Headlines

ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ? – Kannada News | Mamata banerjee refuses to resign as chief minister what happens next in west bengal

ಕೊಲ್ಕತ್ತಾ, ಮೇ 5: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿಯ ಗೆಲುವು ಅನೈತಿಕ ಎಂದು ಆರೋಪಿಸಿದ್ದಾರೆ. ಬಿಜೆಪಿ 100 ಸ್ಥಾನಗಳನ್ನು ಕದ್ದಿದೆ. ನೈತಿಕವಾಗಿ ನಾವೇ ಗೆದ್ದಿದ್ದೇವೆ. ಹೀಗಾಗಿ, ರಾಜಭವನಕ್ಕೆ ಹೋಗೋ ಮಾತೇ ಇಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಹೊಸ ಶಾಕ್ ನೀಡಿದ್ದಾರೆ. ಹಾಗಾದರೆ, ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರದಿಂದಾಗಿ ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಏನಾಗಬಹುದು? ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿಯ ಚುನಾವಣೆ…

Read More

IPL 2026: ಸ್ಫೋಟಕ ಬ್ಯಾಟಿಂಗ್​ಗೆ ಬ್ರೇಕ್ ಹಾಕಿದವರು: ಈ ಬಾರಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ್ದು ಇವರೇ ನೋಡಿ – Kannada News | IPL 2026 See who bowled the most dot balls in this year’s IPL

ಬೆಂಗಳೂರು (ಮೇ. 08): ಐಪಿಎಲ್ 2026 (Indian Premier League) ಸೀಸನ್ ಬ್ಯಾಟ್ಸ್‌ಮನ್‌ಗಳ ಸ್ಫೋಟಕ ಆಟದಿಂದ ಕೂಡಿದೆ. ಈ ಸೀಸನ್‌ನಲ್ಲಿ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವುದರಿಂದ ಹಿಡಿದು ಕೇವಲ 36 ಎಸೆತಗಳಲ್ಲಿ ಶತಕಗಳನ್ನು ಗಳಿಸಿರುವಂತಹ ಬ್ಯಾಟರ್​ಗಳನ್ನು ನಾವು ನೋಡುತ್ತಿದ್ದೇವೆ. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಕ್ಲಾಸೆನ್ ಬೌಲರ್‌ಗಳನ್ನು ಕಾಡುತ್ತಿದ್ದಾರೆ. ಆದರೆ, ಇಂತಹ ಕಠಿಣ ಸಂದರ್ಭಗಳಲ್ಲಿಯೂ ಸಹ, ಕೆಲವು ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಡಾಟ್ ಬಾಲ್‌ಗಳಿಂದ ಬ್ಯಾಟ್ಸ್‌ಮನ್‌ಗಳನ್ನು…

Read More

ಭಾರಿ ಗಾಳಿ ಮಳೆಗೆ ಮನೆ ಮೇಲೆ ಬಿತ್ತು ಬೃಹದಾಕಾರದ ಅಶ್ವತ್ಥ ಮರ: ಪವಾಡಸದೃಶ ರೀತಿಯಲ್ಲಿ ಪಾರಾದ ಕುಟುಂಬ – Kannada News | Mangaluru Rain Fury: Giant Peepal Tree Falls on House; Family of Five Including Infant Escape Miraculously

ಮನೆ ಮೇಲೆ ಬಿದ್ದ ಬೃಹದಾಕಾರದ ಅಶ್ವತ್ಥ ಮರImage Credit source: tv9 ಮಂಗಳೂರು, ಏಪ್ರಿಲ್ 22: ಕರಾವಳಿಯಲ್ಲಿ (Coastal Karnataka) ಮಂಗಳವಾರ ತಡರಾತ್ರಿ ಭಾರಿ ಗಾಳಿ-ಮಳೆ (Rain) ಸುರಿದಿದೆ. ಗಾಳಿ-ಮಳೆಗೆ ಮಂಗಳೂರಿನ (Mangalore) ಕುದ್ರೋಳಿಯ ಬಸವನಗುಡಿ ರಸ್ತೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಮನೆಯೊಂದರ ಮೇಲೆ ಬೃಹದಾಕಾರದ ಅಶ್ವತ್ಥ ಮರವೊಂದು ಉರುಳಿ ಬಿದ್ದಿದ್ದು, ಮನೆಯಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದರಾಜ್ ಶೇಟ್ ಎಂಬುವವರ ಮನೆ ಮೇಲೆ ನಸುಕಿನ ಜಾವ 3:30ರ ಸುಮಾರಿಗೆ ಈ ಮರ ಬಿದ್ದಿದೆ….

Read More

ನಿದ್ರಿಸಿದ್ದ ಬಾಲಕನ ಕ್ಯಾಬ್​​ನಲ್ಲೆ ಬಿಟ್ಟುಹೋದ ಪೋಷಕರು: 1 ಗಂಟೆಯಲ್ಲಿ ಆತನ ರಕ್ಷಣೆ ಮಾಡಿದ ಪೊಲೀಸರು – Kannada News | Bengaluru: Parents Forget Child in Cab; Police Rescue Sleeping Boy in 1 Hour via Namma 112

ಬೆಂಗಳೂರು, ಫೆಬ್ರವರಿ 18: ನಿದ್ರಿಸಿದ್ದ ಮಗುವನ್ನು ಮರೆತು ಕ್ಯಾಬ್​​ನಲ್ಲಿಯೇ ಪೋಷಕರು ಬಿಟ್ಟು ಹೋಗಿರುವ ಪ್ರಕರಣ ಬೆಂಗಳೂರಿನ ಹೆನ್ನೂರಲ್ಲಿ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ ಕ್ಯಾಬ್​​ ಪತ್ತೆ ಮಾಡಿ ಮಗುವಿನ ರಕ್ಷಣೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರು ತಲುಪುವ ಮೊದಲು ಅದಾಗಲೇ ಮತ್ತೆರಡು ಟ್ರಿಪ್​​ಗಳನ್ನು ಚಾಲಕ ಪೂರೈಸಿದ್ದರೂ ಆತನಿಗಾಗಲೀ ಅಥವಾ ಇತರ ಪ್ರಯಾಣಿಕರಿಗಾಗಲೀ ನಿದ್ರಿಸುತ್ತಿರುವ ಮಗು ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿಪರ್ಯಾಸ. ಜಿಯಾನ್ ಚುಂಗಿ (4) ರಕ್ಷಿಸಲಾದ ಮಗುವಾಗಿದ್ದು,  ಈತನ ಕುಟುಂಬ ಮತ್ತು ಬಂಧುಗಳು ಒಟ್ಟಾಗಿ…

Read More

Karnataka Dam Water Level: ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 1 ಟಿಎಂಸಿ ನೀರು: ಲಿಂಗನಮಕ್ಕಿ, ಭದ್ರಾ, ಹೇಮಾವತಿ ಜಲಾಶಯಗಳ ಇಂದಿನ ಒಳಹರಿವು ಹೇಗಿದೆ? – Kannada News | Monsoon Update: Karnataka Dam Water Levels Soar on July 10 Check Key Dams

ಬೆಂಗಳೂರು, ಜು.10: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು (Inflow) ದಾಖಲಾಗುತ್ತಿದೆ. ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸೇರಿದಂತೆ ಕರಾವಳಿ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಡ್ಯಾಂಗಳಿಗೆ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವರದಿ ಇಲ್ಲಿದೆ. ಆಲಮಟ್ಟಿ ಜಲಾಶಯ (ವಿಜಯಪುರ) ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್…

Read More

ಸ್ನೇಹಿತನ ಮದುವೆಗೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಭದ್ರಾ ನದಿಪಾಲು!

ಚಿಕ್ಕಮಗಳೂರು, ಏ.6: ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಗದಗ ಮೂಲದ, ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಅಭಿಷೇಕ್ ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು,…

Read More

Video: ಕುತ್ತಿಗೆಗೆ ಕತ್ತಿ ಹಿಡಿದು ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು – Kannada News | Blades, Bikes and Bystanders: Amritsar Robbery Plays Out Like a Movie Scene

ಅಮೃತಸರ, ಜನವರಿ 11: ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಘಾತಕಾರಿ ಹಗಲು ದರೋಡೆ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದಾಳಿಕೋರರು ಸಾರ್ವಜನಿಕರ ಮುಂದೆಯೇ ಆಭರಣ ವ್ಯಾಪಾರಿಯ ಮೇಲೆ ದಾಳಿ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಭರಣ ವ್ಯಾಪಾರಿಯನ್ನು ಮೊದಲು ಕಾರಿನಿಂದ ಗುದ್ದಿ, ನಂತರ ಕತ್ತಿಗಳನ್ನು ಹಿಡಿದ ಗೂಂಡಾಗಳು ಆತನ ಹಿಂದೆ ಓಡುತ್ತಿರುವುದು ಕಂಡುಬರುತ್ತಿದೆ. ದಾಳಿಕೋರರು ಕತ್ತಿಗಳು ಸೇರಿದಂತೆ ಹರಿತವಾದ ಆಯುಧಗಳನ್ನು ಹೊಂದಿದ್ದರು. ಅವರು ಆಭರಣ ವ್ಯಾಪಾರಿಯನ್ನು…

Read More

Gold Rate Today: ಬೆಳ್ಳಿ ಬೆಲೆ ಕಿಲೋಗೆ 3.70 ಲಕ್ಷ ರೂ; ಇಲ್ಲಿದೆ ದರಪಟ್ಟಿ – Kannada News | Gold Price Today on 27th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 27: ಚಿನ್ನಕ್ಕಿಂತ ಬಹಳ ವೇಗವಾಗಿ ಹೆಚ್ಚುತ್ತಿರುವ ಬೆಳ್ಳಿಯ ಬೆಲೆ (Silver Rates) ಇಂದು ಮಂಗಳವಾರ ಹೊಸ ದಾಖಲೆ ಸ್ಥಾಪಿಸಿದೆ. ಗ್ರಾಮ್​ಗೆ ಬರೋಬ್ಬರಿ 10 ರೂ ಹೆಚ್ಚಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 3.70 ಲಕ್ಷ ರೂಗೆ ಏರಿದೆ. ಚೆನ್ನೈ ಮೊದಲಾದ ಮಾರುಕಟ್ಟೆಯಲ್ಲಿ ಇದರ ಬೆಲೆ 3.87 ಲಕ್ಷ ರೂಗೆ ಹೋಗಿದೆ. ಚಿನ್ನದ ಬೆಲೆ ವಿದೇಶಗಳಲ್ಲಿ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,450 ರುಪಾಯಿ ಇದೆ….

Read More

ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಚಾಮರಾಜನಗರ, ಮಾರ್ಚ್​ 12: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಿರಂತರವಾಗಿ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿತ್ತು (Temple Theft). ಆ ಘಟನೆ ಮಾಸುವ ಮುನ್ನವೇ ಇದೀಗ ಕಳ್ಳರು ಮತ್ತೆ ಕೈಚಳಕ ತೋರಿಸಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಹಬ್ಬ ಮುಗಿದ ಮೂರೇ ದಿನಕ್ಕೆ ದೇವಸ್ಥಾನದ ಬಾಗಿಲೂ ಮೀಟಿ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ. ನಡೆದಿದ್ದೇನು? ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ…

Read More

ಐಶಾರಾಮಿ ಕಾರು ಖರೀದಿಸಿದ ನಟಿ ರಾಧಿಕಾ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Radhika Narayan purchased new Volvo Ex30 car see details

ಸಿನಿಮಾ (Cinema) ನಟ-ನಟಿಯರು ಐಶಾರಾಮಿ ಕಾರುಗಳು ಖರೀದಿಸುವುದು ಹೊಸದೇನೂ ಅಲ್ಲ. ಆದರೆ ಅವರ ಕಾರುಗಳ ಆಯ್ಕೆ ಅವರ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಇದೀಗ ನಟಿ ರಾಧಿಕಾ ನಾರಾಯಣ್ ಅವರು ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದು ಸಾಮಾನ್ಯವಾದ ಕಾರಲ್ಲ, ವಿಶ್ವದಲ್ಲೇ ಸುರಕ್ಷತೆಗೆ ಹೆಸರಾದ ಕಾರು ಬ್ರ್ಯಾಂಡ್ ಒಂದು ಬಿಡುಗಡೆ ಮಾಡಿರುವ ಐಶಾರಾಮಿ ಮತ್ತು ಸುರಕ್ಷಿತ ಇವಿ ಕಾರು. ಅದುವೇ ವೋಲ್ವೋ ಇಎಕ್ಸ್ 30. ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಹೊಸ ಕಾರನ್ನು ನಟಿ ರಾಧಿಕಾ ಖರೀದಿ ಮಾಡಿದ್ದಾರೆ. ‘ರಂಗಿತರಂ’,…

Read More