Ports and Pipelines Alternative to Strait of Hormuz
ದುಬೈ, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಬಿಡುವಿಲ್ಲದ ತೈಲ ಸಾರಿಗೆ ಮಾರ್ಗವಾದ ಹಾಮರ್ಮಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಾಗತಿಕ ತೈಲ ಪೂರೈಕೆಗೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ ಯುಎಇ (UAE), ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್‌ನ ಈ ಜಲಮಾರ್ಗದ ಮೇಲಿನ ತಮ್ಮ ಅವಲಂಬನೆಯನ್ನು ಶಾಶ್ವತವಾಗಿ ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿವೆ. ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಭಾಗ…