Headlines

ತುಮಕೂರು: ದರೋಡೆಕೋರರ ಸಿನಿಮೀಯವಾಗಿ ಕಾರಲ್ಲಿ ಚೇಸ್ ಮಾಡಿದ ಸ್ಥಳೀಯರು, ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತೇ? – Kannada News | Filmy Car Chase in Tumakuru: Locals Track Down Jewellery Robbers After Jagadamba Shop Heist

ದರೋಡೆಕೋರರ ಸಿನಿಮೀಯವಾಗಿ ಕಾರಲ್ಲಿ ಚೇಸ್ ಮಾಡಿದ ಸ್ಥಳೀಯರುImage Credit source: tv9 ತುಮಕೂರು, ಫೆಬ್ರವರಿ 24: ಸಿನಿಮಾ ಕಥೆಯನ್ನೇ ಮೀರಿಸುವ ರೋಚಕ ಚೇಸಿಂಗ್ ದೃಶ್ಯಕ್ಕೆ ತುಮಕೂರು (Tumakuru) ಜಿಲ್ಲೆ ಸೋಮವಾರ ಸಾಕ್ಷಿಯಾಗಿದೆ. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ಜಗದಂಬಾ ಜ್ಯುವೆಲರಿ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರು ಎಂಟ್ರಿಯಾಗುವುದಕ್ಕೂ ಮುನ್ನ ಸ್ಥಳೀಯರೇ ಆರೋಪಿಗಳ ಬೆನ್ನಟ್ಟಿರುವುದು ಗಮನ ಸೆಳೆದಿದೆ. ಫೆಬ್ರವರಿ 22ರಂದು ಮಧ್ಯಾಹ್ನ ಸುಮಾರು 2…

Read More

‘ಗೂಗ್ಲಿ’ ಗೆಟಪ್ ನೆನಪಿಸಿದ ‘ಟಾಕ್ಸಿಕ್’ ಟೀಸರ್​​ನ ಯಶ್ ಲುಕ್ – Kannada News | Hidden Things In Rocking Star Yash Toxic Movie

ಮಲಯಾಳಂನ ಗೀತು ಮೋಹನ್​​ದಾಸ್ ‘ಟಾಕ್ಸಿಕ್’ ಚಿತ್ರ ನಿರ್ದೇಶನ ಮಾಡಿದ್ದಾರೆ. ಯಶ್ ಗ್ಯಾಂಗ್​​ಸ್ಟರ್ ಇರಬಹುದು ಎಂಬುದು ಕೆಲವರ ಊಹೆ. ಮಾರ್ಚ್ 19ಕ್ಕೆ ಇದಕ್ಕೆ ಉತ್ತರ ಸಿಗಲಿದೆ. ಮಾಸ್ ಮಸಾಲ ಅಂಶಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಜೋರಾಗಿಯೇ ಇದೆ. ಈ ಟೀಸರ್​ ನೋಡಿದ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. ಮಾರ್ಚ್ 19ರಂದು ಸಿನಿಮಾ ತೆರೆಗೆ ಬರಲಿದೆ. ವಿವಿಧ ಹಂತಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗಿದೆ. 2 ದಶಕಗಳ ಕಥೆಯನ್ನು ಇದು ಹೊಂದಿದೆ ಎಂಬ ಮಾತು ಕೂಡ ಇದೆ. ಯಶ್ ಯಂಗ್ ಲುಕ್​​…

Read More

ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ

ಗದಗ, ಮಾರ್ಚ್​​ 12: ನಕಲಿ ಲಾಟರಿ ಯೋಜನೆಯ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ವಂಚಕ ಜಾಲ ಗದಗ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಖದೀಮರು ಕೇರಳ ಸರ್ಕಾರದ ಹೆಸರು ಮತ್ತು ಚಿಹ್ನೆಯನ್ನು ದುರುಪಯೋಗಪಡಿಸಿಕೊಂಡು ಲಾಟರಿ ಯೋಜನೆಯ ಹೆಸರಲ್ಲಿ ರ‍್ಯಾಂಡಮ್‌ ಮೊಬೈಲ್​​ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನೀವು 15 ಲಕ್ಷ ರೂ. ಲಾಟರಿ ಬಹುಮಾನ ಗೆದ್ದಿದ್ದೀರಿ ಎಂಬ ಮಾಹಿತಿ ಮೆಸೇಜ್​​ನಲ್ಲಿ ಇರಲಿದ್ದು, ಜೊತೆಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ PDF ಪ್ರಮಾಣಪತ್ರವನ್ನೂ ಕಳುಹಿಸಲಾಗುತ್ತಿದೆ. ಇದರಿಂದ ಲಾಟರಿ ನಿಜವಾದದ್ದು ಎಂಬ…

Read More

ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!

ಹೈದರಾಬಾದ್, ಮಾರ್ಚ್ 19: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಲಾರಿಯಿಂದ ಕೂಲ್ ಡ್ರಿಂಕ್ಸ್ ಬಾಟಲಿಗಳು ರಸ್ತೆಯಲ್ಲಿ ಬಿದ್ದಿತ್ತು. ಕೂಡಲೆ ಓಡೋಡಿ ಬಂದ ಸುತ್ತಮುತ್ತಲಿನ ಮನೆಯ ಜನರು ಕೈಗೆ ಸಿಕ್ಕಷ್ಟು ಆ ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಹಲವಾರು ಜನರು ರಸ್ತೆಯಲ್ಲಿ ಬಿದ್ದ ತಂಪು ಪಾನೀಯದ ಬಾಟಲಿಗಳನ್ನು ಹೆಕ್ಕುತ್ತಿರುವ ವಿಡಿಯೋ ವೈರಲ್ ಆಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಬಾಟಲಿಗಳನ್ನು ತೆಗೆದುಕೊಂಡು ಹೋಗದಂತೆ ಮನವಿ ಮಾಡಿದರೂ, ಜನರು ಕೇಳಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು…

Read More

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ – Kannada News | Ballia Blackmail Murder: Woman Kills Ex Lover Over Private Videos, Disfigures Face

ಬಲ್ಲಿಯಾ, ಮಾರ್ಚ್​ 02: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬರು ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು, ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ, ಹಾಗಾಗಿ ಆಕೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಆತನನ್ನು ಕೊಲೆ(Murder) ಮಾಡಿದ್ದಾಳೆ. ತಮ್ಮ ಗ್ರಾಮಕ್ಕೆ ಬರುವಂತೆ ಕರೆದು, ಕತ್ತು ಹಿಸುಕಿ ಕೊಂದು, ನಂತರ ಗುರುತನ್ನು ಮರೆಮಾಚಲು ಆಸಿಡ್‌ನಿಂದ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ…

Read More

ಇರಾನ್ ಯುದ್ಧದ ಪರಿಣಾಮ ಬೀದರ್ ಕಲ್ಲಂಗಡಿಗೂ ಇಲ್ಲ ಬೆಲೆ!

ಬೀದರ್, ಮಾರ್ಚ್​ 30: ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಕಲ್ಲಂಗಡಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಕಟಾವು ಮತ್ತು ಸಾಗಾಟ ವೆಚ್ಚವೂ ಮರಳದ ಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಗುಣಮಟ್ಟದ ಕಲ್ಲಂಗಡಿ ಇದ್ದರೂ ಖರೀದಿದಾರರ ಕೊರತೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದ್ದು, ಜಿಲ್ಲೆಯ ಬಹುತೇಕ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಕರ್ನಾಟಕದ…

Read More

ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ – Kannada News | Tamil Nadu CM Joseph Vijay Kollur Visit: Purnakumbha Welcome Assured, Says Priest Nityananda Adiga

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ (Joseph Vijay) ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿ…

Read More

ಸಾವಿನಲ್ಲೂ ಒಂದಾದ ಯುವ ದಂಪತಿ! ಪತ್ನಿಯ ಸಾವಿನ ದಿನವೇ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ ಪತಿ

ಬೆಳಗಾವಿ, ಏಪ್ರಿಲ್ 06: ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿ (Husband and wife death) ಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ. ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ, ಬೈಕ್​ನಲ್ಲಿ ಬರುವಾಗ ಅಪಘಾತಕ್ಕೀಡಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ…

Read More

ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ

ಹಿಂದೂ ಸಂಘಟನೆಗಳಿಂದ ಪ್ರತಿಭಟನೆImage Credit source: tv9 kannada ಬಾಗಲಕೋಟೆ, ಮೇ 27: ನಾಳೆ (ಮೇ 28) ನಾಡಿನಾದ್ಯಂತ ಬಕ್ರೀದ್ (Bakrid) ಹಬ್ಬದ ಸಂಭ್ರಮ. ಮುಸ್ಲಿಂ ಸಮಾಜದ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆಗೆ ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗೋತ್ಯೆಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಪ್ರತಿಭಟನೆ ಮೂಲಕ ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದು, ಆ ಮೂಲಕ ಗೋಹತ್ಯೆ ತಡೆಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಕಸಾಯಿಖಾನೆಗಳ ಪಟ್ಟಿ ಮಾಡಿ ಬಂದ್​​ಗೆ ಒತ್ತಾಯಿಸಿದ್ದಾರೆ….

Read More

ದಾವಣಗೆರೆ ಬೈ ಎಲೆಕ್ಷನ್: ಬಿಎಸ್​​ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ

ದಾವಣಗೆರೆ, (ಮಾರ್ಚ್ 19): ಕರ್ನಾಟಕದ ಎರಡು ವಿಧಾನಸಭಾ ಉಪಚುನಾವಣೆಗೆ (Davanagere By Election ) ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಯುಗಾದಿಯ ದಿನದಂದು, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ (Srinivas Dasakariyappa) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಜಿ ಸಿಎಂ…

Read More