Headlines

ಗಾನವಿ ಕೇಸ್​​: ಕೋರ್ಟ್​​ ಮೆಟ್ಟಿಲೇರಿದ ಸೂರಜ್​​ ಕುಟುಂಬ; ಕಾರಣ ಇಲ್ಲಿದೆ – Kannada News | Ganavi Case: Suraj Family Moves Court for Bail Amid Suicide and Harassment Claims

ಬೆಂಗಳೂರು, ಡಿಸೆಂಬರ್​​ 29: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್​​ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ. ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ…

Read More

IND vs PAK: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಸೂರ್ಯ – Kannada News | T20 World Cup 2026: India vs Pakistan Abhishek Sharma, Kuldeep Yadav Confirmed for Tomorrow’s Crucial Match

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬಹುನಿರೀಕ್ಷಿತ ಪಂದ್ಯ ನಾಳೆ, ಅಂದರೆ ಫೆಬ್ರವರಿ 15, 2026 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಕದನದಲ್ಲಿ ಗೆಲ್ಲುವ ತಂಡವು ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ತಯಾರಿ ನಡೆಸುತ್ತಿವೆ. ಆದರೆ ಟೀಂ ಇಂಡಿಯಾಗೆ ಆಟಗಾರರ ಅಲಭ್ಯತೆ ದೊಡ್ಡ ಚಿಂತೆಯಾಗಿತ್ತು….

Read More

IPL 2026: ನಾಮಕಾವಸ್ತೆಗೆ ತಂಡದಲ್ಲಿರುವ ಇವರಿಬ್ಬರೇ ಆರ್​ಸಿಬಿ ಪಾಲಿನ ವಿಲನ್ಸ್ – Kannada News | RCB Batting Woes: Jacob Bethell and Jitesh Sharma’s Poor Form Hurting IPL 2026 Campaign

2026 ರ ಐಪಿಎಲ್ ಅನ್ನು ಅಬ್ಬರದಿಂದ ಆರಂಭಿಸಿದ್ದ ಆರ್​ಸಿಬಿ ಮೊದಲಾರ್ಧ ಮುಗಿದ ಬಳಿಕ ಅದ್ಯಾಕೋ ಅಳಿತಪ್ಪಿದಂತೆ ಕಾಣುತ್ತಿದ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ ಇದೀಗ ಆ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿ ಕೆಲವರ ಪ್ರದರ್ಶನ. ನಿರ್ಣಾಯಕ ಹಂತದಲ್ಲಿ ಕೆಲವರಿಂದ ನಿರೀಕ್ಷಿತ ಪ್ರದರ್ಶನ ಬರದಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ಆರ್​ಸಿಬಿ ಯಾರ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತೋ, ಆ ಆಟಗಾರರೇ ಆರ್​ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಂತಹ…

Read More

ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ – Kannada News | CM Joseph Vijay Wins Trust Vote: TVK Government Proves Majority with 144 Votes in Tamil Nadu Assembly

ತಮಿಳುನಾಡು ಸಿಎಂ ಜೋಸೆಫ್ ವಿಜಯ್Image Credit source: tv9 ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ಜೋಸೆಫ್ ವಿಜಯ್ (CM Joseph Vijay) ನಿರೀಕ್ಷೆಗೂ ಮೀರಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್​ನ ಐವರು ಶಾಸಕರು, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು ಶಾಸಕರು, ಸಿಪಿಐ(ಎಂ) ಇಬ್ಬರು, ಐಯುಎಂಎಲ್​ ಪಕ್ಷದ ಇಬ್ಬರು ಶಾಸಕರು ಶಾಸಕರು ಸೇರಿದಂತೆ ಒಟ್ಟು 144 ಜನ ಶಾಸಕರ ಬೆಂಬಲ ದೊರೆತಿದೆ. ವಿಧಾನಸಭೆ ಚುನಾವಣೆಯಲ್ಲಿ ವಿಜಯ್…

Read More

T20 World Cup 2026: ಜಗದೀಸನ್ ಸ್ಫೋಟಕ ಶತಕ: ಭಾರತಕ್ಕೆ ಭರ್ಜರಿ ಜಯ – Kannada News | T20 World Cup 2026: India A beat US by 38 runs

ಟಿ20 ವಿಶ್ವಕಪ್​ನ 2ನೇ ಅಭ್ಯಾಸ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ನಾರಾಯಣ್ ಜಗದೀಸನ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದ ಬಳಿಕ ಪ್ರಿಯಾಂಶ್ ಆರ್ಯ (28) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಬಿರುಸಿನ…

Read More

ನನ್ನಿಂದ ಖುಷಿಯಾಗಿರುವ ಚೀನಾದ ಅಧ್ಯಕ್ಷ ಬಿಗಿ ಅಪ್ಪುಗೆ ನೀಡುತ್ತಾರೆ; ಟ್ರಂಪ್ – Kannada News | China president will give me a big hug Donald Trump announces Hormuz opening

ವಾಷಿಂಗ್ಟನ್, ಏಪ್ರಿಲ್ 15: ಇರಾನ್​ಗೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ, ನಾವು ಯಾವುದೇ ಆಯುಧಗಳ ಪೂರೈಕೆ ಮಾಡುತ್ತಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿತ್ತು. ಅದರ ಬೆನ್ನಲ್ಲೇ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್ (Donald Trump), ‘ಚೀನಾ ಇರಾನ್​ಗೆ ಶಸ್ತ್ರಾಸ್ತ್ರ ಒದಗಿಸುವುದಿಲ್ಲ ಎಂದಿದೆ. ನಾನು ಹಾರ್ಮುಜ್ ಜಲಸಂಧಿಯನ್ನು ತೆರೆಸುತ್ತಿರುವುದರಿಂದ ಚೀನಾ ಅಧ್ಯಕ್ಷರು ಬಹಳ ಖುಷಿಯಾಗಿದ್ದಾರೆ. ಅವರಿಂದ ನನಗೆ ಬಿಗಿಯಾದ ಅಪ್ಪುಗೆ ಸಿಗುವುದು ಖಚಿತ’ ಎಂದು ಹೇಳಿದ್ದಾರೆ. ಇರಾನ್‌ಗೆ…

Read More

ಸರ್ಕಾರಿ ಕೆಲಸದ ಹೆಸರಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮಕ್ಮಲ್ ಟೋಪಿ: ಕೋಟ್ಯಂತರ ರೂ ವಂಚನೆ – Kannada News | Massive Job Scam Uncovered: Aspirants Duped of 2 Crore

ಶಿವಮೊಗ್ಗ, ಜುಲೈ 02: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ (job scam) ಮಾಡಿರುವ ಜೋಡಿಯನ್ನು ನಗರದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ (shivamogga) ಹರಿಗೆ ಗ್ರಾಮದ ನಿವಾಸಿಗಳಾದ ಸಚಿನ್ ಮತ್ತು ಸುಜಾತ ಬಂಧಿತ ಆರೋಪಿಗಳು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಿಧ ಜಿಲ್ಲೆಗಳ ನೂರಾರು ನಿರುದ್ಯೋಗಿಗಳಿಗೆ ಟೋಪಿ  ವಂಚಕರು ಶಿವಮೊಗ್ಗ ನಗರದಲ್ಲಿ ಹೈಟೆಕ್ ಉದ್ಯೋಗ ತರಬೇತಿ ಕೇಂದ್ರವನ್ನು ತೆರೆದಿದ್ದರು. ಕೇವಲ ಶಿವಮೊಗ್ಗ ಮಾತ್ರವಲ್ಲದೆ ಹಾಸನ, ದಾವಣಗೆರೆ,…

Read More

RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ! – Kannada News | IPL 2026 PBKS vs RCB: Dharamsala Pitch Report

IPL 2026: ಐಪಿಎಲ್ 2026 ರ 61 ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದಲ್ಲಿ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ….

Read More

ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ: ಮೂವರಿಗೆ ಗಾಯ – Kannada News | KSRTC Bus Fight: Groundnut Shells Spark Brawl Between Passengers and Conductor in Chamarajanagar

ಚಾಮರಾಜನಗರ, ಫೆಬ್ರವರಿ 25: ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​​ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆಯನ್ನು ಬಿಸಾಡಿದ್ದಾರೆ. ಇದನ್ನ ನಿರ್ವಾಹಕ ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ, ಸರಗೂರು ಬೈಪಾಸ್ ಬಳಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಬಡಿದಾಟವೇ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮ ಚಾಮರಾಜನಗರದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್, ನಿರ್ವಾಹಕ…

Read More

ರಾಯಚೂರಿನಲ್ಲಿ ಘೋರ ದುರಂತ: ದಂಪತಿಯನ್ನು ಬಲಿಪಡೆದ ಕನಸಿನ ಮನೆ!

ರಾಯಚೂರು, (ಮಾರ್ಚ್ 09): ಕನಸಿನ ಮನೆಯಲ್ಲೇ ದಂಪತಿ (Couple) ದುರಂತ ಸಾವು ಕಂಡಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಹೌದು…ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ಗಂಡ ಹೆಂಡತಿ ದುರಂತ ಸಾವುಕಂಡಿದ್ದಾರೆ. ದ್ಯಾವಪ್ಪ ಸುಗೂರು(35), ಶಿವಮ್ಮ(33) ಮೃತ ದಂಪತಿ. ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದೆ….

Read More