ಚಿತ್ರದುರ್ಗ: ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ಒಂದೇ ಗ್ರಾಮದ ನಾಲ್ವರು ಕಾರ್ಮಿಕರು ಸಾವು – Kannada News | Chitradurga Bolero Accident: 4 Workers Dead Near Andanur

ಚಿತ್ರದುರ್ಗ, ಜನವರಿ 06: ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ. Source link

Read More

Gold Rate: ಬಂಗಾರದ ಬೆಲೆ ಎರಡು ದಿನದಲ್ಲಿ 100 ರೂ ಇಳಿಕೆ – Kannada News | Gold Price Today on 27th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 27: ಚಿನ್ನದ ಬೆಲೆ ಇವತ್ತೂ ಕಡಿಮೆ ಆಗಿದೆ. ನಿನ್ನೆ 45 ರೂ ತಗ್ಗಿದ್ದ ಇದರ ಬೆಲೆ (Gold Rates) ಇವತ್ತು 55 ರೂ ಇಳಿದಿದೆ. ಎರಡು ದಿನದಲ್ಲಿ ಗ್ರಾಮ್​ಗೆ 100 ರೂ ಕಡಿಮೆ ಆದಂತಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಏರಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ನಿಂತ ನೀರಾಗಿದೆ. ಕಳೆದ ಒಂದು ವಾರದಿಂದ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,45,100 ರುಪಾಯಿ ಇದೆ….

Read More

ಕಿಂಗ್ ಕೊಹ್ಲಿ ವಿಕೆಟ್ ಕಿತ್ತ ಯುವ ವೇಗಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ – Kannada News | IPL 2026 Star Prince Yadav to Replace Bumrah in India T20 Squad?

2026 ರ ಐಪಿಎಲ್‌ನಲ್ಲಿ (IPL 2026) ಲಕ್ನೋ ಸೂಪರ್‌ಜೈಂಟ್ಸ್ (LSG) ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ತಂಡ 7 ಪಂದ್ಯಗಳನ್ನು ಸೋತು, ಪ್ಲೇಆಫ್ ರೇಸ್​​ನಿಂದ ಭಾಗಶಃ ಹೊರಬಿದ್ದಿದೆ. ಆದಾಗ್ಯೂ ತಂಡದ ಪರ ಯುವ ವೇಗದ ಬೌಲರ್ ಪ್ರಿನ್ಸ್ ಯಾದವ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ ಕಡಿಮೆ ಎಕಾನಮಿ ರೇಟ್​​ನಲ್ಲಿ ರನ್ ಬಿಟ್ಟುಕೊಡುವುದರ ಜೊತೆಗೆ ಅವಶ್ಯಕ ಸಮಯದಲ್ಲಿ ವಿಕೆಟ್​ಗಳನ್ನು ತೆಗೆದುಕೊಟ್ಟಿದ್ದಾರೆ. ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಗೆಲುವು…

Read More

T20 World Cup: ಆಲ್‌ರೌಂಡರ್ ಬದಲು ಟೀಂ ಇಂಡಿಯಾಕ್ಕೆ ಅನುಭವಿ ವೇಗಿಯ ಆಗಮನ

2026 ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಆತಿಥೇಯ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ. ಟೂರ್ನಿಯ ಮೊದಲ ದಿನವೇ ಅಮೆರಿಕ ತಂಡವನ್ನು ಭಾರತ ತಂಡ ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದಿಂದಾಗಿ ಇಡೀ ವಿಶ್ವಕಪ್​ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಬಿಸಿಸಿಐ ಕೂಡ ಅವರ ಬದಲಿಯಾಗಿ ಅನುಭವಿ ವೇಗಿಯನ್ನು ತಂಡಕ್ಕೆ ಕರೆತಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾದರು. ಇದರಿಂದಾಗಿ ಹರ್ಷಿತ್ ಮೈದಾನವನ್ನು ಅರ್ಧದಲ್ಲೇ ತೊರೆದಿದ್ದರು….

Read More

ಡಾಂಬರೀಕರಣದಲ್ಲಿ ಕಳ್ಳಾಟ: ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನ – Kannada News | Minister Krishna byre gowda Suspends GBA Assistant Engineer Over Poor Road Repair In bengaluru

ಬೆಂಗಳೂರು, (ಜೂನ್ 20): ಹಲವು ಗೊಂದಲಗಳ ನಡುವೆಯೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಕೃಷ್ಣಭೈರೇಗೌಡ ಅವರು ಮೊದಲ ಸಭೆಯಲ್ಲೇ ನಗರದ ರಸ್ತೆಗಳ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದರು. ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಎಂದು ಜಿಬಿಎ ಅಧಿಕಾರಿಗಳ ಚಳಿ ಬಿಡಿಸಿದ್ದರು. ಇದರ ಮಧ್ಯೆಯೇ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನವಾಗಿದೆ. ಹೌದು… ಕ್ರೆಸೆಂಟ್ ರಸ್ತೆಯ ಡಾಂಬರೀಕರಣದಲ್ಲಿ ಕಳ್ಳಾಟವಾಡಿ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಸಂಪಂಗಿರಾಮನಗರ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅಮಾನತುಗೊಂಡವರು….

Read More

ತುಮಕೂರು: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ – Kannada News | Tumakuru: Mother Dies by Suicide After Jumping Into Lake With 8 Year Old Son

ತುಮಕೂರು, ಡಿಸೆಂಬರ್ 29: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ತುಮಕೂರು (Tumakuru) ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ತಾಯಿ ಹಂಸಲೇಖ(36) ಮತ್ತು ಪುತ್ರ ಗುರುಪ್ರಸಾದ್(8) ಮೃತರು. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೆರೆಯಿಂದ ತಾಯಿ, ಮಗನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವಗಳು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಭೂಪಸಂದ್ರ ಗ್ರಾಮದ…

Read More

ಮಹಿಳಾ ಅಧಿಕಾರಿಯ ಬೆಡ್‌ರೂಮ್ ದೃಶ್ಯಗಳ ಸ್ಟಿಂಗ್ ಮಾಡಿ 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್: ನಕಲಿ ಪತ್ರಕರ್ತರ ಗ್ಯಾಂಗ್ ಬಂಧನ – Kannada News | Hidden Camera Sting in Belagavi: Fake Journalists Blackmail Woman Officer for Rs 50 Lakh, Three Arrested

ಬೆಳಗಾವಿ, ಫೆಬ್ರವರಿ 6: ಬೆಳಗಾವಿಯಲ್ಲಿ (Belagavi) ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು. ಆರೋಪಿಗಳು ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ…

Read More

ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಬೆಂಗಳೂರು, ಮೇ 28: ಈಗಷ್ಟೇ ಕಾಲೇಜು ಮುಗಿಸಿ ಮೊದಲ ಕೆಲಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್​ಗಳನ್ನು ಪರಿಶೀಲಿಸುವುದುಂಟು. ಆದರೆ, ಅನುಭವಿ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಆತನ ಕಾಲೇಜು ಪರೀಕ್ಷೆಗಳ ಅಂಕಗಳಿಗೆ ಸಾಮಾನ್ಯವಾಗಿ ಯಾವ ಕಂಪನಿಗಳೂ ಆದ್ಯತೆ ಕೊಡುವುದಿಲ್ಲ. ಗೂಗಲ್​ನ 8 ವರ್ಷದ ಅನುಭವಿ ಉದ್ಯೋಗಿಯೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಷಕ್ಕೆ 80 ಲಕ್ಷ ರೂಗೂ ಅಧಿಕ ಸಂಬಳ ಪಡೆಯುವ ಈ ಗೂಗಲ್ ಟೆಕ್ಕಿಯ (Google Employee) ಅರ್ಜಿಯನ್ನು ಭಾರತೀಯ…

Read More

ಅಂತಾರಾಷ್ಟ್ರೀಯ ಯೋಗ ದಿನ :30 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ – Kannada News | Kolkatas Red Road: 30K Join PM Modi for Yoga Day 2026, Emphasising Holistic Health

ಕೋಲ್ಕತ್ತಾ, ಜೂನ್ 21: ಪ್ರಧಾನಿ ನರೇಂದ್ರ ಮೋದಿ ಇಂದು ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ 30 ಸಾವಿರ ಜನರೊಂದಿಗೆ ಯೋಗಾಭ್ಯಾಸ ಮಾಡಿದರು. ಯೋಗ ಎಲ್ಲರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶ ಯೋಗದ ಶಕ್ತಿಯಿಂದ ಚೈತನ್ಯಭರಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೋಲ್ಕತ್ತಾದ ಜನತೆ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ಶ್ಲಾಘಿಸಿದರು. ಪ್ರಧಾನಿ ಮೋದಿ ಅವರು ಬಂಗಾಳದ ಪವಿತ್ರ ಭೂಮಿಗೆ ಭಗವಾನ್ ರಾಮಕೃಷ್ಣ…

Read More

‘ಮ್ಯಾಂಗೊ ಪಚ್ಚ’ ಟ್ರೈಲರ್: ಸಾಮ್ರಾಜ್ಯ ಕಟ್ಟಲು ಹೊರಟ ಸಾಮಾನ್ಯನ ಕತೆ – Kannada News | Mango Pachcha movie trailer this is a full packaged Kannada movie

ಕಿಚ್ಚ ಸುದೀಪ್ ಪ್ರಸ್ತುತ ಪಡಿಸುತ್ತಿರುವ, ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸುದೀಪ್ ಅವರು ಈ ಸಿನಿಮಾವನ್ನು ಪದೇ ಪದೇ ಪ್ರಮೋಟ್ ಮಾಡುತ್ತಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಸಾಮಾನ್ಯ ಯುವಕನ ಅಸಾಮಾನ್ಯ ಕತೆಯೆಂತೆ ತೋರುತ್ತಿದೆ. ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’ ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಈ ಟ್ರೈಲರ್ ಗಮನ ಸೆಳೆಯುತ್ತಿದೆ. ಸಾಮಾನ್ಯ…

Read More